*ಒಂಟಿ ಕಾಲಲ್ಲಿ ನಡೆಯುವ ಕೊಕ್ಕರೆ*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ಯಾವಾಗಲೂ ಒಂದು ಕೂಟವಾಗಿ ಒಗ್ಗಟ್ಟಾಗಿ ಬಹಳ ಸಾಮರಸ್ಯದಿಂದ ಜೀವಿಸುವ ಒಂದು ಪಕ್ಷಿಯಾಗಿದೆ ಕೊಕ್ಕರೆ. ಮಾತ್ರವಲ್ಲ ಈ ಒಕ್ಕೂಟಕ್ಕೆ ಒಬ್ಬ ನೇತಾರ ಕೂಡ ಇರುತ್ತಾನೆ. ಈ ನೇತೃತ್ವ ದಿನಾಲೂ ಬದಲಾಗುತ್ತಾ ಇರುತ್ತದೆ. ಬಹಳ ಅಂಜುಬುರುಕನಾದ ಈ ಕೊಕ್ಕರೆ ಯಾವಾಗಲೂ ಹೊರಗಿನಿಂದ ಬರುವ ಅನಾಹುತ, ಆಪತ್ತಿನ ಬಗ್ಗೆ ಸದಾ ಜಾಗರೂಕನಾಗಿರುತ್ತದೆ.
▪ನಾಯಕನಾಗಿರುವ ಕೊಕ್ಕರೆಯು ಅಧಿಕಾರದಲ್ಲಿರುವ ಆ ದಿನ ನಿದ್ದೆ ಮಾಡುವಂತಿಲ್ಲ. ಗುಂಪಿನಲ್ಲಿರುವ ಇತರ ಸಹಪಾಟಿಗಳು ನಿದ್ದೆಯಲ್ಲಿರುವಾಗ ಅವರಿಗೆ ರಕ್ಷಣೆ ಮತ್ತು ಕಾವಲಾಗಿ ನಿಲ್ಲಬೇಕು. ಮಾತ್ರವಲ್ಲ ಕಾವಲುಗಾರ ಡ್ಯೂಟಿಯಲ್ಲಿರುವಾಗ ನಿದ್ದೆ ಬಾರದಿರಲು ಮತ್ತು ತಾನು ಹೊತ್ತ ಜವಾಬ್ದಾರಿಯನ್ನು ಸರಿಯಾಗಿ ಪಾಲಿಸುತ್ತುದ್ದೇನೆ ಎಂಬುದನ್ನು ಇತರ ಕೊಕ್ಕರೆಗಳಿಗೆ ತಿಳಿಸಲಿಕ್ಕೋಸ್ಕರ ಬೆಳಗಿನ ತನಕ ಇತರರರಿಗೆ ತೊಂದರೆ ಆಗದ ರೂಪದಲ್ಲಿ ಪುಟ್ಟ ಶಬ್ದದಲ್ಲಿ ಕೂಗುತ್ತಿರಬೇಕು. ತನ್ನ ಡ್ಯೂಟಿ ಸಮಯ ಮುಗಿದರೆ ಎರಡನೇ ಶಿಫ್ಟಿನ ಡ್ಯೂಟಿಗೆ ಬರುವ ಕೊಕ್ಕರೆಯನ್ನು ನಿದ್ದೆಯಿಂದ ಎಬ್ಬಿಸಿ ಕೆಲಸಕ್ಕೆ ಹಾಜರು ಪಡಿಸಬೇಕು. ಇನ್ನು ಏನಾದರು ಅಪಾಯ ಬರುವುದಾದರೆ ಕಾವಲುಗಾರ ಕೊಕ್ಕರೆ ಬಹಳ ದೊಡ್ಡ ಶಬ್ದದಲ್ಲಿ ಕೂಗಿ ಅಪಾಯದ ಸೂಚನೆ ಕೊಡುತ್ತದೆ. ಆಗ ಎಲ್ಲವೂ ಎಚ್ಚರವಾಗಿ ಗುಂಪಾಗಿ ಅಲ್ಲಿಂದ ಹಾರಾಡುತ್ತದೆ. ಆಗಲೂ ಇದೇ ಕಾವಲುಗಾರ ನಾಯಕನೇ ಗುಂಪಿಗೂ ನಾಯಕನಾಗಿ ಅದರ ಮೊದಲ ಸಾಲಿನಲ್ಲಿ ಇರುತ್ತದೆ. ಕೆಲವೊಮ್ಮೆ ಒಂದೇ ರಾತ್ರಿ ಎರಡು ಅಥವಾ ಮೂರು ನಾಯಕರು ಬದಲಾಗಿ ಬರುವುದೂ ಉಂಟು.
▪ತಾಯಿ ಕೊಕ್ಕರೆಗೆ ಬಾವಲಿಯಂತೆ ತನ್ನ ಮರಿಗಳ ಮೇಲೆ ಬಹಳ ಮಮತೆ ಇರುತ್ತದೆ. ಮಾತ್ರವಲ್ಲ ಮರಿಗಳು ತನ್ನ ತಾಯಿ ವೃದ್ಧಾಪ್ಯಕ್ಕೆ ಮುಟ್ಟಿದರೆ ಅದು ಸಾಯುವ ತನಕ ಅದಕ್ಕೆ ಬೇಕಾದ ಶುಶ್ರೂಷೆ ಮಾಡುತ್ತದೆ.
▪ಬೇಸಿಗೆಕಾಲ ಚಳಿಗಾಲಗಳಿಗೆ ಬೇಕಾದಂತೆ ಹೊಂದಿಸಿಕೊಂಡು ಇದು ತನ್ನ ವಾಸಸ್ಥಳವನ್ನು ಬೇಕಾದಂತೆ ಬದಲಾಯಿಸುತ್ತಿರುತ್ತದೆ.ಕೆಲವು ಜಾತಿಯ ಕೊಕ್ಕರೆಗಳು ಹವಾಮಾನ ಬದಲಾವಣೆಗೆ ಬೇಕಾಗಿ ತುಂಬಾ ದೂರದ ಊರಿಗೆ ಕೂಡ ಪಾಲಾಯನ ಮಾಡುತ್ತದೆ.
▪ಬಹಳ ಒಗ್ಗಟ್ಟಿನಲ್ಲಿರುವ ಈ ಪಕ್ಷಿಗಳು ಯಾವತ್ತೂ ಒಂಟಿಯಾಗಿ ವಾಸ ಮಾಡದು. ಹಾರಾಟದಲ್ಲೂ ಗುಂಪಾಗಿಯೇ ಹಾರುತ್ತವೆ. ಮಾತ್ರವಲ್ಲ ಹಾರಾಡುವಾಗಲೂ ಒಳ್ಳೆಯ ಒಂದು ನಾಯಕತ್ವ ಮತ್ತು ಸುಸಜ್ಜಿತ ಶಿಸ್ತುಬದ್ದ ನಿಯಮ ಇರುತ್ತದೆ. ನಾಯಕನ ಹಿಂದಿನಿಂದ ಸಾಲು ಸಾಲಾಗಿಯೇ ಹಾರಾಡಬೇಕೇ ವಿನಹ ಯಾವ ಕಾರಣಕ್ಕೂ ಸಾಲು ತಪ್ಪಿಸಿ ಹೋಗುವಂತಿಲ್ಲ.
▪ಇದರ ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ, ಇಮಾಮ್ ಖಝ್‌ವೀನಿಯವರು ಹೇಳುತ್ತಾರೆ. *"ಕೊಕ್ಕರೆ ಯಾವಾಗಲೂ ಒಂದೇ ಕಾಲಿನಲ್ಲಿ ನಡೆಯುತ್ತದೆ. ಎರಡನೇ ಕಾಲನ್ನು ಸ್ವಲ್ಪ ಎತ್ತಿ ನಡೆಯುತ್ತದೆ. ಇನ್ನು ಎರಡನೇ ಕಾಲನ್ನು ಭೂಮಿಯ ಮೇಲೆ ಇಡುವುದಾದರೂ ಬಹಳ ಲಘುವಾಗಿ ಭೂಮಿಗೆ ಭಾರ ಕೊಡದ ರೀತಿಯಲ್ಲಿ ಇಡುತ್ತದೆ. ಯಾಕೆಂದರೆ ತನ್ನ ಬಾರದ ಕಾರಣದಿಂದ ಭೂಮಿ ಕುಸಿದು ಬೀಳಬಹುದಾ ಎಂಬ ಭಯವಂತೆ ಈ ಸಾಧು ಜೀವಿಗೆ".*
▪ಇದರ ಬೇರೊಂದು ವಿಷೇಶತೆ ಎಂದರೆ ನಿದ್ದೆಯ ಸಮಯದಲ್ಲಿ ತನ್ನ ತಲೆಯನ್ನು ತನ್ನ ರೆಕ್ಕೆಯ ಒಳಗೆ ತೂರಿಸಿ ರೆಕ್ಕೆಯಿಂದ ತಲೆಗೆ ಹೊದಿಕೆ ಮಾಡಿದ ರೂಪದಲ್ಲಿ ಮಲಗುತ್ತದೆ. ಯಾಕೆಂದರೆ ಏನಾದರು ಅನಾಹುತ ಅಥವಾ ಆಪತ್ತು ಬರುವುದಾದರೆ ಶರೀರದ ಮುಖ್ಯ ಭಾಗವಾದ ಕಣ್ಣು, ಅಂತೆಯೇ ಶರೀರವನ್ನು ನಿಯಂತ್ರಣ ಮಾಡವ ಶರೀರದ ನಿಯಂತ್ರಣವಿರುವ ಮೆದುಳಿಗೆ ಯಾವ ತೊಂದರೆಯೂ ಆಗದಿರಲು ಈ ಉಪಾಯ.
▪ಕಾಲಿನ ಹಿಮ್ಮಡಿ ಸೀಳುವ ರೋಗ ಇರುವವರು ಕೊಕ್ಕರೆಯ ಮಾಂಸವನ್ನು ಒಂದೆರಡು ಸಲ ಬೇಯಿಸಿ ತಿಂದರೆ ಆ ರೋಗ ಗುಣವಾಗುವುದಲ್ಲದೆ ಜೀವನಪರ್ಯಂತ ಮತ್ತೆಂದಿಗೂ ಆ ರೋಗ ಮರುಕಳಿಸದು.
▪ ಕೊಕ್ಕರೆಯನ್ನು ಕನಸಿನಲ್ಲಿ ಕಂಡರೆ ಅವನು ದೀರ್ಘವಾದ ಒಂದು ಯಾತ್ರೆ ಹೋಗುತ್ತಾನೆ ಎಂಬುದರ ನಿಶಾನೆಯಾಗಿದೆ.
▪ಕೊಕ್ಕರೆಯ ಮಾಂಸವನ್ನು ತಿನ್ನುವುದು ಇಸ್ಲಾಮಿನಲ್ಲಿ ಹಲಾಲ್ ಆಗಿದೆ.
▪ಸಂಗ್ರಹ: ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಇಮಾಮ್ ಖಝ್‌ವೀನಿಯವರ *ಅಜಾಯಿಬುಲ್ ಮಖ್‌ಲೂಖಾತ್* ಎಂಬ ಗ್ರಂಥ.
Comments