*ಅಂತ್ಯ ದಿನದ ಲಕ್ಷಣಗಳು :* 3
*~~~~~~~~~~~~~~~~~~~~~~~~~*
*ಕೌಟುಂಬಿಕ ಕಲಹ :* ಕೌಟುಂಬಿಕ ಸಂಬಂಧವನ್ನು ನಿಕಟಗೊಳಿಸುವ ಕಾರ್ಯ ತುಂಬಾ ಶ್ರೇಷ್ಠವಾದುದು! ಪ್ರವಾದಿ(ಸ.ಅ)ರವರು "ಕುಟುಂಬ ಸಂಬಂಧ ಮುರಿಯುವ ತನಕ ಅಂತ್ಯ ದಿನ ಸಂಭವಿಸಲಾರದು". ಎಂದು ಒತ್ತಿ ಹೇಳಿದ್ದಾರೆ. ದುರದೃಷ್ಟದಿಂದ ನಮ್ಮ ಇಂದಿನ ಕುಟುಂಬ ಸಂಬಂಧಗಳು ಒಡೆದು ಹೋಗುವ ಪರಿಸ್ಥಿತಿ ಸಂಜಾತವಾಗಿದೆ. ಕೌಟುಂಬಿಕ ವಲಯದ ಸದಸ್ಯರೇ ಕ್ರೂರಿಗಳಾಗಿದ್ದಾರೆ. ಶಾಂತಿ ಸಮಾಧಾನದಿಂದ ಬಾಳಲು ಅವರು ಬಯಸುವುದಿಲ್ಲ. ಬದುಕಿನ ನೈತಿಕ ಮೌಲ್ಯಗಳ ಪಾಲನೆಯೇ ಶಾಂತಿ ಹಾಗೂ ಸೌಹಾರ್ಧಯುತ ಜೀವನಕ್ಕೆ ನಾಂದಿ ಎಂಬುವುದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಕುಟುಂಬವಲಯದಲ್ಲಿ ಪರಸ್ಪರ ವಿರೋಧ ಒಳ ಘರ್ಷಣೆಗಳು, ವೈರತ್ವದ ಬೆಳೆ, ಹಗೆತನದ ಹೊಗೆ, ಇಡೀಯ ಕುಟುಂಬ ಸದಸ್ಯರನ್ನೇ ಅಲುಗಾಡಿಸುವಷ್ಟು ಗಾಢವಾಗಿ ಕಾಡತೊಡಗಿದೆ.
ಮಕ್ಕಳಿಗೆ ಹೆತ್ತವರಲ್ಲಿ ಗೌರವವಿಲ್ಲ, ಹೆಂಡತಿಗೆ ಗಂಡನ ಬಗ್ಗೆ ನಿರಾಸಕ್ತಿ, ಅಣ್ಣನಿಗೆ ತಮ್ಮನನ್ನು ಕಂಡರೆ ಆಗದು, ಶಿಷ್ಯಂದಿರಿಗೆ ಗುರುಗಳ ಬಗ್ಗೆ ನಿರ್ಲಕ್ಷ್ಯ ಭಾವ, ಬಹುಶಃ ಇದೇ ಕಾರಣದಿಂದಾಗಿ ಇಂದು ಮಾನವೀಯ ಸಂಂಧಗಳು ಕಮರಿ ಹೋಗುತ್ತಿದೆ ಎನ್ನಬಹುದು. ಒಂದು ಕುಟುಂಬ ರೂಪ ತಳೆಯಲು ಅದರ ಪ್ರತಿ ಸದಸ್ಯರೂ ಮುಖ್ಯವಾದುದರಿಂದ ಅವರೆಲ್ಲರೂ ಕುಟುಂಬ ಎಂಬ ಸುಭದ್ರ ಕೋಟೆಗೆ ಪೂರಕವಾಗಿ ವರ್ತಿಸುವವರಾಗಬೇಕು. ಅನಗತ್ಯವಾಗಿ ಯಾರೂ ಕೂಡಾ ಹಗೆತನವನ್ನು ಕಟ್ಟಿಕೊಳ್ಳಬಾರದು. ಪ್ರವಾದಿ (ಸ.ಅ)ರವರು ಕುಟುಂಬ ಬಂಧವನ್ನು ದೃಢ ಪಡಿಸುವ ಕಾರ್ಯವನ್ನು ಪ್ರೋತ್ಸಾಹಿಸುವುದರ ಜತೆಗೆ ಕೌಟುಂಬಿಕ ಘರ್ಷಣೆ ಅಥವಾ ಸಂಬಂಧ ಮುರಿಯುವ ಕ್ರಿಯೆಯನ್ನು ತುಂಬಾ ಕಠೋರ ಭಾಷೆಯಲ್ಲಿ ವಿರೋಧಿಸಿದ್ದಾರೆ.
ಕುಟುಂಬ ಸಂಬಂಧ ಮುರಿಯುವವನು ಸ್ವರ್ಗ ಪ್ರವೇಶಿಸಲಾರ ಎಂದಿರುವ ಪ್ರವಾದಿ(ಸ.ಅ) ಅವರು " ಯಾರು ದೀರ್ಘಾಯುಷ್ಯ ಮತ್ತು ಆಹಾರದಲ್ಲಿ ವೈಶಾಲ್ಯತೆಯನ್ನು ಬಯಸುತ್ತಾರೋ ಅಂಥವರು ಕುಟುಂಬ ಸಂಬಂಧವನ್ನು ಜೋಡಿಸಲಿ". ಎಂದು ಹೇಳಿದ್ದಾರೆ. ಕುಟುಂಬ ಸಂಬಂಧ ಮುರಿಯುವ ಕಾರ್ಯ ಮಹಾ ಪಾಪವಾಗಿದ್ದು ಕುರ್'ಆನ್ ಕೂಡಾ ಈ ವಿಷಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದೆ ಪ್ರವಾದಿ(ಸ.ಅ)ರವರು "ಕುಟುಂಬ ಸಂಬಂಧ ಮುರಿಯುವವನ ಮೇಲೆ ಅಲ್ಲಾಹನ ಅನುಗ್ರಹ ವರ್ಷಿಸಲಾರದು" ಎಂದು ಹೇಳಿರುವರು.
*ದೇಹಿಚ್ಚೆಯ ಅನುಕರಣೆ :* ಇದು ಎಲ್ಲಾ ಪಾಪಗಳ ಮೂಲ. ಯಾವಾಗ ಮನುಷ್ಯ ತನ್ನ ದೇಹದ ಬಯಕೆಗೆ ಅನುಗುಣವಾಗಿ ನಡೆದುಕೊಳ್ಳುವನೋ ಆವಾಗ ಅವನ ಅವನತಿಯ ಘಳಿಗೆ ಶುರುವಾಗುತ್ತದೆ. ದೇಹದ ಇಚ್ಚಿಗೆ ಕಡಿವಾಣ ಹಾಕದೇ ಹೋದರೆ ನಾವು ಸನ್ಮಾರ್ಗದ ಪಥದಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ. ಇಂದು ನಮ್ಮ ಬದುಕಿನಲ್ಲಿ ಶಿಸ್ತು ಎಂಬ ಪದವೇ ಇಲ್ಲದಂತಾಗಿದೆ. ಬೇಕಾಬಿಟ್ಟಿಯ ಜೀವನ. ಏನೋ ತಿಂದು ಎಲ್ಲೋ ಮಲಗಿ ನಿದ್ರಿಸುವ ಪರಿಸ್ಥಿತಿ. ಯಾವುದಕ್ಕೂ ನಮಗೆ ಒಂದು ನಿಶ್ಚಿತ ಗೊತ್ತು ಗುರಿ ಇಲ್ಲ.
ಅಲ್ಲಾಹನಿಗೆ ಹೆದರಿ ಅವನ ಆಜ್ಞೆಗಳನ್ನು ಪಾಲಿಸುತ್ತಾ ಬದುಕುವವರ ಸ್ಥಿತಿ ಹೀಗಾಗಲು ಸಾಧ್ಯವಿಲ್ಲ. ಒಳಿತನ್ನು ನಾವು ಒಪ್ಪಿಕೊಳ್ಳುತ್ತೇವೆ ಹೊರತು ಅದನ್ನು ಜೀವನದಲ್ಲಿ ಅಳವಡಿಸಲು ಮುಂದೆ ಬರುವುದಿಲ್ಲ. ದೇಹ ಏನು ಇಚ್ಚಿಸುತ್ತದೆಯೋ ಅದನ್ನು ಸಾಧಿಸುವುದು ನಮ್ಮ ಗುರಿಯಾಗಿದೆ. ಅಲೆಮಾರಿ ಜೀವನ, ಲೌಕಿಕ ವೈಭವದ ಸೆಳೆತಗಲು ನಮ್ಮ ಆಧ್ಯಾತ್ಮಿಕ ಜೀವನದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ನಾವು ಮಾಡುವ ದುಷ್ಕಾರ್ಯಗಳಿಂದ ಸಮಾಜದ ಸಂಪ್ರದಾಯಿಕ ನಮ್ಮಲ್ಲಿದ್ದರೂ ನಾವದನ್ನು ಅಂಗೀಕರಿಸಿ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುತ್ತಿದ್ದೇವೆ. ಮುಖ್ಯವಾಗಿ ನಮಗೆ ಆತ್ಮ ವಿಶ್ವಾಸವಿಲ್ಲ. ಪರಲೋಕವನ್ನು ಸಂಪಾದಿಸುವ ಸನ್ಮನಸು ನಮಗಿಲ್ಲ. ದೇಹದ ಬಯಕೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ದೇಹವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವವನೇ ಜಾಣ ಎಂಬುವುದನ್ನು ಮರೆಯಬಾರದು.
*ಹೃಸ್ವಗೊಳ್ಳುವ ದಿನ ಕಡಿಮೆಯಾಗುವ ಬರ್ಕತ್*
ಪ್ರವಾದಿ(ಸ.ಅ)ರವರು ಹೇಳಿದರು. ಕಾಲವು ಹತ್ತಿರವಾಗಲಿದೆ. ಕರ್ಮಗಳು ಕುಂಠಿತಗೊಳ್ಳಲಿವೆ, ಜಿಪುಣತನ ಹೆಚ್ಚಲಿದೆ, ಕ್ಷೋಭೆಗಳು ಬಹಿರಂಗವಾಗಲಿದೆ, ಕೊಲೆ ಅಧಿಕವಾಗಲಿದೆ."
ಈ ಹದೀಸ್'ನಲ್ಲಿ ಪ್ರವಾದಿ(ಸ.ಅ) ಅವರು 'ಹರಜ್' ಎಂಬ ಶಬ್ದ ಬಳಸಿದ್ದಾರೆ. ಉಲಮಾಗಳು ಅದಕ್ಕೆ 'ಕೊಲೆ' ಎಂದು ವ್ಯಾಖ್ಯಾನಿಸಿದ್ದಾರೆ. ಕೊಲೆ ಕೃತ್ಯ ಅಧಿಕವಾಗುತ್ತಿರುವ ಸುದ್ಧಿಯನ್ನು ನಾವೆಲ್ಲ ದಿನ ನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಕಾಲ ಹತ್ತಿರವಾಗುವುದು ಎಂದರೆ ಹಿಂದೆಂದಿಗಿಂತಲೂ ಅದರ ಪ್ರಮಾಣ ಹೃಸ್ವಗೊಳ್ಳುವುದು! ಕಂಡಿದೆ. ಪ್ರತಿ ದಿನ ತಾಸು, ಕ್ಷಣಗಳ ಪ್ರಮಾಣಗಳಲ್ಲಿ ಇಳಿತ ಉಂಟಾಗುತ್ತಿದೆ. ಪೂರ್ವ ಕಾಲದ ಒಂದು ದಿನಕ್ಕೂ ಇಂದಿನ ಒಂದು ದಿನಕ್ಕೂ ತುಂಬಾ ವ್ಯತ್ಯಾಸವಿದೆ. ಇಂದಿನ ಒಂದು ದಿನ ಅಂದರೆ ಒಂದು ಗಂಟೆಗೆ ಸಮವಿರಬಹುದು. ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಕಡಿಮೆ ಬರಬಹುದು. ಮತ್ತೊಂದು ಪ್ರವಾದಿ ನುಡಿಯು ಹೀಗಿದೆ. " ಕಾಲವು ಹತ್ತಿರಗೊಳ್ಳುವ ತನಕ ಅಂತ್ಯ ದಿನ ಬರಲಾರದು. ಹಾಗೆ ಒಂದು ವರ್ಷ ಒಂದು ತಿಂಗಳಿನಂತೆ, ಒಂದು ತಿಂಗಳು ಒಂದು ವಾರದಂತೆ, ಒಂದು ವಾರವು ಒಂದು ದಿನದಂತೆ , ಒಂದು ದಿನ ಒಂದು ತಾಸಿನಂತೆ, ಒಂದು ತಾಸು ಒಂದು ಕ್ಷಣದಂತೆ ಆಗುವುದು". ಎಂದು ಹೇಳಲಾಗಿದೆ.
ಹೌದು ದಿನಗಳು ಬಹು ಬೇಗನೆ ಸರಿದು ಹೋಗುತ್ತಿದೆ.
ನಾವು ಜೀವಿಸುತ್ತಿರುವ ಈ ಕಾಲವೇ ಅದಕ್ಕೆ ಸಾಕ್ಷಿ. ಕೆಲವು ವಿದ್ವಾಂಸರು ಕಾಲವು ಹತ್ತಿರವಾಗಲಿದೆ ಎಂಬ ಹದೀಸ್'ಗೆ ಸಮಯದ ಬರ್ಕತ್ ನಶಿಸಿ ಹೋಗುವುದು ಎಂದು ವ್ಯಾಖ್ಯಾನಿಸಿದ್ದಾರೆ. ಇಮಾಂ ನವವಿ(ರ)ಅವರು ಈ ಬಗ್ಗೆ ವಿವರಿಸುತ್ತಾ "ಕಾಲವು ಹೃಸ್ವಗೊಳ್ಳುವುದೆಂದರೆ ಅದರಲ್ಲಿ ಬರ್ಕತ್ ಇಲ್ಲದಾಗುವುದು. ಒಂದು ದಿನದಲ್ಲಿ ಸಿಗಬಹುದಾದ ಪ್ರಯೋಜನದ ಪ್ರಮಾಣ ಕೇವಲ ಒಂದು ತಾಸಿಗೆ ಸೀಮಿತವಾಗುವುದು ಎಂದು ಪ್ರಸ್ತಾಪಿಸಿರುತ್ತಾರೆ.
*ಜಿಪುಣತನ ಹೆಚ್ಚುವುದು :* ಜನರಲ್ಲಿ ಹಣ, ಅಂತಸ್ತು, ವಿದ್ಯೆ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಅದನ್ನು ಅರ್ಹ ರೀತಿಯಲ್ಲಿ ವಿನಿಯೋಗಿಸುವ ಮೌಲ್ಯ ಅವರಿಂದ ಕುಸಿಯುತ್ತಿದೆ. ಸಂಪತ್ತು ಉಳ್ಳವನು ಅದನ್ನು ಇತರರಿಗೆ ದಾನ ಮಾಡುವ ಬದಲು ಮತ್ತಷ್ಟು ಕೂಡಿಡುವುದರಲ್ಲೇ ಆನಂದವನ್ನು ಕಾಣುತ್ತಾನೆ. ಇದು ನೈತಿಕ ಸಮಾಜದ ಸುಸ್ಥಿತಿಯ ಮುಂದುವರಿಕೆಗೆ ಮಾರಕವಾಗಿದೆ. ಇಂದು ಶ್ರೀಮಂತರ ವಲಯವನ್ನು ಜಿಪುಣತನ ಆವರಿಸಿಕೊಂಡಿದೆ. ತಮ್ಮಲ್ಲಿ ಕೋಟಿ ರೂಪಾಯಿ ಇದ್ದರೂ ಇನ್ನೊಬ್ಬರಿಗೆ ಒಂದು ರೂಪಾಯಿ ಕೊಡಲು ಕೂಡಾ ಅವರು ಮನಸ್ಸು ಮಾಡುವುದಿಲ್ಲ. ಬಡವರು ಶ್ರೀಮಂತರ ಬಾಗಿಲ ಕಡೆಗೆ ಹೋಗಿ ಅವರ ಮುಂದೆ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಶ್ರೀಮಂತರ ಮನೆ ಬಾಗಿಲು ಅಲೆದಾಡಿದರೂ ಹತ್ತು ರೂಪಾಯಿ ಸಿಗುವುದು ಕಷ್ಟ. ಹೊಟ್ಟೆ ಪಾಡಿಗಾಗಿ ಅಡ್ಡಾಡುವ ಬಡಪಾಯಿ ಅಮಾಯಕರು ಪಾಪ!
ವೈಭವದ ಬದುಕನ್ನು ಸವೆಯುವ ಶ್ರೀಮಂತರಿಗೆ ಬಡವರ ನಾಡಿ ಮಿಡಿತ ಅರಿವಿಗೆ ಬರುವುದಿಲ್ಲ. ಇಂದು ಎಲ್ಲಿ ನೋಡಿದರೂ ಇದೇ ಕತೆ. ಅಂತ್ಯ ದಿನದ ಲಕ್ಷಣಗಳನ್ನು ಒಂದು ಹದೀಸ್'ನಲ್ಲಿ ಹೀಗೆ ವಿವರಿಸುವುದು ಕಾಣಬಹುದು. ಜಿಪುಣತನ ಬಹಿರಂಗವಾಗುವುದು ವಿದ್ಯೆ ಕಲಿಸುವುದನ್ನು ನಿಲ್ಲಿಸುತ್ತಾನೆ. ಕೆಲಸಗಾರನು ತಾನು ಕಲಿತ ಕೆಲಸವನ್ನು ಇತರರಿಗೆ ಕಲಿಸುವುದರಿಂದ ಹಿಂಜರಿಯುತ್ತಾನೆ. ಧನಿಕನು ತನ್ನ ಆಸ್ತಿಯನ್ನು ಬಡವನು ನಶಿಸಿ ಹೋಗುವವರೆಗೂ ಖರ್ಚು ಮಾಡಲು ನಿರಾಕರಿಸುತ್ತಾನೆ."
ಪ್ರತಿಯೊಂದು ಕಾರ್ಯ ಕ್ಷೇತ್ರದ ಮೇಲೂ ಜಿಪುಣತನ ರಾರಾಜಿಸಲಿದೆ. ಸದ್ರಿ ಹದೀಸ್'ನಲ್ಲಿ ಸೂಚಿತವಾಗಿರುವ ವಿಚಾರ ಅರ್ಥ ವತ್ತಾದುದು, ಮತ್ತೊಂದು ಹದೀಸ್'ನಲ್ಲಿ "ಜಿಪುಣತನ ಮತ್ತು ನೀಚ ಪ್ರವೃತ್ತಿ ಬಹಿರಂಗವಾಗುವ ತನಕ ಅಂತ್ಯದಿನ ಸಂಭವಿಸದು" ಎಂದು ಹೇಳಲಾಗಿದೆ.
ಅಧಿಕಾರ ಎಂಬುದು ಇಂದಿನ ಪ್ರತಿಷ್ಠಿತ ಬದುಕಿನ ಒಂದು ಮಹತ್ತರ ಭಾಗ. ಅದರಂತೆ ಅವ್ಯವಹಾರವು ಅಧಿಕಾರಸ್ಥರ ಪಾಲಿಗೆ ಶೋಭೆಯ ಸಂಗತಿಯಾಗಿ ಬಿಟ್ಟಿದೆ. ಬಹುತೇಕ ಅಧಿಕಾರಿಗಳಿಗೆ ಇಂದು ನೈತಿಕವಾಗಿ ಸಿಗುವ ಸಂಬಳಕ್ಕಿಂತ ಅನೈತಿಕ ಹಾದಿಯಲ್ಲಿ ದೊರಕುವ 'ಗಿಂಬಳ'ವೇ ಮುಖ್ಯವೆನಿಸಿದೆ.
ನಮ್ಮಲ್ಲಿ ವಿವಿಧ ಹುದ್ದೆಯಲ್ಲಿರುವ ಅಧಿಕಾರಿಗಳಿದ್ದಾರೆ.ಪ್ರತಿಯೊಬ್ಬರಿಗೂ ಅವರದೇ ಆದ ಪ್ರಭಾವ ಮತ್ತು ಕಾರ್ಯ ಕ್ಷೇತ್ರವಿದೆ. ಅಲ್ಲಿ ನಡೆಯುವ , ನಡೆಯುತ್ತಿರುವ ಕಾರ್ಯಗಳೆಲ್ಲ ಇತರರಿಗೆ ವಿಷಯ ತಿಳಿಯಬೇಕೆಂದಿಲ್ಲ.
ಅಧಿಕಾರಿಗಳು ಜನ ಸಾಮಾನ್ಯರಿಂದ ಲಂಚ ಪಡೆದು ಕಾರ್ಯಸಾಧಿಸಿ ಕೊಡುವ ನ್ಯಾಯ ಬಾಹಿರ ನಡವಳಿಕೆ ಇಂದು ನಿನ್ನೆಯದಲ್ಲ. ಅಧಿಕಾರ ವಲಯವನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುವ ಈ ಕಾರ್ಯವು ಧರ್ಮ ಸಮ್ಮತವಲ್ಲ. "ನಿಮ್ಮ ನಡುವೆ ಸಂಪತ್ತು ಅವ್ಯವಹಾರವಾಗಿ ಬಳಸದಿರಿ". ಎಂದು ಕುರ್'ಆನ್ ಎಚ್ಚರಿಕೆ ನೀಡಿದೆ. ಇಸ್ಲಾಮಿಕ್ ಶರೀಅತ್ ವಿಧಿ ಹೊರಡಿಸುವವರು ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆಯುವುದು ಕೂಡಾ ಈ ಸಾಲಿಗೆ ಸೇರುತ್ತದೆ. ಉದಾಹರಣೆಗೆ ಇಬ್ಬರು ಶಕ್ತಿದಾರು ಓರ್ವ ಖಾಝಿಯ ಬಳಿ ಬರುತ್ತಾರೆ. ಅವರಲ್ಲಿ ಒಬ್ಬ ಹಣವಂತ, ಮತ್ತೊಬ್ಬ ಬಡವ. ಖಾಝಿಯವರು ಬಡವನಿಗೆ ಪೂರಕವಾಗಿ ವಿಧಿ ಹೇಳಬೇಕಾದೆಡೆ ಹಣದ ಆಸೆಯಿಂದ ಧನಿಕನ ಪರವಾಗಿ ತೀರ್ಪು ನೀಡುತ್ತಾರೆ. ಇದು ಅಕ್ಷಮ್ಯ ಅಪರಾಧ. ಸತ್ಯವು ಯಾರ ಕಡೆ ಇದೆ ಎಂದು ಪರಿಶೀಲಿಸಿ ನ್ಯಾಯಯುತವಾದ ತೀರ್ಪು ನೀಡಬೇಕಾದುದು ಮುಸ್ಲಿಂ ನ್ಯಾಯಾಧೀಶರ ಪಾಲಿಗೆ ಖಡ್ಡಾಯ. ಪ್ರವಾದಿ(ಸ.ಅ) ಕಾಣಿಕೆಯು ಕಾಣಿಕೆಯಾಗಿ ಉಳಿಯುವ ತನಕ ನಿವದನ್ನು ಪಡೆದುಕೊಳ್ಳಿ. ಅದು ಯಾವಾಗ ಲಂಚವಾಗಿ ಮಾರ್ಪಡುದೋ ಆಗ ಅದನ್ನು ತ್ಯಜಿಸಿರಿ. ಎಂದಿದ್ದಾರೆ. ಇಂದು ಅಧಿಕಾರಿಗಳ ನಾಯಕತ್ವವು ಬಡವರನ್ನು ಎಲ್ಲಾ ವಿಧದಲ್ಲೂ ಶೋಷಿಸುವಂತಿದೆ. ಎಲ್ಲಿ ನೋಡಿದರೂ ಲಂಚ. ಲಂಚ ಕೊಡದೇ ಯಾವ ಕೆಲಸವೂ ನೆರವೇರುವುದಿಲ್ಲ. ಇದು ಅತ್ಯಂತ ಭೀಕರವಾದ ಶೋಷಣೆ. ದಿನ ಕಳೆದಂತೆ ಈ ಶೋಷಣೆ ಹೆಚ್ಚಬಹುದು. ಇಂತಹ ಶೋಷಣೆಯು ಅಂತ್ಯ ದಿನದ ಲಕ್ಷಣಗಳಲ್ಲೊಂದಾಗಿದೆ.
*ಸಲಾಂನ ಬದಲು ಹಳೋ :*
ಮುಸ್ಲಿಮರು ಭೇಟೆಯಾಗುವಾಗ ಸಲಾಂ ಹೇಳುವ ಮೂಲಕ ಮಾತಿಗೆ ನಾಂದಿ ಹಾಡುತ್ತಾರೆ. ಸಲಾಂ ಹೇಳುವ ವಿಚಾರದಲ್ಲಿ ಪರಿಚಿತ ಅಪರಿಚಿತ ಎಂಬ ಬೇಧ ಬಾವವಿಲ್ಲ. ಇದು ಇಸ್ಲಾಂ ಕಲಿಸುವ ಪಾಠವಾಗಿದೆ. ಪ್ರವಾದಿ(ಸ.ಅ)ರವರು "ಕೇವಲ ಪ್ರತ್ಯೇಕ ವರ್ಗದವರ ಮೇಲೆ ಮಾತ್ರ ಸಲಾಂ ಹೇಳುವ ಪರಿಸ್ಥಿತಿ ಸಂಜಾತವಾಗುವ ತನಕ ಅಂತ್ಯ ದಿನ ಕಾಲ ಬದಲಾವಣೆ ಸಂಭವಿಸಲಾರದು". ಎಂದು ಭವಿಷ್ಯ ನುಡಿದಿದ್ದಾರೆ. ವಿಶ್ವ ಪ್ರವಾದಿ(ಸ.ಅ) ಅವರು ಈ ನುಡಿ ಸಲಾಂ ವಿರಳವಾಗುತ್ತಿರುವ ಈ ಕಾಲದ ವಿದ್ಯಮಾನವನ್ನು ಗಮನಿಸಿಯೇ ರೂಪುತಳೆದಂತಿದೆ. ಸಲಾಂ ಹೇಳುವ ಜನರು ಕೂಡಾ ಧನವಂತರು, ವಿದ್ಯಾವಂತರು ಮೊದಲಾದ ಪ್ರತಿಷ್ಠ ವರ್ಗಗಳ ಮೇಲೆ ಸಲಾಂ ಹೇಳುವುದನ್ನು ಸೀಮಿತಗೊಳಿಸಿರುವುದು ಅಂತ್ಯ ದಿನದ ಮುನ್ಸೂಚನೆಯಾಗಿದೆ. ಈ ಬೆಳವಣಿಗೆಗೆ ಹಲವಾರು ಕಾರಣಗಳಿರಬಹುದು. ಇಂದಿನ ಜೀವನದ ಒಂದು ಮಹತ್ತರ ಭಾಗವೇ ಸ್ವಾರ್ಥ ಹಿತ ಸಾಧನೆಯ ಸ್ಪರ್ಧೆ. ಸಲಾಮಿನ ಪರಿಣಾಮ ಮತ್ತು ಧೇಯ ಸಮಾಜದಲ್ಲಿ ಮಾನವ ಮನಸ್ಸುಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ನೆಲೆಗೊಳಿಸುವುದು. ಈ ಧ್ಯೇಯ ಕೈಗೂಡಬೇಕಾದರೆ ನಾವು ನಮ್ಮ ಪರಿಚಿತರಿಗೂ ಅಪರಿಚಿತರಿಗೂ ಹಲೋ ಎಂದು ಹೇಳದೆ ಸಲಾಂ ಹೇಳಬೇಕು. ಒಂದು ವರ್ಗದವರೊಂದಿಗಿನ ಮುಲಾಜಿಗಾಗಿ ಅಥವಾ ಸಂಕೋಚ ಪರಿಸ್ಥಿತಿಯಿಂದ ನುಣುಚಿಕೊಳ್ಳಲಿಕ್ಕಾಗಿ ಸಲಾಂ ಹೇಳುವುದು ತರವಲ್ಲ.
ಈಗೀಗ ಮುಸ್ಲಿಮರಲ್ಲಿ ಪರಸ್ಪರ ಭೇಟೆಯಾಗುವಾಗ ಸಲಾಂ ಹೇಳುವ ಪರಿಪಾಠ ತೀರಾ ವಿರಳವಾಗುತ್ತಿದೆ. ಯಾವ ಸಮಾಜದಲ್ಲಿ ಪರಸ್ಪರ ಭೇಟೆ ಆಗುವಾಗ ಸಲಾಂ ಹೇಳುವ ಮತ್ತು ಆತ್ಮೀಯವಾಗಿ ಕೈ ಕುಲಕುವ ಪತಿಪಾಠ ಇರುವುದಿಲ್ಲವೋ ಅಂಥ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ಧಯುತ ವಾತಾವರಣ ಮೂಡಲು ಸಾಧ್ಯವಿಲ್ಲ. ಅಪರಿಚಿತರಿಗೆ ಸಲಾಂ ಹೇಳುವ ಮಂದಿ ಇಂದು ತೀರಾ ಅಪರೂಪ.
" ಮಸೀದಿಯನ್ನು ದಾರಿಯನ್ನಾಗಿ ಮಾಡುವುದು, ಪರಿಚಿತರಿಗೆ ಮಾತ್ರ ಸಲಾಂ ಹೇಳುವುದು, ಗಂಡ ಮತ್ತು ಹೆಂಡತಿ ಜತೆಯಾಗಿ ವ್ಯಾಪಾರ ಮಾಡುವುದು, ಮಹಿಳೆಯರ ಮಹರ್ ಹೆಚ್ಚಿಸುವುದು, ನಂತರ ಅಂತ್ಯ ದಿನದವರೆಗೆ ಅದರ ಮೌಲ್ಯ ಕಡಿಮೆಯಾಗುವುದು ಇವೆಲ್ಲವೂ ಅಂತ್ಯ ದಿನದ ಲಕ್ಷಣಗಳಾಗಿವೆ" ಎಂದು ಹದೀಸ್'ನಲ್ಲಿ ವಿವರಿಸಲಾಗಿದೆ.
*ಮಾಯವಾಗುವ ಜ್ಞಾನ :* ಅಂತ್ಯ ದಿನ ಸಮೀಪಿಸುವಾಗ ವಿದ್ಯೆ ಕಡಿಮೆಯಾಗಲಿದೆ. ಹದೀಸ್'ನಲ್ಲಿ ಈ ಬಗ್ಗೆ ಬಹಳ ಸ್ಪಷ್ಟವಾದ ಉಲ್ಲೇಖಗಳಿವೆ. ಒಂದು ಕಡೆ ಜ್ಞಾನದ ಅನ್ವೇಷಣೆ ಮಾಡುವ ವಿದ್ಯಾರ್ಥಿಗಳ(ಮುತ'ಅಲ್ಲಿಂ) ಕೊರತೆ, ಮತ್ತೊಂದೆಡೆ ಹಳೆಯ ತಲೆಮಾರಿನ ಗಣ್ಯ ವಿದ್ವಾಂಸರ ಮರಣ. ಈ ಎರಡು ವಿದ್ಯಮಾನ ಈಗಲೇ ಹೆಚ್ಚುತ್ತಿದೆ. ವಿದ್ಯೆಯು ತಾನಾಗಿ ಮಾಯವಾಗುವುದಿಲ್ಲ. ವಿದ್ಯೆ ಮಾಯವಾಗುವುದಕ್ಕೆ ವಿದ್ವಾಂಸರ ಮರಣವೇ ಕಾರಣ. ಆದ್ದರಿಂದ ಕಲಿತವರ ಹಾಗೂ ಕಲಿಯುವವರ ಸಂಖ್ಯೆ ಇಳಿ ಮುಖವಾದಂತೆ ವಿದ್ಯೆಯಲ್ಲೂ ಅನನ್ಯ ಕೊರತೆ ಕಂಡು ಬರುತ್ತದೆ. ಇಮಾಂ ಖುರ್ತುಬಿ ಅವರು "ಜ್ಞಾನ ಇಲ್ಲವಾಗುವುದು". ಎಂಬ ಪ್ರವಾದಿ ವಚನಕ್ಕೆ ವ್ಯಾಖ್ಯಾನ ಬರೆಯುತ್ತಾ " ಜ್ಞಾನ ಮಾಯವಾಗುವುದು ಎಂದರೆ ಜ್ಞಾನನುಸಾರ ಕರ್ಮ ಮಾಡದಿರುವುದೆಂದೇ ಅರ್ಥ ಎನ್ನುತ್ತಾರೆ. ಅದಕ್ಕೆ ಅವರು ಹಝ್ರತ್ ಇಬ್ನು ಮಸ್'ಊದ್(ರ) ಹೇಳುತ್ತಿದ್ದ ಮಾತನ್ನು ಆಧಾರವಾಗಿ ನೀಡುತ್ತಾರೆ. ಇಬ್ನು ಮಸ್'ಊದ್(ರ) ಒಮ್ಮೆ "ಕುರ್'ಆನ್ ಕಂಠಪಾಠ ಮಾಡುವುದೆಂದರೆ ಅದರ ಅಕ್ಷರಗಳನ್ನು ಕರಗತ ಮಾಡುವುದಿಲ್ಲ. ಬದಲು ಕುರ್'ಆನಿನ ವಿಧಿ ನಿಯಮಗಳಿಗೆ ಬದ್ಧವಾಗಿ ಕರ್ಮ ಮಾಡುವುದು ಎಂದಿದ್ದರು.
ಜನರ ಹೃದಯದಿಂದ ಅಗಲುವ ಜ್ಞಾನವು ಕಾಲ ಕ್ರಮೇಣ ಅಕ್ಷರ ಮತ್ತು ದಾಖಲೆಯ ರೂಪದಿಂದಲೂ ಮಾಯವಾಗಿ ಪವಿತ್ರ ಕುರ್'ಆನಿನಲ್ಲಿ ಒಂದೇ ಒಂದು ಸೂಕ್ತ ಇರುವುದಿಲ್ಲ.
*ಹೆಂಡತಿಯ ಅನುಸರಣೆ*
ಗಂಡನಾದವನು ಯಾವತ್ತೂ ಹೆಂಡತಿಯ ಗುಲಾಮನಲ್ಲ. ಗಂಡನ ಸ್ಥಾನ ಹೆಂಡತಿಗಿಂತ ಹಿರಿದು. ಗಂಡನ ಸೇವೆ ಮಾಡಲು ಬಾದ್ಯಸ್ಥಳು. ಆದ್ದರಿಂದ ಗಂಡನನ್ನು ಅನುಸರಿಸುವುದು ಹೆಂಡತಿಯ ಕರ್ತವ್ಯ. ಆದರೆ ಇದಕ್ಕೆ ವಿರುದ್ಧವಾದ ವಿದ್ಯಮಾನ ಇಂದು ಎಲ್ಲೆಡೆ ಕಂಡು ಬರುತ್ತಿದೆ. ಗಂಡ ಹೆಂಡತಿಯ ಗುಲಾಮನಾಗುತ್ತಿದ್ದಾನೆ. ಹೆಂಡತಿಯೇ ತನ್ನ ಮಾರ್ಗದರ್ಶಿ ಎಂಬ ಭಾವನೆ ಅವನಲ್ಲಿ ಬಲವಾಗುತ್ತಿದೆ. ಇಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯುತ್ತಿದ್ದಾಳೆ. ಸೌಟು ಹಿಡಿಯುವ ಕೈಗಳು ಖಡ್ಗ ಹಿಡಿಯುತ್ತಿದೆ. ಗಂಡನು ಹೆಂಡತಿಯ ಮಾತಿಗೆ ತಲೆದೂಗಿ ನಡೆಯುವ ಕಾರ್ಯ ನಿರಂತರ ನಡೆಯುತ್ತಿದೆ. ಹೆಂಡತಿಯನ್ನು ಅನುಸರಿಸುವ ಗಂಡನು ಸಮಾಜ ಜೀವನದಲ್ಲಿ ಪೌರುಷದ ಪ್ರತಿಷ್ಠೆಯನ್ನೇ ಕಳೆದುಕೊಳ್ಳುತ್ತಾನೆ. ಇಸ್ಲಾಂ ಹೇಳುತ್ತದೆ. ಗಂಡ ಹೆಂಡತಿಯನ್ನು ಅನುಸರಿಸುವ ಕಾಲ ಬಂದರೆ ಅದು ಅಂತ್ಯ ದಿನವೆಂದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಭವಿಷ್ಯವಾಣಿ ಎಂದಾದರೂ ಸುಳ್ಳಾದೀತೇ?
ಆದ್ದರಿಂದ ಕೌಟುಂಬಿಕ ಜೀವನದಲ್ಲಿ ಎಲ್ಲಾ ವ್ಯವಹಾರಗಳು ಗಂಡನ ಕೈಯ್ಯಲ್ಲಿರಬೇಕು. ಹೆಂಡತಿ ಗಂಡನಿಗೆ ಅಧೀನವಾಗಿ ನಡೆದುಕೊಳ್ಳಬೇಕು. ಅವನ ಇಚ್ಚೆಗೆ ವಿರುದ್ಧವಾಗಿ ಎಂದೂ ನಡೆಯಬಾರದು. ಹೆಂಡತಿ ಒಳ್ಳೆಯದನ್ನು ಹೇಳಿದರೆ ಅದನ್ನು ಅನುಸರಿಸಬಹುದು.
*ಹೆತ್ತವರಿಗೆ ಕಿರುಕುಳ :* ಪ್ರವಾದಿ(ಸ.ಅ) ಅವರು ತಂದೆ ತಾಯಂದಿರನ್ನು ನೋಯಿಸುವ ಕಾರ್ಯವನ್ನು ಬಹಳ ಕಠೋರವಾಗಿ ವಿರೋಧಿಸಿದ್ದಾರೆ. ಅಲ್ಲಾಹನು ಅದಕ್ಕೆ ಈ ಪ್ರಪಂಚದಲ್ಲೇ ಶಿಕ್ಷೆಯನ್ನು ನೀಡುತ್ತಾನೆಂದು ವಿದ್ವಾಂಸರು ಹೇಳಿದ್ದಾರೆ.
ತಂದೆ ತಾಯಂದಿರನ್ನು ನಿರ್ಲಕ್ಷ್ಯದಿಂದ ಕಂಡು ಇತರರ ಮುಂದೆ ಸಜ್ಜನರಂತೆ ವರ್ತಿಸುವುದು ಅನೇಕ ಮಂದಿ ಇದ್ದಾರೆ. ಇದು ಮಹಾಪಾಪ. ನಮ್ಮ ಹೆತ್ತವರನ್ನು ನಾವು ಕಡ್ಡಾಯವಾಗಿ ಗೌರವಿಸಬೇಕು. ಅವರ ಆದೇಶಕ್ಕೆ ಎದುರಾಗಿ ವರ್ತಿಸಬಾರದು. ಪ್ರವಾದಿ(ಸ.ಅ) ಅವರ ಹತ್ತಿರ ಒಮ್ಮೆ ದೇವಚರ ಜಿಬ್ರೀಲ್(ಅ) ಬಂದು ಅಂತ್ಯ ದಿನದ ಕುರಿತು ವಿಚಾರಿಸಿದರು. ಆಗ ಪ್ರವಾದಿ(ಸ.ಅ)ರವರು ಈ ಬಗ್ಗೆ ಕೇಳುತ್ತಿರುವ ನಿಮಗಿಂತ ಹೆಚ್ಚಿನ ಅರಿವು ಕೇಳಲ್ಪಡುತ್ತಿರುವ ನನಗಿಲ್ಲ ಎಂದರು. ನಂತರ ಜಿಬ್ರೀಲ್(ಅ) ಬಂದು ಅಂತ್ಯ ದಿನದ ಕುರಿತು ವಿಚಾರಿಸಿದರು. ಆಗ ಪ್ರವಾದಿ (ಸ.ಅ)ರವರು ಈ ಬಗ್ಗೆ ಕೇಳುತ್ತಿರುವ ನಿಮಗಿಂತ ಹೆಚ್ಚಿನ ಅರಿವು ಕೇಳಲ್ಪಡುತ್ತಿರುವ ನನಗಿಲ್ಲ ಎಂದರು. ಈ ಮಾತಿನ ಅರ್ಥವನ್ನು ವಿದ್ವಾಂಸರು ವಿವರಿಸಿರುವುದು ಹೀಗೆ. "ಮಕ್ಕಳಿಂದ ಹೆತ್ತವರಿಗೆ ಕಿರುಕುಳ ಹೆಚ್ಚುವುದು, ಯಜಮಾನನು ತನ್ನ ಗುಲಾಮನನ್ನು ಬಳಸುವಂತೆ ಅಪಮಾನ ಮತ್ತು ಬೈಗುಳದಿಂದ ಅವರು ಹೆತ್ತವರೊಡನೆ ಒಡನಾಡುವರು."
*ಮಸೀದಿಯಲ್ಲಿ ಶಬ್ಧವೆತ್ತುವುದು :* ಮುಸ್ಲಿಮರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯ ಚಟುವಟಿಕೆಗಳ ಮುಖ್ಯ ಕೇಂದ್ರವೇ ಮಸೀದಿ. ಅದು ಅಲ್ಲಾಹನ ಮನೆ. ಓರ್ವ ಸತ್ಯ ವಿಶ್ವಾಸಿ ದಿನಂಪ್ರತಿ ಐದು ಹೊತ್ತಿನ ನಮಾಝಿಗಾಗಿ ಮಸೀದಿಗೆ ಹೋಗುತ್ತಾನೆ. ಮಸೀದಿಯ ಧ್ಯಾನ, ಕೀರ್ತನೆ, ಆರಾಧನೆ, ದ್ಸಿಕ್ರ್, ತಸ್'ಬೀಹ್'ಗಾಗಿ ಬಳಸುವಂತದ್ದು. ಮಸೀದಿಯ ಪಾವಿತ್ರ್ಯತೆಗೆ ದಕ್ಕೆ ತರುವ ಯಾವ ಕಾರ್ಯವೂ ಅನುವದನೀಯವಲ್ಲ. ಮಸೀದಿಯಲ್ಲಿ ಲೌಕಿಕ ವಿಷಯಗಳ ಬಗ್ಗೆ ಮಾತಾನಾಡಿ ತಮ್ಮ ಈಮಾನಿಗೆ ಸಂಚಕಾರ ತಂದೊಡ್ಡುವ ಮಂದಿ ಇದನ್ನು ತಿಳಿಯಬೇಕು. ಮಸೀದಿಯ ಖತೀಬರು, ಮುಕ್ರಿ, ಮುತ'ಅಲ್ಲಿಮರು ಮತ್ತು ಸಮಿತಿಯ ಸದಸ್ಯರು ಸಂಘಟಿತರಾಗಿ ಈ ಬಗ್ಗೆ ಜಾಗೃತೆ ಪಾಲಿಸಿದಾಗ ಮಾತ್ರ ಮಸೀದಿಯ ಮಹತ್ವಕ್ಕೆ ಭಂಗತರುವ ಈ ಹೇಯ ಕೃತ್ಯವನ್ನು ತೊಲಗಿಸಬಹುದು. ಧಾರ್ಮಿಕ ಕಾರ್ಯಗಳಿಗೆ ಮಸೀದಿಯಷ್ಟು ಸೂಕ್ತವಾದ ಬೇರೊಂದು ಸ್ಥಳವಿಲ್ಲ. ಬೇರೆ ಯಾವ ಸ್ಥಳಗಳಲ್ಲೂ ಕಾಣದಷ್ಟು ವಿಪುಲ ಸಂಖ್ಯೆಯಲ್ಲಿ ಆಧ್ಯಾತ್ಮಿಕ ಸ್ತುತಿ ಕೀರ್ತನೆ ಮತ್ತು ಆರಾಧನೆಗಳು ಅಲ್ಲಿ ನಡೆಯುತ್ತದೆ. ಅಂತ್ಯ ದಿನದ ಹೊತ್ತಿನಲ್ಲಿ ಮಸೀದಿಯ ಪಾವಿತ್ರ್ಯತೆ ಹೇಗೆ ನಶಿಸಿ ಹೋಗುತ್ತದೆ ಎಂಬುದಕ್ಕೆ ಪ್ರವಾದಿ(ಸ.ಅ)ರವರ ವಚನಗಳಲ್ಲಿ ಸ್ಪಷ್ಟ ಪುರಾವೆ ಇದೆ. "ಮಸೀದಿಗಳನ್ನು ದಾರಿಯಾಗಿ ಮಾರ್ಪಡಿಸುವುದು" ಅಂತ್ಯ ದಿನದ ಸೂಚನೆ ಎಂದು ಪ್ರವಾದಿ(ಸ.ಅ) ಅವರು ಹೇಳಿದ್ದಾರೆ. ಅಂತ್ಯ ದಿನದ ಹೊತ್ತಿನಲ್ಲಿ ಮಸೀದಿಯ ಪಾವಿತ್ರ್ಯತೆ ಹೇಗೆ ನಶಿಸಿ ಹೋಗುತ್ತದೆ ಎಂಬುದಕ್ಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ವಚನಗಳಲ್ಲಿ ಸ್ಪಷ್ಟ ಪುರಾವೆ ಇದೆ. "ಮಸೀದಿಗಳನ್ನು ದಾರಿಯಾಗಿ ಮಾರ್ಪಡಿಸುವುದು" ಅಂತ್ಯ ದಿನದ ಸೂಚನೆ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ್ದಾರೆ.
ಮಸೀದಿಯಲ್ಲಿ ಲೌಕಿಕ ವಿಷಯದ ಬಗ್ಗೆ ಮಾತನಾಡುವುದರಿಂದ 40 ವರ್ಷಗಳ ಸತ್ಕರ್ಮ ನಿಶ್ಚಲಗೊಳ್ಳಲಿದೆ". ಎಂಬ ಹದೀಸ್ ಇಲ್ಲಿ ಗಮನೀಯ, ಅಲಿ(ರ) ಅವರಿಂದ ಇಮಾಂ ತುರ್'ಮುದ್ಸಿ(ರ) ವರದಿ ಮಾಡಿದ ದೀರ್ಘ ಹದೀಸೊಂದರಲ್ಲಿ, ಮಸೀದಿಯಲ್ಲಿ ಶಬ್ದವೆತ್ತುವುದು ಅಂತ್ಯ ದಿನದ ಲಕ್ಷಣ ಎಂಬ ಅಂಶ ವ್ಯಕ್ತಗೊಂಡಿದೆ. ಅಂತ್ಯ ದಿನದ ಲಕ್ಷಣ ಎಂಬಂತೆ ಮಸೀದಿಯ ಬಗ್ಗೆ ವರದಿಯಾದ ಹದೀಸ್'ಗಳು ಧಾರಾಳವಿದೆ. ನಮ್ಮ ನಡುವೆ ಧಾರಾಳ ಮಸೀದಿಗಳಿವೆ. ಪುರಾತನ ಬಗ್ಗೆ ವರದಿಯಾದ ಹದೀಸ್'ಗಳು ಧಾರಾಳವಿದೆ. ನಮ್ಮ ನಡುವೆ ಧಾರಾಳ ಮಸೀದಿಗಳಿವೆ. ಪುರಾತನ ಕಾಲದ ಮಸೀದಿಯ ರಚನೆ ಮತ್ತು ವಿನ್ಯಾಸಗಳಲ್ಲಿ ಮಾನವನ ಆಧ್ಯಾತ್ಮಿಕತೆಯನ್ನು ಬಡಿದೆಬ್ಬಿಸುವಂಥ ಸರಳವಾದ ಚೆಲುವಿರುತ್ತಿತ್ತು. ಅದರಲ್ಲಿ ಈಗಿನಂಥ ಅಸಮಂಜಸತೆ ಅಥವಾ ವೈಭವದ ವಿನ್ಯಾಸ ಕಾಣುತ್ತಿರಲಿಲ್ಲ. ಇಂದು ಮಸೀದಿಯ ವಿಚಾರ ಅದಕ್ಕೆ ಭಿನ್ನ. ಅಂಥ ಸಹಜತೆ ಮತ್ತು ಸರಳತೆ ಈಗಿನ ಮಸೀದಿಗಳಿಗಿಲ್ಲ. ಒಬ್ಬ ಎಷ್ಟು ವೈಭವದ ಮಸೀದಿಯನ್ನು ಕಟ್ಟಿಸುತ್ತಾನೋ ಅದಕ್ಕಿಂತ ವೈಭವದ ಮಸೀದಿಯನ್ನು ತಾನು ಕಟ್ಟಿಸಬೇಕು ಎಂಬ 'ಅಹಂ'. ಮತ್ತೊಬ್ಬನಿಗೆ. ಇಲ್ಲಿ 'ಇಖ್'ಲಾಸ್' ಎಂಬುದು ತೀರಾ ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಿದೆ. ' ಮಸೀದಿಯ ರೂಪ. ವಿನ್ಯಾಸಗಳಲ್ಲಿ ಜನರು ಪರಸ್ಪರ ಹೆಮ್ಮೆ ಪಡುವುದು ಅಂತ್ಯ ದಿನದ ಲಕ್ಷಣ." ವೆಂಬ ಪ್ರವಾದಿ ವಚನವೊಂದು ಇಲ್ಲಿ ನೆನಪಿಗೆ ಬರುತ್ತದೆ. ಹೌದು ಇದು ಇಂದು ನಡೆಯುತ್ತಿರುವ ಸಂಗತಿ. ಇಂದಿನ ಜನಕ್ಕೆ ಮಸೀದಿಯ ರೂಪ ರಚನೆ ವಿನ್ಯಾಸವೇ ಮುಖ್ಯವಾಗಿದೆಯೇ ಹೊರತು ಭಕ್ತಿಯಲ್ಲ. ಕನವರಿಸುವ ಮನಸ್ಸಿನ ಈ ಭೌತಿಕ ದುರಾಸೆಯ ಮಾನದಂಡಕ್ಕೆ ಸ್ಥಾನವಿರುವುದಾದರೂ ಹೇಗೆ? ನಾವೆಲ್ಲರೂ ಚಿಂತಿಸಬೇಕಾದ ಸಂಗತಿಯಿದು.
*ಪೂರ್ವಿಕರನ್ನು ನಿಂದಿಸುವುದು :* ಅಂತ್ಯ ದಿನದ ಕುರಿತು ವಿವರಣಾತ್ಮಕ ಮಾಹಿತಿಗಳನ್ನು ಒದಗಿಸುವ ದೀರ್ಘಾವಾದ ಹದೀಸ್ ಒಂದರಲ್ಲಿ " ಈ ಸಮುದಾಯದ ಹೊಸ ತಲೆಮಾರಿನವರು ಹಳೆಯ ತಲೆಮಾರಿನ ಪೂರ್ವಿಕರನ್ನು ಶಪಿಸುವರು" ಎಂಬ ಉಲ್ಲೇಖವಿದೆ. ಈ ಸಂಗತಿ ನಮ್ಮ ನಡುವೆ ಈಗ ನಿತ್ಯ ಗೋಚರವಾಗಿದೆ. ಪ್ರವಾದಿ(ಸ.ಅ)ರವರ ಅನುಯಾಯಿಗಳಾದ ಸ್ವಹಾಬಿಗಳನ್ನು ಶತಮಾನಗಳಿಂದಲೂ ನೂತನವಾದಿಗಳ ದಂಡು ಕೆಣುಕುತ್ತಲೇ ಬರುತ್ತಿದೆ.
ಹಿಂದಿನವರ ಬಗ್ಗೆ ಇಂದಿನವರಿಗೆ ಗೌರವಾದರವಿಲ್ಲ. ಪೂರ್ವಿಕರು ತೋರಿಸಿದ ಹಾದಿಯನ್ನು ಬಿಟ್ಟು ತಮ್ಮದೇ ಆದ ಧಾಟಿಯಲ್ಲಿ ಇಸ್ಲಾಮಿನ ಬೋಧನೆಗಳನ್ನು ಪ್ರಚಾರಪಡಿಸಲು ಹೊರಟವರು ಅನೇಕ. ಹಿರಿಯರು ತೋರಿದ ವಾಸ್ತವಿಕತೆಗೆ ಬೆನ್ನು ತಿರುಗಿಸಿ ಮಾನವ. "ನಾನೇ ನಿಜವಾದ ಆದರ್ಶ ಪುರುಷನೆಂದು ತೋರಿಸಲು ಪ್ರಯತ್ನಿಸುವ ಅಬ್ಬರದಲ್ಲಿ ನಿಜವಾದ ಆದರ್ಶ ಕಣ್ಮರೆಯಾಗುವ ಹಂತಕ್ಕೆ ತಲುಪಿದೆ.
ಈಗೀಗ ಪೂರ್ವಿಕರ ಮಾತುಗಳಿಗೆ ಬೆಲೆ ಇಲ್ಲದಂತಾಗಿ ಪ್ರಗತಿಶೀಲ ಆಧುನಿಕ ಸಮಾಜದಲ್ಲಿ ಹೊಸ ತಲೆಮಾರಿನ ಮಾತಿಗೆ ಬೆಲೆ ಸಿಗುವಂತಾಗಿದೆ. ಹಿಂದಿನವರು ಕಷ್ಟಪಟ್ಟು ದುಡಿದು ನಿದ್ದೆ ತ್ಯಜಿಸಿ ಶ್ರಮಭರಿತ ಜೀವನದಿಂದ ಭವಿಷ್ಯದ ಸಮಾಜಕ್ಕೆ ಅದರ ಶಿಸ್ತು ಸೂತ್ರಗಳಿಗೆ ಸಮೃದ್ಧಿಯ ಚಾಲನೆ ನೀಡಿದರು. ಇದೀಗ ಆಧುನಿಕರ ಕೈಗೆ ಅಂಥ ಆದರ್ಶ ಇಷ್ಟಾರ್ಥದ ಸಾಧನವಾಗಿ ಪರಿವರ್ತನೆಗೊಳ್ಳುತ್ತಾ ಮುಂದುವರಿಯುತ್ತಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಗೆ ತಗುಲಿದ ಬಹು ದೊಡ್ಡ ದುರಂತ. ಈ ಕಾಲದಲ್ಲಿ ಜನರು ಪೂರ್ವಿಕರ ಆಶಯಾದರ್ಶಗಳಿಗೆ ಬೆಲೆ ಕೊಡುವುದಿಲ್ಲ. ಮತ್ತೊಂದೆಡೆ ಪೂರ್ವಿಕರ ಜೀವನ ಶೈಲಿಯ ಕುರಿತು ಸಂಪೂರ್ಣ ತಿಳುವಳಿಕೆ ಅವರಲ್ಲಿಲ್ಲ. ಇಂಥ ಸಂಗತಿಗಳು ಭವಿಷ್ಯತ್'ನಲ್ಲಿ ನಡೆಯಲಿದೆ ಎಂಬುವುದನ್ನು ನಮಗೆ ಮನದಟ್ಟು ಮಾಡಿ ಕೊಡುವ ಉದ್ದೇಶದಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆಯೇ ಈ ವಿಷಯಗಳನ್ನು ಜಗತ್ತಿಗೆ ಬೋಧಿಸಿದರು ಎಂಬುದನ್ನು ಮರೆಯಬಾರದು.
*ಮುಂದುವರೆಯುತ್ತದೆ....*

Comments