*ಅಂತ್ಯ ದಿನದ ಲಕ್ಷಣಗಳು :* 6
*ಅದ್'ನಾನ್'ನಿಂದ ಬೆಂಕಿ*
ಅದ್'ನಾನ್ ಎಂಬ ನಗರದಿಂದ ಏಳುವ ಭಾರೀ ಗಾತ್ರದ ಬೆಂಕಿ ಜ್ವಾಲೆಯೊಂದು ಇಡೀ ವಿಶ್ವವನ್ನೊಮ್ಮೆ ದಿಗ್ಭ್ರಮೆಗೊಳಿಸಿ ಬಿಡುತ್ತದೆ. ಭೂಮಿಯ ಅಂತರಿಕ್ಷದಲ್ಲಿ ಅಪಾರ ದೂರ ಕ್ರಮಿಸಬಲ್ಲ ಈ ವಿಕಿರಣ ಜನರನ್ನು ದಕ್ಷಿಣದಿಂದ ಉತ್ತರಕ್ಕೂ, ಉತ್ತರದಿಂದ ದಕ್ಷಿಣಕ್ಕೂ ಒತ್ತೊಯ್ಯುತ್ತದೆ. ಜಿನ್ನ್ ಸಮೂಹವು ಹೆದರಿ ದ್ವೀಪಗಳಿಗೆ ಓಡಿ ಬಿಡುತ್ತದೆ. ಮಲಕ್'ಗಳು ಅವರನ್ನು ಅಲ್ಲಿಂದ ಹಿಂದಕ್ಕೆ ಎಳೆದು ತರುತ್ತಾರೆ. ಭಾರೀ ಗಾತ್ರದ ಬೆಂಕಿಯ ಜ್ವಾಲೆಗಳು ಮಾನವನ ನೆಮ್ಮದಿಯನ್ನು ಕೆಡಿಸಿ ಬಿಡುತ್ತದೆ. ಅವರ ಬಾಳೇ ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ.
ಜನರೆಲ್ಲ ಒಗ್ಗೂಡಿಸಿ ಇಲ್ಲೊಂದು ಮಹತ್ತರ ಸಭೆ ನಡೆಸಲಾಗುತ್ತದೆ. ಇದು ಅಂತ್ಯ ದಿನಕ್ಕೆ ಮುನ್ನ ನಡೆಯುವ ಒಂದು ಸಣ್ಣ "ಮಹ್'ಶರ" ಎಂದು ಪಂಡಿತರು ಹೇಳಿದ್ದಾರೆ. ಪ್ರವಾದಿ(ಸ.ಅ)ರವರು ಹೇಳುತ್ತಾರೆ. "ಇಂದು ಕಣಿವೆಯೊಂದರಲ್ಲಿ ತಣಿದು ನಿಂತಿರುವ ಒಂದು ಅಗ್ನಿ ಖಂಡಿತಾ ನಿಮ್ಮ ಬಳಿಗೆ ಬರಲಿದೆ. ಅದರ ಹೆಸರು 'ಬರ್'ಹೂತ್' ಎಂದು. ಅದು ಜನರೆಡೆಗೆ ಆಗಮಿಸಿ ಭಯಂಕರವಾದ ಶಿಕ್ಷೆಯನ್ನು ಅವರಿಗೆ ಉಣಿಸಲಿದೆ. ಅವರ ದೇಹ ಮತ್ತು ಸಂಪತ್ತನ್ನು ನಾಶ ಪಡಿಸಿ 8 ದಿನಗಳ ಕಾಲ ಗಾಳಿಯಂತೆ ಭೂಮಿಯಲ್ಲಿ ಅದು ತಿರುಗಾಡುವುದು. ಅಷ್ಟೇ ಅಲ್ಲದೆ ರಾತ್ರಿ ಹೊತ್ತು ಅದರ ತಾಪ ಹೆಚ್ಚಾಗಿದ್ದು ಆಕಾಶ, ಭೂಮಿಗಳ ನಡುವೆ ಸುತ್ತಾಡುವಾಗ ಅದರಿಂದ ಸಿಡಿಲಿನಂತಹ ಘರ್ಜನೆ ಮೊಳಗುವುದು". ಪ್ರವಾದಿ(ಸ.ಅ)ರವರು ಇದನ್ನು ವಿವರಿಸಿದಾಗ ಹುದೈಫಾ(ರ) ಅವರು ಈ ಬೆಂಕಿ ಸತ್ಯ ವಿಶ್ವಾಸಿಗಳ ಮೇಲೆ ದಾಳಿ ಮಾಡುವುದೇ ಎಂದು ಪ್ರಶ್ನಿಸಿದ್ದಕ್ಕೆ ಪ್ರವಾದಿ(ಸ.ಅ)ರವರು " ಅಂದು ಸತ್ಯ ವಿಶ್ವಾಸಿಗಳೆಲ್ಲಿ?" ಮೃಗಗಳಂತೆ ಬಾಳ್ವೆ ನಡೆಸುವ ದುಷ್ಟ ಜನರಷ್ಟೇ ಉಳಿಯುವರು ಎಂದರು.
*ಕಹಳೆಯ ಪ್ರಥಮ ಮೊಳಗುವಿಕೆ*
ಹಝ್ರತ್ ಇಸ್ರಾಫೀಲ್(ಅ) ಅವರು ಮೂರು ಘಟ್ಟಗಳಲ್ಲಿ ಸ್ವೂರ್ ಎಂಬ ಕಹಳೆ ಊದುವರು. ಇದಕ್ಕೆ 'ನಫ್'ಖ' ಎನ್ನಲಾಗುತ್ತದೆ. ಎರಡು ಇಹದ ಅಂತ್ಯದ ಸಂದರ್ಭ ಮತ್ತು ಮೂರನೇಯದು ಪರಲೋಕದ ಪ್ರಥಮ ಹಂತದಲ್ಲಿ ನಡೆಯುತ್ತದೆ. ಅಂತ್ಯ ದಿನದ ಲಕ್ಷಣಗಳೆಲ್ಲವೂ ಗೋಚರವಾದ ಬಳಿಕ ಮೊದಲ ಹಂತದ ಸ್ವೂರ್ ಕಹಳೆ ಮೊಳಗಿಸಲು ಅಲ್ಲಾಹನು ಇಸ್ರಾಫೀಲ್(ಅ) ಅವರಿಗೆ ಆದೇಶ ಕೊಡುತ್ತಾನೆ. ದೇವಚರ ಇಸ್ರಾಫೀಲ್ (ಅ) ತನ್ನೆರಡು ರೆಕ್ಕೆಗಳನ್ನು ಬಿಡಿಸಿ ಆಕಾಶ ಭೂಮಿಗಳ ನಡುವೆ ನಿಂತುಕೊಂಡು ಪ್ರಥಮ ಹಂತದ ಸ್ವೂರ್ ಎಂಬ ಕಹಳೆ ಊದುವಾಗ ಸೃಷ್ಟಿಗಳೆಲ್ಲರೂ ಭಯ ಭೀತಿಯಿಂದ ನಡುಗಿ ಹೋಗುವರು. ಬೀದಿಗಳಲ್ಲಿರುವ ಜನ, ಪರ್ವತ ತಪ್ಪಲಲ್ಲಿ ವಾಸಿಸುವವರು ಪಟ್ಟಣದತ್ತ ಓಡಲು ಶುರುಮಾಡುತ್ತಾರೆ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳೆಲ್ಲವೂ ಓಡಿ ಬಂದು ಮನುಷ್ಯರೊಂದಿಗೆ ಬೆರತುಕೊಳ್ಳುತ್ತದೆ. ಪರ್ವತಗಳು ಭೂಮಿ ಮೇಲೆ ಮಗುಚಿ ನೆಲಸಮವಾಗುತ್ತದೆ. ಇಷ್ಟು ಹೊತ್ತಿಗಾಗಲೇ ಸಮುದ್ರವು ಹೊತ್ತಿ ಉರಿಯಲಿದ್ದು ಆಕಾಶದಿಂದ ನಕ್ಷತ್ರಗಳು ಹಣಿಹಣಿಗಳಾಗಿ ಕೆಳಗೆ ಸಿಡಿದು ಬೀಳುತ್ತದೆ, ಈ ಗಂಭೀರ ದೃಶ್ಯ ಜನ ಹೃದಯಗಳನ್ನು ಕರಗಿಸುತ್ತದೆ. ಎಲ್ಲೆಲ್ಲೂ ಭಯ, ದಿಗಿಲು, ಗಾಬರಿ, ಆತಂಕ ಆವರಿಸಿಕೊಂಡು ಜನ ಜೀವನ ಅಸ್ತವ್ಯಸ್ಥಗೊಳ್ಳುತ್ತದೆ.
ಆಕಾಶವು ಒಡೆದು ಹೋಳಾಗಿ ಅದರಲ್ಲಿ ಅನೇಕ ಬಾಗಿಲುಗಳು ಕಾಣಿಸಿಕೊಳ್ಳುತ್ತದೆ. ಪಿಶಾಚಿಗಳು ಭಯ ಮತ್ತು ದಿಗಿಲಿನಿಂದ ಆಕಾಶವನ್ನು ಬಿಟ್ಟು ಪಲಾಯನಗೈಯುತ್ತಾರೆ. ಮಾನವರನ್ನು ಮಾನವರಾಗಿ ಕಾಣುವ ಮಾನವೀಯತೆ ಇಲ್ಲದಾಗುತ್ತದೆ. ಪ್ರತಿಯೊಬ್ಬರೂ ಅವರವರ ಸ್ವಂತ ಕಾರ್ಯವನ್ನು ಚಿಂತಿಸುವುದರಲ್ಲೇ ನಿರತರಾಗುತ್ತಾರೆ. ಮೊದಲ ಸುತ್ತಿನ ಕಹಳೆ ಮೊಳಗುವುದರೊಂದಿಗೆ ಜಗತ್ತಿನ ಎಂದಿನ ಸ್ಥಿತಿಗೆ ದಕ್ಕೆ ಉಂಟಾಗಿ ಇಡೀ ವಿಶ್ವವೇ ವಿನಾಶಕ್ಕೀಡಾಗುತ್ತದೆ. ಮತ್ತೆ ಈ ಜಗತ್ತಿನಲ್ಲಿ ಸೂರ್ಯನಿಲ್ಲ, ಚಂದ್ರನಿಲ್ಲ, ನಕ್ಷತ್ರಗಳಿಲ್ಲ, ಸಮುದ್ರವಿಲ್ಲ, ಪರ್ವತಗಳಿಲ್ಲ, ಜೀವಜಾಲಗಳಿಲ್ಲ ಸರ್ವವೂ ಸರ್ವ ನಾಶ ಹೊಂದುವವು.
*ಎರಡನೇ ಮೊಳಗುವಿಕೆ*
ಒಂದನೇ ನಫ್'ಖದ ಜೊತೆಗೆ ವಿಶ್ವವಿಡೀ ನಾಶದ ಅಂಚೆಗೆ ತಳ್ಳಲ್ಪಟ್ಟ ನಂತರ ಅಲ್ಲಾಹನ ಆಜ್ಞೆ ಪ್ರಕಾರ ದೇವಚರ ಇಸ್ರಾಫೀಲ್(ಅ) ಎರಡನೇಯ ಹಂತದ ಕಹಳೆಯನ್ನು ಊದುತ್ತಾರೆ.
"ಓ ನಗ್ನ ಆತ್ಮಗಳೇ, ಅಲ್ಲಾಹನ ಅನುಮತಿಯಿಂದ ಎದ್ದೇಳಿರಿ". ಎಂದು ಹೇಳುವರು. ಆಗ ಸಿಡಿಲಿನಂತಹ ಒಂದು ಘರ್ಜನೆ ಮೊಳಗುತ್ತದೆ. ಅಷ್ಟರಲ್ಲಿ ದೇವಚರ ಅಝ್ರಾಯೀಲ್(ಅ) ಒಂದು ಕೈಯನ್ನು ಏಳು ಆಕಾಶಗಳ ಮೇಲೆ ಇನ್ನೊಂದು ಕೈಯನ್ನು ಏಳು ಭೂಮಿಯ ಕೆಳಗೆ ಇಟ್ಟು ಅವೆರಡರ ನಡುವೆ ನೆಲೆ ಗೊಂಡಿರುವ ಎಲ್ಲರ ಆತ್ಮವನ್ನು ಹೊರಕ್ಕೆ ಪ್ರಜ್ಞಾಶೂನ್ಯರಾಗಿ ನಿರ್ಜೀವಗೊಳ್ಳುವರು. ಆದರೆ ಶಪಿಸಲ್ಪಟ್ಟ ಇಬ್ಲೀಸ್ ಮಾತ್ರ ಭೂಮಿ ಮೇಲೆ ಉಳಿದುಕೊಳ್ಳುತ್ತಾನೆ.
*ಮುಂದುವರೆಯುತ್ತದೆ....*
*ಅಂತ್ಯ ದಿನ ಸಮೀಪಿಸುತ್ತಿದೆಯೇ...... ಹೌದು ಈ ಪ್ರಶ್ನೆಗೆ ಉತ್ತರ ಈ ಕಾಲಘಟ್ಟವೇ ಹೇಳುತ್ತಿದೆ ಅಂತ್ಯ ದಿನವು ಸಮೀಪಿಸುತ್ತಿದೆಯೆಂದು. ನಾವು ದಿನ ನಿತ್ಯ ಓದುವ ನ್ಯೂಸ್ ಪತ್ರಿಕೆಗಳನ್ನು ನೋಡಿದರೆ ಅದರ ಮೊದಲನೇ ಪೇಜ್'ನಲ್ಲಿ ಕಾಣ ಸಿಗುವುದು ತಾಯಿಯನ್ನು ಕೊಂದ ಪುತ್ರ, ತಂದೆಯನ್ನು ಕೊಂದ ಪುತ್ರ, ಹೆಂಡತಿಯನ್ನು ಕೊಂದ ಗಂಡ, ಪತಿಯನ್ನು ಕೊಲೆ ಮಾಡಿದ ಪತ್ನಿ, ಆಸ್ತಿಗಾಗಿ ಕೊಲೆ, ಹಾಡು ಹಗಲೇ ಕೊಲೆ, ಹೀಗೆ ಅನೇಕಾರು. ಮತ್ತೂ ಓದುವಾಗ ಕಾಣಸಿಗುವುದು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಕೊಲೆ ಮಗುವಿನ ಮೇಲೆ ಅತ್ಯಾಚಾರ ಕೊಲೆ ಹೀಗೆ ಅನೇಕಾರು. 1400 ವರ್ಷಗಳ ಮುಂಚೆ ನಮ್ಮ ನೇತಾರ ಸಯ್ಯುದುನಾ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ ಅಂತ್ಯ ದಿನದ ಭವಿಷ್ಯವಾಣಿ ಹೀಗೆ ನಮ್ಮೆದುರಿಗೆ ಕಾಣುತ್ತಿದೆ . ಅಂತ್ಯ ದಿನವು ಸಮೀಪಿಸುತ್ತಿದೆ. ಮುಸ್ಲಿಂ ರಾಷ್ಟ್ರಗಳ ಮೇಲೆ ಶತ್ರುಗಳು ದಾಳಿ ಮಾಡುತ್ತಿದ್ದಾರೆ, ಮುಗ್ಧ ಮಕ್ಕಳನ್ನು, ಮಹಿಳೆಯರನ್ನು ಅಲ್ಲಿನ ಮುಸ್ಲಿಂ ಜನರನ್ನು ಹಿಂಸಿಸಿ ಕೊಳ್ಳುತ್ತಿದ್ದಾರೆ, ಈಗಲೂ ಇಸ್ರೇಲ್'ನಲ್ಲಿ ಯಹೋದ್ಯರು ಅದಕ್ಕೆ ಬೇಕಾಗಿ ತಯಾರಾಗಿ ನಿಂತಿದ್ದಾರೆ. ಮುಸ್ಲಿಮರ ಮೇಲೆ ಆಕ್ರಮಣ ನಡೆಸಲು ಈಗಲೂ ಸಂಚು ಹೊಡುತ್ತಿದ್ದಾರೆ.*
*ಈಸಾ ನಬಿ(ಅ)ರವರ ಕೆಳಗೆ ಒಂದು ಅಂತಿಮ ಯುದ್ದ ನಡೆಯಲಿದೆ. ಮುಸ್ಲಿಮರು ಹಾಗೂ ಜೂದರ ನಡುವೆ ನಡೆಯುವ ಯುದ್ಧ. ಇಂದಿನ ಬೈತುಲ್ ಮುಖದ್ದಸ್ ಮಸ್ಜಿದ್ ಅಂದು ಮುಸ್ಲಿಮರ ಕೈಯ್ಯಲ್ಲಾಗುತ್ತದೆ. ಅಂದು ಮುಸ್ಲಿಮರಿಗಾಗಿದೆ ವಿಜಯ. ಆ ಯುದ್ಧದಲ್ಲಿ ಜೂದರು ಕಲ್ಲುಗಳ, ಎಲ್ಲಾ ವೃಕ್ಷಗಳ ಹಿಂದೆ ಅವಿತು ಕೊಳ್ಳುವರು. ಆಗ ಎಲ್ಲಾ ಕಲ್ಲುಗಳೂ, ಮರಗಳೂ ಹೇಳುತ್ತದೆ. ಓ ಮುಸ್ಲಿಂ ಇಲ್ಲಿ ಬಾ ನನ್ನ ಹಿಂದೆ ಜೂದರು ಅವಿತು ಕೊಂಡಿದ್ದಾರೆ. ಆದರೆ ಒಂದು ವೃಕ್ಷ ಮಾತ್ರ ಹೇಳುವುದಿಲ್ಲ. ಆ ವೃಕ್ಷದ ಹೆಸರು ಗರ್'ಕದ್ ಎಂದಾಗಿದೆ. ಗರ್'ಕದ್ ಎಂಬ ವೃಕ್ಷವು ಜೂದರಿಗೆ ರಕ್ಷಣೆ ಕೊಡುತ್ತದೆ. ಅದಕ್ಕಾಗಿಯೇ ಇಂದು ಇಸ್ರೇಲ್ ಸರಕಾರವು ಆ ಮರವನ್ನು ನೆಟ್ಟು ಬೆಳೆಸುತ್ತಿದೆ. ಇಂದು ಇಸ್ರೇಲ್' ಎಂಬ ಚಿಕ್ಕ ರಾಷ್ಟಕ್ಕೆ ಹೋದರೆ ಅಲ್ಲಿ ಮಿಲಿಯನ್ ಗಟ್ಟಲೆ ಗರ್'ಕದ್ ಎಂಬ ವೃಕ್ಷವನ್ನು ನೋಡಬಹುದಾಗಿದೆ. ಅಂದು ಅಲ್ಲಾಹನು ಮರಗಳಿಗೆ, ಕಲ್ಲುಗಳಿಗೆ ಮಾತನಾಡುವ ಶಕ್ತಿಯನ್ನು ಒದಗಿಸಿ ಕೊಡುವನು. ಅಲ್ಲಿಯ ಜೂದರು ಅದನ್ನು ಒಪ್ಪಿಕೊಂಡಾಯಿತು. ಅದಕ್ಕಾಗಿಯೇ ಇಂದು ಇಸ್ರೇಲ್ ಸರಕಾರವು ಗರ್'ಕದ್ ಎಂಬ ವೃಕ್ಷವನ್ನು ನೆಟ್ಟು ಬೆಳಸುತ್ತಿರುವುದು.*
*ಇಬ್ಲೀಸನ ಆತ್ಮ ಹಿಡಿಯುವ ಭೀಕರ ಸನ್ನಿವೇಶ*
ಮಲಕ್'ಗಳನ್ನು ಹೊರತು ಪಡಿಸಿ ಇತರ ಎಲ್ಲರೂ ತೀರಿ ಹೋದ ಬಳಿಕ ಅಲ್ಲಾಹನು ದೇವಚರ ಅಝ್ರಾಯೀಲ್(ಅ) ರನ್ನು ಕರೆದು "ನಾನು ನಿನಗೆ ಅಸಂಖ್ಯ ಸಹಾಯಿಗಳನ್ನು ನೀಡಿರುವೆನು. ಏಳು ಆಕಾಶ ಭೂಮಿಗಳ ಪ್ರಚಂಡ ಶಕ್ತಿ ನಿನಗೆ ಒದಗಿಸಿದ್ದೇನೆ. ಇದೀಗ ದ್ವೇಷ ಮತ್ತು ಶೌರ್ಯದ ಉಡುಪನ್ನು ನಿನಗೆ ತೊಡಿಸುತ್ತಿದ್ದೇನೆ. ಆದ್ದರಿಂದ ನೀನು ಈಗಲೇ ನನ್ನ ಶಾಪಕ್ಕೊಳಗಾದ ದುಷ್ಟ ಇಬ್ಲೀಸನ ಮೇಲೆ ಮುಗಿ ಬಿದ್ದು ಅವನ ಆತ್ಮವನ್ನು ಹಿಡಿದೆಳೆಯಬೇಕು. ಮರಣದ ರುಚಿ ಏನೆಂಬುವುದನ್ನು ಅವನಿಗೆ ತೋರಿಸಿಕೊಡಬೇಕು. ಅದಕ್ಕಾಗಿ ಎಪ್ಪತ್ತು ಸಾವಿರ ಝಬಾನಿ ಎಂಬ ಭೀಕರ ಮಲಕ್'ಗಳನ್ನು ನಿನ್ನ ಜೊತೆ ಕರೆದುಕೊಂಡು ಹೋಗಬೇಕು. ಅವರೆಲ್ಲ ಶೌರ್ಯ ತುಂಬಿದ ಸಮರ ಶೂರರಂತಿರಬೇಕು. ಪ್ರತಿಯೊಬ್ಬ ಝಬಾನಿ ಮಲಕ್'ಗಳೊಂದಿಗೆ ನರಕಾಗ್ನಿಯಿಂದ ತಯಾರಿಸಲ್ಪಟ್ಟ ಸಂಕೋಲೆ ಇರಲಿ. ಆ ದುಷ್ಟನ ಆತ್ಮವನ್ನು ಅತ್ಯಂತ ಕಠೋರ ಮತ್ತು ಅತೀ ಭಯಂಕರ ರೀತಿಯಲ್ಲಿ ಎಳೆದು ತರಬೇಕು ಎಂಬ ಅಲ್ಲಾಹನ ಆಜ್ಞೆ ಹೊರಬಿದ್ದ ಬೆನ್ನಲ್ಲೇ ಅಝ್ರಾಯೀಲ್ (ಅ)ಮರು ನರಕದ ಕಾವಲು ಭಟರಾದ ಮಾಲಿಕ್(ಅ) ಎಂಬ ಮಲಕನ್ನು ಕರೆದು ನರಕದ ಸಕಲ ಬಾಗಿಲುಗಳನ್ನು ತೆರೆದು ಹಾಕುವಂತೆ ಹೇಳಿದ ನಂತರ ಇದುವರೆಗೂ ಇತಿಹಾಸದಲ್ಲಿ ಕಂಡು ಕೇಳರಿಯದಂಥ ಅತ್ಯಂತ ಭೀಕರ ಮತ್ತು ಘೋರ ರೂಪವನ್ನು ತಳೆದು ಪರಮ ಶತ್ರು ಇಬ್ಲೀಸನ ಕಡೆಗೆ ದುತ್ತೆಂದು ಹಾಕಿ ಹಾಕುತ್ತಾರೆ.
ಅಂದು ಅಝ್ರಾಯೀಲ್ (ಅ)ರ ರೂಪ ಎಷ್ಟು ಭಯಂಕರವಾಗಿರುವರದೆಂದರೆ ಈ ಭೂಮಿಯಲ್ಲಿರುವ ಜನ ಆ ಸನ್ನಿವೇಶ ಕಂಡಲ್ಲಿ ಆ ಕೂಡಲೇ ಕರಗಿ ಭಸ್ಮವಾಗಿ ಬಿಡುವರೆಂದು ಚರಿತ್ರೆಗಾರರು ಹೇಳುತ್ತಾರೆ. ದೇವಚರ ಅಝ್ರಾಯೀಲ್ (ಅ)ರವರು ಇಬ್ಲೀಸನ ಬಳಿ ತೆರಳುವಾಗ ಅವರ ರೂಪವನ್ನು ಕಂಡು ಇಬ್ಲೀಸ್ ಒಮ್ಮೆ ಬೆಚ್ಚಿ ಬೀಳುತ್ತಾನೆ. ಅನಂತರ ಒಂದು ಭಯಂಕರ ಘರ್ಜನೆ ಮೊಳಗಿಸುತ್ತಾನೆ. ಅಝ್ರಾಯೀಲ್ (ಅ)ರು ಅವನಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ನಿಲ್ಲಲ್ಲಿ! ನೀನು ಎಷ್ಟು ಜನರನ್ನು ಭೂಮಿಯಲ್ಲಿ ದಾರಿ ತಪ್ಪಿಸಿರುವೆಯೋ ಅವರೆಲ್ಲರ ಇಮ್ಮಡಿ ಶಿಕ್ಷೆಯನ್ನು ನಿನಗಿಂದು ನೀಡಲು ಅಲ್ಲಾಹನು ತೀರ್ಮಾನಿಸಿರುವನು. ಅದೆಷ್ಟು ಸಮುದಾಯ ನಿನ್ನಿಂದ ಹಾಳಾದರು. ನಿನ್ನ ಸಹವಾಸದಿಂದ ನರಕ ಪ್ರವೇಶಿಸಿದವರು ಎಷ್ಟಿಲ್ಲ? ಇದೀಗ ನಿನ್ನ ಒಡೆಯ ನಿನಗೆ ನಿಶ್ಚಯಿಸಿದ ಅವಧಿ ಮುಕ್ತಾಯಗೊಂಡಿದೆ ಎಂದು ಹೇಳುವರು.
ಅಷ್ಟು ಹೇಳಿದಾಗಲೇ ಇಬ್ಲೀಸ್ ಅಲ್ಲಿಂದ ತಪ್ಪಿಸಿ ಓಡಲು ಪ್ರಾರಂಭಿಸುತ್ತಾನೆ. ಅವನು ಎಲ್ಲಿ ಹೋದರೂ ಅಝ್ರಾಯೀಲ್(ಅ)ಮರು ಅವನ ಕಣ್ಣೆದುರು ಬಂದು ನಿಲ್ಲುತ್ತಾರೆ. ಕೊನೆಗೆ ಸಮುದ್ರಕ್ಕೆ ಹೋಗಿ ಜಿಗಿಯುತ್ತಾನೆ. ಸಮುದ್ರವು ಅವನನ್ನು ಆ ಕೂಡಲೇ ಹೊರಕ್ಕೆ ಎಸೆದು ಬಿಡುತ್ತದೆ. ಪುನಃ ಅತ್ತಿತ್ತ ಹಲವು ಬಾರಿ ಓಡಾಡಿದರೂ, ಅವನಿಗೆ ಭೂಮಿ ಮೇಲೆ ಅಭಯ ಕೇಂದ್ರವಾಗಲಿ ರಕ್ಷಾ ಸ್ಥಳವಾಗಲೀ ಸಿಗುವುದಿಲ್ಲ.
ಕಟ್ಟಕಡೆಗೆ ಆತ ಹಝ್ರತ್ ಆದಂ ನಬಿ(ಅ)ರವರ ಸಮಾಧಿಯನ್ನೊಳಗೊಂಡ ಪ್ರಪಂಚದ ಮಧ್ಯಭಾಗದಲ್ಲಿ ನಿಂತು "ಓ ಆದಮರೇ ನಿಮ್ಮ ಕಾರಣದಿಂದ ನಾನು ಶಪಿಸಲ್ಪಟ್ಟೆ. ನಿಮ್ಮನ್ನು ಸೃಷ್ಟಿಸಲ್ಪಡದಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುತ್ತಾ ಆದಮ್ ನಬಿ(ಅ)ರವರ ಸಮಾಧಿಗೆ ಸಾಷ್ಟಾಂಗ(ಸುಜೂದ್) ಎರಗುವನು. ಆ ಘಳಿಗೆ ಅಲ್ಲಾಹನು ಪಶ್ಚಾತ್ತಾಪದ ಕರೆ ಅವನಿಗೆ ಕೇಳಿಸುತ್ತದೆ. ಆಗ ಅವನಿಗೆ ಇನ್ನು ರಕ್ಷೆ ಇಲ್ಲ ಎಂದು ಖಾತರಿಯಾಗುತ್ತದೆ.
ಕೊನೆಗೂ ಆತ ಅಝ್ರಾಯೀಲ್ (ಅ)ರವರ ಸಮೀಪಿಸಿ ನೀವು ಯಾವ ರೀತಿ ನನ್ನ ಪ್ರಾಣ ಹಿಡಿಯುವಿರಿ. ಎಂದು ಕೇಳುತ್ತಾನೆ. ಆಗ ಅವರು ಹೊತ್ತಿ ಉರಿಯುವ ನರಕಾಗ್ನಿಯಲ್ಲಿ ವಾಸಿಸುವವರ ಯಾತನೆ ಎಷ್ಟು ಭಯಂಕರವೋ ಅದರ ದುಪ್ಪಟ್ಟು ಭಯಂಕರ ಶಕ್ತಿಯಿಂದ ನಿನ್ನ ಆತ್ಮವನ್ನು ಎಳೆಯುವೆನು ಎಂದು ಉತ್ತರಿಸುತ್ತಾರೆ. ಅವನು ಹೆದರಿ ಕಂಗಾಲಾಗಿ ತಲೆಯಲ್ಲಿ ಮಣ್ಣನ್ನು ಎಳೆದು ಹಾಕಿಕೊಳ್ಳುತ್ತಾನೆ. ದಕ್ಷಿಣದಿಂದ ಉತ್ತರಕ್ಕೂ, ಉತ್ತರದಿಂದ ದಕ್ಷಿಣಕ್ಕೂ ಅನೇಕ ಬಾರಿ ಗಾಬರಿಯಿಂದ ಓಡಾಡುತ್ತಾನೆ.
ಕಟ್ಟ ಕಡೆಗೆ ಅವನು ಅಲ್ಲಾಹನಿಂದ ಶಪಿಸಲ್ಪಟ್ಟು ಭೂಮಿಯಲ್ಲಿ ಇಳಿದ ಸ್ಥಳ ಇದೆಯಲ್ಲ, ಅಲ್ಲಿಗೆ ತಲುಪಿದಾಗ ಮಲಕುಲ್ ಮೌತ್ ಅಝ್ರಾಯೀಲ್ (ಅ) ಮತ್ತು ಸಹಾಯಕರಾದ ಝಬಾನಿಯಾಗಳು ಅವನನ್ನು ಭಯಂಕರವಾಗಿ ಸುತ್ತುವರಿಯುತ್ತಾರೆ. ಘೋರ ಶಿಕ್ಷಗೀಡಾಗಿಸಿ ಅವನ ಯಾತನೆಯ ಸನ್ನಿವೇಶವನ್ನು ತೋರಿಸಲಿಕ್ಕಾಗಿ ಹಝ್ರತ್ ಆದಂ ನಬಿ(ಅ) ಮತ್ತು ಹವ್ವಾ ಬೀವಿ(ರ) ಅವರನ್ನು ಅಲ್ಲಿಗೆ ಕರೆ ತರಲಾಗುತ್ತದೆ. ಅವರಿಬ್ಬರೂ ತಮ್ಮ ಪರಮ ಶತ್ರುವಿನ ಶೋಚನೀಯ ಅವಸ್ಥೆಯನ್ನು ಕಣ್ಣಾರೆ ಕಾಣುವಾಗ "ಓ ನಮ್ಮ ಪ್ರಭೂ ನೀನು ನಿನ್ನ ಅನುಗ್ರಹವನ್ನು ನಮ್ಮ ಮೇಲೆ ಪೂರ್ತಿ ಮಾಡಿರುವಿ ಎಂದು ಪ್ರಾರ್ಥಿಸುತ್ತಾರೆ. ಆ ಕೂಡಲೇ ಇಬ್ಲೀಸ್'ನ ಆತ್ಮವನ್ನು ಹಿಡಿದೆಳೆದು ನರಕಾಗ್ನಿಗೆ ಎಸೆಯಲಾಗುತ್ತದೆ.
*ಪ್ರೀಯರೇ, ಈ ಜಗತ್ತು ಅಂತ್ಯ ದಿನದ ಸಮೀಪದಲ್ಲಿದೆ. ಈ ಜಗತ್ತು ಈಗ ಇಮಾಂ ಮಹ್'ದಿ (ರ) ಮತ್ತು ಪ್ರವಾದಿ ಈಸಾ ನಬಿ(ಅ)ರವರ ಬರುವಿಕೆಯನ್ನು ಕಾತರದಿಂದ ಕಾಯುತ್ತಿದೆ. ಕಾರಣ ಇಂದು ಇಸ್ರೇಲ್, ಫೆಲಸ್ತೀನ್'ನಲ್ಲಿ ನಡೆಯುತ್ತಿರುವ ದುರಂತ ಬದುಕುಗಳು ಹಾಗೂ ಅಲ್ಲಿಯ ಮತ್ತು ಜಗತ್ತಿನ ಮುಸ್ಲಿಮರ ಮೇಲಿನ ಹಿಂಸೆ, ಕೊಲೆಗಳು ಮುಸ್ಲಿಮರನ್ನು ಕಂಗೆಡಿಸುತ್ತಿದೆ.*
*ಮುಸ್ಲಿಮರ ಪರಮ ಶತ್ರುಗಳಾದ ಜೂದರು ಮುಸ್ಲಿಮರನ್ನು ಅನೇಕ ರೀತಿಯಲ್ಲಿ ಪೀಡಿಸುತ್ತಿದ್ದಾರೆ. ಅವರಿಗೆ ಇನ್ನೂ ಬಲ ಬರಲು ದಜ್ಜಾಲ್ ಎಂಬ ಮಹಾ ವಂಚಕ ಈ ಭೂಮಿಗೆ ಬರುವನು. ಅವನು ಮತ್ತು ಜೂದರು ಸೇರಿ ಅನೇಕ ಮುಸ್ಲಿಮರನ್ನು ಕೊಲ್ಲುವರು. ಆದರೆ ರೂಹುಲ್ಲಾಹಿ ಈಸಾ(ಅ) ಡಮಸ್ಕಸ್'ನ ಬಿಳಿ ಮಿನಾರದಿಂದ ಇಳಿದು ಬರುವರು. ಈಸಾ ನಬಿ(ಅ)ರನ್ನು ಕಾಣುವಾಗ ದಜ್ಜಾಲ್ ಎಂಬ ಮಹಾ ದುಷ್ಟ ಭಯ ಭೀತಿಯಿಂದ ಓಡಲು ಯತ್ನಿಸುತ್ತಾನೆ. ಆದರೆ ಈಸಾ ನಬಿ(ಅ)ರ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದೆ ಕೊನೆಗೆ ಈಗಿನ ಇಸ್ರೇಲ್ ಏರ್‌ಪೋರ್ಟ್ ಬಳಿ (ರಂಲತುಲುದ್ದ್) ಎಂಬ ಕವಾಟದಲ್ಲಿ ಈಸಾ ನಬಿ(ಅ) ದಜ್ಜಾಲನನ್ನು ಕೊಲ್ಲುವುದು ಇಂಶಾ ಅಲ್ಲಾಹ್ ಮುಂದೆ ಈ ಜಗತ್ತು ಕಾಣಲಿದೆ. 1400 ವರ್ಷಗಳ ಮುಂಚೆ ಒಂದೇ ಒಂದು ಸುಳ್ಳನ್ನು ಹೇಳದ ಶತ್ರುಗಳು ಕೂಡಾ ಅಲ್ ಅಮೀನ್ (ಸತ್ಯವಂತ) ಎಂದು ಹೇಳಿದ ಲೋಕ ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಭವಿಷ್ಯ ನುಡಿಗಳು ಮುಂದೆ ಈ ಜಗತ್ತು ಕಾಣಲಿದೆ.*
*ಸ್ವೂರ್ ಕಹಳೆ ಮತ್ತು ಇಸ್ರಾಫೀಲ್(ಅ)*
ಅಲ್ಲಾಹನು ಆಕಾಶ ಭೂಮಿಗಳನ್ನು ಸೃಷ್ಟಿಸಿದ ಬೆನ್ನಲ್ಲೇ ಸ್ವೂರ್ ಎಂಬ ಕಹಳೆಯನ್ನೂ ಸೃಷ್ಟಿಸಿದನು. ಸ್ವೂರ್ ಕಹಳೆಯ ಶೈಲಿ ತುಂಬಾ ವಿಶಿಷ್ಟತೆಯಿಂದ ಕೂಡಿದ್ದು. ಸುಕೋಮಲ ಗಾಜಿನ ಆಕಾರದಲ್ಲಿ ಮುತ್ತು ರತ್ನಗಳಿಂದ ನಿರ್ಮಾಣಗೊಂಡಿರುವ ಸ್ವೂರ್ ಕಹಳೆಗೆ ನಾಲ್ಕು ಶಾಖೆಗಳಿವೆ. ಒಂದು ಪಶ್ಚಮದಲ್ಲಿ, ಮತ್ತೊಂದು ಉತ್ತರದಲ್ಲಿ, ಇನ್ನೊಂದು ಏಳು ಭೂಮಿಯ ತಳಭಾಗದಲ್ಲಿ, ಮತ್ತೊಂದು ಏಳನೇ ಆಕಾಶದ ಮೇಲ್ಬಾಗದಲ್ಲಿ. ಸ್ವೂರ್ ಕಹಳೆಯ ಒಳಗೆ ಮಾನವರ ಆತ್ಮದ ಸಂಖ್ಯೆಯಲ್ಲಿ ಬಾಗಿಲುಗಳಿರುತ್ತವೆ. ಬೃಹತ್ತಾಕಾರದಲ್ಲಿರುವ ಈ ಕಹಳೆಯಲ್ಲಿ ಎಪ್ಪತ್ತು ವಾಸ ಸ್ಥಳಗಳಿವೆ. ಪ್ರವಾದಿಗಳ ಆತ್ಮಗಳಿಗೆ ಮತ್ತು ಇತರ ಜೀವಜಾಲಗಳ, ಪ್ರಾಣಿ ಪಕ್ಷಿಗಳ ಆತ್ಮಗಳಿಗೆ ವಾಸಿಸಲು ತಕ್ಕುದಾದ ರೀತಿಯ ಸೌಲಭ್ಯವನ್ನು ಅದರಲ್ಲಿ ಮಾಡಲಾಗಿದ್ದು ಇಸ್ರಾಫೀಲ್ (ಅ) ಹೇಗಿರಬೇಡ?
ಇಸ್ರಾಫೀಲ್ (ಅ)ಮರು ಅಲ್ಲಾಹನ ನಿಕಟವರ್ತಿ ದೇವಚರ. ಅವರಿಗೆ ನಾಲ್ಕು ರೆಕ್ಕೆಗಳಿವೆ. ಒಂದು ಪಶ್ಚಿಮದಲ್ಲಿ, ಇನ್ನೊಂದು ಉತ್ತರದಲ್ಲಿ , ಒಂದು ರೆಕ್ಕೆಯಿಂದ ದೇಹವನ್ನು ಮುಚ್ಚಿಕೊಳ್ಳುತ್ತಾರೆ ಮತ್ತು ಇನ್ನೊಂದು ರೆಕ್ಕೆಯಿಂದ ತಲೆ ಮುಚ್ಚಿಕೊಳ್ಳುವರು. ಅಲ್ಲಾಹನ ವ್ಯಾಪಕ ಭಯದಿಂದ ಅವರ ಮುಖದ ಬಣ್ಣ ಹಳದಿಯಾಗಿರುವುದು. ಅರ್'ಶ್ ಎಂಬ ಸಿಂಹಾಸನದ ಒಂದು ಕಾಲು ಇಸ್ರಾಫೀಲರ ಹೆಗಲ ಮೇಲೆ ಇರುತ್ತದೆ. ಏಳು ಆಕಾಶ ಮತ್ತು ಏಳು ಭೂಮಿಗಳ ಪ್ರಚಂಡ ಶಕ್ತಿಯನ್ನು ಅಲ್ಲಾಹು ಅವರಿಗೆ ನೀಡಿರುವನು. ಅವರ ಕಾಲಿನ ಪಾದದಿಂದ ತಲೆಯವರೆಗೆ ಅನೇಕ ರೋಮಗಳು ಅನೇಕ ಬಾಯಿಗಳು ಮತ್ತು ನಾಲಗೆಗಳಿವೆ.
ಒಂದೊಂದು ನಾಲಗೆಯಿಂದಲೂ ಲಕ್ಷಗಟ್ಟಲೆ ಭಾಷೆಯಲ್ಲಿ ಅವರು ಅಲ್ಲಾಹನಿಗೆ ತಸ್'ಬೀಸ್ ಹೇಳುತ್ತಿರುತ್ತಾರೆ.
ಅವರು ಪ್ರತಿ ದಿನ ಜಹನ್ನಂ ಎಂಬ ನರಕವನ್ನು ಮೂರು ಬಾರಿ ನೋಡಿ ಕಣ್ಣೀರಿಟ್ಟು ಅತ್ತು ಬಿಡುವರು.
ಹಝ್ರತ್ ಈಸಾ(ಅ) ಭೂಮಿಗೆ ಇಳಿದು ಬಂದು ತೀರಿ ಹೋಗಿ ನೂರೈವತ್ತು ವರ್ಷಗಳು ಕಳೆದ ಬಳಿಕ ಮೊದಲ ಕಹಳೆ ಮೊಳಗುತ್ತದೆ.
ಪ್ರಥಮ ಕಹಳೆ ಮೊಳಗಿದ ಬಳಿಕ ಸೂರ್ಯ ಪಶ್ಚಿಮದಲ್ಲಿ ಮೂಡಿ ಪೂರ್ವದಲ್ಲಿ ಮುಳುಗುತ್ತಾನೆ.ಮೊದಲ ಕಹಳೆ ಮೊಳಗುವಾಗ ಜೀವಿಗಳೆಲ್ಲ ಮಧ್ಯ ಕುಡಿದವರಂತೆ ಉನ್ಮತ್ತರಾಗಿ ಕಾಣಿಸುತ್ತಾರೆ.
ಗರ್ಭಿಣಿಯರೆಲ್ಲ ಕ್ಷಣ ಕಾಲದಲ್ಲಿ ಮಕ್ಕಳಿಗೆ ಜನ್ಮ ಸನೀಡಿ ಆಗುತ್ತಾರೆ. ಮೊಲೆ ಹಾಲುಣಿಸುವ ಸ್ತ್ರೀಯರು ತಮ್ಮ ಸ್ವಂತ ಮಕ್ಕಳನ್ನು ಎಸೆದು ಬಿಡುವರು ಅತ್ಯಂತ ಭೀಕರವಾದ ಕ್ಷಣವದು.
ಪವಿತ್ರ ಕುರ್'ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ. *ನೀವು ಅದನ್ನು ಕಾಣುವಂದು ಹಾಲುಣಿಸುವವಳು ಹಾಲುಣ್ಣುವ ತನ್ನ ಶಿಶುವನ್ನು ಮರೆತು ಬಿಡುವಳು. ಪ್ರತಿಯೊಬ್ಬ ಗರ್ಭಿಣಿಗೆ ಗರ್ಭಪಾತವಾಗಿ ಬಿಡುವುದು. ಜನರು ನಿಮಗೆ ಉನ್ಮತ್ತರಂತೆ ಕಾಣುವರು. ಪ್ರಸ್ತುತಃ ಅವರು ಉನ್ಮತ್ತರಾಗಿರಲಾರರು. ನಿಜವಾಗಿ ಅಲ್ಲಾಹನ ಯಾತನೆಯೇ ಅತೀ ಭೀಕರವಾಗಿರುವುದು.(ಕುರ್'ಆನ್)*
ಒಳಿತನ್ನು ಬರೆದ ಪುಸ್ತಕವನ್ನು ತಕ್ಕಡಿಯ ಒಂದು ತಟ್ಟೆಯಲ್ಲೂ, ಕೆಡುಕುಗಳನ್ನು ಬರೆಯಲ್ಪಟ್ಟ ಪುಸ್ತಕಗಳನ್ನು ಮತ್ತೊಂದು ತಟ್ಟೆಯಲ್ಲೂ ಇಡಲಾಗುವುದು. ಆ ದಿನ ಕೆಲವು ಸತ್ಕರ್ಮಗಳ ತೂಕ ಹೆಚ್ಚುವುದು.
ದ್ಸಿಕ್ರ್, ಸನ್ನಡತೆ, ದಾನಧರ್ಮ, ಕುರ್'ಆನ್ ಪಾರಾಯಣ ಜನರಿಗೆ ಒಳಿತನ್ನು ಬೋಧಿಸಿದ್ದು,ಮಯ್ಯತ್ ನಮಾಝ್'ಗಳಲ್ಲಿ ಪಾಲ್ಗೊಂಡಿರುವುದು, ಪ್ರವಾದಿ(ಸ.ಅ) ಮೇಲಿನ ಸ್ವಲಾತ್, ತಸ್'ಬೀಹ್, ಇಸ್ತಿಗ್'ಫಾರ್, ತನ್ನ ಕೈ ಕೆಳಗಿನ ಉದ್ಯೋಗಸ್ಥರನ್ನು ನೋಯಿಸದಿರುವುದು, ವಸ್ತುಗಳನ್ನು ತೂಗಿ ಮತ್ತೊಬ್ಬರಿಗೆ ಕೊಡುವಾಗ ತುಸು ಹೆಚ್ಚಾಗಿ ಕೊಡುವುದು ಇತ್ಯಾದಿ ಸತ್ಕರ್ಮಗಳ ತೂಕ ನಾಳೆ ಮಹ್'ಶರಾದಲ್ಲಿ ಹೆಚ್ಚಾಗಲಿದೆ.
ಸತ್ಕರ್ಮ ಹೆಚ್ಚಿದವರನ್ನು ಸ್ವರ್ಗಕ್ಕೂ, ದುಷ್ಕರ್ಮ ಹೆಚ್ಚಿದವರನ್ನು ನರಕಕ್ಕೂ ಕಳುಹಿಸಲಾಗುವುದು.
*ಮುಂದುವರೆಯುತ್ತದೆ....*
*ಈ ಪ್ರಪಂಚವು ಅದರಲ್ಲಿರುವ ಸರ್ವ ವಸ್ತುಗಳೂ ನಾಶ ಹೊಂದುವ ಒಂದು ದಿನವಾಗಿದೆ ಯೌಮುಲ್ ಕಿಯಾಮು (ಅಂತ್ಯ ದಿನ). ಆದಿ ಪಿತ ಆದಂ(ಅ) ರಿಂದ ಅಂತ್ಯ ಪ್ರವಾದಿ ಮುಹಮ್ಮದ್(ಸ.ಅ) ಮರ ಸಮುದಾಯದ ತನಕ ನೆಲೆ ನಿಂತಿರುವ ಈ ಜಗತ್ತು. ಒಂದು ದಿನ ಅಲ್ಲಾಹನು ದೇವಚರ ಇಸ್ರಾಫೀಲ್ (ಅ)ರನ್ನು ಕರೆದು ಸ್ವೂರ್ ಎಂಬ ಕಹಳೆಯಲ್ಲಿ ಊದಲು ಹೇಳುತ್ತಾರೆ.ಅಲ್ಲಾಹನ ಆಜ್ಞೆ ಬಂದ ಆ ಕ್ಷಣವೇ ಇಸ್ರಾಫೀಲ್ (ಅ) ಸ್ವೂರ್ ಕಹಳೆಯಲ್ಲಿ ಒಂದನೇ ಬಾರಿ ಊದುವರು. ಆ ಕ್ಷಣವೇ ಅದರ ಭೀಕರತೆಗೆ ಜನರೆಲ್ಲ ಭಯ ಭೀತಿಯಿಂದ ದಿಕ್ಕಾಪಾಲಾಗಿ ಓಡುವರು. ಹಾಗೂ ಸರ್ವವೂ ನಾಶ ಹೊಂದುತ್ತದೆ. ಪವಿತ್ರ ಕುರ್'ಆನ್ ಹೇಳುತ್ತದೆ.*
*ಆಕಾಶವು ಒಡೆದು ಸೀಳಾಗುವಾಗ*
*ನಕ್ಷತ್ರಗಳು ಚದುರಿ ಬೀಳುವಾಗ*
*ಸಮುದ್ರಗಳು ಭೇಧಿಸಲ್ಪಡುವಾಗ*
*ಮತ್ತು ಸಮಾಧಿಗಳು ತೆರೆಯಲ್ಪಡುವಾಗ(ಸೂರಾ : ಅಲ್ ಇನ್'ಫಿತಾರ್ 1 : 4)*
*ಸೂರ್ಯನು ಸುತ್ತಲ್ಪಡುವಾಗ*
*ನಕ್ಷತ್ರಗಳು ಚದರಿ ಬಿಡುವಾಗ*
*ಪರ್ವತಗಳು ಚಲಿಸಲ್ಪಡುವಾಗ*
*ಮತ್ತು ಹತ್ತು ತಿಂಗಳ ಗರ್ಭಿಣಿ ಒಂಟೆಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಲಾಗುವಾಗ*
*ವನ್ಯ ಮೃಗಗಳನ್ನು ಒಂದೆಡೆ ಸೇರಿಸಲ್ಪಡುವಾಗ*
*ಸಮುದ್ರಗಳನ್ನು ಕೆರಳಿಸಿ ಬಿಡಲಾಗುವಾಗ*
*ಪ್ರಾಣಗಳನ್ನು (ಶರೀರಗಳೊಂದಿಗೆ)ಜೋಡಿಸಿ ಬಿಡಲಾಗುವಾಗ*
*ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಕೇಳಲಾಗುವಾಗ*
*ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತೆಂದು*
*ಕರ್ಮ ಪತ್ರಗಳು ತೆರೆಯಲ್ಪಡುವಾಗ*
*ಆಕಾಶದ ತೆರೆಯು ಸರಿಸಲ್ಪಡುವಾಗ*
*ನರಕವು ಭುಗಿಲೇಳಿಸಲ್ಪಡುವಾಗ*
*ಮತ್ತು ಸ್ವರ್ಗವು ಹತ್ತಿರ ತರಲ್ಪಡುವಾಗ*
*ಅಂದು ಪ್ರತಿಯೊಬ್ಬನೂ ತಾನೇನು ತಂದಿರುವೆನೆಂದು ತಿಳಿದು ಬಿಡುವುದು(ಸೂರಾ : ಅತ್ತಕ್'ವೀರ್ 1 :14)*
ಮೇಲೆ ಹೇಳಿದ ಕುರ್'ಆನ್ ಆಯತ್ ಅಂತ್ಯ ದಿನದ ಭಯಾನಕತೆಯನ್ನು ಹೇಳುತ್ತಿದೆ. ಇಂದು ವಿಜ್ಞಾನಿಗಳು ಕೂಡಾ ಹೇಳುತ್ತಿದ್ದಾರೆ ಈ ಪ್ರಪಂಚವು ಅಂತ್ಯವಾಗಲಿದೆಯೆಂದು. *ಪ್ರಕೃತಿಯಲ್ಲಿ ಕಾಣುವ ಎಲ್ಲಾ ವಸ್ತುಗಳಿಗೂ ಒಂದು ಕೊನೆ ಎಂಬುವುದಿದೆ. ಆ ನಂತರವಾದ ಅಸ್ತಿತ್ವ ಇರುವುದು ಸರ್ವಶಕ್ತನಾದ ಸೃಷ್ಟಿಕರ್ತನಿಗೆ ಮಾತ್ರ. ಈ ವಿಶ್ವಕ್ಕೆ ಅಂತ್ಯವಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತುಗೊಂಡಿದೆ. ಇಲ್ಲಿನ ಅಸಂಖ್ಯ ಖಗೋಳಗಳು ಪರಸ್ಪರ ಆಕರ್ಷಣಾ ಶಕ್ತಿ ಒಂದೊಮ್ಮೆ ವಿಫಲಗೊಂಡಲ್ಲಿ ಎಲ್ಲವೂ ಒಂದಕ್ಕೊಂದು ಎದುರು ಬದುರಾಗಿ ಡಿಕ್ಕಿ ಹೊಡೆದು ನೆಲಕಪ್ಪಳಿಸುವುದರಲ್ಲಿ ಅನುಮಾನವಿಲ್ಲ. ಎಂದು ವಿಜ್ಞಾನಿಗಳು ಇಂದು ಹೇಳುತ್ತಿದ್ದಾರೆ. ಆದರೆ ಕುರ್'ಆನ್ ಮುಂಚೆನೆ ಅಂತ್ಯ ದಿನದ ಕುರಿತು ವಿವರಿಸಿದೆ.*
ಇಂಶಾ ಅಲ್ಲಾಹ್ ಇದರ ಮುಂದಿನ ಭಾಗ ನಂತರ ತಿಳಿಯೋಣ.

Comments