Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *9*



*ಶವ ತಿನ್ನದ ಕಾಡಿನ ರಾಜ ಸಿಂಹ*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

       ▪ಕಾಡಿನ ರಾಜನೆಂದೇ ಖ್ಯಾತಿ ಪಡೆದಿರುವ ಒಂದು ಕ್ರೂರ ಪ್ರಾಣಿಯಾಗಿದೆ ಸಿಂಹ. ಕಾಡು ಪ್ರಾಣಿಗಳಲ್ಲಿ ಕ್ರೂರತೆ, ದೈರ್ಯ, ಎದೆಗಾರಿಕೆ, ನಿರ್ಭಯತೆ ಮುಂತಾದ ಗುಣಗಳಿರುವ ಈ ಪ್ರಾಣಿಯೊಂದಿಗೆ ಸರಿ ಸಮಾನಾದ ಜೀವಿ ಬೇರೊಂದಿಲ್ಲ. ಕಾಡಿನ ಎಲ್ಲಾ ಜೀವರಾಶಿ ಸಾಮ್ರಾಜ್ಯದ ಅಧಿಪತಿಯಾಗಿರುವ ಸಿಂಹಕ್ಕೆ ಕಾಡಿನಲ್ಲಿ ಇತರ ಕಾಡು ಪ್ರಾಣಿಗಳೊಂದಿಗೆ ಯಾವ ಒಡನಾಟವೋ ಸಹವಾಸವೋ ಇಲ್ಲ. ಮಾತ್ರವಲ್ಲ ಇತರರ ಕಷ್ಟ ಸುಖದ ಬಗ್ಗೆ ಗಮನ ಕೊಡುವಂತೆಯೂ ಇಲ್ಲ. ಕಾಡು ನನ್ನದು. ಇದು ನನ್ನ ಸಾಮ್ರಾಜ್ಯ. ಇಲ್ಲಿ ಯಾರನ್ನೂ ಯಾವಾಗ ಬೇಕಾದರೂ ಕೊಂದು ತಿನ್ನಬಹುದು. ನನಗೆ ಸಮಾನ ಯಾರೂ ಇಲ್ಲ ಎಂಬ ಘೋಷಣೆ ಮಾತ್ರ.
  ▪ಸಿಂಹಕ್ಕೆ ಧೈರ್ಯ ಇರುವಂತೆಯೇ ಅಂಜುಕುಳಿತನ ಮತ್ತು ಪುಕ್ಕಲುತನವೂ ಇದೆ. ಹುಂಜ ಕೋಳಿಯ ಮತ್ತು ಬೆಕ್ಕಿನ ಕೂಗು ಕೇಳಿದರೆ ಇದಕ್ಕೆ ಎಲ್ಲಿಲ್ಲದ ಭಯ. ಅಂತೆಯೇ ಬೆಂಕಿಯನ್ನು ಕಂಡರೆ ಹೈರಾನಾಗಿಬಿಡುತ್ತದೆ.
  ▪ಯಾವಾಗಲೂ ಕೋಪೋದ್ರೇಕ ಮತ್ತು ರೋಷದಲ್ಲಿರುವ ಸಿಂಹ ಮಹಿಳೆಯರನ್ನು ಆಕ್ರಮಿಸುವುದು ಬಹಳ ಕಡಿಮೆ. ಮಹಿಳೆಯರನ್ನು ಕಂಡರೆ ದೂರ ಸರಿಯುತ್ತದೆ. ಋತುಸ್ರಾವ ಇರುವ ಮಹಿಳೆಯರ ಗುಮಾನಿಗೇ ಬರುವುದಿಲ್ಲ.
  ▪ಜೊಲ್ಲುರಸ ಬಹಳ ಕಡಿಮೆ ಪ್ರಮಾಣ ಇರುವ ಈ ಪ್ರಾಣಿಗೆ ಬಾಯಿ ವಾಸನೆ ತುಂಬಾ ಹೆಚ್ಚು. ಮಾತ್ರವಲ್ಲ ಆ ಕಾರಣದಿಂದ ಮಾಂಸ ತುಂಡುಗಳನ್ನು ಜಗಿಯದೆ ಹಾಗೆಯೇ ನುಂಗುತ್ತದೆ.
  ▪ಹಸಿವಾದರೆ ದೊಡ್ಡ ಶಬ್ದದಲ್ಲಿ ಗರ್ಜನೆ ಮಾಡುತ್ತದೆ. ಅದರೂ ಯಾವ ಕಾರಣಕ್ಕೂ ಎಷ್ಟು ಹಸಿದರೂ ಸತ್ತ ಶವವನ್ನು ತಿನ್ನದು. ಕಾಡಿನ ಇತರ ಪ್ರಾಣಿಗಳಿಗೆ ಹೋಲಿಸಿದರೆ ಹಸಿವಾದರೆ ಮತ್ತು ಬಾಯಾರಿಕೆಯಾದರೆ ಸಿಂಹಕ್ಕೆ ತಡೆಯುವ ಶಕ್ತಿ ಹೆಚ್ಚು. ತಿನ್ನಲಿಕ್ಕೆ ಏನೂ ಸಿಗದಿದ್ದರೆ ಒಂದೆರಡು ದಿನ ಏನೂ ತಿನ್ನದೆ ಹಾಗೆಯೇ ಇರುತ್ತದೆ.
  ▪ಇದರ ಮತ್ತೊಂದು ವಿಶೇಷತೆಯೆಂದರೆ ಯಾವತ್ತೂ ಇತರ ಪ್ರಾಣಿಗಳು ತಿಂದು ಬಾಕಿ ಬಿಟ್ಟದ್ದನ್ನು ತಿನ್ನದು. ಮತ್ತೊಬ್ಬರ ಎಂಜಲನ್ನು ಎಷ್ಟು ಹಸಿವಾದರೂ ಮುಟ್ಟಿ ನೋಡದು. ನಾಯಿ ಬಾಯಿ ಹಾಕಿ ನೀರು ಕುಡಿದ ಪಾತ್ರೆಯಿಂದ ಎಂದೂ ನೀರು ಕುಡಿಯದು. ತನ್ನ ಕೈಯಿಂದಲೇ ಕೊಂದು ತಿನ್ನುವುದೆಂದರೆ ಇದಕ್ಕೆ ಬಹಳ ಹೆಮ್ಮೆ.
  ▪ಒಂದು ಪ್ರಾಣಿಯನ್ನು ಅಥವಾ ಮನುಷ್ಯನನ್ನು ಬೇಟೆಯಾಡಿ ಹಿಡಿದರೆ ಹಿಡಿಯಲ್ಪಟ್ಟ ಜೀವಿಯನ್ನು ಕೊಲ್ಲುವುದಿಲ್ಲ. ಜೀವಂತ ಶರೀರದಿಂದ ಹಸಿ ತಾಜಾ ಮಾಂಸವನ್ನು ತನ್ನ ಹರಿತವಾದ ಕೋರೆಹಲ್ಲಿನಿಂದ ಎಳೆದು ತಿನ್ನುತ್ತದೆ. ಹೊಟ್ಟೆ ತುಂಬುವಷ್ಟು ತಿನ್ನುತ್ತದೆ. ಬಾಕಿಯಾದದ್ದನ್ನು ಅಲ್ಲೇ ಬಿಟ್ಟು ಬಿಡುತ್ತದೆ.
  ▪ತಿಂದು ಹೊಟ್ಟೆ ತುಂಬಿದರೆ ದೊಡ್ಡ ಗರ್ಜನೆಯೊಂದಿಗೆ ಒಂದೆರಡು ಜಿಗಿತ ಜಿಗಿಯುತ್ತದೆ. ನಂತರ ಮನುಷ್ಯನಂತೆ ಹೊಟ್ಟೆ ಮೇಲೆ ಮಾಡಿ ಅಂಗಾತ ಮಲಗುವ ಸ್ವಭಾವ ಇಲ್ಲ. ತಿಂದದ್ದು ಕರಗುವ ತನಕ ಶಾರೀರಿಕ ವ್ಯಾಯಾಮದಲ್ಲಿ ತೊಡಗುತ್ತದೆ. ನಂತರ ಕನಿಷ್ಟ ಒಂದು ಗಂಟೆಯಷ್ಟು ಸಮಯ ನಡೆಯುತ್ತದೆ. *(ವಾಕಿಂಗ್)*
    ▪ಗರ್ಭಧಾರಣೆಯಾಗಿ‌ ಬರೇ ನಾಲ್ಕು ತಿಂಗಳಲ್ಲೇ ಮರಿ ಹಾಕುತ್ತದೆ. ಸಾಧಾರಣ ಒಂದೆರಡು ಮರಿಗೆ ಕೆಲವೊಮ್ಮೆ ಮೂರು ಮರಿಗೆ ಜನ್ಮ ನೀಡುತ್ತದೆ. ಹುಟ್ಟುವ ಮರಿಗೆ ಯಾವುದೇ ಅಲುಗಾಟ ಅಥವಾ ಚಲನೆ ಇರುವುದಿಲ್ಲ. ಪಂಚೇಂದ್ರಿಯಗಳಿಲ್ಲದ ಒಂದು ಮಾಂಸ ಪಿಂಡದಂತಿರುತ್ತದೆ. ನಂತರ ತಾಯಿ ಸಿಂಹ ಅಥವಾ ಅದಕ್ಕೆ ಜನ್ಮ ನೀಡಿದ ಗಂಡು ಸಿಂಹ ಈ ಮಾಂಸ ಪಿಂಡದ ಮೇಲೆ ಊದುತ್ತದೆ. ಒಂದೆರಡು ದಿನ ಊದಿದಾಗ ಸ್ವಲ್ಪ ಕಂಪನ ಶುರುವಾಗುತ್ತದೆ. ಹಾಗೆಯೇ ನಾಲ್ಕೈದು ದಿನಗಳಾಗುವಾಗ ಕ್ರಮೇಣ ಸಿಂಹದ ರೂಪ ಬರುತ್ತದೆ. ಕಣ್ಣು ತೆರೆಯಲ್ಪಡುವಾಗ ಹುಟ್ಟಿ ಏಳು ದಿನಗಳಾಗುತ್ತದೆ. ನಂತರ ಆರು ತಿಂಗಳುಗಳ ತನಕ ತಾಯಿಯ ಸಂಪೂರ್ಣ ತಾಲೀಮು ಮತ್ತು ತರಬೇತಿಯಲ್ಲಿರುತ್ತದೆ. ಈ ಆರು ತಿಂಗಳಲ್ಲಿ ಇತರ ಪ್ರಾಣಿಗಳನ್ನು ಬೇಟೆಯಾಡುವ ಉಪಾಯ *(ಐಡಿಯ)* ಮತ್ತು ತಂತ್ರಗಳನ್ನು ಕಲಿಸಿ ಕೊಡಲಾಗುತ್ತದೆ. ಆಮೇಲೆ ಅದರ ಹಾದಿಗೆ ಬಿಟ್ಟು ಬಿಡುತ್ತದೆ. ನಂತರ ತನ್ನ ಹೊಟ್ಟೆಪಾಡಿಗಾಗಿ ಬೇಕಾದದ್ದನ್ನು ತಾನೇ ಮಾಡಿಕೊಳ್ಳ ಬೇಕಾಗುತ್ತದೆ.
  ▪ರಾತ್ರಿಯ ಕತ್ತಲಲ್ಲಿ ಕಣ್ಣು ಮಿನುಗುವ (ಪ್ರಕಾಶಿಸುವ) ನಾಲ್ಕು ಜೀವಿಗಳಲ್ಲಿ ಒಂದಾಗಿದೆ ಸಿಂಹ. ಬೆಕ್ಕು, ಚಿರತೆ ಮತ್ತು ಸರ್ಪದ ಕಣ್ಣೂ ರಾತ್ರಿಯಲ್ಲಿ ಪ್ರಕಾಶಿಸುತ್ತದೆ.
  ▪ಸಿಂಹ ಅಗಾಗ್ಗೆ ಜ್ವರದಿಂದ ಬಳಲುತ್ತಿರುತ್ತದೆ. ಅದಕ್ಕೆ ಒಂದು ಕಾರಣವೂ ಇದೆ. ಪ್ರವಾದಿ ನೂಹ್ (ಅ) ರು ತನ್ನ ಹಡಗಿನಲ್ಲಿ ಸತ್ಯ ವಿಶ್ವಾಸಿಗಳಲ್ಲದೆ ಎಲ್ಲಾ ಜೀವರಾಶಿಗಳಿಂದಲೂ ಒಂದೊಂದು ಜೋಡಿಯನ್ನು ಹತ್ತಿಸಿದ್ದರು. ಆ ಪೈಕಿ ಸಿಂಹವೂ ಇತ್ತು. ಹಡಗು ನೆರೆಪೀಡಿತ ಭೂಮಿಯಲ್ಲಿ ಚಲಿಸುತ್ತಿರುವಾಗ ಸಿಂಹ ಆಗಾಗ್ಗೆ ತನ್ನ ಘೋರವಾದ ಶಬ್ದದಲ್ಲಿ ಗರ್ಜನೆ ಮಾಡುತ್ತಿತ್ತು. ಸಿಂಹ ಹಡಗಿನಲ್ಲಿರುವುದರಿಂದ ಇತರ ಜೀವಿಗಳಿಗೆ ಮನಶಾಂತಿ ಮತ್ತು ನೆಮ್ಮದಿ ಎಂಬುದು ಇದ್ದೇ ಇರಲಿಲ್ಲ. ಎಲ್ಲರೂ ಭಯ ಭೀತಿಯಿಂದ ನಡುಗುತ್ತಿದ್ದರು. ಈ ಭಯಾನಕ ಜೀವನ ಮತ್ತು ಬದುಕಿನಿಂದ ಬೇಸತ್ತ ಇವರು ಕೊನೆಗೆ ಪ್ರವಾದಿ ನೂಹ್ (ಅ) ರಲ್ಲಿ ತಮಗಿರುವ ತೊಂದರೆ ಮತ್ತು ಸಂಕಟದ ಬಗ್ಗೆ ದೂರು ಕೊಟ್ಟರು.ಆಗ ನೂಹ್ (ಅ) ರು ಅಲ್ಲಾಹುವಿನಲ್ಲಿ ಇದಕ್ಕೊಂದು ಪರಿಹಾರ ಬೇಕೆಂದು ಬೇಡಿದಾಗ ಸಿಂಹರಾಜನಿಗೆ ವಿಪರೀತ ಜ್ವರ ಶುರುವಾಯಿತು. ಜಗತ್ತಿನ ಪ್ರಪ್ರಥಮ ಜ್ವರ.‌ ಅಂದು ಆರಂಭವಾದ ಜ್ವರ ಇಂದಿಗೂ ಸಿಂಹಕ್ಕೆ ಆಗಾಗ್ಗೆ ಬರುತ್ತಾ ಇರುತ್ತದೆ. ಎಂತಹಾ ಅಹಂಕಾರಿಯನ್ನೂ ಯಾವ ಚುರುಕಿರುವವನನ್ನೂ ಒಮ್ಮೆಲೇ ಸ್ಥಗಿತ ಮಾಡುವ ರೋಗ. ಈ ಜ್ವರ ಸಿಂಹಕ್ಕೆ ಆಗಾಗ್ಗೆ ಬರುತ್ತಿಲ್ಲವಾಗಿದ್ದರೆ ಕಾಡಿನಿಂದ ನಾಡಿಗಿಳಿದು ಇಂದು ಎಲ್ಲರನ್ನೂ ಕಸಾಯಿ ಮಾಡುತ್ತಿತ್ತು.
  ▪ಮೊಸಳೆಯು ಸಿಂಹ ಗರ್ಜನೆ ಕೇಳಿದ ಕೂಡಲೇ ಪ್ರಜ್ಞೆ ತಪ್ಪಿ ಬೀಳುತ್ತದೆ. ಕೆಲವೊಮ್ಮೆ ಸಾಯುತ್ತದೆ.
  ▪ ಆಹಾರ ಪದಾರ್ಥಗಳು ಅಥವಾ ಇನ್ನಿತರ ವಸ್ತುಗಳನ್ನು ಜೋಪಾನವಾಗಿಡುವ ಪೆಟ್ಟಿಗೆಯಲ್ಲಿ ಒಂದು ತುಂಡು ಸಿಂಹದ ಚರ್ಮವನ್ನು ಒಟ್ಟಿಗೆ ಇಡುವುದಾದರೆ ಗೆದ್ದಲು,ನಂದಿಹುಳು, ಗುಗುರು ಮುಂತಾದ ಕೀಟಗಳ ತೊಂದರೆ ಇರುವುದಿಲ್ಲ.
▪ಇದರ ಕೊಬ್ಬುನ್ನು ಮನುಷ್ಯ ಶರೀರಕ್ಕೆ ಲೇಪ ಮಾಡಿದರೆ ಅವನನ್ನು ಇತರ ಯಾವ ವನ್ಯಜೀವಿಯೂ ಅಕ್ರಮಿಸಲಾರದು.
  ▪ಸಿಂಹದ ಮಾಂಸವನ್ನು ಹಸಿಯಾಗಿ ತಿಂದರೆ ಪಾರ್ಶ್ವವಾಯು ರೋಗ ಸಂಪೂರ್ಣ ಗುಣಮುಖವಾಗುತ್ತದೆ. ಅಪಸ್ಮಾರ ರೋಗವಿರುವ ಮಕ್ಕಳ ಕುತ್ತಿಗೆಗೆ ಒಂದು ತುಂಡು ಸಿಂಹದ ಚರ್ಮವನ್ನು ತೂಗು ಹಾಕಿದರೆ ಅಪಸ್ಮಾರ ತಾನಾಗಿಯೇ ಮಾಯವಾಗುತ್ತದೆ.
  ▪ನಿರಂತರ ಹಲ್ಲುನೋವು ಅಥವಾ ದಂತಶೂಲೆ ಇರುವವರು ಸಿಂಹದ ಹಲ್ಲನ್ನು ತನ್ನ ಜೊತೆಯಲ್ಲಿ ಇಟ್ಟು ಕೊಳ್ಳುವುದಾದರೆ  ದಂತ ಸಂಭಂದವಾದ ಎಲ್ಲಾ ರೋಗಗಳು ಮಾಯವಾಗುತ್ತದೆ.
  ▪ಯಾವುದೇ ಔಷಧಿಯಲ್ಲೂ ವಾಸಿಯಾಗದ ಮೂಲವ್ಯಾಧಿ ಮತ್ತು ಸಂದಿವಾತ ರೋಗ ಇರುವವರು ಇದರ ಚರ್ಮದ ಮೇಲೆ ಕುಳಿತು ಕೊಳ್ಳುವುದನ್ನು ನಿತ್ಯ ಅಭ್ಯಾಸ ಮಾಡಿಕೊಂಡರೆ ಈ ಎರಡು ಖಾಯಿಲೆಗಳು ಸಂಪೂರ್ಣ ವಾಸಿಯಾಗುತ್ತದೆ.
  ▪ಮುಖದಲ್ಲಿ ಬರುವ ಬೊಕ್ಕೆ, ಮೊಡವೆ ಅಂತೆಯೇ ಮುಖದಲ್ಲಿ ಅಲ್ಲಲ್ಲಿ ಕಪ್ಪುಚುಕ್ಕೆ ಕಾಣಿಸಿಕೊಳ್ಳುವುದು, ಬೆಳ್ಳಗಿನ ಮುಖಚರ್ಮ ಕಪ್ಪಾಗುವುದು ‌ಇತ್ಯಾದಿ ಎಲ್ಲಾ ಚರ್ಮ ರೋಗಗಳಿಗೆ ಕೆಲವು ದಿನಗಳು ಇದರ ಕೊಬ್ಬನ್ನು ಮುಖಕ್ಕೆ ಲೇಪಿಸಿದರೆ ಜೀವಪರ್ಯಂತ ಆ ರೋಗ ಮತ್ತೆ ಪುನರಾವರ್ತನೆ ಆಗದು. ಮಾತ್ರವಲ್ಲ ನೂರಕ್ಕೆ ನೂರು ಯಶಸ್ವಿಯಾಗುತ್ತದೆ.
  ▪ನೂರು ವರುಷಕ್ಕಿಂತಲೂ ಅಧಿಕ ಬದುಕುವ ಈ ಜೀವಿಯ ಸ್ನಾಯು, ಎಲುಬು, ಮಾಂಸಪಿಂಡಗಳು ಬಹಳ ಬಲಿಷ್ಠ ಮತ್ತು ಗಟ್ಟಿ  ಆಗಿರುವುದರಿಂದ ಸಾದಾರಣ  ಇದು 300 ರಿಂದ 400 ಕಿಲೋಗ್ರಾಂ ತನಕ ತೂಗುತ್ತದೆ.
  ▪ಇಸ್ಲಾಮಿನಲ್ಲಿ ಇದನ್ನು ತಿನ್ನುವುದು ನಿಷಿದ್ಧವಾಗಿದೆ.
   ◼ಸಂಗ್ರಹ: ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಇಮಾಮ್ ಶಿಹಾಬುದ್ದೀನ್ ಅಲ್ ಅಬ್‌ಶೀಹೀಯವರ *ಅಲ್‌ಮುಸ್ತತ್‌ರಫ್)* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...