Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *4*



*▪ಸ್ವರ್ಗ ಪ್ರವೇಶಿಸುವ ನಾಯಿ!▪*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

           ▪ ನಾಯಿ ಪವಿತ್ರ ಇಸ್ಲಾಮಿನಲ್ಲಿ ಕಠಿಣ ನಜಸ್ *(ನಜಸ್ ಮುಘಲ್ಲಳ್)* ಆಗಿರುತ್ತದೆ. ನಾಯಿ ಸ್ಪರ್ಶಿಸಿದ್ದನ್ನು ಏಳು ಬಾರಿ ತೊಳೆಯಬೇಕೆಂದೂ ಆ ಪೈಕಿ ಒಂದು ಬಾರಿ ಮಣ್ಣಿನಿಂದ ಆಗಿರಬೇಕೆಂಬ ಕಡ್ಡಾಯ ನಿಯಮವಿದೆ. ಆದಾಗ್ಯೂ ನಾಯಿಯನ್ನು ಇಸ್ಲಾಂ ಯಾವತ್ತೂ ಹೀನವಾಗಿ ಅಥವಾ ಕೀಳು ಮಟ್ಟದ ಪ್ರಾಣಿಯಾಗಿ ಕಾಣೂದಿಲ್ಲ. ಮಾತ್ರವಲ್ಲ ಬಹಳ ಗೌರವ ಮತ್ತು ಮಾನ್ಯತೆಯಿಂದಲೇ ಕಾಣುತ್ತದೆ. ಕುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟ ಗುಹಾವಾಸಿಗಳನ್ನು *(ಅಸ್ಹಾಬುಲ್ ಕಹ್‌ಫ್)* ಹಿಂಬಾಲಿಸಿ ಹೋದ ಕಂದು ಬಣ್ಣದ *"ಖಿತ್‌ಮೀರ್"* ಎಂಬ ಹೆಸರಿನ ನಾಯಿಯು ಸ್ವರ್ಗ ಪ್ರವೇಶದ ವಿಶೇಷ ಪರವಾನಿಗೆ ದೊರೆತ ಕೆಲವು ಪ್ರಾಣಿಗಳಲ್ಲಿ ಒಂದಾಗಿದೆ. ಪವಿತ್ರ ಕುರ್‌‌ಆನಿನ *"ಅಲ್ ಕಹ್‌ಫ್"* ಎಂಬ ಅಧ್ಯಾಯದಲ್ಲಿ ಈ ನಾಯಿಯ ಬಗ್ಗೆ ಧೀರ್ಘವಾದ ಒಂದು ಉಲ್ಲೇಖವಿದೆ.
  ▪ ಮಾಲಿಕಿ ಮಝ್‌ಹಬ್ ಹೊರತು ಇಸ್ಲಾಮಿನ ಇತರ ಮೂರು ಮಝ್‌ಹಬ್‌ಗಳಲ್ಲೂ ನಾಯಿ ನಜಸ್(ಮಲಿನ) ಆಗಿರುತ್ತದೆ. ಮಾಲಿಕಿಯಲ್ಲಿ ನಜಸ್ ಅಲ್ಲದಿದ್ದರೂ ಕುರ್‌ಆನಿನ ಆಜ್ಞೆ ಮತ್ತು ನಿಯಮ ಪಾಲನೆ ಎಂಬ ದೃಷ್ಟಿಯಿಂದ ಏಳು ಬಾರಿ ತೊಳೆಯುವುದು ಕಡ್ಡಾಯವಾಗಿರುತ್ತದೆ.
   ▪ನಾಯಿ ಯಾವಾಗಲೂ ಕ್ರಿಯಾಶೀಲನಾಗಿರುವ  ಒಂದು ಸಾಕುಪ್ರಾಣಿ. ಸೋಮಾರಿತನ, ಅಲಸ್ಯ, ಜಡತನ ಎಂಬುದು ನಾಯಿಗೆ ಗೊತ್ತೇ ಇಲ್ಲ. ಯಾವಾಗಲೂ ಉತ್ಸಾಹಿಯಾಗಿರುವ ನಾಯಿಗೆ ತನ್ನ ಯಜಮಾನನೊಂದಿಗೆ ಬೇಟೆಯಾಡಲು ಹೋಗುವುದೆಂದರೆ ಎಲ್ಲಿಲ್ಲದ ಖುಷಿ.
  ▪ಗರ್ಭಧಾರಣೆಯಾಗಿ ಬರೇ ಎರಡೇ ತಿಂಗಳಲ್ಲಿ  ಮರಿ ಹಾಕುವ ನಾಯಿಯು ಸಾಧಾರಣ ಎರಡರಿಂದ ಆರರ ತನಕ ಮಕ್ಕಳಿಗೆ ಜನ್ಮ ನೀಡುತ್ತದೆ. ಕೆಲವೊಮ್ಮೆ ಆದು ಹತ್ತರ ತನಕ ಮುಟ್ಟುವುದೂ ಉಂಟು. ಹುಟ್ಟಿದ ನವಜಾತ ನಾಯಿಮರಿಯ ಕಣ್ಣು ಹುಟ್ಟಿದಂದಿನಿಂದ ಹನ್ನೆರಡು ದಿನಗಳ ತನಕ ಸಂಪೂರ್ಣ ಮುಚ್ಚಿರುತ್ತದೆ. ನಂತರ ಅದಾಗಿಯೇ ತೆರೆಯುತ್ತದೆ.
   ▪ಸುಮಾರು 15 ರಿಂದ 20 ವರ್ಷ ಬದುಕುವ ನಾಯಿಗೆ ನಿದ್ದೆ ಬಹಳ ಕಡಿಮೆ. ರಾತ್ರಿ ವೇಳೆಯಲ್ಲಿ ಯಾವಾಗಲೂ ಎಚ್ಚರದಿಂದಿರುತ್ತದೆ. ಹಗಲು ಹೊತ್ತಿನಲ್ಲಿ ಮಾತ್ರ ಸ್ವಲ್ಪ ನಿದ್ದೆ ಮಾಡುತ್ತದೆ. ಆದರೆ ಯಾವ ಗಾಢ ನಿದ್ದೆಯಲ್ಲಿದ್ದರೂ ಶ್ರವಣಶಕ್ತಿಗೆ ಯಾವುದೇ ಬದಲಾವಣೆ ಅಥವಾ ಕೊರತೆ  ಇರುವುದಿಲ್ಲ. ನಿದ್ದೆಯಲ್ಲಿರುವಾಗಲೂ ಚೆನ್ನಾಗಿ ಕೇಳುತ್ತದೆ.  ಅಲ್ಲಾಹುವಿನ ಸೃಷ್ಟಿಗಳಲ್ಲಿ ಇಷ್ಟೊಂದು ಬಲಿಷ್ಠ ಶ್ರವಣ ಶಕ್ತಿ ಇರುವ ಜೀವಿ ಬೇರೊಂದಿಲ್ಲ. ರಾತ್ರಿ ಹೊತ್ತಿನಲ್ಲಿ ಸೂಜಿ ಕೈಯಿಂದ ಬಿದ್ದರೆ ಉಂಟಾಗುವ ಶಬ್ದ ಕೂಡ ನಾಯಿಗೆ ತಿಳಿಯುತ್ತದೆ.
  ▪ಅಂತೆಯೇ ಮೂಗಿನಿಂದ ಮೂಸಿ ನೋಡುವ ಘ್ರಾಣ ಶಕ್ತಿಯಲ್ಲೂ ನಾಯಿ ಅಗ್ರಗಣ್ಯ. *"ಸುಲೂಖಿಯ್ಯಿ"* ಎಂಬ ಜಾತಿಯ ನಾಯಿಗೆ ಒಬ್ಬನನ್ನು ಅಥವಾ ಅವನು ಸ್ಪರ್ಶಿಸಿದ ಜಾಗವನ್ನು ಒಮ್ಮೆ ಮೂಸಲು ಕೊಟ್ಟು, ನಂತರ ವರುಷಗಳು ಕಳೆದರೂ ಆ ವಾಸನೆ ಮತ್ತೆ ಮರುಕಳಿಸಿದರೆ ಆ ನಾಯಿಗೆ ಅದು ತಿಳಿಯುತ್ತದೆ. ಆ ನೆನಪು ತನ್ನ ಕಡತದಲ್ಲಿ  ಹಾಗೆಯೇ ಮಾಯದೆ *(ಡಿಲೀಟ್)* ಇರುತ್ತದೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಪೋಲೀಸರು ಇಂತಹಾ ನಾಯಿಯನ್ನು ಬಳಸುತ್ತಾರೆ.           
   ▪ಬಿಳಿ ಬಣ್ಣದ ವಸ್ತ್ರಧರಿಸಿ ಒಳ್ಳೆ ಸಭ್ಯನಾಗಿ *(ಡೀಸೆಂಟ್)* ನಡೆಯುವವರನ್ನು ಕಂಡರೆ ನಾಯಿ ಅವರಿಗೆ ಒಳ್ಳೆಯ ಗೌರವ, ಮನ್ನಣೆ ಕೊಡುತ್ತದೆ. ಅವರನ್ನು ಕಾಣುವಾಗ   ಬೊಗಳುವುದಿಲ್ಲ. ಮಾತ್ರವಲ್ಲ ಕೆಲವೊಮ್ಮೆ ಅವರಿಗೆ ದಾರಿ ಕೂಡ ಬಿಟ್ಟು ಕೊಡುತ್ತದೆ. ಆದರೆ ವಸ್ತ್ರಧಾರಣೆಯಲ್ಲಿ ಸಭ್ಯತನವಿಲ್ಲದೆ ಟಪೋರಿ, ಕಿಲಾಡಿ,  ಪೋಕರಿಗಳಂತೆ ಕಂಡರೆ ಬೊಗಳುವುದಲ್ಲದೆ ಕೆಲವೊಮ್ಮೆ ಅವರ ಮೇಲೆ ಹಾರುತ್ತದೆ.
  ▪ಕಪ್ಪು ಬಣ್ಣದವರು ಮತ್ತು ಕಪ್ಪು ಬಣ್ಣದ ವಸ್ತ್ರ ಧರಿಸುವವರನ್ನು ಕಂಡರೆ ನಾಯಿಗೆ ಎಲ್ಲಿಲ್ಲದ ಅಲರ್ಜಿ ಮತ್ತು ಅಸಹ್ಯ. ಕೆಲವೊಮ್ಮೆ ಅವರ ಕಥೆಯನ್ನೇ ಮುಗಿಸಿ ಬಿಡುತ್ತದೆ.
  ▪ಒಬ್ಬ ಯಜಮಾನನ ಸಂಪೂರ್ಣ ತರಬೇತಿ ಮತ್ತು ಸಂಸ್ಕಾರದಲ್ಲಿ ಬೆಳೆದು ಬಂದ ನಾಯಿ ತನ್ನ ಮಾಲಿಕನಿಗೆ ಬೇಕಾಗಿ ಯಾವ ತ್ಯಾಗಕ್ಕೂ ಸಿದ್ದನಾಗಿರುತ್ತದೆ. ಅವನ ಹಾಜರಿಯಲ್ಲೂ ಗೈರು ಹಾಜರಿಯಲ್ಲೂ ಅವನು ನಿದ್ರಿಸುತ್ತಿರುವಾಗಲೂ ಎಚ್ಚರದಲ್ಲಿರುವಾಗಲೂ ಅವನಿಗೂ ಅವನ ಎಲ್ಲಾ ಆಸ್ತಿಪಾಸ್ತಿಗೂ ಸಂಪೂರ್ಣ ಕಾವಲುಗಾರನಾಗಿರುತ್ತದೆ. ಅವನು ಆಜ್ಞಾಪಿಸುವ ಯಾವ ಕಷ್ಟದ ಕೆಲಸವನ್ನೂ ಚಾಚೂ ತಪ್ಪದೆ ಮಾಡುತ್ತದೆ. ಅವನ ಕಾನೂನು ನಿಯಮಗಳಿಗೆ ಸಂಪೂರ್ಣ ವಿಧೇಯನಾಗಿರುತ್ತದೆ. ಎಷ್ಟರ ತನಕವೆಂದರೆ ನಾಯಿಯ ತಲೆಯಲ್ಲಿ ಒಂದು ಉರಿಯುತ್ತಿರುವ ಚಿಮಿಣಿಯಂತಹಾ  ದೀಪವನ್ನಿಟ್ಟು ಅದರ ಎದುರಲ್ಲೇ ಮಾಂಸದ   ತುಂಡುಗಳನ್ನು ಹಾಕಿದರೂ ಯಜಮಾನನ ಹಸಿರು ನಿಶಾನೆ ಸಿಗುವ ತನಕ ಒಂದಿಷ್ಟೂ ಅಲುಗಾಡದೆ ದೀಪ ನಂದದ ಹಾಗು ಕೆಳಗೆ ಬೀಳದ ರೀತಿಯಲ್ಲಿ ಹಾಗೆಯೇ ಗಂಟೆಗಟ್ಟಲೆ ನಿಲ್ಲುತ್ತದೆ.
  ▪ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಕಾರ್ಯನಿರ್ವಹಣೆ ಇತ್ಯಾದಿ ಉತ್ತಮ ಗುಣ ನಡತೆಯ ವಿಷಯಗಳಲ್ಲಿ ನಾಯಿಗೆ ಸರಿಸಮಾನವಾದ ಪ್ರಾಣಿ ಬೇರೊಂದಿಲ್ಲ.
   ▪ತನ್ನ ಯಜಮಾನನ ಆಸ್ತಿ ಪಾಸ್ತಿಯ ರಕ್ಷಣಾ ಜವಾಬ್ದಾರಿಯು ತನಗಾಗಿರುವುದರಿಂದ ನಾಯಿ ಅಪರೂಪಕ್ಕೆ ರಾತ್ರಿ ನಿದ್ದೆ ಮಾಡುವುದಾದರೂ  ನಿದ್ರಿಸುವಾಗ ತನ್ನ ಕಣ್ಣಿನ ರೆಪ್ಪೆಯನ್ನು ಮಡಚದೆ ಹಾಗೆಯೇ ಬಿಡುತ್ತದೆ. ಮಡಚಿದರೆ ಕೆಲವೊಮ್ಮೆ ಗಾಢ ನಿದ್ದೆಯಲ್ಲಿ ಬೀಳಬಹುದೆಂದು ಭಯದಿಂದ.
  ▪ಕತ್ತೆಕಿರುಬ ಮೃಗವೆಂದರೆ ನಾಯಿಗೆ ಎಲ್ಲಿಲ್ಲದ ಭಯ. ಎಷ್ಟರ ತನಕವೆಂದರೆ ಕತ್ತೆಕಿರುಬನನ್ನು ಮುಖಾಮುಖಿ ಕಂಡರೆ ನಾಯಿ ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತದೆ. ಕತ್ತೆಕಿರುಬನಿಗೆ ನಾಯಿಯ ನೆರಳನ್ನು ಕಂಡರೆ ಕೂಡ ಆಗದು. ಅಷ್ಟಕ್ಕೂ ವೈರಾಗ್ಯ. ಚಂದ್ರ ಬೆಳಕು ಇರುವ ರಾತ್ರಿ ಬೆಟ್ಟ, ಗುಡ್ಡ ಮುಂತಾದ ಎತ್ತರದ  ಜಾಗದಲ್ಲಿ ನಡೆಯುವಾಗ ಬೆಟ್ಟದ ಬುಡಕ್ಕೆ ಬೀಳುವ ನಾಯಿಯ ನೆರಳು ಕತ್ತೆಕಿರುಬನ ಮೇಲೆ ಬಿದ್ದರೆ ತನ್ನ ತಡೆಯಲಾಗದ ಸಿಟ್ಟಿನ ಪರಾಕಾಷ್ಟೆಯಿಂದ ನಾಯಿಯ ಮೇಲೆ ಹಾರಿ ನಾಯಿಯನ್ನು ನಿರಾಯಾಸ ಕೊಂದು ಬಿಡುತ್ತದೆ.
  ▪ಮಾಂಸಾಹಾರಿಯಾದ ನಾಯಿಗೆ ತಾಜಾ ಮಾಂಸಕ್ಕಿಂತ ಕೆಟ್ಟು ಕೊಳೆತದ್ದೇ ಇಷ್ಟ. ಕೊಳೆತ ಶವ ದೊರೆತರೆ ಆದಿನ ನಾಯಿಗೆ ಸಡಗರವೇ ಸೈ....
▪ಬಾಲ ಅಲ್ಲಾಡಿಸುವುದು,  ನೋವಾಗದಂತೆ ಯಜಮಾನನ ಕಾಲಿಗೆ ಕಚ್ಚುವುದು ಇದೆಲ್ಲಾ ಯಜಮಾನನಲ್ಲಿರುವ ಪ್ರೀತಿ ಮಮತೆ,ನಮ್ರತೆ ಅಂತೆಯೇ ಅವನಿಗೆ ಕೊಡುವ ಗೌರವದ ನಿಶಾನೆ ಮತ್ತು ಸೂಚನೆಯಾಗಿದೆ.
   ▪ನಾಯಿ ಮಧ್ಯರಾತ್ರಿ ನಂತರ ಬೊಗಳುವುದನ್ನು ಕೇಳಿದರೆ *"ನೀವು ಅಲ್ಲಾಹುವಿನಲ್ಲಿ ಶೈತಾನನಿಂದ ಕಾವಲನ್ನು ಯಾಚಿಸಿರಿ.ಯಾಕೆಂದರೆ ನಿಮ್ಮ ಕಣ್ಣಿಗೆ ಗೋಚರವಾಗದ ಹಲವಾರು ಸಂಗತಿ ನಾಯಿಯ ಕಣ್ಣಿಗೆ ಗೋಚರವಾಗುತ್ತದೆ"* ಎಂದು ಸಹೀಹಾದ ಹದೀಸಿನಲ್ಲಿದೆ.
  ▪ಪ್ರವಾದಿ ಆದಂ (ಅ)ರು ಸ್ವರ್ಗ ಲೋಕದಿಂದ ಭೂಮಿಗೆ ಬಂದಾಗ ಅವರ ಮೇಲೆ  ಆಕ್ರಮಣ ನಡೆಸಲು ಅವರ ಕಟ್ಟಾ ವೈರಿ ಇಬ್ಲೀಸನು (ಲ) ನಾಯಿಯನ್ನು ಬಿಟ್ಟಿದ್ದ. ಆಗ ಆದಂ (ಅ) ರು ಜಿಬ್ರೀಲ್ (ಅ) ರ ಆದೇಶ ಪ್ರಕಾರ ಬಂದ ನಾಯಿಯ ಬೆನ್ನಿನ ಮೇಲೆ ತನ್ನ ಪವಿತ್ರ ಕೈಯಿಂದ  ಸವರಿದರು. ಸುಬ್ಹಾನಲ್ಲಾ...!! ಆಕ್ರಮಣ ಮಾಡಲು ಬಂದ ನಾಯಿ ಆದಂ (ಅ)ರ ಕೈಯ ಬರಕತ್ತಿನಿಂದ ಅವರ ಕಾವಲುಗಾರನಾಗಿ ಅಲ್ಲಿ ನಿಂತಿತು. ಮಾತ್ರವಲ್ಲ, ತಂದೆಗೆ ಕಾವಲುಗಾರನಾದ ಈ ನಾಯಿಯ ಪಾರಂಪರ್ಯ ಆದಂ (ಅ)ರ ಸಂತಾನ ಪರಂಪರೆಗೆ ಅಂತ್ಯ ದಿನದ ವರೆಗೂ ಪಹರೆಗಾರನಾಗಿ ಇರುತ್ತದೆ.
  ▪ಆದಂ (ಅ) ರ ನಂತರ ನಾಯಿಯನ್ನು ಕಾವಲಿಗೆ ಬಳಸಿದ್ದು ಪ್ರವಾದಿ ನೂಹ್ (ಅ) ಆಗಿರುತ್ತಾರೆ. ಜಗತ್ತಿನ ಪ್ರಪ್ರಥಮ ಹಡಗು    ನಿರ್ಮಾಣವಾಗುತ್ತಿರುವಾಗ ಅವರ ಶತ್ರುಗಳು  ನಿರ್ಮಾಣದಲ್ಲಿರುವ ಹಡಗನ್ನು ನಾಶ ಮಾಡಲು ರಾತ್ರಿ ಹೊತ್ತು ಯತ್ನಿಸುತ್ತಿದ್ದರು. ಆಗ ನೂಹ್ (ಅ) ರು ನಾಯಿಯನ್ನು  ಹಡಗಿನತ್ತ ಕಾವಲಿಗೆ ನಿಲ್ಲಿಸಿದ್ದರು. ಹಡಗನ್ನು ಹಾನಿ ಮಾಡಲು ವೈರಿಗಳು ಬಂದರೆ ನಾಯಿ ದೊಡ್ಡ ದ್ವನಿಯಿಂದ ಬೊಗಳುತ್ತಿತ್ತು. ಇದರಿಂದಾಗಿ ಹಡಗು ನಿರ್ಮಾಣ ಕಾಮಗಾರಿ ಅಡಚಣೆ ಇಲ್ಲದೆ ಸುಲಭವಾಗಿ ನಡೆಯಿತು.
  ▪ ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ಹಡಗು ನಿರ್ಮಾಣ ಆದ ನಂತರ ಜಗತ್ತು ಕಂಡ ಅತಿ ದೊಡ್ಡ ಜಲಪ್ರಳಯ ಸಂಧರ್ಭದಲ್ಲಿ ನೂಹ್ (ಅ) ರು ಅಲ್ಲಾಹುವಿನ ನಿರ್ದೇಶದಂತೆ ಸತ್ಯ ವಿಶ್ವಾಸಿಗಳಲ್ಲದೆ ಎಲ್ಲಾ ಜೀವರಾಶಿಗಳಿಂದಲೂ ಒಂದು ಗಂಡು ಮತ್ತು ಒಂದು ಹೆಣ್ಣನ್ನು ತನ್ನ ಹಡಗಿನಲ್ಲಿ ಹತ್ತಿಸಿದ್ದರು. (ಸಂತಾನ ನಶೀಕರಣ ಆಗದಿರಲು)  ಪ್ರಳಯ ಭೂಮಿಯಲ್ಲಿ‌ ಹಡಗು ಚಲಿಸುತ್ತಿರುವಾಗ ನೂಹ್ (ಅ) ರು ಒಂದು ಆಜ್ಞೆ ಹೊರಡಿಸಿದರು. *"ಇದೊಂದು ಉಲ್ಲಾಸ ಅಥವಾ ಪಿಕ್‌ನಿಕ್ ಯಾತ್ರೆ ಅಲ್ಲ. ಎಲ್ಲರೂ ಅಲ್ಲಾಹನನ್ನು ಭಯಪಡಬೇಕಾದ ಸಮಯವಾಗಿದೆ ಇದು. ಆದಕಾರಣ ಯಾರೂ ಮನರಂಜನೆ ಅಥವಾ ವಿನೋದಗಳಲ್ಲಿ  ತಲ್ಲಿನರಾಗಬಾರದು. ಎಲ್ಲರೂ ಆರಾಧನೆಯಲ್ಲಿರಬೇಕು. ಮಾತ್ರವಲ್ಲ ಯಾವ ಕಾರಣಕ್ಕೂ ನೀವು ಲೈಂಗಿಕ ಚಟುವಟಿಕೆಗಳಲ್ಲಿ  ಏರ್ಪಡಬಾರದು."*
  ▪ಪ್ರವಾದಿ ನೂಹ್ (ಅ) ರ ಈ ತಾಕೀತನ್ನು ಎಲ್ಲರೂ ತಪ್ಪದೆ ಪಾಲಿಸಿದ್ದರು.ಆದರೆ ನಾಯಿ ಮಾತ್ರ ತನ್ನ ಒಟ್ಟಿಗಿರುವ ಸಂಗಾತಿಯೊಂದಿಗೆ ಆಗಾಗ್ಗೆ ನೂಹ್ (ಅ)ರ ಕಣ್ಣು ತಪ್ಪಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿತ್ತು. ಇದನ್ನು ಕಂಡ ಬೆಕ್ಕು ನಾಯಿಯಲ್ಲಿ ಹೇಳಿತು. *"ನೀನು ಹೀಗೆ ಮಾಡುವುದು ಸರಿಯಲ್ಲ. ಮಾಡಿದ್ದಾಯಿತು. ಇನ್ನೂ ಪುನರಾವರ್ತನೆ ಮಾಡುವುದಾದರೆ ನಾನು ನೂಹ್ (ಅ) ರಿಗೆ ನಿನ್ನ ಬಗ್ಗೆ ದೂರು ಕೊಡುತ್ತೇನೆ."* ಆದರೆ ಬೆಕ್ಕಿನ ಉಪದೇಶ ನಾಯಿಗೆ ಫಲಕಾರಿಯಾಗಲಿಲ್ಲ. ನಾಯಿ ಅವಕಾಶ ಸಿಕ್ಕಿದಾಗಲೆಲ್ಲ ಒಳ್ಳೆ ಮಜಾ ಮಾಡುತ್ತಲೇ ಇತ್ತು. ಕೊನೆಗೆ ಸಿಟ್ಟುಗೊಂಡ ಬೆಕ್ಕು ನೂಹ್ (ಅ) ರಿಗೆ ವಿಷಯ ತಿಳಿಸಿತು. ಆದರೆ ನೂಹ್ (ಅ)ರು ಬರುವಾಗ ನಾಯಿ ಏನೂ ತಿಳಿಯವದರಂತೆ ಒಳ್ಳೆ ಸೊಬಗನಾಗಿ ನಟನೆ ಮಾಡುತ್ತಿತ್ತು. ಪ್ರವಾದಿಯವರ ಕಣ್ಣು ತಪ್ಪಿದರೆ ಮಜವೇ ಮಜ. ಕೊನೆಗೆ ಬೇಸರಗೊಂಡ ಈ ಬಡಪಾಯಿ ಬೆಕ್ಕು ಅಲ್ಲಾಹನಲ್ಲಿ ದುಆ ಮಾಡಿತು.  *"ಇನ್ನೊಮ್ಮೆ  ನಾಯಿ ಈ ಕೃತ್ಯ ಮಾಡಿದರೆ ನೂಹ್ (ಅ) ಬರುವಾಗ  ಅವರಿಗೆ ಸ್ವಂತ ಕಣ್ಣಲ್ಲಿ ಪ್ರತ್ಯಕ್ಷ ಕಾಣುವ ತನಕ ಈ ಕೃತ್ಯದಿಂದ ವಿರಮಿಸಲಾಗದ ಒಂದು ಪರಿಸ್ಥಿತಿ ಆಗಲಿ"* 
   ▪ಆ ಪ್ರಾರ್ಥನೆಯ ಕಾರಣದಿಂದ ಅಂತ್ಯ ದಿನದ ವರೆಗೆ ನಾಯಿಯ ಲೈಂಗಿಕ ಚಟುವಟಿಕೆಗಳು ಬಹಳ ಬಹಿರಂಗವಾಗಿಯೂ ದೀರ್ಘವಾಗಿಯೂ ಬೆಕ್ಕಿನ ಲೈಂಗಿಕ ಕ್ರಿಯೆ ಬಹಳ ರಹಸ್ಯವಾಗಿಯೂ ಮರೆಯಲ್ಲೂ ಆಗಿರುತ್ತದೆ.
  ▪ಪ್ರಾಚೀನ ಕಾಲದಲ್ಲಿ ಒಮ್ಮೆ ಮಹಿಳೆಯೊಬ್ಬಳು ಮರುಭೂಮಿಯಲ್ಲಿ ಸಂಚಾರ ಮಾಡುತ್ತಿರುವ ವೇಳೆ ಬಾಯಾರಿಕೆಯಾದಾಗ ದಾರಿ ಮಧ್ಯೆ ಕಂಡ ಒಂದು ಆಳವಾದ ಬಾವಿಗಿಳಿದು ಬೇಕಾದಷ್ಟು ನೀರು ಕುಡಿದು ತನ್ನ ದಾಹತೀರಿಸಿ ಮೇಲೇರಿದಾಗ ನಾಯಿಯೊಂದು ತನ್ನಂತೆಯೇ ಬಾಯಾರಿಕೆಯಿಂದ ಬಳಲುತ್ತಿರುವುದನ್ನು ಕಂಡು ಮನನೊಂದ ಅವಳು ಪುನಃ  ಮತ್ತೊಮ್ಮೆ ಅದೇ ಬಾವಿಗಿಳಿದು ತಾನು ಕಾಲಿಗೆ ಧರಿಸಿದ್ದ ಚರ್ಮದ ಕಾಲುಕವಚದಲ್ಲಿ ನೀರು ತುಂಬಿಸಿ ಮೇಲಕ್ಕೆ ತಂದು ನಾಯಿಗೆ ಕುಡಿಸಿದಳು. ಆ ಸತ್ಕರ್ಮದ ಕಾರಣದಿಂದ ಅವಳು ಸಂಪೂರ್ಣ ಪಾಪಮುಕ್ತಳಾಗಿ  ಸ್ವರ್ಗ ಪ್ರವೇಶ ಮಾಡುತ್ತಾಳೆ ಎಂಬ ಘಟನೆಯನ್ನು ಪ್ರವಾದಿ ಮಹಮ್ಮದ್ (ಸಲ್ಲಲ್ಲಾಹು ಅಲೈಹಿ ವ ಸಲ್ಲಮ್) ರು ತನ್ನ ಅನುಚರರಲ್ಲಿ ಹೇಳಿದ್ದನ್ನು ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
   ▪ಒಬ್ಬನು ಅವನು ನಾಯಿಯ ಮಾಂಸವನ್ನು ತಿನ್ನುವ ಅಥವಾ ನಾಯಿಯನ್ನು ಕೊಲ್ಲುವ ಕನಸು ಕಂಡರೆ ಅವನಿಗಿರುವ ಎಲ್ಲಾ ಶತ್ರುಗಳ ಕುತಂತ್ರ ಮತ್ತು ಪಿತೂರಿಗಳಿಂದ ಬಚಾವು (ಗೆಲುವು) ಆಗುವುದರ ನಿಶಾನೆಯಾಗಿದೆ.
   ▪ಒಬ್ಬನಿಗೆ ನಾಯೊಂದು ಬಂದು ಕಚ್ಚುವ ಕನಸು ಕಂಡರೆ ಅವನಿಗೆ ಶತ್ರುಗಳು ಇರುವುದಾದರೆ ಆ ಶತ್ರುಗಳ ಪಿತೂರಿಗೆ ಸೋಲುತ್ತಾನೆ ಎಂಬುದಕ್ಕೆ ಸೂಚನೆಯಾಗಿದೆ. ಅವನ ಮನೆಯಲ್ಲಿ ಪಹರೆಗಾರ ಅಥವಾ ಕೆಲಸದವನು ಇರುವುದಾದರೆ ಕನಸು ಕಂಡ ಈ ಮಾಲಿಕನಿಗೆ ಇವರು ದ್ರೋಹ ಅಥವಾ ವಿಶ್ವಾಸಘಾತಕ ಮಾಡಿ ಪರಾರಿಯಾಗುತ್ತಾರೆ ಎಂಬುದಕ್ಕೆ ಸೂಚನೆಯಾಗಿದೆ. ಇನ್ನು ಈತನಿಗೆ ನವೀನವಾದಿಗಳಾಗಿ ಸಹವಾಸವಿರುವುದಾದರೆ ಅವರ ಬಲೆಯಲ್ಲಿ ಈತ ಸಂಪೂರ್ಣ ಬಿದ್ದು ಈತನೂ ನೂತನವಾದಿ ಆಗುವುದರ ಸಂಕೇತವಾಗಿದೆ. 
  ▪ಒಟ್ಟಿನಲ್ಲಿ ನಾಯಿ ಹಲವಾರು ವೈಶಿಷ್ಟ್ಯ ಮತ್ತು ವಿಶೇಷತೆಗಳಿರುವ ಒಂದು ಜೀವಿಯಾಗಿದೆ. ಇಸ್ಲಾಮಿನಲ್ಲಿ ಕಾರಣವಿಲ್ಲದೆ ನಾಯಿಯನ್ನು ಕೊಲ್ಲುವುದು ಹರಾಂ (ನಿಷಿದ್ಧ)ಆಗಿದೆ.
 
  ▪ಸಂಗ್ರಹ: ಇಮಾಮ್ ಖಝ್‌ವೀನಿಯವರ *ಅಜಾಯಿಬುಲ್ ಮಖ್‌ಲೂಕಾತ್*  ಇಮಾಂ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಅಲ್ಲಾಮಾ ಬಿನ್ ಸೀರೀನ್ ರವರ *ತಫ್‌ಸೀರುಲ್ ಅಹ್‌ಲಾಮ್*    ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...