*ಹಗಲು ಕಣ್ಣು ಕಾಣದ ವಿಚಿತ್ರ ಪ್ರಾಣಿ ಬಾವಲಿ*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ಹಗಲಿನಲ್ಲಿ ಕಣ್ಣಿಗೆ ದೃಷ್ಟಿಯಿಲ್ಲದ ಒಂದು ಸಸ್ತನಿ ಪ್ರಾಣಿಯಾಗಿದೆ ಬಾವಲಿ. ಹೊರನೋಟಕ್ಕೆ ಪಕ್ಷಿಯಂತೆ ಕಾಣುವುದಾದರೂ ನಿಜವಾಗಿ ಇದು ಪಕ್ಷಿಯಲ್ಲ. ಮೊಲೆಯುಣಿಸುವ ಹಲವಾರು ವಿಶೇಷತೆಗಳಿರುವ ಒಂದು ಅಸಾಧಾರಣ ಪ್ರಾಣಿ.
▪ಬಾವಲಿಯನ್ನು ಕಂಡವರು ನಮ್ಮಲ್ಲಿ ಬಹಳ ಮಂದಿಯಿದ್ದರೂ ಅದರ ವಿಶೇಷತೆಯನ್ನು ತಿಳಿದವರು ಬಹುಶಃ ಬಹಳ ವಿರಳ. ಈ ಬಾವಲಿಗೆ ಹಗಲು ಹೊತ್ತು ಕಣ್ಣು ಕಾಣುವುದಿಲ್ಲ. ಆದರೂ ಎಂತಹಾ ಅಮಾವಾಸ್ಯೆ ರಾತ್ರಿಯಲ್ಲೂ ಯಾವ ಪುಟ್ಟ ಜೀವಿಯನ್ನೂ ಬಹಳ ದೂರದಿಂದ ಕಾಣುವ ಅತಿ ಸೂಕ್ಷ್ಮವಾದ ದೃಷ್ಟಿಶಕ್ತಿಯನ್ನು ಅಲ್ಲಾಹನು ಇದಕ್ಕೆ ಕೊಟ್ಟಿದ್ದಾನೆ.
▪ಹಗಲು ಕಣ್ಣುಕಾಣದ ಮತ್ತೊಂದು ಪಕ್ಷಿಯಾಗಿದೆ ಗೂಬೆ ಅಥವಾ ಗೂಗೆ. ಅದರ ಅಂಕಣ ಇದು ಅಲ್ಲವಾದ್ದರಿಂದ ಆ ಕಡೆಗೆ ಓದುಗರ ಗಮನ ಸೆಳೆಯುವುದಿಲ್ಲ. ಇಂಶಾ ಅಲ್ಲಾಃ ಮುಂದಿನ ಅಂಕಣದಲ್ಲಿ ಅದರ ಬಗ್ಗೆ ವಿವರಿಸಲಾಗುವುದು.
▪ಹಗಲು ಹೊತ್ತು ಕಾಣಸಿಗದ ಈ ಜೀವಿ ಸೂರ್ಯಾಸ್ತಮಾನ ಆಗುವಾಗ ತನ್ನ ದೈನಂದಿನ ಕಸಬಿಗೆ ಹೊರಡುತ್ತದೆ. ಮಾತ್ರವಲ್ಲ ತನ್ನ ಹೊಟ್ಟೆಪಾಡಿಗಾಗಿ ರಾತ್ರಿ ಬೆಳಗಾಗುವುದರ ಒಳಗೆ ನೂರಾರು ಕಿಲೊಮೀಟರ್ ಸಂಚಾರ ಮಾಡುತ್ತದೆ. ಹಣ್ಣು ಹಂಪಲುಗಳು, ಕೀಟಗಳು, ಸೊಳ್ಳೆ ಇತ್ಯಾದಿ ಇದರ ಮುಖ್ಯ ಆಹಾರ. ಒಂದು ದಿನದಲ್ಲಿ ನೂರಾರು ಸೊಳ್ಳೆಗಳನ್ನು ಕೊಂದು ತಿನ್ನುತ್ತದೆ. ರಾತ್ರಿ ಚಂದ್ರನ ಬೆಳಕಿರುವಾಗಲೂ ಇದಕ್ಕೆ ಕಣ್ಣು ಕಾಣುವುದು ಕಡಿಮೆಯಾದ್ದರಿಂದ ಅಂತಹಾ ರಾತ್ರಿಗಳಲ್ಲೂ ತನ್ನ ಹೊಟ್ಟೆಪಾಡಿಗೆ ಬೇಕಾಗಿ ಹಾರಾಡುವ ಹಾರಾಟಕ್ಕೆ ತೊಂದರೆಯಾಗುತ್ತದೆ.
▪ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಗರುಡನನ್ನು ಬಿಟ್ಟರೆ ಇದಕ್ಕೆ ನಂತರದ ಸ್ಥಾನ. ಬಹಳ ವೇಗವಾಗಿ ಹಾರಾಡುವ ಈ ಜೀವಿಯು ತನ್ನ ಹಾರಾಟ ಸಮಯದಲ್ಲೂ ಕೆಲವೊಮ್ಮೆ ಸಿಕ್ಕ ಸೊಳ್ಳೆಗಳನ್ನು ಹಿಡಿದು ತಿನ್ನುತ್ತದೆ.
▪ಮೂರರಿಂದ ಏಳರ ತನಕ ಮರಿಹಾಕುವ ಈ ಬಾವಲಿಗೆ ತನ್ನ ಮರಿಗಳೊಂದಿಗೆ ಎಲ್ಲಿಲ್ಲದ ಮಮತೆ. ತನ್ನ ವೇಗದ ಹಾರಾಟ ಸಮಯದಲ್ಲೂ ಕೆಲವೊಮ್ಮೆ ತನ್ನ ಕಂದನನ್ನು ಎತ್ತಿಕೊಂಡು ಹಾರಾಡುತ್ತದೆ. ಮಾತ್ರವಲ್ಲ ತನ್ನ ಮರಿಗೆ ಆಗಾಗ್ಗೆ ಒಳ್ಳೆಯ ಬಿಸಿ ಮುತ್ತು ಕೂಡ ಕೊಡುತ್ತದೆ. ಪ್ರಾಣಿ ಪಕ್ಷಿಗಳಲ್ಲಿ ತನ್ನ ಮರಿಗಳೊಂದಿಗೆ ಇಷ್ಟೊಂದು ಮಮತೆಯೊಂದಿಗೆ ವರ್ತಿಸುವ ಜೀವಿ ಈ ಪ್ರಪಂಚದಲ್ಲಿ ಇದಲ್ಲದೆ ಬೇರೊಂದಿಲ್ಲ.
ಅಲ್ಲಾಹನ ಜೀವಿಗಳಲ್ಲಿ ನಗುವ ಮತ್ತು ತನ್ನ ಮರಿಗಳನ್ನು ಎತ್ತಿಕೊಂಡು ಕಂಕುಳಲ್ಲಿ ಕುಳ್ಳಿರಿಸಿ ಹೋಗುವ ಮೂರು ಜೀವಿಗಳಲ್ಲಿ ಇದಕ್ಕೆ ಎರಡನೇ ಸ್ಥಾನ. ಮನುಷ್ಯ ಮತ್ತು ಕೋತಿ ಈ ವಿಭಾಗದಲ್ಲಿರುವ ಇತರ ಎರಡು ಜೀವಿಗಳು. ಮನುಷ್ಯರಲ್ಲಿ ಮಹಿಳೆಯರಿಗೆ ಋತುಸ್ರಾವ ಆಗುವ ಹಾಗೆ ತಿಂಗಳ ಋತುಸ್ರಾವ ಇದಕ್ಕೂ ಅಗುತ್ತದೆ.
▪ಇದರ ಬೇರೊಂದು ವಿಶೇಷತೆಯೆಂದರೆ, ಲೈಂಗಿಕ ಚಟುವಟಿಕೆಯಲ್ಲೂ ಇದು ಹೀರೊ. ತನ್ನ ಹಾರಾಟ ಸಮಯದಲ್ಲೂ ಕೆಲವೊಮ್ಮೆ ತನ್ಮ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕದಲ್ಲಿ ಏರ್ಪಡುತ್ತದೆ. ಅಂತೆಯೇ ತನ್ನ ಕಂಕುಳಲ್ಲಿರಿಸಿದ ಮರಿಗೂ ಹಾರಾಟ ಸಮಯದಲ್ಲಿ ಮೊಲೆಯುಣಿಸುತ್ತದೆ. ಹಾರಾಟದಲ್ಲಿರುವಾಗ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವ ಮತ್ತು ಮೊಲೆಯುಣಿಸುವ ಜೀವಿ ಇದಲ್ಲದೆ ಬೇರೆ ಇಲ್ಲ. ತನ್ನ ಮರಿಯೊಂದಿಗಿರುವ ಮಿತಿಮೀರಿದ ಮಮತೆ, ಕರುಣೆ ಮತ್ತು ಪ್ರೀತಿಯ ಕಾರಣದಿಂದ ಇದು ಕೆಲವೊಮ್ಮೆ ತನ್ನ ಮರಿಯನ್ನು ಕಚ್ಚಿಕೊಂಡು ಕೂಡ ಹಾರಾಡುತ್ತದೆ.
▪ಈ ಬಾವಲಿಯ ನಿದ್ರೆಯ ಶೈಲಿಯು ಕೂಡ ಇತರ ಪ್ರಾಣಿ ಪಕ್ಷಿಗಳಿಗೆ ಹೋಲಿಸಿದರೆ ಬಹಳ ವ್ಯತ್ಯಾಸವಾಗಿರುತ್ತದೆ. ಮರದ ರೆಂಬೆಗಳಲ್ಲಿ ತನ್ನ ಕಾಲುಗಳನ್ನು ತೂಗುಹಾಕಿ ಕಾಲು ಮೇಲೆಯೂ ತಲೆ ಕೆಳಗೂ ಮಾಡಿ ಅಂದರೆ *ದ್ಸಬಹ್* ಮಾಡಿದ ಆಡನ್ನು ಚರ್ಮ ಸುಲಿಯಲಿಕ್ಕೆ ಕಸಾಯಿಖಾನೆಯಲ್ಲಿ ತೂಗುಹಾಕುವ ರೂಪದಲ್ಲಾಗಿರುತ್ತದೆ ನಿದ್ರಿಸಲು ಬೇಕಾಗಿ ಮಲಗುವುದು.
▪ ಇದರ ಬೇರೊಂದು ವಿಶೇಷತೆಯೆಂದರೆ ಇದು ಆಲದ ಮರದ ಜಾತಿಗೆ ಸೇರಿದ ರಸ್ತೆ ಬದಿಯಲ್ಲಿ ನೆರಳಿಗಾಗಿ ನೆಡುವ *ಪ್ಲಾಟನಾಸ್*(Platan) ಎಂಬ ಮರ ಇರುವಲ್ಲಿಗೆ ಬರುವುದಿಲ್ಲ.ಆ ಮರದ ಎಲೆ ಬಾವಲಿಯ ಶರೀರಕ್ಕೆ ಸ್ಪರ್ಶ ಆದ ತಕ್ಷಣ ಇದರ ಶರೀರ ಬಲವಿಲ್ಲದೆ ಮರಗಟ್ಟಿ ಹೋಗುತ್ತದೆ. ಮಾತ್ರವಲ್ಲ ಹಾರಾಡಲು ಕೂಡ ಸಾಧ್ಯವಾಗದೆ ಹೋಗುತ್ತದೆ.
▪ಬಾವಲಿಗೆ ಗರುಡನ ಮೊಟ್ಟೆಯೆಂದರೆ ಬಹಳ ಇಷ್ಟ. ಪರ್ವತ ಪ್ರದೇಶಗಳಲ್ಲಿ ಗರುಡನು ಮೊಟ್ಟೆಯಿಡುವಾಗ ಬಾವಲಿಯ ಉಪದ್ರವ ಇಲ್ಲದಿರಲು ಬೇಕಾಗಿ ಮೊಟ್ಟೆಯ ಮೇಲೆ ಗರುಡನು ಈ ಹೇಳಿದ ಮರದ ಎಲೆಯನ್ನು ತಂದು ಹಾಕುತ್ತದೆ.
▪ಕಾಣಲು ಪಕ್ಷಿಯಂತೆ ಕಾಣುವ ಈ ಜೀವಿ ಒಂದು ಸಸ್ತನಿಯಾಗಿದೆ. ಪ್ರಾಣಿಗಳಂತೆ ಇದಕ್ಕೆ ಎರಡು ಕಿವಿಯಿದೆ. ಅಂತೆಯೇ ಎರಡು ವೃಷಣವಿದೆ. ಹಲ್ಲುಗಳಿವೆ. ಎರಡು ಸ್ತನಗಳಿದೆ. ಜಾನುವಾರುಗಳಂತೆ ಮೂತ್ರ ವಿಸರ್ಜನೆ ಮಾಡುತ್ತದೆ. ಮಾತ್ರವಲ್ಲ ಗರಿಗಳಿಲ್ಲದೆ ಆಕಾಶದಲ್ಲಿ ಹಾರಾಡುವ ಏಕೈಕ ಜೀವಿ ಇದಾಗಿದೆ.
▪ಬಹಳ ಆಯುಷ್ಯವಿರುವ ಬಾವಲಿಗೆ ತನ್ನ ಈ ದೀರ್ಘ ಆಯುಷ್ಯದಲ್ಲಿ ಒಂದು ಗೂಡು ಕಟ್ಟಿ ವಾಸಿಸುವ ಅಭ್ಯಾಸವಿಲ್ಲ. ಮರಿಹಾಕುವ ಸಮಯವಾಗುವಾಗ ತಾತ್ಕಾಲಿಕ ಎಲ್ಲಾದರೂ ಗುಡ್ಡಗಾಡು ಪ್ರದೇಶದಲ್ಲಿ ಮಣ್ಣನ್ನು ಕೊರೆದು ಬಾಯಿ ಕಿರಿದಾಗಿಯೂ ಒಳಗೆ ವಿಶಾಲವಾಗಿಯೂ ಇರುವ ಒಂದು ಹೊಂಡ ಮಾಡಿ ಅಲ್ಲಿ ಮರಿ ಹಾಕುತ್ತದೆ. ರಾತ್ರಿಯಿಡೀ ಹೊಟ್ಟೆಪಾಡಿಗಾಗಿರುವ ಸಂಚಾರದಲ್ಲೂ ಹಗಲು ಎಲ್ಲಿಯಾದರು ಬೆಟ್ಟ ಪ್ರದೇಶದ ಮರದ ರೆಂಬೆಗಳಲ್ಲಿ ಕಾಲುಗಳನ್ನು ಮೇಲಕ್ಕೆ ತೂಗುಹಾಕಿ ಮಲಗಿಯೂ ತನ್ನ ದೀರ್ಘ ಆಯುಷ್ಯವನ್ನು ಮುಗಿಸುತ್ತದೆ.
▪ಪ್ರವಾದಿ ಈಸಾ (ಅ)ರಲ್ಲಿ ಅಂದಿನ ಅವರ ಜನತೆ ಒಮ್ಮೆ ಹೇಳಿದರಂತೆ. *"ಓ ಪ್ರವಾದಿಯವರೇ, ನೀವು ಸತ್ತವರನ್ನು ಜೀವಂತ ಮಾಡುತ್ತೀರಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮಗೆ ಈಗ ನೀವು ಒಂದು ಅದ್ಭುತ ಜೀವಿಯನ್ನು ನಿಮಗೆ ಅಲ್ಲಾಹನು ಕೊಟ್ಟ ಪವಾಡದಿಂದ ಉಂಟುಮಾಡಿ ತೋರಿಸಬೇಕು. ಹಾಗಾದರೆ ನಾವು ನಿಮ್ಮಲ್ಲಿ ಖಂಡಿತವಾಗಿ ನಂಬಿಕೆ ಇಡುತ್ತೇವೆ"*
▪ಕೂಡಲೇ ಅಲ್ಲಾಹುವಿನ ಆಜ್ಞೆ ಪ್ರಕಾರ ಪ್ರವಾದಿ ಈಸಾ (ಅ) ರವರು ಒಂದು ಜೀವಿಯನ್ನು ಸೃಷ್ಟಿಸಿದರು. ಅದಾಗಿರುತ್ತದೆ ಈ ಅಧ್ಬುತ ಬಾವಲಿ.
▪ಹಿಜ್‌ರಾ ಮುವತ್ತ ನಾಲ್ಕರಲ್ಲಿ ಹುಟ್ಟಿ ನೂರ ಹದಿನಾಲ್ಕರಲ್ಲಿ ನಿಧನರಾದರ (34-114) ವಿಶ್ವವಿಖ್ಯಾತ ಇತಿಹಾಸ ಗಾರ ತಾಬಿಈ ಪಂಡಿತ (ಸಹಾಬಿಗಳನ್ನು ಕಣ್ಣಾರೆ ಕಂಡವರು) ಅಲ್ಲಾಮಾ *ವಹಬ್ ಬಿನ್ ಮುನಬ್ಬಿಹ್* ಹೇಳುತ್ತಾರೆ. *"ನಸರಾನಿಗಳು ಪ್ರವಾದಿ ಈಸಾ (ಅ) ರಲ್ಲಿ ನೀವಾಗಿಯೇ ಒಂದು ಜೀವಿಯನ್ನು ಸೃಷ್ಟಿ ಮಾಡಬೇಕೆಂದು ಕೇಳಿಕೊಂಡಾಗ ಅವರೊಂದು ಮಣ್ಣಿನ ರೂಪಮಾಡಿ ಅಲ್ಲಾಹನು ಕೊಟ್ಟ ಪವಾಡವೆಂಬಂತೆ ಅದಕ್ಕೆ ಊದಿದರು. ತಕ್ಷಣ ಜೀವ ಸಿಕ್ಕಿದ ಆ ಬಾವಲಿ ರೂಪದಲ್ಲಿದ್ದ ಮಣ್ಣಿನ ಮೂರ್ತಿ ಹಾರಾಡಲು ಶುರುಮಾಡಿತು. ಜನರ ಕಣ್ಣಿಗೆ ಗೋಚರವಾಗುವಷ್ಟು ಹಾರುತ್ತಿತ್ತು. ಕಣ್ಣಿನ ಗೋಚರಕ್ಕೆ ಕಾಣದೆ ಮಾಯವಾಗುವಷ್ಟು ದೂರ ತಲುಪಿದ ಕೂಡಲೇ ಸತ್ತು ಕೆಳಗೆ ಬೀಳುತ್ತಿತ್ತು. ಸೃಷ್ಟಿಕರ್ತನಾದ ಅಲ್ಲಾಹನು ಸೃಷ್ಟಿಸುವ ಸೃಷ್ಟಿ ಮತ್ತು ಅವನ ಸೃಷ್ಟಿಯಾದ ದಾಸನೊಬ್ಬ ಅವನ ಅನುಮತಿ ಮೇರೆಗೆ ಸೃಷ್ಟಿಸುವ ಸೃಷ್ಟಿಗೂ ವ್ಯತ್ಯಾಸವಿದೆಯೆಂದೂ, ಅಲ್ಲದೆ ಪರಿಪೂರ್ಣತೆ ಎಂಬುದು ಜಗದೊಡೆಯನಾದ ಅಲ್ಲಾಹುವಿನಿಗೆ ಮಾತ್ರ ಎಂದೂ ಅವರಿಗೆ ಮನವರಿಕೆಯಾಗಲು ಮತ್ತು ಸೃಷ್ಟಿಯ ಸೃಷ್ಟಿ ಮತ್ತು ಅಲ್ಲಾಹುವಿನ ಸೃಷ್ಟಿ ಒಂದೇ ತರಹವಾದರೆ ಅವರು ಈಸಾ (ಅ) ರವರನ್ನೇ ಅಲ್ಲಾಹನೆಂದು ಹೇಳಿಯಾರು."* ಅದಕ್ಕೂ ಅವಕಾಶ ಬಾರದಿರಲು ಆಗಿತ್ತು ಈ ವ್ಯತ್ಯಾಸ.
▪ಈ ಒಂದು ವಿಶೇಷತೆ ಮತ್ತು ವ್ಯತ್ಯಾಸ ಇರುವುದರಿಂದ ಈ ಜೀವಿಯ ಜೀವನ ಶೈಲಿ ಕೂಡ ಬೇರೆ ಜೀವಿಗಳಿಗಿಂತ ವಿಭಿನ್ನವಾಗಿದೆ. ಯಾವ ಮಾಂಸಾಹಾರಿ ಜೀವಿಯೂ ಇದನ್ನು ಕಂಡರೆ ನಿರಾಯಾಸ ಕೊಂದು ತಿನ್ನುತ್ತದೆ. ಸಸ್ಯಾಹಾರಿಯಾದರೆ ಕೊಂದು ಬಿಡುತ್ತದೆ. ಮಾತ್ರವಲ್ಲ ಪ್ರಪಂಚದಲ್ಲಿರುವ ಇತರ ಯಾವ ಪ್ರಾಣಿ ಪಕ್ಷಿಗಳಾಗಿಯೂ ಇದಕ್ಕೆ ಯಾವುದೇ ಒಡನಾಟವೋ ಸಹವಾಸವೋ ಇಲ್ಲ. ಅದಕ್ಕಿರಬಹುದು ಇದರ ಸಂಚಾರವನ್ನು ರಾತ್ರಿ ಸಮಯದಲ್ಲಿ ಮಾತ್ರ ಅಲ್ಲಾಹನು ಸೀಮಿತ ಗೊಳಿಸಿದ್ದೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ಬಾವಲಿಯ ಆಯುಷ್ಯಿನ ಕುರಿತು ನಿಖರವಾದ ಮಾಹಿತಿ ಇಲ್ಲವಾದರೂ ವಿಶ್ವ ವಿಖ್ಯಾತ ಪಂಡಿತ ಮತ್ತು ತತ್ವಜ್ಞಾನಿಯಾದ ಹಿಜರಿ ನೂರ ಅರುವತ್ತ ಮೂರರಲ್ಲಿ ಹುಟ್ಟಿ ಇನ್ನೂರ ಐವತ್ತೈದರಲ್ಲಿ ಮರಣಹೊಂದಿದ (163-255) *ಉಮರ್ ಬಿನ್ ಬಹ್‌ರ್ ಅಲ್ ಜಾಹಿಳ್* ರ ಅಭಿಪ್ರಾಯ ಪ್ರಕಾರ ಗರುಡನಂತೆ ನಾಲ್ಕಂಕೆ ತಲುಪುತ್ತದೆ. *(ಈ ತತ್ವಜ್ಞಾನಿ ಜಾಹಿಳ್ ತನ್ನ ಪೂರ್ಣ ಆಯುಷ್ಯವನ್ನು ಬರಹಕ್ಕೆ ಮಾತ್ರ ಸೀಮಿತ ಗೊಳಿಸಿದ್ದರು. ಕಿತಾಬ್ ಬರೆಯುವ ಗೌಜಿಯಲ್ಲಿ ವಿವಾಹವಾಗುವುದು ಕೂಡ ಮರೆತು ಹೋಗಿತ್ತಂತೆ. ತಾನು ಹಲವಾರು ವಿಷಯಗಳಲ್ಲಾಗಿ ಬರೆದ ಸಾವಿರಾರು ಗ್ರಂಥಗಳನ್ನಿಡಲು ತನ್ನ ವಾಸಮನೆಯ ಜಾಗವಿಡೀ ಸಾಕಾಗದೆ ಹೋಯಿತು. ಸಿಕ್ಕ ಸಿಕ್ಕ ಜಾಗಗಳಲ್ಲಿ ಇಟ್ಟು ಕೊನೆಗೆ ಒಂದು ಶರೀರಕ್ಕೆ ಮಲಗಲು ಬೇಕಾದ ಜಾಗ ಮಾತ್ರ ಕಾಲಿ ಬಿಟ್ಟಿದ್ದರು. ಒಂದು ದಿನ ರಾತ್ರಿ ತಾನು ಬರೆದ ಕಿತಾಬುಗಳ ಕಟ್ಟೇ ತನ್ನ ಮೈಮೆಲೆ ಬಿದ್ದು ಕೊನೆಯುಸಿರೆಳೆದರೆಂದು ಹೇಳಲಾಗುತ್ತದೆ.)*
▪ಈ ಪಕ್ಷಿಯನ್ನು ಕೊಲ್ಲಬಾರದಾಗಿ ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ ಹದೀಸನ್ನು *ಅಬುಲ್ ಹುವೈಯ್‌ರಿಸ್* ಎಂಬವರಿಂದ ಉಲ್ಲೇಖವಾದದ್ದನು ಹಿಜ್‌ರಾ ಇನ್ನೂರ ಎಪ್ಪತ್ತ ಏಳರಲ್ಲಿ ಹುಟ್ಟಿದ ಮಹಾಪಂಡಿತ ಇಮಾಮ್ *ಬಿನ್ ಅದಿಯ್ಯ್* ತನ್ನ *ಅಲ್ ಕಾಮಿಲ್ ಫೀ ಅಲ್-ಲುಅಫಾಯಿ* ಎಂಬ ಗ್ರಂಥದಲ್ಲಿ ತಿಳಿಸಿದ್ದಾರೆ.
ಪವಿತ್ರ ಬೈತುಲ್ ಮುಖದ್ದಸನ್ನು ಯಹೂದಿಗಳು ದ್ವಂಸ ಮಾಡಲು ಬಂದಾಗ *"ಅಲ್ಲಹುವೇ, ಈ ನೀಚ ಅಹಂಕಾರಿ ಜನತೆಯನ್ನು ನಾನು ನೀರಿಗೆ ಮುಳುಗಿಸಿ ಕೊಲ್ಲುತ್ತೇನೆ. ಆ ಸಾಹಸ ಕೆಲಸ ಮಡಲು ಬೇಕಾದ ಶಕ್ತಿ, ಎದೆಗಾರಿಕೆ, ನಿರ್ಭಯತೆ ಮತ್ತು ಮನೋಧೈರ್ಯವನ್ನು ನೀನು ನನಗೆ ಕೊಡು"* ಎಂದು ಈ ಸಾಧು ಬಾವಲಿ ಹೇಳಿದ್ದಾಗಿ ಇತಿಹಾಸ ಹೇಳುತ್ತದೆ.
▪ಒಬ್ಬನು ಬಾವಲಿಯ ತಲೆಯನ್ನು ತುಂಡುಮಾಡಿ ಅದನ್ನು ತನ್ನ ತಲೆದಿಂಬಿನ ಒಳಗೆ ತೂರಿಸಿ ಇಟ್ಟು ಅದರ ಮೇಲೆ ತಲೆಯಿಟ್ಟು ಮಲಗಿದರೆ ಬೆಳಗಿನ ತನಕ ಆತನಿಗೆ ನಿದ್ರೆ ಬಾರದು.
▪ಬಾವಲಿಯನ್ನು ಚೂರಿಹಾಕಿ ಅದರ ಹೃದಯವನ್ನು ತೆಗೆದು ಅದನ್ನು ಮನೆಯೊಳಗೆ ಸುಟ್ಟು ಅದರಿಂದ ಹೊಗೆ ಹಾಕಿದರೆ ಆ ಮನೆಯಲ್ಲಿ ಯಾವತ್ತೂ ಚೇಳು, ಹಾವು ಅಥವಾ ಇನ್ನಿತರ ವಿಷಜಂತುಗಳ ತೊಂದರೆ ಇರಲಾರದು.
▪ಬಾವಲಿಯ ತಲೆಯನ್ನು ನೈದಿಲೆ ಎಣ್ಣೆಯೊಂದಿಗೆ (Lilyflower oil) ತಾಮ್ರದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ತಲೆ ಚೆನ್ನಾಗಿ ನೈದಿಲೆ ಎಣ್ಣೆಯೊಂದಿಗೆ ಮಿಶ್ರಣವಾಗಿ ಜಲಪಿಷ್ಟ (PASTE) ಆಗುವ ತನಕ ಬೇಯಿಸಬೇಕು. ನಂತರ ಒಲೆಯಿಂದ ಕೆಳಗಿಟ್ಟು ಬಿಸಿ ತಣ್ಣಗಾಗುವಾಗ ಒಂದು ಜರಡಿಯಲ್ಲಿ ಅದನ್ನು ಸಾಣಿಸಿ ಬೇರೊಂದು ಬಾಟಲಿಗೆ ಸುರಿಯಬೇಕು.
ಸಂದಿವಾತ, ಉಬ್ಬಸ, ಕಾಲಿನಲ್ಲಿ ನೀರಿಳಿದು ಬರುವ ಬಾತುರೋಗ, ಶರೀರ ತಾನರಿಯದೆಯೇ ನಡುಗುವ ನಡುಕರೋಗ ಮುಂತಾದ ಖಾಯಿಲೆ ಇರುವವರು ಕೆಲವು ದಿನಗಳ ಕಾಲ ಈ ತೈಲವನ್ನು ಅವರ ಶರೀರಕ್ಕೆ ಲೇಪಿಸಿ ಮಸಾಜು ಮಾಡಿದರೆ ರೋಗ ಸಂಪೂರ್ಣವಾಗಿ ಗುಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನೂರಕ್ಕೆ ನೂರು ಫಲಪ್ರದವಾಗಿರುತ್ತದೆ
▪ಒಬ್ಬನು ಬಾವಲಿಯನ್ನು ಕನಸಿನಲ್ಲಿ ಕಂಡರೆ ಮುಂದಕ್ಕೆ ಅವನು ಭಯ, ಹೆದರಿಕೆ ಇಲ್ಲದ ದೈರ್ಯವಂತ ವ್ಯಕ್ತಿ ಆಗುತ್ತಾನೆ ಎಂಬುದರ ಸಂಕೇತವಾಗಿದೆ. ಬಾವಲಿ ಬೇರೆ ಪ್ರಾಣಿಗಳಿಗಿಂತ ವಿಭಿನ್ನವಾಗಿ ಯಾವುದೇ ಹೆದರಿಕೆಯಿಲ್ಲದೆ ರಾತ್ರಿ ಸಂಚಾರ ಮಾಡುವ ಕಾರಣದಿಂದಾಗಿದೆ ಈ ವ್ಯಾಖ್ಯಾನ.
▪ಒಬ್ಬನ ಮನೆಗೆ ಬಾವಲಿ ನುಗ್ಗಿದ ಕನಸು
ಬಿದ್ದರೆ ಆ ಮನೆ ನಾಶವಾಗುತ್ತದೆ ಅಥವಾ ಅವನತಿಯತ್ತ ಹೋಗುತ್ತದೆ ಎಂಬುದರ ನಿಶಾನೆಯಾಗಿದೆ.
▪ಗರ್ಭಿಣಿಯೊಬ್ಬಳಿಗೆ ಬಾವಲಿಯ ಕನಸು ಬಿದ್ದರೆ ಅವಳ ಹೆರಿಗೆ ಯಾವುದೇ ಅಡಚಣೆ ಮತ್ತು ತೊಂದರೆಯಿಲ್ಲದೆ ಬಹಳ ಸುಲಭವಾಗಿ ನಡೆಯುತ್ತದೆ ಎಂಬುದರ ಲಕ್ಷಣವಾಗಿದೆ.
▪ ಇಸ್ಲಾಮಿನಲ್ಲಿ
ಬಾವಲಿಯನ್ನು ಕೊಲ್ಲುವುದು ಮತ್ತು ಅದರ ಮಾಂಸವನ್ನು ತಿನ್ನುವುದು ನಿಷಿಧ್ದವಾಗಿರುತ್ತದೆ.
ಸಂಗ್ರಹ : ಇಮಾಮ್ ಕಮಾಲುದ್ದೀನ್ ದುಮೈರಿಯವರ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಷೀಹಿಯವರ *ಅಲ್ ಮುಸ್‌ತತ್‌ರಫ್,* ಮತ್ತು ತತ್ವಜ್ಞಾನಿ ಜಾಹಿಳ್ ರವರ *ಕಿತಾಬುಲ್ ಹಯವಾನ್* ಎಂಬ ಗ್ರಂಥ.
Comments