Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *11*



*▪ನರಕದಲ್ಲೂ ಬೆಂಬಿಡದ ನೊಣ*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

   ▪ತಿನ್ನುವುದರಲ್ಲಿ ಬಹಳ ಅತ್ಯಾಶೆ ಇರುವ ಕೊಳೆತದ್ದೋ, ಕೆಟ್ಟದ್ದೋ, ತಿನ್ನಲಾಗುವುದೋ, ತಿನ್ನಲಾಗದ್ದೋ ಎಂದು ನೋಡದೆ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಕುಳಿತು ಅದನ್ನು ನಕ್ಕುವ ಒಂದು ಕೆಟ್ಟ ಹಟಮಾರಿ ಜೀವಿಯಾಗಿದೆ ನೊಣ.
  ▪ಪ್ರಾಣಿ, ಪಕ್ಷಿ, ಕೀಟಗಳಲ್ಲಿ ನಾಯಿಯನ್ನು ಹೊರತು ಪಡಿಸಿದರೆ ಬೇರೆ ನಕ್ಕುವ ಜೀವಿ ಇಲ್ಲ. ಬರೇ ನಲುವತ್ತು ದಿವಸಗಳ ಆಯುಷ್ಯವಿರುವ ಈ ಜೀವಿಯ ಕಣ್ಣಿನ ಪೊರೆ ಬಹಳ ಚಿಕ್ಕದಾದ ಕಾರಣ ಅಲ್ಲಾಹನು ಇದರ ಕಣ್ಣಿಗೆ ರೆಪ್ಪೆಯನ್ನು ಕೊಟ್ಟಿಲ್ಲ. ಅದಕ್ಕೋಸ್ಕರ ಅದು ಯಾವಾಗಲೂ ತನ್ನ ಎರಡು ಕೈಗಳಿಂದ ತನ್ನ ಕಣ್ಣುಗಳಿಗೆ ಬರುವ ಆಪತ್ತುಗಳನ್ನು ತಡೆಯಲಿಕ್ಕೋಸ್ಕರ ತನ್ನ ಕಣ್ಣುಗಳನ್ನು ಉಜ್ಜುವುದನ್ನು ನೀವು ಕಂಡಿರಬಹುದು.
  ▪ಅಲ್ಲಾಹುವಿನ ಖುದುರತಿನಲ್ಲಿ ಲೈಂಗಿಕ ಸಂಪರ್ಕವಿಲ್ಲದೆಯೇ ಮಲ, ಸೆಗಣಿ ಮುಂತಾದ ಕೊಳೆತು ನಾರುವ ವಸ್ತುಗಳಿಂದ ತಾನಾಗಿಯೇ ಸೃಷ್ಟಿಯಾಗುವ ಒಂದು ಜೀವಿಯಾಗಿದೆ ನೊಣ. ನಂತರ ಗಂಡು ಹೆಣ್ಣು ನೊಣಗಳ ಪರಸ್ಪರ ಲೈಂಗಿಕ ಸಂಪರ್ಕದಲ್ಲೂ ಇದರ ಸಂತಾನ ಉತ್ಪಾದನೆಯಾಗುತ್ತದೆ.
▪  ಸಿಹಿ ಕುಂಬಳಕಾಯಿಯ ಗಿಡದ ಮೇಲೆ ಇದು ಕೂರುವುದಿಲ್ಲ. ಮಾತ್ರವಲ್ಲ ಸಿಹಿ ಕುಂಬಳಕಾಯಿ ಇರುವ ಜಾಗಕ್ಕೂ ಇದು ಬರುವುದಿಲ್ಲ. ಪ್ರವಾದಿ ಯೂನುಸ್ (ಅ) ರು ನಲುವತ್ತು ದಿನಗಳ ಕಾಲ ತಿಮಿಂಗಿಲ ಮೀನಿನ ಹೊಟ್ಟೆಯಲ್ಲಿದ್ದು ನಂತರ ಅವರನ್ನು ಅಲ್ಲಾಹನು ಅದರ ಹೊಟ್ಟೆಯಿಂದ ಹೊರ ತೆಗೆದಾಗ ರೋಮಗಳಿಲ್ಲದ ಮೃದುವಾದ ಚರ್ಮದಿಂದ ಕೂಡಿದ ನವಜಾತ ಶಿಶುವಿನ ಹಾಗಿದ್ದರು. ಯಾರೂ ಇಲ್ಲದ ಕಡಲ ಕಿನಾರೆಯಲ್ಲಿ ಅವರಿಗೆ ಅಹಾರವಾಗಿ ಅಲ್ಲಹನು ಸಿಹಿ  ಕುಂಬಳಕಾಯಿಗಳಿಂದ ಕೂಡಿದ ಕುಂಬಳಕಾಯಿ ಗಿಡವನ್ನು ಸೃಷ್ಟಿಸಿದ್ದನೆಂದು ಕುರ್‌ಆನ್ ಹೇಳುತ್ತದೆ. ನವಜಾತ ಶಿಶುವಿನ ಹಾಗಿರುವ ಅವರ ಶರೀರದ ಮೇಲೆ ನೊಣ ಕುಳಿತು ಕೊಳ್ಳದಿರಲು ಅಲ್ಲಾಹನು ಮಾಡಿದ ಒಂದು ತಂತ್ರವೆಂದು ಈ ಆಯತಿನ ವ್ಯಾಖ್ಯಾನದಲ್ಲಿ ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
   ▪ *"ನೊಣದ ಆಯುಷ್ಯ ನಲುವತ್ತು ದಿವಸವೆಂದೂ ಜೇನ್ನೊಣ ಅಲ್ಲದ ಎಲ್ಲಾ ನೊಣಗಳೂ ನರಕ ವಾಸಿಗಳಾಗಿರುತ್ತದೆ"* ಎಂಬ ಪ್ರವಾದಿ ವರ್ಯರ ಹದೀಸನ್ನು *ಅನಸ್* (ರ) ನ್ನು ಉಲ್ಲೇಖಿಸಿ  ಇಮಾಮ್  *ಅಬೀ ಯ‌ಅ್‌ಲಾ ಅಲ್ ಮೂಸಲೀ* ಯವರು ತನ್ನ "ಮುಸ್‌ನದ್" ಎಂಬ ಗ್ರಂಥದಲ್ಲಿ ವರದಿ ಮಾಡಿದ್ದಾರೆ. ಇಲ್ಲಿ ನೊಣವು ನರಕಕ್ಕೆ ಹೋಗುವುದು ಶಿಕ್ಷೆ ಅನುಭವಿಸಲಿಕ್ಕೆ ಅಲ್ಲ. ನರಕ ವಾಸಿಗಳಿಗೆ ನರಕದಲ್ಲಿ ತೊಂದರೆ ಮಾಡಲು ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
   ▪ಇದರ ಬೇರೊಂದು ಅದ್ಭುತವೆಂದರೆ ಇದು ಬಿಳಿ ವಸ್ತುವಿನ ಮೇಲೆ ವಿಸರ್ಜನೆ ಮಾಡಿದರೆ ಅದರ ಪಿಟ್ಟೆಯು ಕಪ್ಪಾಗಿರುತ್ತದೆ. ಕಪ್ಪು ವಸ್ತುವಿನ ಬಗ್ಗೆ ಮೇಲೆ ಮಾಡಿದರೆ ಅದು ಬಿಳಿಯಾಗಿರುತ್ತದೆ.
   ▪ ನೊಣವು ಬೇಸಿಗೆ ಕಾಲದಲ್ಲಿ ಜಾಸ್ತಿ ಇರುತ್ತದೆ. ಚಳಿಗಾಲದಲ್ಲಿ ಇದರ ತೊಂದರೆ ಇರುವುದಿಲ್ಲ. ಯಾಕೆಂದರೆ ಇದಕ್ಕೆ ಚಳಿಯನ್ನು ಸಹಿಸುವ ಶಕ್ತಿ ಇಲ್ಲ. ಆಗ ಅದು ಸಾಯುತ್ತದೆ.
   ▪ಪ್ರವಾದಿ ಮುಹಮ್ಮದ್ (ಸ) ರು ಹೇಳುತ್ತಾರೆ *"ನೀವು ಕುಡಿಯುವ ಪಾನೀಯ ಅಥವಾ ಆಹಾರದ ಮೇಲೆ ನೊಣ ಬಂದು ಕುಳಿತರೆ ನೀವು ಆ ನೊಣವನ್ನು ಸಂಪೂರ್ಣ ಆ ಆಹಾರದಲ್ಲಿ ಅಥವಾ ಪಾನೀಯದಲ್ಲಿ ಮುಳುಗಿಸಿ ನಂತರ ಸೇವಿಸಿರಿ. ಕಾರಣ ನೊಣವು ಅದರಲ್ಲಿ ಕೂರುವಾಗ ಅದರ ಒಂದು ರೆಕ್ಕೆಯನ್ನು ಅದರಲ್ಲಿ ಮುಳುಗಿಸಿ ಮತ್ತೊಂದನ್ನು ಆಹಾರಕ್ಕೆ ಮುಟ್ಟದಂತೆ ಎತ್ತಿ ಹಿಡಿಯುತ್ತದೆ. ಯಾಕೆಂದರೆ ನೊಣದ ಒಂದು ರೆಕ್ಕೆಯಲ್ಲಿ ರೋಗಾಣುವೂ ಮತ್ತೊಂದರಲ್ಲಿ ಆ ರೋಗಾಣುವಿನಿಂದ ಹರಡುವ ರೋಗಕ್ಕಿರುವ ಔಷಧೀಯೂ ಇದೆ.  ನೊಣವು ಯಾವಾಗಲೂ ರೋಗಾಣು ಇರುವುದನ್ನು ಮುಳುಗಿಸಿ ರೋಗ ನಿರೋಧಕ ಇರುವುದನ್ನು ಎತ್ತಿ ಹಿಡಿಯುತ್ತದೆ."*  ಈ ಹದೀಸನ್ನು ಇಮಾಮ್ ಬುಖಾರಿ ಸಮೇತ ಎಲ್ಲಾ ಪ್ರಬಲ ವರದಿಗಾರರು ವರದಿ ಮಾಡಿದ್ದಾರೆ.
  *▪ಪ್ರವಾದಿ ವರ್ಯರ ಪವಿತ್ರ ಶರೀರದ ಮೇಲೆ ಅಂತೆಯೇ ಅವರು ಧರಿಸುವ ಉಡುಪುಗಳ ಮೇಲೆಯೂ ಒಮ್ಮೆಯೂ ನೊಣ ಕೂರಲಿಲ್ಲ..!!* ಎಂದು ಇಮಾಮ್ ಬಿನ್ ನಜ್ಜಾರ್ ರವರು ತನ್ನ *"ತಾರೀಖ್ ಬಿನ್ ನಜ್ಜಾರ್"* ಎಂಬ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ.
    ▪ಸಿಹಿ ಕುಂಬಳಕಾಯಿಯ ಎಲೆಯನ್ನು ಬೇಯಿಸಿದ ನೀರನ್ನು ಮನೆಯ ಗೋಡೆ ಮತ್ತು ಇತರ ಜಾಗಕ್ಕೆ ಸಿಂಪಡಿಸಿದರೆ ಅಲ್ಲಿಗೆ ನೊಣ ಬಾರದು. ಅಂತಯೇ ಸಿಹಿ ಕುಂಬಳಕಾಯಿಯ ಗಿಡವನ್ನು ಸುಟ್ಟು ಅದರಿಂದ ಮನೆಯೊಳಗೆ ಹೊಗೆ ಹಾಕಿದರೂ ನೊಣಗಳ ಕಾಟ ಇರುವುದಿಲ್ಲ.
   ▪ಒಬ್ಬನಿಗೆ ಅವನು ನೊಣವನ್ನು ಕೊಲ್ಲುವ ಕನಸು ಕಂಡರೆ ಅದು ಶುಭ ಲಕ್ಷಣವಾಗಿದೆ. ಮುಂದಕ್ಕೆ ಅವನು ಆರೋಗ್ಯವಂತನಾಗುತ್ತಾನೆ ಎಂಬುದರ ನಿಶಾನೆಯಾಗಿದೆ.
    ▪ಹತ್ತಿರದಲ್ಲೇ ದೀರ್ಘ ಯಾತ್ರೆ ಹೋಗಲು ಸಜ್ಜಾಗುತ್ತಿರುವವನ ಮೇಲೆ ನೊಣ ಕುಳಿತಿರುವ ಕನಸು ಕಂಡರೆ ಅವನ ಯತ್ರೆಯಲ್ಲಿ ಏನೋ ಅನಾಹುತ ಬರುವ ಲಕ್ಷಣವಾಗಿದೆ.
     ▪ಅವನ ಒಡೆತನದಲ್ಲಿರುವ ವಸ್ತುವಿನ ಮೇಲೆ ನೊಣ ಕುಳಿತಿರುವ ಕನಸು ಕಂಡರೆ ಆ ವಸ್ತು ಕಳ್ಳರ ದಾಳಿಗೆ ಒಳಗಾಗುತ್ತದೆ ಎಂಬುದರ ನಿಶಾನೆಯಾಗಿದೆ.
     
    ▪ ಸಂಗ್ರಹ : ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಇಮಾಮ್ ಅಬ್‌ಷೀ‌ಹಿಯವರ *ಮುಸ್‌ತತ್‌ರಫ್* ಮತ್ತು ಪ್ರಖ್ಯಾತ ತಾಬಿಯೀ ಪಂಡಿತ ಅಲ್ಲಾಮಾ ಬಿನ್ ಸೀರೀನ್ ರವರ *ತಫ್‌ಸೀರುಲ್ ಅ‌ಹ್‌ಲಾಮ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...