*ಅಂತ್ಯ ದಿನದ ಲಕ್ಷಣಗಳು :* 2
*~~~~~~~~~~~~~~~~~~~~~~~~~*
🌎🌎🌎🌎🌎🌎🌎🌎🌎🌎
*ಹಝ್ರತ್ ಹುಸೈನ್(ರ)ರವರ ಹತ್ಯೆ :* ಈ ಘಟನೆಯ ಕುರಿತು ಪ್ರವಾದಿ(ಸ.ಅ)ರವರು ಮೊದಲೇ ಸೂಚಿಸಿದ್ದರು. "ನನ್ನ ಈ ಪುತ್ರ ವಧಿಸಲ್ಪಡಲಿದ್ದಾರೆ. ಇರಾಕಿನ ಇಂತಿಂಥ ಸ್ಥಳದಲ್ಲಿ ಅವನ ಹತ್ಯೆ ನಡೆಯುವುದು ಆ ದಿನ ನೀವು ಅವನನ್ನು ಕಂಡರೆ ನೆರವಾಗಿರಿ". ಎಂದಿದ್ದರು. ಇಮಾಂ ಹುಸೈನ್(ರ)ರವರ ಹತ್ಯೆ ಬಹಳ ಭೀಕರವಾದ ರೀತಿಯಲ್ಲಿ 601ನೇ ಇಸವಿಯಲ್ಲಿ ಕೂಫಾದ ಕರ್ಬಲಾ ಎಂಬಲ್ಲಿ ನಡೆಯಿತು.
ಅಂದು ಮೊಹರ್ರಂ ಹತ್ತು. ಜಗತ್ತಿನ ಇತಿಹಾಸದಲ್ಲಿ ನೂರಾರು ಘಟನೆಗಳಿಗೆ ಸಾಕ್ಷ್ಯವಹಿಸಿದ ದಿನ ಅವರ ಹತ್ಯೆಯ ಬಳಿಕ ಅವರ ಇತರ ಪುತ್ರರನ್ನೂ ವಧಿಸಲಾಯಿತು. ಆದರೆ ಪುತ್ರರಲ್ಲಿ ಒಬ್ಬರಾದ ಝೈನುಲ್ ಆಬಿದೀನ್ ಮಾತ್ರ ಬದುಕುಳಿದರು. ಇದಕ್ಕೆ ಕಾರಣ ಅಂದು ಆ ಮಹಾತ್ಮರು ರೋಗಿಯಾಗಿದ್ದುದು. ಹುಸೈನ್(ರ)ರವರ ಪಿತೃ ಸುಪುತ್ರರನ್ನೂ ಹತ್ಯೆಗೈಯ್ಯಲಾಗಿತ್ತು. ಹತರಾದ ಹುಸೈನ್(ರ)ರವರ ದೇಹದಲ್ಲಿ 33 ಗಾಯಗಳು ಮಚ್ಚಿನಿಂದ ಕಡಿದ 34 ಕಲೆಗಳು ಗೋಚರಿಸಿದ್ದವು.
*ಸ'ಊದಿಯಿಂದ ಅಗ್ನಿ :* ಹಝ್ರತ್ ಅಬೂಹುರೈರಾ(ರ)ರವರಿಂದ ಇಮಾಂ ನುಖಾರಿವರು ವರದಿ ಮಾಡಿದ ಒಂದು ಹದೀಸ್'ನಲ್ಲಿ " ಹಿಜಾಝ್'ನಿಂದ ಅಗ್ನಿ ಹೊರಡುವ ತನಕ ಅಂತ್ಯ ದಿನ ಸಂಭವಿಸಲಾರದು". ಎಂಬ ಪ್ರವಚನವಿದೆ. ಇದೇ ವಿಷಯದ ಕುರಿತು ಪ್ರಸ್ತಾಪವಾಗಿರುವ ದೀರ್ಘವಾದ ಬೇರೆ ಅನೇಕ ಹದೀಸ್'ಗಳನ್ನು ಇಮಾಂ ಬುಖಾರಿ ಸಹಿತ ಇನ್ನಿತರ ಇಮಾಮ್'ಗಳು ವರದಿ ಮಾಡಿದ್ದಾರೆ. ಬೆಂಕಿಯ ಕುರಿತು ಹದೀಸ್'ಗಳಲ್ಲಿ ಬಂದಿರುವ ಅಂಶವನ್ನು ಗಮನಿಸಿ. ಇಮಾಂ ಖುರ್ತುಬಿ(ರ) ಅವರು ಪೂರ್ವ ಕಾಲದಲ್ಲಿ ನಡೆದ ರೋಮಾಂಚಕ ಘಟನೆಯೊಂದನ್ನು ಹೀಗೆ ವಿವರಿಸಿದ್ದಾರೆ.
"ಹಿಜ್ರಾ 654,ರಲ್ಲಿ ಬುಧವಾರ ಬೆಳಗಿನ ಜಾವ ಬೃಹತ್ ಅಗ್ನಿ ಜ್ವಾಲೆ ಕಾಣಿಸಿಕೊಂಡಿತು. ಇದರ ಪ್ರಾರಂಭದಲ್ಲಿ ಜನರಿಗೆ ಒಂದು ಲಘ ಭೂಕಂಪವಾದ ಅನುಭವ. ಬುಧವಾರ ಕಾಣಿಸಿಕೊಂಡ ಈ ಬೆಂಕಿ ನಿರಂತರ ಎರಡು ದಿನಗಳ ಕಾಲ ಉರಿದು ಶುಕ್ರವಾರ ಬೆಳಿಗ್ಗೆ ಜುಮಾಕ್ಕೆ ಮುಂಚಿತವಾಗಿ ನಂದಿ ಹೋಯಿತು. ಈ ಘಟನೆಯ ಮಾದರಿಯಲ್ಲಿಯೇ 'ಕಾಉತನ್ಈಂ'. ಎಂಬಲ್ಲಿ ಮತ್ತೊಂದು ಘಟನೆ ನಡೆಯಿತು. ಅಲ್ಲಿನ ಜನರು ಬೆಂಕಿ ಹೊತ್ತಿಸುತ್ತಿದ್ದರು. ಕಾಕತಾಳೀಯ ಎಂಬಂತೆ ಬೆಂಕಿಯು ಬೃಹತ್ತಾಗಿ ಹೊತ್ತಿಕೊಂಡಿತು. ಉರಿಯುತ್ತಾ ಹೋದಂತೆ ಬೆಂಕಿಯ ಪರಿಣಾಮ ವಿಚಿತ್ರವಾಗಿ ಕಂಡು ಬರತೊಡಗಿತು. ಪರ್ವತಗಳಿಗೆ ಬೆಂಕಿ ಹೊತ್ತಿಕೊಂಡಾಗ ಅದು ಪ್ಲಾಸ್ಟಿಕ್ ನಂತೆ ಕರಗಿ ಬೀಳುತ್ತಿದ್ದ ದೃಶ್ಯ ಜನರಲ್ಲಿ ಭಯ ಹುಟ್ಟಿಸಿತು. ಅಗ್ನಿಯ ತೀವ್ರತೆಗೆ ಸಿಲುಕಿ ಪರ್ವತವು ಸಂಪೂರ್ಣ ಬೆಂದು ನೆಲಸಮಗೊಂಡ ಬಳಿಕ ಅಲ್ಲಿಂದ ಒಂದು ವಿಧ ಕೆಂಪು ನೀರು ಹರಿಯತೊಡಗಿತು. ಭಯ ಮತ್ತು ಗಾಬರಿ ತರಿಸುವ ರೀತಿ. ನೀರಿನ ಸೆಳೆತದ ಜೊತೆಗೆ ಸಿಡಿಲ ಶಬ್ಧ ಕೇಳಿಸುತ್ತಿತ್ತು. ಎಲ್ಲವೂ ಮುಗಿದ ಬಳಿಕ ಈ ಘಟನೆ ನಡೆದ ಸ್ಥಳದಲ್ಲಿ ಪರ್ವತ ಗಾತ್ರದ ಭಸ್ಮ ಕಾಣಿಸಿಕೊಂಡಿತು. ಇರಾಕ್'ನಿಂದ ಹಿಡಿದು ಮದೀನಾ ನಗರದ ಸಮೀಪದ ತನಕ ಬೆಂಕಿಯ ಪರಿಣಾಮ ಕಂಡು ಬಂದಿತ್ತು ಎಂದು ಕೆಲವು ಪಂಡಿತರು ಅಭಿಪ್ರಾಯ ಪಡುತ್ತಾರೆ.
*ಬೌತಿಕ ಆಸಕ್ತಿ ಮತ್ತು ಪಾರತ್ರಿಕ ನಿರಾಸಕ್ತಿ :*
ದಿನ ಕಳೆದಂತೆ ಜನರಲ್ಲಿ ಇಹದ ಮೇಲೆ ಹಂಬಲ ಹೆಚ್ಚುತ್ತಿದೆ. ಪರಲೋಕ ಎಂದರೆ ಏನೋ ಒಂದು ತಾತ್ಸಾರ ಭಸವ. ಅಸಡ್ಡೆಯ ಮನೋಭಾವ. ಕಾಲದ ಹಕ್ಕಿ ಹಗಲು--ಇರುಳು ಎಂಬ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಲೇ ಪರಲೋಕದ ಚಿಂತೆ ಜನ ಮನಗಳಿಂದ ಸಂಪೂರ್ಣ ನಾಮಾವಶೇಷವಾಗುವ ಹಂತಕ್ಕೆ ತಲುಪಿದೆ. ಪರಲೋಕವೇ ನಿಜವಾದ ಬದುಕಿನ ತಾಣ. ಅದುವೇ ನಮ್ಮ ಶಾಶ್ವತ ಬೀಡು ಎಂದು ಉಲಮಾಗಳು ವೇದಿಕೆಗಳಲ್ಲಿ ಪದೇ ಪದೇ ಒತ್ತಿ ಹೇಳುತ್ತಿದ್ದರೂ ನಾವು ಅದನ್ನು ಒಪ್ಪಿ ಕೊಂಡು ಪರಲೋಕ ಲಕ್ಷ್ಯದಿಂದ ಬದುಕಲು ಶ್ರಮಿಸುವುದೇ ಇಲ್ಲ. ಹೆಜ್ಜೆ ಹೆಜ್ಜೆಗಳಿಗೂ ಇಹಲೋಕದ ಸಂಪಾದನೆಯೇ ನಮ್ಮ ಧ್ಯೇಯ. ಮಸೀದಿಗೆ ಹೋಗಿ ನಮಾಜಿಗೆ ಕೈ ಕಟ್ಟಿದಾಗಲೂ ನಮ್ಮ ಚಿಂತೆ ಭೌತಿಕ ವಿಷಯದಲ್ಲೇ ಕೇಂದ್ರೀಕೃತಗೊಂಡಿರುತ್ತದೆ. ಮಾನವನ ಚಿಂತನೆಯನ್ನು ಪ್ರಪಂಚವು ಇಂದು ತನ್ನ ಪರಧಿಯೊಳಗೆ ಸೆಳೆದುಕಡಿದ್ದರೆ ಅದಕ್ಕೆ ಕಾರಣ ಅಂತ್ಯ ದಿನದ ಸೂಚನೆ ಎನ್ನದೆ ನಿರ್ವಾಹವಿಲ್ಲ. ಪೂರ್ವಕಾಲದ ಮುಸ್ಲಿಮರು ಧರ್ಮ ಬದ್ಧಶಾಸನಗಳನ್ನು ಅನುಸರಿಸಿ ಸಾತ್ವಿಕ ಜೀವನ ನಡೆಸಿದ್ದರು. ಪರಲೋಕ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ತುಂಬಾ ಭಯದಿಂದ ಅವಲೋಕಿಸುತ್ತಿದ್ದರು. ಪರಲೋಕದ ಶಿಕ್ಷೆಯ ಭಯದಿಂದ ಭೌತಿಕ ಜಗತ್ತಿನ ಬಗ್ಗೆ ನಿರಾಸಕ್ತಿ ಬೆಳೆಸಿಕೊಂಡಿದ್ದರು. ಅಂತ್ಯ ದಿನ ಸಮೀಪಿಸಿದಂತೆ ಈ ಕ್ರಮ ಬದಲಾಯಿತು. ಜನರು ಕೆಟ್ಟು ಹೋದರು. ಧಾರ್ಮಿಕತೆ ಮುಸುಕಾಯಿತು. ಭೌತಿಕ ಗಳಿಕೆಯ ಉದ್ದೇಶದಿಂದ ಪರಸ್ಪರ ಕಚ್ಚಾಟ ಕಲಹ ತಲೆ ದೋರತೊಡಗಿತು. ಮುಂದೊಂದು ದಿನ ಪ್ರಪಂಚದ ಸ್ಥಿತಿ ಹೀಗಾಗಲಿದೆ ಎಂದು ಶತಮಾನಗಳ ಹಿಂದೆಯೇ ಪ್ರವಾದಿ(ಸ.ಅ) ಅವರು ನಮಗೆ ಬೋಧಿಸಿದ್ದರು. ಹಝ್ರತ್ ಅಬೂಸ'ಈದುಲ್ ಖುದ್ರೀ(ರ)ರವರು ಉಲ್ಲೇಖಿಸಿದ ಒಂದು ಹದೀಸ್ ಈ ರೀತಿ ಇದೆ. "ನನ್ನ ಬಳಿಕ ನೀವು ಈ ದುನ್ಯಾದ ಆಡಂಬರ ಮತ್ತು ವೈಭವದ ಬದುಕಿಗೆ ಜೋತು ಬೀಳುವುದರ ಬಗ್ಗೆ ನನಗೆ ಭಯವಿದೆ."
ಇಂದು ವಿಶ್ವದ ಪ್ರತಿಯೊಬ್ಬನಿಗೂ ಮುಖ್ಯ ಧ್ಯೇಯವಾಗಿರುವ ವಸ್ತುವೆಂದರೆ ಸಂಪತ್ತು. ಹೇಗಾದರೂ ಹಣ ಮಾಡಿ ಅಭಿವೃದ್ಧಿ ಹೊಂದಬೇಕು ಎಂದು ಹಲವರು ಬಯಸುವುದುಂಟು. ಹಣಕಾಸಿಗೆ ಸಂಬಂಧಿಸಿದಂತೆ ಅದೆಷ್ಟೋ ಗಲಭೆ ಗೊಂದಲಗಳು ನಡೆಯುವುದು ಹಣದ ಕಾರಣದಿಂದಲೇ. ಈ ಬಗ್ಗೆ ಶತಮಾನದ ಹಿಂದೆಯೇ ಪ್ರವಾದಿ(ಸ.ಅ)ಮರು "ಪ್ರತಿಯೊಂದು ಸಮುದಾಯದಲ್ಲೂ ಫಿತ್ನ ಇದೆ. ಸಂಪತ್ತು ನನ್ನ ಸಮುದಾಯದ ಫಿತ್ನ". ಎಂದಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.
ಮತ್ತೊಂದು ಹದೀಸ್ ಹೀಗೆನ್ನುತ್ತದೆ. " ನೀವು ಆಡಂಭರದ ಜೀವನದ ಬಗ್ಗೆ ಜಾಗೃತರಾಗಿರಿ. ಅಲ್ಲಾಹನ ದಾಸರು ಖಂಡಿತಾ ಆಡಂಭರ ಪ್ರಿಯರಲ್ಲ. ". ನಮ್ಮಲ್ಲಿ ಪ್ರತಿಯೊಬ್ಬರೂ ಉಡುಗೆ ತೊಡುಗೆ , ಊಟ ಉಪಚಾರಗಳಲ್ಲಿ ಆಡಂಭರವನ್ನು ಇಷ್ಟಪಡುತ್ತಾರೆ. ಸರಳತೆಯ ಜೀವನವೇ ಶ್ರೇಷ್ಟವಾಗಿದ್ದರೂ ಅದನ್ನು ರೂಢಿಸಲು ನಮಗೆ ಸಹನೆ ಬರುವುದಿಲ್ಲ. ಹೃದಯ ಸವಿಗಿಂತ ನಾಲಗೆಯ ರುಚಿಗೆ ನಾವು ಹೆಚ್ಚು ಒತ್ತು ಕೊಡುತ್ತೇವೆ. ವೈಭವದ ಅನ್ನಹಾರ ತಿನ್ನುವುದೇ ಅಂತ್ಯ ದಿನದ ಲಕ್ಷಣ ಎಂಬುವುದು ಅನೇಕ ಹದೀಸ್'ಗಳಿಂದ ತಿಳಿದು ಬಂದಿದೆ. ಅಂಥ ಜನರನ್ನು ಪ್ರವಾದಿ(ಸ.ಅ) ಅವರು " ಶಿರಾರು ಉಮ್ಮತಿ". ನನ್ನ ಸಮುದಾಯದಲ್ಲಿ ಕೆಟ್ಟವರು ಎಂದಿದ್ದಾರೆ.
*ನಮಾಜು ವಿಳಂಬ ಮಾಡುವುದು :* ಪ್ರಾರ್ಥನೆಯೇ ನಮ್ಮ ಉಸಿರು. ನಮಾಝ್ ಪ್ರಾರ್ಥನೆಯ ಮೂಲ. ಅದನ್ನು ತೊರೆದು ನಮಗೆ ಬದುಕಿಲ್ಲ. ದೇಹಕ್ಕೆ ತಲೆ ಹೇಗೋ ಹಾಗೆಯೇ ಧರ್ಮಕ್ಕೆ ನಮಾಝ್ ಕೂಡಾ. ನಮಾಜಿನ ಬಗ್ಗೆ ನಿರ್ಲಕ್ಷ್ಯ ಭಾವ ಉಂಟಾಗುವುದು ಅಂತ್ಯ ದಿನದ ಲಕ್ಷಣ. ಐದು ಹೊತ್ತು ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸುವ ಛಲ ನಮ್ಮಲ್ಲಿಲ್ಲ. ಎಷ್ಟೇ ಸೂಕ್ಷ್ಮತೆ ಪಾಲಿಸಿದರೂ ನಮ್ಮ ಬದುಕಿನಲ್ಲಿ ಯಾವುದಾದರೊಂದು ನಮಾಝ್ ಖಲಾ ಆಗಿ ಬಿಡುವುದುಂಟು. ನಮಾಝ್ ನಿರ್ವಹಿಸದವರು ಮತ್ತು ಸಮಯ ಮೀರಿ ನಿರ್ವಹಿಸುವವರು ಹಾಗೂ ಉದಾಸೀನ ಭಾವದಿಂದ ನಮಾಝಿನಲ್ಲಿ ಪ್ರವೇಶಿಸುವವರಿಗೆ ಘೋರ ಶಿಕ್ಷೆ ಇರುವುದಾಗಿ ಪವಿತ್ರ ಕುರ್'ಆನ್ ನಿಂದ ತಿಳಿದು ಬರುತ್ತದೆ.
*ಅತ್ಯಾಚಾರ :* ವ್ಯಭಿಚಾರ ಅಧಿಕವಾಗುವುದು ಅಂತ್ಯ ದಿನದ ಲಕ್ಷಣವೆಂದು ಪ್ರವಾದಿ(ಸ.ಅ) ಹೇಳಿದ್ದಾರೆ. ಇಂದು ಎಲ್ಲೆಡೆ ವ್ಯಭಿಚಾರ ನಡೆಯುತ್ತಿದೆ.ವ್ಯಭಿಚಾರವು ಅತೀ ಘೋರ ಶಿಕ್ಷೆಗೆ ವಿಧೇಯವಾದ ಕೀಳು ಮಟ್ಟದ ಪಾಪ. ಮುಸ್ಲಿಮರು ಇದರ ಹತ್ತಿರ ಸುಳಿಯಬಾರದೆಂದು ಕುರ್'ಆನ್ ಹೇಳಿದೆ. ಇಮಾಂ ಬುಖಾರಿ(ರ) ವರದಿ ಮಾಡಿರುವ ಪ್ರವಾದಿ ವಚನವೊಂದು ಹೀಗಿದೆ. "ಜ್ಞಾನದ ಕುಂಟಿತ, ಅಜ್ಞಾನದ ಹೆಚ್ಚಳ, ವ್ಯಭಿಚಾರ ಹೆಚ್ಚಳವಾಗುವುದು, ಪುರುಷರ ಸಂಖ್ಯೆ ಇಳಿಮುಖವಾಗಿ ಮಹಿಳೆಯರ ಸಂಖ್ಯೆ ಏರುವುದು, (ಓರ್ವ ಪುರುಷನನ್ನು ಐವತ್ತು ಮಹಿಳೆಯರು ಹಿಂಬಾಳಿಸುವ ತನಕ) ಇವೆಲ್ಲವೂ ಅಂತ್ಯ ದಿನದ ಲಕ್ಷಣವಾಗಿದೆ.
ಅನ್ಯ ಹೆಣ್ಣಿನೊಂದಿಗೆ ವಿವಾಹರಹಿತ ಅನೈತಿಕ ಸಂಬಂಧ ಬೆಳೆಸಿಕೊಳ್ಳುವುದೇ ವ್ಯಭಿಚಾರ. ಇದರ ಸೆಳತಕ್ಕೆ ಹೆಚ್ಚಾಗಿ ಸಿಳುಕುವುದು ಅವಿವಾಹಿತರು. ಇದು ನಿಷಿದ್ಧ ಮತ್ತು ನೀಚವಾದ ಕಾರ್ಯ ಎಂದು ತಿಳಿದವರೂ ಕೂಡಾ ಅದರ ಹಿಂದೆ ಹೋಗುವುದನ್ನು ಕಾಣಬಹುದು. ವ್ಯಭಿಚಾರ ನಡೆಸುವ ವ್ಯಕ್ತಿ ಇಹಪರಗಳ ಶಿಕ್ಷೆಗೆ ಹೊರತಾಗಿ ಸಮಾಜ ಮತ್ತು ಕೌಟುಂಬಿಕ ವಲಯದಲ್ಲಿನ ಸ್ವ ಪ್ರತಿಷ್ಟೆಯನ್ನೂ ಕಳೆದುಕೊಳ್ಳುತ್ತಾನೆ.
*ಸಲಿಂಗರತಿ :* ಪುರುಷರು ಪುರುಷರೊಂದಿಗೆ ಮತ್ತು ಮಹಿಳೆಯರು ಮಹಿಳೆಯರೊಂದಿಗೆ ಲೈಂಗಿಕ ಸುಖ ಅನುಭವಿಸುವ ಕ್ರಿಯೆಯನ್ನು ಇಸ್ಲಾಂ 'ಲಿವಾತ್ವತ್'. ಎಂದು ಕರೆದಿದೆ. ಇದು ಅತ್ಯಂತ ನೀಚ ಕಾರ್ಯವಾಗಿದ್ದು ಹದೀಸ್'ಗಳಲ್ಲಿ ಇದಕ್ಕೆ ಬಲು ಭೀಕರ ಶಿಕ್ಷೆಯಿರುವುದಾಗಿ ಎಚ್ಚರಿಕೆ ನೀಡಲಾಗಿದೆ. ಪ್ರವಾದಿ(ಸ.ಅ)ಮರು " ಲೂತ್ ನಬಿಯವರ ಸಮುದಾಯದವರ ಪ್ರವೃತ್ತಿ ನಿಮ್ಮಲ್ಲಿ ಸಂಭವಿಸುವುದರ ಕುರಿತು ನನಗೆ ಅತೀ ಹೆಚ್ಚು ಭಯವಿದೆ" ಎಂದಿದ್ದಾರೆ.
ಇಸ್ಲಾಮಿನ ಪ್ರಕಾರ ಸಲಿಂಗ ರತಿ ಪ್ರಾರಂಭಗೊಂಡದ್ದು ಲೂತ್ ನಬಿ(ಅ) ಅವರ ಕಾಲದಲ್ಲಿ ಅವರ ಸಮುದಾಯದ ಪುರುಷರು ಪುರುಷರೊಂದಿಗೆ ಮುಕ್ತ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದರು. ಮಹಿಳೆಯರು ಅವರಿಗೆ ಬೇಕಾಗಿರಲಿಲ್ಲ. ಈ ನಡವಳಿಕೆಯಿಂದ ಅವರಿಗೆ ಬಂದೊದಗಿದ ಶಿಕ್ಷೆ ಬಲು ಘೋರವಾಗಿತ್ತು. ಪವಿತ್ರ ಕುರ್'ಆನಿನಲ್ಲಿ ಈ ಬಗ್ಗೆ ಸ್ಪಷ್ಟವಾದ ಪ್ರಸ್ತಾಪವಿದೆ. ಸಲಿಂಗ ರತಿಯನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. ಒಂದನೇಯದು ದರ್ಶನ, ಎರಡನೇಯದು ಪರಸ್ಪರ ಹಸ್ತಲಾಘವ, ಮೂರನೇಯದು ಮುಕ್ತ ಲೈಂಗಿಕ ಕ್ರಿಯೆ, ಇದು ಹೆಣ್ಣಿನೊಂದಿಗೆ ಅನೈತಿಕ ಸಂಬಂಧ ಬೆಳೆಸುದಕ್ಕಿಂತಲೂ ನೀಚ ಮತ್ತು ನಿಕೃಷ್ಟವಾದ ಸಂಗತಿಯಾಗಿದೆ.
ಒಮ್ಮೆ ಸುಲೈಮಾನ್ ನಬಿ(ಅ) ಅವರು ಇಬ್ಲೀಸನೊಂದಿಗೆ "ನಿನಗೆ ಅತೀ ಹೆಚ್ಚು ಪ್ರಿಯವೆನಿಸಿದ ಸಂಗತಿ ಯವುದು? ". ಎಂದು ಕೇಳಿದರು. ಅದಕ್ಕೆ ಅವನು " ಸಲಿಂಗ ಕ್ರಿಯೆ". ಎಂದು ಉತ್ತರಿಸಿದ. ಸಲಿಂಗ ರತಿ ಅಲ್ಲಾಹನಿಗೆ ಅತೀ ಹೆಚ್ಚು ಅಪ್ರಿಯವೆನಿಸಿದ ಕಾರ್ಯ. ಆದ್ದರಿಂದ ಇದು ಇಬ್ಲೀಸನಿಗೆ ಅತೀ ಪ್ರಿಯವೆನಿಸಿತು. ಸಲಿಂಗ ಕಾರ್ಯದಲ್ಲಿ ಏರ್ಪಡುವವನ ಜೊತೆ ಶೈತಾನ್ ಕೂಡಾ ನಿಲ್ಲದು ಏಕೆಂದರೆ ಅಲ್ಲಾಹನ ಶಿಕ್ಷೆಯು ಅವರ ಮೇಲೆ ಬಂದೆರಗಿದರೆ ಅದು ತನಗೂ ತಟ್ಟಬಹುದೆಂದು.
*ಒಳಿತು ಕೆಡುಕುಗಳ ಬಗ್ಗೆ ನಿರ್ಲಕ್ಷ್ಯ*
ಒಳಿತನ್ನು ಆದೇಶಿಸದಿರುವುದು ಮತ್ತು ಕೆಡುಕಿನ ವಿರುದ್ಧ ಶಬ್ಧವೆತ್ತದಿರುವುದು ಅಂತ್ಯ ದಿನದ ಸೂಚನೆಯಾಗಿದೆ. ಈ ಒಂದು ವಿದ್ಯಮಾನವನ್ನು ಇಂದು ಎಲ್ಲ ಕಡೆ ಕಾಣಬಹುದು. ದಿನ ಕಳೆಯುತ್ತಿರುವಂತೆ ಮನುಷ್ಯರಲ್ಲಿ ಪಾಪ ಪುಣ್ಯಗಳ ಪ್ರಜ್ಞೆ ನಶಿಸಿ ಹೋಗುತ್ತಿದೆ. ವಿದ್ವಾಂಸರು ಜನ ಸಾಮಾನ್ಯರ ಸಂಕೋಚಕ್ಕೆ ಬಲಿಯಾಗಿ ಸತ್ಯವನ್ನು ಎದೆ ತೆರೆದು ಹೇಳಲು ಹಿಂಜರಿಯುತ್ತಿರುವ ಪರಿಸ್ಥಿತಿ ಸಂಜಾತವಾಗಿದೆ. ಒಳಿತನ್ನು ಬೋಧಿಸುವ ಸಜ್ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಡುಕಿನ ಬೆಲೆ ಹೆಚ್ಚುತ್ತಿದೆ. ಇಂದು ಕೆಡುಕಿನ ಸರದಾರರೇ ತಮ್ಮ ನಡತೆಯನ್ನು ನ್ಯಾಯವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರವಾದಿ(ಸ.ಅ) ಅವರು "ಜನರು ಕೆಡುಕನ್ನು ಕಂಡು ಅದನ್ನು ತಡೆಯದೇ ಹೋದಲ್ಲಿ ಇಡೀಯ ಜನ ಸಮೂಹವನ್ನು ಅಲ್ಲಾಹು ಶಿಕ್ಷೆಗೆ ಗುರಿಪಡಿಸುವನು." ಎಂದಿದ್ದಾರೆ. ಸಮಾಜದಲ್ಲಿ ವಿದ್ವಾಂಸರಿಗೆ ವಿಶೇಷ ಗೌರವ ಮತ್ತು ಪ್ರತಿಷ್ಟಿತ ಸ್ಧಾನವಿದೆ. ಜನರಿಗೆ ಒಳಿತನ್ನು ಬೋಧಿಸಿ ಸನ್ಮಾರ್ಗ ತೋರಬೇಕಾದ ಮಹತ್ತರದ ಹೊಣೆಗಾರಿಕೆ ವಿದ್ವಾಂಸರ ಮೇಲಿದೆ.
ವಿದ್ವಾಂಸನು ತಾನು ಬೋಧಿಸುವ ಕಾರ್ಯವನ್ನು ಸ್ವತಹ ಆಚರಣೆಗೆ ತರುವ ಕರ್ಮವೀರನಾಗಬೇಕು. ಅದು ಪಾರತ್ರಿಕ ವಿದ್ವಾಂಸರ ಲಕ್ಷಣ. ಇದರಿಂದ ನುಣುಚಿಕೊಳ್ಳುವ ವಿದ್ವಾಂಸರಿಗೆ ಪರಲೋಕದಲ್ಲಿ ದೊರೆಯುವ ಶಿಕ್ಷೆಯ ಕುರಿತು ಹದೀಸ್'ಗಳಲ್ಲಿ ವಿವರಿಸುವುದು ಹೀಗೆ. "ಅಂತ್ಯ ದಿನದಂದು ಓರ್ವ ವ್ಯಕ್ತಿಯನ್ನು ನರಕಕ್ಕೆ ಕೊಂಡೊಯ್ದು ಎಸೆಯಲಾಗುತ್ತದೆ. ಬೆಂಕಿಯ ಸ್ಪರ್ಶ ಅನುಭವವಾದೊಡನೆ ಅವನ ಹೊಟ್ಟೆಯಿಂದ ಕರುಳು ಸೀಳಿ ಹೊರಬರುವುದು. ನರಕ ವಾಸಿಗಳು ಅವನ ಸುತ್ತಲೂ ಬಂದು ನಿಂತು " ನಿಮಗೇನಾಯಿತು? ನೀವು ದುನ್ಯಾದಲ್ಲಿ ನಮಗೆ ಒಳಿತನ್ನು ಬೋಧಿಸಿದವರು. ಕೆಡುಕಿನಿಂದ ದೂರ ತಡೆದವರು ಇಂದು ನಿಮ್ಮ ಅವಸ್ಧೆ ಹೀಗಾದರೆ ಹೇಗೆ? ಎಂದು ಕೇಳುವರು ಅದಕ್ಕೆ ಅವನು "ನಾನು ನಿಮಗೆ ಒಳಿತನ್ನು ಬೋಧಿಸುತ್ತಿದ್ದೆ. ಕೆಡುಕಿನ ಬಗ್ಗೆ ಎಚ್ಚರಿಸುತ್ತಿದ್ದೆ. ಆದರೆ ನಾನು ಕೆಡುಕನ್ನು ರೂಢಿಸಿ, ಒಳಿತನ್ನು ಕೈ ಬಿಡುತ್ತಿದ್ದೆ". ಎಂದು ಉತ್ತರಿಸುವನು.
ಈ ಹದೀಸ್'ಗಳಲ್ಲಿ ಐಹಿಕ ವಿದ್ವಾಂಸನ ಶೋಚನೀಯ ಅವಸ್ಧೆಯನ್ನು ತೋರಿಸಲಾಗಿದೆ. " ದುನ್ಯಾ' ದಲ್ಲಿರುವಾಗ ಜನರಿಗೆ ಒಳಿತನ್ನು ಬೋಧಿಸಿ ಕೆಡುಕಿನ ಬಗ್ಗೆ ಎಚ್ಚರ ನೀಡುತ್ತಿದ್ದ. ಆದರೆ ಅವನ ಖಾಸಗೀ ಜೀವನ ಅದಕ್ಕೆ ವಿರುದ್ಧವಾಗಿತ್ತು. ಅವನು ತಪ್ಪು ಹೆಜ್ಜೆ ತುಳಿದವನಾಗಿದ್ದ. ಅದು ಅವನನ್ನು ಪರಲೋಕದಲ್ಲಿ ಇಂತಹ ಅವನತಿಯ ಪಾತಾಳಕ್ಕೆ ಎಳೆದೊಯ್ದು ನಿಲ್ಲಿಸಿತು. ಅವನ ಜ್ಞಾನ, ವಾಕ್ಚಾತುರ್ಯ, ಬಾಹ್ಯ ವೇಷವಿಧಾನಗಳ ನೋಟದಲ್ಲಿ ಅಳೆಯುವುದಾದರೆ ಅವನು ಸ್ವರ್ಗಕ್ಕೆ ಹೋಗಬೇಕಿತ್ತು.
*ಭೌತಿಕ ಸಂಪಾದನೆಗಾಗಿ ವಿದ್ಯಾರ್ಜನೆ :* " ಅಲ್ಲಾಹನ ತೃಪ್ತಿಗಾಗಿ ಗಳಿಸಬೇಕಾದ ವಿದ್ಯೆಯನ್ನು ಯಾರು ಇಹಲೋಕದ ಸಂಪಾದನೆಗೋಸ್ಕರ ಕಲಿಯುತ್ತಾರೋ ಅಂಥವರಿಗೆ ಅಂತ್ಯ ದಿನದಲ್ಲಿ ಸ್ವರ್ಗದ ಸುವಾಸನೆ ಕೂಡಾ ಆಸ್ವಾದಿಸಲಾಗದು."(ಹದೀಸ್) ಭೌತಿಕ ಸಂಪಾದನೆಗಾಗಿ ವಿದ್ಯಾರ್ಜನೆ ಮಾಡುವುದು ಅಂತ್ಯ ದಿನದ ಸೂಚನೆಯಾಗಿದೆ.
ಇಂದು ವಿದ್ಯೆ ಪಡೆಯುವವರ ನಿಯ್ಯತ್ ಬದಲಾಗಿದೆ. ವಿದ್ಯೆ ಗಳಿಕೆಯನ್ನು ಭೌತಿಕ ಸಂಪಾದನೆಯ ಮಾರ್ಗವಾಗಿ ಪರಿಗಣಿಸಲಾಗುತ್ತಿದೆ. ಇದು ಪಂಡಿತ ಸಮಾಜದ ಪತನಕ್ಕೊಂದು ನಿದರ್ಶನ. ಈ ಹೀನಾಯ ಬೆಳವಣಿಗೆಯಿಂದ ಜನ ಸಾಮಾನ್ಯರು ಪಂಡಿತರ ಬಗ್ಗೆ ಜಿಗುಪ್ಸೆ ತಾಳುವಂತಾಗಿದೆ. ಜನರ ಬಳಿ ಸ್ಧಾನ ಮಾನ ಮತ್ತು ಅಧಿಕಾರ ಕರಗತ ಮಾಡಿಕೊಳ್ಳುವ ಉದ್ದೇಶದಿಂದ ವಿದ್ಯೆ ಕಲಿಯುವವರಿದ್ದಾರೆ. ವಿದ್ವಾಂಸನಾದವನು ಭೌತಿಕಾಡಂಬರಗಳಿಂದ ದೂರವಿದ್ದುಕೊಂಡು ಸರಳ ಬದುಕನ್ನು ರೂಪಿಸಿಕೊಳ್ಳಬೇಕು. ವೈಭವವನ್ನು ತೊರೆದು ಸರಳತೆಯನ್ನು ಮೆರೆದು ಬಾಳುವುದೇ ಪಂಡಿತನ ಧರ್ಮ ಎಂಬುವುದನ್ನು ಮರೆಯಬಾರದು.
*ಪ್ರಕೃತಿಯಲ್ಲಿ ಬದಲಾವಣೆ :* ಪ್ರಾಕೃತಿಕ ಬದಲಾವಣೆ ಅಂತ್ಯ ದಿನದ ಪ್ರಮುಖ ಲಕ್ಷಣ. ಬಿಸಿಲಿನ ಧಗೆ ತೀವ್ರವಾಗಿ ಏರುತ್ತಿರುವ ಈ ದಿನಗಳಲ್ಲಿ ಋತುಮಾನಗಳಲ್ಲಿ ಬದಲಾವಣೆಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಮಳೆ ಬರಬೇಕಾದ ಕಾಲದಲ್ಲಿ ಬಿಸಿಲು ಮತ್ತು ಬೇಸಿಗೆಯಲ್ಲಿ ಜಡಿಮಳೆ ಸುರಿದ ಹಲವು ಉದಾಹರಣೆಗಳು ನಡೆದದ್ದುಂಟು. ಕೆಲವೊಮ್ಮೆ ಮಳೆಯ ವೈಪರೀತ್ಯವಾದರೆ ಮತ್ತೆ ಕೆಲವೊಮ್ಮೆ ಬಿಸಿಲಿನ ತೀವ್ರತೆ ಹೆಚ್ಚುತ್ತದೆ. ಉರಿ ಬಿಸಿಲಿನ ಧಗೆ ಸಹಿಸಲಾಗದೆ ಓರ್ವ ವ್ಯಕ್ತಿ ಜೀವಂತ ಬೆಂದು ಹೋದ ಘಟನೆ ಕೆಲವು ತಿಂಗಳ ಹಿಂದೆ ಕೇರಳದಲ್ಲಿ ನಡೆಯಿತು.
ಕೆಲವೇ ಕೆಲವು ತಿಂಗಳ ಹಿಂದೆ ಕೇರಳದಲ್ಲಿ ನಡೆದ ಭೀಕರ ಮಳೆ ಗಾಳಿಗೆ ಜಲಪ್ರಳಯವಾಗಿ ಹಲವಾರು ಮಂದಿ ಜಲಸಮಾಧಿಯಾದರು. ಹಲವಾರು ಮನೆಗಳು ಸೊತ್ತುಗಳು ಸರ್ವ ನಾಶ ಹೊಂದಿದ್ದು ಈಗಲೂ ಮರೆಲಾಗುತ್ತಿಲ್ಲ. ಅಲ್ಲಿಯ ಜನರು ಅದರಿಂದ ಆದ ನಾಶ ನಷ್ಟಗಳಿಂದ ಇನ್ನೂ ಚೇತರಿಸಿಕೊಂಡಿಲ್ಲ.
ಗುಜರಾತ್ ಭೂಕಂಪವು ಭಾರತದ ಚರಿತ್ರೆಯಲ್ಲಿ ಅತ್ಯಂತ ಭೀಕರ ಭೂಕಂಪದಂತಹ ಪ್ರಕೃತಿ ವಿಕೋಪ ತಲೆದೋರಿದಾಗ ಬಡವ ಬಲ್ಲಿವ, ಧನವಂತ, ಧನಹೀನ, ಬಿಳಿಯ, ಕರಿಯ, ಗಂಡು, ಹೆಣ್ಣು, ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಬೇಧವಿಲ್ಲದೆ ಎಲ್ಲರ ಬಿಸಿ ರಕ್ತ ಹರಿಯುತ್ತದೆ. ಭೂಕಂಪಗಳು ಹೆಚ್ಚುವುದು ಅಂತ್ಯ ದಿನದ ಸೂಚನೆ ಎಂದು ಪ್ರವಾದಿ(ಸ.ಅ) ಅವರು ಹೇಳಿದ್ದಾರೆ. ಮೊನ್ನೆ ನಡೆದ ಇಂಡೋನೇಷ್ಯಾದ ಭೂಕಂಪವು ಅತೀ ಭೀಕರವಾಗಿತ್ತು ಹಲವಾರು ಮಂದಿಯನ್ನು ಬಲಿ ಪಡೆದುಕೊಂಡಿತು. ಹಲವಾರು ಕಟ್ಟಡಗಳು ನೆಲಸಮಗೊಂಡವು. ಅಮೇರಿಕಾದಲ್ಲಿ ನಡೆದ ಭೀಕರ ಚಂಡಮಾರುತದಲ್ಲಿ ಸಾವಿರಾರು ಮಂದಿ ಸಾವಿಗೀಡಾದರು. ಈಗಲೂ ಜನರು ಅದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಪ್ರಾಕೃತಿಕ ಬದಲಾವಣೆ ಮತ್ತು ದುಷ್ಕ್ರತ್ಯಗಳ ಪರಿಣಾಮವನ್ನು ವಿವರಿಸುವ ದೀರ್ಘವಾದ ಹದೀಸ್ ಒಂದು ಹೀಗೆ ಸಾಗುತ್ತದೆ. ಪ್ರವಾದಿ (ಸ.ಅ)ರವರು ಹೇಳಿದರು "ಐದು ಘಟನೆಗಳು ಉಂಟಾದರೆ ಅದಕ್ಕೆ ಐದು ಪರಿಣಾಮಗಳು ಗೋಚರಿಸಲಿದೆ. ಬಡ್ಡಿ ತೆಗೆದರೆ ಭೂಕಂಪ ಮತ್ತು ಭೂಕುಸಿತ ಉಂಟಾಗುವುದು. ಆಡಳಿತ ಚುಕ್ಕಾಣಿ ಹಿಡಿದವರು ಅನ್ಯಾಯವಾಗಿ ವರ್ತಿಸಿದರೆ ಮಳೆ ಇಲ್ಲದಾಗಿ ಬರ ಕಾಣಿಸಿಕೊಳ್ಳುವುದು. ವ್ಯಭಿಚಾರ ವ್ಯಾಪಕಗೊಂಡರೆ ಮರಣ ಸಂಖ್ಯೆಯು ಹೆಚ್ಚುವುದು. ಝಕಾತ್ ತಡೆದರೆ ಮೃಗಗಳು ಸಾಯುವುದು. ಝಕಾತ್ ನೀಡಲು ನಿರಾಕರಿಸುವ ಜನರಿಗೆ ಅಲ್ಲಾಹನು ಆಕಾಶದಿಂದ ಮಳೆಯನ್ನು ತಡೆ ಹಿಡಿಯುವನು. ಜೀವಿಗಳು ಇಲ್ಲದಿರುತ್ತಿದ್ದರೆ ಅವರಿಗೆ ಕುಡಿಯುವ ನೀರು ಕೂಡಾ ದೊರೆಯುತ್ತಿರಲಿಲ್ಲ."
ಜಗತ್ತಿನ ಅನೇಕ ಕಡೆ ಭೂಕಂಪ ನಡೆಯಿತು. ಕೆಲವೆಡೆ ಕೆಂಪು ಮತ್ತು ಕಪ್ಪು ಮಳೆ ಸುರಿಯುತು. ಟರ್ಕಿಯಲ್ಲಿ ನಡೆದ ಭೂಕಂಪ ಅತೀ ಭೀಕರವಾಗಿತ್ತು. ಪ್ರಶಾಂತವಾದ ಭೂ ಪ್ರದೇಶವು ಇದ್ದಕ್ಕಿದ್ದಂತೆ ಕುಸಿದು ಬಾವಿ ನಿರ್ಮಾಣಗೊಂಡ ಅಪರೂಪದ ಘಟನೆ ಕೇರಳದ ಕುಂಬಳೆಯಲ್ಲಿ ನಡೆಯಿತು. ಇದು ಅಲ್ಲಿನ ಜನರನ್ನು ಆಶ್ಚರ್ಯಗೊಳಿಸಿತ್ತು. ಹಿಂದಿನ ಕಾಲದಲ್ಲಿ ಪ್ರಕೃತಿಯ ಸ್ಥಿತಿ ಇಂದಿನದಕ್ಕೆ ಹೋಲಿಸುವಂತೆನೂ ಇರಲಿಲ್ಲವೆಂದು ಹಿರಿಯರು ಹೇಳುತ್ತಾರೆ.
*ಗಗನ ಚುಂಬಿ ಕಟ್ಟಡಗಳ ಉಗಮ :* ಇದೊಂದು ನಿತ್ಯ ಗೋಚರ ಸತ್ಯ. ಈ ಕಾಲದಲ್ಲಿ ಗುಡಿಸಲು ಮನೆ ಕಾಣ ಸಿಗುವುದು ಅಪರೂಪ. ಸಾಮಾನ್ಯ ಹಂಚಿನ ಮನೆ ಕೂಡಾ ವಿರಳವಾಗುತ್ತಿದೆ. ಕಾಂಕ್ರೀಟ್ ಹಾಕಿದ ಮೇಲ್ಚಾವಣಿಯ......
ಕಟ್ಟಡದಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಇಂದಿನ ಭೌತಿಕ ವೈಭವದ ವೈಖರಿಗೊಂದು ನಿದರ್ಶನ. ಇಂದಿನವರಿಗೆ ಸರಳ ವಾಸ ಸ್ಥಳ ಹಿಡಿಸುವುದಿಲ್ಲ. ಅದರ ಬಗ್ಗೆ ಅತೃಪ್ತಿ ಮತ್ತು ಅಸಮಾಧಾನ. ಆದ್ದರಿಂದ ಅದನ್ನು ಬದಲಿಸಿ ಗಟ್ಟಿ ಮುಟ್ಟಿನ ಬಿಲ್ಡಿಂಗ್ ಕಟ್ಟಬೇಕು ಎಂಬ ಬಯಕೆ. ಗಲ್ಫ್'ಗೆ ಹೋಗುವವರಲ್ಲಿ ಅನೇಕರು ಇಂಥ ಕನಸನ್ನು ನನಸಾಗಿಸುವ ಪಣ ತೊಟ್ಟಿರುತ್ತಾರೆ.
ಅಮೇರಿಕ, ಜರ್ಮನ್,ಇಂಗ್ಲೆಂಡ್, ಜಪಾನ್, ಹಾಂಗ್'ಕಾಂಗ್, ರಷ್ಯ, ಚೀನಾ ಮುಂತಾದ ರಾಷ್ಟ್ರಗಳಲ್ಲಿ ಅದ್ಬುತ ಕಲಾತ್ಮತೆಯಿಂದ ಕೂಡಿದ ಸಾವಿರಾರು ಗಗನ ಚುಂಬಿ ಕಟ್ಟಡಗಳು ಹಂತಹಂತವಾಗಿ ಹೇಗೆ ತಲೆ ಎತ್ತಿ ನಿಂತಿವೆ ಎನ್ನುವುದನ್ನು ಗಮನಿಸುವಾಗ ಆಶ್ಚರ್ಯವಾಗುತ್ತದೆ. ವಿಜ್ಞಾನ ಯುಗದ ಆಧುನಿಕ ಮಾನವನ ಆತ್ಮ ಬಲದ ವೈಖರಿಗೆ ಇದೊಂದು ಸ್ಪಷ್ಟ ನಿದರ್ಶನ. ಇಮಾಂ ಮುಸ್ಲಿಮ್ ವರದಿ ಮಾಡಿದ ದೀರ್ಘವಾದ ಹದೀಸ್ ಒಂದರಲ್ಲಿ ದೇವಚರ ಜಿಬ್ರೀಲ್(ಅ) ಅವರಿಗೆ ಪ್ರವಾದಿ(ಸ.ಅ)ರವರು ಅಂತ್ಯ ದಿನದ ಲಕ್ಷಣಗಳನ್ನು ವಿವರಿಸುತ್ತಾ ವಿಶಾಲವಾದ ಕಟ್ಟಡಗಳ ಬಗ್ಗೆ ಡಾಂಬಿಕತನ ಪ್ರದರ್ಶನವಾಗುವ ಪ್ರಸ್ತಾಪಿಸಿರುವುದು ಕಂಡು ಬರುತ್ತದೆ. ಮಸೀದಿಯ ಮಿನಾರವನ್ನು ಅತ್ಯಂತ ಎತ್ತರಕ್ಕೇರಿಸುವುದನ್ನೂ ಪ್ರವಾದಿ(ಸ.ಅ)ರವರು ಅಂತ್ಯ ದಿನದ ಸೂಚನೆಗಳಲ್ಲಿ ಎಣಿಸಿದ್ದಾರೆ. ಇಂದು ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಫ್ಲಾಟ್'ಗಳು ಕಾಣ ಸಿಗುತ್ತದೆ ಪ್ರವಾದಿ(ಸ.ಅ) 1400 ವರ್ಷಗಳ ಹಿಂದೆ ಹೇಳಿದ ಭವಿಷ್ಯ ನುಡಿಯು ಇಂದು ನಮ್ಮ ಕಣ್ಣ ಮುಂದೆ ಗೋಚರಿಸುತ್ತಿದೆ. ದೊಡ್ಡ ದೊಡ್ಡ ಗಗನ ಚುಂಬಿಯಂತಹ ಕಟ್ಟಡಗಳು(ಫ್ಲಾಟ್'ಗಳು ಅಧಿಕವಾಗುವುದು ಅಂತ್ಯ ದಿನದ ಸೂಚನೆಯಾಗಿದೆ.)
*ಮುಂದುವರೆಯುತ್ತದೆ....*

Comments