Skip to main content

ನೂತನವಾದಿಯ ಹಿಂದೆ ಮಯ್ಯಿತ್ ನಮಾಝ್?. ✍🏼 *ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

*ನೂತನವಾದಿಯ ಹಿಂದೆ ಮಯ್ಯಿತ್ ನಮಾಝ್?.*

✍🏼 *ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

ನೂತನವಾದಿಯ ಹಿಂದೆ ಮಹ್'ಮೂಮ್ ಆಗಿ ನಮಾಝ್ ಮಾಡಿದರೆ, ನಮಾಝ್ ಸ್ವಹೀಹ್ ಆಗುವುದಿಲ್ಲ ಎಂಬ ವಿಧಿ ಎಲ್ಲರಿಗೂ ಗೊತ್ತಿರುವಂಥಹದ್ದೇ. ಹಾಗಾಗಿ ನಾವು ನೂತನವಾದಿಗಳ ಹಿಂದೆ ನಮಾಝ್ ಮಾಡುವುದಿಲ್ಲ. ಅದು ಸುನ್ನಿಗಳ ಮಸೀದಿಯಲ್ಲಾಗಿರಲಿ, ಸಲಫಿಗಳ ಮಸೀದಿಯಲ್ಲಾಗಿರಲಿ ವ್ಯತ್ಯಾಸವಿಲ್ಲ.

ಒಂದು ವೇಳೆ ಸಲಫಿಗಳ ಮಸೀದಿಗೆ ಹೋಗಬೇಕಾಗಿ ಬಂದರೂ, ಅವರ ಹಿಂದೆ ನಮಾಝ್ ಮಾಡದ ನಾವು, ಸುನ್ನಿಗಳಾದ ನಮ್ಮ ಮಸೀದಿಯಲ್ಲಿ ಸಲಫಿಗಳಿಗೆ ಇಮಾಮತ್ ನಿಲ್ಲುವ ಅವಕಾಶವನ್ನು  ಬಿಟ್ಟು  ಕೊಡುತ್ತೇವೆಯೇ? ಖಂಡಿತಾ ಸಾದ್ಯವಿಲ್ಲ. ಅದು ಮಯ್ಯಿತ್ ನಮಾಝ್ ಆದರೂ ಸರಿ.

*ಮಯ್ಯಿತ್ ನಮಾಝ್ ಗೆ ಇಮಾಮತ್ ನಿಳ್ಳುವ ಅವಕಾಶ ಮಯ್ಯಿತ್ ನ ಕುಟುಂಬಸ್ತರಿಗೆ ಇದ್ದಿರಬಹುದು. ಆದರೆ, ಮಯ್ಯಿತ್ ನಮಾಝ್ ಎಂಬ ಫರ್'ಳ್ ಅದಾ ಮಾಡುವ ವಿಷಯಕ್ಕೆ  ಬಂದಾಗ, ತಂದೆ,ಮಗ, ಕುಟುಂಬ ಎಂಬ ವ್ಯತ್ಯಾಸವಿಲ್ಲದೆ, ಊರವರೆಲ್ಲರ ಮೇಲೂ ಅದು ಕಡ್ಡಾಯವಾಗಿದೆ.*

ಒಂದು ವೇಳೆ ಮಯ್ಯಿತ್ ನಮಾಝ್ ಗೆ ಇಮಾಮತ್ ನಿಳ್ಳುವ ವ್ಯಕ್ತಿ ನೂತನವಾದಿಯಾಗಿದ್ದರೆ, ಆತನಿಗೆ ಇಮಾಮ್ ನಿಳ್ಳುವ ಅವಕಾಶವಿರುವುದಿಲ್ಲ. "ನೂತನವಾದಿಗಳು ರೋಗಿಗಳಾದರೆ ಅವರನ್ನು ಸಂದರ್ಶಿಸಬಾರದು, ಅವರು ಮೃತರಾದರೆ ಅವರ ಅಂತಿಮ ವಿಧಿಯಲ್ಲೂ  ಭಾಗವಹಿಸಬಾರದು, ಅವರಿಗೆ ಪಿತ್ರಾರ್ಜಿತ ಆಸ್ತಿ ಕೊಡಬಾರದು". (ಹದೀಸ್)  ಅದರಂತೆ, ಅವರಿಗೆ ಇಮಾಮತ್ ನಿಲ್ಲುವ ಅವಕಾಶವನ್ನೂ ಕೊಡಬಾರದು. ಸುನ್ನಿ ಆಗಿರುವಾಗ ಇದ್ದ ಈ ಅವಕಾಶಗಳನ್ನೆಲ್ಲಾ ನೂತನವಾದಿ ಆಗುವುದರೊಂದಿಗೆ ಆತ ಕಳೆದು ಕಳೆದುಕೊಳ್ಳುತ್ತಾನೆ.

*ಮಯ್ಯಿತ್ ನಮಾಝ್ "ಫರ್'ಳ್ ಕಿಫಾಯ" ಆಗಿದೆ. ಫರ್'ಳ್ ಕಿಫಾಯ ಅಂದರೆ, ಯಾರಾದರೊಬ್ಬರು ನಿರ್ವಹಿಸಿದರೆ ಸಾಕು, ಎಲ್ಲರ ಭಾಧ್ಯತೆ ನೆರವೇರುತ್ತದೆ. ಯಾರೊಬ್ಬರೂ ನಿರ್ವಹಿಸದಿದ್ದರೆ, ಊರವರೆಲ್ಲರೂ ದೊಷಿಗಳಾಗುತ್ತಾರೆ. ಆದುದರಿಂದ,  ಯಾರಾದರೊಬ್ಬರು ನಿರ್ವಹಿಸುವಂತೆ ನೊಡಿಕೊಳ್ಳುವುದು ಊರವರ ಮೇಲೆ ಕಡ್ಡಾಯವಾಗಿದೆ.*

ಇನ್ನು  ನೂತನವಾದಿಗಳಿಗೆ ಇಮಾಮತ್ ನಿಳ್ಳುವ ಅವಕಾಶವನ್ನು. ಕೊಡಬಾರದು. ಯಾಕೆಂದರೆ, "ನೂತನವಾದಿಯ ಫರ್'ಳ್ ಮತ್ತು ಸುನ್ನತ್ ಆದ ಯಾವೊಂದು ಇಬಾದತನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ".(ಹದೀಸ್) ನೂತನವಾದಿಗಳನ್ನು ಅನುಸರಿಸಿ ನಮಾಝ್ ಮಾಡುವವರ ನಮಾಝ್ ಕೂಡಾ ಸ್ವೀಕೃತವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮಯ್ಯಿತ್ ನಮಾಝ್ ಗೆ ಇಮಾಮತ್ ನಿಳ್ಳುವ ಅವಕಾಶವನ್ನು ನೂತನವಾದಿಗಳಿಗೆ ಬಿಟ್ಟು ಕೊಟ್ಟರೆ, ಯಾರೊಬ್ಬರಿಂದಲೂ ನೆರವೇರದ ಮಯ್ಯಿತ್ ನಮಾಝ್ ನ ಪಾಪವು ಆ ಮೊಹಲ್ಲಾಗೆ ಸಂಬಂಧಪಡುವ ಎಲ್ಲರ ತಲೆ ಮೇಲೆ ಆಗುವುದಿಲ್ಲವೇ.

*ಮೃತ ತಂದೆಯ ಪಾರತ್ರಿಕಮೋಕ್ಷಕ್ಕಾಗಿ, ಖುರ್ಆನ್ ಓದುವುದು, ಝಿಕ್ರ್  ಹೇಳುವುದು, ದುಆ ಮಾಡುವುದರಿಂದ ಊರವರನ್ನು ತಡೆಯುವ ಮಗನಿಗೆ, ಮಯ್ಯಿತ್ ನಮಾಝ್ ಒಂದಕ್ಕೆ  ಮಾತ್ರ ಇಮಾಮತ್ ನಿಳ್ಳುವ ಅರ್ಹತೆ ಇದೆಯೇ. ಇತರರ ಖುರ್ಆನ್, ಝಿಕ್ರ್, ದುಆ ದಲ್ಲಿ ಈತನಿಗೆ ವಿಶ್ವಾಸವಿಲ್ಲದ ಹಾಗೆ, ಈತನ ಮಯ್ಯಿತ್ ನಮಾಝ್ ನಲ್ಲೂ  ಊರವರಿಗೆ ವಿಶ್ವಾಸ ಇರುವುದಿಲ್ಲ. ಖುರ್ಆನ್ ಓದುವುದು, ಝಿಕ್ರ್ ಹೇಳುವುದು ಇವನ ಭಾಧ್ಯತೆಯಾಗಿದ್ದರೆ, ಮಯ್ಯಿತ್ ನಮಾಝ್ ನೆರವೇರಿಸುವುದು ಊರವರ ಭಾಧ್ಯತೆಯಾಗಿದೆ. ಆದುದರಿಂದ,  ಈತನ ಸಮಯದಲ್ಲಿ ಈತ ಅಧಿಕಾರ ಚಲಾಯಿಸಿದಂತೆ, ಊರವರ ಸಮಯದಲ್ಲಿ ಊರವರೂ ತಮ್ಮ ಅಧಿಕಾರ ಚಲಾಯಿಸುವುದು ಅನಿವಾರ್ಯವಾಗುತ್ತದೆ.*

ನೂತನವಾದವೆಂಬ ಮಾರಕ ರೋಗದಿಂದ ಅಲ್ಲಾಹು ನಮ್ಮೆಲ್ಲರನ್ನು ರಕ್ಷಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...