Skip to main content

ಇಸ್ಲಾಮಿಕ್ ಇತಿಹಾಸದ ಒಂದು ಘಟನೆ


ತೈಮೂರ್‌ನ ಸೈನ್ಯ ಬಗ್ದಾದ್‌ಗೆ ದಾಳಿ ನಡೆಸಿತ್ತು. ಮಾಂಗೋಲಿಯನ್ನರ ನಂತರ ಮುಸ್ಲಿಂ ಜಗತ್ತಿಗೆ ತೀವ್ರ ರೀತಿಯ ಸಂಕಟ ಎದುರಾದ ಸಂಧರ್ಭವದು. ಮುಸ್ಲಿಂ ರಾಷ್ಟ್ರಗಳಾದ ಸಿರಿಯಾ, ಇರಾಕ್, ಫೆಲೆಸ್ತೀನ್ ಮುಂತಾದ ರಾಷ್ಟ್ರಗಳನ್ನು ಆಗಲೇ ತನ್ನ ತಹಬಂಧಿಯೊಳಗಿಟ್ಟ ನೈಶಾಟ್ಯ ಸೈನ್ಯದ ತಾಂಡವಕ್ಕೆ ಆ ರಾಷ್ಟ್ರಗಳ ಇಸ್ಲಾಮೀ ಚಾರಿತ್ರಿಕ ಸ್ಮಾರಕಗಳು ಧರಾಶಾಹಿಯಾಗಿದ್ದವು. ಬಗ್ದಾದ್‌ನ ಸರಹದ್ದುಗಳಲ್ಲಿ ತೈಮೂರ್‌ನ ಸೈನ್ಯ ವಕ್ಕರಿಸಿದಾಗ ಬಗ್ದಾದ್‌ನ ಕೋಟೆಯೊಳಗೆ ಮುಸ್ಲಿಮರನ್ನು ಸೇರಿಸಿ ಬಾಗಿಲು ಭಧ್ರಪಡಿಸಲಾಗಿತ್ತು. ಬಗ್ದಾದ್ ನಿವಾಸಿಗಳು ಮಿಕ್ಕ ಮಂದಿಯೂ ವಿದ್ಯಾರ್ಥಿಗಳಾಗಿದ್ದರೆ, ಉಳಿದವರು ಅಧ್ಯಾಪಕರು, ಕೃಷಿಕರೂ ಆಗಿದ್ದರು. ತೈಮೂರ್‌ನ ಬೃಹತ್ ಸೈನ್ಯವನ್ನು ಎದುರಿಸುವಷ್ಟು ಜನಬಲ, ಮತ್ತು ಸೇನೆ ಬಗ್ದಾದಿನಲ್ಲಿರಲಿಲ್ಲ. ಆದ್ದರಿಂದಲೇ ಬಗ್ದಾದ್‌ನ ಕೋಟೆಯೊಳಗಿನಿಂದ ಯಾವುದೇ ಕಾರಣಕ್ಕೂ ಹೊರಹೋಗಬಾರದೆಂದು ಖಲೀಫಾ ತನ್ನ ಪ್ರಜೆಗಳಿಗೆ ಅಪ್ಪಣೆ ಹೊರಡಿಸಿದ್ದರು.

ಬಗ್ದಾದ್‌ಗೆ ತಲುಪುತ್ತಿದ್ದಂತೆ ಖ್ಯಾತ ಭೂಗೋಳ ಶಾಸ್ತ್ರಜ್ಞ, ಇತಿಹಾಸಕಾರ ಅಬ್ದುರ್ರಹ್ಮಾನ್ ಇಬ್ನು ಖಲ್ದೂನ್ ಅರಮನೆಯಲ್ಲಿದ್ದಾರೆಂಬ ಸುಳಿವು ತೈಮೂರ್‌ನಿಗೆ ಸಿಕ್ಕಿತು. ಖಲ್ದೂನ್‌ ಆ ಕಾಲಕ್ಕೆ ವಿಶ್ವ ಮಟ್ಟದಲ್ಲಿ ಖ್ಯಾತ ವೆತ್ತ ಬಗ್ದಾದ್ ಮೂಲದ ವಿಜ್ಞಾನಿ ಯಾಗಿದ್ದರು. ಖಲ್ದೂನ್‌ರು ತನ್ನನ್ನು ಭೇಟಿಯಾದರೆ ತಾನು ಬಗ್ದಾದ್ ಬಿಟ್ಟು ಮರಳುತ್ತೇನೆಂದು ಖಲೀಫಾ ರಿಗೆ ತೈಮೂರ್ ಪತ್ರ ಬರೆದ.

 ಸಾಮ್ರಾಜ್ಯ ವ್ಯಾಪ್ತಿಯ ಹಪಹಪಿ ಹೊಂದಿರುವ ಬರ್ಬರಿಯನ್ ದೊರೆ ತೈಮೂರ್ ತುಂಡು ಭೂಮಿಯ ಮೇಲೆ ಕಣ್ಣಿಟ್ಟ ಧೂರ್ತ. ಆದ್ದರಿಂದಲೇ ಆತ ಕೋಟೆಯ ಬಾಗಿಲು ತೆರೆಯಲು ನಡೆಸಿದ ತಂತ್ರವಿದೆಂದು ಖಲೀಫಾ ಭಾವಿಸಿದರು. ಕೋಟೆಯೊಳಗಿದ್ದ ಖಲ್ದೂನ್‌ರು ಬಾಗಿಲ ಮೂಲಕ ಹೊರಹೋಗುತ್ತಿದ್ದಂತೆ  ತನ್ನ ಸೈನ್ಯವನ್ನು ಕೋಟೆಯೊಳಗೆ ನುಗ್ಗಿಸಿ ಆಕ್ರಮಣ ನಡೆಸುವುದಾಗಿರಬಹುದು ತೈಮೂರ್‌ನ ಸೂತ್ರವೆಂದು ಖಲೀಫಾ ಆಲೋಚಿಸಿದರು.  'ತಾನು ತೈಮೂರ್‌ನನ್ನು ಭೇಟಿ ನೀಡಿದರೆ ಆತನ  ಸೇನೆಯಿಂದ ಬಗ್ದಾದ್ ಸುರಕ್ಷಿತವಾಗುವುದಾದರೆ ಅದು ತನಗೆ ಸಂತೋಷದ ವಿಚಾರ'ವೆಂದು ಹೊರಟೇ ನಿಂತರು ಖಲ್ದೂನ್. ಆದರೆ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ ಕೋಟೆಯ ಬಾಗಿಲನ್ನು ತೆರೆಯಲು ಖಲೀಫಾ ನಿರಾಕರಿಸಿದರು. ಅರಮನೆಯೊಳಗಿನ‌ ಮೇಲ್ಛಾವಣಿ ಯನ್ನು ತೆರೆದು ಒಂದು ಏಣಿಯ ಮೂಲಕ ಇಳಿದ ಖಲ್ದೂನ್, ಕೋಟೆಯೊಳಗಿನಿಂದ ತೈಮೂರ್‌ನತ್ತ ತೆರಳಿದರು. ಅಸಂಖ್ಯ ಗ್ರಂಥಗಳ ಕತೃವಾಗಿದ್ದ ಖಲ್ದೂನರು, ತೈಮೂರ್‌ನ ಭೇಟಿ ಸಮಯದಲ್ಲಿ ತನ್ನದಲ್ಲದ ಎರಡು ಗ್ರಂಥಗಳನ್ನು ಕೊಂಡೋಗಿದ್ದರು. ಒಂದು ಪವಿತ್ರ ಖುರ್‌ಆನ್, ಇನ್ನೊಂದು ಖಸೀದತುಲ್ ಬುರ್ದಾ ಆಗಿತ್ತು..! ತೈಮೂರ್‌ನ ಭೇಟಿ ವೇಳೆ ಈ ಎರಡೂ ಗ್ರಂಥಗಳನ್ನು ಖಲ್ದೂನ್ ಆತನ ಕೈಗಿತ್ತರು. ಖ್ಯಾತ ವಿಜ್ಞಾನಿ ಖಲ್ದೂನ್‌ರ ಭೇಟಿಯ ಬಳಿಕ ತಾನು ಕೊಟ್ಟ ಮಾತಿನಂತೆ ತೈಮೂರ್ ಬಗ್ದಾದ್‌ನಿಂದ ಮರಳಿದ.

ಚರಿತ್ರೆ ಅಲ್ಲೇ ಟರ್ನ್ ಹೊಡೆಯಿತು ನೋಡಿ.
ಸಾಮ್ರಾಜ್ಯ ಕಟ್ಟಲು ನೆತ್ತರು ಹರಿಸಿದ ತೈಮೂರ್‌ ಆ ಬಳಿಕ ಈ ಎರಡೂ ಗ್ರಂಥಗಳ ಪ್ರತಿಪಾದಕನಾದ.  ಭಾರತದಲ್ಲಿ ಬಾಬರಿ ಮಸೀದಿ ಕಟ್ಟಿಸಿದ ಬಾಬರ್ ಗೊತ್ತಲ್ವಾ ನಿಮಗೆ..? ಇದೇ ತೈಮೂರ್‌ನ ವಂಶ ಪರಂಪರೆಯಲ್ಲಿ ಜನಿಸಿದವರು ಬಾಬರ್..!

*✍🏻ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...