Skip to main content

ಪ್ರವಾದಿ ಮೂಸಾ (ಅ) ರವರಿಗೆ ಸ್ವರ್ಗದಲ್ಲಿ ಒಬ್ಬ ಕಸಾಯಿಗಾರ ಮಿತ್ರ

ಪ್ರವಾದಿ ಮೂಸಾ (ಅ) ರವರಿಗೆ ಸ್ವರ್ಗದಲ್ಲಿ ಒಬ್ಬ ಕಸಾಯಿಗಾರ ಮಿತ್ರ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞09971 553499119


▪ *ಒಮ್ಮೆ* ಪ್ರವಾದಿ ಮೂಸಾ (ಅ) ರವರು ಅಲ್ಲಾಹನಲ್ಲಿ ಕೇಳಿದರು. *"ಅಲ್ಲಾಹನೇ..., ಸ್ವರ್ಗದಲ್ಲಿ ನನ್ನ ಮಿತ್ರ ಯಾರು..?"*
   ▪ಅಲ್ಲಾಹನು ಹೇಳಿದನು. *"ಮೂಸಾರವರೇ.., ನೀವೊಂದು ದೂರದ ಊರಿಗೆ ಹೋಗಬೇಕು. ಅಲ್ಲಿ ಒಂದು ಮಾಂಸದ ಅಂಗಡಿಯಲ್ಲಿ ಒಬ್ಬ ಖಸಾಯಿಗಾರನಿದ್ದಾನೆ. ಅವನೇ ಸ್ವರ್ಗದಲ್ಲಿ ನಿಮ್ಮ ಮಿತ್ರ."*
   ▪ *ಹಝ್ರತ್* ಮೂಸಾ (ಅ) ರವರು ಅಲ್ಲಾಹನ ನಿರ್ದೇಶದಂತೆ ಖಸಾಯಿಗಾರನನ್ನು ಹುಡುಕಿ ಹೋದರು. ಅಂಗಡಿ ತಲುಪಿದಾಗ ಒಬ್ಬ ಯುವಕ. ರಾತ್ರಿಯಾದ ಕಾರಣ ಅಂಗಡಿ ಮುಚ್ಚುವ ಗೌಜಿಯಲ್ಲಿದ್ದಾನೆ. ಹಝ್ರತ್ ಮೂಸಾ (ಅ) ರವರು ಅವನಲ್ಲಿ ತಾನು ಪ್ರವಾದಿ ಮಾಸಾ ಎಂದು ಹೇಳದೆ ಒಬ್ಬ ಮುಸಾಫಿರ್‌ನಂತೆ ವರ್ತಿಸಿದರು.
   ▪ *ಯುವಕ* ಹಝ್ರತ್ ಮೂಸಾ (ಅ) ರಲ್ಲಿ ಹೇಳಿದ. *"ನೀವು ಬಹಳ ದೂರದ ಊರಿನಿಂದ ಮುಸಾಫಿರಾಗಿ ಬಂದವರಂತೆ ಕಾಣುತ್ತದೆ. ಆದ್ದರಿಂದ ನನಗೆ ಈಗ ಮಾತನಾಡಲು ಸಮಯವಿಲ್ಲ. ಇವತ್ತು ನಮ್ಮ ಮನೆಗೆ ಹೋಗುವ. ಊಟಮಾಡಿ ಮಲಗಿ ಬೆಳಗ್ಗೆ ನಿಮಗೆ ವಾಪಾಸು ಹೋಗಬಹುದು."*
   ▪ *ಯುವಕನ* ಅತಿಥಿ ಸತ್ಕಾರಕ್ಕೆ ಹಝ್ರತ್ ಮೂಸಾ (ಅ) ಓಗೊಟ್ಟರು.‌ ಮನೆ ತಲುಪಿತು. ಆ ವ್ಯಕ್ತಿ ಅಂಗಡಿಯಲ್ಲಿ ಇರುವಾಗಲೂ ಮನೆಗೆ ಹೋಗುವಾಗಲೂ ಆತನ ಕೈಯಲ್ಲಿ ಚರ್ಮದಿಂದ ಮಾಡಿದ ಒಂದು ತೊಟ್ಟಿಲಿನ ಆಕಾರದ ತೊಟ್ಟಿ ಇತ್ತು. ಅದನ್ನು ಬಹಳ ಜೋಪಾನದಿಂದ ಕೈಯಲ್ಲಿ ಹಿಡಿದು ಕೊಂಡಿದ್ದನು.
   ▪ *ಇಬ್ಬರೂ* ಊಟಕ್ಕೆ ಕುಳಿತರು. ಆತನು ಒಂದು ಹಿಂಡಿ ತಿನ್ನುವಾಗ ಎರಡು ಹಿಂಡಿ ಆಹಾರವನ್ನು ಹತ್ತಿರದಲ್ಲಿದ್ದ ತನ್ನ ಬುಟ್ಟಿಗೆ ಹಾಕುತ್ತಿದ್ದನು. ಹಝ್ರತ್ ಮೂಸಾ (ಅ) ರವರು ಬಹಳ ಆಶ್ಚರ್ಯದಿಂದ ಅವನ ಚಲನವಲನಗಳನ್ನು ಗಮನಿಸುತ್ತಿದ್ದರು. ಅಷ್ಟರಲ್ಲಿ ಹೊರಗಿನಿಂದ ಆತನನ್ನು ಯಾರೋ ಕರೆದರು. ಇದುವೇ ಸುವರ್ಣಾವಕಾಶವೆಂದು ತಿಳಿದ ಹಝ್ರತ್ ಮೂಸಾ (ಅ) ರವರು ಕೂಡಲೇ ಆ ಚೀಲದೊಳಗೆ ಏನೆಂದು ನೋಡಲು ಹೋದರು.
   ▪ *ಸುಬ್‌ಹಾನಲ್ಲಾಹ್* ಚೀಲದಲ್ಲಿ ಎರಡು ಜೀವಗಳು. ಒಂದು ಗಂಡು. ಒಂದು ಹೆಣ್ಣು. ಪ್ರಾಯವಾಗಿ ಇಬ್ಬರ ಶರೀರವೂ ಒಣಗಿ ಹೋಗಿ ಸಣ್ಣ ಮಗುವಿನ ಗಾತ್ರ ತಲುಪಿದೆ. ಶರೀರದಲ್ಲಿ ಚರ್ಮ ಮತ್ತು ಎಲುಬುಗಳು ಮಾತ್ರ ಇರುವುದು. ಹಝ್ರತ್ ಮೂಸಾ (ಅ) ರನ್ನು ಕಂಡಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ ಬಂತು. ತಡೆಯಲಾಗದ ಬೇಸರದೊಂದಿಗೆ ಏನೂ ಮಾತನಾಡಲಾಗದೆ ಹಝ್ರತ್ ಮೂಸಾ (ಅ) ರು ಮೂಕವಿಸ್ಮಿತರಾದರು.
   ▪ *ಅಷ್ಟರಲ್ಲಿ* ಹೊರಗೆ ಹೋದ ಆತ ಒಳಬಂದು ಚೀಲದೊಳಗೆ ನೋಡಿದಾಗ ಇಬ್ಬರ ಆತ್ಮ ಹಝ್ರತ್ ಅಝ್‌ರಾಯೀಲ್ (ಅ) ರ ಪಾಲಾಗಿತ್ತು. ಇದನ್ನು ನೋಡಿದ ಆತ ಕೂಡಲೇ ಪ್ರವಾದಿ ಮೂಸಾ (ಅ) ರ ಕೈಯನ್ನು ಚುಂಬಿಸಿ ಕೇಳಿದನು. *"ನೀವು ಪ್ರವಾದಿ ಮೂಸಾ (ಅ) ...??"*  ಹಝ್ರತ್ ಮೂಸಾ (ಅ) ಹೇಳಿದರು. *"ಹೌದು.. ಅದು ನಿನಗೆ ಈಗ ಹೇಗೆ ತಿಳಿಯಿತು...?"*  ಆ ವ್ಯಕ್ತಿ ಹೇಳಿದರು. *"ಈ ತೊಟ್ಟಿಯಲ್ಲಿರುವ ಎರಡು ಜೀವಗಳು ನೀವು ಮೂಸಾ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ನನ್ನ ತಂದೆ ತಾಯಿಗಳು. ಎಷ್ಟೋ ವರ್ಷಗಳಿಂದ "ಪ್ರವಾದಿ ಮೂಸಾ (ಅ) ರನ್ನು ನಮಗಿಬ್ಬರಿಗೆ ಈ ಇಹಲೋಕದ ಬದುಕಿನಲ್ಲಿ ಒಮ್ಮೆ ತೋರಿಸದೆ ನಮ್ಮ ರೂಹನ್ನು ತೆಗೆಯಬಾರದು" ಎಂದು ಅವರಿಬ್ಬರೂ ದುಆ ಮಾಡುತ್ತಿದ್ದರು. ಆ ಕಾರಣದಿಂದ ಹೀಗೆಯೇ ಎಷ್ಟೊ ವರ್ಷಗಳಾಯಿತು ನಾನು ಅವರನ್ನು ಈ ರೀತಿ ಶುಶ್ರೂಷೆ ಮಾಡುತ್ತಿರುವುದು. ಈಗ ಅವರಿಬ್ಬರ ರೂಹ್ ಅಲ್ಲಾಹನ ವಶವಾಯಿತು. ಆದ್ದರಿಂದ ನೀವು ಪ್ರವಾದಿ ಮೂಸಾ  ಎಂದು ನನಗೆ ಖಾತ್ರಿಯಾಯಿತು."*
   ▪ *ಪ್ರವಾದಿ* ಮೂಸಾ (ಅ) ಅವರಲ್ಲಿ ಹೇಳಿದರು. *"ಹೆದರಬೇಡ. ನಿಮ್ಮ ತಂದೆ ತಾಯಿಯ ಸೇವೆ ಮಾಡಿದ್ದಕ್ಕೆ ನಿಮಗೆ ಸೂಕ್ತವಾದ ಪ್ರತಿಫಲ ಲಭಿಸಿದೆ. ಅಲ್ಲಾಹನು ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮಗೊಂದು ಸಂತೋಷ ವಾರ್ತೆ ತಿಳಿಸಲಿಕ್ಕೋಸ್ಕರವಾಗಿದೆ. ನಾಳೆ ಸ್ವರ್ಗದಲ್ಲಿ ನಾನು ನಿಮ್ಮ ಮಿತ್ರನಾಗಿರುವೆನು."*

ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...