*ಅಂತ್ಯ ದಿನದ ಲಕ್ಷಣಗಳು :* 5
*ಪ್ರವಾದಿ ಈಸಾ ನಬಿ(ಅ)ರವರ ಆಗಮನ*
ಜಗತ್ತು ದಜ್ಜಾಲಿನ ಬಿಗಿ ಮುಷ್ಟಿಯಲ್ಲಿ ಸಿಲುಕಿ ಜನರು ಕಂಗಲಾಗಿ ನಿಂತಿರುವಾಗ ಕ್ರಾಂತಿಯ ಕಹಳೆಯನ್ನು ಮೊಳಗಿಸುತ್ತಾ ಓರ್ವ ಮಹಾನ್ ಪ್ರವಾದಿಯ ಆಗಮನವಾಗುತ್ತದೆ. ಅವರೇ ಈ ಸಮುದಾಯದ ವಾಗ್ದತ್ತ ಮಸೀಹ್. ಅರ್ಥಾತ್ ಈಸಾ ನಬಿ(ಅ) ಈಗ ಆಕಾಶ ಲೋಕದಲ್ಲಿ ಜೀವಿಸುತ್ತಿದ್ದು ಅಂತ್ಯ ದಿನದಲ್ಲಿ ಇಳಿದು ಬರಲಿದ್ದಾರೆಂದು ಅನೇಕ ಹದೀಸ್'ಗಳಿಂದ ಶ್ರುತಪಟ್ಟಿದೆ. ಅವರು ಓರ್ವ ನೂತನ ಪ್ರವಾದಿಯಾಗಿ ಬರುವುದಿಲ್ಲ. ಶತಮಾನಗಳ ಹಿಂದೆ ಈ ಭೂಮಿ ಮೇಲೆ ಜೀವಿಸಿ ಇಲ್ಲಿನ ಗಾಳಿ--ನೀರು ಪ್ರಕೃತಿ ಪರಿಸರದ ರುಚಿ ಕಂಡವರು. ಶತಮಾನಗಳ ಹಿಂದೆ ಆ ಮಹಾನ್ ಪ್ರವಾದಿ(ಅ)ರನ್ನು ಅಲ್ಲಾಹನು ಆಕಾಶದೆಡೆಗೆ ಕರೆದುಕೊಂಡು ಅಲ್ಲೇ ನೆಲೆಸುವಂತೆ ಮಾಡಿರುವನು.
ಇಮಾಂ ಮಹ್'ದಿ ಮತ್ತು ಮುಸ್ಲಿಂ ಸಮುದಾಯದ ಮೇಲೆ
ದಜ್ಜಾಲಿನ 'ಫಿತ್ನ'. ವ್ಯಾಪಕಗೊಳ್ಳುವ ಹೊತ್ತಿಗೆ ಅಲ್ಲಾಹು ಜಿಬ್ರೀಲ್(ಅ)ರನ್ನು ಈಸಾ ನಬಿ(ಅ)ರವರ ಹತ್ತಿರ ಕಳುಹಿಸುತ್ತಾನೆ. ಆಗ ಈಸಾ ನಬಿ(ಅ) ಎರಡನೇ ಆಕಾಶದಲ್ಲಿ ನೆಲೆಸಿರುತ್ತಾರೆ. ದೇವಚರ ಜಿಬ್ರೀಲ್(ಅ)ಮರು ಈಸಾ(ಅ) ರನ್ನು ಸಮೀಪಿಸಿ "ಓ ಅಲ್ಲಾಹನ ಪವಿತ್ರ ದಾಸರೇ, ಅಲ್ಲಾಹು ನಿಮಗೆ ಸಲಾಂ ಹೇಳಿದ್ದಾನೆ. ನೀವು ಭೂಮಿಗೆ ಇಳಿಯಬೇಕಂತೆ". ಎನ್ನುವರು. ಅಲ್ಲಾಹನ ಆದೇಶದಂತೆ, ಪ್ರವಾದಿ ಈಸಾ ನಬಿ(ಅ)ರವರು ಒಂದು ರಾತ್ರಿಯ ಅಂತ್ಯ ಯಾಮದಲ್ಲಿ ಡಮಸ್ಕಸ್ ದೇಶದ ಬಿಳಿ ಮಿನಾರದ ಬಳಿ ಬಂದಿಳಿಯುವರು, ಆಕಾಶದಿಂದ ಇಳಿದು ಬರುವಾಗ ಅವರು ಎರಡು ಕೈಗಳನ್ನು ಮಲಕ್'ಗಳ ರೆಕ್ಕೆಯ ಮೇಲೆ ಇಟ್ಟಿರುತ್ತಾರೆ. ಹಸಿರು ಮುಂಡಾಸು ಧರಿಸಿರುತ್ತಾರೆ. ಅವರ ಸೂಂಟದಲ್ಲಿ ಒಂದು ಖಡ್ಗ ಇರುತ್ತದೆ. ಅದೂ ಅಲ್ಲದೆ ಎಪ್ಪತ್ತು ಸಾವಿರ ಮಲಕ್'ಗಳು ಅವರ ಜತೆ ಇಳಿದು ಬರುವರು.
ಪ್ರವಾದಿ ಈಸಾ(ಅ) ಅವರು ಭೂಮಿ ಮೇಲೆ ಹೆಜ್ಜೆ ಹಾಕುತ್ತಾ ಪ್ರಥಮವಾಗಿ ಬೈತುಲ್ ಮುಖದ್ದಸ್'ಗೆ ಹೋಗುವರು. ಇಮಾಮ್ ಮಹ್'ದಿ(ರ)ರವರ ನೇತೃತ್ವದಲ್ಲಿ ಸುಬ್'ಹಿ ನಮಾಝ್ ನಿರ್ವಹಿಸುತ್ತಾರೆ. ನಂತರ ಅಲ್ಲಿಂದ ಹಿಂತಿರುಗುವಾಗ ಬಾಗಿಲು ತೆರೆಯುವಂತೆ ಆದೇಶ ನೀಡುತ್ತಾರೆ. ಬಾಗಿಲು ತೆರೆದು ನೋಡುವಾಗ ಅಲ್ಲಿ ದಜ್ಜಾಲ್ ಮತ್ತು ಎಪ್ಪತ್ತು ಸಾವಿರ ಯಹೂದಿಗಳು ನಿಂತಿರುವುದು ಕಾಣಿಸುತ್ತದೆ. ಈಸಾ ನಬಿಯವರನ್ನು ಕಂಡ ಕೂಡಲೇ ದಜ್ಜಾಲನು ಭಯ ಭೀತಿಯಿಂದ ಓಡಲು ಯತ್ನಿಸುತ್ತಾನೆ. ಅವನು ಎತ್ತ ಓಡಿದರೂ ಈಸಾ ನಬಿಯವರ ದೃಷ್ಠಿಯಿಂದ ತಪ್ಪಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಕೂನೆಗೂ ರಂಲತುಲುದ್ದ್'. ಎಂಬ ಕವಾಟದ ಬಳಿ ಆತ ಪ್ರವಾದಿ ಈಸಾ(ಅ)ರಿಗೆ ಸಿಕ್ಕಿ ಬೀಳುತ್ತಾನೆ. ಅವನು ದಂಗಾಗುತ್ತಾನೆ. ಅಲ್ಲಿನ ಉತ್ಕಟ ಸನ್ನಿವೇಶವೇ ಅವನ ಕರುಳು ಕೊರೆಯುವಂತಿರುತ್ತದೆ. ಇತರರಿಂದ ನಾಶ ಪಡಿಸಲಾಗದ ಈ ದುಷ್ಟ ಮಹಾ ಮಾರಿಯನ್ನು ಈಸಾ(ಅ) ಅವರು ತಮ್ಮ ಕೈಯ್ಯಲ್ಲಿರುವ ದೊಣ್ಣೆಯಿಂದ ಹೊಡೆದು ಕೊಲ್ಲುತ್ತಾರೆ. ನಂತರ ಖಡ್ಗದಿಂದ ಅವನ ಪ್ರಪಂಚ ಭೀಮಾಕಾರದ ದೇಹವನ್ನು ಸೀಳಿ ಹಾಕುತ್ತಾರೆ. ಈ ದೃಶ್ಯ ಕಂಡು ಅವನ ಅನುಯಾಯಿಗಳು ಅಲ್ಲಿಂದ ಪಾಲಾಯನಗೈಯ್ಯಲು ಯತ್ನಿಸುವಾಗಲೇ ಈಸಾ(ಅ) ಯಹೂದಿಗಳನ್ನು ವಧಿಸಿ ಬಿಡುತ್ತಾರೆ. ಅಲ್ಲಾಹನಿಗೆ ವಿರೋಧ ವ್ಯಕ್ತ ಪಡಿಸುವ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಅಂದು ಸಾಯದೇ ಇರುವುದಿಲ್ಲ.
ಅಲ್ಲಲ್ಲಿ ರಾಶಿ ಬಿದ್ದಿರುವ ಹೆಣಗಳಿಂದ ದುರ್ಗಂಧ ವಾಸನೆ ಹೊರ ಬರಲು ಶುರುವಾಗುತ್ತದೆ. ಅಲ್ಲಾಹನು ಬೃಹತ್ ಶುದ್ಧ ಜಲವನ್ನು ಕಳುಹಿಸುತ್ತಾನೆ.ಅದು ಅವರ ಶವ ಶರೀರಗಳನ್ನು ಅಲ್ಲಿಂದ ಎಳೆದುಕೊಂಡು ಹೋಗಿ ಸಮುದ್ರಕ್ಕೆ ಎಳೆದು ಹಾಕುತ್ತದೆ. ನಂತರ ಈಸಾ(ಅ) ಮತ್ತು ಅನುಯಾಯಿಗಳು ಬೈತುಲ್ ಮುಖದ್ದಸ್'ಗೆ ತೆರಳುತ್ತಾರೆ. ಅಲ್ಲಿ ಮುಸ್ಲಿಮರು ಪ್ರವಾದಿ ಈಸಾ(ಅ)ರವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಈಸಾನಬಿ(ಅ) ರವರು ಇಸ್ಲಾಮಿನ ಆದರ್ಶವನ್ನು ಎತ್ತಿ ಹಿಡಿಯುವಂತೆ ಜನರಿಗೆ ಕರೆ ನೀಡುತ್ತಾರೆ.
ಪ್ರವಾದಿ ಮುಹಮ್ಮದ್(ಸ.ಅ) ಪ್ರವಾದಿ ಶೃಂಖಲೆಯಲ್ಲೇ ಶ್ರೇಷ್ಠರು. ಅವರ ಧರ್ಮ ಧರ್ಮಗಳ ಪೈಕಿ ಅತ್ಯುತ್ತಮವಾದುದು. ಅವರ ಸಮುದಾಯ ಉತ್ತಮ ಸಮುದಾಯ. "ನಾನು ಈಗ ಅವರ ಮತದಲ್ಲಿದ್ದೇನೆ. ನೀವು ಕೂಡಾ ಅದರಲ್ಲಿ ಸ್ಥಿರವಾಗಿ ನಿಲ್ಲಿರಿ ಎಂದು ಈಸಾ(ಅ) ಉಪದೇಶ ನೀಡುತ್ತಾರೆ. ಇದಾದ ಬಳಿಕ ಅವರು ಹಂದಿಗಳನ್ನು ಕೊಲ್ಲುವರು. ಶಿಲುಬೆಯನ್ನು ತುಂಡರಿಸುವರು. ಇಸ್ಲಾಮೇತರ ಎಲ್ಲ ಧರ್ಮಗಳು ಅಂದು ನಿರ್ನಾಮವಾಗುವುದು.
ಅದೊಂದು ಸತ್ಯದ ಸುವರ್ಣಯುಗದ ಪ್ರಾರಂಭ. ಎಲ್ಲೆಲ್ಲೂ ಸುಖ, ಶಾಂತಿ, ಸಮಾಧಾನ, ನೆಮ್ಮದಿಯ ಅಲೆಗಳು. ಜಗತ್ತಿಡೀ ಸೌಹಾರ್ಧ ಮತ್ತು ಮಾನವೀಯತೆ ತುಂಬುವ ಅಪೂರ್ವ ಕಾಲ. ಅಂದು ಪರಸ್ಪರ ಚರ್ಚೆ, ಭಿನ್ನಭಿಪ್ರಾಯ, ಕಲಹ, ಗೊಂದಲಗಳಿಗೆ ಅವಕಾಶವಿಲ್ಲ. ಧರ್ಮದ ಕಟ್ಟುಪಾಡು, ಧಾರ್ಮಿಕ ವ್ಯವಸ್ಥೆಯ ಸುಭದ್ರ ಶರೀಅತ್ ಕಾನೂನೊಂದು ಅಲ್ಲಿ ಜಾರಿಗೆ ಬರುತ್ತದೆ. ಇಸ್ಲಾಮಿನ ಆದರ್ಶವನ್ನು ಎತ್ತಿ ಹಿಡಿಯಲು ಜನರು ಮುನ್ನುಗ್ಗುತ್ತಾರೆ. ಆದರೆ ಇಂಥ ಪರಿವರ್ತನೆಯ ಮರುಕ್ಷಣದಲ್ಲೇ ಸಯ್ಯುದುನಾ ಇಮಾಂ ಮಹ್'ದಿ(ರ) ತೀರಿಹೋಗುತ್ತಾರೆ. ಪರಿಸ್ಥಿತಿ ಬಿಗಡಾಯಿಸುತ್ತದೆ. ಜನ ಅವರ ಅಂತ್ಯ ಸುದ್ಧಿ ತಿಳಿದು ಅಪಾರ ದುಃಖ ಮತ್ತು ಆಘಾತಕ್ಕೀಡಾಗುತ್ತಾರೆ.
*ಮುಂದುವರೆಯುತ್ತದೆ....*
*ಪ್ರೀತಿಯ ಸಹೋದರರೇ ತಮ್ಮ ಹಣವನ್ನು ಅನಾವಶ್ಯಕವಾಗಿ ಪೊಳು ಮಾಡುವುದರ ಬದಲು (ಬಡವರ ಹೆಣ್ಣು ಮಕ್ಕಳ ಮದುವೆ ಮಾಡುವುದರೊಂದಿಗೆ) ಪವಿತ್ರವಾದ ಹಜ್ಜ್, ಉಮ್ರಾ... ಮುತ್ತು ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಂತ್ಯ ವಿಶ್ರಮಿಸುವ ನಾಡು ಪವಿತ್ರ ಮದೀನಾ, ಇಸ್ಲಾಮಿನ ಇತಿಹಾಸವಿರುವ ಸ್ಥಳಗಳನ್ನು ನೋಡಿರಿ. ಮತ್ತು ಅಂತ್ಯ ದಿನದ ಪುನರುತ್ಥಾನದ ನಾಯಕ ಸಯ್ಯುದುನಾ ಇಮಾಂ ಮಹ್'ದಿ ತಂಙಳ್ ಬರುವ ಸ್ಥಳ, ಪ್ರವಾದಿ ಈಸಾ(ಅ) ಎಪ್ಪತ್ತು ಸಾವಿರ ಮಲಕ್'ಗಳೊಂದಿಗೆ ಬಂದಿಳಿಯುವ ಡಮಸ್ಕಸ್ ದೇಶದ ಬಿಳಿ ಮಿನಾರ,ಈಸಾ(ಅ) ಹಾಗೂ ಇಮಾಂ ಮಹ್'ದಿ(ರ) ಅವರ ಅನುಯಾಯಿಗಳು ಅಂದು ನಮಾಝ್ ಮಾಡುವ ಡಮಸ್ಕಸ್'ನ ಬಿಳಿ ಮಿನಾರದ ಮಸೀದಿ, ಈಸಾ ನಬಿ(ಅ) ದಜ್ಜಾಲ್'ನ ಕೊಲ್ಲಲ್ಪಡುವ ಸ್ಥಳವಾದ ಇಸ್ರೇಲ್'ನ ರಂಲತುಲುದ್ದ್ ಎಂಬ ಸ್ಥಳ, ಈಸಾ(ಅ) ವಫಾತ್ ಆಗಿ ಅವರನ್ನು ದಫನ ಗೊಳಿಸುವ ಇಂದಿಗೂ ಅವರ ದಫನ ಮಾಡಲಿಕ್ಕಿರುವ ಖಾಲಿ ಸ್ಥಳವಾದ ಮದೀನಾದ ರೌಲಾದ ಒಳಗಿರುವ ಸ್ಥಳ, ಪರಮ ಧಿಕ್ಕಾರಿಯಾದ ಫಿರ್ಔನ್ ಮುಳುಗಿ ಸತ್ತು ಹೋದ ಈಜಿಪ್ಟಿನಲ್ಲಿರುವ ನೈಲ್ ನದಿ, ಮೂಸಾ ನಬಿ(ಅ) ಅಲ್ಲಾಹನೊಂದಿಗೆ ಸಂಭಾಷಣೆ ನಡೆಸಲು ಹೋದ ತೂರ್'ಸೀನಾ ಪರ್ವತ, ಲೂತ್ ನಬಿ(ಅ)ರವರ ಸಮುದಾಯನ್ನು ಶಿಕ್ಷಿಸಲ್ಪಟ್ಟ ಸ್ಥಳಗಳು, ನೂಹ್ ನಬಿ(ಅ) ರವರ ಹಡಗು ಬಂದಿಳಿದ ಸ್ಥಳ ಹೀಗೆ ಅನೇಕಾರು ಸ್ಥಳಗಳನ್ನು ವೀಕ್ಷಿಸಿರಿ. ಅಲ್ಲಾಹನು ತೌಫೀಕ್ ನೀಡಲಿ. ಆಮೀನ್.*
*ಕ'ಅಬಾ ಪತನ*
ಒಂದು ದೊಡ್ಡ ಜಕೂಟ ಹಡಗಿನಲ್ಲಿ ಬಂದಿಳಿಯುತ್ತದೆ. ಪವಿತ್ರ ಕಅಬಾ ಭವನವನ್ನು ನೆಲಕ್ಕುರುಳಿಸುವುದೇ ಅವರ ಉದ್ದೇಶ. ಈ ವಿಷಯ ಅರಿತ ಮುಸಲ್ಮಾನರಿಗೆ ತುಂಬಾ ಬೇಸರವಾಗುತ್ತದೆ. ಅವರ ಈ ಕುಟಿಲ ತಂತ್ರ ನಡೆಯುವ ಸ್ಥಿತಿ ಎದುರಾಗುವುದಾದರೆ ಅದನ್ನು ನೋಡಿ ಸುಮ್ಮನಾಗುವುದು ಉಚಿತವಲ್ಲ. ಹಝ್ರತ್ ಈಸಾ ನಬಿ(ಅ)ರವರಿಗೆ ಈ ಸುದ್ಧಿ ತಲುಪುತ್ತದೆ. ಅವರು ಬೈತುಲ್ ಮುಖದ್ದಸ್'ನಿಂದ ಒಂದು ಸೇನೆಯನ್ನು ಕಳುಹಿಸುತ್ತಾರೆ. ಅವರು ಶತ್ರು ಸೇನೆಯೊಂದಿಗೆ ಹೋರಾಡುತ್ತಾರೆ. ಹಾಗೆ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಮುಸ್ಲಿಮರ ಸೇನಾ ಬಲ ಕ್ಷಯಿಸುವುದರಿಂದ ಅವರು ಪುನಃ ಬೈತುಲ್ ಮುಖದ್ದಸ್'ಗೆ ಬಂದು ಹೆಚ್ಚಿನ ಸೇನೆಯನ್ನು ಅತ್ತ ಕರೆದುಕೊಂಡು ಹೋಗುತ್ತಾರೆ.
ಶತ್ರುಗಳ ತಂತ್ರವನ್ನು ವಿಫಲಗೊಳಿಸಲು ಈಸಾ ನಬಿ(ಅ) ಮತ್ತು ಮುಸ್ಲಿಮರು ಅತ್ಯಂತ ಸಾಹಸದಿಂದ ಸಂಘರ್ಷವನ್ನು ಎದುರಿಸುತ್ತಾರೆ. ಬೈತುಲ್ ಮುಖದ್ದಸ್'ನಿಂದ ಯುದ್ಧಕ್ಕೆ ತೆರಳುವ ಮುಸ್ಲಿಂ ಸೇನೆಯಲ್ಲಿ ಈಸಾ ನಬಿ(ಅ) ಅವರು ಆತ್ಮ ವಿಶ್ವಾಸವನ್ನು ತುಂಬುವರು. ಯಾರೂ ಕೂಡಾ ಹಿಮ್ಮೆಟ್ಟದೆ ಎಲ್ಲರೂ ಚಂಚಲರಾಗಿ ಶತ್ರುಗಳ ವಿರುದ್ಧ ಹೋರಾಡಬೇಕೆಂದು ಆದೇಶ ಹೊರಡಿಸುತ್ತಾರೆ. ತಕ್ಷಣ ಅಲ್ಲೊಂದು ಗಂಭೀರ ಹೋರಾಟ ನಡೆಯುತ್ತದೆ. ಆ ಹೋರಾಟದ ತೀವ್ರತೆಯನ್ನು ಎದುರಿಸುವಲ್ಲಿ ಮುಸ್ಲಿಂ ಸೇನೆ ತುಂಬಾ ಸಂಕಷ್ಟಕ್ಕೀಡಾಗುತ್ತದೆ. ಶತ್ರುಗಳ ವಿರುದ್ಧ ಸಿಡಿದೇಳುವ ರೋಷದಲ್ಲಿ ನಿರತನಾಗಿರುವ ಮುಸ್ಲಿಂ ಸೇನೆಗೆ ಒಂದು ವಿಷಾದಭರಿತ ಆಘಾತಕರ ಸುದ್ದಿ ಮುಟ್ಟುತ್ತದೆ.
ಈಸಾ ನಬಿ(ಅ) ತೀರಿ ಹೋದರು! ಮನಸ್ಸನ್ನು ಹಿಂಡುವಂಥ ಭಯಂಕರ ವಿಚಾರ! ಪ್ರತಿಯೊಬ್ಬರ ಕಂಗಳಲ್ಲಿ ಅಶ್ರುಧಾರೆ ಹರಿಯತೊಡಗುತ್ತದೆ. ತಕ್ಷಣ ಎಲ್ಲರೂ ಪ್ರವಾದಿ ಈಸಾ(ಅ)ರವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳುತ್ತಾರೆ. ಅವರನ್ನು ಎಲ್ಲಿ ದಫನ ಮಾಡುವುದು ಎಂಬ ಬಗ್ಗೆ ಜನರಲ್ಲಿ ಭಿನ್ನಭಿಪ್ರಾಯ ಮೂಡುತ್ತದೆ. ಅಷ್ಟರಲ್ಲಿ ಅವರಲ್ಲಿರುವ ಪಂಡಿತರಿಗೆ ಪ್ರವಾದಿ(ಸ.ಅ)ರವರ ಹದೀಸ್ ನೆನಪಿಗೆ ಬರುತ್ತದೆ. ಹೌದು, ಈಸಾ(ಅ) ರವರನ್ನು ಮದೀನಾದ ರೌಲದ ಒಳಗೆ ಪಾರ್ಥಿವ ಶರೀರವನ್ನು ಮದೀನಾಕ್ಕೆ ಎತ್ತಿಕೊಂಡು ಹೋಗಿ ಉಮರ್(ರ)ರವರ ಸಮೀಪದಲ್ಲಿ ದಫನಗೊಳಿಸುತ್ತಾರೆ.(ಮದೀನಾಗೆ ಹೋದರೆ ಈಗಲೂ ಈಸಾ ನಬಿ(ಅ)ರವರು ಮರಣ ಹೊಂದಿ ದಫನಗೊಳಿಸುವ ಖಾಲಿ ಸ್ಥಳವು ರೌಲದ ಒಳಗಿನ ಭಾಗದಲ್ಲಿ ಕಾಣಬಹುದು). ಜನರು ಪರಸ್ಪರ ಅಶ್ರುಧಾರೆ ಹರಿಸಿ ದುಃಖ ದುಮ್ಮಾನಗಳೊಂದಿಗೆ ಹಿಂತಿರುಗುತ್ತಾರೆ.
ಅಷ್ಟು ಹೊತ್ತಿಗೆ ಜಿದ್ದಾದಿಂದ ಮಕ್ಕಾದ ತನಕ ಅಣಿ ನಿಂತಿರುವ ಶತ್ರುಗಳು ಕ'ಅಬಾ ಭವನವನ್ನು ಕೆಡವಿ ಅದರ ಕಲ್ಲುಗಳನ್ನು ಸಾಗಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಕ'ಅಬಾ ಭವನ ಸಂಪೂರ್ಣ ನೆಲಸಮವಾಗುತ್ತದೆ. ಮುಸ್ಲಿಮರು ಶತ್ರುಗಳ ಬಲವನ್ನು ಕುಗ್ಗಿಸಲಾಗದೆ ಅಲ್ಲಿಂದ ಹಿಮ್ಮೆಟ್ಟುತ್ತಾರೆ. ಶತ್ರು ಸೇನೆ ಘೋರ ಹೋರಾಟ ನಡೆಸಿ 'ಹರಂ' ಪ್ರದೇಶವನ್ನು ನುಗ್ಗಿ ವಶಪಡಿಸಿಕೊಳ್ಳುತ್ತದೆ. ನಂತರ ಎಲ್ಲೆಲ್ಲೂ ಅರಾಜಕತೆ, ಅಸಮಾಧಾನ, ಅನೀತಿ, ವ್ಯಗ್ರ, ಅಕ್ರೋಶ, ಸಾಮಾಜಿಕ ಅಸಭ್ಯತೆ ಕಾಣಿಸಿಕೊಳ್ಳುತ್ತದೆ.
ಮುಸ್ಲಿಮರ ದೌರ್ಬಲ್ಯವನ್ನು ಕಂಡು ಕಾಲವು ಅತ್ತು ಬಿಡುತ್ತದೆ. ಈ ವೇಳೆಯಲ್ಲಿ ಇಸ್ಲಾಮಿನ ಗಂಧ ಗಾಳಿ ಕೂಡ ಅಲ್ಲಿ ಉಳಿಯುವುದಿಲ್ಲ. ಹಜ್ಜ್ ಕರ್ಮ ನಿರ್ವಹಿಸಲು ಹಾಗೂ ನಮಾಝ್ ಮಾಡಲು ಕೂಡಾ ಸಾಧ್ಯವಾಗದೇ ಮುಸ್ಲಿಮರು ನಿರಾಶೆ ಮತ್ತು ವಿಷಾಧದ ದವಡೆಯಲ್ಲಿ ಸಿಲುಕಿ ಬಿಡುತ್ತಾರೆ. ಇನ್ನಾಲಿಲ್ಲಾಹ್ !
*ಮುಂದುವರೆಯುತ್ತದೆ.......*
*1400 ವರ್ಷಗಳ ಮುಂಚೆ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ ಅಂತ್ಯ ದಿನದ ಭವಿಷ್ಯ ನುಡಿಯು ಅದರ ಚಿಕ್ಕ ಚಿಕ್ಕ ಲಕ್ಷಣಗಳು ನಾವೀಗ ಕಂಡಾಯಿತು ಮತ್ತು ಕಾಣುತ್ತಲೇ ಇದ್ದೇವೆ. ಮಹ್'ದಿ ಇಮಾಮರ ಆಗಮನವು ಅತೀ ಸಮೀಪದಲ್ಲಿದೆ. ಹಿಂಸೆ, ಅಕ್ರಮ, ಅನಾಚಾರ, ಕೊಲೆಗಳು, ಬಾಂಬ್ ಸ್ಪೋಟಗಳು,ಹೀಗೆ ಅನೇಕಾರು ಅಕ್ರಮಗಳು ಕೂಡಿ ಬರುವ ಕಾಲದಲ್ಲಾಗಿದೆ ಮಹ್'ದಿ ಇಮಾಮ್ ಬರುವುದು. ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದರು. ಖುರಾಸಾನದಿಂದ ಹಜ್ಜ್ ನಿರ್ವಹಿಸಲು ಬರುವ ಒಂದು ತಂಡವು ಅವರೆಲ್ಲ ಬಿಳಿ ಬಣ್ಣದ ಅಂಗಿಗಳನ್ನು ಧರಿಸಿರುತ್ತಾರೆ. ಅವರ ಕೈಯ್ಯಲ್ಲಿ ಕಪ್ಪು ಧ್ವಜಗಳಿದ್ದು ಪ್ರತಿಯೊಬ್ಬರೂ ಕಪ್ಪು ಟೊಪ್ಪಿಯನ್ನು ಧರಿಸಿರುತ್ತಾರೆ. ಆ ತಂಡವನ್ನು ಕಂಡೊಡನೆ ನೀವು ಮುಸಹಫತ್ ಮಾಡಿರಿ. ಯಾಕೆಂದರೆ ಆ ತಂಡದಲ್ಲಾಗಿದೆ ಇಮಾಂ ಮಹ್'ದಿ (ರ) ಇರುವುದು. ಆ ಒಂದು ಸಂದರ್ಭ ಬಂದೊದಗಿದರೆ ಅಲ್ಲಾಹನು ಇಮಾಂ ಮಹ್'ದಿ (ರ)ರವರ ಕೈ ಮುಸಾಹಫತ್ ಮಾಡಲು ತೌಫೀಕ್ ನೀಡಲಿ. ಆಮೀನ್.*
*ಯ'ಅಜೂಜ್ ಮ'ಅಜೂಜ್*
ಇಬ್ಬರು ಯಮ ಜಂತುಗಳು, ಇಸ್ಕಂದರ್ ರಾಜ ನಿರ್ಮಿಸಿದ ಚರಿತ್ರೆ ಪ್ರಸಿದ್ಧ ಗೋಡೆಯ ಸಮೀಪದಲ್ಲಿ ವಾಸಿಸುತ್ತಿದ್ದಾರೆ. ಅಂದಿನ ಜನರು ಇದರ ಆಕ್ರಮಣಕ್ಕೊಳಗಾಗಿ ಆಯಾಸಗೊಂಡಾಗ ಇಸ್ಕಂದರ್ ರಾಜ ಒಂದು ಗೋಡೆ ಕಟ್ಟಿಸಿ ಅದರಾಚೆಗೆ ಅವರನ್ನು ತಡೆದು ನಿಲ್ಲಿಸಿದರು. ಮುಂದೊಂದು ದಿನ ಈ ಗೋಡೆ ದ್ವಂಸಗೊಂಡು ಅವರು ಹೊರ ಬರಲಿದ್ದಾರೆ ಎಂಬುವುದಾಗಿ ಚರಿತ್ರೆ ಗ್ರಂಥಗಳಲ್ಲಿ ಉಲ್ಲೇಖಗೊಂಡದ್ದು ಅದು ಅಂತ್ಯ ದಿನದಲ್ಲೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅವರು ಅಂತ್ಯ ದಿನದಂದು ಪ್ರಪಂಚ ಪರ್ಯಟನೆ ನಡೆಸಿ ಭೂಮಿಯಲ್ಲಿರುವ ಎಲ್ಲಾ ಭಕ್ಷ್ಯ ಸಾಧನಗಳನ್ನು ತಿಂದು ಮುಗಿಸುವರು. ಪ್ರಪಂಚದ ಸುಸ್ಥಿತಿಯನ್ನು ಕೆಡಿಸುವ ಅವರ ಪ್ರಯತ್ನ ಎಷ್ಟು ತೀವ್ರವೆಂದರೆ, ಸಮುದ್ರದ ಒಂದು ಹನಿ ನೀರು ಕೂಡಾ ಬಾಕಿಯಾಗದಂತೆ ಸಂಪೂರ್ಣ ಕುಡಿದು ತೀರಿಸುತ್ತಾರೆ.
ಅವರಲ್ಲಿ ಗಂಡಸರು, ಹೆಂಗಸರು, ದೊಡ್ಡವರು, ಸಣ್ಣವರು ಹೀಗೆ ವಿವಿಧ ತರದವರಿರುತ್ತಾರೆ. ಅಂದಿನ ಜನರಿಗೆ ಇವರ ಉಪಟಳದಿಂದ ಹೇಗೆ ಪಾರಾಗುವುದು ಎಂಬುದು ಒಂದು ಅಪರಿಹಾರ ಸಮಸ್ಯೆಯಾಗಿ ಉಳಿಯುತ್ತದೆ. ಅವರದ್ದು ಅಹಸ್ಯವಾದ ರೂಪ. ಅವರ ಸಂತತಿಯಲ್ಲಿ ಕೆಲವರಿಗೆ ನಾಲ್ಕು ಕೈಗಳು ಮತ್ತು ಕೆಲವರಿಗೆ ನಾಲ್ಕು ಕಣ್ಣುಗಳಿದ್ದು ಏಕ ಪ್ರಕಾರವಲ್ಲದ ಈ ರೂಪವನ್ನು ನೋಡುವಾಗಲೇ ಮರುಕ ಉಂಟಾಗುವುದು. ಸಿರಿಯಾ, ಬಲ್ಕ್, ತ್ವ್'ಬಿರಿಯಾ, ಜದ್'ಲ ಮುಂತಾದ ಎಲ್ಲ ಸ್ಥಳಗಳಲ್ಲಿ ಅವರು ಸಂಚರಿಸುವರು. ಮದೀನಾ, ತೂರಿಸೀನಾ, ಬೈತುಲ್ ಮುಖದ್ದಸ್ ಇತ್ಯಾದಿ ಸ್ಥಳಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳನ್ನು ಅವರು ದ್ವಂಸಗೈಯ್ಯಲು ಯತ್ನಿಸುವರು. ಕೊನೆಗೆ ನೀರು ಕೂಡಾ ಕುಡಿಯಲು ದೊರೆಯದ ಪರಿಸ್ಥಿತಿ ಅವರನ್ನು ಆವರಿಸುವುದು. ಇದರಿಂದ ಅವರು ಒಂದು ರೀತಿಯ ದೌರ್ಬಲ್ಯಕ್ಕೆ ಒಳಗಾಗುತ್ತಾರೆ. ಅಲ್ಲದೆ ಅವರಿಗೆ ಎಲ್ಲೂ ಅನ್ನಹಾರ ದೊರೆಯದೇ ಹೋದಾಗ ಅಲ್ಲಾಹನ ಕಡೆಯಿಂದ ಒಂದು ವಿಧದ ಹುಳಗಳನ್ನು ಕಳುಹಿಸಲಾಗುವುದು. ಮತ್ತು ಆ ಹುಳಗಳು ಶತ್ರುಗಳ ಮೇಲೆ ದಾಳಿ ನಡೆಸಿ ಅವರ ಎಲ್ಲಾ ಶಕ್ತಿಯನ್ನು ಕುಗ್ಗಿಸಿ ಬಿಡುವುದು. ಅವರ ಬದುಕಿನ ವಯಗ್ರ ದುರಂತ ಇಲ್ಲಿಗೆ ಮುಗಿಯುತ್ತದೆ.
ನಂತರ ಸತ್ತು ಬಿದ್ದಿರುವ ಅವರ ಮೃತ ದೇಹದ ವಾಸನೆ ಎಲ್ಲಾ ಕಡೆಗೂ ವ್ಯಾಪಿಸುತ್ತದೆ. ದುರ್ವಾಸನೆಯಿಂದ ಜನರಿಗೆ ತೊಂದರೆಯಾಗುವಾಗ ಅಲ್ಲಾಹನು ಒಂದು ವಿಧದ ಹಕ್ಕಿಗಳನ್ನು ಕಳುಹಿಸುತ್ತಾನೆ. ಅವು ಅಲ್ಲಿನ ಶವಗಳನ್ನು ಒಂದೊಂದಾಗಿ ಕೊಕ್ಕಿನಲ್ಲಿರಿಸಿಕೊಂಡು ಹೋಗಿ ಸಮುದ್ರಕ್ಕೆ ಎಸೆಯುತ್ತದೆ. ನಂತರ ಅಲ್ಲಾಹನು ಒಂದು ಬೃಹತ್ ಜಡಿ ಮಳೆಯನ್ನು ಸುರಿಸುತ್ತಾನೆ. ಇದರಿಂದ ನೆಲದಲ್ಲಿ ಮತ್ತೆ ಸಸ್ಯ ಲತೆಗಳು ಬೆಳೆದು ಭೂಮಿಯ ಪೂರ್ವ ಸ್ಥಿತಿಯೆಡೆಗೆ ಮರಳುತ್ತದೆ. ಸತ್ಯ ವಿಶ್ವಾಸಿಗಳು ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಬದುಕಲು ಪ್ರಾರಂಭಿಸುವಾಗಲೇ ಭೂಮಿಯಲ್ಲಿ ಒಂದು ಬೃಹತ್ ಮೃಗ ಕಾಣಿಸಿಕೊಳ್ಳುತ್ತದೆ.
*ಅದ್ಬುತ ಪ್ರಾಣಿ :* ಮಕ್ಕಾದ ಪವಿತ್ರವಾದ ಅರಫಾ ಮೈದಾನ. ಪವಿತ್ರವಾದ ಹಜ್ಜ್ ಕರ್ಮ ಸ್ವೀಕಾರವಾಗುವುದಾದರೆ ಸ್ವಲ್ಪ ಹೊತ್ತಾದರೂ ತಂಗಬೇಕಾದ ಸ್ಥಳವಾಗಿದೆ ಪವಿತ್ರ ಅರಫಾ ಮೈದಾನ. ಎಷ್ಟೊ ಹಜ್ಜಾಜ್'ಗಳ ಕಣ್ಣೀರು ಹರಿಸಿ ಪ್ರಾರ್ಥಿಸಿದ ಪವಿತ್ರ ಭೂಮಿಯಾಗಿದೆ ಪವಿತ್ರ ಅರಫಾ ಮೈದಾನ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹಾಗೂ ಸ್ವಹಾಬಿಗಳು ಸೇರಿದ ಪವಿತ್ರ ಭೂಮಿಯಾಗಿದೆ ಪವಿತ್ರ ಅರಫಾ ಪುಣ್ಯ ಭೂಮಿ. ಆ ಅರಫಾ ಮೈದಾನದಲ್ಲಿ ಒಂದು ಭೀಕರ ಭೂಕಂಪವಾಗುತ್ತದೆ ಆ ಭೂಕಂಪದಲ್ಲಿ ಹೊರ ಬರುವ ಒಂದು ವಿಚಿತ್ರ ಜೀವಿಯಾಗಿದೆ ದಾಬ್ಬತುಲ್ ಅರ್'ಳ್. ಹೌದು ಇದೊಂದು ಅಸಾಧಾರಣ ಪ್ರಾಣಿ. ಅಂತ್ಯ ದಿನದ ವೇಳೆ ಇಂಥ ಒಂದು ಜೀವಿ ಭೂಮಿ ಮೇಲೆ ಪ್ರತ್ಯಕ್ಷವಾಗಲಿದೆ ಎಂಬುವುದಾಗಿ ಕುರ್'ಆನ್-- ಹದೀಸ್'ಗಳಲ್ಲಿ ಪ್ರಸ್ತಾಪಿಸಲಾಗಿದೆ. ವಿಶ್ವದಲ್ಲಿ ಯಾರೂ ಕೂಡಾ ಕಂಡು ಕೇಳರಿಯದ ಒಂದು ವಿಚಿತ್ರ ಪ್ರಾಣಿ ಇದು. ಈ ಪ್ರಾಣಿಗೆ ತನ್ನದೇ ಆದ ಒಂದು ಸ್ವತಂತ್ರ ರೂಪವಿಲ್ಲ. ಹಲವು ಜೀವಿಗಳ ಮಿಶ್ರಾಂಗಗಳಿಂದ ಕೂಡಿದ ವಿಚಿತ್ರ ರೂಪ. ಹೋರಿಯ ತಲೆ, ಹಂದಿಯ ಕಣ್ಣು, ಆನೆಯ ಕಿವಿ, ಉಷ್ಣ ಪಕ್ಷಿಯ ಕುತ್ತಿಗೆ, ಸಿಂಹದ ಎದೆ, ಬೆಕ್ಕಿನ ನಿತಂಬ, ಆಡಿನ ಬಾಲ ಮತ್ತು ಒಂಟೆಯ ಕಾಲುಗಳನ್ನು ಹೊಂದಿರುತ್ತದೆ. ಕಾಲುಗಳು ಸುಮಾರು ಅರವತ್ತು ಮೊಳ ಉದ್ದವಿದ್ದು, ನೋಡುವಾಗ ಮುಜುಗರವೆನಿಸುತ್ತದೆ.
ಈ ಅಸಮಾನ್ಯ ಮೃಗವು ಪ್ರತ್ಯಕ್ಷಗೊಳ್ಳುವಾಗ ಹಝ್ರತ್ ಸುಲೈಮಾನ್ ನಬಿ(ಅ)ರವರ ಅದ್ಬುತ ಉಂಗುರ, ಮತ್ತು ಮೂಸಾ ನಬಿ(ಅ)ರವರ ಪವಾಡಮಯ ಬೆತ್ತವನ್ನು ಜತೆಯಲ್ಲಿ ತರಲಿದೆ. ತನ್ನ ಮುಖದಲ್ಲಿ ಹೊತ್ತಿ ಬೆಳಗುವ ಕಿರಣಗಳ ಪ್ರಭಾವದಿಂದ ಯಾರಿಗೂ ಈ ಪ್ರಾಣಿಯನ್ನು ಸ್ಪರ್ಶಿಸಲು ಸಾಧ್ಯವಿರುವುದಿಲ್ಲ. ಜನರು ಇಂಥ ಒಂದು ಅದ್ಬುತ ಸನ್ನಿವೇಶವನ್ನು ವೀಕ್ಷಿಸುತ್ತಾ ನಿಂತಿರುವಾಗಲೇ ಪಶ್ಚಿಮದಿಂದ ಸೂರ್ಯನ ಉದಯವಾಗುತ್ತದೆ. ಅದರೊಂದಿಗೆ ತೌಬದ ಬಾಗಿಲು ಮುಚ್ಚಲ್ಪಡುತ್ತದೆ.
*ಪಶ್ಚಿಮದಿಂದ ಸೂರ್ಯೋದಯ*
ಅದೊಂದು ಅಸಾಮಾನ್ಯ ದಿನ. ಎಲ್ಲೆಲ್ಲೂ ಭಯ, ದಿಗಿಲು ನಡುಕವುಂಟಾಗುವ ಭೀಕರ ಸನ್ನಿವೇಶ. ಮಾನವ ಇತಿಹಾಸದಲ್ಲಿ ಇದುವರೆಗೂ ಯಾರೂ ಕಂಡು ಕೇಳರಿಯದಂಥ ಅಚ್ಚರಿಯ ಕ್ಷಣ. ಒಂದೆಡೆ ದಾಬ್ಬತುಲ್ ಅರ್'ಳ್ ಎಂಬ ಮಹಾದ್ಭುತ ಪ್ರಾಣಿ ಮನುಷ್ಯನನ್ನು ಎದುರು ಹಾಕುತ್ತಾ ನಿಂತಿರುವಾಗ ಮತ್ತೊಂದೆಡೆ ಪಶ್ಚಿಮ ದಿಗಂತದಲ್ಲಿ ಸೂರ್ಯೋದಯ! ಜನಮನದಲ್ಲಿ ಎಲ್ಲಿಲ್ಲದ ಆತಂಕ, ಭಯ, ದಿಗಿಲು, ಈ ದುರಂತ ಸನ್ನಿವೇಶವು ಪ್ರತಿಯೊಬ್ಬನನ್ನೂ ಘೋರ ಆಘಾತಕ್ಕೀಡು ಮಾಡುತ್ತದೆ.
ಪ್ರವಾದಿ(ಸ.ಅ) ಹೇಳುತ್ತಾರೆ. "ಮೂರು ಕಾರ್ಯಗಳು ಪ್ರತ್ಯಕ್ಷವಾದರೆ ಮತ್ತೆ ಮಾನವನಿಗೆ ಅವನ ವಿಶ್ವಾಸವು ಫಲ ನೀಡುವುದಿಲ್ಲ. ಪಶ್ಚಿಮದಿಂದ ಸೂರ್ಯೋದಯ, ದಜ್ಜಾಲ್'ನ ಅವಿಭಾರ್ವ, ದಾಬ್ಬತುಲ್ ಅರ್'ಳ್ ಆಗಮನ" (ಹದೀಸ್)
ಸೂರ್ಯನು ನಮಗೆ ಬೆಳಕು ನೀಡುವ ಸಾಧನ. ಸೂರ್ಯೋದಯದೊಂದಿಗೆ ಹಗಲು ಆರಂಭಗೊಳ್ಳುತ್ತದೆ. ಭೂಮಿಯಲ್ಲಿ ಪಾಪವು ಹೆಚ್ಚಾದಾಗ ಅಲ್ಲಾಹನು ಸೂರ್ಯನನ್ನು ತಡೆಹಿಡಿಯುವನು. ಪ್ರತಿ ದಿನ ರಾತ್ರಿ ಅಸ್ತಮಾನದ ಬಳಿಕ ಸೂರ್ಯನು ಅರ್'ಶ್'ನ ತಳ ಭಾಗಕ್ಕೆ ತೆರಳಿ ಅಲ್ಲಾಹನಿಗೆ ಸುಜೂದ್ ನಿರ್ವಹಿಸುತ್ತದೆ. ನಂತರ ಅದು ತಾನು ಯಾವ ಕಡೆಯಿಂದ ಉದಿಸಬೇಕು ಎಂದು ಅಲ್ಲಾಹನಲ್ಲಿ ಕೇಳಿದ ಬಳಿಕ ಉದಯವಾಗುತ್ತದೆ. ಒಂದು ದಿನ ಹಾಗೆ ಕೇಳುವಾಗ ಅದಕ್ಕೆ ಉತ್ತರ ದೊರೆಯುವುದಿಲ್ಲ.
ಹೌದು ಅಂದು ಅಲ್ಲಾಹನ ತೀರ್ಮಾನ ಮೂರು ದಿನಗಳ ಕಾಲ ಸೂರ್ಯನು ಉದಯವಾಗದಿರುವುದು. ಸೂರ್ಯನಿಲ್ಲದೆ ಅಂದು ಮನುಷ್ಯರೂ, ಸರ್ವ ಸೃಷ್ಟಿ ಜಾಲಗಳೂ ಮೂರು ದಿನಗಳ ಕಾಲ ಸಂಪೂರ್ಣವಾಗಿ ಕತ್ತಲೆಯಲ್ಲಿ ಕಳೆಯುವರು. ಅಂದು ಬೆಂಕಿ ಕಡ್ಡಿ ಹೊತ್ತಿಸಿದರೂ ಅದು ಹೊತ್ತುವುದಿಲ್ಲ, ಲೈಟ್ ಹಾಕಿದರೂ ಅದು ಹಿಡಿಯುವುದಿಲ್ಲ. ಪ್ರಕಾಶವೆಂಬ ಅಂಶ ಅಂದು ಕಾಣಲು ಸಾಧ್ಯವಾಗದೇ ಮನುಷ್ಯರು, ಮೃಗಗಳು ಘೋರ ಕತ್ತಲೆಯಲ್ಲಿ ತಿನ್ನಲೂ ಕುಡಿಯಲೂ ಇಲ್ಲದೆ ಹಸಿವಿನಿಂದ ಅಟ್ಟಹಾಸಗೈಯುವರು. ಹೀಗೆ 78 ಗಂಟೆಗಳ ಕಾಲ ಕಳೆಯುವಾಗ,
ಅಲ್ಲಾಹನು ದೇವಚರ ಜಿಬ್ರೀಲ್(ಅ)ರನ್ನು ಕಳುಹಿಸಿ ಪಶ್ಚಿಮದಿಂದ ಉದಿಸುವಂತೆ ಸೂರ್ಯನಿಗೆ ಆದೇಶ ನೀಡಲಾಗುತ್ತದೆ. ಹಾಗೆ ಸೂರ್ಯ ಪಶ್ಚಿಮದಿಂದ ಉದಯಿಸುತ್ತದೆ. ಅಂದು ಅದರ ಕಿರಣ ಎಂದಿನಂತೆ ಇರುವುದಿಲ್ಲ. ಅದರ ರಶ್ಮಿ ಕಪ್ಪು ಬಣ್ಣಕ್ಕೆ ತಿರುಗಿದ್ದು ಗ್ರಹಣ ಹಿಡಿದಿರುವಂತೆ ತೋರುತ್ತದೆ. ಅಂದು ಸೂರ್ಯನ ಜೊತೆ ಅದೇ ಹಗಲಿನಲ್ಲಿ ಚಂದ್ರ ಕೂಡಾ ಕಾಣಿಸಿಕೊಳ್ಳಲಿದೆ. ಸೂರ್ಯ ಮತ್ತು ಚಂದ್ರ ಒಂದು ಗೂಡುವುದು ಅಂತ್ಯ ದಿನದ ಲಕ್ಷಣ ಎಂದು ಕುರ್'ಆನ್'ನಿಂದ ತಿಳಿದು ಬಂದಿದೆ. ಸೂರ್ಯನು ಪಶ್ಚಿಮದಿಂದ ಉದಿಸಿದ ಬಳಿಕ ಜನರು 120 ವರ್ಷ ಭೂಮಿಯಲ್ಲಿ ಬದುಕುವರೆಂದು ಪ್ರವಾದಿ(ಸ.ಅ) ಅವರು ಹೇಳಿದ್ದಾರೆ. ಪಶ್ಚಿಮದಿಂದ ಸೂರ್ಯೋದಯವಾಗುವಾಗ ಅಸಂಗತ ಸ್ಥಿತಿ ಕಂಡು ಜನರು ದಿಗ್ಭ್ರಾಂತಿಯಿಂದ ಆತ್ಮ ರಕ್ಷಣೆಗಾಗಿ ಅತ್ತಿತ್ತ ಓಡಾಡುತ್ತಾರೆ. ಹಾಗಿರುತ್ತದೆ ಅಂದಿನ ಭಯಾನಕ ಸನ್ನಿವೇಶ. ಸೂರ್ಯನು ಪಶ್ಚಿಮದಿಂದ ಉದಯಿಸುವಾಗ ತೌಬದ ಬಾಗಿಲು ಮುಚ್ಚಲ್ಪಡುತ್ತದೆ. ಅಂದು ಯಾರು ಕಣ್ಣೀರು ಹಾಕಿ ತೌಬ ಮಾಡಿದರೂ ಅವರ ತೌಬ ಸ್ವೀಕರಿಸಲ್ಪಡುವುದಿಲ್ಲ.
*ಕುರ್'ಆನ್ ಎತ್ತಲ್ಪಡುವುದು*
ಕಾಲ ಚಕ್ರ ಸರಿದಂತೆ ಪಂಡಿತರ ಮರಣ ಅಧಿಕಗೊಳ್ಳುತ್ತದೆ. ಜನರಲ್ಲಿ ವಿದ್ಯೆಯ ಅಭಾವ ಎದ್ದು ಕಾಣುತ್ತದೆ. ಇದರೊಂದಿಗೆ ಜಗತ್ತು ಇನ್ನೊಂದು ದುರಂತವನ್ನು ಎದುರಿಸಬೇಕಾಗಿ ಬರುತ್ತದೆ. ಅದೇನೆಂದರೆ ಮುಸ್'ಅಫ್'ಗಳಿಂದ ಪವಿತ್ರ ಕುರ್'ಆನ್ ಮಾಯವಾಗುವುದು. ಮುಸ್ಲಿಂ ಲೋಕಕ್ಕೆ ಇದೊಂದು ಭೀಬತ್ಸ ಸಂಗತಿಯಾಗಿ ಪರಿಣಮಿಸುತ್ತದೆ. ಮುಸ್'ಹಫ್'ನಿಂದ ಅಕ್ಷರಗಳು ಕಣ್ಮರೆಯಾಗಿ ಕೇವಲ ಬಿಳಿ ಹಾಳೆಗಳು ಮಾತ್ರ ಉಳಿದುಕೊಳ್ಳುತ್ತದೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅದರಲ್ಲಿ ಒಂದೇ ಒಂದು ಅಕ್ಷರ ಕೂಡಾ ಪತ್ತೆ ಹಚ್ಚಲಾಗದಂತಹ ಪರಿಸ್ಥಿತಿ ಸಂಜಾತವಾಗಲಿದೆ. ಕುರ್'ಆನ್ ಕಂಠ ಪಾಠ ಮಾಡಿದ್ದ ಹಾಫಿಳ್ ಗಳ ಹೃದಯದಿಂದಲೂ ಕುರ್'ಆನ್ ಮಾಯವಾಗುತ್ತದೆ.
ಪವಿತ್ರ ಕುರ್'ಆನ್'ನ ಒಂದೇ ಒಂದು ಅಕ್ಷರವನ್ನು ಕಂಠಪಾಠ ಮಾಡಿದ ಯಾವನೇ ಒಬ್ಬ ವ್ಯಕ್ತಿ ಭೂಮಿ ಮೇಲೆ ಅಂದು ಕಾಣಲು ಸಿಗುವುದಿಲ್ಲ. "ಕುರ್'ಆನ್ ಅನ್ನು ಎತ್ತಲ್ಪಡುವ ಮುನ್ನ ಸಂಭವಿಸಲಾರದು" ಎಂದು ಇಬ್ನು ಮಸ್'ಊದ್ (ರ)ರವರು ಹೇಳಿದಾಗ "ಕುರ್'ಆನ್ ನಮ್ಮ ಮನಸ್ಸು ಮತ್ತು ಮುಸ್'ಅಫ್'ಗಳಲ್ಲಿ ಭದ್ರಪಡಿಸಿ ಕೊಂಡಿರುವಾಗ ಅದನ್ನು ಎತ್ತಲ್ಪಡುವುದಾದರೂ ಹೇಗೆ ಎಂದು ಯಾರೋ ಕೇಳಿದರು. ಅದಕ್ಕೆ " ಅದರ(ಕುರ್'ಆನಿನ) ಮೇಲೆ ಒಂದು ರಾತ್ರಿ ಆಗಮಿಸಲಿದ್ದು ಆಗ ಕುರ್'ಆನ್ ಕಂಠಪಾಠ ಮತ್ತು ಓದುವಿಕೆಯ ಪ್ರಕ್ರಿಯೆ ನಿಂತು ಹೋಗಲಿದೆ" ಎಂದು ಉತ್ತರಿಸಿದರು.
*ಒಂದು ಭಯಂಕರ ಹೊಗೆ*
ಕುರ್'ಆನ್ ಎತ್ತಲ್ಪಟ್ಟ ನಂತರ ಒಂದು ತುಣುಕು ಮೇಘವು ಆಕಾಶದಲ್ಲಿ ಗೋಚರಿಸಲಿದ್ದು ಅದು ವಿಶಾಲವಾಗಿ ಹರಡುತ್ತಾ ಕೊನೆಗೆ ಆಕಾಶ--ಭೂಮಿಗಳ ನಡುವೆ ಪೂರ್ಣ ಮಟ್ಟದಲ್ಲಿ ಹೊಗೆಯಾಡ ತೊಡಗುತ್ತದೆ. ಪಶ್ಚಿಮ, ದಕ್ಷಿಣ, ಉತ್ತರ, ಪೂರ್ವ ಹೀಗೆ ನಾನಾ ದಿಕ್ಕುಗಳಿಗೆ ವ್ಯಾಪಿಸುತ್ತದೆ.
*ಮುಂದುವರೆಯುತ್ತದೆ.....*
*ಪ್ರಿಯ ಸಹೋದರ ಸಹೋದರಿಯರೇ, ನಾವಿರುವುದು ಈಗ ಆಖಿರ ಝ್ಝಮಾನ್ ಕಾಲಘಟ್ಟದಲ್ಲಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಹರಾಂ ಗಳಿಂದ ತುಂಬಿ ತುಳುಕಿದೆ. ನಾವು ದಿನ ಬೆಳಗ್ಗೆದ್ದು ರಾತ್ರಿ ಮಲಗುವ ತನಕ ಕಾಣುವುದು ಹರಾಂ, ಕೇಳುವುದು ಹರಾಂ, ನಡೆಯುವುದು, ಮಾತಾಡುವುದು ಹರಾಂ, ನಾವೆಷ್ಟೆ ಒಳ್ಳೆಯವರಾಗಲು ಪ್ರಯತ್ನ ಪಟ್ಟರೂ ನಮ್ಮಲ್ಲಿ ಕಾಣುವ ಇಂದಿನ ಪರಿಸ್ಥಿತಿಯೂ ಹಾಗೆ ಮಾಡುತ್ತಿದೆ. ಮತ್ತೊಂದು ಬೇಸರದ ಸಂಗತಿಯೆಂದರೆ ನಮ್ಮಲ್ಲಿರುವ ಮೊಬೈಲ್'ನ ದುರುಪಯೋಗ ಇಂದು ಚಿಕ್ಕ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಯುವಕ ಯುವತಿಯರಲ್ಲಿ ಕಂಡು ಬರುತ್ತಿದೆ. ಅದರಲ್ಲಿರುವ ಅಶ್ಲೀಲ ವಿಡಿಯೋಗಳು, ಅರೆ ಬರೆ ವಸ್ತ್ರ ಧರಿಸಿ ಸಿನಿಮಾ ಡಾನ್ಸ್'ಗಳು ಮ್ಯೂಸಿಕ್ ಬ್ಯಾರಿ ಹಾಡುಗಳು ನೋಡಿ ಭೀಕರವಾದ ನರಕವನ್ನು ಸಂಪಾದಿಸುತ್ತಿರುವುದು ಖೇದಕರ. ಕಾರಣ ಇದು ಅಂತ್ಯ ದಿನದ ಮುನ್ನೂಚನೆಯಾಗಿದೆ. ಕಳೆದ ವರ್ಷ ಕೇರಳದಲ್ಲಿ ನಡೆದ ಭೀಕರ ಜಲ ಪ್ರಳಯವನ್ನು ಕಂಡು ಮನುಷ್ಯರು ಪಾಠ ಕಲಿಯದಿರುವುದು ಬೇಸರದ ಸಂಗತಿಯಾಗಿದೆ. ಮನುಷ್ಯರು ಮಾಡುವ ತಪ್ಪುಗಳಿಂದ ಅಲ್ಲಾಹನ ಭೀಕರ ಶಿಕ್ಷೆಯು ಯಾವಾಗಲೂ ಬಂದೆರಗಬಹುದು. ಒಂದೆಡೆ ಹವಾಮಾನಗಳ ಏರುಪೇರು. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಜನರನ್ನು ಕಂಗೆಡಿಸತೊಡಗಿದೆ. ಈಗಿಂದಿಗಲೇ ತಾಪಮಾನ ಕೂಡಿದೆ ಮುಂದಿನ ದಿನಗಳಲ್ಲಿ ಹೇಗಾದಿತು ಚಿಂತಿಸಿರಿ. ಈ ವಾರದ ಮೊದಲಲ್ಲೇ 35 ಡಿಗ್ರಿ ಸೆಲ್ಸಿಯಸ್ ಮಟ್ಟ ದಾಟಿದೆ. ಇನ್ನು ರಾಜ್ಯದ ಉತ್ತರ ಜಿಲ್ಲೆಗಳಲ್ಲಂತೂ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೇಗಾದಿತು ಎಂದು ಹವಾಮಾನ ತಜ್ಞರೇ ಆತಂಕ ಪಡುತ್ತಿದ್ದಾರೆ. ಇದೆಲ್ಲವೂ ಮನುಷ್ಯರು ಮಾಡುತ್ತಿರುವ ಅನಾಚಾರಗಳಿಂದ ಎಂದು ಬುದ್ದಿಯುಳ್ಳವರಿಗೆ ಗೊತ್ತಾಗುತ್ತದೆ.*

Comments