Skip to main content

ಸ್ಕೀಮ್ ಅನುವದನೀಯವೇ? ತೋಕೆ ಉಸ್ತಾದರ ಲೇಖನದ ಆಯ್ದ ಭಾಗ

ಸ್ಕೀಮ್ ಅನುವದನೀಯವೇ?

ತೋಕೆ ಉಸ್ತಾದರ ಲೇಖನದ ಆಯ್ದ ಭಾಗ

*ವಸ್ತುಗಳನ್ನು ಮಾರಾಟ ಮಾಡುವಾಗ ಆ ವಸ್ತುವಿನ ಬಗ್ಗೆ ಮಾರುವವನಿಗೂ ಪಡೆಯುವವನಿಗೂ ಸ್ಪಷ್ಟವಾದ ಅರಿವಿರಬೇಕು.ವಸ್ತು ಸಮ್ಮುಖದಲ್ಲಿದ್ದರೆ ಅವರಿಬ್ಬರೂ ನೋಡಿ ಖಾತರಿ ಪಡಿಸಬೇಕು.ಇನ್ನು ವ್ಯಾಪಾರ ಕರಾರು ಪ್ರಕಾರವಾಗಿದ್ದರೆ ಆ ವಸ್ತುವಿನ ಎಲ್ಲಾ ವಿಶೇಷತೆಗಳನ್ನು ಹೇಳಿ ಅದನ್ನು ನಿಗದಿ ಪಡಿಸಬೇಕು.ಆದ್ದರಿಂದ ಮಜ್ ಹೂಲ್ (ತಿಳಿಯದ ವಸ್ತು) ಮಾರಾಟ ಮಾಡಿದರೆ  ಅದು ಸಿಂಧುವಾಗಲಾರದು.*

ಇಮಾಮ್ ನವವೀ (ರ) ಬರೆಯುತ್ತಾರೆ,

وبيع المجهول باطل
ಗೊತ್ತಿಲ್ಲದ ವಸ್ತುಅವನ್ನು ಮಾರಾಟ ಮಾಡಿದ್ದಲ್ಲಿ ಅದು ಅಸಿಂಧುವಾಗಿದೆ
(ಶರಹುಲ್ ಮುಹದ್ದಬ್11/335)

*ಸ್ಕೀಮ್ ನಲ್ಲಿ ಈ ರೀತಿ ನಡೆಯುತ್ತಿಲ್ಲ.*

ಇಂದು ನಡೆಯುತ್ತಿರುವ  ಸ್ಕೀಮ್ ಗಳ ಕೆಲವು ರೂಪಗಳು ಈ ಕೆಳಗಿನಂತಿವೆ.

*1.ಒಟ್ಟು 20 ಕಂತುಗಳ (ಉದಾಹರಣೆಗೆ) ಸ್ಕೀಮ್.ಪ್ರತೀ ವಾರವೂ ಚೀಟಿ ಎತ್ತುವುದರ  ಮೂಲಕ ಆಯ್ಕೆಯಾದ ಸದಸ್ಯನು ನಂತರ ಹಣ ಕಟ್ಟಬೇಕೆಂದಿಲ್ಲ.ಆಯ್ಕೆಯಾದವನಿಗೆ  ಚೀಟಿಯಲ್ಲಿ ಬಂದ ವಸ್ತುವನ್ನು ನೀಡಲಾಗುವುದು(ಕಾರು , ಬೈಕು,ಫ್ರಿಡ್ಜ್, ವಾಶಿಂಗ್ ಮೆಶಿನ್ , ಇತ್ಯಾದಿ)ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಗಾದ ಸದಸ್ಯರಿಗೆ ನಿಗದಿತ 20 ಕಂತುಗಳ ಬಳಿಕ ಅವರು ಕಟ್ಟಿದ ಒಟ್ಟು ಹಣದ ಮೌಲ್ಯವಿರುವ ಯಾವುದಾದರೊಂದು ವಸ್ತುವನ್ನು ನೀಡಲಾಗುವುದು.*

ಉದಾಹರಣೆಗೆ, ಪ್ರತೀವಾರ 100 ರೂ ನಂತೆ 20 ವಾರ ಕಟ್ಟಬೇಕು.ಸ್ಕೀಮ್ ಮುಗಿಯುದಕ್ಕಿಂತ ಮುಂಚೆ ಸಾಪ್ತಾಹಿಕವಾಗಿ ನಡೆಯುವ ಡ್ರಾದಲ್ಲಿ ಆಯ್ಕೆಯಾದ ನಂತರ ಕಟ್ಟುವ ಅಗತ್ಯವಿಲ್ಲ.20 ವಾರಗಳ ತನಕ ಈತನ ಹೆಸರು ಆಯ್ಕೆಯಾಗದಿದ್ದರೆ ಕೊನೆಗೆ  2000 ರೂ ಮೌಲ್ಯದ ಟೇಬಲ್ ಫ್ಯಾನನ್ನು ನೀಡಲಾಗುವುದು.

*ಇದರಲ್ಲಿ ಸೇರಬಹುದೇ?*

*ಉತ್ತರ:*
*ಈ ಸ್ಕೀಮ್* *ಅನುವದನೀಯವಲ್ಲ.*

ಕಾರಣ ವ್ಯಾಪಾರ ಮಾಡುವಾಗ ವಸ್ತು ಮತ್ತು ಅದರ ಬೆಕೆ ನಿಖರವಾಗಿ ತಿಳಿದಿರಬೇಕು. ನಮ್ಮ ಈ ಸ್ಕೀಮ್ ನಲ್ಲಿ  ಚೀಟಿ ಎತ್ತುವುದರ ಮೂಲಕ ವಸ್ತುವನ್ನು ಆಯ್ಕೆ ಮಾಡುವುದಾದರೆ ದೊರಕುವ ವಸ್ತು ಯಾವುದೆಂದು ಸ್ಪಷ್ಟವಲ್ಲ.ಏಕೆಂದರೆ ಚೀಟಿ ಎತ್ತುವಿಕೆಯಲ್ಲಿ ಯಾವ ವಸ್ತು ಬರಬಹುದೆಂದು ಯಾರಿಗೂ ಗೊತ್ತಿಲ್ಲ ತಾನೇ?ಆದ್ದರಿಂದ ಇಲ್ಲಿ ಮಾರಾಟ ವಸ್ತುವಿನಲ್ಲಿ ನಿಗೂಡತೆ ಹಾಗೂ ಅಸ್ಪಷ್ಟತೆ ಇರುವುದರಿಂದ  ಇದು ಅನುವದನೀಯವಲ್ಲ.

ರೂಪ 2.
*ನಿಗದಿತ ಕಂತುಗಳ (ಉದಾ:20 ಕಂತುಗಳ) ಸ್ಕೀಮ್ ಆಗಿದ್ದು ಪ್ರತೀ ವಾರವೂ ಚೀಟಿ ಎತ್ತಲಾಗುವುದು .ಅದರಲ್ಲಿ ಆಯ್ಕೆಯಾದವನಿಗೆ ಕಾರು , ಬೈಕು ಫ್ರಿಡ್ಜ್ ವಾಶಿಂಗ್ ಮೆಶಿನ್  ಮುಂತಾವುಗಳನ್ನು ನೀಡಲಾಗುವುದು.ಆದರೆ ಈ ಸಾಮಾಗ್ರಿಗಳು ದೊರೆತ ಬಳಿಕವೂ  ನಿಗದಿತ  ಕಂತುಗಳು ಮುಗಿಯುವ ತನಕ ಹಣ ಕಟ್ಟಬೇಕಾಗುತ್ತದೆ. ಆಯ್ಕೆ ಆಗದವರಿಗೆ ಸ್ಕೀಮ್ ನ ಕೊನೆಯಲ್ಲಿ ಕಟ್ಟಿದ ಹಣದ  ಒಟ್ಟು ಮೌಲ್ಯವಿರುವ ವಸ್ತುವೊಂದನ್ನು ನೀಡಲಾಗುವುದು.*

*ಇದು ಕೂಡಾ ನಿಷಿಧ್ಧವಾಗಿದೆ.*

ಕಾರಣ,
ಸಾಪ್ತಾಹಿಕವಾಗಿ ವಸ್ತುವನ್ನು ಡ್ರಾ ಮೂಲಕ ನಿರ್ಣಯಿಸುವಾಗ ಸದಸ್ಯರಾದ ಪ್ರತಿಯೊಬ್ಬರಿಗೂ ಯಾವುದೇ  ವಾರ ಯಾವುದೇ ವಸ್ತು ಬರಬಹುದು.ಆಗ ಎಷ್ಟರ ತನಕ ಹಣ ಕಟ್ಟಬೇಕೆಂದು ಪ್ರತಿಯೊಬ್ಬರಿಗೂ ಸ್ಪಷ್ಟವಲ್ಲ.ಆದ್ದರಿಂದ ಇಲ್ಲಿ ವಸ್ತುವನ ಬೆಲೆ ನಿಖರವಾಗದಿರುವುದರಿಂದ  ನಿಷಿಧ್ಧವಾಗಿದೆ.ಕೆಲವೊಮ್ಮೆ ಅದು 100ರೂ ಆಗಿರಬಹುದು.ಅಥವಾ ಅದಕ್ಕಿಂತ ಜಾಸ್ತಿ ಆಗಿರಲೂ ಬಹುದು.

*ರೂಪ 3.*

*ನಿಗದಿತ ಕಂತುಗಳ ಸ್ಕೀಮ್ ಆಗಿದ್ದು ಎಲ್ಲರೂ ಕಂತು ಮುಗಿಯುವ ತನಕ  ನಿಗದಿತ ಹಣ ಕಟ್ಟಬೇಕು.ಸ್ಕೀಮ್ ನ ಕೊನೆಯಲ್ಲಿ ಚೀಟಿ ಎತ್ತುವ ಐದು ಅಥವಾ ಪ್ರಾಯೋಜಕರು ನಿಗದಿಪಡಿಸಿದ್ದಷ್ಟು ಮಂದಿಗಳಿಗೆ ಹೆಚ್ಚಿನ ಮೌಲ್ಯದ  ವಸ್ತುವನ್ನು ನೀಡಲಾಗುವುದು.ಉಳಿದವರಿಗೆ ಕಟ್ಟಿದ ಹಣದ  ಒಟ್ಟು ಮೌಲ್ಯವಿರುವ ವಸ್ತುವೊಂದನ್ನು ನೀಡಲಾಗುವುದು.*

ಇದೂ ಕೂಡಾ ಧರ್ಮ ಸಮ್ಮತವಲ್ಲ.

ಕಾರಣ ಎರಡನೇ ರೂಪದಲ್ಲಿ ಹೇಳಿದಂತೆ  ಲಭಿಸುವ ವಸ್ತು ಸ್ಪಷ್ಟವಲ್ಲ.ಪ್ರತೀ ಸದಸ್ಯನು ಹೆಚ್ಚಿನ ಮೌಲ್ಯದ ವಸ್ತು ತನಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿರುತ್ತಾನೆ.
ಮಾರಾಟದಲ್ಲಿ ನಿಗೂಡತೆಯಿರುವ ಮಾರಾಟವು ಇಸ್ಲಾಮಿನಲ್ಲಿ ಅನುವದನೀಯವಲ್ಲ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...