ಇಸ್ರಾಅ್ ಮಿಅ್ರಾಜ್ : ವಿಸ್ಮಯ ಯಾತ್ರೆಯ ಮುಗಿಯದ ಅಚ್ಚರಿಗಳು. ಹೌದು, ಇಸ್ರಾಅ್- ಮಿಅ್'ರಾಜ್ ಹಲವು ಕೌತುಕಗಳ ಹಾಗೂ ಅಚ್ಚರಿಗಳ ಆಗರ.

ಪವಿತ್ರ ಖುರ್'ಆನ್, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಅತೀ ದೊಡ್ಡ ಮುಅ್ ಜಿಝತ್. ಪ್ರಸ್ತುತ ಪವಿತ್ರ ಖುರ್'ಆನ್ ನಲ್ಲಿ ಹಲವು ಅದ್ಭುತಗಳನ್ನು ಪ್ರಸ್ತಾಪಿಸಲಾಗಿದ್ದರೂ ಆ ಪೈಕಿ ದೊಡ್ಡ ಅದ್ಭುತವೆಂದರೆ ಇಸ್ರಾಅ್ - ಮಿಅ್'ರಾಜ್. ಆಧುನಿಕ ವೈಜ್ಞಾನಿಕ ಜಗತ್ತನ್ನು ನಿಬ್ಬೆರಗಾಗಿಸುವ ಪರಮಾದ್ಭುತ ಯಾತ್ರೆಯೊಂದನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಜೀವನದಲ್ಲಿ ನಡೆಸುವ ಮೂಲಕ ಅಲ್ಲಾಹನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಯಾವ ಪ್ರವಾದಿಗೂ ನೀಡದ ಅತ್ಯುನ್ನತ ಪದವಿಯನ್ನು ನೀಡಿದನು.
ಹೆಚ್ಚಿನ ಮಂದಿ ಭಾವಿಸಿದ್ದು , ಇಸ್ರಾಅ್ - ಮಿಅ್'ರಾಜ್ ಎಂದರೆ ಮಸ್ಜಿದುಲ್ ಹರಾಮ್ ನಿಂದ ಬೈತುಲ್ ಮುಖದ್ದಸ್, ಅಲ್ಲಿಂದ ಏಳಾಕಾಶ, ಸಿದ್ರತುಲ್ ಮುಂತಹ, ಲಿಖಾ ದರ್ಶನ, ನಮಾಝ್ ಉಡುಗೊರೆ, ಅಲ್ಲಿಂದ ಮರಳಿ ಪವಿತ್ರ ಮಕ್ಕಕ್ಕೆ. ಇಷ್ಟು ಮಾತ್ರ. ಆದರೆ, ರಾತ್ರಿಯ ಅಲ್ಪ ಸಮಯದಲ್ಲಿ ನಡೆದ ಈ ಮಹಾ ಅದ್ಭುತ ಯಾತ್ರೆಯ ಜಾಡು ಹಿಡಿದು ಸಾಗಿದಾಗ ಹಲವು ವಿಸ್ಮಯಗಳು ಹಾಗೂ ಅಸಂಖ್ಯ ಘಟನೆಗಳು ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ.
ಹೌದು, ಇಸ್ರಾಅ್- ಮಿಅ್'ರಾಜ್ ಹಲವು ಕೌತುಕಗಳ ಹಾಗೂ ಅಚ್ಚರಿಗಳ ಆಗರ. ಈ ಅದ್ಭುತ ಯಾತ್ರೆಗಳ ಬಗ್ಗೆ ಅಧ್ಯಯನ ಮಾಡುತ್ತಾ ಸಾಗುತ್ತಿದ್ದೆಂತೆ ಹಲವು ಅಪೂರ್ವ ಘಟನೆಗಳು ನಮ್ಮನ್ನು ಬೆರಗುಗೊಳ್ಳುವಂತೆ ಮಾಡುತ್ತದೆ.
ಸ್ವರ್ಗೋದ್ಯಾನದ ಅನಂತ ವೈಭವಗಳನ್ನು ತಿಳಿಯುವಾಗ ಮನಸ್ಸು ತುಂಬಿ ಬರುತ್ತದೆ. ನರಕದ ಭೀಕರ ಶಿಕ್ಷೆಗಳ ಬಗ್ಗೆ ತಿಳಿಯುವಾಗ ಎದೆ ನಡುಗಿ ನಯನಗಳು ತುಂಬುತ್ತವೆ. ಒಟ್ಟಿನಲ್ಲಿ ಇಸ್ರಾಅ್- ಮಿಅ್'ರಾಜ್ ಒಂದು ವಿಸ್ಮಯ ಯಾತ್ರೆ. ಬನ್ನಿ , ಈ ಯಾತ್ರೆಯ ಮತ್ತಷ್ಟು ಹೊಸ ಮಗ್ಗುಲುಗಳ ಬಗ್ಗೆ ಒಂದು ಅವಲೋಕನ ನಡೆಸೋಣ.
#ಯಾತ್ರೆ #ದೈಹಿಕವೇ?
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನದಲ್ಲಿ ಹಲವು ಬಾರಿ ಮಿಅ್'ರಾಜ್ ನಡೆದಿದೆ. ಒಂದು ಬಾರಿ ದೈಹಿಕವಾಗಿ ನಡೆದರೆ 33 ಬಾರಿ ಆತ್ಮಿಕವಾಗಿ ನಡೆದಿದೆ.
ಅಹ್ಮದ್ ಬಿನ್ ಮುಹಮ್ಮದ್ ಖಸ್ತಲ್ಲಾನೀ(ರ.ಅ)ರವರಿಂದ ಉಲ್ಲೇಖಿಸಿ ಕೆಲವು ಆತ್ಮಜ್ಞಾನಿಗಳು ಹೇಳುತ್ತಾರೆ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ 34 ಬಾರಿ ಮಿಅ್'ರಾಜ್
ಸಂಭವಿಸಿದೆ. ಅವುಗಳ ಪೈಕಿ ಒಂದು ಬಾರಿ ದೈಹಿಕವಾಗಿ ಯಾತ್ರೆ ನಡೆಸಿದರೆ ಉಳಿದವು ಆತ್ಮದ ಮೂಲಕ ಯಾತ್ರೆ ನಡೆಸಿದರು.(ಅಲ್ ಮವಾಹಿಬುಲ್ಲದ್ದುನಿಯಾ 2-34)
#ಬುರಾಖ್ #ಎಂದರೇನು?
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಮಕ್ಕಾದ
ಮಸ್ಜಿದುಲ್ ಹರಾಮಿನಿಂದ ಸಾವಿರಾರು ಕಿ.ಮಿ ದೂರವಿರುವ ಫೆಲಸ್ತೀನ್ ಗೆ ಯಾತ್ರೆ ಹೋದದ್ದು ಬುರಾಖ್ ಎಂಬ ವಾಹನದಲ್ಲಿ . ಅಷ್ಟು ದೂರದ ಫೆಲಸ್ತೀನ್ ಗೆ ರಾತ್ರಿಯ ಅತ್ಯಲ್ಪ ಸಮಯದಲ್ಲಿ ಹೋಗಿ ತಲುಪಬೇಕಾದರೆ ಆ ವಾಹನವೂ ಅಂಥದ್ದೇ ವಿಶೇಷವಾಗಿರಬೇಕು ತಾನೇ? ಹಾಗಾಗಿ ಆ ವಾಹನದ ಬಗ್ಗೆಯೂ ತಿಳಿಯೋಣ.
ಬರ್'ಖ್ ಎಂದರೆ ಮಿಂಚು ಎಂದರ್ಥ. ಬುರಾಖ್,
ಮಿಂಚಿನ ಶರವೇಗದಲ್ಲಿ ಸಂಚರಿಸುವ ವಾಹನವಾದ್ದರಿಂದ ಅದಕ್ಕೆ ಬುರಾಖ್ ಎಂಬ ಹೆಸರು ಬಂದಿದೆ. ಕತ್ತೆಗಿಂತ ದೊಡ್ದದು ಹೇಸರಗತ್ತೆಗಿಂತ ಸಣ್ಣದೂ ಆದ ಶ್ವೇತವರ್ಣದ ಒಂದು ಮೃಗ. ಅದಕ್ಕೆ ಲಗಾಮು ಹಾಕಲಾಗಿತ್ತು. ನಮ್ಮ ಕಣ್ಣಿನ ನೋಟ ಎಷ್ಟರವರೆಗೆ ತಲುಪುತ್ತದೋ ಅಲ್ಲಿಗೆ ಅದರ ಒಂದು ಹೆಜ್ಜೆ. ಎತ್ತರದ ಸ್ಥಳಕ್ಕೆ ಏರುವಾಗ ಅದರ ಕೈ ಸಣ್ಣದಾಗಿ, ಕಾಲುಗಳು ಉದ್ದವಾಗಿ ಬಿಡುತ್ತಿದ್ದವು. ತಗ್ಗಿನ ಪ್ರದೇಶಕ್ಕೆ ಇಳಿಯುವಾಗ ಕೈಗಳು ಉದ್ದವಾಗಿ ಕಾಲುಗಳು ಸಣ್ಣದಾಗಿ ಬಿಡುತ್ತಿದ್ದವು. ಈ ಕಾರಣದಿಂದ ಅದರ ಬೆನ್ನು ಸಮಾನವಾಗಿರುತ್ತಿದ್ದವು. ಸವಾರಿ ಮಾಡುವವರಿಗೆ ಯಾವುದೇ ರೀತಿಯ ತೊಂದರೆ ಎದುರಿಸಬೇಕಾಗಿ ಬಂದಿರಲಿಲ್ಲ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಬುರಾಖ್ ಹತ್ತಿ ಬೈತುಲ್ ಮುಖದ್ದಸ್ ನತ್ತ ಪ್ರಯಾಣ ಬೆಳೆಸಿದರು. ಜೊತೆಯಲ್ಲಿ ಜಿಬ್ರೀಲ್ (ಅ) ರವರೂ ಇದ್ದರು.
ಇಮಾಮ್ ಬೂಸೂರೀ (ರ) ರವರು ತಮ್ಮ ಖಸೀದತುಲ್ ಬುರ್ದಾದಲ್ಲಿ ಅದನ್ನು ಹೀಗೆ ವರ್ಣಿಸಿದ್ದಾರೆ.
سريت من حرم ليلا إلى حرم..
كما سرى البدر في داج من الظّلم
ಇರುಳು ತುಂಬಿದ ರಾತ್ರಿಯಲ್ಲಿ ಪೂರ್ಣ ಚಂದಿರ ಒಂದು ಕಡೆಯಿಂದ ಮತ್ತೊಂದೆಡೆಗೆ ಸಂಚರಿಸುವಂತೆ ತಾವು ರಾತ್ರಿಯಲ್ಲಿ ಮಸ್ಜಿದುಲ್ ಹರಾಮ್' ನಿಂದ ಬೈತುಲ್ ಮುಖದ್ದಸ್ ವರೆಗೆ ಸಂಚರಿಸಿರುವಿರಿ.
#ನಮಾಝ್ #ಎಷ್ಟು #ಬಾರಿ?
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ತಮ್ಮ ಯಾತ್ರೆಯ ಮಧ್ಯೆ ಮೂರು ಬಾರಿ ನಮಾಝ್ ನಿರ್ವಹಿಸಿದ್ದರು. ಜಿಬ್ರೀಲ್ (ಅ) ರವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ವಾಹನದಿಂದ ಇಳಿಸಿ ನಮಾಝ್ ಮಾಡಲು ಹೇಳಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ನಮಾಝ್ ನಿರ್ವಹಿಸಿದರು. ನಂತರ ಜಿಬ್ರೀಲ್ (ಅ) ರವರು " ತಾವು ಎಲ್ಲಿ ನಮಾಝ್ ಮಾಡಿದ್ದೆಂದು ತಿಳಿದಿದೆಯೇ? ತ್ವೈಬಾ (ಮದೀನಾ) ದಲ್ಲಿ " ಎಂದರು.
ತರುವಾಯ ಮತ್ತೊಂದು ಸ್ಥಳದಲ್ಲಿ ಇಳಿಸಿ ನಮಾಝ್ ಮಾಡುವಂತೆ ಹೇಳಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಅಲ್ಲೂ ನಮಾಝ್ ನಿರ್ವಹಿಸಿದರು. ನಂತರ ಜಿಬ್ರೀಲ್ (ಅ), " ತಾವೀಗ ಎಲ್ಲಿ ನಮಾಝ್ ನಿರ್ವಹಿಸಿದ್ದೆಂದು ತಿಳಿದಿದೆಯೇ? ತೂರ್ ಸೀನಾಅ್ ಪರ್ವತದಲ್ಲಿ . ಇಲ್ಲಿ ಪ್ರವಾದಿ ಮೂಸಾ (ಅ) ರವರು ಅಲ್ಲಾಹನೊಂದಿಗೆ ಮಾತುಕತೆ ನಡೆಸಿದ್ದರು" ಎಂದರು.
ನಂತರ ಮಗದೊಂದು ಸ್ಥಳದಲ್ಲಿ ಇಳಿಸಿ ಅಲ್ಲೂ ನಮಾಝ್ ಮಾಡುವಂತೆ ಹೇಳಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಅಲ್ಲೂ ನಮಾಝ್ ನಿರ್ವಹಿಸಿದರು. ನಂತರ ಜಿಬ್ರೀಲ್ (ಅ) ರವರು , " ತಾವು ಈಗ ಎಲ್ಲಿ ನಮಾಝ್ ನಿರ್ವಹಿಸಿದ್ದೆಂದು ತಿಳಿದಿದೆಯೇ? ಬೈತುಲಹ್'ಮ್ ನಲ್ಲಿ. ಇಲ್ಲಿ ಪ್ರವಾದಿ ಈಸಾ (ಅ) ರವರ ಜನನವಾಯಿತು " ಎಂದರು ಜಿಬ್ರೀಲ್ (ಅ)
( ಸುನನು ನ್ನಸಾಯೀ ಹದೀಸ್ ನಂ- 450)
ಬೈತುಲಹ್'ಮ್ ಬೈತುಲ್ ಮುಖದ್ದಸ್ ನಿಂದ ಆರು ಮೈಲು ಅಂತರದಲ್ಲಿದೆ.( ಸ್ವೂರತುಲ್ ಅರ್'ಳ್ -108)
ಕ್ರೈಸ್ತರು ಇದನ್ನು "ಬೆತ್ಲಹೆಮ್ "ಎಂದು ಕರೆಯುತ್ತಾರೆ.
#ಮದ್ಯ #ಕುಡಿದಿರುತ್ತಿದ್ದರೆ..
ಬೈತುಲ್ ಮುಖದ್ದಸ್ ನಲ್ಲಿ ನಮಾಝ್ ನಿಂದ ವಿರಮಿಸಿದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ತೀವ್ರ ಬಾಯಾರಿಕೆಯಾಗತೊಡಗಿತು. ಎಷ್ಟರವರೆಗೆಂದರೆ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳುತ್ತಾರೆ,
" ನನ್ನ ಜೀವನದಲ್ಲಿ ಈ ರೀತಿ ಯಾವತ್ತೂ ಬಾಯಾರಿದ್ದಿಲ್ಲ. ಅಂತಹ ತೀವ್ರ ತರದ ದಾಹವು ಉಂಟಾಯಿತು. ಆಗ ಜಿಬ್ರೀಲ್(ಅ) ರವರು ಎರಡು ಪಾತ್ರೆಗಳನ್ನು ಹಿಡಿದುಕೊಂಡು ಬಂದರು. ಒಂದರಲ್ಲಿ ಹಾಲಿತ್ತು. ಮತ್ತೊಂದರಲ್ಲಿ ಮದ್ಯವಿತ್ತು.
" ನಿಮಗೆ ಇಷ್ಟವುಳ್ಳದ್ದು ಆಯ್ಕೆ ಮಾಡಿರಿ " ಎಂದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಹಾಲಿನ ಪಾತ್ರೆಯನ್ನು ಕೈಗೆತ್ತಿಕೊಂಡರು.
ಆಗ ಜಿಬ್ರೀಲ್ (ಅ)ರವರು " ತಾವು ಪ್ರಾಕೃತಿಕವಾದುದನ್ನೇ ಆರಿಸಿಕೊಂಡಿರುವಿರಿ" ಎಂದರು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಸ್ವಲ್ಪ ಹಾಲನ್ನು ಕುಡಿದು ಉಳಿದುದನ್ನು ಮರಳಿಸಿದರು.
ಜಿಬ್ರೀಲ್ (ಅ) ರವರು ಹೇಳಿದರು, "ಒಂದು ವೇಳೆ ತಾವು ಮದ್ಯವನ್ನು ಕುಡಿದಿರುತ್ತಿದ್ದರೆ ತಮ್ಮ ಜನತೆಯ ಎಲ್ಲರೂ ನಾಶವಾಗುತ್ತಿದ್ದರು. ಅದೇ ರೀತಿ ತಾವು ಹಾಲನ್ನು ಸಂಪೂರ್ಣವಾಗಿ ಕುಡಿದಿರುತ್ತಿದ್ದರೆ ತಮ್ಮ ಸಮುದಾಯದಲ್ಲಿ ಯಾವೊಬ್ಬನೂ ಪಥಭ್ರಷ್ಟನಾಗುತ್ತಿರಲಿಲ್ಲ. ಇದು ಕೇಳುತ್ತಿದ್ದಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಆವೇಶ ಭರಿತರಾಗಿ, " ಜಿಬ್ರೀಲರೇ, ಉಳಿದ ಹಾಲನ್ನೂ ಕೊಟ್ಟುಬಿಡಿ, ಪೂರ್ತಿಯಾಗಿ ಕುಡಿದು ಮುಗಿಸುತ್ತೇನೆ" ಎಂದು ಹಾಲಿನ ಪಾತ್ರೆಯನ್ನು ಕೇಳಿದರು. ಆಗ ಜಿಬ್ರೀಲ್ (ಅ)ರವರು ಹೇಳಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರೇ, ಅಲ್ಲಾಹನ ಆಜ್ಞೆಯು ವಿಧಿಸಲ್ಪಟ್ಟಿದೆ. ಅಲ್ಲಾಹನ ತೀರ್ಮಾನ ಬಳಕೆಗೆ ಬಂದೇ ತೀರುತ್ತದೆ" (ರೂಹುಲ್ ಬಯಾನ್ 5-85)
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ತಮ್ಮ ಸಮುದಾಯದ ಮೇಲೆ ಅದೆಂತಹ ಕಾಳಜಿ ಮತ್ತು ಪ್ರೀತಿ ಇತ್ತೆಂಬುದನ್ನು ಇದರಿಂದ ಮನವರಿಕೆ ಮಾಡಿಕೊಳ್ಳಬಹುದು. ತಮ್ಮ ಸಮುದಾಯದಲ್ಲಿ ಯಾರೂ ಪಥಭ್ರಷ್ಟರಾಗುವುದಿಲ್ಲ ಎಂದಾಗ ಹಾಲನ್ನು ಪುನಃ ಪಡೆದು ಸಂಪೂರ್ಣವಾಗಿ ಕುಡಿಯಲು ಬಯಸಿದರು. ಆದರೆ ಸಮುದಾಯದ ಹಲವರು ಪಥಭ್ರಷ್ಟರಾಗಬೇಕೆನ್ನುವುದು ಅಲ್ಲಾಹನು ಮೊದಲೇ ತೀರ್ಮಾನಿಸಿದ್ದ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಬೈತುಲ್ ಮುಖದ್ದಸ್ ಗೆ ತಲುಪಿದಾಗ ಅಲ್ಲಿ ಎಲ್ಲಾ ಪ್ರವಾದಿಗಳನ್ನು ಒಗ್ಗೂಡಿಸಲಾಗಿತ್ತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ
ವಸಲ್ಲಮರನ್ನು ಕಂಡು ಎಲ್ಲಾ ಪ್ರವಾದಿಗಳು ಆನಂದತುಂದಿಲರಾದರು. ನಮಾಝ್ ಗೆ ನಿಂತಾಗ ಎಲ್ಲಾ ಪ್ರವಾದಿಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ
ವಸಲ್ಲಮರನ್ನು ಇಮಾಮತ್ ಗಾಗಿ ಮುಂದೆ ಮಾಡಿದರು. ನಂತರ ಜಿಬ್ರೀಲ್ ಅಲೈಹಿಸ್ಸಲಾಮರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕೈ ಹಿಡಿದು ಮುಂದೆ ನಿಲ್ಲಿಸಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಎಲ್ಲಾ ಪ್ರವಾದಿಗಳಿಗೂ ಇಮಾಮತ್ ನಿಂತರು.(ಸುನನು ನ್ನಸಾಈ -81 )
ಮಹಾತ್ಮರಾದ ಇಮಾಂ ಬೂಸ್ವೂರೀ(ರ.ಅ) ತಮ್ಮ ಖಸ್ವೀದತುಲ್ ಬುರ್ದಾದಲ್ಲಿ ಹೀಗೆ ಬಣ್ಣಿಸಿದ್ದಾರೆ.
" ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಸರ್ವ ಪ್ರವಾದಿಗಳು ಮುಂದಿನ ಪದವಿ ನೀಡಿದರು. ಯಜಮಾನನಿಗೆ ದಾಸರಿಗಿಂತ ಹೆಚ್ಚಿನ ಮನ್ನಣೆ ನೀಡುವಂತೆ "
ಆಹಾ! ಎಂತಹ ರಮಣೀಯ ಕ್ಷಣ! ಲಕ್ಷಕ್ಕೂ ಮಿಕ್ಕಿದ ಪ್ರವಾದಿಗಳು ಪ್ರವಾದಿ ಶ್ರೇಷ್ಠ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನೇತೃತ್ವದಲ್ಲಿ ನಮಾಝ್ ನಿರ್ವಹಿಸುತ್ತಿದ್ದಾರೆ. ಖಂಡಿತವಾಗಿಯೂ ಪ್ರಪಂಚದಲ್ಲಿ ಇಂತಹ ಒಂದು ಇಮಾಂ ಜಮಾಅತ್ ಎಂದೂ ಈ ಧರೆಯ ಮೇಲೆ ನಡೆದಿಲ್ಲ.
ಈ ಕಾರಣದಿಂದ ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ(ರ.ಅ)ರವರು ವರ್ಣಿಸುತ್ತಾರೆ.
ನಮಾಝೇ ಅಖ್ಸಾ ಮೆ ಥಾ ಯಹೀ ಸಿರ್ರ್
ಇಮಾಂ ಹೊ ಮಾನೇ ಅವ್ವಲ್ ಆಖಿರ್
ಕೆ ದಸ್ತ್ ಬಸ್ತಾ ಪೀಛೇ ಹಾಝಿರ್
ಜೊ ಸಲ್ತನತ್ ಆಗೇ ಕರ್ ಗಯೇ ಥೆ
#ಗೈಡ್ #ಜಿಬ್ರೀಲ್ (ಅ) #ಏಕೆ?
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಿಸ್ಮಯ ಇಸ್ರಾಅ್-ಮಿಅರಾಜ್ ಯಾತ್ರೆಯ ಉದ್ದಗಲಕ್ಕೂ ಜಿಬ್ರೀಲ್ ಅಲೈಹಿಸ್ಸಲಾಂ ರವರು ಗೈಡ್ ಆಗಿ ಜೊತೆಗಿದ್ದರು. ಅಷ್ಟಕ್ಕೂ ಜಿಬ್ರೀಲ್ ಅಲೈಹಿ ವಸಲ್ಲಮರವರೇ ಯಾಕೆ ಗೈಡ್ ಆಗಿ ಬಂದರು? ಇತರ ಮಲಕ್ ಗಳೋ ಪ್ರವಾದಿಗಳೋ ಬರಬಹುದಲ್ಲವೇ?ಎಂಬ ಪ್ರಶ್ನೆ ಸಹಜ. ಜಿಬ್ರೀಲ್ ಅಲೈಹಿ ವಸಲ್ಲಮರು ಎಲ್ಲಾ ಪ್ರವಾದಿಗಳಿಗೆ ವಹ್ಯ್ (ದಿವ್ಯ ಸಂದೇಶ)ವನ್ನು ತಲುಪಿಸಿಕೊಡುವ ದೇವದೂತರಾಗಿದ್ದಾರೆ. ಎಲ್ಲಾ ಪ್ರವಾದಿಗಳ ಪರಿಚಯ ಅವರಿಗಿದೆ. ಪ್ರತಿಯೊಂದು ನಾಡಿನ ವಿಶೇಷತೆಗಳ ಬಗ್ಗೆ ಚೆನ್ನಾಗಿ ಬಲ್ಲವರಾಗಿದ್ದರು.
ಮದ್ಯನ್, ಮದೀನಾ, ಫೆಲಸ್ತೀನ್, ತೂರ್ ಸೀನಾ ಪರ್ವತ ಮುಂತಾದವುಗಳ ಬಗ್ಗೆ ನಿಖರವಾಗಿ ತಿಳಿದವರಾಗಿದ್ದರು ಜಿಬ್ರೀಲ್ ಅಲೈಹಿ ವಸಲ್ಲಮರು. ಈ ಕಾರಣದಿಂದ ಗೈಡ್ ಗೆ ಅವರೇ ಸೂಕ್ತರೆನಿಸಿದರು.
#ಇವರು #ಯಾರು #ಮಲಕಾ?
ಮಿಅ್ ರಾಜಿನ ರಾತ್ರಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಓರ್ವ ವ್ಯಕ್ತಿಯ ಮುಂದೆ ಹಾದು ಹೋದರು. ಆ ವ್ಯಕ್ತಿಯು ಅರ್ಶಿನ ಪ್ರಭೆಯಲ್ಲಿ ಪ್ರಜ್ವಲಿಸುತ್ತಿದ್ದರು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಜಿಬ್ರೀಲ್ (ಅ) ರೊಂದಿಗೆ ಕೇಳಿದರು, " ಇದು ಯಾರು ಮಲಕಾ?"
"ಅಲ್ಲ "
"ಮತ್ತೆ ಯಾರು ಪ್ರವಾದಿಯಾ? "
" ಅಲ್ಲ "
"ಹಾಗಾದರೆ ಮತ್ತೆ ಯಾರು?"
" ಈ ವ್ಯಕ್ತಿಯು ಇಹಲೋಕದಲ್ಲಿ ಸದಾ ಸಮಯ ದ್ಸಿಕ್ರ್ ಹೇಳುವವನೂ ತನ್ನ ಹೃದಯವನ್ನು ಸದಾ ಸಮಯ ಮಸೀದಿಯೊಂದಿಗೆ ಬೆಸೆದುಕೊಂಡವನೂ ಆಗಿರುವನು. ಯಾವತ್ತೂ ತಮ್ಮ ಮಾತಾಪಿತರಿಗೆ ಕೆಟ್ಟ ಮಾತುಗಳನ್ನು ಆಡುವವನೋ ಅವರನ್ನು ಅಪಮಾನಿಸುವವನೋ ಆಗಿರಲಿಲ್ಲ" ಎಂದರು ಜಿಬ್ರೀಲ್ ಅಲೈಹಿಸ್ಸಲಾಮ್.
( ಇಬ್ನ್ ಅಬಿದ್ದುನ್ಯಾ , ಕಿತಾಬುಲ್ ಔಲಿಯಾ )
#ಸ್ವರ್ಗದ #ಬಾಗಿಲಲ್ಲಿ #ಒಂದು #ಬರಹ
ಅನಸ್ ಬಿನ್ ಮಾಲಿಕ್ (ರ) ರವರಿಂದ ವರದಿ
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳಿದರು, ಮಿಅ್'ರಾಜ್ ರಾತ್ರಿ ಸ್ವರ್ಗದ ಬಾಗಿಲಲ್ಲಿ ದಾನಕ್ಕೆ ಹತ್ತುಪಟ್ಟು ಪ್ರತಿಫಲ ಮತ್ತು ಸಾಲಕ್ಕೆ ಹದಿನೆಂಟು ಪಟ್ಟು ಪ್ರತಿಫಲ ಇದೆ ಎಂದು ಬರೆದಿರುವುದನ್ನು ಕಂಡೆ. ಆಗ ನಾನು ಜಿಬ್ರೀಲ್ (ಅ) ರಲ್ಲಿ ಕೇಳಿದೆ,
"ಸಾಲದ ಪದವಿಯು ದಾನದ ಪದವಿಗಿಂತ ಹೆಚ್ಚಲು ಕಾರಣವೇನು?"
"ಯಾಚಕನ ಬಳಿ ಹಣವಿರುತ್ತದೆ. ಆದರೂ ಜನರೊಂದಿಗೆ ಆತ ಯಾಚಿಸುತ್ತಾನೆ. ಆದರೆ, ಸಾಲ ಕೇಳುವವನು ಹಣದ ಅಗತ್ಯವಿರುವುದರಿಂದಲೇ ಸಾಲ ಕೇಳುತ್ತಾನೆ" ಎಂದರು ಜಿಬ್ರೀಲ್ ಅಲೈಹಿಸ್ಸಲಾಮ್
( ಸುನನು ಇಬ್ನ್ ಮಾಜಾ 389, ಹದೀಸ್ ನಂ. 2431)
#ಎಂಟು #ಪ್ರವಾದಿಗಳೇ #ಯಾಕೆ #ಸ್ವಾಗತಿಸಿದರು?
ಅಲ್ಲಾಹನು ಇಸ್ಲಾಮ್ ಧರ್ಮದ ಪ್ರಚಾರಕ್ಕಾಗಿ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರಕ್ಕಿಂತಲೂ ಮಿಕ್ಕಿದ ಪ್ರವಾದಿಗಳನ್ನು ಈ ಭೂಲೋಕಕ್ಕೆ ಕಳುಹಿಸಿದನು. ಆ ಪೈಕಿ ಇಪ್ಪತ್ತೈದು ಪ್ರವಾದಿಗಳ ಹೆಸರನ್ನು ಪವಿತ್ರ ಖುರ್'ಆನ್ ನಲ್ಲಿ ಪ್ರಸ್ತಾಪಿಸಲಾಗಿದೆ. ಅವರಲ್ಲಿ ಎಂಟು ಪ್ರವಾದಿಗಳು
ಏಳು ಆಕಾಶಗಳಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಸ್ವಾಗತಿಸಿದರು. ಇದು ಯಾಕೆ? ಬರೀ ಎಂಟು ಪ್ರವಾದಿಗಳು ಮಾತ್ರ ಸ್ವಾಗತಿಸಲು ಕಾರಣವಾದರೂ ಏನು? ಹೌದು, ಬಹಳಷ್ಟು ರಹಸ್ಯಗಳು ಇದರ ಹಿಂದೆ ಅಡಗಿದೆ. ಅವುಗಳು ಏನು ಎಂಬುವುದನ್ನು ಒಮ್ಮೆ ಅವಲೋಕಿಸೋಣ.
ಒಂದನೇ ಆಕಾಶದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಸ್ವಾಗತಿಸಿದ್ದು ಆದಿ ಪಿತ ಆದಮ್ (ಅ). ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನ ಮತ್ತು ಪ್ರವಾದಿ ಆದಮ್ (ಅ) ರವರ ಜೀವನದಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಇಬ್ಬರೂ ಹಿಜ್ರಾದ ಸಂಕಷ್ಟಗಳನ್ನು ಅನುಭವಿಸಿದವರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಪವಿತ್ರ ಮಕ್ಕಾದಿಂದ ಪವಿತ್ರ ಮದೀನಾಕ್ಕೆ ಹಿಜ್'ರಾ ತೆರಳಿದ್ದರೆ ಪ್ರವಾದಿ ಆದಮ್ (ಅ) ರವರ ಸ್ವರ್ಗದಿಂದ ಭೂಮಿಗೂ ಭೂಮಿಯ ವಿವಿಧ ನಾಡುಗಳಿಗೆ ವಲಸೆ ಹೋಗಿದ್ದಾರೆ.
ಪ್ರವಾದಿ ಆದಮ್ (ಅ) ರವರು ಸ್ವರ್ಗದಿಂದ ಭೂಮಿಗೆ ಇಳಿದು ಬರುವಾಗ ಎಷ್ಟು ನೋವು ಅನುಭವಿಸಿದ್ದರೋ ಅಷ್ಟೇ ನೋವನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ತಾವು ಹುಟ್ಟಿ ಬೆಳೆದ ಪವಿತ್ರ ಮಕ್ಕಾವನ್ನು ತ್ಯಜಿಸಿ ಮದೀನಾಕ್ಕೆ ವಲಸೆ ಹೋಗುವಾಗಲೂ ಅನುಭವಿಸಿದ್ದರು. "ಮಕ್ಕಾ! ನೀನು ನನ್ನ ಅತ್ಯಂತ ಪ್ರೀತಿಯ ನಾಡು. ನನ್ನ ಜನತೆ ನನ್ನನ್ನು ಇಲ್ಲಿಂದ ಹೊರಹಾಕದೇ ಇರುತ್ತಿದ್ದರೆ ನಾನು ನಿನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ ಎಂದು ಗದ್ಗದಿತರಾಗಿ ಹೇಳಿದರು. ಮಿಅ್'ರಾಜ್ ಯಾತ್ರೆಯ ಬಳಿಕ
ವರ್ಷ ಕಳೆದೊಡನೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ಮದೀನಾಕ್ಕೆ ವಲಸೆ ಹೋಗುವುದಕ್ಕಿತ್ತು. ಈ ಕಾರಣದಿಂದ ಹಿಜ್ರಾದ ಸ್ವಲ್ಪ ಮುಂಚೆ ಇಬ್ಬರನ್ನು ಭೇಟಿಯಾಗಿಸಿ ಮಕ್ಕಾ ತ್ಯಜಿಸುವ ವಿರಹ ವೇದನೆಗೆ ಪ್ರವಾದಿ ಆದಮ್ (ಅ) ರವರ ಮೂಲಕ ಸಾಂತ್ವನ ನೀಡುವ ಉದ್ದೇಶವು ಇದರಲ್ಲಿ ಅಡಗಿರಬಹುದು.
ಭೂಮಿಯೇತರ ಹೊಸ ಪ್ರಪಂಚಕ್ಕೆ ಬರುವ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಮೊಟ್ಟಮೊದಲು ಸ್ವಾಗತ ಕೋರಲು ಪ್ರವಾದಿ ಆದಮ್ (ಅ) ರವರನ್ನು ನಿಶ್ಚಯಿಸಿರುವುದರಲ್ಲಿ ಆದಿ ಮತ್ತು ಅಂತ್ಯ ಪ್ರವಾದಿಗಳನ್ನು ಪರಸ್ಪರ ಸಮ್ಮಿಲನಗೊಳಿಸುವ ಉದ್ದೇಶವೂ ಅಡಗಿದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಪ್ರೀತಿಯಿಂದ ಬರಮಾಡಿಕೊಂಡ ಪ್ರವಾದಿ ಆದಮ್ (ಅ)ರವರು ದೀನೀ ಬೋಧನೆಯ ಪರಮೋನ್ನತ ಗುರಿ ಏನಾಗಿರಬೇಕೆಂದು ತಿಳಿಸಿಕೊಡುತ್ತಾರೆ. ಸ್ವಾಗತದ ವೇಳೆ ಪ್ರವಾದಿ ಆದಮ್ (ಅ)ರವರು ಎಡ ದಿಕ್ಕಿಗೆ ತಿರುಗಿ ಕಣ್ಣೀರಿಡುತ್ತಿದ್ದರು. ನರಕದಲ್ಲಿ ಬಿದ್ದು ಬೆಂದು ಕರಕಲಾಗುತ್ತಿರುವ ತಮ್ಮ ಜನತೆಯನ್ನು ಎಂತಹ ತ್ಯಾಗಗಳನ್ನು ಸಹಿಸಿಯಾದರೂ ರಕ್ಷಿಸಬೇಕು ಎಂಬ ಸಂದೇಶವನ್ನು ನೀಡಿದರು. ಪ್ರವಾದಿ ಆದಮ್ (ಅ) ರವರ ಕಣ್ಣೀರಿನ ಒಳಗುದಿ ಅರ್ಥ ಮಾಡಿಕೊಂಡಿದ್ದರಿಂದಲೇ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಮಿಅ್'ರಾಜ್ ಯಾತ್ರೆಯ ಬಳಿಕ ತಮ್ಮ ಪುತ್ರಿ ಫಾತಿಮಾ (ಅ) ರವರ ಬಳಿ ತಾವು ನರಕದಲ್ಲಿ ಕಂಡ ದೃಶ್ಯಗಳನ್ನು ಸ್ಮರಿಸಿ ಕಣ್ಣೀರಿಟ್ಟಿದ್ದು.
ಎರಡನೇ ಆಕಾಶಕ್ಕೆ ತೆರಳಿದಾಗ ಅಲ್ಲಿ ಭವ್ಯವಾಗಿ ಸ್ವಾಗತಿದ್ದು ಪ್ರವಾದಿ ಈಸಾ (ಅ) ಮತ್ತು ಪ್ರವಾದಿ ಯಹ್ಯಾ(ಅ) ರವರಾಗಿದ್ದರು. ಈ ಇಬ್ಬರು ಪ್ರವಾದಿಗಳು ಇಸ್ಲಾಮಿನ ಪರಮ ವೈರಿಗಳಾದ ಯಹೂದರಿಂದ ಅಸಹನೀಯ ನೋವನ್ನು ಅನುಭವಿಸಿದವರು. ಎಷ್ಟರವರೆಗೆಂದರೆ, ಯಹೂದಿಗಳು ಪ್ರವಾದಿ ಯಹ್ಯಾ(ಅ) ರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈದರು. ಪ್ರವಾದಿ ಈಸಾ (ಅ) ರವರನ್ನು ಕೂಡಾ ಶಿಲುಬೆಗೇರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲು ಮುಂದಾದಾಗ ಅಲ್ಲಾಹನು ಅವರನ್ನು ಆಕಾಶಕ್ಕೆ ಏರಿಸಿದನು. ಒಟ್ಟಿನಲ್ಲಿ ಇಬ್ಬರೂ ಯಹೂದಿಗಳ ಕ್ರೂರ ಮರ್ದನವನ್ನು ಸಹಿಸಿದವರು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಮಿಅ್'ರಾಜ್ ಯಾತ್ರೆಯ ಬಳಿಕ ನಡೆಸುವ ಮದೀನಾದೆಡೆಗಿನ ಹಿಜ್ರಾದಲ್ಲೂ ಯಹೂದಿಗಳ ದೌರ್ಜನ್ಯ , ಹಿಂಸೆ, ಪೀಡನೆಗಳು ಸಹಜ. ಕಾರಣ ಯಹೂದಿ ಬಾಹುಳ್ಯವಿದ್ದ ಮದೀನಾದಲ್ಲಿ ಅವರು ನೀಡುವ ಶೋಷಣೆ ಮತ್ತು ದೌರ್ಜನ್ಯಕ್ಕೆ ಪ್ರತಿಯಾಗಿ ಸಹನೆ ತಾಳಲು, ಅವರ ಷಡ್ಯಂತ್ರಕ್ಕೆ ಬಲಿಯಾಗದೆ ಎಚ್ಚರಿಕೆಯಿಂದಿರಲು ಅಲ್ಲಾಹನು ಈ ಇಬ್ಬರು ಪ್ರವಾದಿಗಳ ಮೂಲಕ ಸ್ವಾಗತಿಸಲು ನಿಶ್ಚಯಿಸಿರಬಹುದು. ಓರ್ವ ಯಹೂದಿ ಮಹಿಳೆ ಆಹಾರದಲ್ಲಿ ವಿಷ ಬೆರೆಸಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕೊಲ್ಲಲು ಪ್ರಯತ್ನಿಸಿದ್ದು ಇಲ್ಲಿ ಸ್ಮರಿಸಬಹುದು.
ಮೂರನೆ ಆಕಾಶದಲ್ಲಿ ಸ್ವಾಗತಿಸಿದ್ದು, ಚೆಲುವಿನ ರಾಜ ಪ್ರವಾದಿ ಯೂಸುಫ್ (ಅ). ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಮತ್ತು ಪ್ರವಾದಿ ಯೂಸುಫ್ (ಅ) ರವರ ಬದುಕಿನಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಪ್ರವಾದಿ ಯೂಸುಫ್ (ಅ) ರನ್ನು ತಮ್ಮ ಊರಿನವರೇ ವಿಶೇಷತಃ ತಮ್ಮ ಸಹೋದರರೇ ದ್ರೋಹವೆಸಗಿದರು. ದೈಹಿಕ ಹಾಗೂ ಮಾನಸಿಕ ಯಾತನೆಗಳನ್ನು ಅನುಭವಿಸುವಂತೆ ಮಾಡಿದರು. ಪಾಳು ಬಾವಿಗೆ ದೂಡಿ ಹಾಕಿ ಕೊಲ್ಲಲು ಪ್ರಯತ್ನಿಸಿದರು. ಆದರೆ ಪ್ರವಾದಿ ಯೂಸುಫ್ (ಅ) ರವರು ಅಲ್ಲಿಂದ ಬಚಾವಾಗಿ ಮುಂದೆ ಮಿಶ್ರ್ ನ ರಾಜರಾಗಿ ಮೆರೆದರು. ಆಗ ತಮ್ಮನ್ನು ಪಾಳು ಬಾವಿಗೆ ದೂಡಿ ಹಾಕಿದವರು ತಮ್ಮ ಮುಂದೆ ಬಂದು ನಿಂತಾಗ ಅವರನ್ನು ಶಿಕ್ಷಿಸುವ ಎಲ್ಲಾ ಅವಕಾಶಗಳು ಇದ್ದು ಕೂಡಾ ಪ್ರವಾದಿ ಯೂಸುಫ್ (ರ) ರವರು " ಈ ದಿನ ನಿಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಿಮಗೆಲ್ಲರಿಗೂ ಸಾರ್ವತ್ರಿಕ ಕ್ಷಮೆ ನೀಡಿರುವೆನು " ಎಂದು ಹೇಳುತ್ತಾ ಆದರ್ಶ ಮೆರೆದರು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಬದುಕೂ ಕೂಡಾ ಪ್ರವಾದಿ ಯೂಸುಫ್ (ಅ) ರಂತೆಯೇ ಆಗಿತ್ತು. ಅವರನ್ನು ಕೂಡಾ ಮರ್ದಿಸಿದ್ದು ತಮ್ಮ ಹುಟ್ಟೂರಿನ
ಕುಲಗೋತ್ರದವರಾದ ಕುರೈಶಿಗಳು. ನಾನಾ ವಿಧ ಕಷ್ಟನಷ್ಟಗಳನ್ನು ಅನುಭವಿಸಿದರೂ ಮಕ್ಕಾ ಫತ್'ಹ್ ನ ವೇಳೆ ತಮ್ಮೊಂದಿಗೆ ಲಕ್ಷಾಂತರ ಮಂದಿ ಅನುಯಾಯಿಗಳಿದ್ದರೂ ತಮ್ಮ ಪರಮ ವೈರಿಗಳಿಗೆಲ್ಲಾ ಸಾರ್ವತ್ರಿಕ ಕ್ಷಮೆಯನ್ನು ನೀಡಿ ಬಿಟ್ಟರು. ಈ ಸಂದರ್ಭದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು, " ಪ್ರವಾದಿ ಯೂಸುಫ್ (ಅ) ರವರು ತಮ್ಮನ್ನು ವಿರೋಧಿಸಿದವರೊಂದಿಗೆ ಹೇಳಿದ ಅದೇ ಮಾತನ್ನು ನಾನೂ ಕೂಡಾ ಹೇಳುತ್ತಿದ್ದೇನೆ. ಈ ದಿನ ನಿಮ್ಮಲ್ಲಿ ಯಾರನ್ನೂ ಕೂಡಾ ಬಂಧನಕ್ಕೊಳಪಡಿಸುವುದಿಲ್ಲ. ಶಿಕ್ಷೆಗೆ
ಒಳಪಡಿಸುವುದಿಲ್ಲ ಎಂದು ಹೇಳುತ್ತಾ ಪ್ರವಾದಿ ಯೂಸುಫ್ (ಅ) ರಂತೆ ಹೃದಯ ವೈಶಾಲತೆ ಮೆರೆದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಈ ಮಹತ್ಗುಣಕ್ಕೆ ಪ್ರವಾದಿ ಯೂಸುಫ್ (ಅ) ರವರು ಸ್ಫೂರ್ತಿಯಾದರೇ?
ನಾಲ್ಕನೆಯ ಆಕಾಶದಲ್ಲಿ ಸ್ವಾಗತಿಸಿದ್ದು ಪ್ರವಾದಿ ಇದ್ರೀಸ್ (ಅ). ಈ ಪ್ರಪಂಚದಲ್ಲಿ ಮೊತ್ತ ಮೊದಲು ಲೇಖನಿ ಬಳಸಿದ್ದು ಪ್ರವಾದಿ ಇದ್ರೀಸ್ (ಅ) ರವರಾಗಿದ್ದಾರೆ. ಪ್ರಭೋಧನೆಯ ವೇಳೆ ಲೇಖನಿಯ ಮಹತ್ವವನ್ನು ಅರಿತಿರಲು ಪ್ರವಾದಿ ಇದ್ರೀಸ್ (ಅ) ರನ್ನು ಸಂದರ್ಶಿಸುವಂತೆ ಮಾಡಲಾಯಿತು. ಪವಿತ್ರ ಖುರ್'ಆನ್ ನಲ್ಲಿ ಅಲ್ಲಾಹನು " ನಾವು ಅವರನ್ನು ಉನ್ನತ ಸ್ಥಾನಕ್ಕೆ ಭಡ್ತಿ ನೀಡಿದ್ದೇವೆ" ಎಂದು ಹೇಳುತ್ತಾ ಅವರ ಮಹೋನ್ನತೆಯನ್ನು ಕೊಂಡಾಡಿದ್ದಾನೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಂತಹ ಅತ್ಯುನ್ನತ ಸ್ಥಾನದಲ್ಲಿರುವವರನ್ನು ಸ್ವಾಗತಿಸಲು ಅತ್ಯುನ್ನತ ಸ್ಥಾನದಲ್ಲಿರುವವರೇ ಆಗಿರುವುದು ಸೂಕ್ತ ತಾನೇ?
ಐದನೇ ಆಕಾಶದಲ್ಲಿ ಸ್ವಾಗತಿಸಿದ ಹಾರೂನ್ (ಅ) ರವರಲ್ಲೂ ಬಹಳಷ್ಟು ಪಾಠಗಳನ್ನು ಕಲಿಯಲಿಕ್ಕಿತ್ತು. ಹಾರೂನ್ (ಅ) ಸಹನೆಯ ಪ್ರತಿರೂಪವಾಗಿದ್ದರು. ಬನೂ ಇಸ್ರಾಯೀಲರಿಗೆ ಹಾರೂನ್ (ಅ) ರವರೆಂದರೆ ಅಚ್ಚುಮೆಚ್ಚು. ಪ್ರವಾದಿ ಮೂಸಾ (ಅ) ರವರು ಗಂಭೀರ ಸ್ವಭಾವದವರಾಗಿದ್ದರಿಂದ ಹೆಚ್ಚು ಮಂದಿ ಹಾರೂನ್ (ಅ) ರವರ ಬಳಿಯೇ ನೆರೆಯುತ್ತಿದ್ದರು. ಮಿಅ್'ರಾಜಿನ ರಾತ್ರಿಯಲ್ಲೂ ಅವರ ಸುತ್ತಮುತಲಿದ್ದ ಬನೂ ಇಸ್ರಾಯೀಲರಿಗೆ ಉಪನ್ಯಾಸ ನೀಡುತ್ತಿರುವುದಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಕಂಡರು.
ಫಿರ್'ಔನ್ ನಂತಹ ದುರಹಂಕಾರಿ ರಾಜರ ಮುಂದೆ ಸತ್ಯವನ್ನು ದಿಟ್ಟವಾಗಿ ಹೇಳಲು ಮೂಸಾ (ಅ) ರವರಿಗೆ ಸಾಥ್ ನೀಡಿದ ಹಾರೂನ್ (ಅ) ರವರು, ಮುಂದಿನ ವರ್ಷ ಹಿಜ್ರಾದ ನಂತರ ಮಹಾ ಸಾಮ್ರಾಜ್ಯಗಳಾದ ರೋಮ್ , ಪರ್ಶಿಯನ್ ಮತ್ತು ಈಜಿಪ್ಟ್ ಗೆ ತೆರಳಿ ಸತ್ಯ ಧರ್ಮವನ್ನು ಬೋಧಿಸುವಾಗ ಪ್ರವಾದಿ ಹಾರೂನ್ (ಅ) ರವರ ದಿಟ್ಟತನ, ಎದೆಗಾರಿಕೆ ಪ್ರೇರಕ ಶಕ್ತಿಯಾಗಬೇಕೆಂಬ ಸದುದ್ದೇಶವೂ ಈ ಭೇಟಿಯಲ್ಲಿ ಅಡಗಿತ್ತು.
ಆರನೇ ಆಕಾಶದಲ್ಲಿ ಹೃದಯಸ್ಪರ್ಶಿಯಾಗಿ ಸ್ವಾಗತಿಸಿದ್ದು ಪ್ರವಾದಿ ಮೂಸಾ (ಅ). ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಮತ್ತು ಮೂಸಾ (ಅ)ರವರ ಬದುಕಿನಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಎಲ್ಲಾ ಪ್ರವಾದಿಗಳಿಗೆ ವಿರೋಧಿಗಳಿಂದ ನೋವನ್ನು ಅನುಭವಿಸಬೇಕಾಗಿ ಬಂದರೆ ಪ್ರವಾದಿ ಮೂಸಾ (ಅ) ರವರಿಗೆ ವಿರೋಧಿಗಳ ಜೊತೆ ಅನುಯಾಯಿಗಳಿಂದಲೂ ಅನುಭವಿಸಬೇಕಾಗಿ ಬಂತು. ಇದೇ ರೀತಿ ತಮಗೂ ತಮ್ಮವರಿಂದ ಹಿಂಸೆ, ಕಿರುಕುಳ ಅನುಭವಿಸಬೇಕಾಗಿ ಬರುವುದು. ಆದ್ದರಿಂದ ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನು ಪ್ರವಾದಿ ಮೂಸಾ (ಅ) ರವರು ನೀಡಿದರು.
ಪ್ರವಾದಿ ಮೂಸಾ (ಅ) ರವರಿಗೆ ಅವರ ಅನುಯಾಯಿಗಳು ಕೊಡುತ್ತಿದ್ದ ಕಿರುಕುಳ ಅದೆಷ್ಟು ತೀವ್ರವಾಗಿತ್ತೆಂದರೆ ನಿಲ್ಲಲು ಹೇಳಿದರೆ ಕುಳಿತುಕೊಳ್ಳುತ್ತಿದ್ದರು. ಕುಳಿತುಕೊಳ್ಳಲು ಹೇಳಿದರೆ ನೆಲದಲ್ಲಿ ಹೊರಳಾಡುತ್ತಿದ್ದರು. ಶಿರಭಾಗಿಸಿ ಬನ್ನಿ ಎಂದರೆ ಕಾಲುಗಳನ್ನು ಮುಂದಿಟ್ಟು ತೆವಳುತ್ತಾ ಬರುತ್ತಿದ್ದರು. ಹೀಗೆ ಪ್ರವಾದಿ ಮೂಸಾ (ಅ) ರವರು ಆಜ್ಞಾಪಿಸಿದ್ದಕ್ಕೆ ನೇರ ವಿರುದ್ಧವಾಗಿ ವರ್ತಿಸುತ್ತಾ ಅವರಿಗೆ ಅಸಹನೀಯ ನೋವನ್ನು ನೀಡುತ್ತಿದ್ದರು.
ಒಮ್ಮೆ ಪ್ರವಾದಿ ಮೂಸಾ (ಅ) ರವರು ತೂರ್ ಸೀನಾ ಪರ್ವತಕ್ಕೆ ತೆರಳಿದ್ದಾಗ ಅವರು ಹಸುವಿನ ಮರಿಯನ್ನು ಆರಾಧಿಸತೊಡಗಿದರು. ಮರಳಿ ಬಂದಾಗ ಅವರ ವರ್ತನೆಯನ್ನು ಕಂಡು ಮೂಸಾ (ಅ) ರವರು ಕಿಡಿಕಿಡಿಯಾದರು. " ತಾವು ಮಾಡಿದ್ದು ತಪ್ಪು. ಆದ್ದರಿಂದ ತಾವು ಅಲ್ಲಾಹನಲ್ಲಿ ಕ್ಷಮೆ ಯಾಚಿಸಬೇಕು ಎಂದು
ಪಾಪ ಮೋಕ್ಷಕ್ಕಿರುವ ಮಾರ್ಗವನ್ನು ತಿಳಿಸಿಕೊಟ್ಟರು. ಎಲ್ಲರೂ ಹಿತ್ತತುನ್ ಎಂದು ಹೇಳಬೇಕು( ಹಿತ್ತತುನ್ ಅಂದರೆ ನನ್ನ ಪಾಪವನ್ನು ಮನ್ನಿಸು ಎಂದರ್ಥ) ಎಂದು ಆಜ್ಞಾಪಿಸಿ, ಹಾಗೆಯೇ ಹೇಳಿ ಕೊಟ್ಟರು. ಆಗ ಅವರು ಹಿತ್ತತುನ್ ಎಂದು ಹೇಳದೆ ಹಿಂತತುನ್ ಎಂದು ಹೇಳಿದರು. ಹಿಂತತುನ್ ಅಂದರೆ ನಮಗೆ ಗೋಧಿ, ದವಸ ಧಾನ್ಯಗಳನ್ನು ನೀಡು ಎಂದರ್ಥ. ಅವರು ಇಲ್ಲೂ ಮೂಸಾ (ಅ) ರವರು ಆಜ್ಞಾಪಿಸಿದ್ದಕ್ಕೆ ವಿರುದ್ಧವಾದ ಪದವನ್ನು ಹೇಳಿ ಅವಿಧೇಯತೆಯನ್ನು ತೋರಿದರು. ಹೀಗೆ ಅವರು ತಮ್ಮ ಅನುಯಾಯಿಗಳಿಂದಲೇ ಹಲವು ತೆರನಾದ ಮಾನಸಿಕ ಕಿರುಕುಳಗಳನ್ನು ಅನುಭವಿಸಬೇಕಾಗಿ ಬಂತು. ಇದೇ ರೀತಿ ತಮಗೂ ತಮ್ಮವರಿಂದ ಮಾನಸಿಕ ಕಿರುಕುಳ ಅನುಭವಿಸಬೇಕಾಗಿ ಬರುವುದು. ಆದ್ದರಿಂದ ಮೂಸಾ (ಅ) ರವರಂತೆ ಸಹನೆ, ಸಂಯಮ ಪಾಲಿಸುವ ಪಾಠವನ್ನು ತಿಳಿದುಕೊಳ್ಳಲು ಅವರಿಬ್ಬರನ್ನು ಪರಸ್ಪರ ಭೇಟಿ ಮಾಡಿಸಲಾಯಿತು.
ಖುರ್'ಆನ್ ನ ಒಂದು ಕಡೆ ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಕರೆದು ಹೀಗೆ ಹೇಳಿದ್ದಾನೆ. " ಸತ್ಯ ವಿಶ್ವಾಸಿಗಳೇ, ನೀವು ಮೂಸಾರಿಗೆ ತೊಂದರೆ ನೀಡಿದವರಂತೆ ಆಗಬೇಡಿರಿ"
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಈಗಲೂ ತಮ್ಮ ಅನುಯಾಯಿಗಳಿಂದಲೇ ಕಿರುಕುಳವನ್ನು ಅನುಭವಿಸುತ್ತಿಲ್ಲವೇ? ಮುಸ್ಲಿಮ್ ನಾಮಧಾರಿಗಳಾದ ಕೆಲವು ನೂತನವಾದಿಗಳು ಅವರ ಮಾತಾಪಿತರು ನರಕವಾಸಿಗಳು, ಅವರು ನಮ್ಮಂತೆ ಸಾಮಾನ್ಯ ಮನುಷ್ಯರು ಎಂದು ಹೇಳುತ್ತಾ ಈಗಲೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ತೊಂದರೆ ನೀಡುತ್ತಿಲ್ಲವೇ?
ಏಳನೆಯ ಆಕಾಶದಲ್ಲಿ ಖಲೀಲುಲ್ಲಾಹಿ ಇಬ್ರಾಹೀಮ್ (ಅ) ರವರಿಂದ ಭವ್ಯ ಸ್ವಾಗತ ಲಭಿಸಿತು. ಪ್ರವಾದಿ ಇಬ್ರಾಹೀಮ್ (ಅ) ರವರಿಗೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರವರಿಗೂ ಅವಿನಾಭಾವ ಸಂಬಂಧವಿದೆ. ಇಬ್ರಾಹೀಮ್ (ಅ) ರವರ ಪುತ್ರ ಇಸ್ಮಾಈಲ್ (ಅ) ರವರ ಕುಟುಂಬ ಪರಂಪರೆಯಲ್ಲಿ ಬಂದವರಾಗಿದ್ದಾರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು. ಪ್ರಬೋಧನೆಯ ವೇಳೆಯಲ್ಲಿ ನಮ್ರೂದನ ಅಗ್ನಿ ಕುಂಡದಂತಹ ತೀಕ್ಷ್ಣ ವಿರೋಧಗಳು ನಿಮಗೂ ಎದುರಾಗಬಹುದು. ಆಗ ನೀವೂ ಕೂಡಾ ಪ್ರವಾದಿ ಇಬ್ರಾಹೀಮ್ (ಅ) ರವರಂತೆ ಸ್ವಲ್ಪವೂ ಎದೆಗುಂದದೆ ಅಚಲವಾಗಿ ನಿಂತು ಪ್ರಬೋಧನೆ ನಡೆಸಬೇಕೆಂಬ ಸಂದೇಶವನ್ನು ನೀಡುವ ಸಲುವಾಗಿರಬಹುದು ಅವರಿಬ್ಬರನ್ನು ಪರಸ್ಪರ ಭೇಟಿಯಾಗಿಸಿದ್ದು. ಹೀಗೆ ಸಪ್ತ ಗಗಗದಲ್ಲಿ ಸ್ವಾಗತಿಸಲು ನಿಶ್ಚಯಿಸಿದ ಎಂಟು ಪ್ರವಾದಿಗಳ ಹಿಂದೆ ಇನ್ನೂ ರೋಚಕ ರಹಸ್ಯಗಳು ಅಡಗಿವೆ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಅಲ್ಲಿ ಸ್ವರ್ಗದ ಮನೋಹರ ದೃಶ್ಯವನ್ನು ಮತ್ತು ನರಕದ ಭೀಕರ ಹಾಗೂ ಭಯಾನಕ ಚಿತ್ರಣವನ್ನು ಕಣ್ಣಾರೆ ಕಂಡರು. ಅಲ್ಲಾಹನನ್ನು ತಮ್ಮ ನಯನಗಳಿಂದ ಕಂಡರು. ಅಲ್ಲಾಹನೊಂದಿಗೆ ಸಂಭಾಷಣೆ ನಡೆಸಿದರು. ಮರಳಿ ಬರುವಾಗ ಅಲ್ಲಾಹನಿಂದ
ಐವತ್ತು ಹೊತ್ತಿನ ಪುಣ್ಯ ಲಭಿಸುವ ಐದು ಹೊತ್ತಿನ ನಮಾಝಿನ ಪಾರಿತೋಷಕವನ್ನು ಪಡೆದುಕೊಂಡು ಬಂದರು. ಈ ಕಾರಣದಿಂದ ರಜಬ್ ಇಪ್ಪತ್ತೇಳು ನಮಾಝಿನ ವಾರ್ಷಿಕವೂ ಹೌದು.
ಪರಲೋಕದಲ್ಲಿ ತೌಹೀದ್ ನಂತರ ಮೊತ್ತ ಮೊದಲನೆಯದಾಗಿ ನಮ್ಮೊಂದಿಗೆ ವಿಚಾರಿಸುವುದು ಇದೇ ನಮಾಝಿನ ಕುರಿತು. ಅದರಲ್ಲಿ ನಾವು ಯಶ ಸಾಧಿಸಿದರೆ ನಮಗೆ ಅನಂತ ಸ್ವರ್ಗ. ಇಲ್ಲದಿದ್ದರೆ ನರಕದ ಯಾತನಾಮಯ ಶಿಕ್ಷೆ. ಮರಣದ ಕೊನೆಯ ನಿಮಿಷದವರೆಗೂ ನಮಾಝನ್ನು ಕ್ಲಪ್ತ ಸಮಯಕ್ಕೆ ನಿರ್ವಹಿಸಲು ನಾವು ಪ್ರತಿಜ್ಞೆಗೆಯ್ಯೋಣ. ಒಂದು ಹೊತ್ತು ಕೂಡಾ ಖಝಾ ಆಗದಂತೆ ನಿರ್ವಹಿಸಲು ಪಣತೊಡೋಣ.
ಎಂ.ಎ. ಇಸ್ಮಾಈಲ್ ನ'ಈಮಿ ಮಂಗಳಪೇಟೆ.

Comments