ಇಪ್ಪತ್ತು ರೂಪಾಯಿಗೆ ಇಪ್ಪತ್ತು ವರ್ಷದ ಆಯುಷ್ಯ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಪ್ರವಾದಿ* ದಾವೂದ್ (ಅ) ರ ಎಲ್ಲಾ ತರಗತಿ ಮತ್ತು ಮಜಿಲಿಸುಗಳಲ್ಲಿ ಸಾಧಾರಣ ತಪ್ಪದೆ ಹಾಜರಾಗುತ್ತಿದ್ದ ಅವರ ಆಪ್ತರಾದ ಒಬ್ಬರ ಬಗ್ಗೆ ಒಮ್ಮೆ ಹಝ್ರತ್ ಅಝ್‌ರಾಯೀಲ್ (ಅ) ಬಂದು ಹೇಳಿದರು. *"ದಾವೂದರೆ.., ನಾನು ಮೂರು ದಿನ ಕಳೆದು ಈತನ ರೂಹನ್ನು ಹಿಡಿಯುವೆನು. ಈತನಿಗೆ ಇನ್ನು ಬರೇ ಮೂರು ದಿನದ ಆಯುಷ್ಯ ಮಾತ್ರವಿರುವುದು"*
▪ *ದಾವೂದ್* (ಅ) ರಿಗೆ ಅಝ್‌ರಾಯೀಲ್ (ಅ) ರಿಂದ ಈ ವಾರ್ತೆ ಕೇಳಿದಾಗ ಬಹಳ ಸಂಕಟವಾಯಿತು. ತನ್ನ ಮಜಿಲಿಸಿನಲ್ಲಿ ಯಾವಾಗಲೂ ಹಾಜರಾಗುವ ಒಬ್ಬ ಆಪ್ತ ಪರಲೋಕಕ್ಕೆ ಹೋಗುತ್ತಾನೆಂದು ತಿಳಿದಾಗ ಆಕಾಶವೇ ತನ್ನ ಮೇಲೆ ಬಿದ್ದಂತಾಯಿತು. ಆದರೆ ಏನೂ ಮಾಡುವಂತಿಲ್ಲ. ಎಲ್ಲವನ್ನೂ ಅದುಮಿಯಿಟ್ಟು ಸುಮ್ಮನಾದರು.
▪ *ಮೂರು* ದಿನಗಳು ಕಳೆಯಿತು. ಒಂದು ವಾರವಾಯಿತು. ಮಾತ್ರವಲ್ಲ ಒಂದು ತಿಂಗಳಾದರೂ ಆ ವ್ಯಕ್ತಿ ಜೀವಂತವಾಗಿಯೇ ಇದ್ದರು. ಇದರಿಂದ ಪ್ರವಾದಿ ದಾವೂದ್ (ಅ) ರು ಬಹಳ ಆಶ್ಚರ್ಯಗೊಂಡರು. ಹೀಗಿರುವಾಗ ಒಂದು ದಿನ ಪುನಃ ಮಲಕ್ ಅಝ್‌ರಾಯೀಲ್ (ಅ) ಅವರ ಬಳಿ ಬಂದಾಗ ಅವರಲ್ಲಿ ಈ ಬಗ್ಗೆ ವಿಚಾರಿಸಿದರು. ಆಗ ಅಝ್‌ರಾಯೀಲ್ (ಅ) ಹೇಳಿದರು. *"ಈತನ ಆಯುಷ್ಯ ಮುಗಿಯುವ ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿ ಈತ ಒಬ್ಬ ಭಿಕ್ಷುಕನಿಗೆ ಇಪ್ಪತ್ತು ದಿರ್‌ಹಮ್ ಸದಖಾ (ದಾನ) ಕೊಟ್ಟನು. ಸದಕ ಸ್ವೀಕರಿಸಿದ ಬಡಪಾಯಿ ಭಿಕ್ಷುಕ ಬಹಳ ಸಂತೋಷದಿಂದ ಈತನಿಗೆ ಬೇಕಾಗಿ ಈತನ ಆಯುಷ್ಯ ಹೆಚ್ಚಿಸಲು ಅಲ್ಲಾಹನಲ್ಲಿ ಪ್ರಾರ್ಥಿಸಿದನು. ಕೂಡಲೇ ಅಲ್ಲಾಹನು ಆ ಪ್ರಾರ್ಥನೆಯನ್ನು ಖಬೂಲು ಮಾಡಿದನು. ಆ ಕಾರಣದಿಂದ ಅಲ್ಲಾಹನು ಈತನಿಗೆ ಇಪ್ತತ್ತು ದಿರ್‌ಹಮಿಗೆ ಇಪ್ಪತ್ತು ವರ್ಷದ ಆಯುಶ್ಯವನ್ನು ಜಾಸ್ತಿಯಾಗಿ ನೀಡಿದ್ದಾನೆ."*
▪ *ಗಮನಾರ್ಹ* ಸಂಗತಿಯೆಂದರೆ, ಒಂದು ದಿನದಲ್ಲಿ ಮಲಕ್ ಅಝ್‌ರಾಯೀಲ್ (ಅ) ರವರು ಒಬ್ಬ ವ್ಯಕ್ತಿಯ ಆಯುಷ್ಯ ಮುಗಿದು ಅವನ ರೂಹ್ ಹಿಡಿಯುವ ಸಮಯ ಆಯಿತಾ ಎಂದು ಅವನ ಆಯುಷ್ಯದ ಪಟ್ಟಿಯನ್ನು (LIST) ತೆರೆದು ನೊಡುತ್ತಾ ಅವನ ಬಳಿ ಎಪ್ಪತ್ತು ಬಾರಿ ಬಂದು ಹೋಗುತ್ತಾರೆ.
▪ *ಒಂದು* ಮನೆಗೆ ಒಬ್ಬ ಭಿಕ್ಷುಕ ಬಂದು ಅವನಿಗೆ ಏನನ್ನೂ ಕೊಡದೆ ಬಿಟ್ಟರೆ ಒಂದು ವಾರದ ತನಕ ಆ ಮನೆಗೆ ರಹ್‌ಮತಿನ ಮಲಕುಗಳು ಇಣುಕಿ ಕೂಡ ನೋಡಲಾರರು.
▪ *ಉಪ್ಪು,* ನೀರು, ಬೆಂಕಿ ಈ ಮೂರು ವಸ್ತುಗಳನ್ನು ಯಾರು ಕೇಳಿದರೂ ಇಲ್ಲ ಎಂದು ಹೇಳಬಾರದಾಗಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತಾಕೀತು ಕೊಟ್ಡಿದ್ದಾರೆ.
▪ *ಸಅ್‌ದ್* ಬಿನ್ ಉಬಾದ (ರ) ಎಂಬ ಸ್ವಹಾಬಿಯ ತಾಯಿ ವಫಾತ್ ಆದಾಗ ಅವರು ಪ್ರವಾದಿ ಬಳಿ ಬಂದು ಹೇಳಿದರು. *"ನಾನು ನನ್ನ ತಾಯಿಗೆ ಖಬರಿನಲ್ಲಿ ಒಳ್ಳೆಯ ಫಲಸಿಗಲು ಯಾವ ಸ್ವದಖ ಮಾಡಬೇಕು..?"* ಆಗ ಪ್ರವಾದಿಯವರು ಹೇಳಿದರು. *"ಸಾರ್ವಜನಿಕವಾಗಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡು."*
▪ *"ಒಬ್ಬನು ಜನರು ಹೋಗುವ ಒಂದು ದಾರಿಯಲ್ಲಿ ಸಾರ್ವಜನಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಅಲ್ಲಾಹನು ಒಂದು ದಿನದಲ್ಲಿ ಎರಡು ಸಲ ಅವನತ್ತ ಅನುಗ್ರಹದ (ರಹ್‌ಮತ್) ನೋಟ ನೋಡುವನು"* ಎಂದು ಸಹಾಬೀಶ್ರೇಷ್ಠ ಹಝ್ರತ್ ಇಬ್‌ನು ಅಬ್ಬಾಸ್ (ರ) ಹೇಳಿರುತ್ತಾರೆ.
ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments