ಅಂತ್ಯ ದಿನದ ಲಕ್ಷಣಗಳು : 8
*ನರಕ ಏಳು ವಿಧ*
*1* ಜಹನ್ನಂ : ಸತ್ಯವಿಶ್ವಾಸಿಗಳಲ್ಲಿ ಮಹಾ ಪಾಪ ಎಸಗಿದವರು ವಾಸಿಸುವ ಸ್ಥಳವಿದು. ಪ್ರವಾದಿ(ಸ.ಅ)ರವರಿಂದ ಶಫಾಅತ್ ದೊರೆತರೆ ಮಾತ್ರ ಅವರು ಅದರಿಂದ ಹೊರಬರುವರು.
*2* ಲಳಾ : ಇದು ಘೋರ ಬೆಂಕಿಯಿಂದ ಹೊತ್ತಿ ಉರಿಯುವ ನರಕ. ಇದರ ಬೆಂಕಿಗೆ ಹೊಗೆ ಇರುವುದಿಲ್ಲ. ಇಬ್ಲೀಸ್ ಅವನ ಅನುಚರರು ಮತ್ತು ಮಜೂಸಿ (ಅಗ್ನಿ ಆರಾಧಕ)ಗಳ ವಾಸಸ್ಥಳವಿದು.
*3* ಹುತ್ವಮ : ಇದು ಯಹೂದಿಗಳಿಗಾಗಿ ತಯಾರಿಸಲಾಗಿರುವ ನರಕ.
*4* ಸ'ಈರ್ : ನಿರಂತರವಾಗಿ ಹೊತ್ತಿ ಉರಿಯುವ ಈ ಮಹಾ ಅಗ್ನಿ ಕುಂಡದಲ್ಲಿ ಬೆಂಕಿಯ ಹಾವು, ಚೇಳು ಮತ್ತು ಸಂಕೋಲೆಗಳಿವೆ. ನರಕಗಳ ಪೈಕಿ ಇದು ಅತೀ ಭೀಕರವಾದುದು. ನಸ್ರಾಣಿಗಳು ಅದರ ಅವಕಾಶಿಗಳಾಗಿರುತ್ತಾರೆ.
*5* ಸಖರ್ : ಇದು ಯಹೂದಿಗಳ ಪೈಕಿ ಸ್ವಾಭಿ ಎಂಬ ಒಂದು ವರ್ಗದವರಿಗಾಗಿ ತಯಾರಿಸಲ್ಪಟ್ಟ ನರಕ.
*6* ಜಹೀಮ್ : ಇದರ ಒಂದು ಕೆಂಡವು ಇಡೀಯ ಪ್ರಪಂಚವನ್ನೇ ಭಸ್ಮಗೊಳಿಸಬಲ್ಲದು. ಅತೀ ಕಠೋರ ಮತ್ತು ಅತ್ಯಂತ ನಿಕೃಷ್ಟವಾದ ಈ ನರಕದ ಯಾತನೆಗೆ ಬಹು ದೇವಾರಾಧಕರು ಮತ್ತು ವಿಗ್ರಹಾರಾಧಕರು ಬಲಿಯಾಗುವರು.
*7* ಹಾವಿಯತ್ : ಬಹಳ ಕಠಿಣ ತಾಪವನ್ನು ಹೊಂದಿದ ನರಕ. ಇದನ್ನು ಪ್ರವೇಶಿಸುವವರು ಎಂದೆಂದಿಗೂ ಅಲ್ಲಿಂದ ಹೊರ ಬರುವಂತಿಲ್ಲ. ಈ ನರಕದಲ್ಲಿ ಹಬ್ ಹಬ್ ಎಂಬ ಒಂದು ಬಾವಿಯಿದೆ. ಆ ಬಾವಿಯನ್ನು ತೆರೆದೊಡನೆ ಅದರಿಂದ ಒಂದು ವಿಧದ ಅಗ್ನಿ ಹೊರ ಹೊಮ್ಮುತ್ತದೆ. ಇದರ ತಾಪದಿಂದ ಇತರ ಬೆಂಕಿ ಕೂಡಾ ಅಲ್ಲಾಹನಲ್ಲಿ ಅಭಯ ಯಾಚಿಸುತ್ತದೆ. ಅಗ್ನಿಯಿಂದ ನಿರ್ಮಿತಗೊಂಡ ಸ'ಊದ್ ಎಂಬ ಒಂದು ಪರ್ವತ ಅಲ್ಲಿದೆ. ಅಲ್ಲಾಹುವಿನ ಶತ್ರುಗಳ ಕೈ ಕಾಲುಗಳನ್ನು ಕಟ್ಟಿ ಸಂಕೋಲೆಯಿಂದ ಬಿಗಿಯಾಗಿ ಬಂಧಿಸಿ ಆ ಪರ್ವತದ ಮೇಲೆ 70 ವರ್ಷ ಕಾಲ ಇಡಲಾಗುತ್ತದೆ. ಕಪಟ ವಿಶ್ವಾಸಿ (ಮುನಾಫಿಕ್)ಗಳೇ ಈ ಭೀಕರ ನರಕದ ನಿವಾಸಿಗಳು.
ನರಕದ ಪ್ರತಿಯೊಂದು ಬಾಗಿಲುಗಳ ಬಳಿ ಸಾವಿರಾರು ಅಗ್ನಿಯ ಪರ್ವತಗಳಿವೆ. ಪ್ರತಿಯೊಂದು ಪರ್ವತಗಳಲ್ಲಿ ಎಪ್ಪತ್ತು ಸಾವಿರ ಅಗ್ನಿಯ ಕಣಿವೆಗಳಿವೆ! ಪ್ರತಿಯೊಂದು ಕಣಿವೆಗಳಲ್ಲಿ ಎಪ್ಪತ್ತು ಸಾವಿರ ಅಗ್ನಿಯ ಅಗ್ನಿಯ ನೆಲ ಮಾಳಿಗೆಗಳಿವೆ, ಪ್ರತಿಯೊಂದು ನೆಲಮಾಳಿಗೆಗಳಲ್ಲಿ ಎಪ್ಪತ್ತು ಸಾವಿರ ಅಗ್ನಿ ನಿವಾಸಗಳಿವೆ. ಪ್ರತಿಯೊಂದು ನಿವಾಸಗಳಲ್ಲಿ ಸಾವಿರ ತರದ ಯಾತನೆಗಳಿವೆ. ನರಕದಲ್ಲಿ ಬೆಂಕಿಯ ಮರಗಳಿವೆ. ಬೆಂಕಿಯಿಂದಲೇ ಬೆಳೆಯುವ ಬೆಂಕಿ ಹಣ್ಣುಗಳು ಕಾಣಲು ಥೆಟ್ ಮಾನವನ ತಲೆಯ ರೂಪದಲ್ಲಿರುತ್ತವೆ.
ಅಲ್ಲಿನ ವೃಕ್ಷಗಳಲ್ಲಿ ಅತ್ಯಂತ ಭೀಕರ ಮತ್ತು ನಿಕೃಷ್ಟವಾದ ವೃಕ್ಷವೊಂದಿದೆ. ಮುಳ್ಳುಗಳಿಂದ ಕೂಡಿದ ವೃಕ್ಷ, ಅದರ ಹೆಸರು ಝಕ್ಕೂಂ. ನರಕದ ಪಾತಾಳದಿಂದ ತಲೆಯೆತ್ತಿ ನಿಂತಿರುತ್ತದೆ. ಅದನ್ನು ನರಕವಾಸಿಗಳಿಗೆ ಹೊಟ್ಟೆ ತುಂಬಿಸಲಾಗುತ್ತದೆ. ಹಾಗೂ ನರಕವಾಸಿಗಳಿಗೆ ಹಮೀಮ್ ಎಂಬ ಪಾನಿಯವನ್ನು ಕುಡಿಸಲಾಗುತ್ತದೆ. ಅದು ಕುದಿಯುವ ಅತ್ಯಂತ ಧುರ್ಗಂದ ದಿಂದ ಕೂಡಿದ್ದು ನರಕ ವಾಸಿಗಳ ಹತ್ತಿರ ಕೊಂಡು ಹೋಗುವಾಗಲೇ ಅವರ ಚರ್ಮಗಳು ಕರಟಿ ಹೋಗುವಂತಹದ್ದಾಗಿದೆ. ನರಕದ ಅವಸ್ಥೆಯು ಭೀಭತ್ಸಕರವಾಗಿದೆ. ಅಲ್ಲಿನ ಝಬಾನಿ ಮಲಕುಗಳು ನರಕವಾಸಿಗಳನ್ನು ಶಿಕ್ಷಿಸುವ ಅವಸ್ಥೆಯು ಅತ್ಯಂತ ಭೀಕರವಾಗಿದೆ.
ನರಕವನ್ನು ಕಾಯುವ ಮಲಕ್ ಮಾಲಿಕ್(ಅ) ರನ್ನು ಕರೆದು ನರಕವಾಸಿಗಳು ಕರೆದು ಹೇಳುವರು; ಓ ಮಾಲಿಕ್, ಇಲ್ಲಿಯ ಶಿಕ್ಷೆಯು ಅತ್ಯಂತ ಕಠಿಣವಾಗಿದೆ. ಇಲ್ಲಿಯ ತಾಪ ಕಠಿಣವಾಗಿದೆ. ನಮಗೆ ಇದರಿಂದ ಸಹಿಸಲೂ ಸಾಧ್ಯವಿಲ್ಲದಾಗಿದೆ ಈ ನರಕದಿಂದ ನಮಗೆ ಸ್ವಲ್ಪ ರಕ್ಷಣೆಯನ್ನಾದರೂ ನೀಡಿ, ಎಂದು ಮಾಲಿಕ್ (ಅ) ರಲ್ಲಿ ಹೇಳುವಾಗ ಮಾಲಿಕ್(ಅ) ವರ್ಷಗಳ ಕಾಲ ಉತ್ತರವಿರುವುದಿಲ್ಲ. ನಂತರ ಮಾಲಿಕ್(ಅ) ಹೇಳುವರು, ನೀವು ಭೂಮಿಯಲ್ಲಿ ಮಾಡಿದ ಫಲವಾಗಿದೆ ಇದು. ಈಗ ಇದರ ರುಚಿಯನ್ನು ಅನುಭವಿಸಿರಿ ಎಂದು ಉತ್ತರಿಸುವರು. ನಂತರ ನರಕವಾಸಿಗಳಿಗೆ ಇನ್ನು ನಮಗೆ ರಕ್ಷಣೆ ಇಲ್ಲ ಎಂದು ಗೊತ್ತಾಗುತ್ತದೆ. ಮತ್ತೆ ನರಕವಾಸಿಗಳ ನರಳಾಟ, ಚೀರಾಟ, ಆಕ್ರಂಧನ ಮಾತ್ರವಾಗಿರುತ್ತದೆ.
ಅಲ್ಲಾಹನು ಕುರ್'ಆನಿನಲ್ಲಿ ಹೇಳುತ್ತಾನೆ,
*ಸತ್ಯವಿಶ್ವಾಸಿಗಳೇ, ನೀವು ಸ್ವಶರೀರಗಳನ್ನೂ, ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಮನುಷ್ಯರು ಮತ್ತು ಕಲ್ಲುಗಳು ಅದರ ಇಂಧನವಾಗಿರುವುದು. ಅದರ ಮೇಲೆ ಅತ್ಯಂತ ಕಠೋರ ಮತ್ತು ಬಲಾಡ್ಯರಾದ ದೇವಚರರು(ಮಲಕುಗಳು) ನಿಯುಕ್ತರಾಗಿರುವರು. ಅವರೆಂದೂ ಅಲ್ಲಾಹನ ಆಜ್ಞೋಲ್ಲಂಘನೆ ಮಾಡುವುದಿಲ್ಲ. ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪಣೆಯನ್ನೂ ಅವರು ಪಾಲಿಸುತ್ತಾರೆ.(ಸೂರಾ : ಅತ್ತಹ್'ರೀಮ್ 6)*
ಸೂರತುಲ್ ಹಾಕ್ಕ್ವದಲ್ಲಿ ಅಲ್ಲಾಹನು ಹೇಳುವುದನ್ನು ನೋಡಿರಿ.
*ಯಾವನ ಕರ್ಮಗ್ರಂಥವನ್ನು ಅವನ ಎಡಗೈಯ್ಯಲ್ಲಿ ಕೊಡಲಾಗುವುದೋ ಅವನು ಹೇಳುವನು ಅಯ್ಯೋ! ನನ್ನ ಕರ್ಮಗ್ರಂಥವನ್ನು ನನಗೆ ಕೊಡದೆ ಇರುತ್ತಿದ್ದರೆ!*
*ಮತ್ತು ನನ್ನ ವಿಚಾರಣಾ ಫಲವೇನೆಂದು ನನಗೆ ತಿಳಿಯದೇ ಇರುತ್ತಿದ್ದರೆ ಉತ್ತಮವಿತ್ತು.*
*ಅಯ್ಯೋ ನನ್ನ ಮರಣವೇ ಅಂತಿಮವಾಗಿರುತ್ತಿದ್ದರೆ ಉತ್ತಮವಾಗಿತ್ತು.*
*ನನ್ನ ಸಂಪತ್ತು ಇಂದು ನನಗೇನೂ ಪ್ರಯೋಜನ ಕೊಡಲಿಲ್ಲ.*
*ನನ್ನ ಅಧಿಕಾರವೆಲ್ಲವೂ ನನಗೆ ನಷ್ಟಗೊಂಡಿತು*
*(ದೇವಚರರೊಂದಿಗೆ ಅಲ್ಲಾಹು ಹೇಳುವನು) ಅವನನ್ನು ಹಿಡಿಯಿರಿ ಮತ್ತು ಅವನಿಗೆ (ಕೈ ಕೊರಳಿಗೆ) ಬೇಡಿ ತೊಡಿಸಿರಿ.*
*ಅನಂತರ ಅವನನ್ನು ನರಕದೊಳಕ್ಕೆ ಪೂರ್ಣವಾಗಿ ಮುಳುಗಿಸಿರಿ*
*ಆ ಬಳಿಕ ಅವನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯಲ್ಲಿ ಬಿಗಿಯಿರಿ.*
*ಅವನು ಮಹಾನನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುತ್ತಿರಲಿಲ್ಲ.*
*ಮತ್ತು ಬಡವರಿಗೆ(ಮಿಸ್ಕೀನರಿಗೆ) ಆಹಾರ ಕೊಡಲು ಪ್ರೇರೇಪಿಸುತ್ತಲೂ ಇರಲಿಲ್ಲ.*
*ಆದುದರಿಂದ ಇಂದು ಅವನಿಗೆ ಇಲ್ಲಿ ಬಂಧುಗಳು ಯಾರೂ ಇಲ್ಲ.*
*ಗಿಸ್ಲೀನ್(ನರಕದಲ್ಲಿ ಮಡುಗಟ್ಟುವ ರಕ್ತ, ಕೀವು, ಕೊಳಚೆ ನೀರುಗಳ ಸಂಗ್ರಹ) ಹೊರತು ಅವನಿಗೆ ಬೇರೆ ಯಾವ ಆಹಾರವೂ ಇಲ್ಲ.(ಸೂರಾ : ಹಾಕ್ಕ್ವಾ)*
ಇನ್ನು ಅನೇಕ ಕಡೆ ನರಕದ ಕುರಿತು ಕುರ್'ಆನ್ ಹೇಳಿದೆ.
ನರಕದ ಕುರಿತು ಅಲ್ಲಿಯ ಭೀಕರ ಶಿಕ್ಷೆಯ ಕುರಿತು ಎಷ್ಟು ಹೇಳಿದರೂ ತೀರದು. ಇಲ್ಲಿ ಸ್ಯಾಂಪಲ್ ಮಾತ್ರ ಹೇಳಿದ್ದು. ಅಲ್ಲಾಹನು ನರಕದ ಭಯಾನಕ ಶಿಕ್ಷೆಯಿಂದ ನಮ್ಮನ್ನೂ, ನಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರನ್ನೂ, ಸಹಪಾಠಿಗಳನ್ನೂ, ಕುಟುಂಬಗಳನ್ನೂ, ನಮ್ಮಲ್ಲಿ ದುಅ ಮಾಡಲು ಹೇಳಿದವರನ್ನೂ, ನಮ್ಮ ಗುರುಗಳನ್ನೂ, ಸರ್ವ ಮುಸ್ಲಿಂ ಸಮುದಾಯವನ್ನೂ ರಕ್ಷಿಸಲಿ. ಆಮೀನ್.
*ಸ್ವರ್ಗ ಲೋಕ*
ಸ್ವರ್ಗ ಎಂಬ ಶಬ್ಧ ಕಿವಿಗೆ ಬಿದ್ದೊಡನೆ ನಮ್ಮ ಮೈ ಪುಳಕಗೊಳ್ಳುತ್ತದೆ. ಮನಸ್ಸು ಮುದಗೊಳ್ಳುತ್ತದೆ. ಹೃದಯದಲ್ಲಿ ಆನಂದದ ಅಲೆಗಳು ಪುಟಿ ತೊಡಗುತ್ತದೆ. ಇಹಲೋಕದಲ್ಲಿ ಅಲ್ಲಾಹನ ಆಜ್ಞಾನುವರ್ತಿಯಾಗಿ ಜೀವನ ಸಾಗಿಸುವ ಸತ್ಯವಿಶ್ವಾಸಿಗಳು ಪರಲೋಕದಲ್ಲಿ ಸ್ವರ್ಗ ಸುಖವನ್ನು ಅನುಭವಿಸುವರು. ಕುರ್'ಆನ್ ಹೇಳುತ್ತದೆ. ಸತ್ಕರ್ಮಗಳನ್ನು ಮಾಡುವ ಸತ್ಯವಿಶ್ವಾಸಿಗಳಿಗೆ ಸ್ವರ್ಗದ ಸುವಾರ್ತೆಯನ್ನು ನೀಡಿರಿ. ಅದರ ತಳ ಭಾಗದಲ್ಲಿ ನದಿಗಳು ಹರಿಯುವುವು. ಆ ಉದ್ಯಾನದ ಫಲಗಳು ಇಹಲೋಕದ ಫಲಗಳನ್ನು ಹೋಲುತ್ತಿರುವುವು. ಅದರಿಂದ ಅವರಿಗೆ ತಿನ್ನಲು ಕೊಡುವಾಗಲೆಲ್ಲ ಇಂತಹ ಹಣ್ಣುಗಳನ್ನು ಹಿಂದೆ ನಮಗೆ ಭೂಮಿಯಲ್ಲಿ ಕೊಡಲಾಗುತ್ತಿದ್ದವು ಎನ್ನುವರು. ಅವರಿಗೆ ಅಲ್ಲಿ ಪವಿತ್ರ ಮಡದಿಯರಿರುವರು. ಆ ಸ್ವರ್ಗದಲ್ಲಿ ಅವರು ಶಾಶ್ವತವಾಗಿ ನೆಲೆಸುವರು. (ಬಕರ)
ಸ್ವರ್ಗವು ಈ ವಿಶ್ವದಷ್ಟು ವಿಶಾಲವಾಗಿರುವ ಒಂದು ಮಹಾ ಪ್ರಪಂಚ. ಆಕಾಶ ಭೂಮಿಗಳ ವೈಶಾಲ್ಯತೆ, ಅಲ್ಲಾಹನಿಗಲ್ಲದೆ ಬೇರೆ ಯಾರಿಗೂ ತಿಳಿಯದ ದೈರ್ಘ್ಯತೆ, ಸ್ವರ್ಗ ಲೋಕದ ಹವೆ, ರುಚಿಭರಿತ ಭಕ್ಷ್ಯ ವಸ್ತುಗಳು, ವಿವಿಧ ತರದ ಫಲ, ಫಲ ಪುಷ್ಪಗಳು, ವಿಶಾಲವಾದ ಹಸಿರು ಗುಡ್ಡಗಳು, ಆ ಪ್ರಪಂಚದ ವ್ಯಾಪಕವಾದ ವೃಕ್ಷಗಳು, ನದಿಗಳು, ಸ್ವಚ್ಛಂದವಾಗಿ ಬೆಳೆದು ನಿಂತಿರುವ ಅತ್ಯಾಕರ್ಷಕ ತೋಟಗಳು ಇವೆಲ್ಲವೂ ಸ್ವರ್ಗ ಲೋಕದ ಸಿರಿ ಸಂಪತ್ತು. ಉಳಿದಂತೆ ಅಲ್ಲಿರುವ ಅನುಗ್ರಹಗಳಿಗೆ ಲೆಕ್ಕವಿಲ್ಲ. ನಿಮ್ಮ ಮನಸ್ಸು ಏನನ್ನು ಬಯಸುತ್ತದೋ ಅದು ಅಲ್ಲಿ ಸಿಗುತ್ತದೆ.
ಇಲ್ಲಿ ಕಣ್ಣಿಂದ ನೋಡಿರದ , ಕಿವಿಯಿಂದ ಕೇಳಿಸಿರದ, ಸ್ವಾಧಿಷ್ಟ ಫಲಹಾರಗಳೂ, ಚಿನ್ನ, ಬೆಳ್ಳಿಯಿಂದ ಕೂಡಿದ ಸುಂದರ ಪಾನ ಪಾತ್ರೆಗಳಿವೆ. ಗೋಮೇಧಕ, ಹವಳ,ವಜ್ರ, ಮುತ್ತು ರತ್ನಗಳಿಂದ ಕೂಡಿದ ಅಲಂಕೃತವಾದ ಭವ್ಯ ಅರಮನೆಗಳಿವೆ. ಒರಗುವ ಅಲಂಕೃತವಾದ ದಿಂಬುಗಳು ಅಲ್ಲಿರುತ್ತದೆ.ಸ್ವರ್ಗವಾಸಿಗಳು ಅಲ್ಲಿ ಸಂತೋಷದಿಂದ ತೇಲಾಡುವರು. ಅಲ್ಲಿ ಸ್ವರ್ಗನಿವಾಸಿಗಳು ಚಿರ ಯೌವ್ವನರಾಗಿಯೇ ಸದಾ ಕಾಲ (ಅನಂತ ಅನಂತ ಕಾಲ) ಕಳೆಯುವರು. ಆ ಕಾಲಕ್ಕೆ ಕೊನೆಯೆಂಬುವುದಿಲ್ಲ. ಅಲ್ಲಿ ದುಃಖವಿಲ್ಲ, ಮುಪ್ಪು (ವಯಸ್ಸು) ಭಾದಿಸುವುದಿಲ್ಲ, ಮರಣವಿಲ್ಲ, ರೋಗವಿಲ್ಲ, ನೋವುಗಳಿಲ್ಲ, ಬೇಸರವಿಲ್ಲ, ಮಲಮೂತ್ರ ವಿಸರ್ಜನೆ ಇಲ್ಲ, ಅಲ್ಲಿ ಅಸಂಬದ್ಧ ಮಾತುಗಳನ್ನು ಕೇಳಲಿಕ್ಕಿಲ್ಲ , ಅಲ್ಲಿಯ ಪ್ರಕೃತಿಯು ಮುತ್ತು, ರತ್ನ, ವಜ್ರ ವೈಡೂರ್ಯಗಳಿಂದ ಕೂಡಿದ್ದು. ಅಲ್ಲಿಯ ಮರಗಳು, ರೆಂಬೆ, ಕೊಂಬೆಗಳು, ಎಲೆಗಳು ಚಿನ್ನ,ರತ್ನಗಳಿಂದ ಕೊಡಿದ್ದು, ಅಲ್ಲಿ ಕಸಕಡ್ಡಿಗಳಿಲ್ಲ,ಕೊಳಕುಗಳಿಲ್ಲ. ಅಂತಹ ಸಂತೋಷದಿಂದ ಕೂಡಿದ ಮನುಷ್ಯನ ಬುದ್ದಿಗೆ ನಿಲುಕದ ಸುಖ ಲೋಕದ ಸ್ಥಳವಾಗಿದೆ ಸ್ವರ್ಗ.
ಅತ್ತ ಬಿಸಿಯೂ ಅಲ್ಲ. ಇತ್ತ ತಂಪೂ ಅಲ್ಲದ ಸುಮಧುರ ಪ್ರಕೃತಿಯ ಬೆಳಗು. ವಸಂತ ಋತುವಿನಂಥಹ ಮರಗಿಡಗಳ ಚೆಲುವು, ಬೀಸುವ ಸುಗಂಧಮಯ ಗಾಳಿ, ದುತ್ತೆಂದು ಹರಿಯುವ ಕ್ಷೀರ ಸಾಗರ ಮತ್ತು ಮಧ್ಯ ಸಮುದ್ರ ಕ್ಷಣ ಕ್ಷಣಕ್ಕೂ ಮನಸ್ಸನ್ನೂ ಕುತೂಹಲ ತುಂಬುವ ಚೈತನ್ಯ ಪೂರ್ಣ ಅನುಭವವು ಸ್ವರ್ಗ ವಾಸಿಗಳನ್ನು ಭಾವ ಪರವಶರಾಗುವಂತೆ ಮಾಡುತ್ತದೆ. ವಜ್ರ ವೈಡೂರ್ಯಗಳಿಗೆ ಸಮ ನಿಲ್ಲುವ ಅಲ್ಲಿನ ಹೂರುಲ್ ಹೀನ್ ಎಂಬ ಸುರ ಸುಂದರ ಅಪ್ಸರೆಯರ ಬಗ್ಗೆ ವರ್ಣಿಸದಿರಲು ಸಾಧ್ಯವಿಲ್ಲ.
ಸ್ವರ್ಗವಾಸಿಗಳಾದ ಪುರುಷರಿಗೆ ಅತ್ಯಂತ ಹಿತಕರವೆನಿಸಿದ ಒಂದು ಆಸ್ತಿಯೇ ಹೂರುಲ್ ಹೀನ್. ಇವರ ಹವಾಭಾವ ರೂಪ. ಪ್ರಾಕೃತಿಕ ವರ್ಣಗಳು ಅನುಪಮ ಮತ್ತು ಅನನ್ಯವಾದುದು. ಅವರ ಕಣ್ಗಳು ಸೂರ್ಯನಂತೆ ಅರಳುತ್ತವೆ.ತುಟಿಗಳು ವಜ್ರದಂತೆ ಬೆಳಗಿ ಪರಿಮಳಿಸುತ್ತವೆ. ಅವರ ಮುಖವನ್ನು ನಾಲ್ಕು ವಿಧ ಬಣ್ಣಗಳಿಂದ ಸೃಷ್ಟಿಸಲಾಗಿದೆ. ಬಳಿ, ಹಸಿರು, ಹಳದಿ ಮತ್ತು ಕೆಂಪು ಅವರ ಶರೀರದಲ್ಲಿ ಕಸ್ತೂರಿಯ ಸುವಾಸನೆಯಿದೆ. ಕುಂಕುಮದ ಲೇಪವಿದೆ. ಕರ್ಪೂರ ಗಂಧವಿದೆ. ಅವರದು ನವಿರಾದ ಗಂಧ ಸ್ಪರ್ಶವನ್ನು ಹೊಂದಿದೆ. ರೇಶ್ಮೆಯಿಂದ ನಿರ್ಮಿಸಲಾದ ಅತ್ಯಾಕರ್ಷಕ ಕೂದಲು ಪ್ರತಿಯೊಬ್ಬ ಹೂರುಲ್ ಹೀನಿನ ಹೃದಯದಲ್ಲೂ ಆಕೆಯ ಗಂಡನ ಹೆಸರು ಮತ್ತು ಅಸ್ಮಾಹುಲ್ ಹುಸ್ನಾವನ್ನು ಬರೆದಿರುತ್ತದೆ. ಒಟ್ಟಿನಲ್ಲಿ ಅವರದು ಅತ್ಯದ್ಬುತ ಚೆಲುವನ್ನು ಸುರಿಸುವ ಅಮೋಘ ಸೃಷ್ಟಿ ಎಂಥ ಪರಿಸ್ಥಿತಿಯಲ್ಲೂ ಅವರು ಬದಲಾವಣೆಗೊಳ್ಳದೆ ನಿತ್ಯ ನೂತನ ಚಿರ ಯೌವ್ವನಯುತರಾಗಿಯೇ ಉಳಿಯುತ್ತಾರೆ. ಓರ್ವ ಸ್ವರ್ಗದ ಅಪ್ಸರೆ ಭೂಮಿಗೆ ಉಗಿದರೆ ಈ ಭೂಮಿಯಿಡೀ ಕಸ್ತೂರಿಯಾಗಿ ಮಾರ್ಪಡುವುದೆಂದು ಚರಿತ್ರೆ ಗ್ರಂಥದಲ್ಲಿ ಪ್ರಸ್ತಾಪಿಸಲಾಗಿದೆ. ಅತ್ಯಂತ ಮಾರ್ದಕವಾದ ಸುಕೋಮಲವಾದ ದೇಹವನ್ನು ಹೊಂದಿದ ಈ ಕನಸಿನ ಕನ್ಯೆಯರು ಗಂಡಂದಿರನ್ನು ಆಳವಾಗಿ ಪ್ರೀತಿಸುತ್ತಾರೆ. ಅವರಿಗೆ ಭೌತಿಕ ಜಗತ್ತಿನ ಹೈಳ್ ನಿಫಾಸ್ ಉಂಟಾಗುವುದಿಲ್ಲ.
ಅವರ ಕಣ್ಣಿನ ಕೃಷ್ಣಮಣಿಯ ರೂಪವು ಎಂಥವರನ್ನೂ ಮಾದಕಗೊಳಿಸುತ್ತದೆ. ಅವರನ್ನು ಈ ಹಿಂದೆ ಮನುಷ್ಯರಾಗಲೀ ಜಿನ್ನ್'ಗಳಾಗಲೀ ಮುಟ್ಟಿರುವುದಿಲ್ಲ. ಸತ್ಕರ್ಮ ಮಾಡುವ ಸಜ್ಜನರನ್ನು ತಾವು ಕಾಯುತ್ತಿರುವುದಾಗಿ ಈ ಸುಂದರಿಯರು ಕರೆದು ಹೇಳುತ್ತಾರೆ. ಸ್ವರ್ಗ ಸಂದರಿಯರ ವಿಶೇಷತೆಗಳ ಬಗ್ಗೆ ಪ್ರವಾದಿ(ಸ.ಅ) ರವರು ಮನ ಮುಟ್ಟುವಂತೆ ಇನ್ನೂ ಅನೇಕ ರೀತಿಯ ವಿವರಣೆ ನೀಡಿರುವುದು ಹದೀಸ್'ಗಳಲ್ಲಿ ಕಂಡು ಬರುತ್ತದೆ.
*ಸ್ವರ್ಗದ ಬಾಗಿಲು*
ಸ್ವರ್ಗಕ್ಕೆ ಎಂಟು ಬಾಗಿಲುಗಳಿವೆ. ರತ್ನ ಮತ್ತು ಸ್ವರ್ಣ ಮಿಶ್ರಿತ ಲೋಹದಿಂದ ಇದನ್ನು ನಿರ್ಮಿಸಲಾಗಿದ್ದು, ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂದು ಒಂದನೇಯ ಬಾಗಿಲ ಮೇಲೆ ಬರೆಯಲ್ಪಟ್ಟಿದೆ. ಪ್ರವಾದಿಗಳು, ಮುರ್ಸಲ್'ಗಳು, ಹುತಾತ್ಮರು, ಕೊಡುಗೈದಾನಿಗಳು ಮುಂತಾದವರು ಇದರ ಹಕ್ಕುದಾರರು. ಎರಡನೇ ಬಾಗಿಲು ನಮಾಝ್'ಗಾರರಿಗೆ ಸೇರಿದ್ದು. ಇದನ್ನು ಐದು ಹೊತ್ತು ಚೆನ್ನಾಗಿ ವುಳೂ ಮಾಡಿ ಸ್ಥಿರವಾಗಿ ನಮಾಝ್ ನಿರ್ವಹಿಸಿದವರು ಪಡೆಯುತ್ತಾರೆ. ಮೂರನೇ ಬಾಗಿಲು ಕೊಡುಗೈ ದಾನಿಗಳಿಗೆ, ನಾಲ್ಕನೇಯದು ಒಳಿತಿನ ಬೋಧಕರು ಮತ್ತು ಕೆಡುಕಿನ ವಿರೋಧಕರಿಗೆ, ಐದನೇಯ ಬಾಗಿಲು ದೇಹಿಚ್ಚೆಯ ಮೇಲೆ ನಿಯಂತ್ರಣ ಸಾಧಿಸುವವರಿಗೆ, ಆರನೇಯದು ಹಜ್ಜ್ ಉಮ್ರಾ ನಿರ್ವಹಿಸುವವರಿಗೆ, ಏಳನೇಯದು ಯುದ್ದ ಮಾಡುವವರಿಗೆ ಮತ್ತು ಎಂಟನೇಯ ಬಾಗಿಲು ನಿಷಿದ್ಧ ಕಾರ್ಯಗಳಿಂದ ದೂರವಿದ್ದು ಕೊಂಡು ಕುಟುಂಬವನ್ನು ನಿಕಟಗೊಳಿಸುವ ಹೆತ್ತವರಿಗೆ ಪುಣ್ಯ ಮಾಡುವ ಸಜ್ಜನರಿಗೆ ದೊರೆಯುತ್ತದೆ.
ಒಟ್ಟು 8 ವಿಧ ಸ್ವರ್ಗಗಳಿವೆ. 1. ದಾರುಲ್ ಜಲಾಲ್ 2. ದಾರುಸ್ಸಲಾಮ್ 3. ಜನ್ನತುಲ್ ಮಹ್'ವಾ 4. ಜನ್ನತುಲ್ ಖುಲ್ದ್ 5. ಜನ್ನತುನ'ಈಮ್ 6. ಜನ್ನತುಲ್ ಫಿರ್ಧೌಸ್ 7. ಜನ್ನತು ಅದ್'ನ್ 8. ದಾರುಲ್ ಕರಾರ್.
ಪವಿತ್ರ ಕುರ್'ಆನ್ ಸಜ್ಜನರಿಗೆ ತಯಾರಿಸಲಾದ ಸ್ವರ್ಗದ ಕುರಿತು ಹೇಳುವುದು ನೋಡಿರಿ,
*ಖಂಡಿತ ಧರ್ಮ ನಿಷ್ಠರು ಸ್ವರ್ಗೋದ್ಯಾನಗಳಲ್ಲಿಯೂ ಸುಖ ಸೌಭಾಗ್ಯಗಳಲ್ಲಿಯೂ ಇರುವರು.*
*ಅವರ ಪ್ರಭು ಅವರಿಗೆ ದಯಪಾಲಿಸಲಿರುವ ವಸ್ತುಗಳಿಂದ ಸುಖಾನುಭವ ಹೊಂದುವರು. ಮತ್ತು ಅವರ ಪ್ರಭು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸುವನು*
*ನೀವು ಮಾಡುತ್ತಲಿದ್ದ ಕರ್ಮಗಳ ಪ್ರತಿ ಫಲವಾಗಿ ಸಂತೋಷದಿಂದ ತಿನ್ನಿರಿ, ಕುಡಿಯಿರಿ(ಎಂದು ಅವರೊಂದಿಗೆ ಹೇಳಲ್ಪಡುವುದು)*
*ಅವರು ಸಾಲು ಸಾಲಾಗಿ ಇರಿಸಲಾಗಿರುವ ಪೀಠಗಳಲ್ಲಿ ಒರಗಿ ಕುಳಿತಿರುವರು ಮತ್ತು ವಿಶಾಲಾಕ್ಷಿಗಳಾದ ಸುಂದರಿಯರನ್ನು ಅವರಿಗೆ ನಾವು ವಿವಾಹ ಮಾಡಿಕೊಡುವೆವು*
*ಸತ್ಯವಿಶ್ವಾಸಿಗಳನ್ನೂ ಅವರನ್ನು ಸತ್ಯವಿಶ್ವಾಸದಲ್ಲಿ ಅವರ ಸಂತಾನಗಳನ್ನೂ ನಾವು ಅವರೊಂದಿಗೆ ಸ್ವರ್ಗದಲ್ಲಿ ಸೇರಿಸುವೆವು ಮತ್ತು ನಾವು ಅವರ ಕರ್ಮದಲ್ಲೇನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಸಂಪಾದನೆಗೆ ಅಡವಿಡಲ್ಪಟ್ಟವನಾಗಿದ್ದಾನೆ.*
*ಅವರು ಇಚ್ಚಿಸುವ ಹಣ್ಣುಗಳನ್ನೂ, ಮಾಂಸವನ್ನೂ ನಾವು ಅವರಿಗೆ ಯಥೇಚ್ಚವಾಗಿ ಒದಗಿಸುವೆವು*
*ಅವರು ಪರಸ್ಪರ ಪಾನಪಾತ್ರಗಳನ್ನು ಬದಲಾಯಿಸಿಕೊಳ್ಳುವರು. ಯಾವುದೇ ಅಸಂಬದ್ಧ ಮಾತಾಗಲೀ, ದುರ್ನಡೆಯಾಗಲೀ ಅಲ್ಲಿರಲಾರದು.*
*ಅವರಿಗಾಗಿಯೇ ಮೀಸಲಿರುವ ಬಾಲಕರು (ಅವರ ಸೇವೆಗಾಗಿ) ಅವರನ್ನು ಸುತ್ತುತ್ತಲಿರುವರು. ಅವರು ಚಿಪ್ಪಿಯೊಳಗಿನ ಮುತ್ತಿನಂತೆ ಸುಂದರರಾಗಿರುವರು*
*ಅವರು ಪರಸ್ಪರ ಪ್ರಶ್ನಿಸುತ್ತಾ ಅನ್ಯೋನ್ಯತೆಯಿಂದ ಅಭಿಮುಖರಾಗುವರು (ಸೂರಾ : ಅತ್ವ್ತೂರ್ 17 : 25)*
*ರತ್ನಗಳ ದಪ್ಪ ನಾರುಗಳಿಂದ ಹೊಸೆಯಲಾದ ಮಂಚಗಳಲ್ಲಿರುವರು*
*ಅವರದರಲ್ಲಿ ಎದುರುಬದುರಾಗಿ ಸುಖಾಸೀನರಾಗಿರುವರು*
*ಚಿರ ಬಾಲಕರು(ಸೇವೆಗಾಗಿ)ಅವರ ನಡುವೆ ಸುತ್ತುತ್ತಿರುವರು*(ಸೇವಕರಾಗಿ ಸ್ವರ್ಗದಲ್ಲೇ ಸೃಷ್ಟಿಯಾದ ಬಾಲಕರಿರುವರು. ಎಂದೆಂದಿಗೂ ಇವರು ಬಾಲಕರಾಗಿಯೇ ಇರುವುದರಿಂದ ಚಿರಬಾಲಕರು ಎನ್ನಲಾಗಿದೆ. ಅವರು ಚಿಪ್ಪಿನೊಳಗಿನ ಮುತ್ತಿನಂತೆ ಸುಂದರವಾಗಿರುವರು)
*ಉದಕದಿಂದ ಸುರೆ ತುಂಬಿಸಿಕೊಂಡ ಪಾತ್ರೆಗಳನ್ನು, ಹೂಜಿಗಳನ್ನು ಮತ್ತು ಪಾನ ಲೋಟಗಳನ್ನು ಹಿಡಿದುಕೊಂಡು ಓಡಾಡುತ್ತಿರುವರು(ಈ ಬಾಲಕರು)*
*ಅದನ್ನು ಕುಡಿದಾಗ ಅವರ ತಲೆ ತಿರುಗಲಾರದು ಮತ್ತು ಅವರಿಗೆ ಅಮಲೇರಲಾರದು*
*ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವಂತಹ ತರತರದ ಹಣ್ಣುಹಂಪಲುಗಳನ್ನು (ಆ ಬಾಲಕರು) ತಂದಿರಿಸುವರು.*
*ಅವರು ಆಸೆ ಪಡುವ ಪಕ್ಷಿಗಳ ಮಾಂಸದೊಂದಿಗೆ(ಆ ಬಾಲಕರು ಓಡಾಡುವರು)*
*ಅವರಿಗಾಗಿ ಸುರಸುಂದರ ಬೊಗಸೆ ಕಂಗಳ ಅಪ್ಸರೆಯರಿರುವರು.*
*ಅವರು ಚಿಪ್ಪಿಯೊಳಗೆ ಬಚ್ಚಿಡಲಾದ ಮುತ್ತುಗಳಂತಿರುವರು*
*ಇವೆಲ್ಲ ಅವರು ಭೂಲೋಕದಲ್ಲಿ ಮಾಡಿತ್ತಿದ್ದ ಸತ್ಕರ್ಮಗಳ ಪ್ರತಿಫಲಗಳು*
*ಅಲ್ಲಿ ಅವರು ಯಾವುದೇ ಅಸಭ್ಯ ಅಥವಾ ಪಾಪಕರ ಮಾತನ್ನು ಕೇಳಲಾರರು*
*ಸಲಾಂ ಸಲಾಂ ಎಂಬ ಮಾತಿನ ಹೊರತು (ಸೂರಾ : ಅಲ್ ವಾಕಿಅ 15 : 26)*
*ಸ್ವರ್ಗದ ನದಿಗಳು*
ಸ್ವರ್ಗದಲ್ಲಿ ಹರಿಯುವ ಒಂದೊಂದು ನದಿಗಳಿಗೂ ಒಂದೊಂದು ಹೆಸರಿದೆ. ಅಲ್ಲಿನ ಪ್ರಮುಖ ನದಿಗಳು ಇಂತಿವೆ. 1. ನಹ್'ರು ರಹ್'ಮತ್, 2. ನಹ್'ರುಲ್ ಕೌಸರ್, 3. ನಹ್'ರುಲ್ ಕಾಫೂರ್ 4. ನಹ್'ರುಲ್ ಸಲ್'ಸಬೀಲ್ 5. ನಹ್'ರುಲ್ ರಹೀಖಿಲ್ ಮಖ್'ತೂಂ, 6. ನಹ್'ರು ತಸ್'ನೀಂ, ಇದಲ್ಲದೆ ಲೆಕ್ಕಕ್ಕೆ ಸಿಗದ ಇನ್ನೂ ಅನೇಕ ರೀತಿಯ ನದಿಗಳೂ ಅಲ್ಲಿದೆ.
ಸ್ವರ್ಗವಾಸಿಗಳಿಗೆ ಅಲ್ಲಿ ತುಂಬಾ ಶುಚಿ ಮತ್ತು ರುಚಿಭರಿತವಾದ ಅನ್ನ ಪಾನೀಯ ಮತ್ತು ಫಲಹಾರಗಳು ತಿನ್ನಲು ಕೊಡಲಾಗುತ್ತದೆ. ಮಾಂಸಗಳಲ್ಲಿ ಹಕ್ಕಿಯ ಮಾಂಸಕ್ಕೆ ಸ್ವರ್ಗದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇದೆ. ಪ್ರತಿಯೊಂದು ಬಾಗಿಲ ಬಳಿಯೂ ಇಷ್ಟ ಭೋಜನಗಳಿದ್ದು ತಮಗೆ ಬಯಸಿದಂತಹ ಅನ್ನ ಪಾನೀಯ ಮತ್ತು ಹಣ್ಣು ಹಂಪಲುಗಳು ದೊರೆತೇ ದೊರೆಯುತ್ತದೆ. ಅವರ ಆಹಾರ ಸೇವನೆಯ ಉದ್ದೇಶ ಹಸಿವೆಯನ್ನು ನೀಗಿಸುವುದಲ್ಲ. ಬದಲು ಕೇವಲ ಮನರಂಜನೆ ಮಾತ್ರ. ಸ್ವರ್ಗ ನಿವಾಸಿಗಳಿಗೆ ಮಲ ಮೂತ್ರ ವಿಸರ್ಜನೆ ಪ್ರಕ್ರಿಯೆ ಇರುವುದಿಲ್ಲ. ಪವಿತ್ರ ಕುರ್'ಆನ್ ಹೇಳುತ್ತದೆ.
ಅವರಿಗೆ ಸ್ವರ್ಗದಲ್ಲಿ ಬಯಸಿದ್ದೆಲ್ಲ ದೊರೆಯುವುದು ಅಷ್ಟೇ ಅಲ್ಲದೆ ಅವರ ಅವಶ್ಯಕತೆಗೆ ಹೆಚ್ಚಿನದ್ದು ನಮ್ಮ ಹತ್ತಿರ ಇದೆ. ( ಕುರ್'ಆನ್)
ಸ್ವರ್ಗದ ಮುಖ್ಯ ಆಹಾರ ಹಣ್ಣು ಹಂಪಲು , ಅಲ್ಲಿನ ಹಣ್ಣುಗಳಿಗಾಗಿ ಮರಕ್ಕೆ ಹತ್ತ ಬೇಕಾದ ಅಥವಾ ಅದರೆಡೆಗೆ ನಡೆದು ಹೋಗಬೇಕಾದ ಅಗತ್ಯವಿರುವುದಿಲ್ಲ. ಅದು ಕುಳಿತಲ್ಲಿಗೆ ಬಂದು ಬಿಡುತ್ತದೆ. ಅಲ್ಲಿನ ಹಣ್ಣಿನ ರುಚಿ ವರ್ಣಿಸಸಾಧ್ಯವಾಗದಷ್ಟು ಪರಿಣಾಮಕಾರಿಯಾಗಿದ್ದು ಸ್ವರ್ಗ ನಿವಾಸಿಗಳಿಗೆ ತುಂಬಾ ಪ್ರಿಯವಾಗಿರುತ್ತದೆ. ಅಲ್ಲಿನ ಹಣ್ಣು ಒಂದು ಸಲ ತಿನ್ನು ವಾಗ ಒಂದು ರುಚಿ, ಮತ್ತೊಂದು ಸಲ ತಿನ್ನುವಾಗ ಬೇರೆ ರುಚಿ ಹೀಗೆ ಒಂದು ಹಣ್ಣಿಗೆ ಹಲವು ತರ ರುಚಿಗಳಿರುತ್ತವೆ. ವಿಶಾಲ ವೃಕ್ಷದ ನೆರಳಿನಲ್ಲಿ ನೈಸರ್ಗಿಕ ನದಿಗಳ ಬೋರ್ಗರೆತದ ನಡುವಿನ ಸ್ವರ್ಗದ ಪ್ರಾಕೃತಿಕ ಚೆಲುವನ್ನು ಆಸ್ವಾಧಿಸುವುದೇ ಒಂದು ಅದ್ಭುತ ಅನುಭವ.
*ಸ್ವರ್ಗದ ವೃಕ್ಷಗಳು*
ಸ್ವರ್ಗದಲ್ಲಿ ವೃಕ್ಷಗಳದ್ದೇ ಬಹು ದೊಡ್ಡ ಪಾಲು, ಅಲ್ಲಿರುವ ವೃಕ್ಷಗಳು ಸಾಮಾನ್ಯವಾದುದೇನೂ ಅಲ್ಲ. ಅವು ಆ ವಿಶಾಲ ಪ್ರಪಂಚದ ಬಹುದೊಡ್ಡ ಸಂಪತ್ತು. ಅವುಗಳ ವರ್ಣ, ವಿಶೇಷ, ಉದ್ದ, ದೀರ್ಘತೆ, ವೈಶಾಲ್ಯತೆ ಹಾಗೂ ರಚನಾಕೃತಿ ಅದ್ಭುತ ಕಲಾತ್ಮತೆಯಿಂದ ಕೂಡಿದ್ದು ನೋಡುಗರನ್ನು ಬೆರಗುಗೊಳಿಸುವಂತಿರುತ್ತದೆ. ಅಲ್ಲಿ ವೃಕ್ಷಗಳಿಲ್ಲದ ಸ್ಥಳಗಲಿಲ್ಲ. ನದಿಗಳಾಗಲೀ ವೃಕ್ಷಗಳಾಗಲೀ ಪ್ರಭಾವ, ಬಾಂಭೀರ್ಯದಲ್ಲಿ ಒಂದನ್ನೊಂದು ಮೀರಿಸುವಂತಿರುತ್ತದೆ. ಸ್ವರ್ಗದ ವೃಕ್ಷಗಳ ಕೊಂಬೆ ಒಣಗುವುದಿಲ್ಲ. ಎಲೆ ಉದುರಿ ಬೋಳಾಗುವ ಮರಗಳ ಸಂಖ್ಯೆ ನಮ್ಮ ನಡುವೆ ದಾರಾಳವಿದೆ. ಸ್ವರ್ಗದಲ್ಲಿ ಅಂಥ ಒಂದೇ ಒಂದು ವೃಕ್ಷ ಕಾಣಸಿಗಲಾರದು. ಶತಮಾನಗಳೇ ಉರುಳಿದರೂ ಅಲ್ಲಿನ ವೃಕ್ಷಗಳು ಚಿಗುರಿನ ಚೆಲುವಿನಲ್ಲಿ ಹಸಿರಿನ ವೈಭವದಲ್ಲಿ ಹೂವಿನ ಸುವಾಸನೆಯನ್ನು ಬೀರುತ್ತಾ ನಗುತ್ತಿರುತ್ತದೆ. ಸ್ವರ್ಗದಲ್ಲಿ ಅತೀ ದೊಡ್ಡ ವೃಕ್ಷವೊಂದಿದೆ ಅದರ ಬೇರು ರತ್ನ ಹಾಗೂ ವಜ್ರಗಳಿಂದ ಮತ್ತು ಕೊಂಬೆಗಳು ವಜ್ರ ಪೋಣಿತ ಲೋಹಗಳಿಂದ ನಿರ್ಮಾಣ ಗೊಂಡಿರುವ ಎಪ್ಪತ್ತು ಸಾವಿರ ಕೊಂಬೆಗಳಿದ್ದು ಅವುಗಳಲ್ಲಿ ಕೆಲವು ಅರ್'ಶ್'ನ ಕೆಳಗಿನ ಸಿಂಹಾಸನದೊಂದಿಗೂ ಮತ್ತೆ ಕೆಲವು ಭೌತಿಕ ಪ್ರಪಂಚದ ಒಂದನೇ ಆಕಾಶದೊಂದಿಗೂ ಬಂದಿಸಲ್ಪಟ್ಟಿದೆ. ಸ್ವರ್ಗನಿವಾಸಿಗಳಿರುತ್ತದೆ. ಅದು ಅವರ ನಿವಾಸದ ಮೇಲೆ ವಿಶಾಲವಾದ ನೆರಳನ್ನು ಹರಡುತ್ತದೆ.
ಸ್ವರ್ಗ ಪ್ರವೇಶಿಸಿದ ಬಳಿಕ ಅಲ್ಲಿ ಯಾವುದೇ ರೀತಿಯ ಭಯ, ದಿಗಿಲು, ದುಃಖ ಪ್ರಯಾಸಗಳಿರುವುದಿಲ್ಲ. ಏಕೆಂದರೆ, ಆ ಅನುಗ್ರಹೀತ ಪ್ರಪಂಚವನ್ನು ಪ್ರವೇಶಿಸುವವರು ಪರಿಶುದ್ಧರೂ ನಿಷ್ಕಳಂಕ ವಿಶ್ವಾಸಿಗಳೂ ಆಗಿರುತ್ತಾರೆ. ಎಲ್ಲರಲ್ಲೂ ಪರಸ್ಪರ ಪ್ರೀತಿ, ಸೌಹಾರ್ದ, ಒಡಮೂಡಿ ಒಬ್ಬರನ್ನೊಬ್ಬರು ಅರಿತುಕೊಂಡು ನೆಮ್ಮದಿಯಿಂದ ಬಾಳುವರು.
ಸ್ವರ್ಗ ಪ್ರವೇಶಕ್ಕೆ ಮುಂಚಿತವಾಗಿ ಸ್ವರ್ಗವಾಸಿಗಳಿಗೆ ಮಾ ಉಲ್ ಐನ್ ಎಂಬ ವಿಶೇಷ ತೀರ್ಥವನ್ನು ನೀಡಲಾಗುತ್ತದೆ. ಅದು ಅವರ ಹೃದಯಕ್ಕೆ ಸೇರಿ ಹೋದೊಡನೆ ಅವರಲ್ಲಿನ ಎಲ್ಲ ದುರ್ಗುಣಗಳು ಮಾಯವಾಗಿ ಸ್ಪಟಿಕ ಸದೃಶ್ಯಮಾನರಾಗಿ ಬಿಡುತ್ತಾರೆ. ಆ ತೀರ್ಥವು ಹೊಟ್ಟೆಗೆ ಹೋದರೆ ಮಲಮೂತ್ರ, ರೋಗ ರುಜಿನಗಳ ಸೆಳೆತದಿಂದ ಅವರ ಅಂತರಂಗ ಮತ್ತು ಬಹಿರಂಗ ಪವಿತ್ರವಾಗುತ್ತದೆ. ಆ ನದಿಯಿಂದ ಸ್ನಾನ ಮಾಡಿ ನಿರ್ಗಮಿಸುವಾಗ ಅವರ ಮುಖಗಳು ಪೂರ್ಣ ಚಂದ್ರನಂತೆ ಪ್ರಶೋಭಿಸತೊಡಗುತ್ತದೆ. ಶರೀರವು ಪರಿಶುದ್ಧವಾಗುತ್ತದೆ. ಹೃದಯ ಪುನೀತಗೊಳ್ಳುತ್ತದೆ. ಈ ರೀತಿಯ ಒಂದು ಬದಲಾವಣೆ ಮತ್ತು ಪರಿಷ್ಕಾರದ ಬಳಿಕವಷ್ಟೇ ಅವರನ್ನು ಸ್ವರ್ಗಕ್ಕೆ ಕಳುಹಿಸಲಾಗುತ್ತದೆ.
ಸ್ವರ್ಗದ ವಿಶೇಷತೆಗಳನ್ನೂ, ಅಲ್ಲಿನ ಪ್ರಕೃತಿ ಸೌಂದರ್ಯವನ್ನೂ ಎಷ್ಟು ಹೇಳಿದರೂ ತೀರದು. ಇಲ್ಲಿ ಸ್ವರ್ಗದ ಅನುಗ್ರಹದ ಕುರಿತು ಅಲ್ಲಿಯ ಸುಖದ ಕುರಿತು ಸ್ವಲ್ಪನೇ ಹೇಳಿದ್ದಾಗಿದೆ. ಕುರ್'ಆನ್ ಅನೇಕ ಕಡೆಗಳಲ್ಲಿ ಸ್ವರ್ಗದ ಕುರಿತು ಹೇಳಿದೆ. ಇಂಶಾ ಅಲ್ಲಾಹ್ ಮುಂದೆ ಸ್ವರ್ಗದ ವಿವರಣೆಗಳನ್ನು ಕೆಲವೊಂದನ್ನು ತಿಳಿಸುವೆ.ಈಗ ಇಷ್ಟು ಹೇಳಿ ಮುಗಿಸುವೆ.
*ಅಲ್ಲಾಹುವೆ ನಿನ್ನ ಜಹನ್ನಂ ಎಂಬ ಭೀಕರ ನರಕ ಶಿಕ್ಷೆಯಿಂದ ನಮ್ಮೆಲ್ಲರನೂ ಪಾರು ಮಾಡು. ನಿನ್ನ ಜನ್ನತುಲ್ ಫಿರ್ದೌಸ್ ಎಂಬ ಸುಖ ಲೋಕ ಸ್ವರ್ಗದಲ್ಲಿ ಪ್ರವೇಶಿಸು ಅಲ್ಲಾಹುವೇ.. ಆಮೀನ್.*
*ಅಝ್ರಾಯೀಲ್(ಅ)ಮರ ಮರಣ*
ಎಲ್ಲರ ಪ್ರಾಣ ಹಿಡಿದು ಬಳಿಕ ಅಝ್ರಾಯೀಲ್(ಅ)ರಲ್ಲಿ ಇನ್ಯಾರು ಉಳಿದಿದ್ದಾರೆಂದು ಅಲ್ಲಾಹು ಕೇಳುವನು. ಎಂದೆಂದಿಗೂ ಮರಣ ಹೊಂದದ ಚಿರಂಜೀವಿಯಾದ ನೀನು ಮತ್ತು ದುರ್ಬಲನಾದ ನಾನು ಮಾತ್ರ ಬಾಕಿಯಾಗಿದ್ದೇವೆ ಎನ್ನುವರು ಅಝ್ರಾಯೀಲ್ (ಅ). ಆಗ ಅಲ್ಲಾಹನು ನೀನು ನನ್ನ ಸೃಷ್ಟಿಯಾಗಿರುವಿ. ನೀನೂ ಮರಣವನ್ನು ರುಚಿಸಬೇಕೆಂದು ನನ್ನ ತೀರ್ಮಾಣವಾಗಿದೆ. ತೀರಿ ಹೋಗು ಎಂದು ಆದೇಶ ನೀಡುತ್ತಾನೆ. ಕೂಡಲೇ ಅಝ್ರಾಯೀಲ್ (ಅ) ಒಂದು ನಿರ್ಜನ ಸ್ಥಳದ ಕಡೆಗೆ ಹೋಗಲಿದ್ದಾರೆ.
ಅದು ಸ್ವರ್ಗ ಮತ್ತು ನರಕದ ನಡುವಿನ ಪ್ರದೇಶವಾಗಿರುತ್ತದೆ. ಅಲ್ಲಿ ಅವರು ತನ್ನೆರಡು ಕಣ್ಣುಗಳನ್ನು ಆಕಾಶದ ಕಡೆಗೆ ಅಭಿಮುಖಗೊಳಿಸಿ ಮಲಗುತ್ತಾರೆ. ನಂತರ ತನ್ನ ದೇಹದಿಂದ ಆತ್ಮವನ್ನು ಬೇರ್ಪಡಿಸುವರು. ಮರಣದ ವೇದನೆ ಇಷ್ಟೊಂದು ಕಠೋರವೆಂದು ಅರಿತಿದ್ದಲ್ಲಿ ನಾನು ಸತ್ಯವಿಶ್ವಾಸಿಗಳ ಆತ್ಮವನ್ನು ಮೃದುವಾಗಿ ಹಿಡಿಯುತ್ತಿದ್ದೇನೆಂದು ಅಝ್ರಾಯೀಲ್(ಅ) ಕೊನೆ ಘಳಿಗೆಯಲ್ಲಿ ಹೇಳಿ ಬಿಡುತ್ತಾರೆ.
*ಮುಗಿಯಿತು.........*
ಪ್ರಿಯ ಸಹೋದರ ಸಹೋದರಿಯರೇ, ನಿಮ್ಮೆಲ್ಲರ ಫ್ರೋತ್ಸಾಹದಿಂದ ಅಂತ್ಯ ದಿನದ ಲಕ್ಷಣಗಳು 30 ಸಂಚಿಕೆ ಮುಕ್ತಾಯಗೊಂಡಿದೆ. 1400 ವರ್ಷಗಳ ಹಿಂದೆಯೇ ಲೋಕ ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ ಭವಿಷ್ಯ ನುಡಿಗಳು ಇಲ್ಲಿ ಇಷ್ಟು ದಿನಗಳ ಕಾಲ ಕೆಲವೊಂದನ್ನು ಮಾತ್ರ ಹೇಳಿದ್ದಾಗಿದೆ. ಅಂದು ಪ್ರವಾದಿವರ್ಯರು(ಸ.ಅ) ಹೇಳಿದ ಚಿಕ್ಕ ಲಕ್ಷಣಗಳೆಲ್ಲವೂ ಗೋಚರಿಸಿದೆ. ಇನ್ನುಳಿದಿರುವುದು ದೊಡ್ಡ ಲಕ್ಷಣಗಳು ಮಾತ್ರ ಎಂಬುವುದರಲ್ಲಿ ಸಂಶಯವಿಲ್ಲ. ಈಗ ಜಗತ್ತು ಇಮಾಂ ಮಹ್'ದಿ (ರ) ಹಾಗೂ ಹಝ್ರತ್ ಈಸಾ(ಅ)ಮರನ್ನು ಕಾತರದಿಂದ ಕಾಯುತ್ತಿದೆ. ಕಾರಣ ಜಗತ್ತು ಇಂದು ಅಷ್ಟೊಂದು ಅನಾಚಾರಗಳಿಂದ ಕೂಡಿದೆ(ಅನಾಚಾರದ ಬಗ್ಗೆ ನೀವು ಈ ಜಗತ್ತಿನ ಬಗ್ಗೆ ಕಣ್ಣೋಡಿಸಿ ನೋಡಿ.) ಮಹ್'ದಿ ಇಮಾಂ(ರ) ಹಾಗೂ ಈಸಾ(ಅ)ರವರು ಬಂದ ಕೆಲ ಕಾಲವು ಈ ಜಗತ್ತು ಅನ್ಯಾಯ, ಅಕ್ರಮ, ಅನಾಚಾರಗಳಿಂದ ಮುಕ್ತಿ ಹೊಂದುವುದು. ಆ ಸಂದರ್ಭದಲ್ಲಿ ಈ ಜಗತ್ತು ಶಾಂತಿ, ಸಮಾಧಾನ, ಸಂತೋಷದಿಂದ ಜನರು ಕಾಲ ಕಳೆಯುವರು, ಅವರ ಮರಣಾನಂತರದ ಕಾಲವು ಈ ಜಗತ್ತು ಅದೇ ತರ ಜನರು ಅಕ್ರಮಗಳಿಂದ ಕಾಲ ಕಳೆಯುವರು ಅಂದರೆ ಇಸ್ರಾಫೀಲ್ (ಅ) ಸೂರ್ ಕಹಳೆ ಮೊಳಗುವ ಹತ್ತಿರದ ಸಮಯದಲ್ಲಿ ಅಲ್ಲಾಹ್ ಎಂಬ ಪದವು ಜನರಿಂದ ಬರದಂತಹಾ ಒಂದು ಕಾಲವಾಗಿದೆ ಅದು. ಅಂದು ಭೂಮಿಯಲ್ಲಿ ಒಳ್ಳೆಯರು ಯಾರೂ ಇರದಂತಹಾ ಕಾಲವಾಗಿದೆ ಅದು.
ಇಸ್ರಾಫೀಲ್(ಅ) ಸೂರ್ ಕಹಳೆಯಲ್ಲಿ ಊದುವಾಗ ಸರ್ವ ಜನರೂ, ಸಕಲ ಜೀವ ಜಾಲಗಳೂ, ಸಕಲ ವಸ್ತುಗಳೂ ಸರ್ವ ನಾಶ ಹೊಂದುವುದು. ಆಕಾಶ ಸೀಳಾಗಿ ಅದರಲ್ಲಿರು ಸಕಲ ಬಾಗಿಲುಗಳು ತೆರೆಯಲ್ಪಡುವುದು, ನಕ್ಷತ್ರಗಳು ಉದುರಿ ಬೀಳುವುದು, ಸೂರ್ಯನು ಸುರುಳಿ ಸುತ್ತಲ್ಪಡುವುದು, ಸಮುದ್ರಗಳು ಬೇಧಿಸಲ್ಪಡುವುದು, ಪರ್ವತಗಳು ಒಡೆದು ಚೂರು ಚೂರು ಆಗುವುದು, ಮತ್ತೆ ಈ ಭೂಮಿಯಿಲ್ಲ, ಆಕಾಶವಿಲ್ಲ, ಸೂರ್ಯನಿಲ್ಲ, ಚಂದ್ರನಿಲ್ಲ, ನಕ್ಷತ್ರಗಳಿಲ್ಲ, ಗ್ರಹಗಳಿಲ್ಲ, ವನ್ಯ ಮೃಗಗಳಿಲ್ಲ, ಪಕ್ಷಿಗಳಿಲ್ಲ, ಸರ್ವ ಜಾಲಚರಗಳಿಲ್ಲ, ಮನುಷ್ಯರಿಲ್ಲ, ಜಿನ್ನ್'ಗಳಿಲ್ಲ, ಮಲಕ್'ಗಳಿಲ್ಲ, ಯಾವುದೂ ಇಲ್ಲದೆ ಈ ಜಗತ್ತು ಬರೀ ಶೂನ್ಯವಾಗುವುದು. ಏಕ ಇಲಾಹನೂ, ಸರ್ವಜ್ಞನೂ ಆದ ಅಲ್ಲಾಹನು ಮಾತ್ರ ಇರುವನು.
ನಂತರ ಇಸ್ರಾಫೀಲ್ (ಅ) ಎರಡನೇ ಬಾರಿ ಊದುವಾಗ ಮರಣ ಹೊಂದಿದ ಸರ್ವರೂ ಮಹ್'ಶರಾ ಎಂಬ ಲೋಕಕ್ಕೆ ನಗ್ನರಾಗಿ ಬರೀ ಕಾಲಲ್ಲಿ ವಿಚಾರಣೆಗಾಗಿ ಹೊರಟು ಬರುವರು. ಈ ಕುರಿತು ಹಝ್ರತ್ ಆಯಿಶಾ ಬೀವಿ(ರ) ಪ್ರವಾದಿವರ್ಯರೊಂದಿಗೆ ಕೇಳಿದರು; ಯಾ ರಸೂಲಲ್ಲಾ (ಸ.ಅ) ಜನರು ಅಂದು ನಗ್ನರಾಗಿ ಮಹ್'ಶರಾಗೆ ಹೊರಟು ಬರುವಾಗ ಒಬ್ಬರು ಮತ್ತೊಬ್ಬರ ಔರತ್ತನ್ನು ನೋಡುವುದಿಲ್ಲವೇ ಎಂದು ಕೇಳಿದಾಗ , ಅಲ್ಲಾಹನ ರಸೂಲರು ಹೇಳಿದರು, ಆಯಿಷಾ ಅಂದು ಒಬ್ಬರು ಮತ್ತೊಬ್ಬರ ಔರತ್ತನ್ನು ನೋಡುವುದಿಲ್ಲ. ಕಾರಣ ಅಂದು ಅವರವರ ನಫ್'ಸಿ ಅವರವರಿಗಾಗಿದೆ. ಎಲ್ಲರೂ ಭಯ ಭೀತಿಯಿಂದ ಇಂದು ತನ್ನ ಅವಸ್ಥೆಯೇನೆಂದು ಯೋಚನೆಯಲ್ಲಿರುವ ಸಮಯವಾಗಿದೆ ಅದು.
*ಅಲ್ಲಾಹನು ನಮ್ಮೆಲ್ಲರನ್ನೂ ಸಜ್ಜನರ ಸಾಲಿನಲ್ಲಿ ಸೇರಿಸಲಿ ಆಮೀನ್*

Comments