" ಮನದಾಳದಲ್ಲಿ ಮದೀನ."
✍🏿ಸಿ.ಐ.ಇಸ್ಹಾಕ್ ಫಜೀರ್.
(ಸಂಚಿಕೆ-4)
ನಂ.9
ಮದೀನ ಝಂಝಂ.
ಮದೀನ ಝಂಝಂ ಎಂಬ ಬಾವಿ
ಮಸ್ಜಿದುಲ್ ಮಿನಾರತೈನಿ ಪಕ್ಕದಲ್ಲಿಯೇ ಇದೆ.
ಹುಸೈನ್ ರ.ಅ ರವರ ಪುತ್ರಿ ಮಹದಿ ಫಾತಿಮಾ ರ.ಅ ರವರು ಮನೆ ಪಕ್ಕದಲ್ಲಿ ಬಾವಿಯೊಂದನ್ನು ತೋಡಲು ಕಾರ್ಮಿಕರಿಗೆ ತಿಳಿಸಿಕೊಂಡರು.
ಬಾವಿ ತೋಡುವ ಸ್ಥಳ ಬಂಡೆ ಕಲ್ಲಿನಿಂದ ಕೂಡಿದ್ದವು.
ಬಂಡೆಯಾಗಿರುವುದರಿಂದ ನೀರು ದೊರಕುವುದು ಅಗಮ್ಯ ಎಂದು ಕಾರ್ಮಿಕರು ತಿಳಿಸಿದಾಗ ಮಹದಿ ಫಾತಿಮಾ ರ.ಅ ರವರು ಪಾತ್ರೆಯೊಂದರಲ್ಲಿ ನೀರು ತುಂಬಿಸಿ ಅದಕ್ಕೆ ಮಂತ್ರಿಸಿ ಅರ್ಧದಷ್ಟು ತೋಡಿದ ಬಾವಿಯ ಮೇಲೆ ಮಂತ್ರಿಸಿದ ನೀರು ಸಿಂಪಡಿಸಿದಾಗ ಬಂಡೆ ಸಿಡಿದು ನೀರು ದಾರಕಾರವಾಗಿ ಹೊರ ಚೆಮ್ಮಿತು.
"ಪ್ರವಾದಿ ಇಸ್ಮಾಯಿಲ್ ಅ.ಸ.ರವರ ಪಾದ ಬಡಿದಾಗ ಮಕ್ಕಾ ಕಹ್'ಬಾ ಬಳಿ ಬರಡಾದ ಮರುಭೂಮಿಯಿಂದ ಝಂಝಂ ನೀರು ಹೊರ ಚೆಮ್ಮಿದ ಅನುಭವ ಇಲ್ಲಿಯೂ ಅದೇ ಆಗಿದ್ದವು."
ಪರಿಸರ ವಾಸಿಗಳು ನೀರು ತೆಗೆದು ಕುಡಿಯಲೂ ಕೊಂಡೊಗಲು ಈ ಬಾವಿಯ ನೀರನ್ನು ಬಳಸಿಕೊಂಡರು. ನಂತರದ ದಿನಗಳಲ್ಲಿ ಮದೀನ ಝಂಝಂ ಹೆಸರಿನಿಂದ ಈ ಬಾವಿ ಪ್ರಸಿದ್ಧ ಪಡೆಯಿತು. ಈಗ ಬಾವಿಯನ್ನು ಮುಚ್ಚಲ್ಪಟ್ಟಿದೆ.
ನಂ.10
ಮಸ್ಜಿದುಲ್ ಜುಮ್'ಅ
ಪ್ರವಾದಿ (ﷺ)ರವರು ಮಕ್ಕಾ ಬಿಟ್ಟು ಮದೀನಾ ತಲುಪಿ ಮಸ್ಜಿದುಲ್ ಖುಬಾ ಬಳಿಯಾಗಿರುತ್ತದೆ ತಂಗುವುದು.
ಖುಬಾ'ದಲ್ಲಿ ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆದು ತದನಂತರ ಮದೀನಾಕ್ಕೆ ಹೊರಡುವರು. ಅದು ಒಂದು ಶುಕ್ರವಾರ ದಿನ ವಾಗಿರುತ್ತದೆ.
ಲುಹಾ ನಮಾಜಿನ ಬಳಿಕ ವಾಗಿರುತ್ತದೆ ಪ್ರವಾದಿ (ﷺ)ರವರು ಮದೀನಾದತ್ತ ಯಾತ್ರೆ ಕೈಗೊಳ್ಳುವುದು. ಹಾಗೆ ಯಾತ್ರೆ ಕೈಗೊಂಡು ಮಸ್ಜಿದುಲ್ ಜುಮ್'ಹ ಬಳಿ ತಲುಪಿದಾಗ ಜುಮಾ ನಮಾಜ್ ಖಡ್ಡಾಯವಗುತ್ತದೆ.
ಅಲ್ಲಿಯೇ ಜನರನ್ನು ಒಗ್ಗೂಡಿಸಿ ಜುಮಾ ನಮಾಜಿಗೆ ಚಾಲನೆ ನೀಡಿದರು.
ನಂತರದ ದಿನಗಳಲ್ಲಿ ಮಸ್ಜಿದುಲ್ ಜುಮ್'ಅ ಎಂಬ ಹೆಸರಿನಿಂದ ಈ ಮಸೀದಿ ಪ್ರಸಿದ್ಧ ಪಡೆಯಿತು.
__________
ನಾಳಿನ ಸಂಚಿಕೆಯಲ್ಲಿ.
ನಂ.11
ತುರಾಬ್ ಶಿಫಾ
Comments