Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *5*



*▪ಮಾತನಾಡುವ ಇರುವೆ▪*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

  ▪ಬರೇ ಒಂದು ವರ್ಷ ಮಾತ್ರ ಆಯುಷ್ಯ ಇರುವುದಾದರೂ ತನ್ನ ಬದುಕು ಐಶ್ವರ್ಯದಿಂದ ಆಗಿರಬೇಕೆಂಬ ಇರಾದೆಯಿಂದ ನಾಳೆಗೆ ಬೇಕಾಗಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿಡುವ ಒಂದು ಪುಟ್ಟ ಜೀವಿಯಾಗಿದೆ ಇರುವೆ. ಒಂದು ವರ್ಷದ ಬದುಕು ಮಾತ್ರವಿದ್ದರೂ ಇದು ಎಷ್ಟೋ ವರ್ಷಗಳಿಗೆ ಬೇಕಾದ ಆಹಾರವನ್ನು ಜಮೆ ಮಾಡಿಡುತ್ತದೆ.
  ▪ಇರುವೆಯು ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿ ಅದನ್ನು ಜೋಪಾನವಾಗಿಡುವುದರಲ್ಲಿ ಬಹಳ ತಂತ್ರಶಾಲಿ. ಏನಾದರು ಧಾನ್ಯಗಳು ಅಥವಾ ಇನ್ಯಾವುದೇ ಆಹಾರ ವಸ್ತುಗಳನ್ನು ಸಿಕ್ಕಿದಾಗ ಇದು ತನ್ನ ಆಸುಪಾಸಿನಲ್ಲಿರುವ ಇತರ ಇರುವೆಗಳಿಗೆ ಕರೆಗಂಟೆ ಮಾಡಿ ಆಹಾರ ಸಿಕ್ಕಿದ ಬಗ್ಗೆ ಸೂಚನೆ ಕೊಡುತ್ತದೆ. ಸಾಧಾರಣ ಇರುವೆಗಳಿಗೆ ಒಂದು ಯೂನಿಯನ್ (ಒಕ್ಕೂಟ) ಇರುತ್ತದೆ. ಒಕ್ಕೂಟಕ್ಕೆ ಕೆಲವು ದೊಡ್ಡ ಇರುವೆಗಳು ನೇತಾರರಾಗಿ ಕಾರ್ಯಾಚರಣೆ ಮಾಡುತ್ತಾರೆ. ಅವರ ನಿರ್ದೇಶದಂತೆ ತಮಗೆ ದೊರೆತ ಆಹಾರಗಳನ್ನು ತಮ್ಮ ಮನೆಯಲ್ಲಿರುವ ಗೋದಾಮುಗಳಿಗೆ ಸಾಗಿಸಿ ಅಲ್ಲಿ ಬಹಳ ವ್ಯವಸ್ಥಿತವಾಗಿಯೂ ನಾಜೂಕಾಗಿಯೂ ಇಡಲಾಗುತ್ತದೆ.
  ▪ಈ ಪುಟ್ಟಜೀವಿ ಎಷ್ಟು ತಂತ್ರಶಾಲಿ ಮತ್ತು ಬುದ್ದಿವಂತ ಎಂದರೆ ಮಣ್ಣಿನಿಂದ ನಿರ್ಮಾಣ ಮಾಡಲ್ಪಟ್ಟ ತಮ್ಮ ಹುಂಜದಲ್ಲಿ (ಗೂಡು) ಧಾನ್ಯಗಳನ್ನು ಶೇಖರಿಸಿಡುವಾಗ ಮೊಳಕೆಯೊಡೆದು ಸಸಿಯಾಗಬಹುದು ಎಂಬ ಭಯದಿಂದ ‌ಧಾನ್ಯಗಳನ್ನು ಎರಡು ತುಂಡು ಮಾಡಿ ಇಡುತ್ತದೆ. ಕೊತ್ತಂಬರಿ ಧಾನ್ಯವು ಎರಡು ತುಂಡು ಮಾಡಿದರೂ ಮೊಳಕೆ ಒಡೆಯುವ ಒಂದು ಅಪೂರ್ವ ದಾನ್ಯವಾಗಿರುತ್ತದೆ. ಸುಬ್ಹಾನಲ್ಲಾ....!! ಅದನ್ನು ಇದು ಮೂರು ಅಥವಾ ನಾಲ್ಕು ತುಂಡು ಮಾಡಿ ಇಡುತ್ತದೆ. ಮಳೆಗಾಲಕ್ಕೆ ಬೇಕಾಗಿ ಬೇಸಿಗೆ ಕಾಲದಲ್ಲಿ ಶೇಖರಣೆ ಮಾಡಿಡುವ ಈ ಆಹಾರ ಪದಾರ್ಥಗಳು ಈ ದೀರ್ಘ ಅವಧಿಯಲ್ಲಿ ಕೆಲವೊಮ್ಮೆ ಚೆನ್ನಾಗಿ ಬಿಸಿಲು ಮತ್ತು ಗಾಳಿ ಸಿಗದೆ ಹಾಳಾಗಿ  ಹೋಗುವ ಸಾದ್ಯತೆ ಇರುವುದರಿಂದ ಕೆಲವು ಬಿಸಿಲಿರುವ ದಿನಗಳಲ್ಲಿ ಇದನ್ನು ತನ್ನ ಮನೆಯಂಗಳಕ್ಕೆ ಹಾಕಿ ಒಣಗಿಸುತ್ತದೆ. ಇನ್ನು ಬಿಸಿಲು ಇಲ್ಲದಿದ್ದರೆ ರಾತ್ರಿ ಚಂದ್ರನ ಬೆಳಕಿರುವ ಸಮಯದಲ್ಲಿ ಹೊರಹಾಕುತ್ತದೆ.
  ▪ತನ್ನ ಶರೀರ ತೂಕದ ಎಷ್ಟೋ ಪಟ್ಟು ತೂಕವನ್ನು ಎಳೆದು ಕೊಂಡು ಹೋಗುವ ಒಂದು ಅಪೂರ್ವ ಜೀವಿಯಾಗಿದೆ ಇರುವೆ. ಈ ಒಂದು ಶಕ್ತಿ ಅಲ್ಲಾಹನು ಈ ಇರುವೆಗಲ್ಲದೆ ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಕೊಟ್ಟಿಲ್ಲ.
  ▪ ಪವಿತ್ರ ಕುರ್‌ಆನಿನಲ್ಲಿ ಈ ಇರುವೆಯ ಹೆಸರಲ್ಲಿ *"ಸೂರಃ ಅಲ್ ನಮ್‌ಲ್"* ಎಂಬ ಒಂದು ಅಧ್ಯಾಯವೇ ಅವತೀರ್ಣಗೊಂಡಿದೆ. ಪ್ರವಾದಿ ಸುಲೈಮಾನ್ (ಅ) ರು ಮತ್ತು ಅವರ ಅನುಯಾಯಿಗಳು ಒಂದು ದಾರಿಯಲ್ಲಿ ಹೋಗುತ್ತಿರುವಾಗ ದಾರಿಯಲ್ಲಿದ್ದ ಒಂದು ಇರುವೆಗುಂಪಿನಿಂದ ಒಂದು ಇರುವೆ ಮಾತಾಡಿದ್ದನ್ನು ಪ್ರವಾದಿ ಸುಲೈಮಾನ್ (ಅ) ರವರ ಕಿವಿಗೆ ಕೇಳಿಸಿದ್ದು ಮತ್ತು ತದನಂತರ ಉಂಟಾದ ಘಟನೆಯ ಬಗ್ಗೆ ಸವಿಸ್ತಾರ ಉಲ್ಲೇಖವೇ ಇದೆ.
  ▪ಆಹಾರದಲ್ಲಿ‌ ಅತಿಯಾಶೆ ಇರುವ ಈ ಇರುವೆಗೆ ಎಷ್ಟು ಶೇಖರಣೆ ಮಾಡಿಟ್ಟರೂ ಸಮಾಧಾನ ಎಂಬುದು ಇಲ್ಲವೇ ಇಲ್ಲ. ಮತ್ತೂ ಮತ್ತೂ ಮಾಡಿಡುವ ಎಂಬ ದುರಾಶೆ. ಎಷ್ಟರ ತನಕ ಅತ್ಯಾಶೆಯೆಂದರೆ ತಿನ್ನಲು ಯೋಗ್ಯವಲ್ಲದ ಖರ್ಜೂರದ‌ ಒಳಗಿನ ಬೀಜದಂತಹಾ ದೊಡ್ಡ  ವಸ್ತುಗಳನ್ನೂ ಕೆಲವೊಮ್ಮೆ ಹಲವು ಇರುವೆಗಳು ಒಗ್ಗೂಡಿ ಅದರ ಸಂಗ್ರಹ ಗೋದಾಮಿಗೆ ಕೊಂಡು ಹೋಗುವುದನ್ನು ನೀವು ಕಂಡಿರಬಹುದು.   ಇದು ತಿನ್ನಲಿಕ್ಕಾಗದ ವಸ್ತುವೆಂದು ಅದಕ್ಕೆ ಗೊತ್ತಿದ್ದೂ ಮಾಡುವ ಕೆಲಸವಾಗಿದೆ. ಇದೆಲ್ಲವೂ ಅತಿಯಾಶೆಯ ಕಾರಣದಿಂದಾಗಿದೆ.
  ▪ *"ಹುಂಜ"* ಎಂದು ಕರೆಯಲ್ಪಡುವ ಇದರ ಮನೆಯನ್ನು ಬಹಳ ಆಧುನಿಕ ಮತ್ತು ನವೀನ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮಳೆನೀರು ಮನೆಯ ಒಳಗೆ ಹರಿಯದಿರಲು ಮನೆಯ ಪ್ರವೇಶದ್ವಾರವು ಬಹಳ ವಕ್ರವಾಗಿ ಮತ್ತು ಅಂಕು ಡೊಂಕಾಗಿರುತ್ತದೆ. ಎರಡು ಮೂರು ಮಹಡಿಗಳಿರುವ ಮನೆಯಲ್ಲಿ‌ ಹಲವಾರು ಕೋಣೆಗಳಿರುತ್ತದೆ. ಅಂತೆಯೇ ಪಡಸಾಲೆ, ಕೈಸಾಲೆ, ಸಭಾಂಗಣ, ದಾಸ್ತಾನು ಕೊಠಡಿ ಇತ್ಯಾದಿ ಎಲ್ಲವೂ ಇರುತ್ತದೆ. ಆಹಾರ ಪದಾರ್ಥಗಳನ್ನು ನೀರಿನ ತೇವ ಮುಟ್ಟಿ ಒದ್ದೆಯಾಗದ ರೂಪದಲ್ಲಿ  ಬಹಳ ತಾಂತ್ರಿಕವಾಗಿ ಗೋದಾಮಿನಲ್ಲಿ ಇಡಲಾಗುತ್ತದೆ.
  ▪ಇರುವೆಯನ್ನು ಕೊಲ್ಲುವುದು ನಿಷಿದ್ಧ. ತೊಂದರೆ ಆಗುವುದಾದರೆ ಕೊಲ್ಲಬಹುದು. ಆದರೆ ಯಾವ ಕಾರಣಕ್ಕೂ ಬೆಂಕಿಯಿಂದ ಕೊಲ್ಲಬಾರದು. ಬೆಂಕಿ ಹಾಕಿ ಶಿಕ್ಷಿಸುವ ಅಧಿಕಾರ ಅಲ್ಲಾಹುವಿನಿಗಲ್ಲದೆ ಬೇರೆ ಯಾರಿಗೂ ಇಲ್ಲ.
  ▪ಇರುವೆಯು ತನ್ನ ಬಾಯಿ ಮತ್ತು ಆರು ಕಾಲುಗಳ ಸಾಹಾಯದಿಂದ ಆಹಾರ ಪದಾರ್ಥಗಳನ್ನು ಸಾಗಾಟ ಮಾಡುತ್ತದೆ. ಪ್ರವಾದಿ ಮುಹಮ್ಮದ್ (ಸ) ರು ಇರುವೆಯು ತನ್ನ ಕಾಲಿನಿಂದ ಅಂತೆಯೇ ಬಾಯಿಯಿಂದ ಕೊಂಡು ಹೋಗುವ ಆಹಾರ ವಸ್ತುಗಳನ್ನು ತೆಗೆದು ತಿನ್ನುವುದನ್ನು ವಿರೋಧಿಸಿದ್ದಾರೆ. ಅದು ಇಸ್ಲಾಮಿನಲ್ಲಿ ಕರಾಹತ್ ಆಗಿದೆ. ಮಾತ್ರವಲ್ಲ ಅದು ಹಲವಾರು ರೋಗಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
  ▪ಹುದ್‌ಹುದ್ ಪಕ್ಷಿ, ಜೇನ್ನೊಣ, ಸಾರಂಗ ಪಕ್ಷಿ, ಕಪ್ಪೆ ಮತ್ತು ಇರುವೆ ಈ ಐದು ಜೀವಿಗಳನ್ನು ಯಾವತ್ತೂ ಕೊಲ್ಲಬಾರದೆಂದು ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ್ದಾರೆ. ಈ ಹದೀಸನ್ನು ಇಮಾಮ್ ಅಬೂದಾವೂದ್ (ರ) ರು ವರದಿ ಮಾಡಿದ್ದಾರೆ.
  ▪ಇರುವೆಯ ಒಂದು ಗುಂಪು ಆಹಾರ ಪದಾರ್ಥಗಳ ಗಂಟು ಮೂಟೆಯನ್ನು ತನ್ನ ಮನೆಗೆ ಹೊತ್ತುಕೊಂಡು ಬರುವ ಕನಸನ್ನು ಒಬ್ಬನು ಕಂಡರೆ ಆ ಮನೆ ಐಶ್ವರ್ಯಭರಿತ ಮತ್ತು ನೆಮ್ಮದಿಯುಕ್ತ ಆಗುವುದರ ಸೂಚನೆಯಾಗಿದೆ.
  ▪ಒಬ್ಬನಿಗೆ ಅವನ ಹಾಸಿಗೆಯಲ್ಲಿ ಇರುವೆಗಳು ಸಂಚರಿಸುವುದನ್ನು ಕನಸು ಕಂಡರೆ ಅವನಿಗೆ ತುಂಬಾ ಮಕ್ಕಳಾಗುವ ನಿಶಾನೆಯಾಗಿದೆ.
  ▪ಇರುವೆ ಅವನ ಮನೆಯಿಂದ ಹೊರಗೆ ಹೋಗುವ ಕನಸು ಕಂಡರೆ ಅವನ ಕುಟುಂಬ ಸದಸ್ಯರ ಸಂಖ್ಯೆ ಕಡಿಮೆಯಾಗುವುದರ ಸಂಕೇತವಾಗಿದೆ. ಇನ್ನು ಇರುವೆ ಹೊರಗೆ ಹೋಗುವಾಗ ಆಹಾರ ವಸ್ತುಗಳೊಂದಿಗೆ ಹೋಗುವುದಾದರೆ ಆ ಮನೆಯಲ್ಲಿ ಬಡತನ ಬರುವುದರ ನಿಶಾನೆಯಾಗಿದೆ.
   ▪ಒಬ್ಬನಿಗೆ ಇರುವೆ ಮಾತಾಡುವ ಶಬ್ದ ಕೇಳಿದ ಕನಸು ಕಂಡರೆ ಅಧಿಕಾರದ ಗದ್ದುಗೆಗೆ ಎರುವುದರ ಲಕ್ಷಣವಾಗಿದೆ.
  ▪ರೋಗಿಯೊಬ್ಬನು ತನ್ನ ಶರೀರದಲ್ಲಿ ಇರುವೆ ಹರಿದಾಡುವುದನ್ನು ಕನಸಿನಲ್ಲಿ ಕಂಡರೆ ಅವನು ಹತ್ತಿರದಲ್ಲೇ ಮರಣ ಹೊಂದುವನು ಎಂದಾಗಿದೆ.
  ▪ಮನೆಯಲ್ಲಿ ಗೋಡೆಯ ಮೂಲೆಯಲ್ಲಿ ಅಥವಾ ಇನ್ನಿತರ ಜಾಗದಲ್ಲಿ ಇರುವೆ ತೂತು ಮಾಡಿ ಗೋಡೆಯ ಒಳಗಿನಿಂದ ಯಥೇಚ್ಛವಾಗಿ ಇರುವೆ ಹೊರ ಬರುತ್ತಿರುವುದಾದರೆ ಆ ತೂತಿಗೆ ಒಂದು ತುಂಡು ಅಯಸ್ಕಾಂತ ಇಡುವುದಾದರೆ ಇರುವೆ ತಾನಾಗಿಯೇ ಸಾಯುತ್ತದೆ. ಇನ್ನು ಮನೆಯ ಹೊರಗೆ ದೊಡ್ಡ ಹುಂಜ ಮಾಡಿ ಅದರಲ್ಲಿ ಇರುವೆಯ ತೊಂದರೆ ವಿಪರೀತ ಇರುವುದಾದರೆ ಹುಂಜ ದ್ವಾರವನ್ನು ದನದ ಸೆಗಣಿಯಿಂದ ಮುಚ್ಚಿದರೆ ಇರುವೆ ಅಲ್ಲಿಂದ ಮಾಯವಾಗುತ್ತದೆ.

  ▪ ಸಂಗ್ರಹ: ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಅಲ್ಲಾಮಾ ಬಿನ್ ಸೀರೀನ್ ರವರ *ತಫ್‌ಸೀರುಲ್ ಅಹ್‌ಲಾಮ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...