Skip to main content

ಅಂತ್ಯ ದಿನದ ಲಕ್ಷಣಗಳು

*_بِــسْـمِ ٱلـلـّٰــهِ ٱلـرَّحْـمَـانِ ٱلـرَّحِـيـمِ_*

🌎🌎🌎🌎🌎🌎🌎🌎🌎🌎

*ಅಂತ್ಯ ದಿನದ ಲಕ್ಷಣಗಳು :* 1⃣
*~~~~~~~~~~~~~~~~~~~~~~~~~*

🌎🌎🌎🌎🌎🌎🌎🌎🌎🌎
*ಅಲ್ ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್. ಸರ್ವ ಸ್ತುತಿ ಸ್ತೋತ್ರಗಳು ಲೋಕ ಸಂರಕ್ಷಕನಾದ ಅಲ್ಲಾಹನಿಗೆ. ಅವನ ಸ್ವಲಾತ್ ಸಲಾಂ ಲೋಕ ನೇತಾರ ಸಯ್ಯುದುನಾ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಮೇಲೂ ಅವರ ಕುಟುಂಬ ಪರಂಪರೆಯ ಮೇಲೂ ಸದಾ ವರ್ಷಿಸುತ್ತಿರಲಿ. ಆಮೀನ್.*

(ಸೂ : ಅಂತ್ಯ ದಿನದ ಕುರಿತುಳ್ಳ  ವಿಷಯವು ನಮ್ಮಲ್ಲಿ ಸಂಭವಿಸಿದೆಯೇ?  1400 ವರ್ಷಗಳ ಮುಂಚೆ ಲೋಕ ನೇತಾರ ಸಯ್ಯುದುನಾ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ್ದು ನಮ್ಮ ಕಣ್ಣ ಮುಂದೆ ಈಗ ನಡೆಯುತ್ತಾ ಇದೆಯೇ? ಇನ್ನು ಏನೇನು ಸಂಭವಿಸಲಿರುವುದು? ಎಂದು ಕೆಳಗೆ ವಿವರಿಸುವಾಗ ಒಬ್ಬೊಬ್ಬರಾಗಿ ಚಿಂತಿಸಿರಿ. ಆಗ ಅನುಭವವಾಗುವುದು ಅಂತ್ಯ ದಿನ ಎಷ್ಟು ಹತ್ತಿರವಿದೆಯೆಂದು.)


  ಈ ಪ್ರಪಂಚವನ್ನು ಹಾಗೂ ಅದರಲ್ಲಿರುವ (ಆಕಾಶ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಸಮುದ್ರ, ನದಿಗಳು, ಸರೋವರಗಳು, ಕಾಡುಗಳು, ಗುಡ್ಡೆ ಪರ್ವತಗಳು, ಸುಂದರವಾದ ಜಲಪಾತಗಳು, ಮರಗಿಡಗಳು, ಹಣ್ಣು ಹಂಪಳುಗಳು, ತರಕಾರಿಗಳು, ದವಸಧಾನ್ಯಗಳು, ಸುಂದರವಾದ ಪ್ರಕೃತಿ ಸೊಬಗುಗಳು ವನ್ಯ ಮೃಗಗಳು, ಪಕ್ಷಿಗಳು, ಮನುಷ್ಯರು, ಜಿನ್ನ್'ಗಳು, ಶೈತಾನ್'ಗಳು ಹೀಗೆ ). ಸರ್ವ ವಸ್ತುಗಳನ್ನು ಅಲ್ಲಾಹನು ಈ ದುನ್ಯಾವಿನಲ್ಲಿ ಸೃಷ್ಟಿಸಿದ್ದಾನೆ.  ಅಲ್ಲಾಹನು ಸರ್ವ ವಿಷಯಗಳ ಕುರಿತು ಅರಿವುಳ್ಳವನಾಗಿದ್ದಾನೆ.

     ಅಂತ್ಯ ದಿನದ ಲಕ್ಷಣದ ಕುರಿತು ತಿಳಿಯುವ ಮುನ್ನ ಅಲ್ಲಾಹನ ಸೃಷ್ಟಿಗಳ ಕುರಿತು ಒಂದೆರಡು ವಿಷಯವನ್ನು ತಿಳಿಯೊಣ. ಆಕಾಶ ಭೂಮಿಗಳಲ್ಲಿರುವ ಸರ್ವ ವಸ್ತುಗಳನ್ನು ಮನುಷ್ಯರಿಗಾಗಿ ಉಂಟು ಮಾಡಿದ್ದು ಎಂದಾಗಿದೆ ಕುರ್'ಆನ್. ಅಲ್ಲಾಹನು ಕಾರಣವಿಲ್ಲದೆ ಯಾವುದನ್ನೂ ಈ ಪ್ರಪಂಚದಲ್ಲಿ ಸೃಷ್ಟಿಸಿಲ್ಲ. ಎಲ್ಲಾ ಸೃಷ್ಟಿಗಳ ರಹಸ್ಯವನ್ನು ಅಲ್ಲಾಹನು ಬಲ್ಲವನಾಗಿದ್ದಾನೆ.

   ಅಲ್ಲಾಹನು ಕುರ್'ಆನಿನಲ್ಲಿ ಹೇಳುತ್ತಾನೆ : ಭೂಮಿಯಲ್ಲಿರುವುದನ್ನೆಲ್ಲ ನಿಮಗಾಗಿಯೇ ಸೃಷ್ಟಿಸಿದವನು ಆತನೇ.ಬಳಿಕ ಆಕಾಶದೆಡೆಗೆ ಗಮನಹರಿಸಿ ಸಪ್ತ ಗಗನಗಳಿಗೆ ರೂಪು ಕೊಟ್ಟನು.ಆತನು ಸಕಲ ವಿಷಯಗಳ ಜ್ಞಾನಿಯಾಗಿದ್ದಾನೆ. (ಸೂರಾ ಅಲ್ ಬಕರ).

     ನೀವು ಅಲ್ಲಾಹನ ಕುರಿತು ಚಿಂತಿಸಿರಿ. ಅದು ನಿಮ್ಮ ಈಮಾನ್ ವೃದ್ಧಿಸುತ್ತದೆ. ನಾವು ಕಾಣುವ ಆಕಾಶ, ಭೂಮಿ ಸೂರ್ಯ, ಚಂದ್ರ ನಕ್ಷತ್ರಗಳು ಇವುಗಳೆಲ್ಲವು ಅಲ್ಲಾಹನ ದೃಷ್ಟಾಂತವಾಗಿದೆ. ಕುರ್ಆನಿನಲ್ಲಿ ಅಲ್ಲಾಹನು ಹೇಳುವುದು ನೋಡಿರಿ.

    "ಒಂಟೆಗಳು ಹೇಗೆ ಸೃಷ್ಟಿಸಲ್ಪಟ್ಟಿವೆ, ಎಂಬುವುದನ್ನು ಇವರು ನೋಡುವುದಿಲ್ಲವೇ?
ಆಕಾಶಗಳು (ಕಂಬಗಳಿಲ್ಲದೆ) ಹೇಗೆ ಎತ್ತರಿಸಲ್ಪಟ್ಟಿದೆಯೆಂಬುವುದನ್ನು ನೊಡುವುದಿಲ್ಲವೇ?
ಪರ್ವತಗಳು ಹೇಗೆ ನಾಟಲ್ಪಟ್ಟಿವೆಯೆಂಬುದನ್ನು ನೋಡುವುದಿಲ್ಲವೇ?
ಭೂಮಿಯನ್ನು ಹೇಗೆ ಹಾಸಲಾಗಿದೆಯೆಂಬುವುದನ್ನು ನೋಡುವುದಿಲ್ಲವೇ? *(ಕುರ್'ಆನ್)*  ಹೀಗೆ ಅನೇಕಾರು.

  ರಾತ್ರಿ ಹಗಲುಗಳ ವ್ಯತ್ಯಾಸದಲ್ಲಿ ಚಿಂತಿಸುವವರಿಗೆ ದೃಷ್ಟಾಂತವಿದೆ *(ಕುರ್'ಆನ್)*

   ಕುರ್'ಆನಿನ ಸೂರಾ ಹಜ್ಜ್'ನಲ್ಲಿ  ಅಂತ್ಯ ದಿನದ ಕುರಿತು ಅಲ್ಲಾಹನು ಹೇಳುವುದನ್ನು ನೋಡಿರಿ.

   ಜನರೇ, ನಿಮ್ಮ ಪ್ರಭುವಿನ ಕ್ರೋಧವನ್ನು ಭಯಪಡಿರಿ. ವಾಸ್ತವದಲ್ಲಿ ಪುನರುತ್ಕಾನದ ಘಳಿಗೆಯ ಮಹಾ ಕಂಪನವು ಭಯಾನಕ ವಿಷಯವಾಗಿದೆ. *(ಕುರ್ ಆನ್)*

ನೀವು ಅದನ್ನು ಕಾಣುವಂದು ಹಾಲುಣಿಸುವವಳು ಹಾಲುಣ್ಣುವ ತನ್ನ ಶಿಶುವನ್ನು ಮರೆತು ಬಿಡುವಳು. ಪ್ರತಿಯೊಬ್ಬ ಗರ್ಭಿಣಿಗೆ ಗರ್ಭ ಪಾತವಾಗಿ ಬಿಡುವುದು. ಜನರು ನಿಮಗೆ ಉನ್ಮತ್ತರಂತೆ ತೋರುವರು. ಪ್ರಸ್ತುತಃ ಅವರು ಉನ್ಮತ್ತರಾಗಿರಲಾರರು. ನಿಜವಾಗಿ ಅಲ್ಲಾಹನ ಯಾತನೆಯೇ ಅತೀ ಭೀಕರವಾಗಿರುವುದು. *(ಕುರ್'ಆನ್)*

ಈಮಾನ್ ಕಾರ್ಯಗಳಲ್ಲಿ ಐದನೆಯ ಕಾರ್ಯವಾಗಿದೆ ಅಂತ್ಯ ದಿನದಲ್ಲಿರುವ ವಿಶ್ವಾಸ. ಈ ಜಗತ್ತು ಯಾರಿಗೂ ಶಾಶ್ವತವಲ್ಲ, ಇಲ್ಲಿಯ ಆಡಂಭರ ಬದುಕು, ಅಧಿಕಾರ, ಐಶ್ವರ್ಯ, ಅರಮನೆ, ಇಲ್ಲಿಯ ಸರ್ವವೂ ಸರ್ವ ನಾಶ ಹೊಂದುವುದು. ನಮಗಿಂತ ಮುಂಚೆ ಎಷ್ಟೋ ತಲೆಮಾರುಗಳು ಕಳೆದು ಹೋದುವು. ಪ್ರವಾದಿ ಆದಂ ನಬಿ(ಅ)ರವರ ಹಿಡಿದು ಅಂತ್ಯ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ತನಕದ ಸಮುದಾಯವು, ಕಳೆದ ನೂರು ವರ್ಷಕ್ಕಿಂತ ಮುಂಚೆ ಈ ಪ್ರಪಂಚಕ್ಕೆ ಬಂದ ಜನರು ಈಗ ಎಲ್ಲಿ ಹೋದರು, ಇನ್ನು ನೂರು ವರ್ಷಗಳ ನಂತರ ನಾವೆಲ್ಲಿರುವೆವು ಮನುಷ್ಯನು ಚಿಂತನೆ ನಡೆಸಬೇಕಾದ ವಿಷಯವಾಗಿದೆ.

  ಇಸ್ರಾಫೀಲ್(ಅ) ಸೂರ್ ಎಂಬ ಕಹಳೆಯಲ್ಲಿ ಒಂದನೇ ಬಾರಿ ಊದುವಾಗ ಇಡೀ ಜಗತ್ತು ಮತ್ತು ಅದರಲ್ಲಿರುವ ಸರ್ವ ವಸ್ತುಗಳು ನಾಶ ಹೊಂದುವುದು. ಆ ಒಂದನೇ ಕಹಳೆ ಊದುವ ಮುಂಚೆ ಅಂತ್ಯ ದಿನದ  ದೊಡ್ಡ, ದೊಡ್ಡ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಇಂಶಾ ಅಲ್ಲಾಹ್ ಅದು ನಂತರ ತಿಳಿಯುವ. ಆ ದೊಡ್ಡ ಲಕ್ಷಣಕ್ಕೊ ಮುಂಚೆ ಅಂತ್ಯ ದಿನದ ಚಿಕ್ಕ ಚಿಕ್ಕ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅದು ನಾವೀಗ ನೋಡುತ್ತಿದ್ದೇವೆ ಈಗ ಜಗತ್ತು ಅದನ್ನು ಅನುಭವಿಸುತ್ತಲಿದೆ. ಅದನ್ನು ಕೆಲವೊಂದನ್ನು ತಿಳಿಯೋಣ.

    ಪ್ರವಾದಿ ಮಹಮ್ಮದ್(ಸ)ರವರ ಆಗಮನವನ್ನು ಅಂತ್ಯ ದಿನದ ಪ್ರಥಮ ಸೂಚನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ‌. ಪೂರ್ವ ಕಾಲದಲ್ಲಿ ನಡೆದ ಘಟನೆಯೊಂದನ್ನು ಕೆಲವರು ಈ ರೀತಿ ವಿವರಿಸುತ್ತಾರೆ. ಹಿಜಿರಾ 454ರಲ್ಲಿ ಖುರಾಸಾನ ದೇಶದಲ್ಲಿ ಒಂದು ಬೃಹತ್ ಸುಂಟರಗಾಳಿ ಬೀಸಿತು. ಇದರಿಂದ ಪರ್ವತಗಳು ಒಮ್ಮೆಗೆ ಚದುರಿದವು . ಇದರ ಪರಿಣಾಮ ಎಷ್ಟು ಘೋರವಾಗಿತ್ತೆಂದರೆ ಜನರು ಆ ದಿನ 'ಕಿಯಾಮತ್'. ಸಂಭವಿಸಿತ್ತೆಂದೇ ಭಾವಿಸಿದ್ದರು. ಹೆದರಿ ಕಂಗಾಲಾಗಿದ್ದ ಅವರು ಅಲ್ಲಾಹನೆಡೆಗೆ 'ತೌಬಾ' ಮಾಡಿ ಮರಳಿದರು. ಅಷ್ಟರಲ್ಲಿ ದೂರದ ಪರ್ವತ ಶ್ರೇಣಿಯ ನಡುವಿನಿಂದ ಒಂದು ಪ್ರಕಾಶ ಹೊರ ಹೊಮ್ಮುವುದು ಕಾಣಿಸಿತು. ಆ ಪ್ರಭೆಯನ್ನು ಹಿಂಬಾಲಿಸುತ್ತಾ ಜನರು ಅದರ ಹತ್ತಿರ ತೆರಳಿದರು. ಅಲ್ಲಿ ಒಂದು ಮೊಳ ಉದ್ದ ಹಾಗೂ ಮೂರು ಬೆರಳು ಅಗಲದ ಒಂದು ಬಂಡೆಕಲ್ಲು ಕಾಣಿಸಿತು. ಅದರಲ್ಲಿ ಮೂರು ಪವಿತ್ರ ವಾಕ್ಯಗಳು ಬರೆಯಲ್ಪಟ್ಟಿದ್ದವು. ಮೊದಲನೆಯದು  "ಲಾಹಿಲಾಹ ಇಲ್ಲಲ್ಲಾಹ್". ಎರಡನೇಯದು  " ಮುಹಮ್ಮದ್ ರಸೂಲುಲ್ಲಾಹ್". ಹಾಗೂ ಮೂರನೇಯ ಬರಹ "ಅಂತ್ಯ ದಿನ ಸಮೀಪಿಸುತ್ತಿದೆ. ಜಾಗೃತೆ". ಎಂದಾಗಿತ್ತು.

      *ವಿಜ್ಞಾನ ಏನನ್ನುತ್ತದೆ ?*
     ಪ್ರಕೃತಿಯಲ್ಲಿ ಕಾಣುವ ಎಲ್ಲಾ ವಸ್ತುಗಳಿಗೂ ಒಂದು ಕೊನೆ ಇದೆ. ಆ ನಂತರವಾದ ಅಸ್ಥತ್ವ ಇರುವುದು ಸರ್ವಶಕ್ತನಾದ ಸೃಷ್ಟಿ ಕರ್ತನಿಗೆ ಮಾತ್ರ. ಜನನವೇ ಮರಣದ ಪ್ರಥಮ ಸೂಚನೆ‌. ಈ ವಿಶ್ವಕ್ಕೆ ಅಂತ್ಯವಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತುಗೊಂಡಿದೆ.

     ಇಲ್ಲಿನ ಅಸಂಖ್ಯ ಖಗೋಳಗಳು ಪರಸ್ಪರ ಆಕರ್ಷಣಾ ಶಕ್ತಿ ಒಂದೊಮ್ಮೆ ವಿಫಲಗೊಂಡಲ್ಲಿ ಎಲ್ಲವೂ ಒಂದಕ್ಕೊಂದು ಎದುರು ಬದುರಾಗಿ ಡಿಕ್ಕಿ ಹೊಡೆದು ನೆಲಕಪ್ಪಳಿಸುವುದರಲ್ಲಿ ಅನುಮಾನವಿಲ್ಲ. ಈ ಭೂಮಿಯ ಒಳ ಭಾಗವು ದ್ರಾವಕದಂತೆ ಪ್ರತಿ ದಿನ ಹೆಚ್ಚು ತಾಪದಿಂದ ಏರುತ್ತಾ ಹೋಗುತ್ತಿದೆ.

    " ನಾವು ಒಂದು ಅಗ್ನಿ ಕುಂಡ ಹೊತ್ತಿ ಉರಿಯುತ್ತಿದೆ". ಎನ್ನುವ ಓರ್ವ ವಿಜ್ಞಾನಿಯ ಮಾತು ಬಹಳ ಅರ್ಥವತ್ತಾಗಿದೆ.

  *ಗಗನದಿಂದ ಪಿಶಾಚಿಯ ಉಚ್ಚಾಟನೆ :*  ಅಂತ್ಯ ದಿನಕ್ಕೆ ಸಂಬಂಧಿಸಿದ ಎರಡನೇ ಸೂಚನೆ ಇದು. ಹಿಂದೆ ಪ್ರವಾದಿ(ಸ)ರವರ ಪ್ರಸವ ದಿನದಂದು ಈ ಘಟನೆ ಸಂಭವಿಸಿತ್ತು. ಅನಂತರ ಅವರು ಪ್ರವಾದಿಯಾಗಿ ನೇಮಕಗೊಂಡಾಗ ಇದು ಹಲವು ಬಾರಿ ಕಾಣಿಸಿಕೊಂಡಿತ್ತು. ಆಕಾಶದ ವಿವಿಧ ಭಾಗಗಳಿಂದ ಪಿಶಾಚಿಯನ್ನು ಎಸೆಯುವ ಕ್ರಿಯೆ ನಿರಂತರವಾಗಿ ಸಾಗಿತ್ತು. ಜಿನ್ನ್'ಗಳು ಗಗನಾರೋಹಣ ಮಾಡುತ್ತಿದ್ದರು. ಅವರು ಏಳನೇ ಆಕಾಶದವರೆಗೆ ಹತ್ತಿ ಹೋಗಿ ಮಲಕ್'ಗಳ ಅಧಿಕೃತ ಕ್ಷೇತ್ರದ ಕಾರ್ಯಗಳನ್ನು ವೀಕ್ಷಿಸಿತ್ತಿದ್ದರು. ಮಾನವನ ಜನನ, ಮರಣ, ಉನ್ನತಿ, ಅವನತಿ ಆಯುಷ್ಯ. ಆಪತ್ತು ಇನ್ನಿತರ ವಿವರಗಳನ್ನು ಅಲ್ಲಾಹು ಮಲಕ್'ಗಳಿಗೆ ತಿಳಿಸಿ ಕೊಡುವುದನ್ನು ಜಿನ್ನ್'ಗಳು ಕದ್ದಾಲಿಸಿ ಭೂಮಿಯಲ್ಲಿರುವ ಜ್ಯೋತಿಷ್ಯರಿಗೂ ಋಷಿಮುನಿಗಳಿಗೂ ಸುದ್ದಿ ತಲುಪಿಸುತ್ತಿದ್ದರು.

    ಈಸಾ ನಬಿ(ಅ)ರವರು ಜನಿಸಿದ ವೇಳೆ ಮೂರು ಆಕಾಶಗಳಿಗಿಂತ ಆಚೆಗೆ ಹೋಗುವ ಪ್ರವೇಶಾನುಮತಿಯನ್ನು ಅವರಿಗೆ ನಿಷೇಧಿಸಲಾಯಿತು.ಇದರ ಹಿನ್ನೆಲೆಯಲ್ಲಿ ಅವರು ಬೇರೊಂದು ಉಪಾಯವನ್ನು ಕಂಡುಕೊಂಡರು. ಒಂದನೇಯ ಆಕಾಶದ ಬಾಗಿಲ ಬಳಿ ಹೋಗಿ ಮಲಕ್'ಗಳು ಬರೆಯುತ್ತಿದ್ದ ಲೇಖನಿಯ ಶಬ್ಧಗಳನ್ನು ಕದ್ದಾಲಿಸಲು ಪ್ರಾರಂಭಿಸಿದರು. ಅಂತ್ಯ ದಿನದ ಒಂದು ಅಸಂಗತ ಮುಖವನ್ನು ಈ ಘಟನೆ ನಮಗೆ ಮನದಟ್ಟು ಮಾಡಿ ಕೊಡುತ್ತದೆ. ಆರನೇ ಶತಮಾನದಲ್ಲಿ ಒಂದು ಘಟನೆ ನಡೆಯಿತು. ಆಕಾಶದಿಂದ ನಕ್ಷತ್ರಗಳೆಲ್ಲವೂ ಜಪಮಾಲೆ ತುಂಡರಿಸಿದ ಮಣಿಗಳಂತೆ ಒಂದೊಂದಾಗಿ ಕೆಳಗುರುಳಿ ಬಿದ್ದವು. ವಾಯು ಮಂಡಲದಲ್ಲಿ ಹಕ್ಕಿಗಳು ಭಯ ಭೀತಿಯಿಂದ ಅತ್ತಿತ್ತ ಹಾರಡ ತೊಡಗಿದ್ದವು. ಒಂದು ಸಂಜೆ ಹೊತ್ತಿಗೆ ಪ್ರಾರಂಭಗೊಂಡ ಈ ಘಟನೆ ಮರುದಿನ ಬೆಳಗ್ಗಿನ ಜಾವದವರೆಗೆ ಮುಂದುವರೆಯಿತು. ಜನರು ಅಂತ್ಯ ದಿನ ಸಂಭವಿಸಿತೆಂದು ಭಾವಿಸಿ 'ತೌಬಾ' ಮಾಡಿಕೊಂಡು ಅಲ್ಲಾಹನೆಡೆಗೆ ದುಃಖಿಸಿ ಮರಳಿದರು.

  *ಚಂದ್ರ ಹೋಳಾದ ಘಟನೆ :* ಪ್ರವಾದಿ(ಸ.ಅ)ರವರ ಆಗಮನದೊಂದಿಗೆ ಅಂತ್ಯ ದಿನದ ಸೂಚನೆ ಕಾಣಲಾರಂಭಿಸಿದೆ. ಆ ನಮ್ಮ ಪ್ರವಾದಿ(ಸ.ಅ) ಅಂತಿಮ ಪ್ರವಾದಿಯಾಗಿದ್ದಾರೆ. ಪ್ರವಾದಿ ಮಹಮ್ಮದ್(ಸ.ಅ)ರವರಿಗಿಂತ ಮುಂಚೆ ಎಷ್ಟೋ ಪ್ರವಾದಿಗಳು ಈ ಭೂಮಿಗೆ ದೀನೀ ಪ್ರಬೋಧನೆಗಾಗಿ ಬಂದು ಹೋಗಿದ್ದಾರೆ.ಆ ನಂತರ ಅಂತಿಮ ಪ್ರವಾದಿ ಸಯ್ಯುದುನಾ ಮುಹಮ್ಮದುರ್ರಸೂಲುಲ್ಲಾಹಿ (ಸ.ಅ) ಈ ಜಗತ್ತಿಗೆ ಅನುಗ್ರಹವಾಗಿ ಬಂದಿದ್ದಾರೆ. ಪ್ರವಾದಿ ಮಹಮ್ಮದ್ (ಸ.ಅ)ಮರ ನಂತರ ಇನ್ನೊಂದು ಪ್ರವಾದಿ ಬರಲಿಕ್ಕಿಲ್ಲ. ಪ್ರವಾದಿ (ಸ.ಅ) ಮರ ಜನನ ಕಿಯಾಮತ್ ದಿನದ ಪ್ರಥಮ ಸೂಚನೆಯಾಗಿದೆ.

 ಈ ಪೈಕಿ ಅತ್ಯಂತ ದೊಡ್ಡ ನಿದರ್ಶನವೆಂದರೆ ಚಂದ್ರ ತುಂಡಾದ ಘಟನೆ. ಇದು ಮಕ್ಕಾ ನಗರದಲ್ಲಿ ಸಂಭವಿಸಿತು. ಚಂದ್ರ ಹೋಳಾದ ಈ ಘಟನೆಯನ್ನು ಎರಡು ವಿಭಿನ್ನ ಸಂಧರ್ಭಗಳಿಗೆ  ಸಮನ್ವಯಗೊಳಿಸಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಕುರ್'ಆನಿನ ಭಾಷಾ ಶೈಲಿಯ ಪ್ರಕಾರ ಭೂತಕಾಲ ಕ್ರಿಯೆಯನ್ನು  ಬಳಸಿ ಭವಿಷ್ಯತ್ ಕಾಲವನ್ನು ಉದ್ದೇಶಿಸುವ ವಿಧಾನ ಹೇರಳಾಗಿದೆ. ಈ ಅರ್ಥ ಪ್ರಕಾರ ಗ್ರಹಿಸಿದರೆ ಅಂದು ಚಂದ್ರ ಹೋಳಾದ ಘಟನೆ ನಡೆದದ್ದು ಅಂತ್ಯ ದಿನದ ಸೂಚನೆಯಲ್ಲ. ಬದಲು ಪ್ರವಾದಿವರ್ಯರ ದೃಷ್ಟಾಂತವದು. ಕೆಲವು ವಿದ್ವಾಂಸರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಸ್ತುತ ಆಯತನ್ನು ಭವಿಷ್ಯತ್ ಕಾಲಕ್ಕೆ ಪೂರಕವಾಗಿ ಅರ್ಥೈಸಿಕೊಂಡರೆ ಮೇಲಿನ ಘಟನೆಯನ್ನು ಅಂತ್ಯ ದಿನದ ಸೂಚನೆ ಎಂದು ಒಪ್ಪಲೇ ಬೇಕು. ಆಗ ಮುಂದೆ ನಡೆಯಲಿರುವ ಚಂದ್ರನ ವಿಭಜನೆಯ ಬಗ್ಗೆ ಕುರ್'ಆನ್ ಮೊದಲೇ ಹೇಳಿತು ಎಂದಾಗುತ್ತದೆ.

  *ಮಾನವನೊಂದಿಗೆ ಪ್ರಾಣಿಗಳ ಮಾತು :*  ಒಮ್ಮೆ ಕುರುಬನೊಬ್ಬ ಕುರಿ ಮೇಯಿಸುತ್ತಿದ್ದ ಅಷ್ಟರಲ್ಲಿ ತೋಳವೊಂದು ಓಡಿ ಬಂದು ಅವರ ಕುರಿಯನ್ನು ಹಿಡಿದುಕೊಂಡು ಹೋಯಿತು. ಇದನ್ನು ಗಮನಿಸುತ್ತಿದ್ದ ಗ್ರಾಮ ನಿವಾಸಿಯೊಬ್ಬ ತೋಳವನ್ನು ಹಿಂಬಾಳಿಸುತ್ತಾ ಹೋಗಿ ಕುರಿಯನ್ನು ಹಿಂತೆಗೆದು ತರಲು ಪ್ರಯತ್ನಿಸಿದಾಗ ತೋಳವು ಅವನಲ್ಲಿ  "ಅಲ್ಲಾಹನು ನನಗೆ ಒದಗಿಸಿದ ಈ ಆಹಾರವನ್ನು ನನ್ನಿಂದ ಕಸಿಯಲು ಬಂದೆಯಾ?" ಎಂದು ಕೇಳಿತು.  ನಂತರ ಪ್ರವಾದಿ(ಸ.ಅ)ರವರು ಅಂತ್ಯ ದಿನದ ಕುರಿತು ಭವಿಷ್ಯ ನುಡಿದ ಘಟನೆಗಳ ಬಗ್ಗೆ ಅದು ವಿವರಿಸಿತು. ಕುರುಬನು ತನ್ನ ಕುರಿಯನ್ನು ತೆಗೆದುಕೊಂಡು ಹೋಗಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಬಳಿಕ ಪ್ರವಾದಿ(ಸ.ಅ)ರವರನ್ನು ಭೇಟೆ ಮಾಡಲು ಮದೀನಾಕ್ಕೆ ತೆರಳಿ ನಡೆದ ಸಂಗತಿಗಳನ್ನು ಅವರಿಗೆ ತಿಳಿಸಿದ್ದನು. ಆಗ ಪ್ರವಾದಿ(ಸ.ಅ)ವರ್ಯರು  "ತೋಳ ಹೇಳಿದ್ದು ಸತ್ಯ. ಪ್ರಾಣಿಗಳು ಮನುಷ್ಯನೊಂದಿಗೆ ಮಾತನಾಡುವುದು ಅಂತ್ಯ ದಿನದ ಸೂಚನೆಯಾಗಿದ್ದು. ನನ್ನ ದೇಹ ಯಾರ ಕೈಯಲ್ಲಿದೆಯೋ ಅವನ ಮೇಲೆ ಆಣೆ ಹಾಕಿ ಹೇಳುತ್ತೇನೆ. ತನ್ನ ಚಪ್ಪಲ ಪಟ್ಟಿಯೊಂದಿಗೆ, ಬೆತ್ತದ ಹಿಡಿಯೊಂದಿಗೆ ಮಾತನಾಡುವ ಪರಿಸ್ಥಿತಿ ಬರುವವರೆಗೂ ಅಂತ್ಯ ದಿನ ಸಂಭವಿಸಲಾರದು. ಎಂದರು.

  *ವಿಶ್ವ ಪ್ರವಾದಿ(ಸ‌.ಅ)ಯ ಕಣ್ಮರೆ :*  ಪ್ರವಾದಿ(ಸ.ಅ)ರವರ ಆಗಮನ ಹೇಗೆ ಅಂತ್ಯ ದಿನದ ಲಕ್ಷಣವಾಗಿದೆಯೋ ಹಾಗೆಯೇ ಅವರ ನಿರ್ಗಮನ ಕೂಡಾ ಅಂತ್ಯ ದಿನದ ಲಕ್ಷಣವೇ ಆಗಿದೆ. ನನ್ನ ಮರಣವು ಅಂತ್ಯ ದಿನದ ಪ್ರಥಮ ಸೂಚನೆ ಎಂದು ಸ್ವತಃ ಪ್ರವಾದಿ(ಸ.ಅ)ರವರೇ ಹೇಳಿದ್ದುಂಟು. ಈಗ ದೈಹಿಕವಾಗಿ ನಮ್ಮ ನಡುವೆ ಇಲ್ಲ. ಇಹಲೋಕದಲ್ಲಿ ಅವರನ್ನು ನೋಡುವ ಭಾಗ್ಯ ನಮಗೆ ದೊರೆಯದೇ ಹೋಯಿತು. ಈಗ ನಮ್ಮ ಮುಂದೆ ಉಳಿದಿರುವುದು ಅವರ ಪಾವನ ಸಮಾಧಿಯ. " ಝಿಯಾರತ್" ಮಾಡುವ ಮಾರ್ಗವೊಂದೇ.

    ಯಾರು ನನ್ನನ್ನು ಸಂದರ್ಶಿಸುತ್ತಾರೋ(ಝಿಯಾರತ್) ಅವರಿಗೆ ನನ್ನ ಶಫಾಅತ್ ಖಂಡಿತಾ ಲಭಿಸುವುದೆಂದು ಪ್ರವಾದಿ(ಸ.ಅ) ಹೇಳಿದ್ದಾರೆ. ಅವರು ಕಣ್ಮರೆಯಾಗಿ 1400 ವರ್ಷಗಳು ಕಳೆದಿದೆ. ಅವರು ಇಡೀ ಜಗತ್ತಿಗೆ ಸನ್ಮಾರ್ಗದ ಪ್ರಭೆಯನ್ನು ಹರಿಸಲು ಬಂದ ಓರ್ವ ಮಹಾನ್ ವ್ಯಕ್ತಿಯಾಗಿದ್ದರೂ ಅವರಿಗೆ ಅಲ್ಲಾಹನು ನೀಡಿದ ಜೀವಿತಾವಧಿ ಮಾತ್ರ ಕೇವಲ 63 ವರ್ಷ ಮಾತ್ರ. ಈ ಅಲ್ಪಾವಧಿಯಲ್ಲಿ ಅವರು ಮಾಡಿದ ಸಾಧನೆ ಗಳಿಸಿದ ಖ್ಯಾತಿ ಮನ್ನಣೆಗಳು ವಿಶ್ವದ ಚರಿತ್ರೆಯಲ್ಲೇ ಅದ್ವಿತೀಯವಾದುದು. ಅವರ ಜೀವಿತ ಕಾಲದಲ್ಲಿ ದೊರೆತ ಕೀರ್ತಿ ಗೌರವಗಳಿಗೆ ನೂರ್ಮುಡಿ ಹೆಚ್ಚಾಗಿ ಇಂದಿಗೂ ಸಾವಿರದ ನೂರಾರು ವರ್ಷಗಳಲ್ಲಿ ಸಲ್ಲುತ್ತಿರುವ ಗೌರವ ಅಪಾರವಾದುದು. ಅದವಿತೀಯವಾದುದು, ಅದ್ಬುತವಾದುದು!

*ಉಸ್ಮಾನ್(ರ)ರವರ ಹತ್ಯೆ :*   ಹಝ್ರತ್ ಹುದೈಫ(ರ) ಹೇಳುತ್ತಾರೆ;   ಈ ಸಮುದಾಯದ ಪ್ರಥಮ ಕ್ಷೋಭೆ ಉಸ್ಮಾನ್(ರ)ರವರ ಹತ್ಯೆಯಾದರೆ ಕೊನೆಯ ಕ್ಷೋಭೆ ದಜ್ಜಾಲನ ಆಗಮನವಾಗಿರುತ್ತದೆ.". ಉಸ್ಮಾನ್(ರ)ರವರ ಹತ್ಯೆಯನ್ನು ಖಂಡಿಸಿ ಆ ಕಾಲದಲ್ಲಿ ಇಡೀಯ ಮುಸ್ಲಿಂ ಸಮುದಾಯ ಘೋರ ಪ್ರತಿಭಟನೆ ನಡೆಸಿತು. ಉಸ್ಮಾನ್(ರ) ಅವರ ಹತ್ಯೆಯನ್ನು  ಬೆಂಬಲಿಸುವ ಜನಕ್ಕೆ ಹದೀಸ್'ಗಳಲ್ಲಿ ಬಂದಿರುವ ಕಠೋರ ಶಿಕ್ಷೆ ಮತ್ತು ಭೀಕರ ಎಚ್ಚರಿಕೆಗಳು ಉಸ್ಮಾನ್(ರ) ಎಷ್ಟೊಂದು ದೊಡ್ಡ ಮಹಾತ್ಮರಾಗಿದ್ದರು ಎಂಬುವುದನ್ನು  ಪ್ರಸ್ತುತ ಪಡಿಸುತ್ತವೆ. ಉಸ್ಮಾನ್(ರ)ರವರ ಹತ್ಯೆಯಿಂದ  ಜನರು ತಮ್ಮ ಮೇಲೆ ಅಂತ್ಯ ದಿನದವರೆಗೂ ಮುಚ್ಚಲ್ಪಡದ ಫಿತ್'ನದ ಬಾಗಿಲೊಂದನ್ನು  ತೆರೆದುಕೊಂಡರೆಂದು ಅಬ್ದುಲ್ಲಾಹಿ ಬಿನ್ ಸಲಾಂ(ರ) ಎಂಬ ಮಹಾತ್ಮರು ಹೇಳಿದ್ದಾರೆ. ಉಸ್ಮಾನ್(ರ) ಅವರ ಹತ್ಯೆ ಮುಸ್ಲಿಂ ವಿಶ್ವದ ಒಂದು ಘೋರ ದುರಂತ. ಮನುಷ್ಯನು ಕಠಿಣ ಹೃದಯಿಯಾಗಿ ಪರರನ್ನು ಪೀಡಿಸಿ ಮರ್ಧಿಸಿ ಬದುಕಲೆತ್ತಿಸುವ ದ್ವೇಷ ಹಿಂಸೆಯ ಪ್ರತೀಕ.

*ಮುಂದುವರೆಯುತ್ತದೆ....*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...