ಅಂತ್ಯ ದಿನದ ಲಕ್ಷಣಗಳು : 4
*ಅಜ್ಞಾನದ ಅರಾಜಕತೆ :*
ಅಜ್ಞಾನ ಎಂಬುದು ಬಡತನಕ್ಕಿಂತಲೂ ಕಠೋರವಾದದ್ದು. ಇಲ್ಲಿ ಬಡವರಾಗಿ ಬದುಕುವುದರಿಂದ ನಮ್ಮ ಪಾರತ್ರಿಕ ಶ್ರೇಯಸ್ಸಿಗೆ ದಕ್ಕೆ ಬರಬೇಕೆಂದಿಲ್ಲ. ಆದರೆ ಅಜ್ಞಾನದ ಕಥೆ ಹೀಗಲ್ಲ. ಇದು ಇರುವಲ್ಲಿ ಧಾರ್ಮಿಕ ಪ್ರಗತಿ ಸಾಧ್ಯವಿಲ್ಲ. ಇದನ್ನು ತಿಳಿಯುವಾಗ ಧರ್ಮದ ಬಗ್ಗೆ ಗಂಧ ಗಾಳಿಯೂ ಇಲ್ಲದ ಲಕ್ಷಾಂತರ ಮಂದಿ ಪಾಮರರ ಪಾಡೇನು ಎಂದೆನಿಸುತ್ತದೆ. ಅಜ್ಞಾನವು ಸಮಾಜದ ನಿರಾಶದಾಯಕ ಪರಿಸ್ಥಿತಿಗೊಂದು ಉದಾಹರಣೆ. ವಿದ್ಯಾದಾಹಿಗಳ ಸಂಖ್ಯೆ ಕಡಿಮೆಯಾದಂತೆ ಸಮಾಜವನ್ನು ಅಜ್ಞಾನವು ಮುತ್ತಿಕೊಳ್ಳುತ್ತದೆ. ಪ್ರವಾದಿ (ಸ.ಅ) ಅವರು ಈ ಬಗ್ಗೆ "ಜ್ಞಾನವು ಕಡಿಮೆಯಾಗುವುದು ಅಜ್ಞಾನವು ಬಹಿರಂಗವಾಗುವುದು ಅಂತ್ಯ ದಿನದ ಲಕ್ಷಣ ಎಂದಿದ್ದಾರೆ. ಇದನ್ನು ಸರಿಯಾಗಿ ಆಲೋಚಿಸಿ ನೋಡಿದರೆ ಇಂದಿನ ಸ್ಥಿತಿಗೆ ಸರಿ ಹೊಂದಿರುವುದಾಗಿ ತಿಳಿಯುತ್ತದೆ. ತುಂಬು ಜ್ಞಾನವಿರುವ ವಿದ್ವಾಂಸರ ಸಂಖ್ಯೆ ಇಳಿಮುಖವಾಗುತ್ತಿದೆ. ಅರ್ಧಂಬರ್ಧ ತಿಳಿದವರು ಒಂದೆಡೆಯಾದರೆ ತಿಳಿಯದ್ದನ್ನು ತಿಳಿದಂತೆ ನಟಿಸುವವರು ಮತ್ತೊಂದೆಡೆ. ಇಂದು ವಿಶ್ವದಲ್ಲಿ ಕೋಟ್ಯಾಧಿಪತಿಗಳು ಕೋಟಿ ಸಂಖ್ಯೆಯಲ್ಲಿ ಸಿಗಬಹುದು. ಆದರೆ ಜ್ಞಾನದ ಆಳ--ಹರವನ್ನು ಹೊಂದಿದ ಪಂಡಿತರು ಬೆರಳಣಿಕೆಯಷ್ಟು ಮಾತ್ರ. ಈ ವಿಲಕ್ಷಣ ಬೆಳವಣಿಗೆಯ ಒಂದು ಮುಖವನ್ನು ತೆರೆದಿಡುವ ಒಂದು ಹದೀಸ್ ಹೀಗಿದೆ. " ಅಲ್ಲಾಹನು ನಿಮಗೆ ಜ್ಞಾನವನ್ನು ಕೊಟ್ಟ ನಂತರ ಅದನ್ನು ಕಿತ್ತು ತೆಗೆಯಲಾರ. ಬದಲು ವಿದ್ವಾಂಸರನ್ನು ಮರಣಿಸುವ ಮೂಲಕ ಜ್ಞಾನವನ್ನು ಹಿಂತೆಗೆದು ಕೇಳುವಾಗ ಅವರು ತಮ್ಮ ಮನದಿಂಗಿತಕ್ಕನುಗುಣವಾಗಿ ತೀರ್ಪು ಕೊಡುತ್ತಾರೆ. ಇದರಿಂದ ಅವರು ಸ್ವತಃ ದಾರಿ ತಪ್ಪುವುದಲ್ಲದೆ ಜನರನ್ನೂ ದಾರಿ ತಪ್ಪಿಸುತ್ತಾರೆ"(ಬುಖಾರಿ, ಮುಸ್ಲಿಂ) ಅಂತ್ಯ ದಿನ ಸಮೀಪಿಸುವಾಗ ವಿದ್ಯೆಯ ಕೊರತೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದರ ಸ್ಪಷ್ಟ ಚಿತ್ರ ಇಲ್ಲಿದೆ.
*ಅಂತ್ಯ ದಿನ ಸಂಭವಿಸುವ ಮೊದಲು* ವ್ಯಭಿಚಾರ ಅಧಿಕವಾಗುವುದು, ಬಡ್ಡಿಯ ವ್ಯವಹಾರಗಳು ಕೂಡಿ ಬರುವುದು, ಕೊಲೆ, ಹಲ್ಲೆ, ನಿಂದನೆಗಳು ಅಧಿಕವಾಗಿ ನಡೆಯುವುದು, ಸ್ತ್ರೀ ಯರು ಅಧಿಕಾರಕ್ಕಿಳಿಯುವುದು, ಎಲ್ಲಾ ಜಾಹಿರಾತು ಫಲಕಗಳಲ್ಲಿಯೂ ಸ್ತ್ರೀಯರನ್ನು ಕಾಣ ಸಿಗುವುದು, ಮ್ಯೂಸಿಕ್'ಗಳು ಹಾಡುಗಳು ವರ್ಧಿಸುವುದು, ಫಿತ್ನ ಫಸಾದ್'ಗಳು ಹರಡುವುದು, ಅಕ್ರಮ ಸಂಬಂಧ ಅನೈತಿಕತೆಗಳು ಕೂಡಿಬರುವುದು, ಹೆತ್ತವರನ್ನು ಕಡೆಗಾಣಿಸುವುದು, ಕುಟುಂಬ ಸಂಬಂಧ ಮುರಿಯುವುದು, ನೆರೆಕರೆಗಳಲ್ಲಿ ಕೋಪಗೊಳ್ಳುವುದು, ಸಮಯವು ಅಧಿಕ ವೇಗದಲ್ಲಿ ಚಲಿಸುವುದು, ಮಸೀದಿಯಲ್ಲಿ ಗೌಜಿ ಗದ್ದಲ ಕೋಲಾಹಲಗಳು ಉಂಟಾಗುವುದು, ವಸ್ತ್ರ ಧರಿಸಿಯೂ ನಗ್ನರಾಗಿ ಕಾಣುವುದು, ಜನರಿಂದ ಲಜ್ಜೆ(ನಾಚಿಕೆ) ಇಲ್ಲದಾಗುವುದು, ಅಮಲು ಪದಾರ್ಥಗಳ ಹಾಗೂ ಮದ್ಯಪಾನಗಳ ಸೇವನೆ ಅಧಿಕಗೊಳ್ಳುವುದು, ಗಂಡಂದಿರು ಹೆಂಡತಿಯ ಗುಲಾಮರಾಗುವುದು ಹಾಗೂ ಅವರಿಗೆ ಹೆದರುವುದು, ಪ್ರಕೃತಿಯಲ್ಲಿ ಬದಲಾವಣೆ ಕಾಣುವುದು, ಹಿರಿಯರಿಗೆ ಗೌರವ ತೋರದೆ ಇರುವುದು, ಕಿರಿಯರಿಗೆ ಕರುಣೆ ತೋರದೆ ಇರುವುದು, ದೊಡ್ಡ ದೊಡ್ಡ ಗಗನ ಚುಂಬಿಗಳಂತಹ ಫ್ಲಾಟ್'ಗಳು ತಲೆ ಎತ್ತಿ ನಿಲ್ಲುವುದು, ಅಧಿಕ ತಾಪಮಾನವೆರುವುದು, ನಮಾಝಿನಲ್ಲಿ ಉದಾಸೀನ ತೋರುವುದು, ವಿಶ್ವಸ್ಥರನ್ನು ವಂಚಿಸುವುದು, ಆಕಸ್ಮಿಕ ಮರಣಗಳು ಜಾಸ್ತಿಯಾಗುವುದು, ವಿದ್ವಾಂಸರು, ಆಲಿಮ್'ಗಳು ಮರಣ ಹೊಂದುವುದು, ಭೂಕಂಪಗಳು, ಚಂಡಮಾರುತ, ಸುನಾಮಿಗಳು ಭೂಕುಸಿತಗಳು ಉಂಟಾಗುವುದು, ಇಸ್ಲಾಂ ಎಂಬ ಕಾರಣಕ್ಕೆ(ಸಿರಿಯಾ, ಇಸ್ರೇಲ್ ಮುಂತಾದ ದೇಶಗಳಲ್ಲಿ) ಮಹಿಳೆಯರನ್ನು, ಗರ್ಭಿಣಿ ಸ್ತ್ರೀಯರನ್ನು, ಚಿಕ್ಕ ಚಿಕ್ಕ ಮಕ್ಕಳನ್ನು ವಯಸ್ಕರನ್ನು ತರುಣರನ್ನು ಬಾಂಬ್ ಸ್ಪೋಟ ಮಾಡಿಯೂ ಅಲ್ಲದೆಯೂ ಕೊಲ್ಲುತ್ತಿದ್ದಾರೆ, ಮನುಷ್ಯ ಮನುಷ್ಯನೊಂದಿಗೆ ಕ್ರೂರನಾಗಿ (ಮಾನವೀಯತೆ ಇಲ್ಲದೆ) ಜೀವಿಸುತ್ತಿದ್ದಾನೆ. ಇತ್ಯಾದಿ ಇತ್ಯಾದಿಗಳೆಲ್ಲವೂ 1400 ವರ್ಷಗಳ ಮುಂಚೆ ಹೇಳಿದ ಪ್ರವಾದಿವರ್ಯರ (ಸ.ಅ) ಭವಿಷ್ಯ ನುಡಿಗಳು ನಾವು ಕಂಡಾಯಿತು. ಇನ್ನು ಕಾಣಲು ಬಾಕಿ ಇರುವ ಕಿಯಾಮತ್ ದಿನದ ದೊಡ್ಡ ಲಕ್ಷಣಗಳು ಮಾತ್ರವಾಗಿದೆ. ಅಂದರೆ ಅಂದು ಲೋಕ ಪ್ರವಾದಿ ಸಯ್ಯುದುನಾ ಮುಹಮ್ಮದುರ್ರಸೂಲುಲ್ಲಾಹಿ ರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ ಆ ನುಡಿಯು ಈಗ ನಮ್ಮ ಮುಂದೆ ಕಾಣುತ್ತಿದೆ. ಇನ್ನು ಈ ಪ್ರಪಂಚದ ನಾಶಕ್ಕೆ ಅಧಿಕ ಸಮಯವಿಲ್ಲ. ಕಿಯಾಮತ್ ದಿನದ ದೊಡ್ಡ ಲಕ್ಷಣಗಳಲ್ಲೊಂದಾದ ಇಮಾಂ ಮಹದಿ(ರ.ಅ) ರವರ ಆಗಮನವು ಬಹಳ ಹತ್ತಿರದಲ್ಲೇ ಇದೆ ಎಂಬುವುದರಲ್ಲಿ ಸಂಶಯವಿಲ್ಲ.
*ಭೂಕಂಪಗಳು :* ಇದು ಮನುಷ್ಯನ ತತ್ತರಿಸುವಂತೆ ಮಾಡುವ ಒಂದು ಭೀಕರ ಪ್ರಸಂಗ. ಈ ದಿನಗಳಲ್ಲಿ ಇದು ಹೆಚ್ಚು ವಾಸ್ತವಿಕವಾಗಿ ತೋರುತ್ತಿದೆ. ನಿಶ್ಚಲವಾದ ಈ ಭೂಮಿ ಮೇಲೆ ಕುಳಿತುಕೊಂಡು ನಾವು ಕಳೆದ ಕೆಲವು ವರ್ಷಗಳಿಂದೀಚೆಗೆ ಜಗತ್ತಿನ ಅನೇಕ ಕಡೆಗಳಲ್ಲಿ ನಡೆದ ಭೂಕಂಪಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇವೆ.ಟರ್ಕಿಯಲ್ಲಿ ಭೂಕಂಪ ನಡೆಯಿತು. ಒರಿಸ್ಸಾದ ಕಥೆ ಅತ್ಯಂತ ಭೀಕರ, ಗುಜರಾತ್'ನಲ್ಲಿ ನಡೆದ ಭೂಕಂಪವು ಇಡೀ ವಿಶ್ವವನ್ನೇ ತಲ್ಲಣಿಸುವಂತೆ ಮಾಡಿತು. ಇವೆಲ್ಲ ವಿಶ್ವಪ್ರಸಿದ್ಧ ಭೂಕಂಪಗಳಾದರೆ ಕೇವಲ ಆಯಾ ಪ್ರದೇಶದವರ ಅರಿವಿಗೆ ಬಂದಂತಹ ಸಣ್ಣ ಪುಟ್ಟ ಭೂಕಂಪಗಳಿಗೆ ಲೆಕ್ಕವೇ ಇಲ್ಲವೆನ್ನಬಹುದು. ಭೂಕಂಪದ ಪರಿಣಾಮವು ಅಣು ಬಾಂಬಿನ ಸ್ಪೋಟನೆಗಿಂತಲೂ ಭೀಕರ. ಇದರ ಹಿಡಿತಕ್ಕೆ ಸಿಕ್ಕರೆ ವ್ಯಕ್ತಿ ಪರಿಸರವೆಲ್ಲವೂ ನಿರ್ನಾಮವಾಗುವುದು. ಅದರಿಂದ ಉದ್ಬವವಾಗುವ ದುಶ್ಚಟವನ್ನು ವರ್ಣಿಸಲಸಾಧ್ಯ. ಅಂತ್ಯ ದಿನದ ಕುರಿತು ಬೆಳಕು ಚೆಲ್ಲುವ ದೀರ್ಘವಾದ ಹದೀಸ್ ಒಂದರಲ್ಲಿ ಪ್ರವಾದಿ (ಸ.ಅ)ರವರು "ಭೂಕಂಪ ಅಧಿಕವಾಗಲಿದೆ". ಎಂದಿದ್ದಾರೆ. ಹಿಜ್ರಾ ಸಾವಿರದ ಇನ್ನೂರ ಐವತ್ತೊಂದರಲ್ಲಿ ಭಾರತದ ನಡೆದ ಭೂಕಂಪವೊಂದು ಅತ್ಯಂತ ಭೀಕರವಾಗಿತ್ತಂತೆ. ಸೂಫಿವರ್ಯರು ಉಮರ್ ಖಾಝಿ(ರ) ಅವರು ಅದನ್ನು ಒಂದು ಪದ್ಯದಲ್ಲಿ ವಿವರಿಸಿದ್ದಾರೆ.
*ಇಮಾಂ ಮಹ್'ದಿ(ರ) ಆಗಮನ*
ಇಮಾಂ ಮಹ್ದೀ, ಹೌದು ಮುಸ್ಲಿಂ ವಿಶ್ವದ ಖ್ಯಾತ ನಾಮರಲ್ಲೊಬ್ಬರು. ಅವರ ಬಗ್ಗೆ ನಾವೆಲ್ಲ ಕೇಳಿದ್ದೇವೆ ಅವರ ನಿಜ ನಾಮ ಮುಹಮ್ಮದ್ ಎಂದು. ಅವರ ತಂದೆಯ ಹೆಸರು ಅಬ್ದುಲ್ಲಾ. ಪ್ರವಾದಿ(ಸ.ಅ) ಮತ್ತು ಅವರ ನಾಮದಂತೆ, ಅವರು ಮದೀನಾ ಇಲ್ಲವೇ ಪಶ್ಚಿಮದ ಯಾವುದೇ ಒಂದು ರಾಷ್ಟ್ರದಲ್ಲಿ ಹುಟ್ಟಲಿದ್ದಾರೆ. ಮುಂದೆ ಅಲ್ಲಿಂದ ಬೈತುಲ್ ಮುಖದ್ದಸ್'ಗೆ ಯಾತ್ರೆ. ಒಂದು ರಮಳಾನ್ ತಿಂಗಳ ಪ್ರಥಮ ರಾತ್ರಿ ಚಂದ್ರ ಗ್ರಹಣ ಕಾಣಿಸಿಕೊಂಡ ಬೆನ್ನಲ್ಲೇ ಇಮಾಂ ಮಹ್'ದಿ(ರ) ಪ್ರತ್ಯಕ್ಷಗೊಳ್ಳುವರು. ಅದೇ ತಿಂಗಳ ಹದಿನೈದನೇಯ ದಿನದಂದು ಸೂರ್ಯ ಗ್ರಹಣ ಸಹ ಉಂಟಾಗಲಿದ್ದು ಇದು ವಿಶ್ವದ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ಒಂದು ರೋಮಾಂಚಕ ಬೆಳವಣಿಗೆಯಾಗಿರುತ್ತದೆ. ಅಂತ್ಯ ದಿನದ ಬಹು ದೊಡ್ಡ ದೃಷ್ಟಾಂತವೊಂದು ಕಾಣಿಸಿಕೊಳ್ಳುವಂತೆ ಈ ವಿದ್ಯಾಮಾನ ಪ್ರಾರಂಭವಾಗುತ್ತದೆ.
ಇದಾದ ನಂತರ ಆಕಾಶದ ಕಡೆಯಿಂದ ಓರ್ವ ವ್ಯಕ್ತಿ "ಸತ್ಯವು ಪ್ರವಾದಿ(ಸ.ಅ)ರವರ ಕುಟುಂಬಸ್ಥರಲ್ಲಿದೆ." ಎಂದು ಕರೆದು ಹೇಳುವರು. ಆ ಹೊತ್ತಿಗೆ ಇಮಾಂ ಮಹ್'ದಿ(ರ) ಅವರು ಮದೀನಾದಿಂದ ಮಕ್ಕಾದ ಕಡೆಗೆ ಬರುತ್ತಾರೆ. ಆಗ ಅವರಿಗೆ 40 ವರ್ಷ ಪ್ರಾಯವಾಗಿರುವುದು. ಮಕ್ಕಾದ ಮಖಾಂ ಇಬ್ರಾಹಿಂ ಮತ್ತು ರುಕ್ನ್ ಸ್ಥಳದ ನಡುವಿನಿಂದ ಅವರು ಎದ್ದೇಳುವರು. ಆಗ ಅವರೊಂದಿಗೆ ವಿಶ್ವ ಪ್ರವಾದಿ(ಸ.ಅ)ರವರ ಧ್ವಜ, ಅಂಗಿ, ಮತ್ತು ಖಡ್ಗ ಮೊದಲಾದ ಸಾಂಕೇತಿಕ ವಸ್ತುಗಳಿರುವುದು. ನಂತರ ಅವರು ಇಶಾ ನಮಾಝ್ ನಿರ್ವಹಿಸಿ ಅಲ್ಲಿ ಜಮಾಯಿಸಿದ ಜನರಿಗೆ ಏರು ಧ್ವನಿಯಲ್ಲಿ ಉಪದೇಶ ನೀಡುವರು. ಅವರನ್ನು ಪಂಡಿತರು, ಪಾಮರರು, ಸಾಮಾನ್ಯರು, ಸಜ್ಜನರು, ದುರ್ಜನರು ಹೀಗೆ ಎಲ್ಲರೂ ಕಾಗೆಗಳಂತೆ ಮುತ್ತುತ್ತಾರೆ. ಸುಮಾರು 313 ಜನರು ಅವರಲ್ಲಿ ಬೈಅತ್ ಮಾಡುವರು. ನಂತರ ಶಾಮಿನಿಂದ ಅಬ್'ದಾಲ್'ಗಳು, ಈಜಿಪ್ಟ್'ನಿಂದ ನುಜಬಾಹ್'ಗಳಾದ ಔಲಿಯಾಗಳು, ಮೊದಲಾದವರು ಮಹ್'ದಿ ಇಮಾಮರ ಹತ್ತಿರ ಹೋಗುತ್ತಾರೆ. ಅನ್ಯಾಯವನ್ನು ವಿರೋಧಿಸಿ ನ್ಯಾಯ ಸ್ಥಾಪಿಸಲು ಹೊರಟ ಇಮಾಂ ಮಹ್'ದಿ(ರ)ರವರಿಗೆ ಅಲ್ಲಾಹನು ಖುರಾಸಾನದಿಂದ ಕೆಲವು ಸಹಾಯಕರನ್ನು ಕಳುಹಿಸಿಕೊಡುವನು. ಅವರೆಲ್ಲ ಬಿಳಿ ಬಣ್ಣದ ಅಂಗಿಗಳನ್ನು ಧರಿಸಿರುತ್ತಾರೆ. ಅವರ ಕೈಯ್ಯಲ್ಲಿ ಕಪ್ಪು ಧ್ವಜಗಳಿದ್ದು ಪ್ರತಿಯೊಬ್ಬರೂ ಕಪ್ಪು ಟೊಪ್ಪಿಯನ್ನು ಧರಿಸಿರುತ್ತಾರೆ. ತಮೀಮ್ ಗೋತ್ರದ ಶುಐಬ್ ಬಿನ್ ಸ್ವಾಲಿಹ್ ಎಂಬ ವ್ಯಕ್ತಿ ಈ ತಂಡದ ನೇತೃತ್ವವನ್ನು ವಹಿಸುತ್ತಾರೆ.
ಇಮಾಂ ಮಹ್'ದಿ(ರ) ಬರುತ್ತಾರೆ ಅಂತ ಊರೆಲ್ಲ ಎದುರು ನೋಡುತ್ತಾ ಇರುವಂತೆ ಓರ್ವ ಮಲಕ್ " ಇವರೇ ಅಲ್ಲಾಹನ ಖಲೀಫರಾದ ಇಮಾಂ ಮಹ್'ದೀ. ನೀವು ಅವರನ್ನು ಹಿಂಬಾಲಿಸಿರಿ" ಎಂದು ಕರೆದು ಹೇಳುವರು ತಕ್ಷಣವೇ ಜನರೆಲ್ಲ ಅವರ ಕಡೆಗೆ ಧಾವಿಸಿ ಹೋಗುವರು. ಅವರನ್ನು ಕಾಣಬೇಕೆಂದು ಬಯಸಿದ ಜನರು ಇಮಾಮರನ್ನು ಮುಕ್ತ ಕಂಠದಿಂದ ಅಂಗೀಕರಿಸುತ್ತಾರೆ. " ನಿಮ್ಮ ಮೂಲಕ ಅಲ್ಲಾಹನು ನಮ್ಮನ್ನು ಶಕ್ತಗೊಳಿಸಲಿ". ಎಂದು ಪ್ರಾರ್ಥಿಸುವರು. ಮೂರು ಸಾವಿರ ಮಲಕ್'ಗಳ ಸುಭದ್ರ ಕಾಲವನ್ನು ಅಲ್ಲಾಹನು ಇಮಾಮರಿಗೆ ಒದಗಿಸಿಕೊಡುವನು, ಅವರು ಮಹ್'ದೀ ಇಮಾಮರ ವಿರೋಧಿಗಳೊಂದಿಗೆ ಹೋರಾಡುವರು. ಅಸ್'ಹಾಬುಲ್ ಕಹ್ಫ್'ರವರು ಆ ದಿನ ಮಹ್'ದೀ ಇಮಾಮರ ಕಾವಲುಭಟರಾಗಿರುತ್ತಾರೆ. ಇಮಾಂ ಮಹ್'ದಿ (ರ)ಅವರು ಮಕ್ಕಾಕ್ಕೆ ತೆರಳಿದ ಸಂದರ್ಭ ಕ'ಅ್'ಬಾ ಶರೀಫಿನೊಳಗೆ ದಫನಗೊಳಿಸಿದ ನಿಧಿಯನ್ನು ಹೊರ ತೆಗೆದು ಅಲ್ಲಾಹನ ಮಾರ್ಗದಲ್ಲಿ ವಿನಿಯೋಗಿಸುವರು. ಕೆಲವರು ಅವರಲ್ಲಿ ದೃಷ್ಟಾಂತ ತೋರಿಸುವಂತೆ ಪಟ್ಟು ಹಿಡಿಯುವರು. ಕೂಡಲೇ ಇಮಾಮರು ಆಕಾಶದಲ್ಲಿ ಹಾರಾಡುತ್ತಿರುವಂತೆ ಪಕ್ಷಿಗಳಿಗೆ ಅಂಗ ಸಂಜ್ಞೆ ಮಾಡುವರು. ತಕ್ಷಣ ಹಕ್ಕಿಗಳೆಲ್ಲ ಮಹ್'ದೀ ಇಮಾಮರ ಕೈ ಮೇಲೆ ಬಂದು ಬೀಳುತ್ತದೆ. ಇಮಾಮರು ತನ್ನ ಜವಾಬ್ದಾರಿಯನ್ನು ನೀರು ಕುಡಿದಷ್ಟೇ ಸಲೀಸಾಗಿ ನಿರ್ವಹಿಸುವರು. ಸುನ್ನತ್ ಅನ್ನು ನೆಲೆಗೊಳಿಸುವರು. ಬಿದ್'ಅತ್ ಅನ್ನು ತೊಲಗಿಸುವರು. ಸುಲೈಮಾನ್ ನಬಿ(ಅ) ಮತ್ತು ಹಝ್ರತ್ ದ್ಸುಲ್ ಕರ್ ನೈನ್(ರ) ಅವರುಗಳು ಹೇಗೆ ವಿಶ್ವವನ್ನು ಸ್ವಾಧೀನಪಡಿಸಿಕೊಂಡರೋ ಅದೇ ರೀತಿ ಈ ವಿಶ್ವದ ಮೇಲಿನ ಪೂರ್ಣ ಸ್ವಾಧೀನತೆ ಇಮಾಮರಿಗೂ ಲಭಿಸುವುದು. ಅದೂ ಅಲ್ಲದೆ ಇಮಾಮರ ಆಗಮನದಿಂದ ಅಲ್ಲಾಹನು ಮುಸ್ಲಿಮರ ಮೇಲೆ ಧಾರಾಳ ಅನುಗ್ರಹವನ್ನು ಸುರಿದುಕೊಡುವನು. ದಜ್ಜಾಲ್ ಬರುವವರೆಗೆ ವಿಶ್ವವು ಇದೇ ರೀತಿ ಸುಸ್ಥಿತಿಯಿಂದ ಮುಂದುವರಿಯುವುದು.
*ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳದ, ಇಸ್ಲಾಮಿನ ಶತ್ರುಗಳು ಕೂಡಾ ಅಲ್ ಅಮೀನ್(ಸತ್ಯವಂತ) ಎಂದು ಕರೆದ ಲೋಕ ನೇತಾರ ಸಯ್ಯುದುನಾ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು 1400 ವರ್ಷಗಳ ಮುಂಚೆ ಹೇಳಿದ ಭವಿಷ್ಯ ನುಡಿಯು ನಾವೀಗ ನೋಡುತ್ತಾ ಇದ್ದೇವೆ..ಇನ್ನು ಮಹ್'ದೀ ಇಮಾಮ್(ರ) ರವರ ಕುರಿತು ಹೇಳಿದ ಭವಿಷ್ಯ ನುಡಿಯು ಅತೀ ಸಮೀಪದಲ್ಲಿದೆ ಎಂಬುವುದರಲ್ಲಿ ಸಂಶಯವಿಲ್ಲ.*
*ದಜ್ಜಾಲ್'ನ ಆಗಮನ*
ಅಂತ್ಯ ದಿನದಂದು ದೇವರ ಅವತಾರ ತಳೆದು ಕಠಿಣ ಹೃದಯಿಯಾಗಿ ಜನರನ್ನು ಪೀಡಿಸಿ ವಂಚಿಸಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಹೆಣಗುವ ಓರ್ವ ದುಪ್ಟ ವ್ಯಕ್ತಿಯ ಆಗಮನವಾಗುತ್ತದೆ. ಆ ಕಾಲದಲ್ಲಿ ಇಡೀಯ ವಿಶ್ವದ್ಯಾಂತ ಹಿಂಸೆ, ವಿದ್ವೇಷಗಳು ಹೊತ್ತಿ ಉರಿಯುವುದು ಗಲಭೆ ಗೊಂದಲ ಫಿತ್ನ ಫಸಾದ್'ಗಳು ವಿದ್ವೇಷಯುಕ್ತವಾಗಿ ಸಾಗುವುದು. ಇದರಿಂದ ಎಲ್ಲ ವರ್ಗದ ಜನರೂ ಭೀಕರ ಸಂಕಷ್ಟಕ್ಕೆ ಸಿಲುಕಿ ಭ್ರಮನಿರಸಗೊಳ್ಳುವರು. ದ್ವೇಷವನ್ನು ದ್ವೇಷದಿಂದಲೂ ಹಿಂಸೆಯನ್ನು ಹಿಂಸೆಯಿಂದಲೂ ಎದುರಿಸುವ ವಿಲಕ್ಷಣ ಬೆಳವಣಿಗೆ ಅಂದು ಎಲ್ಲೆಡೆ ಗೋಚರಿಸುವುದು. ಈ ದುರ್ದೆಸೆಗೆ ಕಾರಣಕರ್ತನಾದ ವ್ಯಕ್ತಿಯೇ ದಜ್ಜಾಲ್, ಅವನ ಫಿತ್ನ ಭಯಂಕರವಾದುದು. "ಆದಂ ನಬಿ ಅವರು ಜನನದಿಂದ ಜಗತ್ತಿನ ಕೊನೆಯ ತನಕ ಅಷ್ಟು ಭೀಕರವಾದ ಫಿತ್ನ ಬೇರೊಂದಿಲ್ಲ ಎಂದಿದ್ದಾರೆ. ಪ್ರವಾದಿ(ಸ.ಅ)ರವರು ಆತನ ಫಿತ್ನ ಕೇವಲ ಒಂದೆರಡು ದಿನಗಳಲ್ಲಿ ಪರ್ಯಾವಸಾನವಾಗುವುದಿಲ್ಲ. ಪೂರ್ವ ಕಾಲದಲ್ಲಿ ಆಗಿ ಹೋದ ಪ್ರತಿಯೋರ್ವ ಪ್ರವಾದಿಯೂ ದಜ್ಜಾಲಿನ ಬಗ್ಗೆ ತಮ್ಮ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆಂದು ಹದೀಸ್ ಇದೆ. ಓರ್ವ ವ್ಯಕ್ತಿ ಪ್ರವಾದಿ (ಸ.ಅ)ರವರನ್ನು ಸಮೀಪಿಸಿ " ಓ ಪ್ರವಾದಿವರ್ಯರೇ(ಸ.ಅ) ದಜ್ಜಾಲಿನ ಬಗ್ಗೆ ನನ್ನಲ್ಲಿ ವಿವರಿಸಿ. ಆತ ಜನಿಸುವುದು ಮಾನವ ಕುಲದಲ್ಲೇ ಅಥವಾ ಇಬ್ಲೀಸನ ಕುಲದಲ್ಲೇ? ಎಂದು ಕೇಳಿದರು. ಅದಕ್ಕೆ ಉತ್ತರಿಸುತ್ತಾ ಪ್ರವಾದಿ (ಸ.ಅ) ಹೀಗೆಂದು ವಿವರಿಸಿದರು. "ಅವನು ಆದಮರ ಸಂತತಿಯಲ್ಲೇ ಜನಿಸಿದ್ದಾನೆ. ಅವನ ತಾಯಿ ಮಾತ್ರ ಇಬ್ಲೀಸನ ಸಂತತಿಗೆ ಸೇರಿದವಳು. ಅವನು ಯಹೂದಿ ಪಂಥದ ಅನುಯಾಯಿ ಆಗಿರುವನು".
ದಜ್ಜಾಲಿನ ಹೆಸರಿನ ಬಗ್ಗೆ ಪಂಡಿತರಲ್ಲಿ ಭಿನ್ನಭಿಪ್ರಾಯವಿದೆ. ಕೆಲವರು ಅವನ ಹೆಸರು "ಸ್ವಾಯಿಫ್ ಬಿನ್ ಸ್ವಯ್ಯಾದ್" ಎಂದಿದ್ದಾರೆ. ಮತ್ತೆ ಕೆಲವರು ಅಬ್ದುಲ್ಲ ಎಂದಿರುವರು. ದಜ್ಜಾಲ್ ಎಂಬ ಅರಬಿ ಶಬ್ಧ. "ಮಹಾಸುಳ್ಳ" ಎಂಬ ಅರ್ಥವನ್ನು ಪಡೆಯುತ್ತದೆ.
ದಜ್ಜಾಲ್'ನ ಆಗಮನದ ಉದ್ದೇಶವೇ ಜನರನ್ನು ದಾರಿತಪ್ಪಿಸುವುದು, ಸಜ್ಜನರನ್ನು ಸದ್ಭಕ್ತರನ್ನು, ಹೇಗಾದರೂ ಮಾಡಿ ಸತ್ಯ ಪಥದಿಂದ ಹಿಮ್ಮೆಟ್ಟಿಸಬೇಕು ಎನ್ನುವುದು ಅವನ ಹೆಬ್ಬಯಕೆ, ಒಮ್ಮೆ ಸುಬ್'ಹಿ ನಮಾಜಿನ ನಂತರ ಪ್ರವಾದಿ(ಸ) ಅವರು ತಮ್ಮ ಸಹಾಬಿಗಳೊಡನೆ ಮದೀನಾ ಮಸೀದಿಯಲ್ಲಿ ಕುಳಿತಿದ್ದರು. ಅಷ್ಟರಲ್ಲಿ ಅಬ್ದುಲ್ಲಾಹಿಬ್'ನು ಮಸ್'ಊದ್(ರ) ಮತ್ತು ಮುಹಮ್ಮದ್ ಬಿನ್ ಸಲಾಂ ಎಂಬಿಬ್ಬರು ಸ್ವಹಾಬಿಗಳು ಅಲ್ಲಿಗೆ ಬಂದರು. ನಂತರ ಪ್ರವಾದಿ(ಸ.ಅ)ರವರನ್ನು "ಓ ಪ್ರವಾದಿಗಳೇ! ನಾವು ಇದುವರೆಗೂ ಕಂಡು ಕೇಳರಿಯದಂಥ ಒಂದು ಆಶ್ಚರ್ಯಕರ ಸಂಗತಿಯೊಂದಿಗೆ ನಿಮ್ಮ ಹತ್ತಿರ ಬಂದಿದ್ದೇವೆ". ಎಂದರು.
ಏನದು? ಪ್ರವಾದಿ(ಸ.ಅ) ರವರು ಕೇಳಿದರು. " ನಾವು ಮದೀನಾದಲ್ಲಿ ನಮ್ಮ ಅಮೀರರ ಹತ್ತಿರ ಇದ್ದೆವು. ಇದ್ದಕ್ಕಿದ್ದಂತೆ ಓರ್ವ ಯಹೂದಿಯ ಮನೆಯಲ್ಲಿ ವಿಚಿತ್ರ ಮಗುವೊಂದು ಜನಿಸಿದ ಸುದ್ದಿ ದೊರೆಯಿತು. ದಜ್ಜಾಲ್ ಹುಟ್ಟಿದ ಕ್ಷಣಾರ್ಧದಲ್ಲಿ ಎದ್ದು ನಿಂತು ತನ್ನ ತಾಯಿಯ ಹೆಸರೆತ್ತಿ ಕರೆದನು. ಆಮೇಲೆ ಏನೋ ಪಠಿಸಿ ತನ್ನ ದೇಹದ ಮೇಲೆ ಊದಿಕೊಳ್ಳುತ್ತಲೇ ಅವನು ದೊಡ್ಡ ಪರ್ವದಂತೆ ಆಗಿ ಬಿಟ್ಟ. ನೋಡುಗರನ್ನು ಇದು ಬೆರಗುಗೊಳಿಸಿತು. ನಂತರ ಹಂತ ಹಂತವಾಗಿ ಅವನ ದೇಹದ ಗಾತ್ರ ಬೆಳೆಯುತ್ತಾ ಬಂತು. ಜನರು ಅಲ್ಲಿ ಕಾಗೆಗಳಂತೆ ಜಮಾಯಿಸತೊಡಗಿದರು. ಎಲ್ಲರಲ್ಲೂ ಕುತೂಹಲ. ನಮ್ಮ ಮುಖಂಡರು ಅವನ ಮನೆಗೆ ಹೋಗಿ ಆತನನ್ನು ನೋಡಲು ಅನುಮತಿ ಕೋರಿದರು. ಅವರೊಂದಿಗೆ ನಾವು ಕೂಡಾ ಮನೆಗೆ ತೆರಳಿದೆವು.
ಆತ ತನ್ನ ತಾಯಿಯ ಹತ್ತಿರ ಕುಳಿತಿರುವ ದೃಶ್ಯ ನಮ್ಮ ದೃಷ್ಟಿಗೆ ಬಿತ್ತು. ನಮ್ಮನ್ನು ನೋಡಿದ ಅವನ ತಾಯಿ ನಮ್ಮೆಡೆಗೆ ಬೆರಳು ತೋರಿಸುತ್ತಾ. "ನೋಡಪ್ಪಾ ನಿನ್ನನ್ನು ಕಾಣಲು ಬಂದಿರುವ ಈ ಇಬ್ಬರು ವ್ಯಕ್ತಿಗಳು ಪ್ರವಾದಿಯ ಸ್ವಹಾಬಿಗಳು ಅವರಿಬ್ಬರು ನಿನ್ನನ್ನು ನೋಡುತ್ತಿದ್ದಾರೆ ಎಂದರು. 'ಮುಹಮ್ಮದ್'. ಎಂಬ ನಾಮ ಕಿವಿಗೆ ಬಿದ್ದೊಡನೆ ದಜ್ಜಾಲಿನ ದ್ವೇಷ ನೆತ್ತಿಗೇರಿತು. ಮುಹಮ್ಮದ್ ನನ್ನ ಶತ್ರು ನನಗೆ ಅವನಲ್ಲದ ಬೇರೆ ಶತ್ರುಗಳಿಲ್ಲ. " ಎನ್ನುತ್ತಾ ಏನೋ ಪಠಿಸಿ ತನ್ನ ದೇಹದ ಮೇಲೆ ಊದಿ, ಇದರಿಂದ ಅವನ ಗಾತ್ರ ಮತ್ತಷ್ಟು ಎತ್ತರವಾಗತೊಡಗಿತು. ಆಗ ನಮಗೆ ಅವನು ದಜ್ಜಾಲ್ ಆಗಿರಬಹುದು ಎಂದು ಖಚಿತವಾಯಿತು ಎಂದರು ಇದನ್ನು ಗಮನಿಸಿದ ಪ್ರವಾದಿ(ಸ.ಅ) ಅವರು ಆತನಲ್ಲಿರುವ ಬೇರೆ ಸಂಕೇತಗಳೇನು ಎಂದು ಕೇಳಿದರು.
"ಅವನಿಗೆ ಎಡಗಣ್ಣು ಇಲ್ಲ. ಬಲಗಣ್ಣು ಮಂಕಾಗಿದೆ. ಕರ್ಕಶವಾದ ಕೂದಲು, ಅವನ ಕಣ್ಣುಗಳ ನಡುವೆ " ಇವನು ಸತ್ಯ ನಿಷೇಧಿ. ಅಲ್ಲಾಹನ ಶಾಪಕ್ಕೊಳಗಾದವನು" ಎಂದು ಬರೆಯಲ್ಪಟ್ಟಿದೆ. ನಾಡಿನ ಜನರೆಲ್ಲ ಆತನನ್ನ ದಜ್ಜಾಲ್ ಎಂದೇ ಕರೆಯುತ್ತಿದ್ದಾರೆ." ಎಂದರು.
ಈ ಒಂದು ಅನಿಷ್ಟ ವಿದ್ಯಮಾನವನ್ನು ಕಾಣಲು ಪ್ರವಾದಿ(ಸ.ಅ) ಅವರು ತನ್ನ ಸ್ವಹಾಬಿಗಳ ಜತೆಯಲ್ಲಿ ಪ್ರಯಾಣ ಹೊರಟರು. ಅವನ ಬಾಗಿಲ ಬಳಿ ತಲುಪಿದಾಗ ಪ್ರವಾದಿ(ಸ.ಅ) ರವರು ಜತೆಗಿರುವವರೊಂದಿಗೆ ಸೂರತು ಸಜದ ಓದುವಂತೆ ನಿರ್ದೇಶಿಸಿದರು. ಸ್ವಹಾಬಿಗಳಲ್ಲೊಬ್ಬರು ಬಾಗಿಲು ಮುಟ್ಟಿದರು. ಆತನ ತಾಯಿ ಬಂದು ಬಾಗಿಲು ತೆರೆದರು. ಒಳಗಿನಿಂದ ನನ್ನ ಶತ್ರುವಿಗೆ ಬಾಗಿಲು ತೆರೆ ಎಂದು ಕರೆದು ಹೇಳುವುದು ಕೇಳಿಸಿತು. ಬಾಗಿಲು ತೆರೆಯಲ್ಪಟ್ಟಿತು. ಪ್ರವಾದಿ(ಸ.ಅ)ಅವರು ಎಡಗಾಲನ್ನು ಮುಂದಿರಿಸಿ ಮನೆ ಒಳಗೆ ಪ್ರವೇಶಿಸಿದರು. ಆತ ಪ್ರವಾದಿ(ಸ.ಅ) ರವರನ್ನು ದಿಟ್ಟಿಸಿ ಕ್ಷಣಕಾಲ ಮೌನವಾದ ಮತ್ತೆ ಏನನ್ನೋ ಪಠಿಸಿ ಮೊದಲಿನಂತೆ ದೇಹಕ್ಕೆ ಊದಿಕೊಂಡ. ಅಷ್ಟೇ ತಡ ಅವನ ದೇಹ ಮತ್ತಷ್ಟು ಭೀಮಾಕಾರವನ್ನು ತಳೆಯಿತು. ಅವನ ಕಂಗಳ ಮಧ್ಯೆ "ಈತ ಅಲ್ಲಾಹನನ್ನು ನಿಷೇಧಿಸಿದ ದಜ್ಜಾಲ್" ಎಂದು ಬರೆದುದು ಕಂಡು ಬಂತು. ಅವೇಶಗೊಂಡ ಪ್ರವಾದಿ(ಸ) ಅವರು "ಓ ದುಪ್ಠ ಅಲ್ಲಾಹನು ಒಬ್ಬಂಟಿಗ, ಮುಹಮ್ಮದ್ ಅವನ ಸಂದೇಶವಾಹಕರು" ಎಂಬ ಪ್ರಮಾಣ ವಚನ ನುಡಿ ಎಂದು ಹೇಳಿದರು.
*"ನಾನೇ ನಿಮ್ಮ ದೇವರು"*
ನಾನೇ ನಿಮ್ಮ ದೇವರು ದಜ್ಜಾಲ್ ಪ್ರತಿಕ್ರಯಿಸಿದ. ಇದನ್ನು ಕೇಳಿದ ಉಮರ್(ರ) ಅವರು ಅಕ್ರೋಶಗೊಂಡು ತನ್ನ ಒರೆಯಿಂದ ಖಡ್ಗವನ್ನು ಮೆಲ್ಲಗೆ ಹೊರ ತೆಗೆದು ಜೋರಾಗಿ ಅವನ ತಲೆಗೆ ಬಾರಿಸಿದರು. ಆದರೆ ಆತನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಅವನ ದೇಹದ ಕಠಿಣತನ ಎಷ್ಟು ತೀವ್ರವಾಗಿತ್ತೆಂದರೆ ಉಮರ್(ರ) ಅವರು ಬೀಸಿದ ಖಡ್ಗವು ಕಬ್ಬಿಣಕ್ಕೆ ಕಲ್ಲೆಸೆದಂತೆ ಅವರ ಮೇಲೆ ಹಿಂತಿರುಗಿ ಬಂತು. ಇದರಿಂದ ಉಮರ್(ರ) ಅವರ ದೇಹದಲ್ಲಿ ನಾಲ್ಕು ಬೆರಳು ಗಾತ್ರದ ಗಾಯ ಉಂಟಾಯಿತು. ಇದನ್ನು ಗಮನಿಸುತ್ತಿದ್ದ ನಬಿ(ಸ.ಅ) ಅವರು "ಉಮರ್ ನೀವು ಥಳಿಸುವುದೇ? ಅವನು ಅಂತ್ಯ ದಿನದ ತನಕ ಈ ಭೂಮಿಯಲ್ಲಿ ಜೀವಂತವಾಗಿರುವನು. ಅನೇಕರು ಆತನನ್ನು ಹಿಂಬಾಲಿಸುವರು. ಹಿಂಬಾಲಕರನ್ನು ಆತ ದಾರಿ ತಪ್ಪಿಸಿ ನರಕಕ್ಕೆ ಕೊಂಡೊಯ್ಯುವನು". ಎಂದು ಹೇಳಿದರು.
ನಂತರ ಪ್ರವಾದಿ(ಸ.ಅ) ಅಲ್ಲಿಂದ ಸ್ವಹಾಬಿಗಳೊಂದಿಗೆ ಮದೀನಾದೆಡೆಗೆ ಯಾತ್ರೆ ಬೆಳೆಸಿದರು. ಕೆಲವು ಸ್ವಹಾಬಿಗಳು ಮಾತ್ರ ಅಲ್ಲೇ ಉಳಿದುಕೊಳ್ಳುತ್ತಾರೆ. ದಜ್ಜಾಲ್ ಮತ್ತು ಅವರ ನಡುವೆ ಒಂದು ಭೀಕರ ಕಾಳಗ ಏರ್ಪಟ್ಟಿತು. ಬಾಣ ಮಚ್ಚು ಕಲ್ಲುಗಳನ್ನು ಎಸೆದು ಅವರು ದಜ್ಜಾಲನ್ನು ಅಟ್ಟುತ್ತಾರೆ. ಆದರೆ ಅವನ ಮುಂದೆ ಎಲ್ಲ ಪ್ರಯತ್ನವೂ ವಿಫಲವಾಗುತ್ತದೆ. ಅವನನ್ನು ಮಟ್ಟ ಹಾಕಬೇಕೆಂದು ಬಯಸಿದ ಸ್ವಹಾಬಿಗಳಿಗೆ ಅವನೊಂದಿಗೆ ಕಾದಾಡಿ ಜಯಿಸಲು ಸಾಧ್ಯವಾಗದೇ ಹೋದಾಗ ಅವರು ಒಂದು ಗುಹೆಯ ಒಳಗೆ ನುಗ್ಗುತ್ತಾರೆ. ದಜ್ಜಾಲನು ಒಂದು ದೊಡ್ಡ ಪರ್ವತವನ್ನು ಎತ್ತಿ ಹಾಕಿ ಗುಹೆಯ ದ್ವಾರವನ್ನು ಮುಚ್ಚಿದನು. ಅಲ್ಲಿ ಅವರು ಅಟ್ಟಹಾಸಗೈದರು. ಈ ಶಬ್ಧವನ್ನು ಹಝ್ರತ್ ಉಮರ್(ರ) ರವರಿಗೆ ಅಲ್ಲಾಹು ಕೇಳಿಸಿದನು.
ಕೂಡಲೇ ಅವರು ಪ್ರವಾದಿ(ಸ.ಅ)ರವರ ಹತ್ತಿರ ಹೋಗಿ ವಿವರಿಸಿದರು. ಪ್ರವಾದಿ(ಸ.ಅ) ಅವರು ಇದೊಂದು ಶೋಚನೀಯ ಸಂಗತಿ ಎನ್ನುತ್ತಾ ಅಲ್ಲಾಹನಲ್ಲಿ ಕಣ್ಣೀರಿಟ್ಟು ಸ್ವಹಾಬಿಗಳ ವಿಮೋಚನೆಗಾಗಿ ಪ್ರಾರ್ಥಿಸಿದರು. ಆ ತಕ್ಷಣ ಸತ್ಯ ವಿಶ್ವಾಸಿಗಳನ್ನು ಬಂಧನದಿಂದ ಬಿಡುಗಡೆಗೊಳಿಸಿ ಕಾಫ್ ಮಲೆಯ ತಳಭಾಗದಲ್ಲಿ ದಜ್ಜಾಲ್'ನನ್ನು ಕಟ್ಟಿ ಹಾಕುವಂತೆ ಜಿಬ್ರೀಲ್(ಅ)ರಿಗೆ ಅಲ್ಲಾಹನ ಆಜ್ಞೆ ಬಂತು. ದೇವಚರ ಜಿಬ್ರೀಲ್(ಅ)ರವರು ಸ್ವಹಾಬಿಗಳನ್ನು ಬಿಡುಗಡೆಗೊಳಿಸಿದರಲ್ಲದೆ ದಜ್ಜಾಲ್ ಎಂಬ ದುಷ್ಟನನ್ನು ತನ್ನ ಬಿಗಿ ಮುಷ್ಟಿಯಲ್ಲಿ ಹಿಡಿದು ಕಾಫ್ ಮಲೆಯ ಕೆಳಗೆ ಸಂಕೋಲೆಯಿಂದ ಕಟ್ಟಿ ಹಾಕಿದರು.
ಇನ್ನು ಅಂತ್ಯ ದಿನದಂದು ಅವನು ಅಲ್ಲಿಂದ ವಿಶ್ವ ಸಂಚಾರ ಕೈಗೊಳ್ಳುತ್ತಾನೆ. ಒಂದು ಕೈಯ್ಯಲ್ಲಿ ಸ್ವರ್ಗ ಮತ್ತೊಂದು ಕೈಯ್ಯಲ್ಲಿ ನರಕವನ್ನು ಹಿಡಿದುಕೊಂಡು ತಾನೇ ದೇವರು ಎಂದು ವಾದಿಸುತ್ತಾ ಅವುಗಳ ಸತ್ಯಾ ಸತ್ಯಗಳನ್ನು ವಿವರಿಸುತ್ತಾನೆ. ಹಾಗೆ ಮಾಡುವಾಗ ಅನೇಕರು ಅವನ ವಂಚನೆಗೆ ಸಿಲುಕಿ ದಾರಿ ತಪ್ಪಿ ಬಿಡುತ್ತಾರೆ. ಆದರೆ ಸಜ್ಜನರು ಎಲ್ಲಿಯೂ ಅವನ ಕುತಂತ್ರಕ್ಕೆ ಬಲಿಯಾಗುವುದಿಲ್ಲ. ಅವನ ರಂಗ ಪ್ರವೇಶ ಮಾಡುವ ಪ್ರಥಮ ಹಂತದಲ್ಲಿ ಪ್ರವಾದಿತ್ವವನ್ನು ವಾದಿಸುವನು. ನಂತರ "ನಾನೇ ನಿಮ್ಮ ದೇವರು" ಎಂದು ವಾದಿಸುವನು. ವಿವಿಧ ತರದ ಫಲಹಾರಗಳು ಮತ್ತು ಭಕ್ಷ್ಯ ಪದಾರ್ಥಗಳಿಂದ ತಯಾರಿಸಲಾದ ಸ್ವರ್ಣ ಮತ್ತು ಬೆಳ್ಳಿಯ ಆಕಾರದ ಎರಡು ಪರ್ವತಗಳನ್ನು ಅವನು ಎತ್ತಿಕೊಂಡು ಬರುವನು. ದಜ್ಜಾಲಿನ ಸೆಳೆತಕ್ಕೆ ಸಿಗುವ ಜನರು ಅದರಿಂದ ಭಕ್ಷ್ಯ ಪದಾರ್ಥಗಳನ್ನು ತೀರಿದಾಗ ಅವರ ಮನಸ್ಸು ಅವನ ದೈವತ್ವವನ್ನು ಒಪ್ಪಿಕೊಳ್ಳುತ್ತದೆ. ಅದು ಅವರಿಗೆ ಅವನ ವರಪ್ರಸಾದವಾಗುತ್ತದೆ. ಅವರು "ಖಂಡಿತಾ ನೀನೇ ನಮ್ಮ ನೈಜ ಪ್ರಭು" ಎನ್ನುವರು (ನ'ಊದ್ಸುಬಿಲ್ಲಾಹ್!)
ದಜ್ಜಾಲ್ ತನ್ನ ದೈವತ್ವವನ್ನು ಸಾಬೀತು ಪಡಿಸಲು ತೋರಿಸುವ ದೃಷ್ಟಾಂತಗಳು ಅನೇಕ. ಕುರುಡುತನವನ್ನು ನೀಗಿಸುವ ಸತ್ತವರನ್ನು ಬದುಕಿಸುವವನು, ಅಷ್ಟೇ ಅಲ್ಲದೆ ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ಹಿಡಿದು ದ್ಸಬಹ್ ಮಾಡಿ ಕೆಳಗೆ ಹಾಕಿದಾಗ ಮತ್ತೆ ಅವು ಜೀವ ತಳೆದು ಮೇಲಕ್ಕೆ ಹಾರಿ ಹೋಗುತ್ತದೆ.
*ಅಲ್ಲಾಹುವೇ, ದಜ್ಜಾಲಿನ ಫಿತ್ನ'ಗಳಿಂದ ನಮ್ಮೆಲ್ಲರನ್ನೂ ರಕ್ಷಿಸು. ಆಮೀನ್*
*ಮುಂದುವರೆಯುತ್ತದೆ....*

Comments