*ಅವರ ನಾಮ ಕೇಳದವರು ಅತೀ ವಿರಳ*.* ಅಲ್ಲಾಹನನ್ನು ಭಯಪಟ್ಟು ಜೀವಿಸುತ್ತಿದ್ದ ಹಾಗೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಿಯ ಸ್ವಹಾಬಿಗಳಲ್ಲೊಬ್ಬರು. ಮರಣಶಯ್ಯೆಯಲ್ಲಿ ಮಲಗಿದ್ದ ಅಲ್ಖಮ (ರ) ರೀಗೆ ಕಲಿಮ ಹೇಳಿಕೊಟ್ಟರೂ ಹೇಳುತ್ತಿಲ್ಲ...!!!! ಅಲ್ಲಿದ್ದ ಸ್ವಹಾಬಿಗಳು ದಿಗ್ಭ್ರಾಂತರಾದರ" ಪ್ರವಾದಿ (ಸ) ರ ಸನಿಹ ಹೋದ ಸ್ವಹಾಬಿಗಳುಘಟನೆಯನ್ನು ವಿವರಿಸಿದರು. ಒಂದು ನಿಮಿಷ ಮೌನರಾದ ಪ್ರವಾದಿ(ಸ) ಅಲ್ಖಮ (ರ)ನ ಮಾತಾಪಿತ್ರರು ಜೀವಂತವಿದ್ದಾರೆಯೇಎಂದು ಕೇಳಿದಾಗ ತಂದೆ ಆಗಲೇ ತೀರಿ ಹೋದರೆಂದೂ ತಾಯಿ ಬದುಕಿದ್ದಾರೆಯೆಂದೂ ಉತ್ತರ ಸಿಕ್ಕಿದಾಗ ಹಾಗಿದ್ದಲ್ಲಿ ಆ ತಾಯೀಗೆ ನನ್ನ ಸಲಾಂ ಹೇಳಿ,ಪ್ರಯಾಸವಿಲ್ಲದಿದ್ದರೆ ನನ್ನನ್ನು ಬಂದು ಕಾಣಲು ಹೇಳಿ ಇಲ್ಲದಿದ್ದಲ್ಲಿ ನಾನೇ ಅವರ ಬಳಿ ಹೋಗುತ್ತೇನೆ ಎಂದರು ಪ್ರವಾದಿ(ಸ).ಈ ವಿಷಯ ತಿಳಿದ ಆ ತಾಯಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸನಿಹಕ್ಕೆ ಬಂದರು. ಆ ತಾಯಿಯಲ್ಲಿ ಅಲ್ಖಮ (ರ) ಬಗ್ಗೆ ವಿಚಾರಿಸಿದಾಗ ಆತ ಅಲ್ಲಾಹನ ಆಜ್ಞೆಯನ್ನು ಪಾಲಿಸುವವವನಾಗಿದ್ದಾನೆ ಆದರೆ ಕೆಲವುಸಂದರ್ಭಗಳಲ್ಲಿ ಆತನ ಪತ್ನಿಯ ಮುಂದೆ ನನ್ನನ್ನು ಹೀಯಾಳಿಸುವುದು ನೋವು ಉಂಟುಮಾಡುತ್ತಿತ್ತು ಎಂದಾಗ ಓ ಪ್ರಿಯ ಸ್ವಹಾಬಿಗಳೇ ಅಲ್ಖಮನನ್ನು ಬೆಂಕಿಯಲ್ಲಿ ಸುಟ್ಟುಹಾಕಿ ಎಂದು ಪ್ರವಾದಿ(ಸ)ಆಜ್ಞಾಪಿಸಿದರು. ಅದನ್ನು ಕೇಳಿದ್ದೇ ತಡ ಆ ತಾಯಿಯ ಕಣ್ಣಲ್ಲಿ ಅಶ್ರುಗಣ ಉದುರಿದವು, ಬೇಡ ನಬಿ(ಸ)ಯೇ ನನ್ನ ಅಲ್ಖಮನನ್ನು ಏನೂ ಮಾಡದಿರಿ ಎಂದು ಗೋಳಾಡಿದರು.ಆತನನ್ನು ನೀವು ಕ್ಷಮಿಸದಿದ್ದಲ್ಲಿಈ ಭೂಮಿಯ ಅಗ್ನಿಗಿಂತಲೂ ಕಠಿಣ ಕಠೋರವಾದ ನರಕ ಆತನನ್ನು ಕಾದಿದೆ ಎಂದ ರಹ್ಮತುಲ್ಲಿಲ್ ಆಲಮೀನ್ ಮುಹಮ್ಮದ್ ಮುಸ್ತಫಾ (ಸ)ರ ವ್ಯತಿರಿಕ್ತ ಭಾವ ಕಂಡ ಆತಾಯಿ ನಾನು ಅಲ್ಖಮನನ್ನು ಕ್ಷಮಿಸಿದ್ದೇನೆ ನೆಬಿಯೇ(ಸ) ಎಂದು ಕಣ್ಣೀರಿಟ್ಟರು . ಇದನ್ನು ಕೇಳಿದ್ದೇ ತಡ ಅಲ್ಖಮ (ರ) ರ ಸಮೀಪ ತಲುಪಿದ ಸ್ವಹಾಬಿಗಳೀಗೆ ಆಶ್ಚರ್ಯವಾಯಿತು"ಕಲಿಮತು ತೌಹೀದ್" ನ ಶಬ್ದ ಅವರ ಕರ್ಣಪಟಲಗಳೀಗೆ ಬಂದು ಬಡಿಯಿತು ಸ್ವಲ್ಪದರಲ್ಲೇ ಅಲ್ಖಮ (ರ) ಇಹಲೋಕ ತ್ಯಜಿಸಿದರು. ಅವರ ಮಯ್ಯಿತ್ ನಮಾಝ್ ಗೆಪ್ರವಾದಿ (ಸ) ನೇತ್ರುತ್ವ ವಹಿಸಿದರು."ನಿನ್ನ ಮೂರು ತ್ವಲಾಖ್ ಹೇಳಿದ್ದೇನೆ ಎಂದು ಒಬ್ಬಾತ ಹೇಳಿದರೆ ಮುಗಿಯಿತು ನಿನ್ನ ಮತ್ತು ಪತ್ನಿಯ ಸಂಬಂಧ, ಆದರೆ ನಿನ್ನ ತಾಯಿಯ ಸಂಬಂಧ ಯಾವ ತ್ವಲಾಖ್ ನಿಂದ ಮುರಿಯಲು ಸಾಧ್ಯ? "ಕ್ಷಣಿಕ ಇಹಲೋಕ ಸುಖಕ್ಕಾಗಿ ಪತ್ನಿಯ ಪ್ರೀತಿ ಗಳಿಸಲು ತಾಯಿಯನ್ನು ನೋಯಿಸುವನಮ್ಮ ಸಮೂಹಕ್ಕೆ ಇದೊಂದು ಪಾಠ ವಾಗಿರಲಿ.
*ಅಲ್ಲಾಹನು ನಮ್ಮನ್ನೂ,ನಮ್ಮ ಕುಟುಂಬವನ್ನೂ ಶೈತಾನನ ಶರ್ರ್ ನಿಂದ ರಕ್ಷಿಸಲಿ ಅಮೀನ್.*
Comments