Skip to main content

ಅಹ್ಲ್ ಸುನ್ನತ್ ವಲ್ ಜಮಾಅತಿನ ಆಶಯ ಮತ್ತು ಆದರ್ಶ

_*ಆಧಾರರಹಿತ ಆರೋಪಗಳ ಸುತ್ತ*_
🍂🍂🍂🍂🍂🍂🍂

✍ ಗಫೂರ್ ಬಾಯಾರ್
**********************

*ಒಂದು ದಿನ ನಾವು ಮತ್ತು ನಬಿ ﷺِರು ಅಂತ್ಯ ವಿಶ್ರಮ ಪಡೆಯುತ್ತಿರುವ ಮದೀನಾದ ರೌಲಾ ಶರೀಫರಿಗೆ ಹೋದೆವು.*

*ಅದು ಜುಮಾ ದಿನವಾದುದರಿಂದ ಸಾಗರದಂತಹ ಜನಜಂಗುಳಿ ಇತ್ತು. ಆ ಜನಜಂಗುಳಿಯ ನಡುವೆ ನಾವು ನಿಧಾನವಾಗಿ ಹೆಜ್ಜೆ ಹಾಕುತ್ತಾ ಖಬರ್ ಷರೀಫಿ‌ನೆದುರು ತಲುಪಿದಾಗ ಸಲಾಂ ಹೇಳಿ ಮುಂದೆ ಸಾಗಿದೆವು. ಜನಜಂಗುಳಿಯಲ್ಲಿ ಇರಾಕಿಗಳು ಮತ್ತು ಸಿರಿಯನ್ನರೇ ಹೆಚ್ಚಿದ್ದರು. ಮೇಲ್ನೋಟಕ್ಕೆ ಅವರು ಒಳ್ಳೆಯ ಹೈಅತ್ತ್‌ ಉಳ್ಳವರೆನ್ನುವುದು ಮನವರಿಕೆಯಾಗುತ್ತಿತ್ತು.*

*ಹಾಗೆ ನಾವು ನಡೆಯುತ್ತಾ ಮುಂದೆ ಸಾಗುತ್ತಿದ್ದಾಗ ಯಾರೋ ಒಬ್ಬರು (ಅದು ಯಾರೆಂದು ನಾನು ಸರಿಯಾಗಿ ಗಮನಿಸಲಿಲ್ಲ) ಅಲ್ಲಾಹನ ಹಬೀಬಾದ ನಬಿ ﷺِರ ಖಬರ್ ಶರೀಫಿನ ಬಾಗಿಲಿಗೆ ಕೈ ಇಟ್ಟರು.*

*ಆಗ ಇದನ್ನು ಕಂಡ ಅಲ್ಲಿನ ಕಾವಲುಗಾರ ಕೂಡಲೇ, ಹೇಯ್ ಮುಶ್ರಿಕ್.... ಇದು ಮಿತಿಮೀರಿದ ಆರಾಧನೆ. ಇದು ಹರಾಂ ಮಾತ್ರವಲ್ಲ ಕುಫ್ರ್ ಸಹ ಆಗಿದೆ ಎಂದನು.*

*ಆ ಕಾವಲುಗಾರನ ಮಾತು ಕೇಳಿ ನಾನು ತಕ್ಷಣ ಅಲ್ಲೇ ನಿಂತೆ. ಮಾತ್ರವಲ್ಲ ಆ ಕಾವಲುಗಾರನಿಗೆ ಯಾವುದು ಹರಾಮ್ ಯಾವುದು ಕುಫ್ರ್ ಎಂಬುದನ್ನು ಮನವರಿಕೆ ಮಾಡಿ ಕೊಡಲೇಬೇಕೆಂಬ ಉದ್ದೇಶದಿಂದ ಆತನ ಬಳಿ ತೆರಳಿದೆ. (ಇಂಥದ್ದನ್ನು ಕಂಡಾಗ ಯಾವುದು ಸತ್ಯ ಯಾವುದು ಮಿಥ್ಯ ಎಂಬುದನ್ನು ಬಲ್ಲವರು ಮನವರಿಕೆ ಮಾಡಿಕೊಡದೆ ಮುಂದೆ ಸಾಗುವುದರಲ್ಲಿ ಅರ್ಥವೂ ಇಲ್ಲ)*

*ಕಾವಲುಗಾರನ ಬಳಿ ಹೋದ ನಾನು, "ತಾವು ಕುರ್ಆನ್ ಪಾರಾಯಣ ಮಾಡ ಬಲ್ಲಿರಾ" ಎಂದು ನಾನು ಕೇಳಿದೆ. ಅದಕ್ಕೆ ಆತ "ಹೌದು" ಎಂದ. ನಂತರ ನಾನು, "ಸೂರತ್ ಯೂಸುಫ್" ಎಂಬ ಒಂದು ಸೂರಾ ಇದೆ ಅದನ್ನು ಪಾರಾಯಣ ಮಾಡಿದ್ದೀರಾ ಎಂದು ಕೇಳಿದೆ.*

ಆ ಸೂರಾದ 96 ನೇ ಆಯತ್‌ನಲ್ಲಿ  👇
*فَلَمَّا أَنْ جَاءَ الْبَشِيرُ أَلْقَاهُ عَلَىٰ وَجْه‍ِهِ فَارْتَدَّ بَصِيرًا*
*قَالَ أَلَمْ أَقُلْ لَکُمْ إِنِّىِ أَعْلَمُ مِنَ اللَّهِ مَا لَا تَعْلَمُونَ*

"ಅನಂತರ ಸಂತೋಷ ವಾರ್ತೆ ತಿಳಿಸುವವನೊಬ್ಬ ಅದನ್ನು ತಂದು (ಯೂಸುಫರ ಅಂಗಿಯನ್ನು) ತಂದು ಅವರ (ಯಾಕೂಬರ) ಮುಖದ ಮೇಲೆ ಹಾಕಿದಾಗ ಯಕೂಬರಿಗೆ  ದೃಷ್ಟಿ ಮರಳಿತು." ಎಂಬ ಉಲ್ಲೇಖವಿದೆ. ಇದು ಕುರ್ಆನಿನಲ್ಲಿರುವ ಸಂಗತಿಯಲ್ಲವೇ ಎಂದೆ.

ಅದಕ್ಕಾತ "ಹೌದು" ಎಂದ.

*ಹಾಗಾದರೆ ಕುರ್ಆನ್ ಇಲ್ಲಿ ಹೇಳುತ್ತಿರುವುದು "ಅಂಬಿಯಾಗಳು ಶಿರ್ಕ್ ಮಾಡಿದ್ದಾರೆ ಎಂದೇ?"*

*ಆಗ ರೌಲಾದಲ್ಲಿ ಸಲಾಂ ಹೇಳಿ ಹೋಗುತ್ತಿದ್ದವರೆಲ್ಲರೂ ನಮ್ಮ ಸುತ್ತ ನೆರದು ಈ ಚರ್ಚೆಯನ್ನು ಗಮನಿಸುತ್ತಿದ್ದರು.*

*ರಸೂಲುಲ್ಲಾಹಿ ﷺِರು ಸೂಚಿಸಿದ್ದನ್ನು ಇಮಾಮ್ ಅಹ್ಮದ್ ಬಿನ್ ಹಂಬಲ್ (ರ) ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಬಗ್ಗೆ ಪುರಾವೆ ಸಹಿತ ನಾನು ವಿವರಿಸಿದಾಗ ಆ ಬಗೆಗೆ ಆತನಿಗೇನೂ ಗೊತ್ತೇ ಇರಲಿಲ್ಲ.*

*ಕೊನೆಗೆ ನಾನು ಆತನೊಂದಿಗೆ, ಇಮಾಮ್ ಆಹ್ಮದ್ ಬಿನ್ ಹಂಬಲ್‌ (ರ) ಕಿತಾಬ್ ಹೂಲ್ ಎಂಬ ಗ್ರಂಥದ ಬಗ್ಗೆ ಕೇಳಿದ್ದೀರಾ ಎಂದು ಕೇಳಿದೆ. ಆಗ ಆತ "ಹುಂ ಕೇಳಿದ್ದೇನೆ" ಎಂದ.*

*ಆ ಗ್ರಂಥದ ಎರಡನೇ ಭಾಗದಲ್ಲಿ ಇಮಾಮ್ ಆಹ್ಮದ್ ಬಿನ್ ಹಂಬಲ್‌ (ರ)ರವರು ವಿವರಿಸಿರುವ ಒಂದು ವಿವರಣೆಯ ಬಗ್ಗೆ ಅವರ ಪುತ್ರರಾದ ಅಬ್ದುಲ್ಲಾ (ರ) ಹೀಗೆನ್ನುತ್ತಾರೆ.... "ಇಮಾಮ್ ಆಹ್ಮದ್ ಬಿನ್ ಹಂಬಲ್‌ (ರ)ರೊಡನೆ ಮುತ್ತು ನಬಿ ﷺِರವರ ಖಬರ್ ಶರೀಫನ್ನು ಸ್ಪರ್ಶಿಸುವುದು ಮತ್ತು ಚುಂಬಿಸುವುದರ ವಿಧಿಯೇನೆಂದು ಕೇಳಿದಾಗ ಅದಕ್ಕೆ ವಿರೋಧವಿಲ್ಲ ಎಂದಾಗಿತ್ತು ಅವರ ಅಭಿಪ್ರಾಯ."*

*ಆಗ ಆತ ಬನ್ನಿ ನಾವು ಲೈಬ್ರರಿಯಲ್ಲಿ ಕುಳಿತು ಮಾತನಾಡೋಣ ಎಂದ. ಆಗ ನಾನು ಇಲ್ಲಿ ಪುಣ್ಯ ಸಂಪಾದನೆಗಾಗಿ ಬಂದ ಮುಸ್ಲಿಮರನ್ನು ತಾವು ಮುಶ್ರಿಕ್ ಕಾಫಿರ್ ಎಂದಿರುವುದರಿಂದ ಸತ್ಯ ಸಂಗತಿ ಏನೆಂಬುದು ಇಲ್ಲಿರುವ ಜನರಿಗೂ ತಿಳಿಯುವ ಅಗತ್ಯವಿದೆ. ಹಾಗಾಗಿ ಇಲ್ಲೇ ಚರ್ಚೆ ಮುಂದುವರಿಸೋಣ ಎಂದೆ.*

*ಆಗ ಗಣ್ಯವ್ಯಕ್ತಿಯಂತಿದ್ದ ವ್ಯಕ್ತಿಯೊಬ್ಬರು ನಮ್ಮ ಬಳಿ ಬಂದು ಯಾ ಶೈಖ್ ಏನಾಯಿತು? ಏನು ವಿಷಯ? ಎಂದು ಕೇಳಿದರು. ಅದಕ್ಕೆ ನಾನು ಈ ವ್ಯಕ್ತಿ ಮುಸ್ಲಿಮರನ್ನು ಮುಶ್ರಿಕ್ ಮತ್ತು ಕಾಫಿರ್ ಎನ್ನುತ್ತಿದ್ದಾರೆ ಎಂದೆ.*

*ಅನಂತರ ಆ ಕಾವಲುಗಾರನಲ್ಲಿ ಕೇಳಿದ್ದ ಸೂರತ್ ಯೂಸುಫ್‌‌ನ ವಚನವನ್ನು ಉದ್ಧರಿಸಿ ಈ ಗಣ್ಯ ವ್ಯಕ್ತಿಯಂತಿದ್ದ ಮನುಷ್ಯನಲ್ಲೂ ಕೇಳಿದಾಗ "ಅದು ನಮಗಿಂತ ಮೊದಲು ಬಂದ ಅಂದರೆ ಹಿಂದಿನ ಜನತೆಯ ಶರಿಅತ್ ಆಗಿತ್ತು" ಎಂದರು.*

*ಆಗ ನಾನು ಅಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಹೇಳಿದೆ ನೋಡಿದಿರಾ ಅವರು ಶಿರ್ಕ್ ಎಂದರು. ಈ ವ್ಯಕ್ತಿ ಅದು ಶರಿಯತ್ ಆಗಿತ್ತು ಎಂದು ಹೇಳಿದರು. ಆದರೆ ಯಾವ ಪ್ರವಾದಿಯಿಂದಲೂ ಶಿರ್ಕ್‌ ಸಂಭವಿಸದು ಎಂಬುದು ನಾವೆಲ್ಲರೂ ಗಮನಿಸಬೇಕಾದ ಅಂಶ. ಎನ್ನುತ್ತಾ ಆ ಕಾವಲುಗಾರನತ್ತ ತಿರುಗಿ ಯಾವ ಆಧಾರದಿಂದ "ಅವರನ್ನು ಕಾಫಿರ್ ಎಂದು ನೀವು ಹೇಳಿದಿರಿ" ಎಂದು ಕೇಳಿದೆ.*

*ಅದಕ್ಕೆ ಆ ಕಾವಲುಗಾರ, ಅವರು ನಬಿ ﷺِರನ್ನು ಆರಾಧಿಸುತ್ತಾರೆ ಎಂದ.*

*ಇಲ್ಲ ನೀವು ಆಧಾರ ರಹಿತವಾದ ಆರೋಪ ಮಾಡುತ್ತಿದ್ದೀರಿ. ಅವರು ಆರಾಧಿಸುತ್ತಿರುವುದು ಅಲ್ಲಾಹನನ್ನು ಮಾತ್ರ. ನಿಮಗೆ ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ನೀವು ವೈದ್ಯರ ಬಳಿ ಹೋಗುವುದಿಲ್ಲವೇ? ಆಗ ನೀವು ವೈದ್ಯರನ್ನು ಆರಾಧಿಸಿದಂತಾಗುತ್ತದೆಯೇ? ವೈದ್ಯ ಮತ್ತು ಚಿಕಿತ್ಸೆಗಳು ಇಲ್ಲಿ ಒಂದು ಕಾರಣ ಮಾತ್ರವಾಗಿರುತ್ತದೆ. ಕಾಯಿಲೆ ಕೊಡುವವನು ಮತ್ತು ಅದಕ್ಕೆ ಶಿಫಾ ನೀಡಿ ಗುಣಪಡಿಸುವವನು ಅಲ್ಲಾಹನಾಗಿದ್ದಾನೆ ಎಂಬ ಉದಾಹರಣೆಯೊಂದಿಗೆ ಸತ್ಯ ಸಂಗತಿಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಅಲ್ಲಿಂದ ನಾನು ನಿರ್ಗಮಿಸಿದೆ.*

*ಇದಾಗಿದೆ ಅಹ್ಲ್ ಸುನ್ನತ್ ವಲ್ ಜಮಾಅತಿನ ಆಶಯ ಮತ್ತು ಆದರ್ಶ.*
📗📗📗📗📗📗📗

ವಿಡಿಯೋ ಕೂಡ ವೀಕ್ಷಿಸಿರಿ 

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...