ಸೂರಃ ಯಾಸೀನ್ ಕಂಠಪಾಠ ಪಠಿಸುವ ಅದ್ಭುತ ಗಿಳಿ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಕೆಂಪು,* ಬಿಳಿ, ಹಳದಿ, ಹಸಿರು ಇತ್ಯಾದಿ ಬಣ್ಣಗಳಲ್ಲಿ ಕಾಣಲ್ಪಡುವ ಒಂದು ಚೆಲುವಾದ ಸುಂದರ ಪಕ್ಷಿ ಗಿಳಿ ಅಥವಾ ಗಿಣಿ. ಆದರೆ ಈಗ ಪರಿಸರ ಮಾಲಿನ್ಯ ಮತ್ತು ಇತರ ನೈಸರ್ಗಿಕ ಬದಲಾವಣೆಯಿಂದಾಗಿ ಕೆಂಪು, ಬಿಳಿ ಮತ್ತು ಹಳದಿ ಬಣ್ಣದ ಗಿಳಿಗಳ ಸಂತತಿ ಅವನತಿಯತ್ತ ಹೋಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಹಸಿರು ಬಣ್ಣದ್ದಲ್ಲದ ಗಿಳಿಗಳು ಕಾಣಸಿಗುವುದು ಬಹಳ ಅಪರೂಪವಾಗಿದೆ.
▪ *ಸಾಮಾನ್ಯ* ಎರಡರಿಂದ ಆರರ ತನಕ ಮೊಟ್ಟೆಯಿಡುವ ಗಿಳಿಯು ಒಂದು ವರ್ಷದಲ್ಲಿ ಒಮ್ಮೆ ಮಾತ್ರ ಮೊಟ್ಟೆಯಿಡುತ್ತದೆ. ಸುಮಾರು ಇಪ್ಪತ್ತು ದಿನಗಳ ಕಾವು ಕೊಡುವಿಕೆಯ ನಂತರ ಹೊರಬರುವ ಮರಿಯ ಕಣ್ಣು ಮುಚ್ಚಿರುತ್ತದೆ. ಕೆಲವು ದಿನಗಳ ತಾಯಿಯ ಶುಶ್ರೂಷೆಯ ನಂತರ ಮರಿಯ ಕಣ್ಣು ತೆರೆಯಲ್ಪಡುತ್ತದೆ. ನಂತರ ಕ್ರಮೇಣ ಹಾರಲು ತೊಡಗುತ್ತದೆ. ತಾಯಿ ಕಾವು ಕೊಡುವ ಮತ್ತು ಶುಶ್ರೂಷೆ ಮಾಡುವ ಸಂದರ್ಭದಲ್ಲಿ ಸಂಗಾತಿಯಾದ ಗಂಡು ಗಿಳಿಯು ಆಹಾರವನ್ನು ಹುಡುಕಿ ತರುತ್ತದೆ.
▪ *ಬಹಳ* ಅಗಲವಾದ ನಾಲಗೆ ಮತ್ತು ಕೊಕ್ಕಿರುವ ಈ ಪಕ್ಷಿಯ ಎದುರಲ್ಲಿ ನಿಂತು ಹೇಳುವ ಮಾತನ್ನು ಚೆನ್ನಾಗಿ ಕೇಳಿ ಬಾಯಿಪಾಠ ಮಾಡಿ ನಂತರ ಪುನರುಚ್ಚರಿಸುವುದರಲ್ಲಿ ಬಹಳ ನಿಪುಣ. ಈ ವಿಷಯದಲ್ಲಿ ಇದಕ್ಕೆ ಸಮಾನವಾದ ಒಂದು ಮೃಗ ಅಥವಾ ಪಕ್ಷಿ ಈ ಪ್ರಪಂಚದಲ್ಲಿ ಬೇರೆಯಿಲ್ಲ.
▪ *ಪುಟ್ಟ* ಪಕ್ಷಿಗಳಲ್ಲಿ ಇತರ ಪಕ್ಷಿಗಳಿಗೆ ಹೋಲಿಸಿದರೆ ಈ ಪಕ್ಷಿಗೆ ಅವುಗಳಿಗಿಂತ ಎಷ್ಟೋ ಆಯುಷ್ಯವಿದೆ. ಸಾಮಾನ್ಯ ಎಪ್ಪತ್ತರಿಂದ ಎಂಬತ್ತು ವರ್ಷಗಳ ತನಕ ಬದುಕುವುದಾದರೂ ಕೆಲವು ಗಿಳಿಗಳು ನೂರು-ನೂರಿಪ್ಪತ್ತು ವರ್ಷಗಳ ತನಕ ಬದುಕುತ್ತದೆ ಎಂದು ಹೇಳಲಾಗುತ್ತದೆ.
▪ *ಗಿಳಿಗೆ* ಮಾತನಾಡಲು ಕಲಿಸ ಬೇಕೆಂದಿದ್ದರೆ ಅದರ ಗೂಡಿನಲ್ಲಿ ಒಂದು ದೊಡ್ಡ ಕನ್ನಡಿಯನ್ನು ಅಳವಡಿಸಬೇಕು. ನಂತರ ತರಬೇತುದಾರ ಅದರ ಹಿಂಭಾಗದಲ್ಲಿ ಇಬ್ಬರ ಮುಖವು ಕನ್ನಡಿಯಲ್ಲಿ ಕಾಣುವಂತೆ ಕುಳಿತು ಮಾತನಾಡಬೇಕು. ಬಹಳ ಬುದ್ದಿವಂತನಾದ ಈ ಪಕ್ಷಿ, ತರಬೇತುದಾರನು ಹೇಳುವುದನ್ನು ಕನ್ನಡಿಗೆ ನೋಡಿ ಆಗಲೇ ಪುನರಾವರ್ತನೆ (ರಿಪೀಟ್) ಮಾಡುತ್ತದೆ. ಮಾತ್ರವಲ್ಲ ಒಳ್ಳೆಯ ತಾಲೀಮು ಮತ್ತು ತರಬೇತಿ ದೊರೆತ ಗಿಳಿಗಳು ಕುರ್‌ಆನಿನ ಕೆಲವು ಪುಟ್ಟ ಸೂರಃಗಳನ್ನು ಕೂಡ ತಪ್ಪದೆ ಪಠಿಸುತ್ತದೆ.
▪ *ಪ್ರಖ್ಯಾತ* ಪಂಡಿತ ಶೈಖ್ ಇಝ್ಝುದ್ದೀನ್ ಬಿನ್ ಬಸ್‌ರಾವಿಯವರ ಹಲವಾರು ಗಣ್ಯ ವ್ಯಕ್ತಿಗಳು ಹಾಜರಾಗುವ ಮಜಿಲಿಸಿನಲ್ಲಿ ಸೂರಃ ಯಾಸೀನ್ ಮತ್ತು ಸೂರಃ ಸಜದಃ ಸಂಪೂರ್ಣವಾಗಿ ಕಂಠಪಾಠ ಇರುವ ಗಿಳಿ ಇತ್ತು. ಮಾತ್ರವಲ್ಲ ಸೂಜಿದಿನ ಆಯತ್ ತಲುಪಿದರೆ, ಅಲ್ಲಾಹನಿಗೆ ಸಾಷ್ಟಾಂಗ ಮಾಡುತ್ತಿತ್ತು.
▪ *ಮನೆಯಲ್ಲಿ* ಅದು ಮಾತನಾಡುವುದನ್ನು ಕೇಳುವುದರ ಉದ್ದೇಶದಲ್ಲೋ ಅಲ್ಲದೆಯೂ ಸಾಕುಪಕ್ಷಿಯಂತೆ ಸಾಕುವುದು ಸಮ್ಮತಾರ್ಹವಾಗಿದೆ. ಆದರೆ ಒಂದು ಗಂಡು ಮತ್ತು ಹೆಣ್ಣು ಜೋಡಿಯಾಗಿ ಇರುವ ಅವಕಾಶ ಮಾಡಿಕೊಡಬೇಕು.
▪ *ಗಿಳಿಯ* ಬಗ್ಗೆ ಅಬುಲ್‌ಫರಜ್ ಬಿನ್ ಅಲ್ ಜವುಝಿಯಂತಹಾ ಉಲಮಾಗಳು ಅವರ ಕಿತಾಬುಗಳಲ್ಲಿ ಕೆಲವು ಹಾಸ್ಯ ಮತ್ತು ನೀತಿ ಕತೆಗಳನ್ನೂ ಉಲ್ಲೇಖಿಸಿದ್ದಾರೆ.
▪ *ಒಂದು* ಊರಿನಲ್ಲಿ ನೆರೆಹೊರೆಯವರು ಮನೆಯಲ್ಲಿ ಗಿಳಿಯನ್ನು ಸಾಕಿ ಅದು ಮನುಷ್ಯರಂತೆ ಮಾತನಾಡುತ್ತದೆ ಎಂದು ತಿಳಿದಾಗ ಆ ಊರಿನ ಒಬ್ಬರು ಸದಾಚಾರಿಗೆ ಒಂದು ಮಾತನಾಡುವ ಗಿಳಿಯನ್ನು ಖರೀದಿ ಮಾಡಬೇಕೆಂದೆನಿಸಿತು.ಹಾಗೆಯೇ ತನ್ನ ಕೆಲವು ಮಿತ್ರರಲ್ಲಿ ವಿಚಾರಿಸಿದಾಗ ಒಂದು ಗ್ರಾಮದಲ್ಲಿ ಒಬ್ಬ ಗ್ರಾಮವಾಸಿ ಅಅ್‌ರಾಬಿಯು ಒಂದು ಗಿಳಿಯನ್ನು ಮಾರಾಟ ಮಾಡುತ್ತಾನೆಂದು ತಿಳಿಯಲು ಸಾಧ್ಯವಾಯಿತು.
▪ *ಸದಾಚಾರಿಯು* ಅಅ್‌ರಾಬಿಯ ಮನೆ ತಲುಪಿ ಮಾರಾಟ ಮಾಡುವ ಗಿಳಿಯ ಬಗ್ಗೆ ವಿಚಾರಿಸಿದಾಗ ಸಂಗತಿ ಸತ್ಯವೆಂದು ತಿಳಿಯಿತು. ಗ್ರಾಹಕನಲ್ಲಿ ಅಅ್‌ರಾಬಿ ಹೇಳಿದ. *"ಒಳ್ಳೆಯ ಮಾತನಾಡುವ ಗಿಳಿ. ಇದಕ್ಕೆ ಸಮಾನವಾದ ಗಿಳಿ ಈ ಊರಲ್ಲಿ ಬೇರೆ ಇರಲಿಕ್ಕಿಲ್ಲ. ನೀವು ಏನು ಹೇಳಿದರೂ ಅದನ್ನು ತಪ್ಪದೆ ಪುನರುಚ್ಚಾರ ಮಾಡುತ್ತದೆ. ಮಾತ್ರವಲ್ಲ ಬಹಳ ಉತ್ತಮ ಗುಣನಡತೆಯೂ ಇದೆ. ಹೆಚ್ಚೇನೂ ಬೆಲೆ ಹೇಳುವುದಿಲ್ಲ. ಸಾಮಾನ್ಯವಾಗಿ ಈಗ ಮಾರುಕಟ್ಟೆಯಲ್ಲಿರುವ ಮಾಮೂಲು ಬೆಲೆಯನ್ನು ಕೊಡಿ. ನಿಮಗೆ ಇದು ಒಂದು ಉತ್ತಮ ಸಂಗಾತಿಯಾಗಬಹುದು."*
▪ *ಮಾತನಾಡುವ* ಗಿಳಿಯನ್ನು ಖರೀದಿಸಿದ ಸಂತೋಷದಲ್ಲಿ ಸದಾಚಾರಿಯು ಗಿಳಿಯೊಂದಿಗೆ ಹಲವಾರು ಕನಸುಗಳನ್ನು ಹೊತ್ತು ತನ್ನ ಮನೆಯತ್ತ ನಡೆದನು. ಮನೆಯಲ್ಲಿ ಮೊದಲೇ ತಯಾರು ಮಾಡಿದ ಒಂದು ಗೂಡಿನಲ್ಲಿ ಗಿಳಿಯನ್ನು ಇರಿಸಿದ.
▪ *ಆದರೆ* ದುರದೃಷ್ಟವಶಾತ್ ಸದಾಚಾರಿಯ ಎಲ್ಲಾ ಕನಸುಗಳು ನೀರುಪಾಲಾಯಿತು. ಒಳ್ಳೆಯ ಗುಣನಡತೆಯ ಮಾತನಾಡುವ ಗಿಳಿಯೆಂದು ನಂಬಿ ಖರೀದಿಸಿದ ಗಿಳಿಯು ಗ್ರಾಮವಾಸಿ ಅಅ್‌ರಾಬಿಯ ಮನೆಯಲ್ಲಿ ಕಲಿತಿದ್ದ ಮಾತುಗಳದರೆ ಬಹಳ ಕೆಟ್ಟದಾಗಿತ್ತು. ನಾಗರಿಯತೆಯಿಲ್ಲದ ಗ್ರಾಮವಾಸಿಯೊಬ್ಬನ ಮನೆಯಲ್ಲಿ ಬೆಳೆದು ಬಂದ ಗಿಳಿಯಾದ್ದರಿಂದ ಅವರ ಸಂಸ್ಕಾರವನ್ನು ಮಾತ್ರ ಗಿಳಿ ಕಲಿತಿತ್ತು. ಯಾವಾಗಲೂ "ಹರಾಮೀ, ಬೋಳಿಮಗ, ಕಿಲಾಡಿ, ಖದೀಮ, ನೀನು ಸತ್ತುಹೋಗು, ನಿನ್ನ ಕಾಲು ಮುರಿದು ಹೋಗಲಿ, ನೀನು ಬಸ್ಸಿನಡಿಗೆ ಬೀಳು, ನಿನ್ನ ಸೊಂಟ ಮುರಿದು ಹೋಗಲಿ" ಇತ್ಯಾದಿ ಇತ್ಯಾದಿ ಮಾತುಗಳಾಗಿತ್ತು ಈ ಖರೀದಿಸಿದ ಗಿಳಿಯ ಬಾಯಿಯಿಂದ ಯಾವಾಗಲೂ ಬರುತ್ತಿದ್ದದ್ದು. ಮಾತ್ರವಲ್ಲ ಸದಾಚಾರಿಯು ಬೆಳಿಗ್ಗೆ ಕಸಬಿಗೆ ಹೋಗುವಾಗ ಟಾಟಾ ಹೇಳಿದರೆ, *"ನಿನ್ನ ಸೊಂಟ ಮುರಿಯಲಿ. ನೀನು ಸತ್ತು ಹೋಗು"* ಎಂಬಿತ್ಯಾದಿ ಮಾತುಗಳಾಗಿತ್ತು ಗಿಳಿಯ ಬಾಯಿಯಿಂದ ಹೊರಡುತ್ತಿದ್ದದ್ದು.
▪ *ಬಡಪಾಯಿ* ಸದಾಚಾರಿ ಏನು ಮಾಡಬೇಕೆಂದು ತಿಳಿಯದೆ ಬಹಳ ಸಂಕಷ್ಟ ಮತ್ತು ಸಮಸ್ಯೆಗೆ ಒಳಗಾದನು. ರಾತ್ರಿ ಹಗಲೆನ್ನದೆ ಖರೀದಿಸಿದ ಗಿಳಿಯ ಬಗ್ಗೆ ಅಲೋಚಿಸ ತೊಡಗಿದನು. ಏನು ಮಾಡಬೇಕೆಂದು ತಿಳಿಯದೆ ಕೊನೆಗೆ ಹಿರಿಯರೊಬ್ಬರ ಸಲಹೆಯಂತೆ ಊರಿನ ಒಬ್ಬರು ಧಾರ್ಮಿಕ ವಿದ್ವಾಂಸರನ್ನು ಕಾಣುವಲ್ಲಿಗೆ ಮುಟ್ಟಿತು.
▪ *ಸದಾಚಾರಿಯ* ಸಮಸ್ಯೆಗಳನ್ನು ಆಲಿಸಿದ ಧಾರ್ಮಿಕ ವಿದ್ವಾಂಸರು ಹೇಳಿದರು. *"ಗಾಬರಿಯಾಗಬೇಡ. ನಮಗೆ ಪರಿಹಾರವಿದೆ. ನನ್ನ ಮನೆಯಲ್ಲಿ ಇಲ್ಲಿ ಹಲವಾರು ಗಿಳಿಗಳಿದೆ. ಬಹಳ ಉತ್ತಮ ಗುಣನಡತೆಯ ಗಿಳಿಗಳು. ಯಾವ ಅಸಭ್ಯ ಮಾತು ಅವುಗಳ ಬಾಯಿಯಿಂದ ಬರುವುದಿಲ್ಲ. ಫಾತಿಹ ಓದುತ್ತದೆ. ದುಆ ಮಾಡುವಾಗ ಆಮೀನ್ ಹೇಳುತ್ತದೆ. ಸ್ವಲಾತ್ ಹೇಳುತ್ತದೆ. ಅದರಿಂದ ಒಂದು ಗಿಳಿಯನ್ನು ತಾತ್ಕಾಲಿಕವಾಗಿ ಕೊಂಡುಹೋಗಿ ಕೆಲವು ದಿನಗಳಿಗೆ ನಿನ್ನ ಮನೆಯ ಗಿಳಿಯ ಒಟ್ಟಿಗೆ ವಾಸ ಮಾಡಿಸು. ಹಾಗೆಯೇ ಒಂದೆರಡು ದಿನದಲ್ಲೇ ಇದರ ಸ್ವಭಾವವನ್ನು ನೋಡಿ ಅದು ಕಲಿಯುತ್ತದೆ. ಇದರ ಬಾಯಿಯಲ್ಲಿ ಒಳ್ಳೆಯ ಮಾತುಗಳು ಮಾತ್ರ ಬರುವುದು. ಯಾರನ್ನೂ ಕೆಟ್ಟ ಮಾತು ಹೇಳಿ ನೋಯಿಸುವುದಿಲ್ಲ. ಶಾಪ ಹಾಕುವ ಅಭ್ಯಾಸವೇ ಇಲ್ಲ."*
▪ *ಧರ್ಮ* ಗುರುಗಳಿಂದ ದೊರೆತ ಗಿಳಿಯನ್ನು ತಂದು ತನ್ನ ಗಿಳಿಯೊಂದಿಗೆ ಅದರ ಗೂಡಿನಲ್ಲಿ ವಾಸ ಮಾಡಲು ಬಿಟ್ಟ. ರಾತ್ರಿ ನಿದ್ದೆಯಲ್ಲಿ ಹಲವಾರು ಕನಸುಗಳನ್ನು ಕಂಡನು. "ನಾಳೆ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಈ ನನ್ನ ಹರಾಮಿ ಗಿಳಿ ಏನು ಹೇಳುತ್ತದಾ..? ಇಂದು ರಾತ್ರಿ ಇದರ ಸ್ವಭಾವ ಬದಲಾವಣೆ ಆದರೆ ನನ್ನ ತಲೆನೋವು ಕಡಿಮೆಯಾಗುತ್ತಿತ್ತು." ಎಂದು ಮನದಲ್ಲೇ ಹೇಳಿದ.
▪ *ಮಾರನೆಯ* ದಿನ ಎಂದಿನಂತೆ ಕಸಬಿಗೆ ಹೋಗಲು ತಯಾರಾದನು. ಹೃದಯ ಕಂಪನ ಬಹಳ ಜೋರಾಗತೊಡಗಿತು. ಅಂತೆಯೇ ಮನೆಯಂಗಳಕ್ಕೆ ಕಾಲಿಟ್ಟು ಟಾಟಾ ಹೇಳಿದಾಗ ಹಳೆಯ ಖದೀಮ ಗಿಳಿ ಎಂದಿನಂತೆ ಹೇಳಿತು. *"ನೀನು ಬಸ್ಸಿನಡಿಗೆ ಬಿದ್ದು ಸತ್ತು ಹೋಗು."*
▪ *ಈ ದುಆವನ್ನು* ಕೇಳಿದಾಕ್ಷಣ ಹತ್ತಿರದಲ್ಲಿದ್ದ ಉತ್ತಮ ಗುಣನಡತೆಯ ಉಸ್ತಾದರ ಗಿಳಿ ಹೇಳಿತು. *"ಆಮೀನ್..ಆಮೀನ್ ಆಮೀನ್.. ಯಾ ರಬ್ಬಲ್ ಆಲಮೀನ್"*
▪ *ಈ ಪಕ್ಷಿಯು* ಯಾವತ್ತೂ ನೀರು ಕುಡಿಯುವುದಿಲ್ಲ. ಕುಡಿದ ಕೂಡಲೇ ಸಾಯುತ್ತದೆ ಎಂದು ಹೇಳಲಾಗುತ್ತದೆ.
▪ *ಗಿಳಿಯ* ರಕ್ತವನ್ನು ಒಣಗಿಸಿ ಹುಡಿಮಾಡಿ, ಎರಡು ಆಪ್ತ ಮಿತ್ರರು ಒಂದು ಕಡೆ ಮಾತನಾಡುತ್ತಿರುವುದೋ ಅಥವಾ ಇನ್ಯಾವುದೇ ಕೆಲಸದಲ್ಲಿ ತಲ್ಲೀನರಗಿದ್ದರೆ ಅವರ ಕುಳಿತಲ್ಲಿ ಇದನ್ನು ಎರಚಿದರೆ ನಂತರ ಕೆಲವು ದಿನಗಳಾಗುವಾಗ ಅವರೆಡೆಯಲ್ಲಿ ಪರಸ್ಪರ ವೈರಾಗ್ಯವಾಗುತ್ತದೆ.(ಇದು ಯಾರೂ ಮಡಬೇಕೆಂದು ಹೇಳುವುದಲ್ಲ. ಅಗತ್ಯ ಬರುವಾಗ ಅಂತಹಾ ಚಿಕಿತ್ಸೆಯೂ ಇದೆಯೆಂದು ಓದುಗರ ಗಮನಕ್ಕೆ ತರುವುದು ಮಾತ್ರ)
▪ *ಇದರ* ಪಿಟ್ಟೆಯನ್ನು ಚೆನ್ನಾಗಿ ಹಣ್ಣಾಗದ ಹುಳಿದ್ರಾಕ್ಷಿಯ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ಕಣ್ಣಿಗೆ ಪೂಸಿದರೆ ಕಣ್ಣುಬೇನೆ, ಕಣ್ಣು ಬಲೆಕಟ್ಟುವುದು, ಕಣ್ಣಿನ ರೆಪ್ಪೆ ಬಾತುಹೋಗುವುದು ಇತ್ಯಾದಿ ಖಾಯಿಲೆಗಳು ಸಂಪೂರ್ಣವಾಗಿ ವಾಸಿಯಾಗುತ್ರದೆ.
▪ *ಗಿಳಿಯ* ನಾಲಗೆಯನ್ನು ಒಬ್ಬನು ಹಸಿಯಾಗಿ ತಿಂದರೆ, ಬಹಳ ಚೆನ್ನಾಗಿ ಮಾತನಾಡಬಲ್ಲವನಾಗುತ್ತಾನೆ. (Well spoken) ಯಾರಲ್ಲೂ ಕೆಚ್ಚೆದೆಯಲ್ಲಿ ಬಹಳ ಧೈರ್ಯದಿಂದ ಸರಾಗವಾಗಿ ಮಾತನಾಡುವವನಾಗುತ್ತಾನೆ. ಉತ್ತಮ ಭಾಷಣಗಾರನಾಗುತ್ತಾನೆ.
▪ *ಇಸ್ಲಾಮಿನಲ್ಲಿ* ಇದರ ಮಾಂಸ ಭಕ್ಷ್ಯ ಯೋಗ್ಯವಲ್ಲ. ತಿನ್ನುವುದು ನಿಷಿದ್ಧ ವಾಗಿದೆ.
▪ *ಗಿಳಿಯನ್ನು* ಕನಸಲ್ಲಿ ಕಾಣುವುದರ ಬಗ್ಗೆ ಕನಸಿನ ಉಲಮಾಗಳು ಹೆಚ್ಚಿನ ವಿವರಣೆಯನ್ನು ಕೊಡಲಿಲ್ಲ. ಒಟ್ಟಿನಲ್ಲಿ ಗಿಳಿಯ ಕನಸು ಬೀಳುವುದು ಒಳ್ಳೆಯ ಕನಸಲ್ಲ. ಕೆಟ್ಟದ್ದು ಬರುವುದರ ನಿಶಾನೆಯಾಗಿದೆ.
ಸಂಗ್ರಹ; ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಮತ್ತು ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಖಾತ್,* ಮತ್ತು ಇಮಾಮ್ ಶಿಹಾಬುದ್ದೀನ್ ಅಲ್ ಉಮರಿಯ *ಮಸಾಲಿಕುಲ್ ಅಬ್‌ಸ್ವಾರ್ ಫೀ ಮಮಾಲಿಕಿಲ್ ಅಮ್ ಸ್ವಾರ್* ಎಂಬ ಗ್ರಂಥಗಳು.

Comments