ಉಪ್ಪು ತಿಂದವನು ನೀರು ಕುಡಿದ.
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಒಂದು* ರಾಜನ ರಾಜ ದರ್ಬಾರಿನಲ್ಲಿ ಹಲವಾರು ಮಂದಿ ಕೆಲಸಗಾರರಿದ್ದರು. ಅವರಲ್ಲಿ ಒಬ್ಬನು ರಾಜನಿಗೆ ಬಹಳ ಆಪ್ತನಾಗಿದ್ದ. ಅವನನ್ನು ರಾಜನು ತನ್ನ ಸಬೆಯಲ್ಲಿ ಮಂತ್ರಿ ಕೂಡ ಮಾಡಿದ್ದ. ಅಲ್ಲದೆ ಅವನಿಗೆ ಇತರ ಕೆಲಸಗಾರರಿಗಿಂತ ಹೆಚ್ಚಿನ ಸೌಕರ್ಯ ಮತ್ತು ಸಂಬಳವನ್ನು ಕೂಡ ಕೊಡುತ್ತಿದ್ದ.
▪ *ರಾಜನ* ಈ ನಡವಳಿಕೆಯಿಂದ ಹೊಟ್ಟೆಗಿಚ್ಚಾದ ಇತರ ಕೆಲವು ಕೆಲಸಗಾರರು ಹೇಗಾದರು ಮಾಡಿ ಈ ಮಂತ್ರಿಯ ಕತೆ ಮುಗಿಸಬೇಕೆಂಬ ತೀರ್ಮಾನಕ್ಕೆ ಬಂದರು. ಹಾಗೆಯೇ ಅವರಲ್ಲಿ ಒಬ್ಬ ಹೇಳಿದ. *"ನೀವು ಗಾಬರಿ ಪಡಬೇಡಿ. ನಾನದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇನೆ. "*
▪ *ಒಂದು* ದಿನ ಈ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ ವ್ಯಕ್ತಿ ರಾಜ ಸನ್ನಿಧಿಗೆ ಹೋಗಿ ಹೇಳಿದ. *"ಮಹಾರಾಜರೇ..., ನಿಮಗೆ ಬಹಳ ಆಪ್ತನಾಗಿರುವ ಆ ಮಂತ್ರಿ ನಿಮ್ಮ ಬಗ್ಗೆ ಹೊರಗೆ ಏನೆಲ್ಲಾ ಬೇಡದ್ದು ಹೇಳುತ್ತಿದ್ದಾನೆ. ನಿಮ್ಮ ಬಾಯಿ ವಾಸನೆಯಿಂದ ಅವನಿಗೆ ನಿಮ್ಮ ಹತ್ತಿರ ಬರಲಾಗುವುದಲ್ಲಂತೆ."*
▪ *ಚಾಡಿಕೋರನಿಂದ* ಈ ಸುಳ್ಳು ಮಾಹಿತಿಯನ್ನು ಕೇಳಿದಾಕ್ಷಣ ರಾಜನ ಸಿಟ್ಟು ನೆತ್ತಿಗೇರಿತು. ಕೂಡಲೇ ಆ ವ್ಯಕ್ತಿಯಲ್ಲಿಯೇ, ಮಂತ್ರಿಯನ್ನು ರಾಜ ದರ್ಬಾರಿಗೆ ಬರಲು ಹೇಳಿ ಕಳುಹಿಸಿದ. ನಂತರ ಮಂತ್ರಿಯನ್ನು ಬೇಟಿಯಾದ ಆ ಚಾಡಿಕೋರ ಅವನಿಗೆ ತಿನ್ನಲು ಆಹಾರ ಕೊಟ್ಟನು. ಮಾತ್ರವಲ್ಲ ಆಹಾರದಲ್ಲಿ ಹೆಚ್ಚಿನ ಬಗೆಗಳೆಲ್ಲವೂ ನೀರುಳ್ಳಿ ಮಿಶ್ರಿತವಾಗಿತ್ತು. ಸಲಾಡಿನಲ್ಲೂ ಬೇಕಾದಷ್ಟು ನೀರುಳ್ಳಿಯನ್ನು ಹಾಕಿಕೊಟ್ಟ.
▪ *ಊಟ* ಮುಗಿದ ಕೂಡಲೇ ಚಾಡಿಕೋರ ಮಂತ್ರಿಯಲ್ಲಿ ಹೇಳಿದ. *" ಹೇ... ನನಗೆ ನಿನ್ನಲ್ಲಿ ಹೇಳಲು ಮರೆತು ಹೋದದ್ದು. ನಿನ್ನನ್ನು ರಾಜನು ರಾಜ ಸನ್ನಿಧಿಗೆ ಹೋಗಲು ಹೇಳಿದ್ದಾನೆ. ಕೂಡಲೇ ಹೋಗು. ತಡ ಮಾಡಬೇಡ. ನೀರುಳ್ಳಿಯ ವಾಸನೆ ಬರುವುದಾದರೆ ಹೋಗುವಾಗ ಬಾಯಿಗೆ ಕೈ ಇಟ್ಟುಕೊಳ್ಳು. ಈಗಲೇ ಹೋಗು. ತಡಮಾಡಬೇಡ. ರಾಜರಿಗೆ ಸಿಟ್ಟು ಬರಬಹುದು."*
▪ *ಬಡಪಾಯಿ* ಮಂತ್ರಿಗೆ ಈ ಚಾಡಿಕೋರನ ಫಿತ್‌ನದ ಬಗ್ಗೆ ತಿಳಿದಿರಲಿಲ್ಲ. ರಾಜ ಸನ್ನಿಧಿಗೆ ಹೋಗುವಾಗ ಬಾಯಿಯಿಂದ ನೀರುಳ್ಳಿಯ ವಾಸನೆ ಬಾರದಿರಲು ಬಾಯಿಗೆ ಕೈಯಿಟ್ಟು ಹೋದ. ಇದನ್ನು ಕಂಡಾಗಲೇ ರಾಜನಿಗೆ ಚಾಡಿಕೋರ ಹೇಳಿದ್ದು ನೂರಕ್ಕೆ ನೂರು ನಿಜವೆಂದು ತಿಳಿಯಿತು.
▪ *ಕೂಡಲೇ* ರಾಜನು ಆತನನ್ನು ಕೊಲ್ಲಲು ಆಜ್ಞೆ ಹೊರಡಿಸಿ ತನ್ನ ಬೇರೊಂದು ಕೆಲಸದವನಿಗೆ ಪತ್ರ ಬರೆದು ಆತನಲ್ಲಿಯೇ ಕಳುಹಿಸಿದನು. ಆ ಪತ್ರದಲ್ಲಿ ಈ ರೀತಿ ಬರೆಯಲಾಗಿತ್ತು. *"ಈ ಪತ್ರ ತರುವವನನ್ನು ನಿಮಿಷವೂ ತಡ ಮಾಡದೆ ಪತ್ರ ತಂದ ಕೂಡಲೇ ಕೊಲ್ಲಬೇಕು"*
▪ *ಇತ್ತ* ದರ್ಬಾರಿನ ಹೊರಗೆ ಮಂತ್ರಿಗೆ ಯಾವ ಶಿಕ್ಷೆ ಸಿಗುತ್ತದೆ ಎಂದು ಕಾದುನೋಡಿ ಕುಳಿತ ಚಾಡಿಕೋರನು ಮಂತ್ರಿಯು ರಾಜ ಸನ್ನಿಧಿಯಿಂದ ಹೊರಬರುವುದನ್ನು ಕಂಡಾಗ ಅವನಲ್ಲಿ ಕೇಳಿದ. *"ಏನಾಯಿತು..? ಯಾಕೆ ಕರೆದದ್ದು..?"* ಮಂತ್ರಿ ಹೇಳಿದ. *"ಗೊತ್ತಿಲ್ಲ. ರಾಜರು ಈವೊಂದು ಪತ್ರವನ್ನು ದರ್ಬಾರಿನ ಒಬ್ಬರ ಕೈಗೆ ಕೊಡಲು ಹೇಳಿದ್ದಾರೆ ಅಷ್ಟೆ."*
▪ *ಸಾಧಾರಣ* ರಾಜನು, ಏನಾದರು ಇನಾಮು ಅಥವಾ ಉಡುಗೊರೆಗಳು ಕೊಡಲು ಆಜ್ಞೆ ಮಾಡುವಾಗ ಮಾತ್ರ ಈ ರೀತಿ ಪತ್ರ ಬರೆದು ಕಳುಹಿಸಬಹುದು ವಾಡಿಕೆ. ಹಾಗೆಯೇ ಇದು ಕೂಡ ಆ ರೀತಿಯ ಒಂದು ಪತ್ರವಾಗಿರಬಹುದೆಂದು ಭಾವಿಸಿದ ಚಾಡಿಕೋರನು ಮಂತ್ರಿಯಲ್ಲಿ ಹೇಳಿದ. *"ನೀನು ಟೆನ್ಶನ್ ಮಾಡಬೇಡ. ನನಗೆ ಆ ಕಡೆ ಹೋಗಲಿಕ್ಕಿದೆ. ನಾನು ಮುಟ್ಟಿಸುತ್ತೇನೆ. ಪತ್ರ ನನ್ನಲ್ಲಿ ಕೊಡು."*
▪ *ಮಂತ್ರಿಯಿಂದ* ಪಡೆದ ಪತ್ರವನ್ನು ಚಾಡಿಕೋರನು ಬಹಳ ಹೆಮ್ಮೆಯಿಂದ ಕೊಡಲು ಆಜ್ಞಾಪಿಸಿದ ವ್ಯಕ್ತಿಗೆ ಕೊಂಡುಹೋಗಿ ಕೊಟ್ಟನು. ಪತ್ರ ತೆರೆದು ನೋಡಿದ್ದೇ ತಡ ಒಂದು ಖಡ್ಗ ತೆಗೆದು ಈತನ ತಲೆ ಕತ್ತರಿಸಿದನು.
▪ *ಕೆಲವು* ದಿನಗಳ ಬಳಿಕ ಕೊಲ್ಲಲು ಆಜ್ಞೆ ಹೊರಡಿಸಲ್ಪಟ್ಡ ಮಂತ್ರಿಯು ರಾಜ ಸನ್ನಿಧಿಗೆ ಹೋದಾಗ ರಾಜನು ಆಶ್ಚರ್ಯ ಚಕಿತನಾದನು. ಆಗ ರಾಜನು ಆ ಮಂತ್ರಿಯಲ್ಲಿ ಕೇಳಿದನು. *"ನೀನು ನಾನು ಅವತ್ತು ಕೊಟ್ಡ ಪತ್ರವನ್ನು ಆ ಕೆಲಸದವನಿಗೆ ಕೊಡಲಿಲ್ಲವೇ..?"* ಮಂತ್ರಿ ಹೇಳಿದ. *"ಇಲ್ಲ ಮಹಾರಾಜರೇ.. ನಾನು ನಿಮ್ಮ ಸನ್ನಿದಿಯಿಂದ ಹೊರ ಬರುವಾಗ ಬೇರೊಬ್ಬ ಕೆಲಸಗಾರನು ಸಿಕ್ಕಿದನು. ಅವನು ಆ ಪತ್ರವನ್ನು ನಾನು ಮುಟ್ಡಿಸುತ್ತೇನೆಂದು ಹೇಳಿದಾಗ ಅವನ ಕೈಯಲ್ಲಿ ಕೊಟ್ಟೆ"*
▪ *ರಾಜನು* ಕೇಳಿದನು. *"ನೀನು ನನ್ನ ಬಗ್ಗೆ ನನ್ನ ಬಾಯಿ ವಾಸನೆ ಬರುತ್ತದೆ ಎಂದು ಅವನಲ್ಲಿ ಹೇಳಿದ್ದಿಯಾ..? ಅಲ್ಲದೆ ಅವತ್ತು ನೀನು ನನ್ನ ಸನ್ನಿಧಿಗೆ ಬರುವಾಗ ನಿನ್ನ ಬಾಯಿಗೆ ಕೈ ಇಟ್ಟದ್ದು ಯಾಕೆ..?"* "ಇಲ್ಲ ಮಹಾರಾಜರೇ.. ನಾನು ಹಾಗೆ ಹೇಳಲಿಲ್ಲ. ನಾನು ನಿಮ್ಮ ಸನ್ನಿಧಿಗೆ ಬರುವುದಕ್ಕಿಂತ ಮೊದಲು ಆತನು ನನಗೆ ನೀರುಳ್ಳಿ ತಿನ್ನಿಸಿದ್ದನು. ಅದರ ವಾಸನೆ ನಿಮಗೆ ಬರಬಾರದೆಂಬ ಉದ್ದೇಶದಿಂದ ಮಾತ್ರ ನಾನು ನನ್ನ ಬಾಯಿಗೆ ಕೈ ಇಟ್ಟಿದ್ದೇನೆಯೇ ವಿನಾ ನಿಮ್ಮ ಬಾಯಿಯಿಂದ ವಾಸನೆ ಬರುತ್ತದೆ ಎಂದು ಹೇಳಿಯಲ್ಲ."
▪ *ಸುಬ್‌ಹಾನಲ್ಲಾಹ್* ಇದು ಕೇಳಿದಾಕ್ಷಣ ರಾಜನಿಗೆ ಇದರ ನಿಜಸ್ಥಿತಿ ತಿಳಿಯಿತು. ನಂತರ ಈತನನ್ನು ಬಹಳ ಉನ್ನತ ಹುದ್ದೆಕೊಟ್ಟು ಮೊದಲಿನಂತೆಯೇ ಹತ್ತಿರ ಮಾಡಿಕೊಂಡನು.
ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments