ಕೋವಿಡ್-19 ಕೊರೋನ ವೈರಸ್
ಶುಚಿತ್ವಕ್ಕೆ ಮೊರೆಯಿಡುತ್ತಿರುವ ಜಗತ್ತಿಗೆ ಇಸ್ಲಾಮಿನ ಸಂದೇಶ!
✍🏻Nizzu4ever👁
ಉರುವಾಲು ಪದವು
*niznam4ever@gmail.com*
ಇಂದು ಜಗತ್ತಿಗೆ ಸವಾಲಾಗಿ ಹರಡುತ್ತಿರುವ ಮಾರಕ ಕೊರೋನ ವೈರಸ್ ಬಗ್ಗೆ ವೈದ್ಯ ಲೋಕವೇ ಅದರ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದೆ. *ಕ್ಷಣ ಮಾತ್ರದಲ್ಲೇ ಜೀವವನ್ನೇ ಹಿಂಡುವ ಈ ಮಾರಕ ರೋಗವು ಆಧುನಿಕತೆಯ ಉತ್ತುಂಗದಲ್ಲಿ ನಿಂತು ವಿಶ್ವದ ಆರ್ಥಿಕತೆಗೆ ಬಲುದೊಡ್ಡ ಹೊಡೆತ ಬೀಳಬಹುದಾದಂತಹ ದೇಶಗಳಲ್ಲಿ ವ್ಯಾಪಕವಾಗಿ ಹರಡಿ ನಿಂತಿದೆ. ನಿಯಂತ್ರಣ ಕೈ ಮೀರಿದೆ ಎಂದು ಚೀನಾ ಹೇಳುತ್ತಿದೆ. ಕಟ್ಟೆಚ್ಚರ ಕ್ರಮವನ್ನು ಪಾಲಿಸಿ ಎಂದು ದೈತ್ಯ ರಾಷ್ಟ್ರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.* ಈಗಾಗಲೇ ಲಕ್ಷದಷ್ಟು ಜನರಿಗೆ ಕೊರೋನ ವೈರಸ್ ತಗುಲಿದೆ ಎಂದು ಸಂಶೋಧನಾ ವಿಭಾಗವು ತಿಳಿಸಿದೆ. ಏಷ್ಯಾ ಯೂರೋಪ್ ಅರಬ್ ದೇಶಗಳು ತನ್ನ ಆರಾಧನಾಲಯಗಳನ್ನು ತಾತ್ಕಾಲಿಕ ಮುಚ್ಚಿ ರೋಗಕ್ಕೆ ಪ್ರತಿರೋಧವೊಡ್ಡುತ್ತಿದೆ.
ತಾತ್ಕಾಲಿಕ ಪರಿಹಾರವೆಂಬಂತೆ ಹೆಚ್ಚಿನ ಶುಚಿತ್ವವನ್ನು ಪಾಲಿಸಲು ವೈಜ್ಞಾನಿಕ ಸಂಶೋಧನೆಗಳು ಕರೆಕೊಡುತ್ತಿದೆ. *ಕೊರೋನ ವೈರಸ್ ತಗುಲಿದ ಮನುಷ್ಯ ಸಂಪರ್ಕದಿಂದ ಅತೀ ಹೆಚ್ಚು ರೋಗ ಹರಡುವುದೆಂದು ವೈದ್ಯಕೀಯ ಸಂಶೋಧನೆಗಳು ತಿಳಿಸುತ್ತದೆ.ಸೋಂಕು ತಗುಲಿದ ವ್ಯಕ್ತಿಯ ಸ್ಪರ್ಷ, ದೈಹಿಕ ಸಂಪರ್ಕ, ಆತನೊಂದಿಗಿನ ಒಡನಾಟ, ಆತ ಮುಟ್ಟಿದ ವಸ್ತುವಿನ ಸ್ಪರ್ಷ ಮುಂತಾದ ಕಾರಣಗಳಿಂದ ಈ ರೋಗವು ಅತೀ ವೇಗವಾಗಿ ಹರಡುತ್ತದೆ. ಈ ರೋಗದ ಭಯದಿಂದ ಜನರು ಅತೀಹೆಚ್ಚು ಜಾಗ್ರತರಾಗಿದ್ದಾರೆ*. ಮನುಷ್ಯ ಸಂಪರ್ಕವನ್ನೇ ಕಡಿದುಕೊಂಡಿರುವ ಮನುಷ್ಯ ಪರಸ್ಪರ ಹಸ್ತಲಾಘವವನ್ನು ಕೂಡ ನಿಷೇದಿಸಿದ್ದಾನೆ. ಸ್ವತಃ ಮಗುವನ್ನು ಗಾಜಿನ ಗೋಡೆಯೊಳಗೆ ಬಂಧಿಯಾಗಿಸಿ ನೋಡುವ ಮನಕುಲುಕುವ ಚಿತ್ರಣವನ್ನು ನೋಡುವಾಗ ಯಾವುದೇ ಕಲ್ಲು ಹೃದಯವು ನುಚ್ಚು ನೂರಾಗದೆ ಇರಲಾರದು. ಚಿಕೆತ್ಸೆ ನೀಡಲು ಹೋದ ವೈದ್ಯ ಹಿಂದುರುಗಿ ಬರುತ್ತಾನೋ ಎಂಬ ಧೈರ್ಯವಿಲ್ಲ.
ಶುಚಿತ್ವದ ಕಡೆ ಹೆಚ್ಚಿನ ಗಮನ ಹರಿಸಲು ಕರೆಕೊಡುತ್ತಿರುವ ಜಗತ್ತಿನ ಮುಂದೆ ಇಸ್ಲಾಮ್ 1400 ವರ್ಷಗಳ ಹಿಂದೆಯೇ ಶುಚಿತ್ವಕ್ಕೆ ಉನ್ನತ ಸ್ಥಾನ ಮಾನ ಕಲ್ಪಿಸಿದೆ. ಶುಚಿತ್ವ ವಿಶ್ವಾಸದ ಒಂದು ಭಾಗವೆಂದು ಕಳಿಸಿದೆ. ನೈರ್ಮಲ್ಯದಿಂದ ಶರೀರ, ಸ್ಥಳ, ಬಟ್ಟೆಬರೆ ಮನೆ ಮುಂತಾದವುಗಳನ್ನು ಶುಚೀಕರಿಸಬೇಕೆಂದು ಕಲಿಸಿರುತ್ತದೆ. *"ಅಲ್ಲಾಹನೇ ನನ್ನನ್ನು ಶುದ್ಧಿಯಿರುವ ಸಾಲಿನಲ್ಲಿ ಸೇರಿಸು" ಎಂದು ದಿನಂಪ್ರತಿ ಅಂಗ ಶುದ್ದಿಯ ನಂತರದ ಪ್ರಾರ್ಥನೆಯಲ್ಲಿ ಪ್ರಾರ್ಥಿಸಬೇಕೆಂದು ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರು ಕಲಿಸಿದ್ದಾರೆ.*
ಇಸ್ಲಾಮ್ ಆಂತರಿಕ ಶುಚಿತ್ವ ಮತ್ತು ಬಾಹ್ಯ ಶುಚಿತ್ವ ಹೀಗೆ ಎರಡು ರೀತಿಯ ಶುಚಿತ್ವವನ್ನು ಪರಿಚಯಿಸುತ್ತದೆ.
*ಆಂತರಿಕ ಶುದ್ಧೀಕರಣ:* ಇಸ್ಲಾಂ ಧರ್ಮದ ಐದು ಸ್ತಂಭಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವುದರ ಮೂಲಕ ಆಂತರಿಕ ಶುದ್ಧೀಕರಣವನ್ನು ಸಾಧಿಸಬಹುದು. ಸ್ವಚ್ಛ ಮತ್ತು ಶುದ್ಧ ಚಿಂತನೆ, ಪಾಪಗಳನ್ನು ತ್ಯಜಿಸುವುದು, ಬಹಳಷ್ಟು ಝಿಕ್ರ್ ಸ್ವಲಾತ್ ಗಳನ್ನು ಹೇಳುವುದು. ಮುಖ್ಯವಾಗಿ ಕೋಪ, ದ್ವೇಷ, ಅಲ್ಲಾಹನನ್ನು ಹೊರತುಪಡಿಸಿ ಇತರ ಜನರನ್ನು ಅವಲಂಬಿಸುವುದು, ಅಹಂಕಾರ, ದುರಹಂಕಾರ ಮುಂತಾದ ಆಧ್ಯಾತ್ಮಿಕ ಸಂಕಟಗಳಿಂದ ಹೃದಯ ಶುದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು.
*ಬಾಹ್ಯ ಶುದ್ಧೀಕರಣ:* ಸರಿಯಾದ ದೈಹಿಕ ಶುದ್ಧೀಕರಣದಿಂದ ಬಾಹ್ಯ ಶುದ್ಧೀಕರಣವನ್ನು ಪಡೆಯಬಹುದು ಉದಾ. ಸ್ನಾನ ಮಾಡುವುದು, ಹಲ್ಲುಗಳನ್ನು ಸ್ವಚಗೊಳಿಸುವುದು, ಸುಗಂಧವನ್ನು ಬಳಸುವುದು, ಮನೆ ಮತ್ತು ಬಟ್ಟೆಗಳನ್ನು ಸ್ವಚವಾಗಿಡುವುದು ಇತ್ಯಾದಿ.
*ಒಂದು ದಿನದ ತನ್ನ ಐದು ಹೊತ್ತಿನ ಕಡ್ಡಾಯ ಪ್ರಾರ್ಥನೆಗಾಗಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಅಂಗಾಗಳನ್ನು 15 ಬಾರಿ ಶುದ್ಧ ನೀರಿನಲ್ಲಿ ತೊಳೆದು ಶುಚೀಕರಿಸುತ್ತಾನೆ. ಅತೀ ಹೆಚ್ಚು ಸಂಪರ್ಕ ಸ್ಥಾಪಿಸುವ ಕೈಯನ್ನು 30 ಬಾರಿ ತೊಳೆಯುತ್ತಾನೆ. ಪ್ರತಿಯೊಂದು ಕಡ್ಡಾಯ ಪ್ರಾರ್ಥನೆಗೆ ಮೊದಲು ಇದನ್ನು ನಿರ್ವಹಿಸಲೇಬೇಕಾಗಿದೆ. ಇದನ್ನು ಉಝು ಅಂಗಶುದ್ಧಿ ಎಂದು ಕರೆಯುತ್ತೇವೆ. ಉಟ್ಟ ವಸ್ತ್ರ ಮಲಿನವಾದರೆ ಅದನ್ನು ಶುದ್ದೀಕರಿಸಬೇಕಾದರೆ ಹಲವಾರು ನಿಯಮಗಳು ಭಾದಕವಾಗುತ್ತದೆ. ವಸ್ತ್ರವನ್ನು ಮುಳುಗಿಸಿದ ನೀರು ಇನ್ನೊಮ್ಮೆ ಉಪಯೋಗಿಸಬಾರದು. ವಸ್ತ್ರದ ಮೇಲೆ ನೀರು ಹರಿದು ಹೋಗಬೇಕು. ವಸ್ತ್ರವನ್ನು ಎತ್ತಿ ಕೆಳಗೆ ಬಿದ್ದ ನೀರು ಚಿಮ್ಮಿ ವಸ್ತ್ರ ಸೇರದಂತೆ ಜಾಗ್ರತೆ ಪಾಲಿಸಬೇಕೆಂದು ಇಸ್ಲಾಂ ಕಲಿಸುತ್ತದೆ. ಸಂಪೂರ್ಣವಾಗಿ ಸ್ವಚ್ಛತೆಯನ್ನು ಪಾಲಿಸಲು ಸುಗಂಧ ಲೇಪಿಸುವುದನ್ನು ಸುನ್ನತ್ತಾಗಿ ಕೂಡ ಕಲಿಸಿದೆ. ವೈರಸ್ ಗಳನ್ನು ಕಿರಣಗಳನ್ನು ತಡೆಯಬಲ್ಲ ರೋಗ ನಿರೋಧಕ ಶಕ್ತಿಯಿರುವ ಬಿಳಿ ವಸ್ತ್ರವನ್ನು ಧರಿಸುವುದನ್ನು ಇಸ್ಲಾಮ್ ಸುನ್ನತ್ತಾಗಿ ಕಲಿಸುತ್ತದೆ. ಇದೆಲ್ಲವನ್ನು ಪಾಳೈಸಿದ್ದಕ್ಕಾಗಿ ಅಲ್ಲಾಹನ ಬಳಿ ಪ್ರತಿಫಲವನ್ನು ಘೋಷಿಸಿದೆ.*
ಕೊರೋನ ವೈರಸ್ ಹರಡುವಿಕೆಯಿಂದ ತಡೆಯಲು ಪ್ರಾಣಿಗಳಿಂದ ದೂರ ಇರಬೇಕೆಂದು ವೈದ್ಯಕೀಯ ಸಂಶೋದನೆಗಳು ಹೇಳುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅತೀ ಹೆಚ್ಚು ಜನರೊಂದಿಗೆ ಬೆರೆಯುವ ಪ್ರಾಣಿಯಾಗಿರುತ್ತದೆ ನಾಯಿ. ಇದರ ಶರೀರದಿಂದ ಹೊರಬರುವ ಬ್ಯಾಕ್ಟ್ರಿಯಾಗಳು ಹಲವಾರು ರೋಗಗಳನ್ನು ತಂದೊಡ್ಡುತ್ತದೆ ಎಂದು ಇದಕ್ಕಿಂತ ಮೊದಲೇ ಎಚ್ಚರಿಸಿದ್ದರೂ ಕೂಡ ಜನರು ಎಚ್ಚುತ್ತುಕೊಂಡಿದ್ದು ಕಡಿಮೆ. ಆದರೆ, ಇಸ್ಲಾಂ ನಾಯಿ ಮತ್ತು ಹಂದಿಯ ಬಗ್ಗೆ 1400 ವರ್ಷಗಳ ಹಿಂದೆಯೇ ಮುನ್ನೆಚ್ಚರಿಕಾ ಕ್ರಮಗಳನ್ನು ಕಲಿಸಿದೆ. *ನಾಯಿ ಮತ್ತು ಹಂದಿಯ ದೇಹದಿಂದ ಹೊರಬರುವ ಬ್ಯಾಕ್ಟ್ರಿಯಾಗಳಿಂದ ಉಂಟಾಗುವ ರೋಗವನ್ನು ತಡೆಯಲು ಮಣ್ಣಿನಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಾಯಿ ಅಥವಾ ಹಂದಿ ಮುಟ್ಟಿದ ಸ್ಥಳ, ವಸ್ತ್ರ, ಪಾತ್ರೆ ಗಳನ್ನು ಮಣ್ಣಿನಿಂದ ತೊಳೆದು ಶುದ್ದೀಕರಿಸಬೇಕೆಂದು ತಿಳಿಸುತ್ತದೆ.*
*ಹೀಗೆ ನೋಡುವುದಾದರೆ ವೈಜ್ಞಾನಿಕ ಲೋಕಕ್ಕೆ ಸವಾಲಾಗಿ ನಿಂತಿರುವ ಹಲವಾರು ಸಮಸ್ಯೆಗಳಿಗೆ ಇಸ್ಲಾಂ ಸಾವಿರದ ನಾನೂರು ವರ್ಷಗಳ ಹಿಂದೆಯೇ ಪರಿಹಾರ ಮಾರ್ಗಗಳನ್ನು ತಿಳಿಸಿದೆ*. ಎಲ್ಲಾ ಮಾರಕ ರೋಗಗಳಿಂದ ಅಲ್ಲಾಹು ಕಾಪಾಡಲಿ ಅಮೀನ್.

Comments