Skip to main content

ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ಧೀನ್ ರ ಅ

ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ಧೀನ್(ರ.ಅ)
✍🏻  ತಾಜುದ್ಧೀನ್ ಸಖಾಫಿ,ಕುಂದಾಪುರ

       ಜನನ
   ಹಿಜರಿ 537  ರಲ್ಲಿ ಖುರಾಸನ್‌ನ ಸಂಜರ್ ಎಂಬ ಹಳ್ಳಿಯಲ್ಲಿ ಮಹಾನರು ಹುಟ್ಟಿ ಬೆಳೆದರು. ಅವರ ಕುಟುಂಬ ಪರಂಪರೆಯು ಹುಸೈನ್(ರ.ಅ) ರವರ ಕುಟುಂಬವನ್ನು ಸೇರುತ್ತದೆ. ತಂದೆ ಇಮಾಮ್ ಘಿಯಾಸುದ್ದೀನ್(ರ.ಅ).

ಜೀವನದ ಬದಲಾವಣೆ
    ಮಹಾನರು ಹದಿನೈದು ವರ್ಷದವರಾಗಿದ್ದಾಗ ತಂದೆ ವಫಾತ್ ಆದರು. ವಾರೀಸು ಸೊತ್ತಾಗಿ ಸಿಕ್ಕಿದ ತೋಟದಲ್ಲಿ ಕೂಲಿ ಕೆಲಸ ಮಾಡಿ ತಮ್ಮ ಜೀವನವನ್ನು ಮುಂದುವರೆಸಿದರು. ಒಂದು ದಿನ ಅವರು ಎಂದಿನಂತೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ "ಮಜ್ದೂಬ್" ಆದ ವಲಿಯ್ಯ್ ಒಬ್ಬರು ಅಲ್ಲಿಗೆ ಬಂದರು. ಖ್ವಾಜಾರವರು ಚಿಕ್ಕಂದಿನಿಂದಲೇ ಮಹಾನ್ ವ್ಯಕ್ತಿಗಳನ್ನು ನೋಡಿದರೆ ತುಂಬಾ ಗೌರವಿಸಿ ಬೇಕಾದ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಆ ಬಂದ ಮಹಾನ್ ವ್ಯಕ್ತಿ ಇಬ್ರಾಹಿಂ ಖಂದೂರಿ(ರ.ಅ) ಆಗಿದ್ದರು. ತಮ್ಮ ತೋಟದಿಂದ ದ್ರಾಕ್ಷಿಯನ್ನು ತಂದು ಕೊಟ್ಟರು. ಅವರು ಖ್ವಾಜಾರ ಅತಿಥಿಯಾಗಿ ಅದನ್ನು ಸೇವಿಸಿದರು. ಖ್ವಾಜಾರ ಸೇವೆಯಿಂದ ತೃಪ್ತಿ ಪಟ್ಟು ಅವರ ಚೀಲದಿಂದ ಒಂದು ತುಂಡು ರೊಟ್ಟಿಯನ್ನು ತೆಗೆದು ಅದನ್ನು ಬಾಯಿಯಲ್ಲಿ ಅಗೆದು ಖ್ವಾಜಾರಿಗೆ ತಿನ್ನಲು ಹೇಳಿದರು. ಖ್ವಾಜಾರವರು ಅದನ್ನು ತಿಂದರು. ಸೇವಿಸಿದ ನಂತರ ಖ್ವಾಜಾರಲ್ಲಿ ಬದಲಾವಣೆಗಳು ಬರತೊಡಗಿದವು. ತ್ಯಾಗ ಮತ್ತು ಸೂಕ್ಷ್ಮತೆ ಹೆಚ್ಚಾಯಿತು. ಇಹಲೋಕದ ಎಲ್ಲಾ ಕೆಟ್ಟ ಆಲೋಚನೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಿ ತನ್ನ ತೋಟವನ್ನು ಬಡವರಿಗೆ ವಕ್ಫ್ ಮಾಡಿದರು. ನಂತರ ಇಲ್ಮ್(ವಿದ್ಯೆ) ಕಲಿಯಲಿಕ್ಕಾಗಿ ಖುರಾಸನ್‌ಗೆ ಹೊರಟರು.

ಆಧ್ಯಾತ್ಮಿಕ ಜೀವನ
   ಖ್ವಾಜಾರವರ ಖಲೀಫರಾದ ಸುಲ್ತಾನುಲ್ ಆರಿಫೀನ್ ಕುತುಬುದ್ದೀನ್ ಬಖ್ತಿಯಾರ್ ಖಾಕಿ(ರ.ಅ) ರು ಹೇಳುತ್ತಾರೆ: ಮಹಾನರಾದ ಖ್ವಾಜಾರವರು ತಮ್ಮ ಶೇಖ್ ಉಸ್ಮಾನುಲ್ ಹಾರೂನೀ(ರ.ಅ) ರೊಂದಿಗೆ ಇಪ್ಪತ್ತು ವರ್ಷಗಳನ್ನು ಕಳೆದರು. ಆ ಅವಧಿಯಲ್ಲಿ ಮಹಾನರಾದ ಖ್ವಾಜಾರವರು ಎಲ್ಲಾ ಸೌಕರ್ಯಗಳಿಂದಲೂ, ವಿಶ್ರಾಂತಿ ಪಡೆಯೂವುದರಿಂದಲೂ ತನ್ನ ಶರೀರವನ್ನು ತಡೆದಿದ್ದರು.

 ಬಾಬಾ ಫರೀದುದ್ದೀನ್(ರ.ಅ) ರು ಕುತುಬುದ್ದೀನ್(ರ.ಅ) ರಿಂದ ಉಲ್ಲೇಖಿಸಿದ್ದಾರೆ: ಮಹಾನರಾದ ಖ್ವಾಜಾರವರು 70 ವರ್ಷಗಳ ಕಾಲ ಬೆಳಿಗ್ಗೆ ಉಪವಾಸ ಮತ್ತು ರಾತ್ರಿ ಆರಾಧನೆಯಲ್ಲಿ ಕಳೆದಿದ್ದಾರೆ. ಅತ್ಯಂತ ಅಗತ್ಯವಾದ ಸಮಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸಮಯಗಳಲ್ಲಿ ಅವರು ವುಳೂಅ್'ನಲ್ಲಿಯೇ(ಅಂಗಶುದ್ಧಿ) ಇರುತ್ತಿದ್ದರು. ಇಶಾ ನಮಾಝಿಗೆ ಮಾಡಿದ ವುಳೂಅ್ ನಿಂದ ಫಜ್ರ್ ನಮಾಝ್ ನಿರ್ವಹಿಸುತ್ತಿದ್ದರು. ಒಣ ರೊಟ್ಟಿಯಿಂದ ಉಪವಾಸವನ್ನು ತೆರೆಯುತ್ತಾರೆ, ಒಂದು ದಿನಕ್ಕೆ ಎರಡು ಬಾರಿ ಕುರ್ಆನ್ ಖತಮ್ ಪೂರ್ತಿಗೊಳಿಸುತ್ತಿದ್ದರು. ಕುರ್ಆನ್ ಖತಮ್ ಮಾಡುವಾಗ "ಮುಈನುದ್ಧೀನ್ ನಿಮ್ಮ ಖುರ್ಆನ್ ಖತಮನ್ನು ನಾವು ಸ್ವೀಕರಿಸಿದ್ದೇವೆ" ಎಂಬ ಅದೃಶ್ಯ ಧ್ವನಿಯನ್ನು ಕೇಳಿಸುತ್ತಿತ್ತು.

*ಶೈಖ್ ಜೀಲಾನೀ(ರ.ಅ) ರೊಂದಿಗೆ*
    ಶೈಖ್ ಇರ್ಬಲೀ(ರ.ಅ) ಹೇಳುತ್ತಾರೆ:ಸಿಯರುಲ್ ಆರಿಫೀನ್ ಎಂಬ ಗ್ರಂಥದಲ್ಲಿ ಮುಹಮ್ಮದ್ ಜಮಾಲುದ್ದೀನ್ ಅಸ್ಸುಹ್ರವರ್ದೀ(ರ.ಅ) ಹೇಳಿದರು: ಮಹಾನರಾದ ಖ್ವಾಜಾ ಮುಈನುದ್ಧೀನ್(ಖ.ಸಿ) ರವರು ಒಂದು ಪರ್ವತದ ಮೇಲೆ 57 ದಿನರಾತ್ರಿಗಳು ಶೈಖ್ ಮುಹ್ಯದ್ಧೀನ್ ಜೀಲಾನೀ(ಖ.ಸಿ) ರವರನ್ನು ಸಂದರ್ಶಿಸುತ್ತಾ ಸಹವಾಸ ಬೆಳೆಸಿದರು. ಅವರು ಶೈಖ್ ಮುಹ್ಯದ್ಧೀನ್(ಖ.ಸಿ) ರವರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಆಶೀರ್ವಾದಗಳನ್ನು ಪಡೆದರು.
(ತಫ್ರೀಜುಲ್ ಖಾತಿರ್:25)

ಶೈಖ್ ಮುಹ್ಯದ್ಧೀನ್(ಖ.ಸಿ) ರವರು ಅಲ್ಲಾಹನ ಅನುಮತಿ ಪ್ರಕಾರ "ನನ್ನ ಕಾಲು ಎಲ್ಲಾ ಆಲಿಯಾಗಳ ಭುಜದ ಮೇಲಿರುತ್ತದೆ" ಎಂದು ಹೇಳಿದ ಸಂದರ್ಭ ಎಲ್ಲಾ ಅವ್-ಲಿಯಾಗಳು ತಲೆ ತಗ್ಗಿಸಿ ಅಂಗೀಕರಿಸಿದರು. ಆ ಸಮಯದಲ್ಲಿ ಖ್ವಾಜಾರವರು ಖುರಾಸಾನಿನ ಒಂದು ಪರ್ವತದ ಮೇಲಿರುವ ಗುಹೆಯಲ್ಲಿದ್ದರು. ಶೈಖ್ ಮುಹ್ಯದ್ಧೀನ್(ಖ.ಸಿ) ರವರು ಹೇಳಿದ್ದನ್ನು ಅಲ್ಲಾಹನು ಮಹಾನರಿಗೆ ಬಹಿರಂಗಪಡಿಸಿದನು. ಇತರ ಎಲ್ಲಾ ವಲಿಯ್ಯ್ ಗಳು ತಲೆ ಬಾಗುವುದಕ್ಕೂ ಮುಂಚೆಯೇ ಖ್ವಾಜಾರವರು ತಲೆ ಬಾಗಿಸಿ ಅದನ್ನು ಸ್ವೀಕರಿಸಿದರು. ಈ ಮಾಹಿತಿಯು ಶೈಖ್ ಮುಹ್ಯದ್ಧೀನ್(ಖ.ಸಿ) ರವರಿಗೆ ತಿಳಿದು, ಅವ್-ಲಿಯಾಗಳ ಒಂದು ಗುಂಪಿನಲ್ಲಿ ಖ್ವಾಜಾರ ಬಗ್ಗೆ ಹೇಳಿದರು: ಘಿಯಾಸುದ್ದೀನ್‌(ರ.ಅ) ರ ಮಗ ಇತರರು ತಲೆಭಾಗುವ ಮೊದಲೇ ತಲೆ ಬಾಗಿದರು. ಅವರ ವಿನಯ,ನಮ್ರತೆ ಮತ್ತು ಅದಬ್ ಕಾರಣದಿಂದಾಗಿ ಅಲ್ಲಾಹು ಮತ್ತು ಅವನ ರಸೂಲ್ ﷺ ರಿಗೆ ಅತ್ಯಂತ ಪ್ರಿಯರಾಗಿದ್ದಾರೆ. ಭಾರತದಲ್ಲಿ ಎಲ್ಲವನ್ನೂ ಅವರ ಕೈಯಲ್ಲಿ ಮಾಡುವ ಸಮಯ ಬರುತ್ತದೆ. ಶೈಖ್ ಜೀಲಾನಿ(ಖ.ಸಿ) ಹೇಳಿದಂತೆ ನಡೆಯಿತು.
(ತಫ್ರೀಜುಲ್ ಖಾತಿರ್:26)

*ರೌಲಾ ಷರೀಫ್ ನಿಂದ ನಿರ್ದೇಶನ*
   ಮಹಾನರಾದ ಖ್ವಾಜಾರವರು(ಖ.ಸಿ) ಉನ್ನತವಾದ ಸ್ಥಾನಗಳನ್ನು ಗಳಿಸಿದ ನಂತರ ಮದೀನಾದಿಂದ ನಬಿ ﷺ ರ ಕರೆ ಬಂದಿತು. ಆದ್ದರಿಂದ ಮಹಾಪುರುಷರು ಮಕ್ಕಾ ಮತ್ತು ಮದೀನಾಕ್ಕೆ ಯಾತ್ರೆ ಹೊರಟರು. ಮಕ್ಕಾ'ಗೆ ಆಗಮಿಸಿ ಕೆಲವು ದಿನಗಳ ಕಾಲ ಅಲ್ಲಿಯೇ ತಂಗಿದ್ದರು.
ಸಿಯರುಲ್ ಅಖ್ತಾಬ್ ಎಂಬ ಪುಸ್ತಕದಲ್ಲಿ ಹೇಳುತ್ತಾರೆ: ಖ್ವಾಜಾರವರು ಒಂದು ದಿನ ಕಅ್-ಬ ತ್ವವಾಫ್ ಮಾಡುತ್ತಿರುವಾಗ ಅಶರೀರವಾಣಿ ಕೇಳಿಸಿತು. ದುಆ ಮಾಡಿರಿ ನಿಮ್ಮ ದುಆವನ್ನು ಸ್ವೀಕರಿಸಲಾಗುವುದು. ಮಹಾನರು ತನ್ನ ಮುರೀದ್(ಶಿಶ್ಯಂದಿರು)ಗಳು ಮತ್ತು ಖಿಯಾಮತ್ ತನಕ ಬರುವ ತನ್ನ ಮುರೀದ್ ಗಳ ಮಜ್ಲಿಸ್ ನಲ್ಲಿ ಭಾಗಿಯಾಗುವ ಎಲ್ಲರ ಮಗ್ಫಿರತ್ ಮತ್ತು ರಹ್ಮತ್ ಗೆ ಬೇಕಾಗಿ ಪ್ರಾರ್ಥಿಸಿದರು. ಅದಕ್ಕೆ ಉತ್ತರವು ಲಭಿಸಿತು. ಮಹಾನರು ಅಲ್ಲಾಹನಿಗೆ ಸ್ತುತಿಗಳನ್ನು ಅರ್ಪಿಸಿ ಅಲ್ಲಿಂದ ನೇರವಾಗಿ ಪ್ರವಾದಿ ﷺ ರ ಸನ್ನಿದಿಗೆ ತನ್ನ ಪ್ರವಾಸವನ್ನು ಮುಂದುವರೆಸಿದರು.

ವಿಶುದ್ಧ ರೌಳಾ ಶರೀಫನ್ನು ಝಿಯಾರತ್ ಮಾಡುವ ಸಮಯದಲ್ಲಿ ಖ್ವಾಜಾರವರನ್ನು ಪ್ರವಾದಿ ﷺ ಕರೆದು ಭಾರತಕ್ಕೆ ಹೋಗಲು ಆದೇಶಿಸಿದರು. ಪ್ರವಾದಿ ﷺ ಹೇಳಿದರು: ನೀವು ಭಾರತದ ವಲಿಯ್ಯ್ ಹಾಗೂ ಅಲ್ಲಿಯ ರಾಜ. ಪ್ರವಾದಿ ﷺ ರು ಖ್ವಾಜಾರಿಗೆ ಅಜ್ಮೀರ್ ಎಂಬ ಜಾಗದ ಭೂಪಟವನ್ನು ತೋರಿಸಿದರು, ಮತ್ತು ಹೇಳಿದರು: ಇನ್ನು ಮುಂದೆ ನಿಮ್ಮ ವಾಸಸ್ಥಳ ಅದಾಗಿದೆ, ಅಲ್ಲಿಯೇ ನಿಮ್ಮನ್ನು  ಧಫನ್ ಮಾಡಲಾಗುವುದು.

*ಭಕ್ತಿಯೊಂದಿಗೆ ಸಮೀಪಿಸಬೇಕು*

  ಒಮ್ಮೆ ಔರಂಗಜೇಬ್(ರ) ಝಿಯಾರತ್ ಗಾಗಿ ಅಜ್ಮೀರ್‌ಗೆ ಬಂದರು. ಖ್ವಾಜಾರವರ ಮಖ್ಬರವನ್ನು ಭೇಟಿ ಮಾಡಿದ ನಂತರ 'ಷಾಜಹಾನಿ' ಮಸೀದಿಗೆ ನಮಾಝಿಗಾಗಿ ಹೋಗುತ್ತಿದ್ದರು. ದಾರಿಯಲ್ಲಿ ಕಣ್ಣು ಕಾಣದ ಒಬ್ಬ ವ್ಯಕ್ತಿಯನ್ನು ದುಆ ಮಾಡುತ್ತಿರುವುದಾಗಿ ಕಂಡು, ಖ್ವಾಜಾರವರ ಕುರಿತು ಆತನೊಂದಿಗೆ ಕೇಳಿದರು. ಅವರು ಹೇಳಿದರು: ನಾನು ಬಹಳ ಸಮಯದಿಂದ ಇಲ್ಲಿದ್ದೇನೆ. ನನ್ನ ದೃಷ್ಟಿಯ ಕೊರತೆಯ ಬಗ್ಗೆ ನಾನು ಚಿಂತೆ ಮಾಡುತ್ತಿದ್ದೇನೆ. ಆದರೆ ನನಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.  ಇದನ್ನು ಕೇಳಿದ ರಾಜನು ತನ್ನ ಸೈನಿಕರಲ್ಲಿ ಹೇಳಿದರು: "ನಾನು ನಮಾಝ್ ಮಾಡಿ ಹಿಂದಿರುಗುವ ಮೊದಲು ಇವನ ದೃಷ್ಟಿ ಬರದಿದ್ದರೆ ನೀವು ಅವನ ಕುತ್ತಿಗೆಯನ್ನು ತುಂಡರಿಸಬೇಕು". ಇದನ್ನು ಕೇಳಿದ ಆತನು ರಾಜನು ತನ್ನ ತಲೆ ಕತ್ತರಿಸುವುದನ್ನು ಖಚಿತಪಡಿಸಿಕೊಂಡನು.  ಖ್ವಾಜಾರವರ ಸನ್ನಿಧಿಯ ಬಳಿಗೆ ಹೋಗಿ ಸಂಪೂರ್ಣ ವಿಶ್ವಾಸದಿಂದ ಕಣ್ಣೀರಿಟ್ಟನು. ರಾಜನು ಹಿಂದಿರುಗುವ ಮೊದಲೇ ಅವನ ದೃಷ್ಟಿ ಮರಳಿ ಸಿಕ್ಕಿತು. ನಮಾಝ್ ಮುಗಿದ ನಂತರ ರಾಜರು ಹೊರಬಂದರು. ಅವನ ದೃಷ್ಟಿಯು ಮರಳಿ ಪಡೆದಿದ್ದನ್ನು ನೋಡಿದಾಗ ಅವನೊಂದಿಗೆ ಹೇಳಿದರು:"ನೀವು ಈ ಹಿಂದೆ ಖ್ವಾಜಾರವರನ್ನು ಪರಿಪೂರ್ಣವಾಗಿ ನಂಬಿದ್ದರೆ ನಿಮ್ಮ ಉದ್ದೇಶವನ್ನು ಆ ಕ್ಷಣದಲ್ಲಿಯೇ ಪೂರೈಸುತ್ತಿದ್ದೀರಿ.
(ಮನಾಖಿಬು ಶೈಖಿಲ್ ಮಶಾಯಿಕು ಸುಲ್ತಾನುಲ್ ಹಿಂದ್ ರ.ಅ)

*ಅಲ್ಲಾಹನ ಸ್ಮರಣೆಯಲ್ಲಿ ಮರಣ ಹೊಂದಿದರು*

  ಖ್ವಾಜಾ ರವರು ವಫಾತಾಗುವ ರಾತ್ರಿ ಇಶಾ ನಮಾಝಿನ ನಂತರ ರೂಮಿನ ಬಾಗಿಲು ಮುಚ್ಚಿ ಏಕಾಂಗಿಯಾಗಿ ಧ್ಯಾನ ಮಾಡುತ್ತಿದ್ದರು. ಯಾರಿಗೂ ಒಳಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಖ್ವಾಜಾರವರನ್ನು ಪ್ರೀತಿಸುವ ಜನರು ಬಾಗಿಲಿನ ಬಳಿ ಕಾಯುತ್ತಿದ್ದರು. ಕೋಣೆಯ ಒಳಗೆ ಅನೇಕರ ಧ್ವನಿಗಳನ್ನು ಕೇಳಿದರು. ಬಹಳ ರಾತ್ರಿಯ ನಂತರ ಶಬ್ದಗಳು ನಿಂತುಹೋದವು. ತುಂಬಾ ಸಮಯದವರೆಗೆ ಖ್ವಜಾರವರ ಕೋಣೆಯ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಂತಿಮವಾಗಿ ಬಾಗಿಲು ತೆರೆದಾಗ ಖ್ವಾಜಾರವರು ಈ ಲೋಕದಿಂದ ಇಹಲೋಕ ತ್ಯಜಿಸಿದ್ದರು. ಮಹಾನರ ಹಣೆಯ ಮೇಲೆ ದೈವಿಕ ಬೆಳಕನ್ನು ಹೊಂದಿರುವ ಶಾಸನವನ್ನು ಬರೆದಿತ್ತು. *ಹಾಝಾ ಹಬೀಬುಲ್ಲಾ ಮಾತ ಫೀ ಹುಬ್ಬಿಲ್ಲಾಲಾ*(ಅಲ್ಲಾಹನ ಹಬೀಬಾದ ವ್ಯಕ್ತಿ ಅವನ ತೃಪ್ತಿಯೊಂದಿಗೆ ವಿದಾಯ ಹೇಳಿದರು).
ಮಹಾನರ ವಫಾತಿನ ದಿನದಂದು ಹಲವು ಔಲಿಯಾಗಳ ಕನಸಿನಲ್ಲಿ ಪ್ರವಾದಿ ಮುಹಮ್ಮದ್ ﷺ ರು
ಈ ರೀತಿ ಹೇಳಿದರು: ಅಲ್ಲಾಹನ ಇಷ್ಟದಾಸರಾದ ಖ್ವಾಜಾ ಮುಈನುದ್ಧೀನ್(ಖ.ಸಿ) ರವರನ್ನು ಸ್ವೀಕರಿಸಲು ನಾವು ಬಂದಿದ್ದೇವೆ.

ಹಿಜಿರಾ 633 ರಜಬ್ 6 ಸೋಮವಾರದಂದು ಬೆಳಿಗ್ಗೆ 96 ನೇ ವಯಸ್ಸಿನಲ್ಲಿ ಖ್ವಾಜಾರವರು ವಫಾತಾದರು.

(ಮೂಲ: ಶಿಹಾಬುದ್ದೀನ್ ಅಹ್ಮದ್ ಕೋಯಾ ಶಾಲಿಯಾತೀ(ರ.ಅ) ರವರ "ಮವಾಹಿಬುಲ್ ರಬ್ಬಿಲ್ ಮತೀನ್" ಗ್ರಂಥದಿಂದ Page-26)
*(اللهم إجعلنا من محبيهم برحمتك يا الراحمين)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...