*▪ಮೃಗ ಪಕ್ಷಿಗಳ ಕುರಿತು ನಿಮಗಿದು ಗೊತ್ತಾ...???▪*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ತನ್ನ ನಾಳಿನ ಭವಿಷ್ಯದ ದಿನಗಳಿಗೆ ಬೇಕಾಗಿ ಆಹಾರ ಶೇಖರಣೆ ಮಾಡಿಡುವ ಜೀವಿಗಳು ಐದು.
*ಮನುಷ್ಯ, ಕಾಗೆ, ಇರುವೆ, ಜೇನ್ನೊಣ ಮತ್ತು ಇಲಿ.*
▪ಹುಟ್ಟಿದಂದಿನಿಂದ ಸಾಯುವ ತನಕ ಹಲ್ಲು ಉದುರಿ ಹೋಗದ ಜೀವಿಗಳು ಎರಡು.
*ಹಂದಿ ಮತ್ತು ಉಡ.*
▪ರಾತ್ರಿ ಹೊತ್ತಿನಲ್ಲಿ ಕಣ್ಣು ಪ್ರಕಾಶಿಸುವ ಜೀವಿಗಳು ನಾಲ್ಕು.
*ಸಿಂಹ, ಚಿರತೆ, ಬೆಕ್ಕು, ಮತ್ತು ಸರ್ಪ.*
▪ಋತುಸ್ರಾವ ಆಗುವ ಜೀವಿಗಳು ಆರು.
*ಮನುಷ್ಯ, ಬಾವಲಿ, ಮೊಲ, ಕುದುರೆ, ಕತ್ತೆಕಿರುಬ ಮತ್ತು ನಾಯಿ.*
▪ಹಗಲು ಕಣ್ಣು ಕಾಣದ ಜೀವಿಗಳು ಎರಡು.
*ಬಾವಲಿ ಮತ್ತು ಗೂಬೆ.*
▪ನಗುವ ಜೀವಿಗಳು ಮೂರು.
*ಮನುಷ್ಯ, ಮಂಗ ಮತ್ತು ಬಾವಲಿ.*
▪ ನಿದ್ರಿಸುವಾಗ ತನ್ನ ಎರಡು ಕಣ್ಣನ್ನೂ ತೆರೆದು ನಿದ್ರಿಸುವ ಜೀವಿ ಬರೇ ಒಂದು.
*ಮೊಲ.*
▪ನಿದ್ರಿಸುವಾಗ ತನ್ನ ಒಂದು ಕಣ್ಣನ್ನು ಮಾತ್ರ ತೆರೆದು ನಿದ್ರಿಸುವ ಜೀವಿ ಒಂದು ಮಾತ್ರ.
*ತೋಳ.*
▪ಜೀವನದುದ್ದಕ್ಕೆ ಬದುಕಿನಲ್ಲಿ ಒಮ್ಮೆಯೂ ನೀರು ಕುಡಿಯದ ಜೀವಿ
*ಉಡ* ಮಾತ್ರ.
▪ಸೃಷ್ಟಿಕರ್ತನಾದ ಅಲ್ಲಾಹುವಿನ ಸೃಷ್ಟಿಗಳಲ್ಲಿ ಯಾವ ಜೀವಿಗಳ ಕಿವಿ ಹೊರಗೆ ಕಾಣುತ್ತದೆಯಾ (ಮನುಷ್ಯಸಮೇತ) ಆ ಜೀವಿಗಳೆಲ್ಲವೂ ಮರಿ ಹಾಕುವುದಾಗಿರುತ್ತದೆ. (ಸಸ್ತನಿ)
ಯಾವ ಜೀವಿಗಳ ಕಿವಿಯು ಹೊರಗೆ ಕಾಣದೆ ಬರೇ ರಂದ್ರ ಮತ್ರವಿದೆಯೋ ಅದು ಮೊಟ್ಟೆಯಿಡುವ ಜೀವಿಯಾಗಿರುತ್ತದೆ.
▪ ಕ್ರಿಸ್ತಶಕ 1341 ರಲ್ಲಿ ಹುಟ್ಟಿ 1405 ರಲ್ಲಿ ವಿಧಿವಶರಾದ ಪ್ರಖ್ಯಾತ ಇಸ್ಲಾಮೀ ವಿದ್ವಾಂಸರೂ ಪ್ರಾಣಿಶಾಸ್ತ್ರಜ್ಞರೂ ಆದ ಕಮಾಲುದ್ದೀನ್ ದುಮೈರಿಯವರು(ರ) ಈಜಿಪ್ತಿನ ಕಾಡುಗಳಿಗೆ ಹೋಗಿ ಪ್ರಾಣಿ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವ ಕಾಲದಲ್ಲಿ ಒಂದು ದಿನ ಮರಿಹಾಕುವ ಜೀವಿಗಳು ಮತ್ತು ಮೊಟ್ಟೆಯಿಡುವ ಜೀವಿಗಳು ಯಾವುದೆಂದು ನೇರವಾಗಿ ನೋಡಿ ಪಟ್ಟಿ ಮಾಡುತ್ತಿದ್ದರು. ಈ ಮದ್ಯೆ ಆ ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ಅಪರಿಚಿತ ದಾರಿಹೋಕನೊಬ್ಬ ಇಮಾಮ್ ದುಮೈರಿಯಲ್ಲಿ ಕೇಳಿದನಂತೆ. *"ಏನು ಇಮಾಮರೇ, ಬಹಳ ಅಲೋಚನೆ ಮಾಡುತ್ತಿದ್ದೀರಿ...? ಏನು ಟೆನ್'ಷನ್...?"* ಇಮಾಮ್ ದುಮೈರಿ (ರ) ಹೇಳಿದರು. *"ಎನಿಲ್ಲ... ಮರಿ ಹಾಕುವ ಮತ್ತು ಮೊಟ್ಟೆಯಿಡುವ ಜೀವಿಗಳ ಪಟ್ಟಿ ಮಾಡುತ್ತಿದ್ದೇನೆ. ಒಂದು ಹಿಡಿತವೂ ಸಿಗದೆ ಒಟ್ಟಿನಲ್ಲಿ ಗಲಿಬಿಲಿ ಆಗಿದ್ದೇನೆ*"
▪ದಾರಿಹೋಕ ಹೇಳಿದನಂತೆ. *"ಇಮಾಮರೇ, ಅದಕ್ಕೆ ಇಷ್ಟು ಕಷ್ಟ ಮತ್ತು ಗಾಬರಿಪಡುವ ಅಗತ್ಯವಿಲ್ಲ. ಯಾವ ಜೀವಿಯ ಕಿವಿ ಹೊರಗೆ ಕಾಣುತ್ತದೆಯೋ ಅದು ಮರಿ ಹಾಕುತ್ತದೆ. ಯಾವುದರದ್ದು ಹೊರಗೆ ಕಾಣುವುದಿಲ್ಲವೋ ಅದು ಮೊಟ್ಟೆಯಿಡುತ್ತದೆ."*
▪ದಾರಿಹೋಕನ ಈ ಮದ್ಯಪ್ರವೇಶದಿಂದ ವರ್ಷಗಳಿಂದ ತಲೆಕೆಡಿಸುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆತಾಗ ಇಮಾಮ್ ದುಮೈರಿಯವರು ಮನದಲ್ಲಿ ಹೇಳಿದರು. *" ಇಷ್ಟು ಸುಲಭವಾಗಿ ಇದನ್ನು ಕಂಡು ಹಿಡಿಯಲು ಸಾಧ್ಯವಾಗುವುದಾರೆ ನಾನು ಇದಕ್ಕೆ ಇಷ್ಟೊಂದು ಶ್ರಮಪಡಬೇಕಾದ ಅಗತ್ಯವಿದ್ದಿರಲಿಲ್ಲ."*
▪ಮೃಗಗಳಲ್ಲಿ ಕೋರೆ ಹಲ್ಲಿರುವ ಎಲ್ಲಾ ಮೃಗಗಳನ್ನು ತಿನ್ನುವುದು ನಿಷಿದ್ಧವಾಗಿದೆ. ಕೋರೆ ಹಲ್ಲು ಅಲ್ಲದ ಸಾಧಾರಣ ಹಲ್ಲಿರುವ ಎಲ್ಲಾ ಮೃಗಗಳು ಭಕ್ಷಯೋಗ್ಯ (ಹಲಾಲ್) ಆಗಿದೆ.
▪ಪಕ್ಷಿಗಳಲ್ಲಿ ತನ್ನ ಕಾಲಿನ ಸಹಾಯದಿಂದ ಅಂದರೆ, ಮಾಂಸದಂತಹಾ ಆಹಾರ ಪದಾರ್ಥಗಳನ್ನು ತನ್ನ ಕಾಲಿನಿಂದ ಒತ್ತಿಹಿಡಿದು ತಿನ್ನುವ ಎಲ್ಲಾ ಪಕ್ಷಿಗಳನ್ನು ತಿನ್ನುವುದು ಇಸ್ಲಾಮಿನಲ್ಲಿ ಹರಾಮ್ ಆಗಿರುತ್ತದೆ.
▪ಕಾಲಿನ ಸಹಾಯವಿಲ್ಲದೆ ಬರೇ ಕೊಕ್ಕಿನಿಂದ ಹೆಕ್ಕಿ ತಿನ್ನುವ ಎಲ್ಲಾ ಪಕ್ಷಿಗಳನ್ನು ತಿನ್ನುವುದು ಹಲಾಲ್ ಆಗಿದೆ. ಅಂತೆಯೇ ಕೋಳಿಯಂತೆ ಅಪರೂಪಕ್ಕೆ ಯಾವಾಗಲಾದರು ಕಾಲು ಬಳಸಿದರೆ ತೊಂದರೆಯಿಲ್ಲ. ಅದು ಹಲಾಲ್.
▪ *ಜರಾದ್* ಅಲ್ಲದ ಎಲ್ಲಾ ಕೀಟ, ಕ್ರಿಮಿ, ಹುಳಗಳನ್ನು ತಿನ್ನುವುದು ನಿಷಿದ್ಧವಾಗಿದೆ.
▪ *ಉಡ* ಅಲ್ಲದ ತನ್ನ ಹೊಟ್ಟೆಯ ಸಹಾಯದಿಂದ ಸಂಚರಿಸುವ ಹಾವು, ಹರಣೆ, ಹಲ್ಲಿ, ಮುಂತಾದ ಎಲ್ಲಾ ಜೀವಿಗಳನ್ನು ತಿನ್ನುವುದು ನಿಷಿದ್ಧವಾಗಿದೆ.
▪ನೀರಿನಲ್ಲಿ ಜೀವಿಸುವ ಅಂದರೆ, ನೀರಿನಿಂದ ಹೊರಬಂದರೆ ಸಾಯುವ ಎಲ್ಲಾ ಮೀನುಗಳು ಭಕ್ಷಯೋಜ್ಯವಾಗಿದೆ. (ಹಲಾಲ್) ನೀರಿನಲ್ಲೂ ನೆಲದಲ್ಲೂ ಬದುಕಲು ಸಾಮರ್ಥ್ಯವಿರುವ (ಉಭಯವಾಸಿ) ಎಲ್ಲಾ ಜೀವಿಗಳನ್ನು ತಿನ್ನುವುದು ಹರಾಮ್ ಆಗಿದೆ.
ಸಂಗ್ರಹ: ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್* ಮತ್ತು ತತ್ವಜ್ಞಾನಿ ಜಾಹಿಲ್ಃ ರ *ಕಿತಾಬುಲ್ ಹಯವಾನ್* ಎಂಬ ಗ್ರಂಥ.
Comments