Skip to main content

ಮರಣದ ಬಗ್ಗೆ ಕೆಲವರ ಹಲವಾರು ಸಂಶಯಗಳು ಈಮಾನನ್ನೇ ಕಸಿದುಕೊಳ್ಳುತ್ತದೆ

ಮರಣದ ಬಗ್ಗೆ ಕೆಲವರ ಹಲವಾರು ಸಂಶಯಗಳು ಈಮಾನನ್ನೇ ಕಸಿದುಕೊಳ್ಳುತ್ತದೆ

(ದಯವಿಟ್ಟು ಒಂದು ನಿಮಿಷ ಇದನ್ನು ಓದಿ)

ಕೆಲವರ ಸಂಶಯಗಳು ಹೀಗಿರುತ್ತದೆ⬇

ಮರಣ ಹೊಂದಿದಾಗ ಆ ಮರಣ ಹೊಂದಿದ ವ್ಯಕ್ತಿಯ ರೂಹ್ ನಮ್ಮನ್ನು ಕಾಣುತ್ತದೆ, ಮಯ್ಯತ್ತನ್ನು ಸ್ತಾನ ಮಾಡಿಸುವಾಗ, ಕಫನ್ ಮಾಡುವಾಗ, ಇವೆಲ್ಲವನ್ನೂ ರೂಹ್ ನೋಡುತ್ತದೆ. ಆದರೆ ನಮಗೆ ಅದು ಕಾಣಲ್ಲ. ಇದು ಹೇಗೆ ಸಾಧ್ಯ....?

ಮಯ್ಯತ್ತನ್ನು ಕೊಂಡು ಹೋಗುವಾಗ ಮರಣ ಹೊಂದಿದ ವ್ಯಕ್ತಿ ಸಜ್ಜನ ವ್ಯಕ್ತಿಯಾದರೆ ನನ್ನನ್ನು ಬೇಗ ಕೊಂಡು ಹೋಗಿ ಎನ್ನತ್ತದೆ. ಕೆಟ್ಟ ಮಯ್ಯತ್ ಆಗಿದ್ದರೆ ಓ ನನ್ನ ನಾಶವೇ ಎಂದು ಅಟ್ಟಹಾಸಗೆಯ್ಯುತ್ತದೆ ಇದು ಹೇಗೆ ಸಾಧ್ಯ...?

ಖಬರಿನಲ್ಲಿ ಇಟ್ಟ ನಂತರ  ಮುಂಕರ್ ನಕೀರ್ (ಅ) ಎಂಬ ಎರಡು ಭೀಕರ ಮಲಕುಗಳು ಬಂದು ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಹೇಗೆ ಸಾಧ್ಯ....?

ಒಳ್ಳೆಯ ಮಯ್ಯಿತ್ ಆಗಿದ್ದರೆ ಅವರು ಮಲಕುಗಳ ಪ್ರಶ್ನೆಗಳಿಗೆ ಉತ್ತರಿಸುವರು ನಂತರ ಅವರ ಖಬರ್ ವಿಶಾಲ ವಾಗುತ್ತದೆ ಸ್ವರ್ಗದ ಕವಾಟ ತೆರೆದುಕೊಡುತ್ತದೆ. ಕೆಟ್ಟ ಮಯ್ಯತ್ ಆಗಿದ್ದರೆ ಖಬರಿನಲ್ಲಿ ಭೀಕರ ಶಿಕ್ಷೆಗೆ ಒಳಗಾಗುತ್ತಾನೆ. ದೊಡ್ಡ ದೊಡ್ಡ ಹಾವು ಚೇಳುಗಳು ಬಂದು ಆತನನ್ನು ಕಚ್ಚಿ ಕಚ್ಚಿ ಚಿತ್ರ ಹಿಂಸೆ ಕೊಡುತ್ತದೆ. ಅವನ ಖಬರಿಗೆ ನರಕದ ಬಾಗಿಲು ತೆರೆಯಲ್ಪಡುತ್ತದೆ. ಅವನ ಖಬರ್ ಬೆಂಕಿಯಿಂದ ತುಂಬುತ್ತದೆ. ಇದೆಲ್ಲ ಹೇಗೆ ಸಾಧ್ಯ....? ಇದೆಲ್ಲಾ ಅಲ್ಲಾಹು ನಮಗೆ ತೋರಿಸಿಕೊಡಬಾರದೆ....? ಎಂಬ ಭಾವನೆ ಇರುವವರಿಗೆ ಮನಸ್ಸಲ್ಲಿ ಬಂದದ್ದು ಬರೆಯುತ್ತಿದ್ದೇನೆ.

*ಮರೆಯಾದ ಕಾರ್ಯದಲ್ಲಿ ವಿಶ್ವಾಸ ತಾಳುವುದು ಈಮಾನ್ ಕಾರ್ಯದಲ್ಲಿ ಒಳಪಟ್ಟದ್ದಾಗಿದೆ. ಮೇಲೆ ಹೇಳಿದ ಕಾರ್ಯಗಳಲ್ಲಿ ನಮಗೆ ವಿಶ್ವಾಸವಿಲ್ಲದಿದ್ದರೆ ನಮಗೆ ಈಮಾನ್ ಇಲ್ಲವೆಂದೇ ಅರ್ಥಮಾಡಿಕೊಳ್ಳಬೇಕು. ನಊದುಬಿಲ್ಲಾಹ್ ಇಂತಹಾ ಊಹೆಗಳಿಂದ ಅಲ್ಲಾಹು ನಮ್ಮನ್ನು ರಕ್ಷಿಸಲಿ "ಆಮೀನ್"*

ಒಬ್ಬರು ಮರಣ ಹೊಂದಿದಾಗ ಆ ವ್ಯಕ್ತಿಯ ರೂಹ್ ನಮ್ಮನ್ನು ಕಾಣುತ್ತದೆ ನಮಗೆ ಅವರನ್ನು ಕಾಣುವುದಿಲ್ಲ. ಇದು ದೊಡ್ಡ ವಿಷಯವೇ ಅಲ್ಲ. ಅದಕ್ಕೆ ಸಣ್ಣ ಒಂದು ಉದಾಹರಣೆ ನೋಡಿ; *"ಒಂದು ಸ್ಥಳದಲ್ಲಿ ನೀವು ಮಲಗಿದ್ದೀರಿ ಅಂದುಕೊಳ್ಳಿ ನಿಮ್ಮ ಮೇಲೆ ಬೆಂಕಿ ಬಿದ್ದದ್ದಾಗಿ ಒಂದು ಭೀಕರ ಕನಸು ಬೀಳುತ್ತೆ ಆವಾಗ ಕನಸಿನಲ್ಲಿ ನೀವು ಜೋರಾಗಿ ಬೊಬ್ಬೆ ಹಾಕುತ್ತಿರುತ್ತೀರಿ ಇಷ್ಟೆಲ್ಲಾ ಆದರೂ ನಿಮ್ಮ ಹತ್ತಿರದಲ್ಲೇ ಇರುವವರಿಗೆ ಅದು ಗೊತ್ತೇ ಆಗಲ್ಲ ಅವನಿಗೆ ಅದು ಕೇಳುವುದೂ ಇಲ್ಲ. ಅವರಿಗೆ ನೀವು ಮಲಗಿದ್ದು ಮಾತ್ರ ಕಾಣುತ್ತೆ. ಇದು ಹೇಗೆ ಸಾಧ್ಯ ಎಂದು ಚಿಂತಿಸಬೇಕಾಗಿದೆ."*

ಮಯ್ಯತ್ತನ್ನು ಕೊಂಡುಹೋಗುವಾಗ ಆ ಮಯ್ಯಿತ್ ಅಟ್ಟಹಾಸಗೆಯ್ಯುತ್ತದೆ. ಅದನ್ನು ನಾವೇನಾದರೂ ಕೇಳಿದರೆ ಕ್ಷಣ ಮಾತ್ರದಲ್ಲಿ ಮರಣ ಹೊಂದಿ ಬಿಡುತ್ತೇವೆ ಅಷ್ಟೊಂದು ಯಾತನಾಮಯ ರೋಧನೆಯಾಗಿರುತ್ತೆ ಕೆಟ್ಟ ಮಯ್ಯತ್ತಿದ್ದು. ಒಂದುವೇಳೆ ಇದನ್ನೆಲ್ಲಾ ಕಾಣಲು ಸಾಧ್ಯವಾಗಿದ್ದರೆ ಈ ರೀತಿ ಅಟ್ಟಹಾಸ ಗೆಯ್ಯುವ ಮಯ್ಯಿತನ್ನು ನಮ್ಮಿಂದ ದಫನ್ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ಚಿಂತಿಸಬೇಕಾಗಿದೆ.

ಒಳ್ಳೆಯ ವ್ಯಕ್ತಿಯ ಖಬರ್ ವಿಶಾವಾಗುತ್ತದೆ. ಅವರ ಖಬರಿಗೆ ಸ್ವರ್ಗದ ಕವಾಟ ತೆರೆದುಕೊಡುತ್ತದೆ. ಇದಕ್ಕೊಂದು ಸಣ್ಣ ಆಧುನಿಕ ಉದಾಹರಣೆ ನೋಡಿ; *ನಾವು ಸಣ್ಣ ಮೊಬೈಲಿನೊಳಗೆ ಕೈ ಬೆರಳಿನ ಉಗುರಿನಷ್ಟೇ ಸಣ್ಣ ಮೈಕ್ರೋ ಚಿಪ್ ಹಾಕಿದಾಗ ಅಥವಾ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದರೆ ಆ ಸಣ್ಣ ಡಿಸ್'ಪ್ಲೇಯಲ್ಲಿ ಇಡೀ ಭೂಲೋಕದ ಎಷ್ಟೋ ದೊಡ್ಡ ದೊಡ್ಡ ಭವ್ಯ ನಗರಗಳನ್ನು ಕಾಣುತ್ತೇವೆ. ನಮ್ಮ ಮೊಬೈಲ್ ಸ್ಕ್ರೀನ್ ಸಣ್ಣದಾಗಿದ್ದರೂ ದೊಡ್ಡ ದೊಡ್ಡ ನಗರ ದೈತ್ಯ ಪರ್ವತಗಳನ್ನು ನೋಡುವಾಗ ಆ ಸ್ಕ್ರೀನ್ ಸಣ್ಣದ್ದು ಎಂದು ಅನಿಸುವುದೇ ಇಲ್ಲ ನಾವು ಆ ವೀಡಿಯೋದಲ್ಲೇ ಮಗ್ನರಾಗಿರುತ್ತೇವೆ. ಮನುಷ್ಯನು ಕಂಡು ಹಿಡಿದ ಚಿಕ್ಕ ಮೈಕ್ರೋ ಚಿಪ್ಪಲ್ಲಿ ಎಷ್ಟೋ ಘಂಟೆಗಟ್ಟಲೆ ದೀರ್ಘವಿರುವ ವೀಡಿಯೊ ಅಥವಾ ಎಷ್ಟೋ ಕೋಟಿ ಕೋಟಿ ಫೈಲ್'ಗಳನ್ನು ಸೇವ್ ಮಾಡಿ ಇಡಬಹುದಾಗಿದೆ ಅಷ್ಟೊಂದು ವಿಶಾಲವಾಗಿರುತ್ತದೆ ಕೈ ಬೆರಳಿನ ಉಗುರಿನಷ್ಟು ಸಣ್ಣದಾಗಿರುವ ಆ ಚಿಕ್ಕ ಮೈಕ್ರೋ ಚಿಪ್. ಕೇವಲವಾದ ಮನುಷ್ಯನು  ಇಂತಹದ್ದೆಲ್ಲಾ ಕಂಡು ಹಿಡಿದಿದ್ದರೆ, ಇನ್ನು ಅಲ್ಲಾಹನು ತನ್ನ ಇಷ್ಟದಾಸರಿಗೆ ಆ ಸಣ್ಣ ಖಬರಿನೊಳಗೆ ಸ್ವರ್ಗದ ಸುಖ ನೀಡಲು ಮತ್ತು ಅವರ ಆ ಸಣ್ಣ ಖಬರನ್ನು  ವಿಶಾಲ ಮಾಡಿ ಕೊಡಲು ಶಕ್ತನಲ್ಲವೇ....? ಎಂದು ಚಿಂತಿಸಬೇಕಿದೆ. ಖಂಡಿತವಾಗಿಯೂ ಅಲ್ಲಾಹನಿಗೆ ಅದು ಸಾಧ್ಯ.*

ಇನ್ನು ಕೆಟ್ಟ ಮಯ್ಯಿತಿನ ಖಬರ್ ನೊಳಗೆ ನರಕದ ಬೆಂಕಿಯನ್ನು ಹಾಕಲಾಗುತ್ತದೆ. ಒಂದು ವೇಳೆ ಇದನ್ನು ಅಲ್ಲಾಹನು ನಮಗೆ ಕಾಣಿಸಿದರೆ ನಾವು ಸುಟ್ಟು ಭಸ್ಮವಾಗುವುದು ಖಚಿತ. ಇಡೀ ಖಬರ್ ಸ್ಥಾನವು ಬೆಂಕಿ ಉಂಡೆಯಾಗಿ ಬೇರೆ ಮಯ್ಯಿತ್ತನ್ನು ದಫನ್ ಮಾಡಲು ನಮ್ಮಿಂದ ಸಾಧ್ಯವಾಗುತ್ತಿತ್ತಾ ಎಂದು ಚಿಂತಿಸಬೇಕಿದೆ. ಇದೆಲ್ಲಾ ಮನಸ್ಸಿನಲ್ಲಿ ಬಂದ ಸಣ್ಣ ಒಂದೆರೆಡು ಉದಾಹರಣೆಗಳಾಗಿವೆ. ಪರಲೋಕದ ಬಗ್ಗೆ ಸಂಶಯಗಳು ನಮಗೆ ಬರಲೇ ಬಾರದು. ಇಂತಹಾ ಸಂಶಯಗಳು ನಾವು ಸೂಕ್ಷಿಸಿಟ್ಟಿರುವ ಈಮಾನನ್ನೇ ನಷ್ಟಪಡಿಸುತ್ತದೆ. ಇಂತಹಾ ಸಂಶಯಗಳಿಂದ ಅಲ್ಲಾಹು ನಮ್ಮೆಲ್ಲರನ್ನೂ ಕಾಪಾಡಲಿ. *"ಆಮೀನ್"*

ಮುತ್ತು ನಬಿ ﷺِ ತಂಙಳ ಮೇಲೆ ಪ್ರೀತಿಯಿಂದ ಸ್ವಲಾತ್ ಹೇಳಿರಿ

💚💚💚💚💚💚💚💚💚
*ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ವ ಅಲಾ ಆಲಿಹೀ ವಸ್ವಹ್'ಬಿಹೀ ವಸಲ್ಲಿಮ್*
💚💚💚💚💚💚💚💚💚

ಅಬ್ದುಲ್ ನಾಸಿರ್ ಕಾವೂರು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...