Skip to main content

ಅಂತ್ಯ ದಿನದ ಲಕ್ಷಣಗಳು 7

ಅಂತ್ಯ ದಿನದ ಲಕ್ಷಣಗಳು : 7

            *ಸಿರಾತ್ ಪಾಲ*

     ನರಕಲೋಕದ ಮೇಲ್ಬಾಗದಲ್ಲಿ ಅಲ್ಲಾಹನು ಸಿರಾತ್ ಎಂಬ ಪಾಲನ್ನು ಹಾಕಿರುತ್ತಾನೆ. ಆ ಪಾಲದ ಮೇಲೆ ಪ್ರತಿಯೊಬ್ಬರೂ ಹಾದು ಹೋಗಲೇ ಬೇಕಾಗುತ್ತದೆ. ಸತ್ಯ ವಿಶ್ವಾಸಿಗಳು ಸತ್ಯ ನಿಷೇಧಿಗಳು ಹೀಗೆ ಎಲ್ಲರೂ ಆ ಪಾಲವನ್ನು ದಾಟಬೇಕಿದೆ. ಸತ್ಯ ನಿಷೇಧಿಗಳ ಪಾಲಿಗೆ ಅದು ತಲೆಗೂದಲಿಗಿಂತ ಸಣ್ಣದಾಗಿಯೂ ಖಡ್ಗಕ್ಕಿಂತ ಹರಿತವಾಗಿಯೂ ಕಾಣಿಸುತ್ತದೆ.

      ಸತ್ಯವಿಶ್ವಾಸಿಗಳು ಸಿರಾತ್ ಪಾಲವನ್ನು ಯಾವುದೇ ಪ್ರಯಾಸವಿಲ್ಲದೆ ಸುಲಭದಿಂದ ದಾಟಿ ಬಿಡುತ್ತಾರೆ.

      ಕೆಲವರು ಸಾಮಾನ್ಯ ರೀತಿಯಲ್ಲಿ ಮತ್ತೆ ಕೆಲವರು ಮಿಂಚಿನ ವೇಗದಲ್ಲಿ ಇನ್ನು ಕೆಲವರು ವಾಯುವಿನ ವೇಗದಲ್ಲಿ ಪಾಲವನ್ನು ದಾಟುತ್ತಾರೆ.

      ಸಿರಾತ್ ಪಾಲದ ಹತ್ತಿರ ಕಾರಿರುಳು ಆವರಿಸುತ್ತದೆ.ಸಜ್ಜನರಿಗೆ ಮಾತ್ರ ಅಲ್ಲಿ ಬೆಳಕು ಕಾಣಿಸುತ್ತದೆ.

       ಆ ದಿನ ಸತ್ಯವಿಶ್ವಾಸಿಗಳನ್ನೂ , ಕಪಟವಿಶ್ವಾಸಿಗಳನ್ನೂ  ಹಿಂದು ಮುಂದಾಗಿ ನಿಲ್ಲಿಸಲಾಗುವುದು. ಸತ್ಯವಿಶ್ವಾಸಿಗಳೊಂದಿಗೆ ಕಪಟ ವಿಶ್ವಾಸಿಗಳು ಹೇಳುತ್ತಾರೆ,

        ನೀವು ನಮಗೋಸ್ಕರ ಸ್ವಲ್ಪ ನಿಧಾನವಾಗಿ ನಡೆಯಿರಿ.ನಿಮ್ಮ ಪ್ರಕಾಶವನ್ನು  ನಾವು ಸ್ವಲ್ಪ ಪಡೆಯುತ್ತೇವೆ ಎಂದು.

     ಆಗ ಸತ್ಯವಿಶ್ವಾಸಿಗಳು ನೀವು ಹಿಂದಕ್ಕೆ ಮರಳಿ ಅಲ್ಲಿ ಪ್ರಕಾಶವನ್ನು ಹುಡುಕಿ ಎಂದು ಹೇಳುವರು. ಆ ಬಳಿಕ ಎರಡೂ ತಂಡದವರ ನಡುವೆ ಒಂದು ಗೋಡೆ ನಿರ್ಮಾಣವಾಗುತ್ತದೆ.

*ಮುಂದುವರೆಯುತ್ತದೆ....*

*ಪ್ರಿಯ, ಸಹೋದರ ಸಹೋದರಿಯರೇ*

       ಈ ಪ್ರಪಂಚವು ಯಾರಿಗೂ ಶಾಶ್ವತವಲ್ಲ. ಇಲ್ಲಿಯ ಅಧಿಕಾರ, ಸಂಪತ್ತು, ಐಶ್ವರ್ಯ, ಕಾರು, ಬಂಗ್ಲೆ, ಇಲ್ಲಿಯ ಸುಖ ಜೀವನ ಎಂದೂ ಶಾಶ್ವತವಲ್ಲ. ಸಮಯವು ಮುಂದಕ್ಕೆ ಚಲಿಸುತ್ತಿದೆ. ಮನುಷ್ಯನ ಆಯುಷ್ಯವು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಲೇ ಇದೆ. ಮನುಷ್ಯನ ಒಂದೊಂದು ಶ್ವಾಸವು ಮರಣಕ್ಕೆ ಹತ್ತಿರವಾಗುತ್ತಿದೆ. ಆದರೆ ಮನುಷ್ಯನು ಅಲ್ಲಾಹನನ್ನು ಮೆರೆತು  ದುನ್ಯಾದ ಆಟ, ವಿನೋದ ಆಡಂಭರದ ಶೋಕಿ ಜೀವನ ನಡೆಸುತ್ತಿರುವುದು ವಿಪರ್ಯಾಸವಲ್ಲವೇ?

       ಒಂದು ಸುಂದರ ಕುಟುಂಬ, ಆ ಕುಟುಂಬ ಗಂಡ, ಹೆಂಡತಿ ಮಕ್ಕಳು. ಅರಮನೆಯಂತಹ ಮನೆ. ಮನೆಯಲ್ಲಿ ಹಲವು ತರ ಭಕ್ಷ್ಯಭೋಜನಗಳು,  ಮನೆಯ ಯಜಮಾನ ದೊಡ್ಡ ಬ್ಯುಸಿನೆಸ್ ಮ್ಯಾನ್. ತಿರುಗಾಡಲು ಕೋಟಿ ಬೆಲೆಯ ಕಾರು. ಯಾವುದೇ ಕೊರತೆಯಿಲ್ಲದ ಎಂಜಾಯ್ ಲೈಫ್. ಆ ಕುಟುಂಬವು ಯಾವಾಗಲೂ ಸಂತೋಷದಿಂದಿರಬೇಕಾದರೆ. ಒಂದು ದಿನ ಆ ಕುಟುಂಬವು ಸಂತೋಷದಿಂದ ಯಾವುದೋ ಒಂದು ಕಾರ್ಯಕ್ರಮದ ನಿಮಿತ್ತ ಕೋಟಿ ಬೆಲೆಯ ಕಾರಿನಲ್ಲಿ ಸಂಚರಿಸುವಾಗ ಎಲ್ಲಿಂದಲೋ ಬಂದ ಟ್ಯಾಂಕರ್ ಇವರು ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಆ ಕುಟುಂಬ ಸಂಚರಿಸುತ್ತಿದ್ದ ಕೋಟಿ ಬೆಲೆಯ ಕಾರು ನುಜ್ಜುಗುಜ್ಜಾಯಿತು. ಆ ಕಾರಲ್ಲಿ ಸಂಚರಿಸುತ್ತಿದ್ದ ಕುಟುಂಬದಲ್ಲಿ ಹೆಂಡತಿ, ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಆದರೆ ಕುಟುಂಬದ ಯಜಮಾನ ಮಾತ್ರ ಪವಾಡ ರೀತಿಯಲ್ಲಿ ಬದುಕುಳಿದರು. ಸಂತೊಷದಲ್ಲಿದ್ದ ಆ ಕುಟುಂಬದ ಸಾವು ಈಡೀ ಊರೇ ಶೋಕ ಸಾಗರಲ್ಲಿ ಮುಳುಗಿತು. ಆ ಕುಟುಂಬದ ಸಂತೋಷ, ಆಡಂಭರ ಬದುಕು, ಸರ್ವವೂ ನುಚ್ಚು ನೂರಾಯಿತು. ಈದಾಗಿದೆ ಬದುಕು. ಸರ್ವ ಸಂತೋಷವನ್ನೂ ಸುಖಲೋಪರಿ ಜೀವನವನ್ನು ಮುರಿದು ಹಾಕುವ ಮರಣವನ್ನು ಜಾಸ್ತಿಯಾಗಿ ಸ್ಮರಿಸಿರಿ ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ನುಡಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ. ನಮ್ಮ ಕಣ್ಣ ಮುಂದೆ ಎಷ್ಟೊ ಜನಗಳು ಇದ್ದರು. ನಮ್ಮ ಕುಟುಂಬಸ್ಥರು, ಸಹಪಾಠಿಗಳು, ಹೀಗೆ ಅವರೆಲ್ಲ ಈಗ ಎಲ್ಲಿದ್ದಾರೆ? ಆರಡಿ ಮಣ್ಣಿನಲ್ಲಿ .ನಾಳೆ ನಮ್ಮ ಅವಸ್ಥೆಯೂ ಇದುವೇ ಆಗಿದೆ. ಚಿಂತನೆ ನಡೆಸಬೇಕಾದ ವಿಷಯವಿದು.

      ಪವಿತ್ರ ಕುರ್'ಆನ್ ಹೇಳುತ್ತದೆ. ಕುಲ್ಲು ನಫ್ಸಿನ್ ದ್ಸಾಯಿಕತುಲ್ ಮೌತ್. (ಎಲ್ಲ ಶರೀರಗಳೂ ಮರಣದ ರುಚಿಯನ್ನು ಸವಿಯಲಿಕ್ಕಿದೆಯೆಂದು).

     ಈ ದುನ್ಯಾದ ಬದುಕು ಕೇವಲ ಕನಸು ಮಾತ್ರ‌. ಶಾಶ್ವತ ಬದುಕು ಎಂದೆಂದಿಗೂ ಮುಗಿಯದ ಜೀವನವು ಪರಲೋಕದಲ್ಲಾಗಿದೆ. ಪರಲೋಕದ ನೈಜ ಬದುಕಿಗಾಗಿ ನಾವು ಇಂದು ಸತ್ಕರ್ಮಗಳು ಮಾಡಬೇಕಾಗಿದೆ. ಕಾರಣ ನಾವು ಯಾವಾಗ ಬೇಕಾದರೂ ಮರಣ ಹೊಂದಬಹುದು, ಮರಣ ಯಾವ ರೀತಿಯಲ್ಲಾದರೂ ಬರಬಹುದು. ಮರಣಾನಂತರ ಜೀವನಕ್ಕಾಗಿ ಅಲ್ಲಿಯ ಶಾಶ್ವತ ಸುಖಕ್ಕಾಗಿ ನಾವಿಲ್ಲಿ ಹಲವು ಕಷ್ಟಗಳೂ ತ್ಯಾಗಗಳು ಮಾಡಬೇಕಾಗಿದೆ.

     ಓ ಯುವ ಜನರೇ, ನಿಮ್ಮ ಸಮಯವನ್ನು ಅನಾವಶ್ಯಕವಾಗಿ ವ್ಯರ್ಥಗೊಳಿಸದಿರಿ. ಸಮಯವು ಅಮೂಲ್ಯವಾದುದು. ಹೋದ ಸಮಯವು ಮತ್ತೆಂದೂ ಹಿಂತಿರುಗಿ ಬರುವುದಿಲ್ಲ. ಪ್ರತ್ಯೇಕವಾಗಿ ಇಂದಿನ ಯುವಕರು ತಮ್ಮ ಸಮಯವನ್ನು ಬೀದಿ ಬದಿಗಳಲ್ಲಿ, ಅಂಗಡಿ ಬಾಗಿಲುಗಳಲ್ಲಿ, ಕ್ರಿಕೆಟ್ ಗ್ರೌಂಡ್'ಗಳಲ್ಲಿ ಕಾಲ ಕಳೆಯುತ್ತಿರುವುದು ಕಾಣುತ್ತಿದೆ. ರಾತ್ರಿ 12, 1 ಗಂಟೆ ಕಳೆದು ಮನೆಗೆ ಬರುವ ಯುವಕರಿದ್ದಾರೆ.ನಮ್ಮ ಯುವ ಸಮೂಹವು ಇಂದು ಗಾಂಜಾ, ಡ್ರಗ್ಸ್, ಮದ್ಯಪಾನದಂತಹ ಅಮಲು ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಮಗ್ರಿಬ್ ಬಾಂಗ್ ಸಮಯದಲ್ಲಿ ನಮಾಝ್ ಕಳಾ ಮಾಡಿ ಕ್ರಿಕೆಟ್ ಮ್ಯಾಚ್ ಆಡುತ್ತಿರುವ ಯುವಕರಿಗೇನೂ ಕಡಿಮೆಯಿಲ್ಲ. ತಮ್ಮ ಜೀವನವನ್ನು ಕ್ರಿಕೆಟ್, ಪುಟ್ಬಾಲ್ ಇನ್ನಿತರ ಆಟಗಳಿಗಾಗಿ ಮುಡಿಪಾಗಿಟ್ಟ ಯುವಕರು ನಮ್ಮಲ್ಲಿ ಧಾರಳವಿದ್ದಾರೆ.  ಹಾಗೂ ನಮ್ಮ ಯುವತಿಯರು ಮಗ್ರಿಬ್ ನಮಾಝ್ ಸಮಯದಲ್ಲಿ ಮನೆಯಲ್ಲಿ ಧಾರವಾಹಿ, ರಿಯಾಲಿಟಿ ಶೋ ಎಂಬ ನಾಚಿಗೆಟ್ಟ ಕಾರ್ಯಕ್ರಮಗಳನ್ನು ನೋಡಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ.

      ಅಲ್ಲಾಹನನ್ನು ಮರೆತು ಮರಣವನ್ನು ಮರೆತು ಈ ದುನ್ಯಾ ಶಾಶ್ವತವೆಂಬಂತೆ ನಮ್ಮ ಯುವ ಜನವು ಕಾಲ ಕಳೆಯುತ್ತಿದೆ.

      ಒಂದು ಗೇಣಿನಷ್ಟು ನಮ್ಮ ತಲೆ ಮೇಲೆ ಸೂರ್ಯ. ಕೆಲವರು ಸಂಪೂರ್ಣ, ಇನ್ನು ಕೆಲವರು ಕತ್ತಿನ ತನಕ, ಕೆಲವರು ಎದೆ ತನಕ, ಮತ್ತು ಕೆಲವರು ಸೊಂಟ ತನಕ, ಕೆಲ ಜನರು ಮುಟ್ಟಿನ ತನಕ, ಕೆಲವರು ಪಾದದ ತನಕ  ಅವರವರ ಪಾಪಗಳ ಅನುಸಾರ ಬೆವರಿನಲ್ಲಿ ಮುಳುಗುವ ಮಹ್'ಶರಾ ಲೋಕ (50,ವರ್ಷಗಳ ಕಾಲ ಸ್ವಲ್ಪನೂ ಅಲುಗಾಡದೆ ನಿಲ್ಲುವ ದಿನ ನಮ್ಮ ಮುಂದೆ ಬರಲಿದೆ) ಜನರೇ,

     ಅಲ್ಲಿಯ ಒಂದು ದಿನ ಇಲ್ಲಿಯ 50 ಸಾವಿರ ವರ್ಷಕ್ಕೆ ಸಮವಾದ ಆ ಮಹ್'ಶರಾ ಲೋಕದಲ್ಲಿ ಐವತ್ತು ವರ್ಷಗಳ ಕಾಲ ನಿಲ್ಲುವ ಆ ಸಮಯವು ಹೇಗಿರಬಹುದು. ಇಲ್ಲಿ 10 ನಿಮಿಷಗಳ ಕಾಲ ಬಿಸಿಲಲ್ಲಿ ಯಾರನ್ನಾದರೂ ಕಾದರೆ ನಮ್ಮಿಂದ ತಡೆಯಲಾಗುವುದಿಲ್ಲವಾದರೆ 50, ವರ್ಷಗಳ ಕಾಲ ಒಂದು ಗೇಣಿನಷ್ಟು ಉದಿಸುವ ಸೂರ್ಯನ ಕೆಳಗೆ ನಿಲ್ಲುವ ಮಹ್'ಶರಾ ಲೋಕ ನಮ್ಮ ಮುಂದಿದೆ ಎಂಬುವುದನ್ನು ಯಾರೂ ಮರೆಯಬಾರದು. ಅಂತಹ ಮಹ್'ಶರಾದಲ್ಲಿ ಏಳು ವಿಭಾಗದ ಜನರಿಗೆ ಅರ್'ಶ್'ನ ನೆರಳನ್ನು ಅಲ್ಲಾಹನು ನೀಡುವನು. ಅದರಲ್ಲಿ ಒಂದು ವಿಭಾಗವಾಗಿದೆ ಅಲ್ಲಾಹನನ್ನು ಅರಿತು ಕಣ್ಣೀರು ಹಾಕುವ ಯುವಕ|ಯುವತಿ, ಮತ್ತೊಂದು ವಿಭಾಗವಾಗಿದೆ ಒಬ್ಬಳು ಸುಂದರಿಯಾದ ಯುವತಿಯೊಬ್ಬಳು ಯುವಕನೊಬ್ಬನನ್ನು ಹಾಸಿಗೆಗೆ ಕರೆದಾಗ ಆ ಕುರಿತು ನನಗೆ ಅಲ್ಲಾಹನ ಭಯವಿದೆ ಎಂದು ಹೇಳಿ ದೂರ ಉಳಿದ ಯುವಕ ನಾಳೆ ಅರ್'ಶ್'ನ ನೆರಳಲ್ಲಿರುವನು. ಅಲ್ಲಾಹನು ಅರ್'ಶ್'ನ ನೆರಳು ಸಿಗುವವರ ಕೂಟದಲ್ಲಿ ನಮ್ಮೆಲ್ಲರನ್ನೂ ಸೇರಿಸಲಿ ಆಮೀನ್.

*ನರಕ ಲೋಕ*

      ನರಕ ಮತ್ತು ಸ್ವರ್ಗ ಎರಡೂ ಒಂದಕ್ಕೊಂದು ವಿರೋಧವಾಗಿರುವ ವಿಭಿನ್ನ ಪ್ರಪಂಚಗಳು. ಸ್ವರ್ಗದ ಮೂಲ ಸಂಪತ್ತು ಸುಖ ಮತ್ತು ನೆಮ್ಮದಿಯಾದರೆ ದುಃಖ ಮತ್ತು ಯಾತನೆಯೇ ನರಕದ ಆಸ್ತಿ. ಅಲ್ಲಿ ನೆಮ್ಮದಿಯ ನೆಲೆ ಇಲ್ಲ. ಅದೊಂದು ಭಯಾನಕ ಪ್ರಪಂಚ. ಎಲ್ಲಿ ನೋಡಿದರೂ ಎಡೆ ಬಿಡದೆ ಶಿಕ್ಷೆ. ಭೀಕರ ನರಳಾಟ. ಮುಗಿಲು ಮುಟ್ಟುವ ಅಟ್ಟಹಾಸ. ಚೀರಾಟಗಳ ಸರಮಾಲೆ. ಬೆಂಕಿಯ ಕೆಂಡದಲ್ಲಿ ನಿರ್ಮಿತಗೊಂಡ ಹಿಂಸಾತ್ಮಕ ಪಾತಕಿ ಪ್ರಪಂಚವದು.

    ಐದು ವಕ್ತ್ ನಮಾಝ್ ನಂತರದ ದುಅಗಳಲ್ಲಿಯೂ ಎಲ್ಲ ದುಅಗಳ ಕೊನೆಯಲ್ಲಿಯೂ ನಾವು ಪ್ರಾರ್ಥಿಸುವ ಪ್ರಾರ್ಥನೆಯಾಗಿದೆ (ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ ವಫಿಲ್ ಆಖಿರತಿ ಹಸನತನ್ ವಕಿನಾ ಅಝಾಬನ್ನಾರ್) ಅಲ್ಲಾಹುವೇ ನರಕ ಶಿಕ್ಷೆಯಿಂದ ನಮ್ಮನ್ನು ಪಾರು ಮಾಡು ಎಂದು,  ಎಲ್ಲಾ ಶುಕ್ರವಾರದ ಎರಡನೇ ಖುತುಬಾದಲ್ಲಿ ನಡೆಸುವ ಒಂದು ಪ್ರಾರ್ಥನೆಯಾಗಿದೆ. (ಅಲ್ಲಾಹುಮ್ಮ ಅಜ್'ರ್'ನಾ ಮಿನನ್ನಾರ್) ಅಲ್ಲಾಹುವೇ ನರಕ ಶಿಕ್ಷೆಯಿಂದ ನಮ್ಮನ್ನು ಕಾಪಾಡು. ಎಲ್ಲಾ ಮಗ್ರಿಬ್ ಹಾಗೂ ಸುಬುಹಿ ನಮಾಝಿನ ನಂತರ 7  ಸಲ ಹೇಳಲು ಸುನ್ನತ್ತಿರುವ ಒಂದು ದುಅ ಆಗಿದೆ (ಅಲ್ಲಾಹುಮ್ಮ ಅಜ್'ರ್'ನಾ ಮಿನನ್ನಾರ್) ಅಲ್ಲಾಹುವೇ ನರಕ ಶಿಕ್ಷೆಯಿಂದ ನಿನ್ನಲ್ಲಿ ನಾನು ಕಾವಲು ಬೇಡುತ್ತೇನೆ ಎಂದು. ಭೀಕರ ತಾಣವಾಗಿದೆ ನರಕ. ಅಲ್ಲಿ ಉತ್ತಮವಾದ ಬದುಕೋ, ಶಾಶ್ವತವಾದ ಸಾವೋ ಇಲ್ಲದ ಭೀಕರವಾದ ಹಾವು, ಚೇಳುಗಳ ಹಾಗೂ ನರಕದ ಬೆಂಕಿಯಲ್ಲಿ ಸೃಷ್ಟಿಸಿದ ಹುಲಿ, ಚಿರತೆ, ಸಿಂಹ, ಕ್ರೂರ ಮೃಗಗಳ ತಾಣವಾಗಿದೆ ನರಕ. ಅಲ್ಲಿಯ ಕ್ರೂರ ಮೃಗಗಳು ನರಕ ವಾಸಿಯ ಅಂಗಾಂಗ ಗಳನ್ನು  ತಿನ್ನುವಾಗ ಪುನಃ ಬೇರೆಯೇ ಅಂಗಾಂಗಗಳು ಉಂಟಾಗುತ್ತದೆ. ಅದು ಮತ್ತು ಮತ್ತು ತಿನ್ನುವುದು. ಎಷ್ಟು ತಿಂದರೂ ಅಲ್ಲಿಯ ಕ್ರೂರ ಮೃಗಗಳ ಹಸಿವು ತಣಿಸುವುದಿಲ್ಲ. ಅಂತಹ ಭೀಕರ ತಾಣವಾಗಿದೆ ನರಕ.

      ಅಲ್ಲಾಹನು ಸತ್ಯವನ್ನು ದಿಕ್ಕರಿಸುವವರಿಗೆ ಶಿಕ್ಷೆ ನೀಡುವ ಉದ್ದೇಶದಿಂದ ಈ ಮಹಾ ಅಗ್ನಿ ಕುಂಡವನ್ನು ನಿರ್ಮಿಸಿದ್ದು. ಇದು ದುಷ್ಟರಿಗೆ ಪರಲೋಕದಲ್ಲಿ ದೊರೆಯುವ ಪಾಪದ ಫಲ.

      ನರಕ ವಾಸಿಗಳ ಸ್ಥಿತಿ ಅತ್ಯಂತ ಭೀಬತ್ಸ ಮತ್ತು ಅತೀ ಭಯಂಕರ. ಅದನ್ನು ಸರಿಯಾಗಿ ಮನಸ್ಸಿನಲ್ಲಿ  ಊಹಿಸಿಕೊಂಡರೆ ಹೃದಯವೇ ಒಡೆದು ಹೋಗಬಹುದು‌. ಅಲ್ಲಿನವರಿಗೆ ಹಸಿವೆಯನ್ನು ನೀಗಿಸುವ ಆಹಾರವಿಲ್ಲ. ಕುಡಿಯುವ ನೀರಿಲ್ಲ. ಇದ್ದರೂ ಅವೆಲ್ಲ ಬೆಂಕಿಯಿಂದ ಸೃಷ್ಟಿಸಲ್ಪಟ್ಟ ಒಂಥರ ಅನ್ನ ಪಾನೀಯವಾಗಿರುತ್ತದೆ.

       ನರಕದ ಬೆಂಕಿಯನ್ನು ಭೌತಿಕ ಜಗತ್ತಿನಲ್ಲಿ ಕಾಣುವ ಬೆಂಕಿಯೊಂದಿಗೆ ಹೋಲಿಸಲಾಗದು.

       ಅದು ಸಾವಿರಾರು ವರ್ಷಕಾಲ ನಿರಂತರ ಉರಿದು ಈಗ ಅದು ಕರಾಳ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಆ ಭಯಾನಕ ಅಗ್ನಿಯ ಬಗ್ಗೆ ಪ್ರವಾದಿ(ಸ.ಅ)ರವರು ಹೇಳುವುದನ್ನು ಹಝ್ರತ್ ಅಬೂ ಹುರೈರಾ(ರ) ಹೀಗೆ ಉದ್ದರಿಸುತ್ತಾರೆ. ಪ್ರವಾದಿ (ಸ.ಅ) ಹೇಳಿದರು. ಮಾನವರು ಭೂಲೋಕದಲ್ಲಿ ಬಳಸುವ ಬೆಂಕಿ ನರಕದ ಬೆಂಕಿಯ 70 ಭಾಗದ ಒಂದಂಶ ಮಾತ್ರ.

       ನರಕದಿಂದ ಒಂದು ವಿಧ ಕಪ್ಪು ಹೊಗೆ ಮೇಲೆಳಲಿದೆ. ಆ ಹೊಗೆಯ ನೆರಳು ಇಡೀಯ ನರಕವನ್ನು ಆವರಿಸುತ್ತದೆ.

      ಅನ್ಯಾಯಕ್ಕೆ ಪ್ರತೀಕಾರ ಎಂಬಂತೆ ಪಾಪಿಗಳು ನರಕದಲ್ಲಿ ಬೆಂದು ಕರಕಲಾದರೂ ಸಾಯುವುದಿಲ್ಲ. ಮತ್ತೆ ಮತ್ತೆ ಅವರನ್ನು ಪೂರ್ವ ಸ್ಥಿತಿಗೆ ತಂದು ಯಥಾ ಪ್ರಕಾರ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ.

     ಬೆಂಕಿಯ ತೀವ್ರತೆಯಿಂದ ಅವರ ಮೈ ಕೈ ಚರ್ಮಗಳು ಹುಣ್ಣಾಗುವಾಗಲೆಲ್ಲ ಅವರಿಗೆ ಬೇರೆ ಚರ್ಮವನ್ನು ತೊಡಿಸಿ ಪುನಃ  ಶಿಕ್ಷಿಸಲಾಗುತ್ತದೆ.

      ಅವರು ಕುಡಿಯಲು ನೀರು ಕೇಳುವಾಗ ರಕ್ತ ಕಲುಷಿತ ಕೀವು ಹರಿದ ಪಾನೀಯ ನೀಡಲಾಗುತ್ತದೆ. ಅದನ್ನು ಪಾಪಿಗಳ ಮೂಗಿನ ಹತ್ತಿರ ಹಿಡಿಯುವಾಗಲೇ ಅವರಿಗೆ ವಾಂತಿ ಬಂದು ಬಿಡುತ್ತದೆ. ಅದನ್ನು ಬಲವಂತವಾಗಿ ಪಾಪಿಗಳ ಬಾಯಿಗೆ ಮಲಕುಗಳು ಹುಯ್ಯುತ್ತಾರೆ. ಅದರ ದುರ್ವಾಸನೆ ಸಹಿಸಲಾಗದೇ ಅದು ಅವರ ಗಂಟಲಿನಿಂದ ಮೇಲಕ್ಕೆ ಹರಿದು ಬರುತ್ತದೆ‌.

     ಓರ್ವ ನರಕವಾಸಿ ತನ್ನ ಅಂಗೈಯಿಂದ ಭೂಮಿಯನ್ನು ಸ್ಪರ್ಶಿಸಿದರೆ ಅದರ ಬಿಸಿಯ ಕಾರಣದಿಂದ ಇಡೀಯ ವಿಶ್ವವೇ ಕರಗಿ ಹೋಗುವುದೆಂದು ಚರಿತ್ರೆ ಗ್ರಂಥದಲ್ಲಿ ಕಾಣುತ್ತದೆ.

      ಭೂಮಿಯಲ್ಲಿರುವ ಎಲ್ಲ ಕಟ್ಟಿಗೆಗಳನ್ನು ಒಂದುಗೂಡಿಸಿ ಬೆಂಕಿ ಹಚ್ಚಿದರೆ ನರಕಾಗ್ನಿಯ ಎಪ್ಪತ್ತರಲ್ಲೊಂದರಷ್ಟು ಶಕ್ತಿ ಕೂಡಾ ಈ  ನಮ್ಮ ಬೆಂಕಿಯಲ್ಲಿ ಕಾಣಿಸಲಾರದು. ನರಕದ ಬೆಂಕಿಯ ತಾಪ ತುಂಬಾ ಕಠಿಣ. ಅದರ ಆಳ ಬಹು ವ್ಯಾಪಕವಾದುದು. ಜಹನ್ನಂ ಎಂಬ ನರಕಕ್ಕೆ ಎಸೆಯಲ್ಪಟ್ಟ ಕಲ್ಲೊಂದು ಅದರ ದಡದಿಂದ ಬುಡಕ್ಕೆ ತಲುಪಲು 70 ವರ್ಷಗಳ ಕಾಲ ಬೇಕಾಗಿ ಬರುವುದೆಂದು ಹದೀಸ್'ನಿಂದ ತಿಳಿದು ಬಂದಿದೆ.

ನರಕದ ಭೀಕರತೆಯ ಕೆಲವೊಂದನ್ನು ನಾಳೆ ತಿಳಿಯೋಣ ಇಂಶಾ ಅಲ್ಲಾಹ್.

*ಮುಂದುವರೆಯುತ್ತದೆ....*

*ಪ್ರೀತಿಯ ಮುಸ್ಲಿಂ ಸಮುದಾಯವೇ......*

     ಈಗ ನಾವಿರುವುದು ಅಂತ್ಯ ದಿನದ ಕಾಲಘಟ್ಟದಲ್ಲಿ. ನಾವು ತೆಗೆಯುವ, ಬಿಡುವ ಒಂದೊಂದು ಶ್ವಾಸವು ನಮ್ಮ ಮರಣಕ್ಕೆ ಹತ್ತಿರವಾಗುತ್ತಿದೆ. ಚಪ್ಪಲಿಯ ದಾರಕ್ಕಿಂತಲೂ ಹತ್ತಿರದಲ್ಲಿದೆ ನಮ್ಮ ಮರಣ. ಈ ಬದುಕು ಯಾರಿಗೂ ಶಾಶ್ವತವಲ್ಲ. ಇಲ್ಲಿಯ ಸುಖ ಸಂಪತ್ತುಗಳಿಂದ ಹಿಡಿದು ಇಲ್ಲಿಯ ಪತ್ನಿ, ಮಕ್ಕಳು, ಸ್ನೇಹಿತರು, ತಂದೆ, ತಾಯಿ, ಸಹೋದರ, ಸಹೋದರಿ, ಮನೆ, ಕಾರು, ಅಧಿಕಾರ ಯಾವುದಕ್ಕೂ ಇಲ್ಲಿ ನೆಲೆಯೆಂಬುವುದಿಲ್ಲ ಸರ್ವವೂ ಈ ದುನ್ಯಾದಲ್ಲಿ ಸರ್ವ ನಾಶ ಹೊಂದುವುದು. ಹಾಗೂ ಈ ಕಾಣುವ ಪ್ರಪಂಚವೂ ಸರ್ವನಾಶ ಹೊಂದುವುದು. ಇಲ್ಲಿಯ ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಸಮುದ್ರ, ಪರ್ವತಗಳು,ಸರ್ವ ಜೀವ ಜಾಲಗಳೂ ಹೀಗೆ ಎಲ್ಲವೂ ಸರ್ವ ನಾಶ ಹೊಂದಲಿದೆ.ಈ ಭೂಮಿಯು ಅಂದು ಭಾರಿ ಕಂಪನಗೊಳ್ಳಲಿದೆ. ಅಲ್ಲಾಹನು ಪವಿತ್ರ ಕುರ್'ಆನ್ ನಲ್ಲಿ ಹೇಳುತ್ತಾನೆ.

   *ಭೂಮಿಯು ತನ್ನ ಸಂಪೂರ್ಣ ಉಗ್ರತೆಯೊಂದಿಗೆ ಕುಳುಕಲ್ಪಡುವಾಗ (ಅಂದರೆ ಭೂಕಂಪವಾಗುವಾಗ)*

*ಭೂಮಿಯು ತನ್ನೊಳಗಿನ ಸಕಲ ಹೊರೆಗಳನ್ನು ಹೊರ ಹಾಕಿ ಬಿಡುವಾಗ*

*ಅಂದು ಮನುಷ್ಯನು ಕೇಳುವನು ಇದಕ್ಕೇನಾಗುತ್ತಿದೆ (ಈ ಭೂಮಿಗೆ) ಎಂದು ಕೇಳುವಾಗ*

*ಅಂದು ಅದು(ಭೂಮಿ) ತನ್ನ ಮೇಲೆ ಗತಿಸಿದ  ಸ್ಥಿತಿ ಗತಿಗಳನ್ನು ವಿವರಿಸುವುದು*

*ಏಕೆಂದರೆ ಅದಕ್ಕೆ ನಿನ್ನ ಪ್ರಭು ಹಾಗೆ ಮಾಡಬೇಕೆಂದು ಆದೇಶ ಕೊಟ್ಟಿರುವನು.*

*ಅಂದು ಜನರು ವಿಭಿನ್ನ ಸ್ಥಿತಿಗಳಲ್ಲಿ ಮರಳುವರು. ಅವರ ಕರ್ಮಗಳು ಅವರಿಗೆ ತೋರಿಸಲ್ಪಡಲಿಕ್ಕಾಗಿ*

*ತರುವಾಯ ಯಾರು ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದನೋ ಅವನು ಅದನ್ನು ಕಂಡೇ ತೀರುವನು*

*ಮತ್ತು ಯಾರು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದನೋ ಅದನ್ನು ಅವನು ಕಂಡೇ ತೀರುವನು (ಸೂರಾ : ಅಝ್ಝಿಲ್'ಝಾಲ್ 1:8)*

*ಭೂಲೋಕದ ಬೆಂಕಿ*

      ಅಲ್ಲಾಹನು ಆದಂ ನಬಿ(ಅ)ಯವರನ್ನು ಭೂಮಿ ಲೋಕಕ್ಕೆ ಕಳುಹಿಸಿದ ನಂತರ ಜಿಬ್ರೀಲ್(ಅ) ಅವರನ್ನು ಕರೆದು ನರಕ ಲೋಕದ ಕಾವಲುಗಾರ ಮಾಲಿಕ್(ಅ)ರವರ ಬಳಿ ಹೋಗಿ ಅವರ ಸಂತತಿಗಳಿಗೆ ಭೂಮಿಯಲ್ಲಿ ಅನ್ನಹಾರ ತಯಾರಿಸಲು ಒಂದಿಷ್ಟು ಬೆಂಕಿಯನ್ನು ಪಡೆದು ಕೊಂಡು ಬರುವಂತೆ ಆದೇಶ ನೀಡಿದರು. ದೇವಚರ ಜಿಬ್ರೀಲ್(ಅ) ಕೂಡಲೇ ನರಕ ಲೋಕದ ಹತ್ತಿರ ತೆರಳಿ ಮಾಲಿಕ್(ಅ) ಎಂಬ ದೇವಚರರನ್ನು ಸಂಧಿಸಿದರು. ಬೆಂಕಿ ತರಲು ಬಂದಿರುವುದಾಗಿ ಹೇಳಿದರು.

    ನಿಮಗೆ ಎಷ್ಟು ಬೆಂಕಿ ಬೇಕು?
      ಮಾಲಿಕ್(ಅ)ರ ಪ್ರಶ್ನೆ
      ನನಗೆ ಒಂದು ಖರ್ಜೂರದ ಪ್ರಮಾಣ ಬೆಂಕಿ ಸಿಕ್ಕಿದರೆ ಸಾಕು. ಜಿಬ್ರೀಲ್(ಅ)ರ ಉತ್ತರ.

    ಇಲ್ಲ ಸಾಧ್ಯವಿಲ್ಲ. ನಿಮಗೆ ನಾನು ಒಂದು ಖರ್ಜೂರದಷ್ಟು  ಪ್ರಮಾಣದಲ್ಲಿ ಬೆಂಕಿ ಕೊಟ್ಟರೆ ಅದರ ಬಿಸಿಯ ತಾಪದಿಂದ ಇಡೀಯ ಪ್ರಪಂಚವೇ ಕರಗಿ ಹೋಗಲಿದೆ.

    ಹಾಗಾದರೆ ಖರ್ಜೂರದ ಎಸಳಿನಷ್ಟು ಪ್ರಮಾಣದಲ್ಲಿ ಕೊಡಬಾರದೇ?

     ಅಷ್ಟು ಕೊಡುವುದಾದರೆ ಆಕಾಶದಿಂದ ಮಳೆ ಸುರಿಯದು. ಭೂಮಿಯಲ್ಲಿ ಕೃಷಿ ಬೆಳೆಯದು, ಮಾಲಿಕ್(ಅ)ರವರ ಉತ್ತರ ಕೇಳಿದಾಗ ಜಿಬ್ರೀಲ್(ಅ)ರವರು ಓ ನನ್ನ ಪ್ರಭು ನಾನು ಎಷ್ಟು ಪ್ರಮಾಣದ ಅಗ್ನಿಯನ್ನು ತೆಗೆದು ಕೊಳ್ಳಲಿ ಎಂದು ಅಲ್ಲಾಹನಲ್ಲಿ ಕೈ ಎತ್ತಿ ಬೇಡಿದರು. ಆಗ ಒಂದು ಅಣುವಿನಷ್ಟು ಬೆಂಕಿ ತೆಗೆದುಕೊ ಎಂಬ ಉತ್ತರ ದೊರೆಯಿತು.

     ಜಿಬ್ರೀಲ್(ಅ)ಮರು ಅಷ್ಟು ಪ್ರಮಾಣದ ಬೆಂಕಿ ತೆಗೆದು ಕೊಂಡರು. ನಂತರ ಅದನ್ನು ಎಪ್ಪತ್ತು ತರದ ಅನುಗ್ರಹೀತ ನದಿಗಳಲ್ಲಿ ತೊಳೆದು ತಣ್ಣಾಗಾಗಿಸಿದರು. ಆ ಬಳಿಕ ಬೆಂಕಿಯನ್ನು ತೆಗೆದು ಕೊಂಡು ಆದಮ್(ಅ)ರವರ ಹತ್ತಿರ ಆಗಮಿಸಿದರು. ಅಲ್ಲೊಂದು ಎತ್ತರದ ಪರ್ವತವಿತ್ತು. ಬೆಂಕಿಯನ್ನು ಅದರ ಮೇಲೆ ಇಟ್ಟರು. ಏನದ್ಭುತ ಆ ಕೂಡಲೇ ಪರ್ವತವು ಕರಗಿ ಹೋಯಿತು. ಅಲ್ಲೆಲ್ಲ ಭಯಂಕರ ಹೊಗೆ ಕಾಣಿಸಿಕೊಂಡಿತು. ಇಂದು ನಾವು ಉಪಯೋಗಿಸುತ್ತಿರುವ ಬೆಂಕಿ ಅಂದು ಜಿಬ್ರೀಲ್(ಅ) ನರಕದಿಂದ  ತಂದ ಅಣುಗಾತ್ರದ ಬೆಂಕಿಯ ಪರಿಷ್ಕೃತ ಭಾಗ ಎಂಬುದನ್ನು ಮೆರೆಯುವಂತಿಲ್ಲ.

      ನರಕದ ಕುರಿತು  ಅದರಲ್ಲಿರುವ ಶಿಕ್ಷೆಯ ಕುರಿತು ಎಷ್ಟು ಹೇಳಿದರೂ ಮುಗಿಯದು. ಅಲ್ಲಿರುವ ಹಾವು, ಚೇಳುಗಳ ಒಂದು ಕಡಿತದ ಅಸಹನೀಯ ನೋವು 50, ಸಾವಿರ ವರ್ಷಗಳ ಕಾಲವಾಗಿದೆ. ನರಕದಲ್ಲಿ ನರಕ ವಾಸಿಗಳನ್ನು ಶಿಕ್ಷಿಸಲ್ಪಡುವ ಝಬಾನಿ ಮಲಕುಗಳು ಭೀಕರವಾಗಿದ್ದಾರೆ. ನರಕವಾಸಿಗಳ ಚೀರಾಟ, ನರಳಾಟ ಅಸಹನೀಯವಾದುದು.

     ಸ್ವಹಾಬಿಗಳು ನರಕದ ಕುರಿತುಳ್ಳ ಆಯತ್'ಗಳು ಕೇಳುವಾಗ ಕೆಲವು ಸ್ವಹಾಬಿಗಳು ಬೋದವಿಲ್ಲದೆ ಬೀಳುತ್ತಿದ್ದರು, ಕೆಲವು ಸ್ವಹಾಬಿಗಳು ಭಯದಿಂದ ಅಳುತ್ತಿದ್ದರು ಇನ್ನು ಕೆಲವು ಸ್ವಹಾಬಿಗಳ ಮುಖವು ಭಯದಿಂದ ಕೆಂಪೇರುತ್ತಿತ್ತು.
ಕುರ್'ಆನಿನ ಅನೇಕ ಕಡೆಗಳಲ್ಲಿ ನರಕದ ಕುರಿತುಳ್ಳ ವಿಷಯಗಳಿವೆ. ಒಂದೆರಡನ್ನು ತಿಳಿಯೋನ.

 *ಪಾಪಗಳಿಸುವವರೂ, ಪಾಪ ಕಾರ್ಯಗಳಿಂದ ಆವರಿಸಲ್ಪಟ್ಟವರೂ ಯಾರೇ ಇರಲಿ, ಅವರು ನರಕದವರು ಮತ್ತು ಸದಾ ಕಾಲ ನರಕದಲ್ಲೇ ಇರುವರು*
*ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡುವವರು ಸ್ವರ್ಗದವರು ಮತ್ತು ಅವರು ಸದಾ ಕಾಲ ಸ್ವರ್ಗದಲ್ಲಿರುವರು (ಸೂರಾ ಅಲ್ ಬಕರಾ 81 : 82)*

  *ನಿಮಗೆ ಎಚ್ಚರಿಕೆ ನೀಡಲಾಗುತ್ತಿದ್ದ ನರಕವು ಇದುವೇ ಆಗಿದೆ, ನೀವು ಭೂಲೋಕದಲ್ಲಿ ಮಾಡುತ್ತಿದ್ದ ಸತ್ಯನಿಷೇಧದ ಫಲವಾಗಿ ಈಗ ಇದರ ಇಂಧನವಾಗಿರಿ, ಇಂದು ನಾವು ಇವರ ಬಾಯಿಗಳಿಗೆ ಮುದ್ರೆಯನ್ನೊತ್ತಿ ಬಿಡುವೆವು, ಇವರು ಭೂಲೋಕದಲ್ಲಿ ಏನು ಸಂಪಾದಿಸುತ್ತಿದ್ದರೆಂದು ಇವರ ಕೈಗಳು ನಮ್ಮೊಡನೆ ಮಾತನಾಡುವುವು ಮತ್ತು ಇವರ ಕಾಲುಗಳು ಸಾಕ್ಷ್ಯ ಹೇಳುವುವು(ಸೂರಾ ಯಾಸೀನ್ 63 :64 : 65)*

*ಮುಂದುವರೆಯುತ್ತದೆ.......*

*ಪ್ರೀತಿಯ ಮುಸ್ಲಿಂ ಭಾಂದವರೇ,*

   ಕಾಲವು ಹತ್ತಿರವಾಗುತ್ತಿದೆ. ಅಂದರೆ ಸಮಯವು ಬೇಗ ಬೇಗನೇ ಓಡುತ್ತಿದೆ‌. ವರ್ಷಗಳು ತಿಂಗಳುಗಳ ಹಾಗೆ, ತಿಂಗಳುಗಳು ವಾರಗಳ ಹಾಗೆ, ವಾರಗಳು ದಿನಗಳ ಹಾಗೆ, ದಿನಗಳು ಗಂಟೆಗಳ ಹಾಗೆ, ಹಾಗೂ ಗಂಟೆಗಳು ನಿಮಿಷಗಳ ಹಾಗೆ ಓಡುತ್ತಿದೆ. ಹಿಂದೆ ಒಂದು ದಿನ ಕಳೆಯುವಾಗ ಒಂದು ವಾರ ಕಳೆದ ಹಾಗಿತ್ತು. ಆದರೆ ಇಂದು ಒಂದು ವಾರಗಳು ದಿನಗಳ ಹಾಗೆ ಓಡುತ್ತಿದೆ. ಹೌದು ಅಂತ್ಯ ದಿನ ಸಮೀಪಿಸುವಾಗ ಕಾಲಗಳು ಅತೀ ಬೇಗನೇ ಓಡುತ್ತಿರುತ್ತದೆ. ಹಾಗೇಯೇ ಮನುಷ್ಯನ ಆಯುಸ್ಸು ಬೇಗನೇ ಮುಗಿಯುತ್ತಿರುತ್ತದೆ. ಇಂದು ಅನಾವಶ್ಯಕಗಳಲ್ಲಿ ಕಾಲ ಕಳೆಯುವ ಯುವ ಸಮೂಹಕ್ಕೆ ಒಂದು ಸುವರ್ಣಾವಕಾಶ ಬಂದೊದಗಿದೆ. ನಮಾಝ್, ಉಪವಾಸ, ದ್ಸಿಕ್ರ್, ಸ್ವಲಾತ್, ಇನ್ನಿತರ ಇಬಾದತ್'ಗಳಲ್ಲಿ ಕಾಲ ಕಳೆಯುವ ಸುಂದರ ದಿನಗಳು.

    ರಜಬ್ ಎಂಬ ಪುಣ್ಯ ತಿಂಗಳು ನಮಗೆ ಮತ್ತೊಮ್ಮೆ ಆಗಮಿಸಿದೆ. ರಜಬ್, ಶಹಬಾನ್, ರಮಳಾನ್ ಎಂಬ ಪುಣ್ಯವೇರಿದ ಶುಭ ದಿನಗಳಲ್ಲಿ ಅಲ್ಲಾಹನಿಗೆ ಹತ್ತಿರವಾಗುವ ಪುಣ್ಯ ಸಮಯ. ಈ ಸಮಯಗಳು ನಮಗೆ ಮುಂದಿನ ದಿನಗಳಲ್ಲಿ ಅಥವಾ ಮುಂದಿನ ವರ್ಷ ಸಿಗಬಹುದಾ ಎಂಬ ಗ್ಯಾರಂಟಿ ಇಲ್ಲ. ಇಂತಹ ಪುಣ್ಯ ಸಮಯಗಳಲ್ಲಿ , ಎಲ್ಲರೂ ಸುಖ ನಿದ್ರೆಯಲ್ಲಿರುವಾಗ ಅರ್ಧರಾತ್ರಿ ಎದ್ದು ತಹಜ್ಜುದ್ ನಮಾಝ್ ನಿರ್ವಹಿಸಿ ತಿಳಿದೋ, ತಿಳಿಯದೋ ಮಾಡಿದ ತಪ್ಪುಗಳಿಗೆ ಅಲ್ಲಾಹನಲ್ಲಿ ಕಣ್ಣೀರಿಳಿಸಿ ಪಶ್ಚಾತ್ತಾಪಿಸಿರಿ, ತೌಬ ಮಾಡಿರಿ. ಖಂಡಿತವಾಯಿಯೂ  ಅಲ್ಲಾಹನು ಅಂತಹ ತೌಬಗಳನ್ನು ಸ್ವೀಕರಿಸುತ್ತಾನೆ. ಅತ್ಯಧಿಕ ಮಾಫಿ ನೀಡುವವನಾಗಿದ್ದಾನೆ.ಹಾಗೂ ಅಲ್ಲಾಹನು ಅತ್ಯಧಿಕ ಕರುಣಾಮಯಿಯಾಗಿದ್ದಾನೆ.

       *ಕೊನೆಗೆ* ನಮ್ಮ ದಿನ ನಿತ್ಯದ ಚರ್ಚೆಯೂ ದುನ್ಯಾದ ವಿಷಯವಾಗಿದೆ. ಆದರೆ ನಮಗೆ ಇನ್ನು ಬರಲಿರುವ ಶಾಶ್ವತ ಲೋಕವಾದ ಆಖಿರದ ಕುರಿತುಳ್ಳ ಚರ್ಚೆಯು ನಮಗೆ ಬೇಡವಾಗಿದೆ. ಕಾರಣ ನಮ್ಮ ಹೃದಯದ ಈಮಾನ್ ಎಂಬ ಪ್ರಕಾಶ ಇಲ್ಲವಾಗಿದೆ. ಅಲ್ಲಾಹನು ನಮಗೆ ಈಮಾನ್ ನೀಡಿ ಅನುಗ್ರಹಿಸಲಿ. ಆಮೀನ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...