ಹಗ್ಗ ಅಲುಗಾಡಿದ್ದಷ್ಟೇ.
*ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಒಂದು* ಊರಿನಲ್ಲಿ ಮೂರು ಸದಸ್ಯರನ್ನೊಳಗೊಂಡ ಒಂದು ಬಡ ಕುಟುಂಬ ಬಹಳ ಸಂತೋಷದಿಂದ ಜೀವನ ನಡೆಸುತ್ತಿತ್ತು.. ಬಡವರಾದರೂ ಇವರಿಗೆ ಯಾವುದೇ ತೊಂದರೆ ಇರಲಿಲ್ಲ. ದಿನಗಳು ಬಹಳ ಆರಾಮವಾಗಿ ಹೋಗುತಿತ್ತು.
▪ *ಬಡವರಾದರೂ* ನೆಮ್ಮದಿಯಿಂದ ಜೀವನ ನಡೆಸುವ ಒಂದು ಕುಟುಂಬವನ್ನು ಕಂಡಾಗ ಹೊಟ್ಟೆಕಿಚ್ಚು ಸಹಿಸಲಾದಗ ಇಬ್‌ಲೀಸನು (ಲ) ಇವರನ್ನು ಹೇಗಾದರು ಮಾಡಿ ತೂಫಾನ್ ಮಾಡಬೇಕೆಂದು ಯೋಚಿಸಿ ಅವರ ಮನೆಯತ್ತ ನಡೆದನು.
▪ *ಮನೆ* ತಲುಪಿದಾಗ ಮನೆಯೊಡತಿ ಮನೆಯಂಗಳದಲ್ಲಿ ಹಸುವಿನಿಂದ ಹಾಲು ಕರೆಯುತ್ತಿದ್ದಳು. ಹಸುವನ್ನು ಕುತ್ತಿಗೆಗೆ ಹಗ್ಗ ಹಾಕಿ ಒಂದು ಕಂಬಕ್ಕೆ ಕಟ್ಟಲಾಗಿತ್ತು. ಮೋಸಗಾರ ಇಬ್‌ಲೀಸನು ಮೆಲ್ಲನೆ ಹಸುವನ್ನು ಕಟ್ಟಿದ ಹಗ್ಗವನ್ನು ಎಳೆದನು. ಹಸುವು ಯಾರೋ ನನ್ನನ್ನು ಎಳೆದು ಆಕ್ರಮಣ ಮಾಡುತ್ತಾರೆಂದು ಭಾವಿಸಿ ಅಲ್ಲಿಂದ ಧುಮುಕುವ ರಭಸದಲ್ಲಿ ಹಸುವಿಸ ಕಾಲಿನ ಒಂದು ಹೊಡೆತ ಹಾಲು ಕರೆಯುವಾಗ ತಾಯಿಯ ಹತ್ತಿರ ಕುಳಿತಿದ್ದ ಪುಟ್ಟ ಮಗುವಿಗೆ ಬಿತ್ತು. ಮಗು ನಿಮಿಷದಲ್ಲೇ ಸಾವನ್ನಪ್ಪಿತು.
▪ *ತನ್ನ* ಮಗುವಿನ ಮರಣಕ್ಕೆ ಕಾರಣವಾದ ಹಸುವನ್ನು ಮಹಿಳೆಯು ಸಹಿಸಲಾಗದ ಕೋಪದ ಕಾರಣದಿಂದ ಅಲ್ಲಿದ್ದ ಒಂದು ಕತ್ತಿಯನ್ನು ತೆಗೆದು ಅದರ ತಲೆ ಕಡಿದಳು.
▪ *ಸಂಜೆಯಾಗುವಾಗ* ಮನೆ ಮಾಲಿಕ ಕೆಲಸ ಮುಗಿದು ಮನೆಗೆ ತಲುಪಿದಾಗ ಒಂದು ಹಸು ಮತ್ತು ಒಂದು ಪುಟ್ಟ ಮಗು ದಾರುಣವಾಗಿ ಹತ್ಯೆಯಾಗಿ ನೆಲದಲ್ಲಿ ಬಿದ್ದಿರುವ ಭಯಾನಕ ದೃಶ್ಯವನ್ನು ಕಂಡಾಗ ಅತ್ತಿತ್ತ ನೋಡದೆ ಇದರ ಕಾರಣಕರ್ತಳು ನನ್ನ ಪತ್ನಿಯೇ ಆಗಿರಬಹುದೆಂದು ಭಾವಿಸಿ ಅವಳನ್ನು ಕೊಂದುಬಿಟ್ಟನು.
▪ *ಒಟ್ಟಿನಲ್ಲಿ* ಒಂದು ಮನೆಯಲ್ಲಿ ಒಂದು ಹಸು ಮತ್ತು ಇಬ್ಬರ ಹತ್ಯೆಯಾಗಿದೆಯೆಂದು ತಿಳಿದಾಗ ರಾತ್ರಿಯಾದಾಗ ಊರಿನ ಜನರೆಲ್ಲರೂ ಅಲ್ಲಿ ಜಮಾಯಿಸಿದರು. ಮನನೋಯಿಸುವ ಈ ದೃಶ್ಯ ಕಂಡ ಊರಿನವರು ಇದರ ಕಾರಣಕರ್ತ ಮನೆಮಾಲಿಕನೆಂದೇ ಭಾವಿಸಿ ಅವರೆಲ್ಲರೂ ಸೇರಿ ಅವನನ್ನೂ ಕೊಂದುಬಿಟ್ಟರು.
▪ *ಸುಬ್‌ಹಾನಲ್ಲಾಹ್..* ಒಂದು ದಿನದಲ್ಲಿ ಒಂದು ಕುಟುಂಬ ಸಂಪೂರ್ಣವಾಗಿ ನೆಲಕಚ್ಚಿತು. ಇದರ ಮುಖ್ಯ ಕಾರಣಕರ್ತನಾದ ಇಬ್‌ಲೀಸನಲ್ಲಿ ಅವನ ಸಂತಾನ ಪರಂಪರೆಯ ಪುಟ್ಟ ಮರಿಗಳು (ಶೈತಾನರು) ಕೇಳಿದರು. *"ಅಲ್ಲ ಅಜ್ಹಾ... ನೀವು ಬೆಳಿಗ್ಗೆ ಹೋಗುವಾಗ ಒಂದು ಕುಟುಂಬವನ್ನು ಸರ್ವನಾಶ ಮಾಡುತ್ತೇನೆಂದು ಹೇಳಿ ಹೊರಟಿದ್ದೀರಿ. ಈಗ ಆ ಕುಟುಂಬ ತೂಫಾನಾಗಿ ಹೋಗಿದೆ. ನೀವು ಮಾಡಿದ ಉಪಾಯವೇನು..? ನಮಗೂ ಒಂದು ಹೇಳಿ ಕೊಡುವಿರಾ...?"* ಆಗ ಇಬ್‌ಲೀಸನು ಹೇಳಿದನು. *"ನಾನೇನೂ ದೊಡ್ಡ ಸಾಹಸಕಾರ್ಯ ಮಾಡಲಿಲ್ಲ. ಹಸುವಿನ ಕತ್ತಿನ ಹಗ್ಗವನ್ನು ಒಮ್ಮೆ ಅಲುಗಾಡಿದ್ದಷ್ಟೇ!!!*
ಸಂಗ್ರಹ; ನುಝ್ಹತುಲ್ ಮಜಾಲಿಸ್ ಎಂಬ ಗ್ರಂಥ.

Comments