1. ಶ್ರೀಮಂತರಿಗೆ ಉಳ್ಹಿಯ್ಯತ್ ಕಡ್ಡಾಯವೇ?
= ಕಡ್ಡಾಯವಿಲ್ಲ, ಪ್ರಬಲ ಸುನ್ನತ್ತಾಗಿದೆ. ( ತುಹ್ಫ 9/344)
2. ಮರಣ ಹೊಂದಿದವರಿಗಾಗಿ ಬಲಿಯರ್ಪಿಸಬಹುದೇ
= ಮರಣ ಹೊಂದಿದ ವ್ಯಕ್ತಿ ಮರಣಕ್ಕೂ ಮುಂಚೆ ವಸಿಯ್ಯತ್ ಮಾಡಿದ್ದಲ್ಲಿ ಮೃತರ ಸೊತ್ತಿನಿಂದ ಬಲಿಯರ್ಪಿಸಬಹುದು. ವಸಿಯ್ಯತ್ ಮಾಡಿರದಿದ್ದರೆ ಬಲಿಯರ್ಪಿಸುವಂತಿಲ್ಲ ( ತುಹ್ಫ 9/368)
3. ಉಳ್ಹಿಯ್ಯತ್ತಿನ ಮೃಗದ ಚರ್ಮವನ್ನು ಮಾರಾಟ ಮಾಡಬಹುದೇ
= ಉಳ್ಹಿಯ್ಯತ್ತಿನ ಚರ್ಮ ಸೇರಿದಂತೆ ಯಾವುದೇ ಭಾಗವನ್ನೂ ಮಾರಾಟ ಮಾಡಕೂಡದು. ( ತುಹ್ಫ 9/365)
4. ಸ್ತ್ರೀಯರು ಸ್ವತಃ ಉಳ್ಹಿಯ್ಯತ್ತ್ ದ್ಸಬಹ್ ಮಾಡಿದರೆ ಉಳ್ಹಿಯ್ಯತ್ ಸಿಂಧುವಾಗುತ್ತದೆಯೇ ?
= ಉಳ್ಹಿಯ್ಯತ್ತಿನಲ್ಲಿ ಪಾಲುದಾರರಾಗುವುದು ಪುರುಷರಂತೆ ಸ್ತ್ರೀಯರಿಗೂ ಸುನ್ನತ್ತಾಗಿದೆ. ಆದರೆ ಸ್ತ್ರೀಯರು ಉಳ್ಹಿಯ್ಯತ್ತನ್ನು ಸ್ವತಃ ದ್ಸಬಹ್ ಮಾಡುವುದಕ್ಕಿಂತಲೂ ಉತ್ತಮ ಪುರುಷರಿಗೆ ವಹಿಸಿಕೊಡುವುದಾಗಿದೆ. ಸ್ತ್ರೀ ದ್ಸಬಹ್ ಮಾಡಿದರೂ ಸಿಂಧುವಾಗುತ್ತದೆ ( ತುಹ್ಫ 9/348)
5. ಉಳ್ಹಿಯ್ಯತ್ತಿನ ಮಾಂಸವನ್ನು ಮಾಲಿಕ(ಬಲಿಯರ್ಪಿಸಿದ ವ್ಯಕ್ತಿ ) ಭಕ್ಷಿಸಬಹುದೇ ?
= ಸುನ್ನತ್ತಾದ ಉಳ್ಹಿಯ್ಯತ್ತಿನ ಮಾಂಸವನ್ನು ಮಾಲಿಕ ಭಕ್ಷಿಸಬಹುದು. ಅಲ್ಪವಾದರೂ ದಾನ ನೀಡುವುದು ಕಡ್ಡಾಯವಾಗಿದೆ. ಇನ್ನು ಕಡ್ಡಾಯ ಉಳ್ಹಿಯ್ಯತ್ತಿನಿಂದ ಮಾಲಿಕ ಭಕ್ಷಿಸಕೂಡದು. ( ತುಹ್ಫ 9/363,364)
5. ಉಳ್ಹಿಯ್ಯತ್ತಿನ 1/3 ಭಾಗವನ್ನು ದಾನ ಮಾಡುವುದು ಕಡ್ಡಾಯವೇ? ಮಾಲಿಕನಿಗೆ ಎಷ್ಟು ಭಕ್ಷಿಸಬಹುದು?
= ಕಡ್ಡಾಯ ಉಳ್ಹಿಯ್ಯತ್ತಿನಿಂದ ಮಾಲಿಕ ಭಕ್ಷಿಸುವಂತಿಲ್ಲ. ಸುನ್ನತ್ತಾದ ಉಳ್ಹಿಯ್ಯತ್ತಿನಿಂದ ಮಾಲಿಕನು ಅಲ್ಪ ಮಾತ್ರ ಇಟ್ಟುಕೊಂಡು ಹೆಚ್ಚಿನ ಭಾಗವನ್ನು ದಾನ ನೀಡುವುದಾಗಿದೆ ಉತ್ತಮ. ಆದರೆ ಅಲ್ಪ ಮಾತ್ರ ದಾನ ಮಾಡಿ ಉಳಿದ ಭಾಗವನ್ನು ತಾನೇ ಉಪಯೋಗಿಸುವುದಕ್ಕೆ ವಿರೋಧವಿಲ್ಲ. 1/3 ಭಾಗಕ್ಕಿಂತ ಹೆಚ್ಚಿನ ಭಾಗ ತಾನೇ ಉಪಯೋಗಿಸದಿರುವುದು ಸುನ್ನತ್ತಾಗಿದೆ. ( ತುಹ್ಫ 9/263,265)
7. ಉಳ್ಹಿಯ್ಯತ್ತಿನ ಮಾಂಸವನ್ನು ಮುಸ್ಲಿಮೇತರರಿಗೆ ದಾನ ನೀಡಬಹುದೇ ?
= ಅನುವದನೀಯವಲ್ಲ. ( ತುಹ್ಫ 9/363)
8. ಉಳ್ಹಿಯ್ಯತ್ತಿನ ಮಾಂಸ ದೊರೆತ ಬಡವನಿಗೆ ಅದನ್ನು ಮುಸ್ಲಿಮೇತರರಿಗೆ ಮಾರಬಹುದೇ?
= ಇಲ್ಲ. ಉಳ್ಹಿಯ್ಯತ್ತಿನ ಮಾಂಸ ಯಾವ ರೂಪದಲ್ಲೂ ಅಮುಸ್ಲಿಮರ ಕೈತಲುಪಕೂಡದು. ( ತುಹ್ಫ 9/363) ಉಳ್ಹಿಯ್ಯತ್ತ್ ಮುಸ್ಲಿಮರ ಆರಾಧನೆಯ ಭಾಗವಾಗಿದೆ.
9. ಉಳ್ಹಿಯ್ಯತ್ತಿನ ಮಾಂಸ ದೊರೆತ ವ್ಯಕ್ತಿಯು ಅದನ್ನು ಬೇರೆಯವರಿಗೆ ಮಾರಾಟ ಮಾಡಬಹುದೇ ?
= ಶ್ರೀಮಂತರಿಗೆ ಹದ್ಯಾ ರೂಪದಲ್ಲಿ ದೊರೆತ ಮಾಂಸವನ್ನು ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ. ಆದರೆ , ಬಡವರು ( ಫಕೀರ್ & ಮಿಸ್ಕೀನ್) ತಮಗೆ ದೊರೆತ ಮಾಂಸವನ್ನು ಬೇರೆಯವರಿಗೆ ಮಾರಾಟ ಮಾಡಬಹುದು. ( ತುಹ್ಫ 9/363,364)
10. ರಾತ್ರಿ ಸಮಯದಲ್ಲಿ ಉಳ್ಹಿಯ್ಯತ್ತ್ ದ್ಸಬಹ್ ನಡೆಸಬಹುದೇ ?
= ಕರಾಹತ್ತಾಗಿದೆ ( ತುಹ್ಫ 9/354)
11. ಉಳ್ಹಿಯ್ಯತ್ತಿನ ಮಾಂಸವನ್ನು ಬೇಯಿಸಿ ನೀಡಿದರೆ ಸಾಕೇ ?
= ಬೇಯಿಸಿ ನೀಡಿದರೆ ಸಾಕಾಗದು. ಕಡ್ಡಾಯವಾಗಿ ನೀಡಬೇಕಾದ ಅಂಶವನ್ನು ಬೇಯಿಸದೆಯೇ ನೀಡಬೇಕು. ( ತುಹ್ಫ 9/ 364)
12. ಉಳ್ಹಿಯ್ಯತ್ತಿನ ಮೃಗ ಗಂಡು ವರ್ಗದ್ದಾಗಿದ್ದರೆ ಪ್ರತ್ಯೇಕ ಪುಣ್ಯವಿದೆಯೇ ?
= ಇದೆ. ( ತುಹ್ಫ 9/ 349)
13. ಏಳಕ್ಕಿಂತ ಕಡಿಮೆ ವ್ಯಕ್ತಿಗಳು ಸೇರಿ ಉಳ್ಹಿಯ್ಯತ್ತ್ ನೀಡಬಹುದೇ ?
= ನೀಡಬಹುದು. ಏಳಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರಿ ನೀಡುವಂತಿಲ್ಲ. ( ತುಹ್ಫ 9 )
14. ಒಬ್ಬ ವ್ಯಕ್ತಿಯು ತನ್ನ ಉಳ್ಹಿಯ್ಯತ್ತಿನ ಪ್ರತಿಫಲವನ್ನು ಏಳಕ್ಕಿಂತ ಹೆಚ್ಚಿನ ಮಂದಿಗೆ ಹದ್ಯ ನೀಡಬಹುದೇ ?
= ನೀಡಬಹುದು. ಪ್ರವಾದಿ (ಸ)ರು ತಮ್ಮ ಉಮ್ಮತ್ತಿಗಾಗಿ ಉಳ್ಹಿಯ್ಯತ್ ಬಲಿಯರ್ಪಿಸಿದ್ದರು. ( ತುಹ್ಫ 9/349)
15. ಇಬ್ಬರು ಒಟ್ಟಾಗಿ ಎರಡು ಆಡುಗಳನ್ನು ಖರೀದಿಸಿ ಬಲಿಯರ್ಪಿಸಿದರೆ ಸ್ವೀಕೃತವೇ ?
= ಸ್ವೀಕೃತವಲ್ಲ. ಕಾರಣ, ಈ ರೀತಿ ಖರೀದಿಸುವಾಗ ಪ್ರತೀಯೊಂದು ಆಡಿನಲ್ಲಿಯೂ ಪ್ರತಿಯೊಬ್ಬರಿಗೆ ಉಳ್ಹಿಯ್ಯತ್ತಿನ ಅರ್ಧ ಅರ್ಧ ಪಾಲು ಮಾತ್ರ ದೊರೆಯುತ್ತದೆ. ಒಂದು ಆಡನ್ನು ಪೂರ್ಣವಾಗಿ ಇಬ್ಬರೂ ಬಲಿಯರ್ಪಿಸುತ್ತಿಲ್ಲ.( ತುಹ್ಫ 9/349)
16. ಬಲಿಯರ್ಪಿಸುವ ಸಂದರ್ಭದಲ್ಲಿ ದ್ಸಬಹಿಗೆ ಸಂಬಂಧಪಟ್ಟ ಪ್ರಕ್ರಿಯೆಯಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳಬಹುದೇ ?
= ವಿರೋಧವಿಲ್ಲ. ಆದರೆ , ದ್ಸಬಹ್ ನಡೆಸುವುದು ಮುಸ್ಲಿಮನೋ ಅಹ್ಲುಕಿತಾಬಿಯೋ ಆಗಿರಬೇಕು. ( ತುಹ್ಫ 9/342)
17. ಗರ್ಭ ಧರಿಸಿದ ಮೃಗವನ್ನು ಬಲಿಯರ್ಪಿಸಬಹುದೇ ?
= ಅನುವದನೀಯವಲ್ಲ. ( ತುಹ್ಫ 9/ 351)
18. ಉಳ್ಹಿಯ್ಯತ್ ನೀಡಲು ಉದ್ದೇಶಿಸಿದ ವ್ಯಕ್ತಿಗೆ ದುಲ್ಹಜ್ಜ್ ತಿಂಗಳ ಪ್ರಾರಂಭದಿಂದ ಕೂದಲು , ಉಗುರು ತೆಗೆಯುವುದು ಹರಾಂ ಆಗಿದೆಯೇ ?
= ಹರಾಂ ಅಲ್ಲ. ಆದರೂ ಕರಾಹತ್ತಾಗಿದೆ. ( ತುಹ್ಫ 9/346)
19. ಬಲಿಯರ್ಪಿಸುವ ಸ್ಥಳದಲ್ಲಿ ಅರ್ಪಿಸುವ ವ್ಯಕ್ತಿ ಹಾಜರಿರುವುದು ಪುಣ್ಯದಾಯಕವೇ ?
= ಹೌದು . ಆ ಸ್ಥಳದಲ್ಲಿ ಉಳ್ಹಿಯ್ಯತ್ ನೀಡುವ ವ್ಯಕ್ತಿ ಹಾಜರಿರುವುದು ಸುನ್ನತ್ತಾಗಿದೆ. ( ತುಹ್ಫ 9/348)
20. ಉಳ್ಹಿಯ್ಯತ್ತ್ ಮೃಗದ ಚರ್ಮವನ್ನು ಅದರ ಕೆಲಸಗಾರರಿಗೆ ಕೂಲಿಯಾಗಿ ನೀಡಬಹುದೇ ?
= ಅನುವದನೀಯವಲ್ಲ, ಹರಾಮಾಗಿದೆ.( ತುಹ್ಫ 9/365)
✨✨✨✨
*By : SHAMS SAHITYA SAMAJA JNA*
Comments