ಇಸ್ಲಾಮಿನಲ್ಲಿ ಹೆಣ್ಣಿನ ಲೌಕಿಕ ಶಿಕ್ಷಣಕ್ಕೆ ಯಾವುದೇ ವಿರೋಧವೂ ಅಡೆತಡೆಗಳೂ ಇಲ್ಲ. ಹಲವಾರು ಇಸ್ಲಾಮಿನ ಸಂಘ ಸಂಸ್ಥೆಗಳು ದಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣ ಕೂಡಾ ನೀಡುತ್ತಿದೆ. ಇಸ್ಲಾಂ ದರ್ಮವು ಲೌಕಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲಾ ಎಂದು ಹೇಳುವವರೊಂದಿಗೆ ಹೇಳಲಿಕ್ಕಿರುವುದು ಇಷ್ಟೇ.... ಬಾವಿಯೊಳಗಿರುವ ಕಪ್ಪೆಯನ್ನು ಅನುಸರಿಸುವ ಬದಲು ಇಸ್ಲಾಮಿನ ಶಿಕ್ಷಣ ಸಂಸ್ಥೆಗಳಿಗೆ ಬೇಟಿ ಕೊಟ್ಟು ಅರಿಯಲು ಪ್ರಯತ್ನಿಸಿರಿ.
*ಸಹೋದರೀ....*
*ನೀನಿರುವ ಕಾಲೇಜಿನಲ್ಲಿ ಲುಹರ್ ನಮಾಝ್ ಮಾಡಲು ಸೌಕರ್ಯವಿದೆಯಾ....?*
ಇಲ್ಲವೆಂದಾದರೆ ಆ ಕಾಲೇಜು ನಿನಗೆ ಬೇಡ. ನಮಾಝ್ ಹಾಗೂ ಇಸ್ಲಾಮಿನ ಎಲ್ಲಾ ನಿಯಮಾವಳಿಗಳಿಗೆ ಪ್ರಾಮುಖ್ಯತೆ ಕೊಡುವ ಹಲವಾರು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಿವೆ. ನಮಾಝ್ ಮಾಡಲು ಕಡ್ಡಾಯ ವೆಂದು ಹೇಳಬೇಕಾದ ಅಗತ್ಯವಿಲ್ಲತಾನೆ...? *ನಿಲ್ಲಲು ಸಾಧ್ಯವಿಲ್ಲದವನು ಕುಳಿತು ನಮಾಝ್ ಮಾಡಬೇಕು. ಕುಳಿತು ನಮಾಝ್ ಮಾಡಲಾಗದವನು ಮಲಗಿ ನಮಾಝ್ ಮಾಡಬೇಕು. ಅದೂ ಸಾಧ್ಯವಿಲ್ಲವನು ಕಣ್ಣು ಸನ್ನೆಯ ಮೂಲಕವಾದರೂ ನಮಾಝನ್ನು ನಿರ್ವಹಿಸಬೇಕು. ಹೀಗಿರುವಾಗ ನಿನ್ನ ಕಾಲೇಜ್ ಯಾವ ಲೆಕ್ಕ....?* ಕೆಲವರಂತೂ ಕಾಲೇಜು ಕಾರಣವನ್ನಿಟ್ಟು ಲುಹರ್, ಅಸರ್ ಎರಡನ್ನೂ ಖಳಾ ಮಾಡುವವರು ಇದ್ದಾರೆ.
ಇದರ ಬಗ್ಗೆ ಪ್ರಮುಖವಾಗಿ ಸೂಕ್ಷ್ಮತೆ ವಹಿಸಬೇಕಾಗಿರುವುದು ಪೋಷಕರು. ನಾಳೆ ಪರಲೋಕದಲ್ಲಿ ಅಲ್ಲಾಹನು ನಮಾಝಿನ ಬಗ್ಗೆ ಕೇಳಿದಾಗ ಅವಳು ಪೋಷಕರ ಕಡೆಗೆ ಕೈ ತೋರಿಸಿ ಇದಕ್ಕೆಲ್ಲಾ ಕಾರಣ ಇವರೇ.... ನನಗೆ ಕೊಡುವ ಶಿಕ್ಷೆಗಿಂತ ದುಪ್ಪಟ್ಟು ಶಿಕ್ಷೆ ಇವರಿಗೆ ಕೊಡಿ ಎಂದು ಯಾವುದೇ ಮುಲಾಜಿಯಿಲ್ಲದೆ ಅತ್ಯಂತಾ ಪ್ರೀತಿಯಿಂದ ಸಾಕಿದ ಮಕ್ಕಳು ಅಲ್ಲಾಹನ ಬಳಿ ದೂರು ಹೇಳುವಾಗ ಅಂದು ಪೋಷಕರಿಗೆ ಯಾವುದೇ ಉತ್ತರವಿರಲಾರದು. ಆದ್ದರಿಂದ ಇದರ ಬಗ್ಗೆ ಪೊಷಕರು ಅತ್ಯಂತಾ ಹೆಚ್ಚು ಕಾಳಜಿ ವಹಿಸಬೇಕಾದ ಅನಿವಾರ್ಯತೆಯಿದೆ.
*ಸಹೋದರೀ....*
*ಕಾಲೇಜಿನಲ್ಲಿ ಬುರ್ಕಾದ ವಿವಾದವಿದೆಯೇ....?*
ಅಂತಹಾ ಕಾಲೇಜು ನಿನಗೆ ಬೇಡ
ಬುರ್ಕಕ್ಕೂ ಪಾಠಕ್ಕೂ ಏನು ಸಂಬಂಧ....? ಶರೀರ ಮುಚ್ಚುವುದರಿಂದ ಆಗುವ ತೊಂದರೆಯಾದರೂ ಏನು....? *ಇದರ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಅವರೊಂದಿಗೆ ಹೇಳಲಿಕ್ಕಿರುವುದು. ಹಲವಾರು ಶಾಲಾ ಕಾಲೇಜುಗಳಲ್ಲಿ ಹಿಂದೂ ಧರ್ಮದವರು ನಂಬುವ ಸರಸ್ವತಿ ಫೋಟೊಗಳನ್ನು ಇಟ್ಟಿರುತ್ತಾರೆ. ಹಾಗೂ ಇನ್ನಿತರ ಅವರು ನಂಬುವ ಬೇರೆ ಬೇರೆ ದೇವರುಗಳ ಫೋಟೊಗಳನ್ನು ಹಾಕಿರುತ್ತಾರೆ. ಅದನ್ನು ಇದುವರೆಗೂ ಯಾವ ಮುಸ್ಲಿಮನೂ ವಿರೋಧಿಸಲಿಲ್ಲ. ವಿರೊಧಿಸುವುದೂ ಇಲ್ಲ. ಹಣೆಗೆ ಬೊಟ್ಟು ಇಟ್ಟು ಬಂದಾಗ ಅದನ್ನು ಯಾವುದೇ ಮುಸ್ಲಿಮನೂ ವಿವಾದ ಮಾಡಲಿಲ್ಲ. ಇನ್ನು ಮಾಡುವುದೂ ಇಲ್ಲ. ಅದು ಹಿಂದೂ ದರ್ಮದ ಪದ್ದತಿ. ಹಾಗೆಯೇ ಮುಸ್ಲಿಮ್ ಹೆಣ್ಣಿಗೆ ಬುರ್ಖಾ ದರಿಸುವುದು ಮುಸ್ಲಿಮ್ ದರ್ಮದ ಪದ್ದತಿ.* ಈ ರೀತಿಯಲ್ಲಿ ಹಲವಾರು ವಿವಾದಗಳಿದ್ದರೆ ಅಂತಹಾ ಕಾಲೇಜುಗಳು ನಿನಗೆ ಬೇಡ. ಹಲವಾರು ಮುಸ್ಲಿಮ್ ವುಮೆನ್ಸ್ ಕಾಲೇಜುಗಳು ತಲೆಯೆತ್ತಿ ನಿಂತಿವೆ. ಅಲ್ಲಿ ಲೌಕಿಕದೊಂದಿಗೆ ದಾರ್ಮಿಕ ವಿಧ್ಯೆಯನ್ನು ಸಹಾ ಕರಗತ ಮಾಡಿಕೊಳ್ಳಬಹುದು. ನಿನ್ನ ಮುಂದಿನ ಜೀವನಕ್ಕೆ (ಇಹದಲ್ಲೂ ಪರದಲ್ಲೂ) ಎಲ್ಲಾ ರೀತಿಯಲ್ಲೂ ಉಪಕಾರ ಸಿಗುವಂತಹಾ ಶಾಶ್ವತ ಇಲ್ಮಿನ ಪ್ರಕಾಶ ಪಡೆಯಬಹುದು.
ಈಗ ಪ್ರಮುಖವಾದ ಪ್ರದೇಶಗಳಲ್ಲಿ ಲೌಕಿಕ ಶಿಕ್ಷಣದೊಂದಿಗೆ *ಮಹಿಳಾ ಶರೀಅತ್ ಕಾಲೇಜ್, ಮಹಿಳಾ ದ'ಅವಾ ಕಾಲೇಜ್* ತಲೆಯೆತ್ತಿ ನಿಂತಿದೆ. ಲೌಕಿಕದೊಂದಿಗೆ ದಾರ್ಮಿಕ ಆಲಿಮ ಕೊರ್ಸ್ ಕೂಡಾ ಮಾಡಿ ನೀನು ಒಬ್ಬಳು *ಆಲಿಮ ಬಿರುದುದಾರಿ* ಆದರೆ ಅದಕ್ಕಿಂತಾ ಸಂತೋಷ ಮತ್ತೊಂದಿದೆಯೇ....? ನಿನ್ನ ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ರೀತಿಯ ಸಲಹೆಗಳು ಧಾರ್ಮಿಕ ವಿಧ್ಯೆಯಿಂದ ಮಾತ್ರ ಸಾಧ್ಯ. ದಾರ್ಮಿಕ ವಿಧ್ಯೆಯನ್ನು ಕಲಿತು ಆಲಿಮ ಆದರೆ ನಿನ್ನ ಬಾಳು ಹಸನಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.
*[ಕೊನೆಯದಾಗಿ ಮತ್ತೊಮ್ಮೆ:- ನಮಾಝ್ ಖಲಾ ಆಗುವ ರೀತಿಯಲ್ಲಿರುವ ಎಷ್ಟೇ ದೊಡ್ಡ ಹೆಸರು ಗಳಿಸಿದ ಕಾಲೇಜ್ ಆದರೂ ಸರಿ ಅದಕ್ಕೆ ಸೇರದಿರು]*
*ಅಲ್ಲಾಹು ಅನುಗ್ರಹಿಸಲಿ. "ಆಮೀನ್"*
*ಪ್ರೇಮ ಬಾಜನರ ಮೇಲೆ ಪ್ರೀತಿಯಿಂದ ಒಂದು ಸ್ವಲಾತ್*
*_ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯದನಾ ಮುಹಮ್ಮದಿನ್ ವ'ಅಲಾ ಆಲಿಹಿ ವಸ್ವಹ್'ಬಿಹಿ ವಸಲ್ಲಮ್*_
*ಸಂಸ್ಥೆಯ ಪ್ರಚಾರಕ್ಕಾಗಿ*
(ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರ್)
Comments