Skip to main content

ವಿಸ್ಮಯ ತುಂಬಿದ ‌ಜೀವಜಗತ್ತು 👉 *20*



*ಮಂಗ ಮಾಡುವ ಪುಂಡಾಟಿಕೆಗಳು!*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
   
      ▪ ಮನಃಪ್ರಕೃತಿ, ದೇಹಪ್ರಕೃತಿ ಇತ್ಯಾದಿ ವಿಷಯಗಳಲ್ಲಿ ಮನುಷ್ಯನೊಂದಿಗೆ ಹೋಲಿಕೆ ಇರುವ ಒಂದು ವನ್ಯ ಪ್ರಾಣಿಯಾಗಿದೆ ಮಂಗ ಅಥವಾ ಕೋತಿ.
      ▪ಸುಮಾರು ಇಪ್ಪತ್ತರಿಂದ ಮುವತ್ತು ವರ್ಷ ಆಯುಷ್ಯವಿರುವ ಈ ಪ್ರಾಣಿ ಗರ್ಭಧಾರಣೆಯಾಗಿ ಐದು ತಿಂಗಳಾಗುವಾಗ ಮರಿ ಹಾಕುತ್ತದೆ. ಎರಡರಿಂದ ಹನ್ನೆರಡರ ತನಕ ಮರಿ ಹಾಕುವ ತಾಯಿ ಮಂಗ ಒಂದು ವರ್ಷದ ತನಕ ತನ್ನ ಮರಿಗಳಿಗೆ ಮೊಲೆಯುಣಿಸುತ್ತದೆ. ಮಾತ್ರವಲ್ಲ ಮನುಷ್ಯರಂತೆಯೇ ತನ್ನ ಕಂದನನ್ನು ತನ್ನ ಮಡಿಲಲ್ಲಿ ಕುಳ್ಳಿರಿಸಿ ಬಿಸಿ ಮುತ್ತು ಕೊಡುತ್ತದೆ. ಅಲ್ಲದೆ ಹೆಚ್ಚಿನ ಸಮಯಗಳಲ್ಲಿ ಮರಿಯು ತನ್ನ ತಾಯಿಯ ಕಂಕುಳದಲ್ಲೇ ತಾಯಿಯನ್ನು ಅಪ್ಪಿ ಹಿಡಿದಿರುತ್ತದೆ
     ▪ಮಂಗ ಜಾತಿಗೆ ಸೇರಿದ ಗೊರಿಲ್ಲ, ಚಿಂಪಾಂಜಿಗಳು ಸುಮಾರು ಐವತ್ತರಿಂದ ಅರುವತ್ತು ವರ್ಷಗಳ ತನಕ ಬದುಕುತ್ತದೆ.
     ▪ಪ್ರಾಣಿಗಳಲ್ಲಿ ಇಷ್ಟು ಚಂದ ಮತ್ತು ವಿವೇಕವುಳ್ಳ ಜೀವಿ ಬೇರೆ ಇಲ್ಲ. ಸಾಕು ಪ್ರಾಣಿ ಅಲ್ಲವಾದರೂ ಬಹಳ ಜಾಣಣಾಗಿರುವ ಈ ಪ್ರಾಣಿ ಮನುಷ್ಯನ ತರಬೇತಿಯಲ್ಲಿ ಬೆಳೆಯುವಾಗ ಕಲಿಸಿ ಕೊಡುವ ಎಲ್ಲಾ ವಿದ್ಯೆಯನ್ನು ಬಹಳ ಸುಲಭವಾಗಿ ಕಲಿಯ ಬಲ್ಲದು.
 ‌  ▪ಯಮನ್ ದೇಶದಲ್ಲಿ ಅಂಗಡಿ, ಮಾರುಕಟ್ಟೆ, ವಾರದ ಸಂತೆಗೆ ಹೋಗಿ ನಿತ್ಯೋಪಯೋಗಿ ಸಾಮಾನುಗಳನ್ನು ಖರೀದಿ ಮಾಡಲು ಮತ್ತು ಅಂಗಡಿ ಮಾಲಿಕರು ತನ್ನ ಅಂಗಡಿಯಲ್ಲಿ ಒಬ್ಬ ಮಾರಾಟಗಾರನಾಗಿಯೂ *(ಸೇಲ್ಸ್ ಮ್ಯಾನ್)* ಇದನ್ನು ಬಳಸುತ್ತಾರೆ. ಮಾತ್ರವಲ್ಲ ಕೆಲವು ದೇಶಗಳಲ್ಲಿ ಕಳ್ಳತನ ಮಡುವ ವಿದ್ಯೆ ಮತ್ತು ತಂತ್ರವನ್ನು ಕೂಡ ಕಲಿಸಿ ಕೊಡಲಾಗುತ್ತದೆ.
      ▪ಕೋತಿ ಅಥವಾ ಮಂಗ ಪ್ರಾಣಿಯಾದರೂ ಇದರ ಸ್ವಭಾವ ಸಾಧಾರಣ ಪ್ರಾಣಿಗಳ ಸ್ವಭಾವಕ್ಕಿಂತ ಸ್ವಲ್ಪ ವ್ಯತ್ಯಾಸವಾಗಿದೆ. ಮನುಷ್ಯನಲ್ಲದೆ ಪ್ರಾಣಿಗಳಲ್ಲಿ ನಗುವ ಜೀವಿ ಇದು ಮತ್ತು ಬಾವಲಿ ಮಾತ್ರ. ಅಲ್ಲದೆ ಇದು ಪ್ರಾಣಿಗಳಿಗಿಂತ ವಿಭಿನ್ನವಾಗಿ ತಿನ್ನಲಿಕ್ಕೆ, ಕುಡಿಯಲಿಕ್ಕೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ತನ್ನ ಕೈಗಳನ್ನು ಬಳಸುತ್ತದೆ.
    ▪ ಮನೆಯಲ್ಲಿ ಸಾಕು ಪ್ರಾಣಿಯಾಗಿರುವಾಗ ಮಂಗ ಮನುಷ್ಯನಂತೆ ಪದ್ಮಾಸನ ಹಾಕಿ ಕುಳಿತುಕೊಳ್ಳುತ್ತದೆ. ಹೆಂಗಸರಂತೆ ತಲೆಯಿಂದ ಹೇನು ತೆಗೆಯುತ್ತದೆ. ಚಂಡೆ ಬಾರಿಸುತ್ತದೆ. ಸೈಕಲ್ ಸವಾರಿ ಮಾಡುತ್ತದೆ. ತನ್ನ ಮಾಲಿಕನೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಸಕ್ರಿಯವಾಗುತ್ತದೆ. ಮಾತ್ರವಲ್ಲ ತರಬೇತಿ ಕೊಟ್ಟಲ್ಲಿ ಮನುಷ್ಯರಂತೆ ಎರಡು ಕಾಲಲ್ಲೂ ನಡೆಯುತ್ತದೆ. ಬಾಯಿಯಲ್ಲಿ ಮಾತನಾಡುವ ಒಂದು ವಿದ್ಯೆಯನ್ನು ಹೊರತು ಪಡಿಸಿ ಇತರ ಯಾವುದನ್ನೂ ತರಬೇತಿ ಕೊಟ್ಟರೆ ಮಾಡಬಲ್ಲದು. *ಬೇರೊಂದು ಗಮನಾರ್ಹ ಸಂಗತಿಯೆಂದರೆ, ನಮ್ಮ ಹೆಂಗಸರಂತೆಯೇ ಹೇನು ತೆಗೆಯುವ ಕೆಲಸ ಹೆಣ್ಣು ಮಂಗಗಳು ಮಾತ್ರ ಮಾಡುತ್ತದೆಯೇ ವಿನಾ ಯಾವತ್ತೂ ಗಂಡು ಮಂಗಗಳು ಆ ಕೆಲಸಕ್ಕೆ ಇಳಿಯುವುದಿಲ್ಲ. ಸುಬ್‌ಹಾನಲ್ಲಾಹ್!! ಇದೆಂತಹಾ ವಿಸ್ಮಯ ತುಂಬಿದ ಜೀವಜಗತ್ತು..?
   ▪ತಿನ್ನುವಾಗಲೂ, ಕುಡಿಯುವಾಗಲೂ ಆಹಾರ ಅಥವಾ ಪಾನೀಯಗಳನ್ನು ಮೂಸಿನೋಡಿ ಅದರ ಗುಣಮಟ್ಟವನ್ನು ಖಚಿತಪಡಿಸಿದ ನಂತರವೇ ಉಪಯೋಗಿಸುವ ಈ ಜಾಣ ಮಂಗನನ್ನು ವಿಷಕೊಟ್ಟು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಯಾವ ಉಪಾಯ ಮಾಡಿ ಆಹಾರಕ್ಕೆ ವಿಷ ಮಿಷ್ರಣಮಾಡಿ ಕೊಟ್ಟರೂ ಇದಕ್ಕೆ ಗೊತ್ತಾಗುತ್ತದೆ.
     ▪ಈಜಿಪ್ತಿನ *ನೂಬಾ* ಪ್ರಾಂತದ ಅರಸನ ಅರಮನೆಯಲ್ಲಿ ಬಟ್ಟೆ ಹೊಲಿಗೆ ಮಾಡುವ ಹೊಲಿಗೆಗಾರ *(ಟೈಲರ್)* ಮತ್ತು ಬಂಗಾರದ ಕೆಲಸ ಮಾಡಲು ಗೊತ್ತಿರುವ *ಅಕ್ಕಸಾಲಿಗ* ಮಂಗವೂ ಇತ್ತೆಂದು ಹೇಳಲಾಗುತ್ತದೆ.
   ▪ಮಂಗ ಇತರ ಪ್ರಾಣಿಗಳಿಗಿಂತ ಎಷ್ಟು ಜಾಣ ಮತ್ತು ಬುದ್ಧಿವಂತನಾದರೂ ಇತರ ಪ್ರಾಣಿಗಳ ಹಾಗೆ ಜನ್ಮ ಸಿದ್ದಾಂತವಾಗಿ ಈಜಲು ಬರುವುದಿಲ್ಲ. ಮನುಷ್ಯನಂತೆಯೇ ಈಜಲು ಕಲಿಸಿದರೆ ಕಲಿಯುತ್ತದೆ. ಈಜು ಗೊತ್ತಿಲ್ಲದ ಮಂಗ ನೀರಿಗೆ ಬಿದ್ದರೆ ಈಜು ಬಾರದ ಮನುಷ್ಯನಂತೆ ನೀರಿನಲ್ಲಿ ಬಿದ್ದು ಸಾಯುತ್ತದೆ.
    ▪ಬೇರೆ ಪ್ರಾಣಿಗಳಿಗೆ ವಿಭಿನ್ನವಾಗಿ ಇದರ ಕಣ್ಣಿನ ಕೆಳಗಿನ ರೆಪ್ಪೆಗೆ ಮನುಷ್ಯನಂತೆ ಕೂದಲಿರುತ್ತದೆ.  ಯಾವಾಗಲೂ ಒಗ್ಗಟ್ಟಾಗಿ ಇರುವ ಈ ಪ್ರಾಣಿಗೂ ಕಾಡಿನಲ್ಲಿ ಒಂದು ಒಕ್ಕೂಟ ಅಥವಾ ಯೂನಿಯನ್ ಇರುತ್ತದೆ. ಬಲಿಷ್ಠ ಮತ್ತು ದೃಢಕಾಯ ಶರೀರ ಇರುವವರಿಗಾಗಿರುತ್ತದೆ ಒಕ್ಕೂಟದ ಚುಕ್ಕಾಣಿ.
   ▪ತೋಳದಂತೆಯೇ ಕೋತಿಗೂ ಬಾಳ ಸಂಗಾತಿ ಇರುತ್ತದೆ. ಆದರೆ ತೋಳದಂತೆ ಕಠಿನ ನಿಯಮವಿಲ್ಲ. ಸಂಗಾತಿ ಅರಿಯದೆಯೇ ಆಗಾಗ್ಗೆ ಅನೈತಿಕ ಸಂಪರ್ಕದಲ್ಲಿ ಏರ್ಪಡುತ್ತದೆ.
    ▪ಕೋತಿಯು ಆಗಾಗ್ಗೆ ಕಾಮೋದ್ರೇಕವಾಗುವಒಂದು ಪ್ರಾಣಿಯಾಗಿದೆ.  ಎಷ್ಟರ ತನಕವೆಂದರೆ ಈ ಕೋತಿಗಳಲ್ಲಿ ಸಲಿಂಗಕಾಮಿಗಳೂ ಇದ್ದಾರೆ. ಮಾತ್ರವಲ್ಲ ಚಂದವಾಗಿ ಕಾಣುವ ಯಾವ ಜೀವಿಯನ್ನು ಹಿಂಬಾಲಿಸಿ ಅದರ ಹಿಂದೆ ನಡೆಯುತ್ತದೆ.
    ▪ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ, ಮಂಗಗಳಲ್ಲಿ  ಹಲವಾರು ಜಾತಿಯ ಮಂಗಗಳಿವೆ. ಅದರಲ್ಲಿ ಒಂದು ಜಾತಿಯ ಮಂಗಗಳು ರಾತ್ರಿ ನಿದ್ದೆ ಮಾಡುವುದು ಒಂದು ಸಾಲಾಗಿ ಆಗಿರುತ್ತದೆ. ಸಾಲಿನ ಒಂದು ತುದಿಯಲ್ಲಿರುವ ಮಂಗವು ನಿದ್ದೆ ಮಾಡದೆ ಕಾವಲು ನಿಲ್ಲುತ್ತದೆ. ಒಂದು ಹಂತದ (ಪಿರೇಡಿನ) ನಿದ್ದೆ ಮಾಡಿ ಆದರೆ ಸಾಲಿನ ತುದಿಯಲ್ಲಿ ನಿದ್ದೆ ಮಾಡದೆ ಕಾವಲು ನಿಂತ ಮಂಗವು ಎದ್ದುನಿಂತು ಬಹಳ ಜೋರಾಗಿ ಕೂಗುತ್ತದೆ. ಆಗ ಹತ್ತಿರದಲ್ಲಿರುವ ಮಂಗ ಎಚ್ಚೆತ್ತು ಕೊಳ್ಳುತ್ತದೆ. ಆಗ ಈ ತನಕ ನಿದ್ದೆ ಮಾಡದೆ ಕಾವಲು ನಿಂತ ಮಂಗವು ಸಾಲಿನ ಮತ್ತೊಂದು ತುದಿಗೆ ಸಾಗಿ‌ ನಿದ್ದೆ ಆರಂಭಿಸುತ್ತದೆ. ಎಚ್ಚೆತ್ತ ಮಂಗವು ತನ್ನ ಡ್ಯೂಟಿಗೆ ಹಾಜರಾಗಿ  ಕಾವಲು ಶುರು ಮಾಡುತ್ತದೆ. ಈ ಪಿರೇಡ್ ಮುಗಿಯುವುವಾಗ ಈ ಕಾವಲುಗಾರ ಮಂಗ ಜೋರಾಗಿ ಕೂಗಿ ತನ್ನ ಹತ್ತಿರದ ಸದಸ್ಯನನ್ನು ಎಬ್ಬಿಸಿ ಸಾಲಿನ ಇನ್ನೊಂದು ತುದಿಗೆ ಹೋಗಿ ನಿದ್ದೆ ಮಾಡುತ್ತದೆ.
      ▪ಹಾಗೆಯೇ ಸಾಲಿನ ಕೊನೆಯ ಸದಸ್ಯ ಎಚ್ಚರವಾಗುವ ತನಕ  ಈ ಪ್ರಕ್ರಿಯೆ ಮುಂದೆಸಾಗಿ ಎರಡನೇ ಪಿರೇಡಿನ ನಿದ್ದೆ ಶುರುವಾಗುತ್ತದೆ. ಅಲ್ಲಿಯೂ ಸ್ವಲ್ಪ ಕಳೆದು ಮೊದಲಿನಂತೆಯೇ ಎಚ್ಚೆತ್ತು ಕೂಗಾಟ ಆರಂಭವಾಗುತ್ತದೆ. ಅಂತಿಂತೂ ಈ ಆಟ ಬೆಳಗಿನ ತನಕ ಇರುತ್ತದೆ. ಒಟ್ಡಿನಲ್ಲಿ ರಾತ್ರಿ ಮಂಗಗಳು ಗುಂಡ್ಯ ಕಾಡಿನಲ್ಲಿ *(ಶಿರಾಡಿ ಘಾಟಿಯ ಬುಡ)* ನಿದ್ರೆ ಪ್ರಾರಂಭ ಮಾಡಿದ್ದರೆ ಬೆಳಗಾಗುವಾಗ ನೆಲ್ಯಾಡಿ ತಲುಪುತ್ತದೆ. ಸುಬ್‌ಹಾನಲ್ಲಾಹ್..! ಇದೆಂತಹಾ ಹಾಸ್ಯ..?
   ▪ಪ್ರಾಚೀನ ಕಾಲದಲ್ಲಿ ಹಾಲು ವ್ಯಾಪಾರ ಮಾಡುವ ಒಬ್ಬನು ದಿನಾಲು ಮಾರುಕಟ್ಟೆಗೆ ಮಾರಲು ಕೊಂಡೊಯ್ಯುವ ಹಾಲಿಗೆ ನೀರು ಮಿಷ್ರಣ ಮಾಡುತ್ತಿದ್ದ. ಒಂದು ದಿನ ವ್ಯಾಪಾರ ಮುಗಿಸಿ ಬಹಳ ಸಂತೋಷದಿಂದ ಜೇಬು ತುಂಬಾ ಹಣದೊಂದಿಗೆ ಸಮುದ್ರ ಮಾರ್ಗವಾಗಿ ಒಂದು ಹಡಗಿನಲ್ಲಿ ಬರುತ್ತಿದ್ದ. ಈತನ ಈ *ಹಲಾಲ್* ಅಲ್ಲದೆ ಸಂಪಾದಿಸುವ ಸಂಪಾದನೆಯನ್ನು ನೋಡುತ್ತಿದ್ದ ಈತನ ಸಾಕು ಪ್ರಾಣಿಯಾಗಿರುವ ಈತನೊಂದಿಗಿರುವ ಒಂದು ಮಂಗವು ಆ ದಿನ ಮೆಲ್ಲನೆ ಇವನ ಹಣದ ಚೀಲವನ್ನು ತೆಗೆದು ಕೊಂಡು ಹಡಗಿನ ಮೇಲಿರುವ ಪಟಸ್ಥಂಬಕ್ಕೆ ಹತ್ತಿ ಕಟ್ಟನ್ನು ಬಿಚ್ಚಿ ಇವನು ನೋಡುತ್ತಿದ್ದಂತೆಯೇ ಒಂದು ದೀನಾರನ್ನು‌ ತೆಗೆದು ನೀರಿಗೆ ಎಸೆದು ಮತ್ತೊಂದನ್ನು ತೆಗೆದು ಹಡಗಿನ ಒಳಗೂ ಎಸೆಯುತ್ತಿತ್ತು. ಒಟ್ಟಿನಲ್ಲಿ ಚೀಲದಲ್ಲಿರುವ ಹಣದಲ್ಲಿ ಅರ್ಧ ನೀರಿಗೂ ಅರ್ಧ ಮಾಲಿಕನಿಗೂ ದೊರಕಿತು. ಅಂದರೆ ನೀರು ಮಿಷ್ರಣ ಮಾಡಿದ ನೀರಿನ ಹಕ್ಕು ನೀರು ಪಾಲಾಯಿತು.
     ▪ಈ ಸತ್ಯ ಕಥೆಯನ್ನು ಪ್ರವಾದಿ ಮುಹಮ್ಮದ್ (ಸ) ರು ನಮ್ಮಲ್ಲಿ ಹೇಳಿದ್ದಾಗಿ ಹಝ್ರತ್ ಅಬೂ ಹುರೈರನ್ನು ಉಲ್ಲೇಖಿಸಿ ಇಮಾಮ್ *ಬೈಹಖೀ* ವರದಿ ಮಾಡಿದ್ದಾರೆ. ಹಾಲಿಗೆ ನೀರು ಮಿಶ್ರಣ ಮಾಡಿ ಮಾರಾಟ ಮಾಡುವುದು ಮಹಾ ವಂಚನೆಯಾಗಿದೆ. ಹಾಗೆ ಮಾಡುವವನಲ್ಲಿ ನಾಳೆ ಪರಲೋಕದಲ್ಲಿ ನೀರು ಮಿಶ್ರಿತ ಹಾಲಿನಿಂದ ನೀರನ್ನು ಬೇರ್ಪಡಿಸಲು ಹೇಳಲಾಗುವುದು ಎಂದು ಪ್ರವಾದಿವರ್ಯರು ಹೇಳಿದ್ದಾರೆ. ಒಟ್ಡಿನಲ್ಲಿ ಗಮನಾರ್ಹ ಸಂಗತಿಯೆಂದರೆ, ಈ ತಿಳುವಳಿಕೆಯನ್ನು ಅಲ್ಲಾಹನು ಬಾಯಿ ಬಾರದ ಒಂದು ಮೂಕಪ್ರಾಣಿಯ ಮೂಲಕ ಮನುಷ್ಯನಿಗೆ ಮನವರಿಕೆ ಮಾಡಿ ಕೊಟ್ಟದ್ದರ ಮಹತ್ವ ಇಲ್ಲಿ ಓದುಗರು ಊಹಿಸ ಬೇಕಾಗಿದೆ.
  ▪ಪ್ರವಾದಿ *ದಾವೂದ್* (ಅ) ರವರ ಜನಾಂಗವಾದ ಬನೂ ಇಸ್ರಾಯೀಲರಲ್ಲಿ (ಯಹೂದಿಗಳು) ಅಲ್ಲಾಹನು ಶನಿವಾರ ದಿನ ಕಡಲಿಗೆ ಮೀನು ಹಿಡಿಯಲು ಹೋಗ ಬಾರದೆಂದು ತಾಕೀತು ಮಾಡಿದ್ದನು. ಆದರೆ ಆ ನೀತಿಗೆಟ್ಟ  ಜನತೆ ಅಲ್ಲಾಹುವಿನ ಆಜ್ಞೆಯನ್ನು ಉಲ್ಲಂಘಿಸಿ ಶನಿವಾರ ಮೀನು ಹಿಡಿಯಲು ಹೋದಾಗ ಅವರನ್ನು ಅಲ್ಲಾಹನು ಕೋತಿಗಳಾಗಿ ರೂಪ ಬದಲಾವಣೆ ಮಾಡಿದ್ದನು ಎಂದು ಖುರ್‌ಆನ್ ಹೇಳುತ್ತದೆ.
   ▪ *"ಇಲ್ಲಿ ಕೋತಿಗಳಾಗಿ ರೂಪಾಂತರಗೊಂಡ ಜನತೆಯ ಸಂತಾನ ನಂತರ ಏನಾಯಿತು..? ಅವರ ಮಕ್ಕಳಿಗೆ ಯಾವ ವಿದಿ..? ಮನುಷ್ಯರಾಗಿಯೇ ಇದ್ದರಾ..?"*  ಇತ್ಯಾದಿ ಸಂಶಯಗಳು ಓದುಗರಿಗೆ ಬರಬಹುದು. ಈ ಘಟನೆಯನ್ನು ವಿವರಿಸುವಲ್ಲಿ ಎಲ್ಲಾ ಕುರ್‌ಆನ್ ವ್ಯಾಖ್ಯಾನಗಾರರು ಹೇಳುವುದೇನೆಂದರೆ, ಈ ರೂಪ ಬದಲಾವಣೆಯಾದ ಜನತೆ ನಂತರ ಬರೇ ಮೂರು ದಿನಗಳ ಕಾಲ ಮಾತ್ರ ಬದುಕಿದ್ದರು. ಮಾತ್ರವಲ್ಲ ನಂತರ ಅವರಿಗೆ ಯಾರಿಗೂ ಮಕ್ಕಳೂ ಆಗಲಿಲ್ಲ.
    ▪ಪ್ರವಾದಿ ಮುಹಮ್ಮದ್ (ಸ) ರು ಕೋತಿಯನ್ನು ಕಾಣುವಾಗ ಅಲ್ಲಾಹನಿಗೆ ಕೃತಜ್ಞತೆಯ ಸುಜೂದು ಮಾಡುತ್ತಿದ್ದರೆಂದು ಸಹಾಬಿ *ಜಾಬಿರ್* (ರ) ರು ಹೇಳಿದ್ದಾಗಿ ವರದಿಯಾಗಿದೆ.
     ▪ಒಬ್ಬನಿಗೆ ಒಂದು ರಾತ್ರಿ ನಿದ್ದೆ ಬಾರದೆ ಎಚ್ಚರದಿಂದ ಇರಬೇಕೆಂದಿದ್ದರೆ ಮಂಗನ ಹಲ್ಲನ್ನು ಅವನ ಶರೀರದ ಯಾವುದಾದರೊಂದು ಭಾಗಕ್ಕೆ ತೂಗುಹಾಕಿದರೆ ಬೆಳಗಾಗುವ ತನಕ ನಿದ್ದೆ ಬಾರದು.(ಯಾವ *ರೆಡ್ ಬುಲ್* ಕೂಡ ಕುಡಿಯಬೇಕಾಗಿಲ್ಲ)
    ▪ಒಬ್ಬನು ಮಂಗನ ಬಿಸಿ ರಕ್ತವನ್ನು ಕುಡಿದರೆ ಕುಡಿದ ಕ್ಷಣದಲ್ಲಿ ಅವನು ಮಾತನಾಡಲಾಗದೆ ಮೂಕನಾಗಿ ಬಿಡುತ್ತಾನೆ. ಸುಬ್‌ಹಾನಲ್ಲಾಹ್..!
   ▪ಒಬ್ಬನ ತಲೆದಿಂಬಿನ‌ ಅಡಿಯಲ್ಲಿ ಮಂಗನ ಕೇಶವನ್ನು ಇಟ್ಟರೆ ಅವನಿಗೆ ಆ ರಾತ್ರಿ ಭಯಾನಕ ಕನಸುಗಳು ಕಾಣುತ್ತದೆ.
    ▪ಒಬ್ಬನಿಗೆ ಕೋತಿಯೊಂದಿಗೆ ಕಾದಾಡುವ ಕನಸು ಕಂಡರೆ ಅವನಿಗೆ ಯಾವುದೋ ಮಾರಕ ರೋಗ ಬರುವುದರ ನಿಶಾನೆಯಾಗಿದೆ. ಕಾದಾಟದಲ್ಲಿ ಮಂಗವು ಸೋಲುವುದಾದರೆ ಬರುವ ರೋಗಕ್ಕೆ ಚಿಕಿತ್ಸೆ ಮಾಡಿದಲ್ಲಿ ಖಾಯಿಲೆ ವಾಸಿಯಾಗುವ ಸಂಕೇತವಾಗಿದೆ.‌ ಕಾದಾಟದಲ್ಲಿ ಮಂಗ ಗೆಲುವುದಾದರೆ ಬರುವ ರೋಗಕ್ಕೆ ಚಿಕಿತ್ಸೆ ಫಲಕಾರಿಯಾಗದು ಎಂಬುದರ ಲಕ್ಷಣವಾಗಿದೆ.
  ▪ಮಂಗವು ಒಬ್ಬನಿಗೆ ಕಚ್ಚುವ ಕನಸು ಬಿದ್ದರೆ ಅವನ ಮಿತ್ರನಾಗಿಯೋ ಅಥವಾ ಇತರರಾಗಿಯೋ ಜಗಳವಾಗುವುದರ ಸೂಚನೆಯಾಗಿದೆ.
   ▪ಮಂಗನ ಮಾಂಸ ತಿನ್ನುವ ಕನಸು ಬಿದ್ದರೆ  ಮುಂದಿನ ದಿನಗಳಲ್ಲಿ ಅವನು ದೊಡ್ಡ ಅನಾಹುತ ಅಥವಾ ಮಾನಸಿಕ ಸಂಕಟಕ್ಕೆ ಬಲಿಯಾಗುತ್ತಾನೆ ಎಂಬುದರ ನಿಶಾನೆಯಾಗಿದೆ.
    ▪ಮಂಗನ ಮಾಂಸ ಇಸ್ಲಾಮಿನಲ್ಲಿ ತಿನ್ನುವುದು ಹರಾಮ್ ಆಗಿರುತ್ತದೆ.
     
     ಸಂಗ್ರಹ: ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್* ಹಾಗೂ ತತ್ವಜ್ಞಾನಿ ಜಾಹಿಳ್ ರ *ಕಿತಾಬುಲ್ ಹಯವಾನ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...