Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *3*



*▪ವಿಷ ತಿನ್ನುವ ಆಮೆ▪*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

     ▪ಆಮೆ ಸುಮಾರು ಮುನ್ನೂರರಿಂದ ನಾಲ್ಕು ನೂರು ವರ್ಷಗಳ ತನಕ ಬದುಕುವ ಒಂದು ವಿಶೇಷ ಜೀವಿಯಾಗಿದೆ. ಮಾತ್ರವಲ್ಲ ಕೆಲವು ಜಾತಿಯ ಆಮೆಗಳು ಒಂದು ಸಾವಿರ ವರ್ಷಗಳ ತನಕವೂ ಬದುಕುತ್ತದೆ. *"ಅವನಿಗೆ ಆಮೆಯ ಆಯುಷ್ಯವಿದೆ" ಎಂದು ನಮ್ಮ ಹಿರಿಯಂದಿರು ಹೇಳುತ್ತಿದ್ದದ್ದು ನಿಜಕ್ಕೂ ಸತ್ಯ*
  ▪ಆಮೆ ಮೊಟ್ಟೆಯಿಡುವ ಒಂದು ಜೀವಿ. ಆದರೆ ತಾನಿಟ್ಟ ಮೊಟ್ಟೆಗೆ ಅದರ ಮೇಲೆ ಕುಳಿತು ಕಾವು ಕೊಡುವ ಭಾಗ್ಯ ಈ ಆಮೆಗಿಲ್ಲ.. ಯಾಕೆಂದರೆ ಆಮೆಯ ಅಡಿಭಾಗದ ಚರ್ಮಕ್ಕೆ ಗರಗಸದ ಹಲ್ಲಿನಂತೆ  ಹಲ್ಲಿದ್ದು ಅದು ಬಹಳ ಗಡಸುತನದಿಂದ ಕೂಡಿದೆ. ಆಮೆ ಮೊಟ್ಟೆಯ ಮೇಲೆ ಕುಳಿತರೆ ಮೊಟ್ಟೆ ಒಡೆಯುವ ಸಾದ್ಯತೆ ಇರುವುದರಿಂದ ಅಲ್ಲಾಹನು ಇದಕ್ಕೆ ಬೇರೆಯೇ ಒಂದು ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಬಹಳ ಬಲಿಷ್ಠವಾದ ಲೇಸರ್ ಶಕ್ತಿ ಇರುವ ಎರಡು ಕಣ್ಣುಗಳು ಇದಕ್ಕಿದೆ. ತನ್ನ ಈ ಎರಡು ಕಣ್ಣಿಗಳಿಂದ ಮೊಟ್ಟೆಯನ್ನು ಒಂದೇ ರೇಖೆಯಲ್ಲಿ ತುಂಬಾ ಸಮಯ ನೋಡುತ್ತದೆ. ತನ್ನ ಕಣ್ಣಿನಿಂದ ಹರಿಯುವ ಶಕ್ತಿಯುತ ಕಿರಣ ಮೊಟ್ಟೆಯ ಒಂದೇ ಕೇಂದ್ರದಲ್ಲಿ ಬೀಳುವಾಗ ಮೊಟ್ಟೆ ತಾನಾಗಿಯೇ ಬಿಸಿಯಾಗಿ ಒಡೆಯುತ್ತದೆ...!!
  ▪ಆಮೆಯು ಎಂತಹಾ ವಿಷಕಾರಿ ಹಾವನ್ನೂ ಕೊಂದು ತಿನ್ನುತ್ತದೆ. ಬೇರೆ ಪಕ್ಷಿ, ಪ್ರಾಣಿ, ಕೀಟ ಎಲ್ಲವನ್ನು ತಿನ್ನುವುದಾದರೂ ಹಾವುಗಳು ಇದರ ಅಚ್ಚುಮೆಚ್ಚಿನ ಇಷ್ಟ ಭೋಜನವಾಗಿದೆ. ವಿಷ ಆಹಾರವನ್ನು ತಿಂದ ಕೂಡಲೇ ತಿಂದ ವಿಷದಿಂದ ಶರೀರಕ್ಕೆ ತೊಂದರೆ ಆಗದಿರಲು   ತೋಡು, ಕೆರೆ, ನದಿಯ ದಡಗಳಲ್ಲಿ ಕಾಣಸಿಗುವ "ಝ‌‌ಅತರ್" ಗಿಡದ (Thyme) ಎಲೆಯನ್ನು ತಿನ್ನುತ್ತದೆ. ಎಂತಹಾ ಹಾನಿಕರ ವಿಷವನ್ನೂ ಹುಸಿ ಮಾಡುವ ಶಕ್ತಿ ಈ ಗಿಡಕ್ಕಿದೆ.  ನೀರಿನಲ್ಲೂ ದಡದಲ್ಲೂ ಬದುಕುವ ಈ ಜೀವಿ ತೋಡು, ಕೆರೆ, ಹಳ್ಳ ಮುಂತಾದೆಡೆಗಳಲ್ಲಿ ನೀರಿಗೆ ಹೊಂದಿಕೊಂಡು ದಡದಲ್ಲಿ ಹೊಂಡಮಾಡಿ ಅವಿತು ಕುಳಿತಿರುತ್ತದೆ. ನೀರು ಕುಡಿಯಲು ಬರುವ ಪಕ್ಷಿಗಳನ್ನು ನಿರಾಯಾಸ ಹಿಡಿದು ತಿನ್ನುತ್ತದೆ. ದೊಡ್ಡ ಪಕ್ಷಿಯಾದರೆ ಹಿಡಿದ ಹಿಡಿತದಲ್ಲಿ ಸಾಯದಿದ್ದರೆ ನೀರಿನಲ್ಲಿ ಸಾಯುವ ತನಕ ಮುಳುಗಿಸಿಡುತ್ತದೆ.
  ▪ಗಂಡಾದರೂ ಹೆಣ್ಣಾದರೂ ಎರಡು ಜನನೇಂದ್ರಿಯವಿರುವ ಒಂದು ಅಪೂರ್ವ ಜೀವಿಯಾಗಿದೆ ಆಮೆ.‌ ಇದರ ಶರೀರವನ್ನು ಎಲ್ಲಾ ಅನಾಹುತಗಳಿಂದ ಬಚಾವು ಮಾಡುವ ಬಹಳ ಬಲಿಷ್ಠವಾದ ಒಂದು ಕವಚ ಕೂಡ ಇದರ ದೇಹವನ್ನು ಆವರಿಸಿದೆ. ಒಬ್ಬ ವ್ಯಕ್ತಿ ದೊಡ್ಡ ಆಮೆಯ ಮೇಲೆ ನಿಂತರೆ ಆಮೆಗೆ ಏನೂ ತೊಂದರೆಯಾಗದು.
  ▪ಪಿತ್ತಕೋಶ ಸಂಬಂಧಿಸಿದ ಖಾಯಿಲೆ ಇರುವವನು ಇದರ ಪಿತ್ತಕೋಶವನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ವಾಸಿಯಾಗುವುದಲ್ಲದೆ ಜೀವಪರ್ಯಂತ ಆ ರೋಗ ಮತ್ತೆಂದಿಗೂ ಮರುಕಳಿಸದು.
   ▪ಗಂಟುನೋವು, ಸಂಧಿನೋವು, ಸ್ನಾಯುಗಳ ಎಳೆತ,ಸ್ನಾಯು ಹಿಡಿದು ಕೊಳ್ಳುವುದು ಇತ್ಯಾದಿ ಖಾಯಿಲೆ ಇರುವವರು ಇದರ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ರೋಗ ಸಂಪೂರ್ಣ ವಾಸಿಯಾಗುವುದು.
  ▪ಯಾವುದೇ ಚಿಕಿತ್ಸೆ ಮಾಡಿ ಫಲಕಾಣದ ಕಾಲಿನ ಹಿಮ್ಮಡಿ ಸೀಳುವ ರೋಗವಿರುವವರಿಗೆ  ಕಡಲಾಮೆಯ ಕವಚವನ್ನು ಸುಟ್ಟು ಅದರ ಬೂದಿಯನ್ನು ಮೊಟ್ಟೆಯ ಒಳಗಿನ ಬಿಳಿ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಅದನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಹಚ್ಚಿದರೆ ಈ ಖಾಯಿಲೆ ಬೆಟ್ಟ ಹತ್ತುತ್ತದೆ. ಮಾತ್ರವಲ್ಲ ಈ ಖಾಯಿಲೆಗೆ ಇದೊಂದು ಸಿದ್ದ ಔಷಧಿ ಕೂಡವಾಗಿದೆ.
  ▪ಆಮೆಯ ಕವಚವನ್ನು ತೆಗೆದು ನಾವು ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ಪಾತ್ರೆಯ ಮುಚ್ಚಳಕ್ಕೆ ಬದಲು ಇದರಿಂದ ಮುಚ್ಚಿಟ್ಟರೆ ಹಾಲು ಸಮೇತ ಯಾವ ಆಹಾರ ಪದಾರ್ಥಗಳೂ ಕುದಿದು ಪಾತ್ರೆಯಿಂದ ಹೊರಗೆ ಬಾರದು.
  ▪ ತಲೆಯಲ್ಲಿ ಹೇನಿರುವವರಿಗೆ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಹೇನು ಸಂಪೂರ್ಣವಾಗಿ ಮಾಯವಾಗುತ್ತದೆ. ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ) ರಲ್ಲಿ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆ ಇತ್ತು. ಮಾತ್ರವಲ್ಲ ತನ್ನ ಮುದ್ದಿನ ಕಂದ ಫಾತಿಮಾ ಬೀವಿ (ರ)ರಿಗೆ ಆಮೆಯ ಕವಚದಿಂದ ಮಾಡಿದ ಎರಡು ಕೈಬಳೆ ಮಾರುಕಟ್ಟೆಯಿಂದ ತರಬೇಕೆಂದು ಸಹಾಬಿಯಾದ "ಸವ್‌ಬಾನ್" (ರ) ರಲ್ಲಿ ಹೇಳಿದ್ದಾಗಿ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ್ದಾರೆ..
 ▪ಆಮೆಯ ಮಾಂಸವನ್ನು ತಿನ್ನುವ ಕನಸು ಕಂಡರೆ ದೊಡ್ಡ ಪಂಡಿತನಾಗುವ ಮತ್ತು ಶ್ರೀಮಂತನಾಗುವ ಲಕ್ಷಣವಾಗಿದೆ.
  ▪ಕಡಲಾಮೆಯನ್ನು ಕನಸು ಕಂಡರೆ ಅವನ ಮುಂದಿನ ವರ್ಷ ಐಶ್ವರ್ಯಭರಿತ ಆಗಿರುತ್ತದೆ. ಹಾಗೆಯೇ ಶತ್ರುಗಳಿದ್ದರೆ ಅವರ ಉಪದ್ರವದಿಂದ ಬಚಾವು ಆಗುವುದರ ನಿಶಾನೆಯಾಗಿದೆ.
  ▪ಆಮೆಯ ಮಾಂಸವನ್ನು ತಿನ್ನುವುದು ಮತ್ತು ಕಾರಣವಿಲ್ಲದೆ ಆಮೆಯನ್ನು ಕೊಲ್ಲುವುದೂ ನಿಷಿದ್ದ.

  ಸಂಗ್ರಹ: ಇಮಾಮ್ ಖಝ್'ವೀನಿಯವರ *ಅಜಾಯಿಬುಲ್ ಮಖ್‌ಲೂಖಾತ್* ಮತ್ತು ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...