Skip to main content

ವಿಸ್ಮಯ ತುಂಬಿದ ಜೀವ ಜಗತ್ತಿನ ಕೋಳಿ ಪುರಾಣ 21

▪ವಿಸ್ಮಯ ತುಂಬಿದ ಜೀವ ಜಗತ್ತಿನ ಕೋಳಿ ಪುರಾಣದಲ್ಲಿ ಕಳೆದ ಬಾರಿ ಪ್ರಕಟಿಸಲಾಗದೆ ಮುಂದೆ ಮೊಯಿಲಾಂಜಿಯಲ್ಲಿ ಪ್ರಕಟಿಸುದೆಂದು ಹೇಳಿದ ಎರಡು ರೋಮಾಂಚಕಾರಿ ಸತ್ಯ ಕಥೆಗಳು

 *1 👉 ಆ ಭಿಕ್ಷುಕನನ್ನು ಕಂಡು ಅವಳು ಮಂಕಾದಳು!*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119


   ▪ಪುರಾತನ ಕಾಲದಲ್ಲಿ ಒಬ್ಬ ಅಹಂಕಾರಿಯಾದ ಶ್ರೀಮಂತ ವ್ಯಕ್ತಿ ತನ್ನ ಆಡಂಬರ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ಭೋಜನ ಮಾಡುತ್ತಿರುವಾಗ ಭೋಜನ ಮೇಜಿನಲ್ಲಿ ತರತರಹದ ಹಲವಾರು ಉಪಹಾರಗಳೊಂದಿಗೆ ಹುರಿದ ಎರಡು ಕೋಳಿಗಳಿದ್ದವು. ಬಹಳ ಸುಖ ಸಂತೋಷದಿಂದ ಇಬ್ಬರೂ ಊಟ ಮಾಡುತ್ತಿರುವಾಗ ಹೊರಗಿನಿಂದ ಒಬ್ಬ ಪಾಪ ಭಿಕ್ಷುಕ ಬಂದು ಬಾಗಿಲು ಮುಟ್ಟಿ ಹೇಳಿದ. *"ಒಡೆಯರೇ, ಊಟ ಮಾಡದೆ ಹಲವಾರು ದಿನಗಳಾಯಿತು. ಅಲ್ಲಾಹನಾಣೆ... ನಿಮ್ಮ ಹುರಿದ ಕೋಳಿಯ ಗಮಗಮ ವಾಸನೆ ನನಗೆ ತಡೆಯಲಾಗುವುದಿಲ್ಲ. ದಯಮಾಡಿ ಅದರಿಂದ ಒಂದು ತುಂಡು ಕೋಳಿ ನನಗೆ ಕೊಡಿ."*
   ▪  ಅಹಂಕಾರಿಯಾದ ಈ ಮನೆಯ ಯಜಮಾನ *"ಹರಾಮಿ.. ಇಲ್ಲಿಂದ ಹೋಗು. ಇಲ್ಲಿಗೆ ಯಾಕೆ ಬಂದೆ. ಇನ್ನು ಮುಂದಕ್ಕೆ ಈ ವಠಾರದಲ್ಲಿ ನಿನ್ನನ್ನು ಕಾಣಬಾರದು"* ಎಂದು ಹೇಳಿ ಆ ಬಡಪಾಯಿ ಬಿಕ್ಷುಕನನ್ನು ಅಟ್ಟಿ ಓಡಿಸಿದ.
▪ ಮನೆಮಾಲಿಕ ಕೆಟ್ಟವನಾದರೂ ಆತನ ಪತ್ನಿ ಉತ್ತಮ ಗುಣನಡತೆಯವಳಾಗಿದ್ದಳು. ಮನೆ ಬಾಗಿಲಿಗೆ ಭಿಕ್ಷೆ ಕೇಳಿ ಬರುವವರಿಗೆ ಏನಾದರೂ ದಾನ ಕೊಡಬೇಕೆಂಬ ಮನಸ್ಸು ಅವಳಿಗಿತ್ತು. ಗಂಡನ ಈ ತರ ವರ್ತನೆಗಳು ಯಾವತ್ತೂ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಮಾತ್ರವಲ್ಲ ಈ ವಿಷಯದಲ್ಲಿ ಅವರೆಡೆಯಲ್ಲಿ ಯಾವಾಗಲೂ ಪರಸ್ಪರ ಜಟಾಪಟಿ ಆಗುತ್ತಲೇ ಇತ್ತು. ಕೊನೆಗೆ ಒಂದು ದಿನ ಇವರಿಬ್ಬರೆಡೆಯಲ್ಲಿ ಕಾದಾಟ ಜೋರಾಗಿ ಪರಸ್ಪರ ತಲಾಖ್ ಆಗುವುದರಲ್ಲಿ ಪರ್ಯಾವಸಾನಗೊಂಡಿತು.
 ▪ ಕಾಲ ಮುಂದಕ್ಕೆ ಸಾಗಿತು. ಈ ಅಹಂಕಾರಿ ಶ್ರೀಮಂತ ವ್ಯಕ್ತಿ ನಷ್ಟಕ್ಕೆ ಬಿದ್ದು ಬರ್ಬಾದ್ ಆದ. ಸಾಲದಲ್ಲಿ ಮುಳುಗಿ ಹೋದ. ಮನೆ, ಬಂಗಲೆ, ಜಮೀನು, ಮಾತ್ರವಲ್ಲ ಅವನ ಎಲ್ಲಾ ಆಸ್ತಿಪಾಸ್ತಿಗಳನ್ನೂ ಮಾರಾಟ ಮಾಡುವ ಸ್ಥಿತಿ ಬಂತು. ವರ್ಷಗಳು ಕಳೆದಾಗ ಇತ್ತ ಈತನ ವಿಛ್ಛೇದಿತ ಪತ್ನಿಗೆ ಅಲ್ಲಾಹುವಿನ ವಿಧಿ ಪ್ರಕಾರ ಒಂದು ಒಳ್ಳೆಯ ಗುಣನಡತೆಯ ಪತಿಯನ್ನು ಅಲ್ಲಾಹನು ಕರುಣಿಸಿದನು. ವರ್ಷಗಳು ಕಳೆಯಿತು. ಇಬ್ಬರೂ ಒಳ್ಳೆಯ ಸಾಮರಸ್ಯ ಮನೋಭಾವ ಮತ್ತು ಪರಸ್ಪರ ತಿಳುವಳಿಕೆಯ ದಾಂಪತ್ಯ ಜೀವನದಲ್ಲಿ ಕಾಲ ಕಳೆಯುತ್ತಿದ್ದರು.
    ▪ಒಂದು ದಿನ ಇವಳು ತನ್ನ ಎರಡನೇ ಪತಿಯೊಂದಿಗೆ ಸುಖ- ಸಂತೋಷದಿಂದ ಮಾತನಾಡುತ್ತಾ ಊಟ ಮಾಡುತ್ತಿರುವಾಗ ಹೊರಗಿನಿಂದ ಯಾರೋ ಬಾಗಿಲು ಬಡಿಯುವ ಶಬ್ದ ಕೇಳಿಸಿತು. ನೋಡುವಾಗ ಒಬ್ಬ ಪಾಪ ಭಿಕ್ಷುಕ. ಭಿಕ್ಷುಕ ಹೇಳಿದ. *"ಹಸಿವಾಗುತ್ತದೆ. ಹುರಿದ ಕೋಳಿಯ ವಾಸನೆ ಸಿಗದೆ ತಿಂಗಳುಗಳಾಯಿತು. ಹಸಿವು ತಡೆಯಲಾಗುವುದಿಲ್ಲ.  ನನ್ನಲ್ಲಿ ದಯೆತೋರಿ ನನಗೊಂದು ಹುರಿದ ಕೋಳಿ ಕೊಡಿ."* 
    ▪ಮನೆ ಮಾಲಿಕ ಪತ್ನಿಯಲ್ಲಿ ಹೇಳಿದ. *"ಈ ಎರಡು ಕೋಳಿಯಿಂದ ಒಂದು ಅವನಿಗೆ ಕೊಡು. ನಮಗೆ ಇವತ್ತು ಒಂದು ಸಾಕು."* ಪತಿ ಹೇಳಿದಂತೆ ಪತ್ನಿಯು  ಹೊರಗೆ ಕಾಯುತ್ತಿರುವ ಭಿಕ್ಷುಕನಿಗೆ ಒಂದು ಹುರಿದ ಕೋಳಿಯನ್ನು ಕೊಟ್ಟಳು.
    ▪ಭಿಕ್ಷುಕ ಹುರಿದ ಕೋಳಿಯನ್ನು ಪಡೆದು ಬಹಳ ಸಂತೋಷದಿಂದ ಮರಳಿದ. ಆದರೆ ಭಿಕ್ಷುಕನನ್ನು ನೋಡಿದ ತಕ್ಷಣ ಅವಳು ದಂಗಾಗಿ ಬಿಟ್ಟಳು. ಮನೆಯ ಒಳಗೆ ಬಂದವಳು ಮಂಕಾಗಿ ಒಂದು ಕಡೆ ಕುಳಿತುಕೊಂಡಳು. ಪತಿ ಅವಳ ಈ ತಕ್ಷಣದ ಮುಖಭಾವದ ಬದಲಾವಣೆ ಗಮನಿಸಿ ಅದರ ಕಾರಣ ವಿಚಾರಿಸಿದ. ಆಗ ಅವಳು ಹೇಳಿದಳು. *"ಹೇ... ಪತಿಯವರೇ, ನಿಮಗೊಂದು ಸಂಗತಿ ಗೊತ್ತಾ..? ಈಗ ಭಿಕ್ಷೆ ಬೇಡಿ ಬಂದ ವ್ಯಕ್ತಿ ಯಾರೆಂದು ಗೊತ್ತಾ..?"*
    ▪ಪತಿ ಹೇಳಿದ. *"ಇಲ್ಲ. ನನಗೆ ನೀನು ಹೇಳದೆ ಹೇಗೆ ಗೊತ್ತಾಗುವುದು..? ನನಗೆ ಅವರ ಪರಿಚಯವೂ ಇಲ್ಲ. ಪರವಾಗಿಲ್ಲ. ವಿಷಯ ಹೇಳು."* ಪತ್ನಿ ಹೇಳಿದಳು. *"ಅದು ನನ್ನ ಮೊದಲನೇ ಅಹಂಕಾರಿ ಗಂಡ. ಒಂದು ಕಾಲದಲ್ಲಿ ಕೋಟಿಯಾಧಿಪತಿಯಾಗಿದ್ದ. ಯಾವ ಭಿಕ್ಷುಕ ಮನೆ ಬಾಗಿಲಿಗೆ ಬಂದರೂ ಅಟ್ಟಿಸಿ ಓಡಿಸುತ್ತಿದ್ದ. ಈಗ ಇವರಿಗೆ ಅಲ್ಲಾಹುವಿನ ವಿಧಿ ಪ್ರಕಾರ ಈ ಗತಿಗೇಡು ಬಂದಿರಬೇಕು. ಸುಬ್‌ಹಾನಲ್ಲಾಃ..!"*
   ▪ಪತ್ನಿಯಿಂದ ಈ ವಾರ್ತೆ ಕೇಳಿದಾಗ ಎರಡನೇ ಪತಿ ಹೇಳಿದನಂತೆ. *"ನನ್ನ ಪ್ರಿಯತಮೆ... ನೀನು ಗಾಬರಿಪಡುವ ಅಗತ್ಯವಿಲ್ಲ. ಅವತ್ತು ವರ್ಷಗಳ ಮುಂಚೆ ನಿಮ್ಮ ಮನೆಗೆ ಭಿಕ್ಷೆ ಕೇಳಿ ಬಂದು ಕೋಳಿ ಕೇಳಿದಾಗ ಒಬ್ಬನನ್ನು ಮನೆ ಬಾಗಿಲಿನಿಂದ ಅಟ್ಟಿಸಿ ಓಡಿಸಿದ್ದು ನೆನಪುಂಟಾ..? ಅದು ಯಾರು ಗೊತ್ತಾ..? ಅದು ನಾನೆ..!!!*"
     ▪ಈ ಸತ್ಯ ಘಟನೆಯನ್ನು ವಿಶ್ವ ವಿಖ್ಯಾತ ಇತಿಹಾಸಗಾರ ಇಮಾಮ್ *ಅಹ್‌ಮದ್ ಬಿನ್ ಮುಹಮ್ಮದ್ ಖಲ್ಲೀಖಾನ್* ತನ್ನ *ವಫಯಾತುಲ್ ಅ‌ಅ್‌ಯಾನಿ ವ ಅಂಬಾಯಿ ಅಬ್‌ನಾಯಿ ಅಲ್ ಝಮಾನ್* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

*2 👉ಅವಳು ನನ್ನ ತಂಗಿ*

   ▪ ಹಿಜ್‌ರಾ ಎರಡನೇ ಶತಮಾನದ ಖ್ಯಾತ ಇಸ್ಲಾಮೀ ಇತಿಹಾಸ ಬರಹಗಾರ ಮತ್ತು ಸಂಶೋಧಕರಾದ‌ *ಅಲ್ ಹಯ್‌ಸಮ್ ಬಿನ್ ಅದಿ‌ಯ್* ಒಮ್ಮೆ ಇರಾಕಿನ ಒಂದು ಕುಗ್ರಾಮದಲ್ಲಿ ಒಂದು ದೀರ್ಘ ಸಂಚಾರದಲ್ಲಿರುವಾಗ ಸಂಜೆಯಾದಾಗ ಸಂಚಾರ ಮುಂದುವರಿಸಲು ಕಷ್ಟಸಾಧ್ಯವಾದ್ದರಿಂದ ದಾರಿಮಧ್ಯೆ ಕಂಡ ಒಂದು ಮನೆಗೆ ಅತಿಥಿಯಾಗಿ ಹೋದರು. ಮನೆ ಯಜಮಾನ ಅಲ್ಲಿರಲಿಲ್ಲ. ಮನೆಯೊಡತಿ ಹೈಸಮರಲ್ಲಿ ಕೇಳಿದಳು. *"ನೀವು ಯಾರು..?"* ಹಯ್‌ಸಮರು ಹೇಳಿದರು. *"ನಾನು  ಇವತ್ತಿನ ನಿಮ್ಮ ಅತಿಥಿ."* ರೋಷಗೊಂಡ ಮನೆ ಸಂಗಾತಿ ಹೇಳಿದಳು. *"ನಿಮಗೆ ಇಲ್ಲಿ ಅತಿಥಿಯಾಗಿ ಬರಲಿಕ್ಕೆ ಯಾರು ಕರೆಯೋಲೆ ಕೊಟ್ಟದ್ದು..? ಯಾವ ಅತಿಥಿ..? ಅತಿಥಿಗೆ ಹೊರಗೆ ವಿಶಾಲವಾದ ಮರುಭೂಮಿಯಿದೆ. ಅಲ್ಲಿ ಹೋಗಿ ಮಲಗಿ."*
    ▪ಹಯ್‌ಸಮ್ ಬಿನ್ ಅದಿಯರು ಬಹಳ ಬೆಸರಗೊಂಡರು. ಆದರೇನು ಮಾಡುವುದು..? ಹೊರಗಾದರೆ ಥರಗುಟ್ಟುವ ಸಹಿಸಲಾಗದ ಚಳಿ. ಯಾವ ಕಾರಣಕ್ಕೂ ಹೊರಗೆ ಹೋಗುವಂತಿಲ್ಲ. ಏನೇ ಆಗಲಿ ಈ ರಾತ್ರಿ ಇಲ್ಲೇ ಪೂರ್ತಿ ಮಾಡುವುದೆಂದು ತೀರ್ಮಾನ ಮಾಡಿದರು.
   ▪ಮನೆ ಗ್ರಹಿಣಿಯಾದರೆ ಒಳಗೆ ಅಡುಗೆ ಕೋಣೆಯಲ್ಲಿ ಒಂದು ಕೋಳಿಯನ್ನು ಸಟ್ಟು ಯಾವುದೇ ಮುಲಾಜು ಇಲ್ಲದೆ ತಿನ್ನುತ್ತಿದ್ದಳು. ಅದರ ಗಮಗಮ ವಾಸನೆ  ಹೊರ ಜಗಲಿಯಲ್ಲಿ ಕುಳಿತ ಹಯ್‌ಸಮರಿಗೆ ಬೀಸುತ್ತಿತ್ತು. ತನ್ಮಧ್ಯೆ ಅವಳ ಪತಿ ಕೆಲಸ ಮುಗಿದು ಮನೆಗೆ ಬಂದರು. ಆಲೋಚನೆ ಮಾಡುತ್ತಾ ಹೊರ ಜಗಲಿಯಲ್ಲಿ ಕುಳಿತಿದ್ದ ಹಯ್‌ಸಮರಿಗೆ ಕೈಕೊಟ್ಟು ಮನೆ ಮಾಲಿಕರು ಕೇಳಿದರು. *" ನೀವು ಯಾರು..? ಎಲ್ಲಿಂದ ಬಂದಿದ್ದೀರಿ..? ಊಟ ಮಾಡಿದಿರಾ..? ನಿಮ್ಮ ಮುಖ ನೋಡುವಾಗ ಏನು ತಿನ್ನದವರಂತೆ ಕಾಣುತ್ತದೆ. ನನ್ನ ಹೆಂಡತಿ ಆ ಕತ್ತೆ ನಿಮಗೆ ಏನನ್ನಾದರು ಕೊಟ್ಟಿದ್ದಾಳಾ..?"*
  ▪ಹಯ್‌ಸಮರು ಹೇಳಿದರು. *"ನಾನೊಬ್ಬ ಸಂಚಾರಿ. ಸಂಚಾರಮಧ್ಯೆ ರಾತ್ರಿಯಾದಾಗ ನಿಮ್ಮ ಮನೆಗೆ ಅತಿಥಿಯಾಗಿ ಬಂದೆ. ನಿಮ್ಮ ಪತ್ನಿ ಒಂದು ಲೋಟ ನೀರು ಕೂಡ ನನಗೆ ಈ ತನಕ ಕೊಡಲಿಲ್ಲ."*  ಕುಪಿತನಾದ ಮನೆ ಮಾಲಿಕ ಕೂಡಲೇ ತನ್ನ ಕೈಯಲ್ಲಿದ್ದ ಹಾಲು ಪಾತ್ರೆಯಿಂದ ಹಯ್‌ಸಮರಿಗೆ ಬೇಕಾದಷ್ಟು ಹಾಲು ಕುಡಿಯಲು ಕೊಟ್ಟು ನೇರ ಅಡುಗೆ ಕೋಣೆಗೆ ಹೋಗಿ ತನ್ನ ಹೆಂಡತಿಯಲ್ಲಿ ಕೇಳಿದರು. *"ಹೇ ಮಾರೀ... ಅಲ್ಲಿ ಹೊರಗೆ ಒಬ್ಬರು ಅತಿಥಿಯಿರುವಾಗ ಅವರಿಗೆ ಏನನ್ನೂ ಕೊಡದೆ ನೀನು‌ ಇಲ್ಲಿ ಕೋಳಿ ಹುರಿದು ತಿನ್ನುವುದಾ..? ನಿನ್ನನ್ನು ನಾನು ಯಾವ ಕಷ್ಟ ಕಾಲಕ್ಕೆ ಕಟ್ಟಿದ್ದೇನೆಂದು ತಿಳಿಯುವುದಿಲ್ಲ."*  ನಂತರ ಅವಳ ಕಪಾಳಕ್ಕೆ ನಾಲ್ಕು ಬಾರಿಸಿ ಒಂದು ಚೂರಿ ತೆಗೆದುಕೊಂಡು ಮನೆಯ ಹೊರಗೆ ಹೊದರು.
   ▪ಹಯ್‌ಸಮರು ಅವರಲ್ಲಿ ಕೇಳಿದರು. *"ಯಜಮಾನರೇ, ಇದು ಚೂರಿ ಯಾಕೆ ಕೊಂಡು ಹೋಗುತ್ತಿದ್ದೀರಿ..?"* ಅವರು ಹೇಳಿದರು. *"ಯಾವನೇ ಒಬ್ಬ ಮನೆಗೆ ಅತಿಥಿಯಾಗಿ ಬಂದರೆ ಅವರು ಹಸಿದು ಇರುವುದು ನನಗೆ ಸಹಿಸಲಾಗದ ಒಂದಾಗಿದೆ."*  ಎಂದು ಹೇಳಿ ಹೈಸಮರು ಸವಾರಿ ಮಾಡಿ ಬಂದ ಅವರ ಒಂಟೆಯನ್ನೇ ಚೂರಿಹಾಕಿ ಮನೆಯ ಹೊರ ಗುಡಾರದಲ್ಲಿ ಬೇಯಿಸಿ ಅವರಿಗೆ ಬೇಕಾದಷ್ಟು ಬಡಿಸಿ ಕೊಟ್ಟರು.
    ▪ಹಯ್‌ಸಮರು ರಾತ್ರಿಯಿಡೀ ತನ್ನ ಒಂಟೆ ನಷ್ಟವಾದ ತಲೆಬಿಸಿಯಲ್ಲಿ ನಾಳೆ ಹೇಗೆ ಸಂಚಾರ ಮಾಡುವುದೆಂದು ಆಲೋಚಿಸುತ್ತಾ ಬೆಳಗಿನ ತನಕ ನಿದ್ದೆ ಮಾಡದೆ ಕುಳಿತರು. ಬೆಳಗ್ಗೆ ಫಜರ್ ನಮಾಝ್ ಮಾಡಿ ಹೊರ ನೋಡುವಾಗ ತನ್ನ ಮುಂದಿನ ದಿನ ಚೂರಿಹಾಕಿದ ಒಂಟೆಗೆ ಬದಲಾಗಿ ಮನೆಮಾಲಿಕ ಅವರ ಹೊಲದಿಂದ ಬೇರೊಂದು ಬಲಿಷ್ಠ ಒಂಟೆಯನ್ನು ತಂದಿಟ್ಟಿದ್ದರು. ಮಾತ್ರವಲ್ಲ ಹಯ್‌ಸಮರಿಗೆ ಮರುದಿನದ ಪ್ರಯಾಣದಲ್ಲಿ ತಿನ್ನಲು ಬೇಕಾದಷ್ಟು ಹುರಿದ ಒಂಟೆ ಮಾಂಸವನ್ನು ಕೂಡ ಕಟ್ಟಿ ಕೊಟ್ಟರು.
  ▪ಹಯ್‌ಸಮ್ ಬಿನ್ ಅದಿಯರು ಅಲ್ಲಿಂದ ಸಲಾಮ್ ಹೇಳಿ ಹೊರಟರು. ಆ ದಿನ ಸಂಜೆಯಾದಾಗ ಬೇರೊಂದು ಮನೆಗೆ ತಲುಪಿದರು. ಅಲ್ಲಿಯೂ ಯಜಮಾನ ಇರಲಿಲ್ಲ. ಮನೆ ಹೆಂಗಸು ಹೈಸಮರನ್ನು ಅತಿಥಿಯೆಂದು ತಿಳಿದಾಗ ಬಹಳ ಗೌರವದಿಂದ ಬರಮಾಡಿಕೊಂಡರು. ಮಾತ್ರವಲ್ಲ ಮನೆಯ ಕೋಳಿ ಗೂಡಿನಿಂದ ಒಂದು ಕೋಳಿಯನ್ನು ಹಿಡಿದು ಚೂರಿಹಾಕಿ ಹುರಿದು ಬಹಳ ವಿಜೃಂಭಣೆಯಿಂದ ಸತ್ಕಾರ ಮಾಡಿದರು.
   ▪ ರಾತ್ರಿ ಊಟಮಾಡಿ ಮನೆ ಜಗಲಿಯಲ್ಲಿ ಕುಳಿತು  ಕೊಳ್ಳುತ್ತಿರುವಾಗ ಒಬ್ಬ ಕುರೂಪಿಯಾದ *ಅ‌ಅ್‌ರಾಬಿ* ರಣ ಬರುವಂತೆ ಜಿಗಿದು ಮನೆಯೊಳಗೆ ನುಗ್ಗಿ ನನ್ನಲ್ಲಿ ಕೇಳಿದ. *"ನೀವು ಯಾರು..? ಇಲ್ಲಿ ಯಾಕೆ ಬಂದಿದ್ದೀರಿ..?"* ನಾನು ಹೇಳಿದೆ. *"ನಾನೊಬ್ಬ ಮುಸಾಫಿರ್.  ನಿಮ್ಮ ಮನೆಗೆ ಅತಿಥಿಯಾಗಿ ಬಂದಿದ್ದೇನೆ."* ಕುಪಿತನಾದ ಆತ *"ಅತಿಥಿಗೆ ಇಲ್ಲಿ ಏನು ಕೆಲಸ..?"* ಎಂದು ಹೇಳಿ ನೇರವಾಗಿ ಅಡುಗೆ ಕೋಣೆಗೆ ಹೋಗಿ ಪತ್ನಿಯಲ್ಲಿ ಕೇಳಿದ. *"ನನಗೆ ಹುರಿದಿಟ್ಟ ಕೋಳಿ ಎಲ್ಲಿಗೆ ಹೋಯಿತು..?"* ಪತ್ನಿ ಹೇಳಿದಳು. *"ಅದನ್ನು ನಮ್ಮ ಅಲ್ಲಿ ಹೊರಗೆ ಕುಳಿತಿರುವ ಅತಿಥಿಗೆ ಕೊಟ್ಟಿದ್ದೇನೆ."* ಅಷ್ಟು ಹೇಳಿದ್ದೇ ತಡ... ಅಲ್ಲಿರುವ ಒಂದು ಸಲಾಕೆ ತೆಗೆದು ಹೆಂಡತಿಯ ಸೊಂಟಕ್ಕೆ ಒಂದು ಏಟು ಕೊಟ್ಟ.
    ▪ಇದನ್ನೆಲ್ಲಾ ವೀಕ್ಷಿಸುತ್ತಿರುವ‌ ಹಯ್‌ಸಮರಿಗೆ ನಿನ್ನೆಯ ಮತ್ತು ಇವತ್ತಿನ‌ ಎರಡು ಮನೆಯ ಅವಸ್ಥೆ ನೋಡಿ ತಾನರಿಯದೆಯೇ ನಗು ಬಂತು. ಹಯ್‌ಸಮರು ನಗುವುದನ್ನು ಕಂಡು ಮನೆ ಯಜಮಾನ ಹೊರಗೆ ಬಂದು ಕೇಳಿದನು. *"ಯಾಕೆ ನಗುತ್ತಿರುವಿಯಾ..?"* ಆಗ ಹಯ್‌ಸಮರು ನಿನ್ನೆಯ ಮನೆಯ  ವಿಷಯವನ್ನು ಈ ಅ‌ಅ್‌ರಾಬಿಗೆ  ಸವಿಸ್ತಾರವಾಗಿ ಹೇಳಿದರು.
   ▪ಆಗ ಅ‌ಅ್‌ರಾಬಿಯಾದ ಮನೆ ಮಾಲಿಕ ಹೇಳಿದನಂತೆ. *"ಆ ಸತ್ಕಾರ ಮಾಡಿದ ನಿನ್ನೆಯ ವ್ಯಕ್ತಿ ಈ ನನ್ನ ಹಡಬೆ ಹೆಂಡತಿಯ ಅಣ್ಣ.  ಆ ಮನೆಯ ಹೆಂಗಸು ನನ್ನ ತಂಗಿ..!"*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...