Skip to main content

*" ಮನದಾಳದಲ್ಲಿ ಮದೀನ."* ✍🏿ಸಿ.ಐ.ಇಸ್ಹಾಕ್ ಫಜೀರ್. ‌ (ಸಂಚಿಕೆ-6)

*" ಮನದಾಳದಲ್ಲಿ ಮದೀನ."*
✍🏿ಸಿ.ಐ.ಇಸ್ಹಾಕ್ ಫಜೀರ್.
     ‌ (ಸಂಚಿಕೆ-6)
ನಂ.14 ಜುಹ್ಫು ಶಿಖರ.
ಪುನರುತ್ಪನ ದಿನ ದೆಜ್ಜಾಲ್ ಬಂದಿಳಿಯುವ ಬೆಟ್ಟ.
ಇಂದು ಈ ಬೆಟ್ಟದಲ್ಲಿ ಸೌದಿ ರಾಜರ ಅರಮನೆಗಳು ನಿರ್ಮಾಣಗೊಂಡಿದೆ.

ನಂ.15 ಘಯರ್ ಬೆಟ್ಟ.
ಅಂದರೆ ನರಕದ ಬೆಟ್ಟ.
ಪ್ರವಾದಿ (ﷺ) ಹೇಳುತ್ತಾರೆ.
ಈ ಪರ್ವತವನ್ನು ಅಲ್ಲಾಹನು ಕೋಪಿಸಿರುತ್ತಾನೆ, ಅದ್ದರಿಂದ ನಾನು ಕೂಡಾ ಕೋಪಿಸುತ್ತೇನೆ.
ಇದು ನರಕದ ಬಾಗಿಲಲ್ಲಿ  ಇರುವುದೆಂದು ಚರಿತ್ರೆ ಗ್ರಂಥಗಳಿಂದ ತಿಳಿಯ ಬಹುದು.

ನಂ.16ಜಬಲ್ ಅನ್'ವೂಂ.
ಸ್ವಹಾಬಿ ಮಾಹಿಝ್ ರ.ಅ ರವರು ಅನ್ಯ ಸ್ತ್ರೀಯಂದಿಗೆ ದುರ್ಬಲ ನಿಮಿಷದಲ್ಲಿ ಮಾಡಿದ ಅತ್ಯಾಚಾರದ ಪಾಪದ ಕಠೋರತೆಯನ್ನು ತಿಳಿದು ಪ್ರವಾದಿ (ﷺ)ರವರ ಸನ್ನಿಧಿಗೆ ತೆರಳಿ ಮಾಡಿದ ಪಾಪದ ಬಗ್ಗೆ ವಿವರಿಸಿ ಕೊಂಡು ತಾನು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆ ನೀಡ ಬೇಕೆಂದು ಬೇಡಿ ಕೊಂಡರು.
ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಇದೆ.ಅಲ್ಲಾಹನು ಗಫ್ಪಾರ್ ಆಗಿರುವನು ಎಂದು ಪ್ರವಾದಿ (ﷺ) ಹೇಳಿ ಸಮಾದಾನಿಸಿದರೂ ಒಪ್ಪಿಕೊಳ್ಳದೇ ಇದ್ದಾಗ ಕಡೆಯದಾಗಿ ಇಸ್ಲಾಮಿನ ನಿಯಮದಂತೆ ಜಬಲ್ ಅನ್'ವೂಂ ಎಂಬ ಬೆಟ್ಟದ ತುತ್ತ ತುದಿಗೆ ಕರೆದೊಯ್ದು ಸಾರ್ವಜನಿಕವಾಗಿ ಕಲ್ಲೆಸೆದು ಕೊಂದಿರುವುದು ಮಾತ್ರವಲ್ಲ ಅತ್ಯಾಚಾರಕ್ಕೊಳಪಟ್ಟ ಸಹೋದರಿ ಇದೇ ರೀತಿ ಪ್ರವಾದಿ (ﷺ)ರವರೊಂದಿಗೆ ಬೇಡಿಕೊಂಡಾಗ
ಆಕೆಯನ್ನು ಅದೇ ರೀತಿ ಶಿಕ್ಷೆಗೊಳಪಡಿಸಿದ್ದು ಇಲ್ಲಿಯೇ ಆಗಿರುತ್ತದೆ.

ನಂ.17 ಬೀರ್ ಉರ್ವತ್.
ಬೀರ್ ಉರ್ವತ್ ಅಂದರೆ ಅಬೂಬಕ್ಕರ್ ಸಿದ್ದೀಖ್ ರ.ಅ ರವರ ಮೊಮ್ಮಗ. ಅಂದಿನ ಕಾಲದ ಗವರ್ನರ್ ಉರ್ವತ್ ಇಬ್ನ್ ಜವೂರ್ ರವರು ನಿರ್ಮಿಸಿದ ಬಾವಿಯಾಗಿರುತ್ತದೆ.(ಬೀರ್ ಉರ್ವತ್).

ಅಲ್ಲಾಹನ ಹಾದಿಯಲ್ಲಿ ಸಾಗಿದ ಪರಮೋನ್ನತ ಸೂಫಿವರ್ಯರು, ಸಾತ್ವಿಕ ವಿದ್ವಾಂಸರು ಆಗಿದ್ದರು.
ಕಾಲಿಗೆ ಅದೇನೋ ರೋಗ ಬಾದಿಸಿದಾಗ ಪಾದವನ್ನು ಕುದಿಯುವ ತೈಲಕ್ಕೆ ತುಳುಕಿಸಿ ತೆಗಿಯ ಬೇಕಾಗಿ ವೈದ್ಯರು ತಿಳಿಸಿಕೊಂಡರು. ಅದಕ್ಕೆ ಬೇಕಾಗಿ ಪ್ರಜ್ಞೆ ತಪ್ಪಲು ಹೆಂಡ ತನ್ನ ತಲೆಗೆ ಅಮಲೇರಿಸುವರೆಗೆ ಕುಡಿಯಲು ವೈದ್ಯ ಮಹಾತ್ಮರೊಂದಿಗೆ ತಿಳಿಸಿದಾಗ (ಅದು ಅಂದಿನ ಸ್ವಾಭಾವಿಕ ವಿಚಾರವಾಗಿತ್ತು.)ಅದನ್ನು ಒಪ್ಪಿ ಕೊಳ್ಳದೆ ಮೂರ್ಛೆ ತಪ್ಪ ಬೇಕಾದರೆ ನಮಾಜ್ ನಲ್ಲಿ ಈ ಚಿಕಿತ್ಸೆ ಮಾಡ ಬಹುದೆಂದು ನಮಾಜ್'ಸಮಯವನ್ನು ಆಯ್ಕೆ ಮಾಡಿ ಅದರಂತೆ
ನಮಾಜ್'ಗೆ ಪ್ರವೇಶಿಸಿದಾಗ ತನ್ನ ಪಾದವನ್ನು ಕುದಿಯುವ ತೈಲಕ್ಕೆ ತುಳುಕಿಸ ಬೇಕೆಂದು ವಿನಂತಿಸಿ ನಮಾಜ್'ಗೆ ಪ್ರವೇಶಿಸಿದರು.
ಬಳಿಕ ವೈದ್ಯರು ಅವರ ಮಾತಿನಂತೆ ನಮಾಜ್ ಸಮಯವನ್ನು ಆಯ್ಕೆ ಮಾಡಿ
ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಪೂರ್ತಿಗೊಳಿಸಿದ್ದರು.
ಸುಬ್'ಹಾನಲ್ಲ.
ಅವರ ಈಮಾನಿನ ಶಕ್ತಿ ಹೇಗಿರ ಬಹುದೆಂದು ಊಹಿಸಲಸಾಧ್ಯ.
ನಮಾಜ್'ನಲ್ಲಿನ ಅವರ ಏಕಾಗ್ರತೆ ಅಲ್ಲಾಹನೊಂದಿಗಿನ ಭಯ ಇತರ
ಸಮಯಗಳಂತೆ ಪಾಲಿಸಿ ಜೀವಿಸಿದ ಅಂದಿನ ಕಾಲದ ಮಹಾನ್ ಚಕ್ರವರ್ತಿಯಾಗಿದ್ದರು.
ಅವರು ಅಂದು ಕಟ್ಟಿದ ಅರಮನೆ. ಹಳೆ ಸಮಾಗ್ರಿಗಳು ಇಂದಿಗೂ ಅರಮನೆಯೊಳಗೆ ಸೂಕ್ಷಿಸಲ್ಪಟ್ಟಿದೆ.
     ________
ನಾಳಿನ ಸಂಚಿಕೆಯಲ್ಲಿ.
ನಂ.18
ಮಸ್ಜಿದ್ ಟರ್ಕಿ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...