ಇಖಾಮತ್ ಮತ್ತು ಸುನ್ನತ್ ನಮಾಝ್...?
ಇಖಾಮತ್ ಕೊಡಲು ಸಮಯವಾಗಿದ್ದು ತಿಳಿದೂ ಕೆಲವರು ಸುನ್ನತ್ ನಮಾಝ್ ಆರಂಭಿಸುತ್ತಾರೆ. ಇದರ ವಿಧಿಯೇನು..? ವಿವರಿಸುವಿರಾ...?
➡ ಇಖಾಮತ್ ಕೊಡಲಾರಂಭಿಸಿದ ನಂತರ ಅಥವಾ ಇಖಾಮತ್ ಕೊಡಲು ಸಮಯ ಸನ್ನಿಹಿತವಾಗಿರುವಾಗ ಸುನ್ನತ್ ನಮಾಝ್ ಆರಂಭಿಸುವುದು ಪ್ರಸ್ತುತ ಜಮಾಅತ್ ನಮಾಝ್ ನಲ್ಲಿ ಪಾಲ್ಗೊಳ್ಳಬಯಸುವವರಿಗೆ ಕರಾಹತ್ ಆಗಿದೆ. ಫರ್ಳ್ ನಮಾಝ್ ಗಿಂತ ಮೊದಲಿನ ರವಾತಿಬ್ ನಮಾಝ್ ಫರ್ಳ್ ನಮಾಝ್ ನಿರ್ವಹಿಸುವುದರಿಂದ ಖಳಾ ಆಗುವುದಿಲ್ಲ. ಫರ್ಳ್ ನಮಾಝ್ ನ ಬಳಿಕವೂ ಮೊದಲಿನ ರವಾತಿಬ್ ನಮಾಝ್ ಅದಾ ಆಗಿದ್ದು ಆಗ ಅದನ್ನು ನಿರ್ವಹಿಸಬೇಕು. ಇಖಾಮತಿಗೆ ವೇಳೆಯಾಗಿದ್ದರೆ ಜಮಾಅತ್ ಸೇರಲು ಸಿದ್ಧನಾಗಬೇಕು. ಇನ್ನು ತಹಿಯ್ಯತ್ ನಮಾಝ್ ನಿರ್ವಹಿಸುವುದಾದರೂ ಮಸೀದಿಯೊಳಗೆ ಕುಳಿತುಕೊಳ್ಳದೇ ಜಮಾಅತ್ತಾಗಿ ನಮಾಝ್ ನಿರ್ವಹಿಸುವಾಗ ತಹಿಯ್ಯತನ್ನು ಸಂಕಲ್ಪಿಸಿಕೊಂಡರೆ ತಹಿಯ್ಯತಿನ ಪುಣ್ಯವೂ ಲಭ್ಯವಾಗುತ್ತದೆ. (ತುಹ್ಫಾ 2/234,322)
➖➖➖➖➖➖➖➖➖➖➖
ಅಲ್ಲಾಹನು ನಮಗೆಲ್ಲರಿಗೂ ಜಾಸ್ತಿಯಾಗಿ ಸತ್ಕರ್ಮಗಳನ್ನು ನಿರ್ವಹಿಸಲೂ ತೌಫೀಖ್ ನೀಡಲಿ- ಆಮೀನ್
Comments