Skip to main content

ತಾಜುಲ್ ಉಲಮಾ

ಈ ಸಮ್ಮೇಳನ ಮುಗಿಯುವವರೆಗೆ ಮಳೆ ನಿಲ್ಲಲಿ, ಈ ಸಧೈರ್ಯದ ಮಾತು ಅಲ್ಲಾಹನು ಈಡೇರಿಸಿದನು

       ಇದು ಅಲ್ಲಾಹನನ್ನು ಭಯಭಕ್ತಿಯೊಂದಿಗೆ ಇಬಾದತ್ ಗಳ ಮೂಲಕ ಸಾಮಿಪ್ಯ ತಲುಪಿದ ಮಹಾತ್ಮರುಗಳಿಗೆ ಅಲ್ಲಾಹು ಕೊಡುವ ವಿಶಿಷ್ಟ ಶಕ್ತಿಯಾಗಿದೆ. ವಿಶ್ವಾಸಿ ಸಮೂಹ ಆತ್ಮೀಯ ಚೈತನ್ಯವಾಗಿದ್ದ ಕಾಲಘಟ್ಟದ ಇತಿಹಾಸ ಶೈಖುನಾ ತಾಜುಲ್ ಉಲಮಾರ ಸನ್ನಿಧಿಗೆ ಎಟ್ಟಿಕ್ಕುಳಂ ಉರೂಸ್ ಭಾಗಿಯಾಗಲು ಸಾವಿರಾರು ಜನ ತಂಡೋಪತಂಡವಾಗಿ ಸಾಗುತ್ತಿರುವ ಸಧ್ಯದ ಸನ್ನಿವೇಶದಲ್ಲಿ ಗೆಳೆಯರೊಬ್ಬರು ಕಳುಹಿಸಿದ ಒಂದು ಕ್ಲಿಪ್ ಕಾಣಲು ಸಾಧ್ಯವಾಯಿತು.

        *ಲಕ್ಷಾಂತರ ಜನರು ಭಾಗಿಯಾದ ಸಮ್ಮೇಳನದ ಮಧ್ಯೆ ಜೋರಾಗಿ ಬಂದ ಮಳೆಯನ್ನು ಕಂಡರೆ ಏನಾಗಬಹುದು, ತಾಜುಲ್ ಉಲಮಾ ಪ್ರಭಾಷಣ ಮಾಡುತ್ತಿರುವ ಸನ್ನಿವೇಶವದು. ಆದರೆ ಮಹಾನರಿಗೆ ಅದು ದೊಡ್ಡ ಚಿಂತೆಯಾಗಿ ಕಾಣಲೇ ಇಲ್ಲ, ನೇರವಾಗಿ ಈ ಮಳೆ ಸಮ್ಮೇಳನ ಮುಗಿಯುವವರೆಗೆ ಈ ಪ್ರದೇಶದಲ್ಲಿ ಈಗ ಬೇಡವೆಂದು ಹೇಳಿಬಿಟ್ಟರು. ಏನಾಶ್ಚರ್ಯ.* ಮಳೆಯೂ ಶಾಂತವಾಗಿ ಸಮ್ಮೇಳನ ಯಶಸ್ವಿಯಾಯಿತು.

       ಯಾರಿಂದ ಸಾಧ್ಯ ಬಹಿರಂಗ ಸಭೆಯಲ್ಲಿ ಇಂತಹ ಮಾತನ್ನಾಡಲು, ಹೌದು ಇದು ಶೈಖುನಾರಿಗೆ ಅಲ್ಲಾಹನು ಕೊಟ್ಟ ಮಹತ್ವವಾಗಿದೆ.

          ಇವತ್ತು ಮಧ್ಯಾಹ್ನ ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ಮಹಾನರ ಅನುಸ್ಮರಣೆಯಿತ್ತು. ಅನುಸ್ಮರಣಾ ಮಾತನ್ನಾಡಿದ ಮಾಣಿ ಉಸ್ತಾದರ ಸುಪುತ್ರ, ದಾರುಲ್ ಇರ್ಷಾದ್ ಜನರಲ್ ಮ್ಯಾನೇಜರ್ ಶರೀಫ್ ಸಖಾಫಿ ಮಾಣಿ ಮಾತನಾಡುತ್ತಾ ಪೇರೋಡ್ ಉಸ್ತಾದ್ ತಾಜುಲ್ ಉಲಮಾರ ಕುರಿತಾಗಿ ನೇರ ಕಂಡ ಕರಾಮತ್ ಒಂದನ್ನು ಹೇಳಿದರು. ಅಮ್ಮೆಂಬಳ ಉರೂಸ್ ತಾಜುಲ್ ಉಲಮಾ ನಿರಂತರ ಭಾಗಿಯಾಗುತ್ತಿದ್ದ ಒಂದು ಉರೂಸ್ ಆಗಿದ್ದು, ಒಂದು ಉರೂಸ್ ಕಾರ್ಯಕ್ರಮದಲ್ಲಿ ಬಾಯಿ ಬರದಿದ್ದ ಮಗುವನ್ನು ಉರೂಸ್ ಸಂಧರ್ಭ ತಾಜುಲ್ ಉಲಮಾರ ಬಳಿ ಮಂತ್ರಿಸಲು ವೇದಿಕೆಯ ಬಳಿ ತಂದಾಗ, ಇಲ್ಲಿ ವಿಶ್ರಾಂತಿ ಹೊಂದುತ್ತಿರುವ ಮಹಾನರಿಗೆ ಕರಾಮತ್ ಇದ್ದರೆ ಈ ಮಗುವಿಗೆ ಈಗ ಮಾತನಾಡುವ ಶಕ್ತಿ ಬರಬೇಕು ಎಂದು ಹೇಳಿದಾಗ ಆ ಮಗು ಮಾತನಾಡುವ ಶಕ್ತಿ ಪಡೆಯಿತೆಂಬುದು ಮಾತ್ರವಲ್ಲ ಬಳಿಕ ನಡೆಯುವ ಉರೂಸ್ ಸಮಾರಂಭಗಳಲ್ಲಿ ಬಾಯಿ ಬರದ ಮಕ್ಕಳನ್ನು ವಿವಿಧ ಕಡೆಗಳಿಂದ ಅಮ್ಮೆಂಬಳ ಮಹಾನರ ಸನ್ನಿಧಿಗೆ ಜನರು ಝಿಯಾರತ್ ಗಾಗಿ ಮತ್ತು ತಾಜುಲ್ ಉಲಮಾ ಭಾಗಿಯಾಗುವ ಉರೂಸ್ ದಿನ ಸಮಾರಂಭಕ್ಕೆ ಮಂತ್ರಿಸಲು ಕರೆತರುತ್ತಿದ್ದರು.

       *ಈ ರೀತಿ ತಾಜುಲ್ ಉಲಮಾ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವಾರು ಮುಹಿಬ್ಬ್ ಗಳ ಆತ್ಮೀಯ ಆಶಾಕೇಂದ್ರವಾಗಿ ಇಂದು ಎಟ್ಟಿಕ್ಕುಳಂ ಪ್ರದೇಶ ಉರೂಸ್ ದಿನಗಳು ಮತ್ತು ಇತರ ದಿನಗಳಲ್ಲೂ ಜನಸಂಚಯನವಾಗಿ ಒಂದು ಹಳ್ಳಿ ಪ್ರದೇಶಕ್ಕೆ ಕಿಲೋಮೀಟರ್ ಗಟ್ಟಲೆ ಐತಿಹಾಸಿಕ ಚರಿತ್ರೆಗಳ ತಾಣವಾಗಿರುವ ಎಟ್ಟಿಕ್ಕುಳಂ ಗೆ ಜನರು ಸಾಗುತ್ತಿರುವುದು ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾಗಿರುವ ಅನುಭವಗಳಿಂದಾಗಿದೆ.*

*ಈಗಲೂ ನೆನಪಿದೆ ಮಹಾನರ ವಫಾತ್ ವಾರ್ತೆ ಕೇಳಿ ಆಲವಾದ ದುಃಖ ದೊಂದಿಗೆ ಎಟ್ಟಿಕ್ಕುಳಂ ತಲುಪಿ ಸುಮಾರು 10ಕಿಲೋ ಗೂ ದೂರ ವಾಹನ ನಿಲುಗಡೆಯಾಗಿಸಿ ಸರದಿ ಸಾಲಿನಲ್ಲಿ ಮಹಾನರ ಅಂತಿಮ ದರ್ಶನವೊಂದು ಪಡೆಯಲು ರಾತ್ರಿ 9ಗಂಟೆಗೆ ನಿಂತವರಿಗೆ ಕಾಣಲು ಸಾಧ್ಯವಾಗಿದ್ದು ಬೆಳಿಗ್ಗೆ 5.30ಗಂಟೆ ಸುಮಾರು ಆಗಿತ್ತು. ಅಂದು ಕಂಡ ಜನ ಪ್ರವಾಹವೇ ನನಗೆ ತಾಜುಲ್ ಉಲಮಾ ಯಾರಾಗಿದ್ದರೆಂಬುದು ಅರ್ಥೈಸಲು ಒಂದು ಸಣ್ಣ ಉದಾಹರಣೆಯಾಗಿ ಕಂಡದ್ದು*

*ಮಹಾನರು ಜೊತೆಗಿಲ್ಲದಿದ್ದರೂ, ಬಹಿರಂಗವಾಗಿ ನನ್ನ ಜೊತೆಯಾಡಿದರೂ ,ಮಗ ಫಝಲ್ ಜೊತೆ ಆಡದಿರೆಂಬ ಮಾತುಗಳ ಮೂಲಕ ತೋರಿಸಿಕೊಟ್ಟ ಸೈಯ್ಯದುನಾ ಕೂರತ್ ತಂಙಲರತ ಆತ್ಮೀಯ ನಾಯಕತ್ವ ಮತ್ತು ತಾಜುಲ್ ಉಲಮಾರ ಆತ್ಮೀಯ ನೆರಳು ನಮ್ಮ ವಿಶ್ವಾಸಿ ಸುನ್ನೀ ಸಮೂಹಕ್ಕಿರುದರಲ್ಲಿ ಸಂಶಯವಿಲ್ಲ*

✍ರಾಫಿ ನಗರ
rafinagara313@gmail.com

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...