Skip to main content

ಸಾಂಕ್ರಾಮಿಕ ರೋಗ, ಮನೆಯಲ್ಲಿಯೇ ಇರಿ


ಮನೆಯಲ್ಲಿಯೇ ಇರಿ
*ಘಟನೆ - 1*
ಉಮರ್(ರ‌.ಅ)ರ ಆಳ್ವಿಕೆಯ ಕಾಲ.  ಸೈನ್ಯದ ಕಮಾಂಡರ್ ಅಬೂ ಉಬೈದಾ(ರ.ಅ) ಬೈತುಲ್ ಮುಖದ್ದಸ್ ವಿಜಯದ ನಂತರ ಶಾಮ್ ನಲ್ಲಿ ಪರ್ಯಟನೆ ಮಾಡುತ್ತಿದ್ದಾಗ ಅಲ್ಲಿ ಪ್ಲೇಗ್ ರೋಗ ಹರಡಿತು.
   ಅಬೂ ಉಬೈದಾ(ರ.ಅ) ಸೈನ್ಯದಲ್ಲಿ ತುಂಬಾ ಅನಿವಾರ್ಯ ವೈಕ್ತಿಯಾಗಿದ್ದರು.ಮುಂದಿನ‌ ವಿಜಯಕ್ಕೆ ಅವರ ಅಗತ್ಯವಿತ್ತು.
ಹೇಗಾದರೂ ಮದೀನಾಕ್ಕೆ ಮರಳಬೇಕೆಂದು ಉಮರ್(ರ.ಅ) ಒತ್ತಾಯಿಸಿದರು. 
*ಆದರೆ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕೇಂದು  ಪ್ರವಾದಿವರ್ಯ  ﷺ  ರಿಂದ ಕಲಿತಿದ್ದ ಅಬೂ ಉಬೈದಾ(ರ.ಅ) ಅಲ್ಲಿಯೇ ಕುಳಿತು ಕೊಳ್ಳುವ ದಿಟ್ಟ ನಿರ್ಧಾರ ಕೈಗೊಂಡರು*.  .
*ಯಾವುದೇ ಪ್ರದೇಶದಲ್ಲಿ ಪ್ಲೇಗ್ ಹರಡಿದ್ದು ನಿಮಗೆ ತಿಳಿದರೆ ನೀವು ಅಲ್ಲಿಗೆ ಹೋಗ ಬಾರದು. ನೀವು ವಾಸಿಸುವ ಸ್ಥಳದಲ್ಲಿ ಪ್ಲೇಗ್ ಹರಡಿದರೆ ನೀವು ಅಲ್ಲಿಂದ ಹೊರ ಹೋಗಲೂ ಬಾರದು."*  .
ಸಾರ್ವಜನಿಕ ಸಂಪರ್ಕ ತಡೆಯ (Health courantain) ಕುರಿತ ಈ ಅಧಿಕೃತ ವಚನದ ಮಹತ್ವ ಮನಗಂಡ ಅಬೂ ಉಬೈದಾ(ರ.ಅ) ಸ್ವಯಂ-ಸಂಪರ್ಕ ತಡೆಯಲು ಹಾಗೂ ತನ್ನನ್ನು ತಾನೇ ತಡೆಯಲು ಇಚ್ಛಿಸಿದರು.  ಈ ಸಮಯದಲ್ಲಿ ನಾನು ಮದೀನಾಕ್ಕೆ ಪಯಣಿಸಿದರೆ ನನ್ನ ಕಾರಣ ಈ ರೋಗ‌ ಇತರರಿಗೆ ಹರಡುತ್ತದೆ " ಎಂದು ಅವರು ಸ್ವತಃ ಮನವರಿಕೆ ಮಾಡಿಕೊಂಡರು.
ಕೊನೆಗೆ  ಸೈನಿಕನಾಗಿ ಮತ್ತು ನಾಯಕನಾಗಿ ಅನೇಕ ಯುದ್ಧಗಳನ್ನು ಮಾಡಿದ ಕೆಚ್ಚೆದೆಯ ಧೀರೋದಾತ್ತ ಸೈನಿಕ ಅಬೂ ಉಬೈದಾ(ರ.ಅ)  ಪ್ಲೇಗ್‌ ಎಂಬ ಈ ಮಹಾಮಾರಿಗೆ ಬಲಿಯಾಗಿ ಶಹೀದ್ ಆದರು.
*ಈ  ಘಟನೆ ವಿವರಿಸಿದ ಉದ್ದೇಶ ಇಷ್ಟೇ.*
ಸಾಂಕ್ರಮಿಕ ರೋಗ ಹರಡುವ ಸಂದರ್ಭದಲ್ಲಿ ನಾವು ಸರಕಾರದ, ವೈದ್ಯರ, ಅರೋಗ್ಯ ಇಲಾಖೆಯ , ಕಾನೂನು ಪಾಲಕರ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ಮಾತ್ರವಲ್ಲ ಅದು ಧಾರ್ಮಿಕ ಕರ್ತವ್ಯ ಕೂಡ.
ಇದನ್ನು ಉಲ್ಲಂಘಿಸುವುದು ಸಮಾಜಕ್ಕೆ, ದೇಶಕ್ಕೆ ಹಾಗೂ ಧರ್ಮಕ್ಕೆ ಮಾಡುವ ದ್ರೋಹ.
   *ಎಂ ಎಂ ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...