Skip to main content

ಸಾಂಕ್ರಾಮಿಕ ರೋಗ ಮತ್ತು ಹದೀಸ್ ವಚನ

ಸಾಂಕ್ರಾಮಿಕ ರೋಗ ಮತ್ತು ಹದೀಸ್ ವಚನ

ಒಮ್ಮೆ ಉಮರ್ ಬಿನ್ ಖತ್ತಾಬ್ (ರ) ರವರು ತಮ್ಮ ಸಹಚರರ ಜೊತೆ ಶಾಮ್'ಗೆ (ಈಗಿನ ಸಿರಿಯಾ) ಹೊರಟರು. ದಾರಿಮಧ್ಯೆ " ಸರ್'ಗ" ಎಂಬಲ್ಲಿಗೆ ತಲುಪಿದಾಗ ಸಿರಿಯಾದಲ್ಲಿ ಪ್ಲೇಗ್ ರೋಗವು ವ್ಯಾಪಕ ಗೊಂಡಿದೆಯೆಂದು ತಿಳಿಯಿತು. ಉಮರ್ (ರ) ರವರು ತಮ್ಮ ಜೊತೆಗಿದ್ದ *ಮುಹಾಜಿರ್'ಗಳೊಂದಿಗೆ ಈಗೇನು ಮಾಡುವುದೆಂದು ಸಮಾಲೋಚನೆ ನಡೆಸಿದರು. ಇಲ್ಲಿಂದಲೇ ಮದೀನಾಕ್ಕೆ ಮರಳೋಣ ಎಂದು ಕೆಲವರು ಅಭಿಪ್ರಾಯಪಟ್ಟರು.
ಕೆಲವರು ಶಾಮ್'ಗೆ ತೆರಳೋಣ ಎಂದು ಹೇಳಿದರು.
ಆಗ ಉಮರ್ (ರ) ರವರು **ಅನ್ಸಾರೀ ಸ್ವಹಾಬಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅನ್ಸಾರಿಗಳಿಂದಲೂ ಮುಹಾಜಿರ್ ಗಳು ವ್ಯಕ್ತಪಡಿಸಿದಂತಹ ಭಿನ್ನಾಭಿಪ್ರಾಯಗಳು ಬಂದವು.  ಆಗ ಉಮರ್ ಬಿನ್ ಖತ್ತಾಬ್ (ರ)
ರವರು ಮಕ್ಕಾ ಫತ್'ಹ್ ( ವಿಜಯ)ಗೆ  ಮುನ್ನ ವಲಸೆ ಹೋದ ಸ್ವಹಾಬಿಗಳೊಂದಿಗೆ ಮೂರನೇ ಬಾರಿ ಸಮಾಲೋಚನೆ ನಡೆಸಿದರು.
ಇಲ್ಲಿಂದ ಮದೀನಾಕ್ಕೆ ನಿರ್ಗಮಿಸುವುದೇ  ಸೂಕ್ತವೆಂದು ಅವರು ಅಭಿಪ್ರಾಯಪಟ್ಟರು. ಉಮರ್ (ರ) ರವರು ಅವರ ಅಭಿಪ್ರಾಯದಂತೆ ಅಲ್ಲಿಂದ ಮದೀನಾಕ್ಕೆ ಮರಳಿ ಹೋಗಲು ಸಿದ್ಧರಾಗ ತೊಡಗಿದರು.

ಆಗ  ಅಬೂ ಉಬೈದತ್ ಬಿನ್ ಜರ್ರಾಹ್ (ರ) ರವರು , " ತಾವು ಅಲ್ಲಾಹನ  ವಿಧಿಯಿಂದ ಪಲಾಯನಗೈಯ್ಯುತ್ತಿದ್ದೀರಾ "  ಎಂದು ಕೇಳಿದರು‌.
" ಅಬೂ ಉಬೈದಾ (ರ) ರವರೇ, ಈ ಮಾತನ್ನು ಬೇರೆಯವರು ಹೇಳಿರುತ್ತಿದ್ದರೆ... ನಿಮ್ಮ ಮಾತು ನನಗೆ ಆಶ್ಚರ್ಯ ತಂದಿದೆ. ನಾವು ಅಲ್ಲಾಹನ ವಿಧಿಯಿಂದ ಅವನ ವಿಧಿಯೆಡೆಗೆ ಓಡುತ್ತಿರುವೆವು. ನೀವು ನಿಮ್ಮ ಒಂಟೆಯನ್ನು ಮೇಯಿಸಲು ಒಂದು ಬೆಟ್ಟಕ್ಕೆ ಕೊಂಡೊಯ್ಯುವಿರಿ. ಅಲ್ಲಿ ಒಂದು ಭಾಗ ಹಸಿರಿನಿಂದ ಕೂಡಿದ್ದು, ಮತ್ತೊಂದು ಬಾಗ ಒಣಗಿದ್ದರೆ ತಾವು ಯಾವುದನ್ನು ಆರಿಸುವಿರಿ? ತಾವು ಈ ಎರಡರಲ್ಲಿ ಒಂದನ್ನು ಆರಿಸಿ ತಮ್ಮ ಒಂಟೆಯನ್ನು ಇಳಿಸುವಿರಾದರೆ ಅದು ಅಲ್ಲಾಹನ ವಿಧಿಯಲ್ಲವೇ ? ಯೋಚಿಸಿ." ಎಂದರು ಉಮರ್ (ರ).

ಅಷ್ಟರಲ್ಲಿ ಅಲ್ಲಿಗೆ ಅಬ್ದುರ್ರಹ್ಮಾನ್ ಬಿನ್ ಔಫ್ (ರ) ರವರು ಬಂದರು. ಅವರು ಏನೋ ಅಗತ್ಯಕ್ಕಾಗಿ ಅಲ್ಲಿಂದ ಬೇರೆಡೆಗೆ ಹೋಗಿದ್ದರು. ಅಲ್ಲಿ ನಡೆದ ಘಟನೆಯ ಬಗ್ಗೆ ತಿಳಿದಾಗ ಅವರು ಹೇಳಿದರು, " ಇದರ ಕುರಿತು ನನಗೆ ಸರಿಯಾದ ಮಾಹಿತಿ ಇದೆ. ಪ್ಲೇಗ್ ಪೀಡಿತ ನಾಡಿಗೆ ಯಾರೂ  ಹೋಗಬಾರದು. ಮತ್ತು ಪ್ಲೇಗ್ ಪೀಡಿತ ನಾಡಿನಲ್ಲಿರುವವರು ಬೇರೆಡೆಗೆ  ಹೋಗಬಾರದೆಂದು ಪ್ರವಾದಿ ಮುಹಮ್ಮದ್ ಪೈಗಂಬರ್ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ಹೇಳಿರುವುದನ್ನು ನಾನು ಕೇಳಿರುವೆನು‌. ಆಗ ಉಮರ್ (ರ) ರವರು ಅಲ್ಲಾಹನನ್ನು ಸ್ತುತಿಸುತ್ತಾ ಅಲ್ಲಿಂದ ಮದೀನಾಕ್ಕೆ ಮರಳಿದರು.
(ಸ್ವಹೀಹ್ ಮುಸ್ಲಿಮ್ - 7- 29)

*ಮುಹಾಜಿರ್'ಗಳು - ಮಕ್ಕಾದಿಂದ ಮದೀನಾಕ್ಕೆ ವಲಸೆಹೋದ ಸ್ವಹಾಬಿಗಳು.
**ಅನ್ಸಾರ್'ಗಳು - ಮಕ್ಕಾದಿಂದ ವಲಸೆ ಬಂದ ಸ್ವಹಾಬಿಗಳಿಗೆ ಎಲ್ಲಾ ವಿಧದ ಸಹಾಯವನ್ನಿತ್ತ ಮದೀನಾದ ಸ್ವಹಾಬಿಗಳು.

ಸಾಂಕ್ರಾಮಿಕ_ರೋಗ_ಮತ್ತು_ಇಸ್ಲಾಮಿನ_ನಿಲುವಿನ‌_ಹಿನ್ನೆಲೆಯಲ್ಲಿರುವ_ಸದುದ್ದೇಶಗಳು

ಸಾಂಕ್ರಾಮಿಕ ರೋಗ ಹರಡಿದ ನಾಡಿಗೆ  ತೆರಳಬಾರದೆಂದೂ ಅಲ್ಲಿದವರು ಬೇರೆ ನಾಡಿಗೆ ಪಲಾಯನಗೈಯಬಾರದೆಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆಯೇ  ಆದೇಶಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ  ಏನೆಲ್ಲಾ ಸದುದ್ದೇಶಗಳಿವೆ ಎಂಬುವುದನ್ನು ನಾವು ತಿಳಿಯೋಣ

 #ಒಂದು, ಸಾಂಕ್ರಾಮಿಕ ರೋಗ ಇರುವ ನಾಡಿಗೆ ತೆರಳಿದರೆ ಆ ರೋಗ ತಮಗೂ ಬರುವ ಸಾಧ್ಯತೆಯಿದೆ.

 #ಎರಡು ,  ಸಾಂಕ್ರಾಮಿಕ ರೋಗ ಪೀಡಿತ ನಾಡಿನವರು ಇತರ ನಾಡಿಗೆ ಪಲಾಯನಗೈದರೆ ಅಲ್ಲಿನವರಿಗೂ  ರೋಗಾಣುಗಳನ್ನು ಹರಡಿದಂತಾಗುತ್ತದೆ.

 #ಮೂರು , ಜನರು ರೋಗ ಪೀಡಿತರಾಗಿ ಯಾತನೆ ಅನುಭವಿಸುತ್ತಿರುವಾಗ ಅವರನ್ನು ಶುಶ್ರೂಷೆ ಮಾಡಬೇಕಾದ ಮಂದಿ ಪಲಾಯನಗೈದರೆ ಅದು ರೋಗಿಗಳನ್ನು ಮತ್ತಷ್ಟು ಹತಾಶೆಗೆ ತಳ್ಳುತ್ತದೆ.

 #ನಾಲ್ಕು, ತಾನು ಈ ರೋಗದಲ್ಲಿ ಮರಣ ಹೊಂದಿದರೆ ನನ್ನ ಮಯ್ಯಿತ್ ಪರಿಪಾಲನೆ ಮಾಡುವವರು ಯಾರೂ ಇರುವುದಿಲ್ಲ ಎಂಬ ಕೊರಗು ಅವರನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸುತ್ತದೆ. ಆಗ ಅದು ಸಾಂಕ್ರಾಮಿಕ
ರೋಗದ ಕಾರಣದಿಂದಾಗಿ ಉಂಟಾಗುವ ಸಾವುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಪವಿತ್ರ ಇಸ್ಲಾಮ್ ಧರ್ಮವು ಸಾಂಕ್ರಾಮಿಕ ರೋಗ ಪೀಡಿತ ನಾಡಿಗೆ ತೆರಳುವುದನ್ನೂ ಅಲ್ಲಿಂದ ಬೇರೆಡೆಗೆ ಪಲಾಯನಗೈಯ್ಯುವುದನ್ನೂ ವಿರೋಧಿಸಿತು.

ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...