*ಹುಟ್ಟಿದ ದಿನವೇ ಕೆಲಸಕ್ಕೆ ಹಾಜರಾಗುವ ಜೇಡ*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ಎಂಟು ಗಿಡ್ಡವಾದ ಕಾಲುಗಳು ಮತ್ತು ಆರು ದೊಡ್ಡ ಕಣ್ಣುಗಳಿರುವ ಒಂದು ವಿಚಿತ್ರ ಜೀವಿಯಾಗಿದೆ ಜೇಡ. ಈ ಜೇಡನ ಹೆಸರಲ್ಲಿ ಪವಿತ್ರ ಕುರ್‌ಆನಿನಲ್ಲಿ ಒಂದು ಅಧ್ಯಾಯವೇ ಅವತೀರ್ಣಗೊಂಡಿದೆ. ನೊಣವಾಗಿದೆ ಇದರ ಬಹಳ ಅಚ್ಚುಮೆಚ್ಚಿನ ಆಹಾರ.
▪ಇದು ಹುಟ್ಟುವಾಗ ಒಂದು ಹುಳುವಿನ ರೂಪದಲ್ಲಿರುತ್ತದೆ. ನಂತರ ಎರಡು ಮೂರು ದಿನಗಳಲ್ಲಿ ಸಂಪೂರ್ಣ ಜೇಡನ ಆಕಾರವಾಗುತ್ತದೆ. ನೊಣವನ್ನು ಕಂಡರೆ ಇದು ಯಾವುದೇ ಚಲನವಲನವಿಲ್ಲದೆ ಒಂದು ಜಡ ವಸ್ತುವಿನಂತೆ ನಟನೆ ಮಾಡುತ್ತದೆ. ನೊಣ ಹತ್ತಿರ ಸಮೀಪಿಸುತ್ತಿದ್ದಂತೆ ಅದರ ಮೇಲೆ ಹಾರಿ ನಿರಾಯಾಸ ಅದನ್ನು ಹಿಡಿದು ತಿನ್ನುತ್ತದೆ.
▪ಜೇಡ ಮೊಟ್ಟೆಯೊಡೆದು ಹೊರಬಂದು ಕೆಲವೇ ನಿಮಿಷಗಳಲ್ಲಿ ತನ್ನ ಕಸಬನ್ನು ಶುರುಮಾಡುತ್ತದೆ. ಯಾವುದೇ ಪಾಠಬೋಧನೆ, ತರಬೇತಿಯಿಲ್ಲದೆ ಹುಟ್ಟಿದ ಈ ಪುಟ್ಟ ಜೀವಿಗೆ ಈ ತರಬೇತಿ ಎಲ್ಲಿಂದ ದೊರೆಕಿತು.....?? ಸುಬ್ಹಾನಲ್ಲಾ,.!! ಈ ವಿದ್ಯೆಯನ್ನು ಕಲಿಸಿ ಕೊಟ್ಟವನು ಯಾರು..? ಈ ವಿಸ್ಮಯ ತುಂಬಿದ ಜೀವ ಜಗತ್ತಿನ ಪರಿಪಾಲಾಕನಾದ ಅಲ್ಲಾಹುವಾಗಿರುತ್ತಾನೆ ಈ ರಹಸ್ಯ ಜ್ಞಾನದ ಗುರು. ಈ ಸಣ್ಣ ಜೀವಿಗೆ ನಿರಂತರ ವಿರಾಮವಿಲ್ಲದೆ ಒಂದು ಗಂಟೆಗಿಂತಲೂ ಅಧಿಕ ಸಮಯ ಬಲೆ ನೇಯುವ ಸಾಮರ್ಥ್ಯವೂ ಇದೆ.
▪ಮನೆಗಳ ಪೈಕಿ ಅತ್ಯಂತ ಬಲಹೀನವಾದ ಜೇಡನ ಮನೆ ನಿರ್ಮಾಣಕಾರ್ಯ ಬಹಳ ಕಲೆ ಕೌಶಲ್ಯ ಮತ್ತು ತಾಂತ್ರಿಕವಾಗಿ ಆಗಿರುತ್ತದೆ. ತನ್ನ ಚರ್ಮದಿಂದ ಹೊರಬರುವ ಈ ಅಂಟು ಪದಾರ್ಥದಿಂದ ಈ ಮನೆ ನಿರ್ಮಾಣವಾಗುತ್ತದೆ. ತ್ರಿಕೋನ ಆಕೃತಿಯಲ್ಲಿರುವ ಈ ಭವನದಲ್ಲಿ ಎರಡು ಸಾಲುಗಳಿವೆ. ಒಂದು ಅಡ್ಡಸಾಲು. ಮತ್ತೊಂದು ಉದ್ದಸಾಲು. ಈ ಎರಡು ಸಾಲುಗಳು ಕೂಡುವಲ್ಲಿ ಒಂದು ಬಂದೀಖಾನೆ ಕೂಡಾ ಇದೆ.
▪ಜೇಡವು ಯಾವಾಗಲೂ ಈ ಕೇಂದ್ರ ಜಾಗದಲ್ಲಿ ಇರುತ್ತದೆ. ಬಲೆ ಆಕಾರದಲ್ಲಿರುವ ಮನೆಗೆ ಏನಾದರು ಕೀಟಗಳು ಬಿದ್ದರೆ ಕೇಂದ್ರ ಬಿಂದುವಾದ ಬಂದೀಖಾನೆಯಲ್ಲಿ ಕುಳಿತು ದೂರದಿಂದಲೇ ಆ ಕೀಟವನ್ನು ಚಲಿಸದಂತೆ ಮಾಡುವ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಕೂಡ ಇದೆ. ಅಕಸ್ಮಾತ್ ಯಾವುದಾದರು ಕೀಟ ಬಲೆಗೆ ಬಿದ್ದರೆ ಬಲೆಯಿಂದಲೇ ಗಂಟು ಹಾಕಿ ನಿಲ್ಲಿಸಲಾಗುತ್ತದೆ. ಬಲೆಗೆ ಬಿದ್ದ ಕೀಟ ಹೊರ ಹೋಗದೆ ಬಲಹೀನವಾಗುವ ತನಕ ಅಲ್ಲೇ ನಿಲ್ಲಿಸಲಾಗುತ್ತದೆ. ನಂತರ ಅಲ್ಲಿಂದ ಮಧ್ಯ ಭಾಗದಲ್ಲಿರುವ ಬಂದೀಖಾನೆಗೆ ರವಾನಿಸಲಾಗುತ್ತದೆ. ಅದಾದ ನಂತರ ಈ ಹೋರಾಟ ಸಮಯದಲ್ಲಿ ಮನೆಗೆ ಉಂಟಾದ ಸಣ್ಣ ಪುಟ್ಟ ಹಾನಿಗಳನ್ನು ರಿಪೇರಿ ಮಾಡಲಾಗುತ್ತದೆ.
▪ನಮ್ಮ ಮನೆ ಮತ್ತು ಇತರ ವಾಸ ಸ್ಥಳಗಳು ಯಾವಗಲೂ ಜೇಡರ ಬಲೆಯಿಂದ ಸ್ವಚ್ಛವಾಗಿಡಬೇಕೆಂದು ಇಸ್ಲಾಂ ಆಜ್ಞಾಪಿಸುತ್ತದೆ. ಜೇಡನ ಬಲೆಯನ್ನು ಸ್ವಚ್ಛ ಮಾಡದೆ ಹಾಗೆಯೇ ಬಿಡುವ ಮನೆಯಲ್ಲಿ ದಾರಿದ್ರ್ಯ ಮತ್ತು ಬಡತನ ಜಾಸ್ತಿಯಾಗುತ್ತದೆ.
▪ಕತ್ತಿ, ಕತ್ತರಿ ಮುಂತಾದ ಆಯುಧಗಳಿಂದ ಅಥವಾ ಇನ್ಯಾವುದೇ ಕಾರಣಗಳಿಂದ ಗಾಯಗಳಾಗಿ ನಮ್ಮ ಶರೀರದಿಂದ ರಕ್ತ ಹೊರ ಬರುವುದಾದರೆ ಆ ಗಾಯದ ಮೇಲೆ ಸ್ವಲ್ಪ ಜೇಡನ ಬಲೆಯನ್ನು ಇಟ್ಟು ಕಟ್ಟುವುದಾದರೆ ಕೂಡಲೇ ರಕ್ತ ಹರಿಯುವಿಕೆ ನಿಲ್ಲುತ್ತದೆ. ಮಾತ್ರವಲ್ಲ ಆ ಸಂಬಂಧ ಉಂಟಾಗುವ ಎಲ್ಲಾ ಸೋಂಕು ಹರಡುವಿಕೆಯನ್ನೂ ಇದು ತಡೆಯುತ್ತದೆ.
▪ಬೆಳ್ಳಿಯ ಆಭರಣಗಳನ್ನು ಜೇಡನ ಬಲೆಯಿಂದ ತಿಕ್ಕಿ ತೊಳೆಯುವುದರಿಂದ ಆಭರಣಗಳಿಗೆ ಒಳ್ಳೆ ಹೊಳಪು ಬರುತ್ತದೆ.
▪ಮೂರರ ಚಳಿ (ಬಿಟ್ಟು ಬಿಟ್ಟು ಬರುವ ಒಂದು ಜ್ವರ) ಇರುವವನಿಗೆ ಪಾಯಖಾನೆಯಲ್ಲಿ ಜೇಡನು ಕಟ್ಟುವ ಜೇಡನ ಬಲೆಯನ್ನು ತೆಗೆದು ಅವನ ಹಣೆಗೆ ಕಟ್ಟಿದರೆ ಮೂರರ ಚಳಿಯ ವಿಳಾಸವೇ ಇರಲಿಕ್ಕಿಲ್ಲ.
▪ ಒಬ್ಬ ಜೇಡನಮನೆ ಅಥವಾ ಜೇಡ ಮನೆ ಕಟ್ಟುವುದನ್ನು ಕನಸು ಕಂಡರೆ ಮತ ಭಕ್ತಿ ಇಲ್ಲದ (ದೀನಿಲ್ಲದ) ಹುಡುಗಿಯನ್ನು ಮದುವೆಯಾಗುವುದರ ನಿಶಾನೆಯಾಗಿದೆ.
▪ಈ ಜೇಡನು ನಾಲ್ಕು ಸಂದರ್ಭಗಳಲ್ಲಿ ತನ್ನ ಈ ದುರ್ಬಲ ಮನೆ (ಬಲೆ) ನಿರ್ಮಾಣ ಮಾಡಿ ಎರಡು ಪ್ರವಾದಿಗಳನ್ನು ಮತ್ತು ಇಬ್ಬರು ಸಹಾಬಿಗಳನ್ನು ರಕ್ಷಣೆ ಮಾಡಿದ ಮತ್ತು ಒಬ್ಬರು ತಾಬಿಯೀ ಯವರ ಮಾನ ಕಾಪಾಡಿದ ಘಟನೆ ಇಸ್ಲಾಮಿನ ಇತಿಹಾಸದಲ್ಲಿದೆ.
1. ಮಕ್ಕಾ ಮುಶ್ರಿಕರು ಪ್ರವಾದಿ ಮುಹಮ್ಮದ್ (ಸ) ಮತ್ತು ಸಹಪಾಟಿ ಅಬೂಬಕರ್ ಸಿದ್ದೀಖ್ (ರ) ರನ್ನು ಕೊಲ್ಲಲು ಬಂದಾಗ ಅವರಿಬ್ಬರೂ ಅವಿತು ಕುಳಿತ ಗುಹೆಯ ಬಾಗಿಲು.
2. ಜಾಲೂತನ ಸೈನ್ಯ ಪ್ರವಾದಿ ದಾವೂದು(ಅ) ರನ್ನು ಕೊಲ್ಲಲು ಬಂದಾಗ ಅವರು ಅವಿತು ಕುಳಿತ ಗುಹೆಯ ದ್ವಾರ.
3. ಖಾಲಿದ್ ಬಿನ್ ಸುಫ್ಯಾನ್ ಅಲ್ ಹುಝಲೀ ಎಂಬ ದುಷ್ಟನು ಪ್ರವಾದಿ (ಸ) ರನ್ನು ಕೊಲ್ಲಲು ಸಿರಿಯಾದ *"ಅಲ್‌ಅರ್ನ"* ಎಂಬ ಜಾಗದಲ್ಲಿ ಸೈನ್ಯ ರೆಡಿ ಮಾಡುತ್ತಿದ್ದಾನೆಂದು ತಿಳಿದಾಗ ಪ್ರವಾದಿಯವರು ಅವನ ತಲೆ ಕಡಿದು ತರಲು ಅಬ್ದುಲ್ಲಾ ಬಿನ್ ಅನೀಸ್ (ರ) ಎಂಬ ಸಹಾಬಿಯನ್ನು ಕಳುಹಿಸಿದ್ದರು. ನಿಶ್ಚಿತ ಜಾಗ ತಲುಪಿದ ಅವರು ಈತನ ತಲೆ ಕಡಿದು ವಾಪಸು ಮದೀನಕ್ಕೆ ಬರುತ್ತಿರುವಾಗ ಅವರನ್ನು ಹಿಂಬಲಿಸಿ ಬಂದ ಹುಝಲಿಯ ಅನುಯಾಯಿಗಳ ಕಣ್ಣು ತಪ್ಪಿಸಲು ಅವಿತು ಕುಳಿತ ಗುಹೆಯ ಬಾಗಿಲು.
*(ಹುಝಲಿಯ ತಲೆ ಕಡಿದು, ಕಡಿದ ತಲೆಯೊಂದಿಗೆ ಈ ಸಹಾಬಿಯವರು ಪ್ರವಾದಿಯವರ ಸನ್ನಿಧಿಗೆ ಬಂದರು. ಆಗ ಪ್ರವಾದಿಯವರು ಅವರಿಗೆ ತನ್ನ ಬೆತ್ತವನ್ನು ಕಾಣಿಕೆಯಾಗಿ (ಗಿಫ್ಟ್) ಕೊಟ್ಟು "ಈ ಬೆತ್ತ ನಾನು ನಿಮಗೆ ಕೊಡುತ್ತಿದ್ದೇನೆ. ಇದು ನಿಮಗೊಂದು ನೆನಪಿನ ಕಾಣಿಕೆ. ಪರಲೋಕದಲ್ಲಿ ನಿಮ್ಮನ್ನು ಬೇಗನೆ ತಿಳಿಯಲು ಇದು ಒಂದು ಗುರುತು ವಸ್ತು. ಆದ್ದರಿಂದ ಇದನ್ನು ಜಾಗ್ರತೆಯಿಂದ ಇಟ್ಟುಕೊಳ್ಳಿ" ಎಂದು ಹೇಳಿದರು. ನಂತರ ಈ ಸಹಾಬಿ ತನ್ನ ವಫಾತಿನ ತನಕ ಈ ಬೆತ್ತವನ್ನು ತನ್ನ ಕೈಯಲ್ಲೇ ಇಟ್ಟಿದ್ದರು. ಮಾತ್ರವಲ್ಲ ವಫಾತ್ ಆಗುವಾಗ ಅದನ್ನು ತನ್ನ ಕಫನಿನೊಂದಿಗೆ ಇಟ್ಟು ದಫನ ಮಾಡಲು ಕೂಡ ವಸಿಯ್ಯತ್ ಮಾಡಿದ್ದರು. ಅವರ ವಸಿಯ್ಯತಿನಂತೆ ನಂತರ ದಫನ ಮಾಡಲಾಯ್ತು.)*
4. ಪ್ರವಾದಿಯವರ ಮೊಮ್ಮಗ ಹಝ್ರತ್ "ಝೈದ್ ಬಿನ್ ಅಲೀ ಬಿನ್ ಹುಸೈನ್" (ರ) ರನ್ನು ಅಂದಿನ ಇರಾಕಿನ ದುಷ್ಟ ಆಡಳಿತಗಾರ *ಯೂಸುಫ್ ಬಿನ್ ಉಮರ್ ಅಸ್ಸಖಫಿಯ್ಯಿ* ಎಂಬ ದುಷ್ಟ ಆಡಳಿತಗಾರ ಕೊಲೆ ಮಾಡಿ ಇರಾಕಿನ ಕೂಫಾ ಪಟ್ಟಣದಲ್ಲಿ ಅವರ ಪವಿತ್ರ ಜನಾಝವನ್ನು ನಗ್ನವಾಗಿ ಶಿಲುಬೆಗೆ ಹತ್ತಿಸಿ ಪ್ರದರ್ಶನಕ್ಕೆ ಇಟ್ಟಿದ್ದ. ನಾಲ್ಕು ವರ್ಷ ಹೀಗೆಯೇ ಇದ್ದ ಅವರ ಪವಿತ್ರ ದೇಹವನ್ನು ಅವರ ಮಾನ ಕಾಪಾಡಲು ಬೇಕಾಗಿ ಹಗಲೊತ್ತು ಸಂಪೂರ್ಣ ಜೇಡ ಬಲೆ ಮಾಡಿ ಆ ಶರೀರವನ್ನು ಆವರಣ ಮಾಡುತ್ತಿತ್ತು. ಸುಬ್'ಹಾನಲ್ಲಾಃ..!!
▪ಜೇಡನನ್ನು ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ಧ. ಆದರೆ ಕೊಲ್ಲುವುದರ ಬಗ್ಗೆ ಎರಡು ಅಭಿಪ್ರಾಯವಿದೆ. ಆದರೂ ಇದು ವಿಷಪೂರಿತವಾದ್ದರಿಂದ ಕೊಲ್ಲಬಹುದೆಂದು ಕರ್ಮಶಾಸ್ತ್ರ ಉಲಮಾಗಳು ಹೇಳಿದ್ದಾರೆ.
▪ಸಂಗ್ರಹ: ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಇಮಾಮ್ ಅಷ್‌ಬೀಹಿಯ *ಅಲ್ ಮಸ್‌ತತ್‌ರಫ್* ಅಲ್ಲಾಮಾ ಬಿನ್ ಸೀರೀನ್ ರವರ *ತಫ್‌ಸೀರುಲ್ ಅಹ್‌ಲಾಮ್* ಎಂಬ ಗ್ರಂಥ.
Comments