ಒಂದೇ ಉಡುಪಿನಲ್ಲಿ ದಿನ ದೂಡುತ್ತಿದ್ದ ಗವರ್ನರ್
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಒಮ್ಮೆ* ಇಸ್ಲಾಮಿನ ಎರಡನೇ ಖಲೀಫಾಃ ಹಝ್ರತ್ ಉಮರುಲ್ ಫಾರೂಕ್ (ರ) ರವರು ಸಿರಿಯಾದ *"ಹಿಮಸ್"* ಪ್ರಾಂತದ ಅಂದಿನ ಗವರ್ನರ್ ಆಗಿದ್ದ ಖ್ಯಾತ ಸ್ವಹಾಬಿ ಹಝ್ರತ್ ಸಯೀದ್ ಬಿನ್ ಆಮಿರ್ (ರ) ರವರಿಗೆ ಅವರ ಆಡಳಿತ ಪ್ರದೇಶದಲ್ಲಿರುವ ಎಲ್ಲಾ ಕಡು ಬಡವರ ಪಟ್ಟಿ ಮಾಡಿ ಕೇಂದ್ರ ಸರಕಾರದ ರಾಜಧಾನಿಯಾಗಿದ್ದ ಮದೀನಕ್ಕೆ ಕಳುಹಿಸಿ ಕೊಡಲು ಹೇಳಿದರು. ಕೇಂದ್ರ ಆಡಳಿತದ ಜವಾಬ್ದಾರಿಯಲ್ಲಿರುವ ಸಾರ್ವಜನಿಕ ಸೊತ್ತನ್ನು (ಬೈತುಲ್ ಮಾಲ್) ಬಡವರಿಗೆ ಪಾಲು ಮಾಡಿಕೊಡಲಾಗಿತ್ತು ಈ ಸುತ್ತೋಲೆ.
▪ *ಸಿರಿಯಾದಿಂದ* ಖಲೀಫರ ಹತ್ತಿರ ಬಂದ ಬಡವರ ಪಟ್ಟಿಯಲ್ಲಿ ಅಲ್ಲಿನ ಗವರ್ನರ್ *"ಸಯೀದ್ ಬಿನ್ ಆಮಿರ್"* ರವರ ಹೆಸರೂ ಇತ್ತು. ಪಟ್ಟಿ ನೋಡಿದ ಹಝ್ರತ್ ಉಮರುಲ್ ಫಾರೂಖ್ (ರ) ರವರು ಅದ್ಭುತಗೊಂಡು ಅಲ್ಲಿನ ಕೆಲವು ಹಿರಿಯರನ್ನು ಸಂಪರ್ಕಿಸಿ ಇದರ ಬಗ್ಗೆ ವಿಚಾರಣೆ ನಡೆಸಿದಾಗ ಅವರು ಹೇಳಿದರು. *"ನಮ್ಮ ಗವರ್ನರ್ ನೀವು ತಿಂಗಳಲ್ಲಿ ಅವರಿಗೆ ಕೊಟ್ಟು ಕಳುಹಿಸುವ ಸಂಬಳದಲ್ಲಿ ಮನೆಯ ಅಗತ್ಯ ಊಟ ಮತ್ತು ಔಷಧಿಗೆ ಹೊರತು ಬಾಕಿಯಿರುವ ಎಲ್ಲವನ್ನೂ ಬಡವರಿಗೆ ಧಾನ ಮಾಡುತ್ತಾರೆ."*
▪ *ಆಗ* ಖಲೀಫರು ಅವರಲ್ಲಿ ಕೇಳಿದರು. *"ನಿಮಗೆ ಊರಿನವರಿಗೆ ಅವರ ಬಗ್ಗೆ ಬೇರೆ ಏನಾದರೂ ಕೊರತೆ ಹೇಳಲಿಕ್ಕೆ ಇದೆಯಾ..?"* ಆಗ ಅವರು "ಮೂರು ಕೊರತೆ ಇದೆ.
1. *ಎಲ್ಲಾ* ದಿನವೂ ಝುಹಾ ನಮಾಝಿನ ಸಮಯವಾಗದೆ ಮನೆಯಿಂದ ಹೊರ ಬರುವುದಿಲ್ಲ.
2. *ರಾತ್ರಿ* ಕಾಣಸಿಗುವುದು ಬಹಳ ಅಪರೂಪ.
3. *ವಾರದಲ್ಲಿ* ಒಂದು ದಿನ ಸಂಪೂರ್ಣವಾಗಿ ಮನೆಯಲ್ಲಿರುತ್ತಾರೆ. ಹೊರಬರುವುದಿಲ್ಲ." ಎಂದು ಉತ್ತರಿಸಿದರು.
▪ *ಕೂಡಲೇ* ಖಲೀಫರು ಅವರನ್ನು ಕೇಂದ್ರ ಆಸ್ಥಾನಕ್ಕೆ ಕರೆಯಿಸಿ ಸಾರ್ವಜನಿಕರ ಈ ದೂರಿನ ಬಗ್ಗೆ ವಿಚಾರಣೆಗೆ ಒಳಪಡಿಸಿದರು.
▪ *ಸಾರ್ವಜನಿಕರು* ಕೊಟ್ಟ ಮೂರು ದೂರುಗಳಿಗೂ ಖಲೀಫರಿಗೆ ಗವರ್ನರ್ ಸಯೀದ್ ಬಿನ್ ಆಮಿರ್ (ರ) ರು ಕೊಟ್ಟ ಉತ್ತರ ಈ ರೀತಿಯಾಗಿತ್ತು
1. *ನನಗೆ* ಖಾದಿಮ್ ಅಥವಾ ಯಾವುದೇ ಸೇವಕ ಇಲ್ಲ. ಅಲ್ಲದೆ ನನ್ನ ಪತ್ನಿ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ. ಆ ಕಾರಣದಿಂದ ಬಟ್ಟೆ ತೊಳೆಯುವುದು, ಅಡುಗೆ ಮಾಡುವುದು, ಮನೆ ಸ್ವಚ್ಛ ಮಾಡುವುದು ಇದೆಲ್ಲಾ ಮಾಡಿ ಮುಗಿಸುವಾಗ ಬಿಳಿಗ್ಗೆ ಎಂಟು-ಒಂಬತ್ತು ಗಂಟೆ ಆಗುತ್ತದೆ. ಅದು ಮಗಿದ ಕೂಡಲೇ ಸಾರ್ವಜನಿಕರ ಸೇವೆಗೆ ಹೊರ ಹೋಗುತ್ತೇನೆ. 2. *ಹಗಲಿನಲ್ಲಿ* ಬ್ಯುಸೀ ಇರುವುದರಿಂದ ಆರಾಧನೆಗೆ ಸಮಯ ದೊರಕುವುದಿಲ್ಲ. ಆ ಕಾರಣದಿಂದ ರಾತ್ರಿ ಆರಾಧನೆಯಲ್ಲಿರುವುದರಿಂದ ಹೊರಬರುವುದಿಲ್ಲ.
3. *ನನಗೆ* ಬರೇ ಒಂದೇ ಒಂದು ಉಡುಪು ಮಾತ್ರ ಇರುವುದು. ಅದನ್ನು ವಾರದಲ್ಲಿ ಒಂದು ದಿನ ತೊಳೆದು ಹಾಕಿ ಅದು ಒಣಗುವ ತನಕ ಬೇರೆ ವಸ್ತ್ರ ಇಲ್ಲದಿರುವುದರಿಂದ ಅದನ್ನು ಕಾಯಬೇಕಾಗುತ್ತದೆ. ಆದ್ದರಿಂದ ಆ ದಿನ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.
*ಸುಬ್‌ಹಾನಲ್ಲಾಹ್!* ಈ ವಾರ್ತೆಯನ್ನು ಕೇಳಿದಾಕ್ಷಣ ಖಲೀಫರು ಬಿಕ್ಕಿಬಿಕ್ಕಿ ಅಳತೊಡಗಿದರು.

Comments