ಭಾಷಣ ಮಾಡದೆಯೇ ಭಾಷಣಗಾರನಾದ ಅಅ್‌ರಾಬಿ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಎಲ್ಲರೂ* ಭಾಷಣ ಮಾಡಿ ಜನರೆಡೆಯಲ್ಲಿ ಹೆಸರು ವಾಸಿಯಾಗುತ್ತಿರುವಾಗ ಏನೂ ತಿಳಿಯದ ಒಬ್ಬ ಗ್ರಾಮವಾಸಿ ಅಅ್‌ರಾಬಿಗೆ ಹೆಸರುವಾಸಿಯಾಗಬೇಕೆಂಬ ಹಂಬಲವಾಯಿತು.
▪ *ಒಂದು* ದಿನ ತನ್ನ ಊರಿನಲ್ಲಿ ಜುಮಾಃ ನಮಾಝು ಕಳೆದ ಕೂಡಲೇ ಆತ ಎದ್ದುನಿಂತು ಹೇಳಿದ. *"ಜುಮಾಃ ನಮಾಝಿನಿ ದುಆ ಮುಗಿದ ನಂತರ ಯಾರೂ ಹೋಗಬಾರದು. ನನಗೆ ಒಂದು ಗಂಭೀರ ಭಾಷಣ ಮಾಡಲಿಕ್ಕಿದೆ."*
▪ *ನಮಾಝು* ಮುಗಿದ ನಂತರ ಯಾರೂ ಹೊರ ಹೋಗದೆ *ಅಅ್‌ರಾಬಿ* ಏನು ಭಾಷಣ ಮಾಡುತ್ತಾನೆಂದು ನೋಡಬೇಕೆಂದು ಬಹಳ ಕುತೂಹಲದಿಂದ ಎಲ್ಲರೂ ಕಾದು ಕುಳಿತರು.
▪ *ಭಾಷಣದ* ಪ್ರಾರಂಭದ ಬಿಸ್ಮಿ, ಹಂದ್, ಸ್ವಲಾತ್ ಮುಗಿದ ಕೂಡಲೇ ಅಅ್‌ರಾಬಿ ಹೇಳಿದ. *"ನಾನಿವತ್ತು ನಿಮ್ಮಲ್ಲಿ ಭಾಷಣ ಮಾಡುವ ವಿಷಯ ನಿಮಗೆ ಏನೆಂದು ಗೊತ್ತಿದೆಯಾ.?*" ಎಲ್ಲರೂ ಏಕ ಸ್ವರದಲ್ಲಿ ಹೇಳಿದರು. *"ಗೊತ್ತಿಲ್ಲ."*
▪ *"ಇಷ್ಟೊಂದು ಮಹತ್ವದ ವಿಷಯದಲ್ಲಿ ಭಾಷಣ ಮಾಡುವಾಗ ಅದರ ವಿಷಯ ಏನೆಂದು ತಿಳಿಯದ ನಿಮ್ಮಂತಹಾ ಮೂರ್ಖರಿಗೆ ನನ್ನಂತಹಾ ಬುದ್ದಿವಂತರು ಏನು ಭಾಷಣ ಮಾಡುವುದು.? ಸುಮ್ಮನೆ ಸಮಯ ಹಾಳು ಮಾಡಬೇಕಷ್ಟೆ."* ಎಂದು ಹೇಳಿ ಭಾಷಣ ಮಾಡದೆ ವೇದಿಕೆಯಿಂದ ಕೆಳಗಿಳಿದು ಹೋದನು.
▪ *ಎರಡನೆಯ* ಶುಕ್ರವಾರವೂ ಕಳೆದ ಶುಕ್ರವಾರದಂದು ಹೇಳಿದಂತೆಯೇ ಅಅ್‌ರಾಬಿ ಹೇಳಿದ. *"ಇವತ್ತು ಬಹಳ ಮುಖ್ಯವಾದ ಒಂದು ವಿಷಯದ ಬಗ್ಗೆ ನನಗೆ ಭಾಷಣ ಮಾಡಲಿಕ್ಕಿದೆ. ಯಾವತ್ತೂ ಕಳೆದ ವಾರದಂತೆ ಆಗದು. ಯಾರೂ ಹೋಗಬಾರದು"*
▪ *ಜುಮುಅಕ್ಕೆ* ಹಾಜರಾಗಿದ್ದ ಎಲ್ಲರೂ ಒಂದು ತೀರ್ಮಾನಕ್ಕೆ ಬಂದರು. *"ಇವತ್ತು ಈತನನ್ನು ಹೀಗೆಯೇ ಬಿಡಬಾರದು. ಈತ ಭಾಷಣ ಪ್ರಾರಂಭಿಸಿ ನಿಮಗೆ ವಿಷಯ ಗೊತ್ತಿದೆಯಾ ಎಂದು ಕೇಳಿದರೆ, ನಾವೆಲ್ಲರೂ "ಗೊತ್ತಿದೆ" ಎಂಬ ಉತ್ತರಕೊಟ್ಟು ಈತನಿಗೆ ಪಾಠ ಕಲಿಸಬೇಕು."*
▪ *ಅಅ್‌ರಾಬಿ* ಭಾಷಣ ಮಾಡಲು ವೇದಿಕೆ ಹತ್ತಿ ಪ್ರಾರಂಭದ ಮಾತುಗಳು ಮುಗಿದ ಕೂಡಲೇ ಕೇಳಿದ. *"ನಾನಿವತ್ತು ನಿಮ್ಮಲ್ಲಿ ಮಾಡುವ ಭಾಷಣದ ವಿಷಯವೇನೆಂದು ನಿಮಗೆ ಏನಾದರು ಗೊತ್ತಿದೆಯಾ..?"*
▪ *ಎಲ್ಲರೂ* ಒಟ್ಟಾಗಿ ಹೇಳಿದರು. *"ನಮಗೆ ಗೊತ್ತಿದೆ"* ಆಗ ಅಅ್‌ರಾಬಿಯು *"ಓಹೋ ಹಾಗೆಯಾ.. ಎಲ್ಲರಿಗೂ ಗೊತ್ತಿರುವ ಒಂದು ವಿಷಯದ ಬಗ್ಗೆ ನಾನ್ಯಾಕೆ ಮಾತನಾಡಬೇಕು.? ನನ್ನಂತಹಾ ಯಾವಾಗಲೂ ಬ್ಯುಸಿಯಿರುವ ಭಾಷಣಗಾರರು ಯಾಕೆ ಸಮಯ ಹಾಳುಮಾಡಬೇಕು.?"* ಎಂದು ಹೇಳಿ ವೇದಿಕೆಯಿಂದ ಹೊರಹೋದನು.
▪ *ಮೂರನೇ* ಶುಕ್ರವಾರವೂ ಅಅ್‌ರಾಬಿಯ ಈ ಖಾಯಿಲೆ ಗುಣವಾಗಿರಲಿಲ್ಲ. ಆದರೆ ಊರಿನ ಜನರು ಮೊದಲೇ ಒಂದು ತೀರ್ಮಾನಕ್ಕೆ ಬಂದಿದ್ದರು. "ಇವತ್ತು ಭಾಷಣ ಮಾಡಲು ನಿಂತು "ಗೊತ್ತಿದೆಯೇ" ಎಂದು ಕೇಳಿದರೆ, ಕೆಲವರು ಗೊತ್ತಿದೆಯೆಂದೂ, ಇನ್ನು ಕೆಲವರು ಗೊತ್ತಿಲ್ಲವೆಂದು ಹೇಳಿ ಈ ಸಲ ನಮಗೆ ಎರಡು ಬಾರಿ ಚಳ್ಳೆಹಣ್ಣು ತಿನ್ನಿಸಿ ನಮ್ಮನ್ನು ಮೂರ್ಖರನ್ನಾಗಿ ಮಾಡಿದ ಈತನಿಗೆ ಸರಿಯಾದ ಪಾಠ ಕಲಿಸಿ ಈತನ ಈ ಖಾಯಿಲೆಯನ್ನು ಗುಣಮಾಡಬೇಕೆಂದು ತೀರ್ಮಾನಿಸಿದರು.
▪ *ಮೂರನೇ* ಶುಕ್ರವಾರ ಅಅ್‌ರಾಬಿ ಎಂದಿನಂತೆ ವೇದಿಕೆ ಹತ್ತಿ ಭಾಷಣ ಶುರುಮಾಡಿದ. ಆರಂಭಿಕ ಮಾತುಗಳ ಬಳಿಕ *"ಮಾನ್ಯರೇ, ಕಳೆದ ಎರಡು ವಾರಗಳಲ್ಲಿ ನನ್ನಿಂದ ಏನಾದರೂ ತಪ್ಪು ಆಗಿದ್ದರೆ ನನಗೆ ಕ್ಷಮೆ ನೀಡಿ. ಇವತ್ತು ಹಾಗೆ ಆಗದು. ಏನಿದ್ದರೂ ಇವತ್ತು ನನ್ನ ವಿಷಯ ಕಳೆದ ಎರಡು ವಾರದ ಹಾಗಲ್ಲ. ಬಹಳ ಗಂಭೀರವಾದ ವಿಷಯ. ಆ ಬಗ್ಗೆ ನಿಮಗೆ ಏನಾದರೂ ಗೊತ್ತಿದೆಯಾ.?"* ಕೂಡಲೇ ಸಭಿಕರಲ್ಲಿ ಕೆಲವರು *"ಗೊತ್ತಿದೆ"* ಎಂದೂ ಮತ್ತೆ ಕೆಲವರು *" ಗೊತ್ತಿಲ್ಲ"* ಎಂಬ ಉತ್ತರ ಕೊಟ್ಟರು.
▪ *ಅಅ್‌ರಾಬಿಯು* "ನಿಮಲ್ಲಿ ಕೆಲವರಿಗೆ ಗೊತ್ತಿರುವುದಾದರೆ, ಗೊತ್ತಿಲ್ಲದವರಿಗೆ ಗೊತ್ತಿರುವವರು ಹೇಳಿಕೊಡಿ. ನನ್ನಂತಹಾ ಖ್ಯಾತ ಭಾಷಣಗಾರರು ಅನಗತ್ಯ ಮಾತನಾಡಿ ಸಮಯ ವ್ಯರ್ಥ ಮಾಡುವುದು ಯಾಕೆ.?" ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.
▪ *ಒಟ್ಟಿನಲ್ಲಿ* ಅಅ್‌ರಾಬಿ ಭಾಷಣ ಮಾಡದೆಯೇ ಜನರೆಡೆಯಲ್ಲಿ *ಭಾಷಣಗಾರ* ಎಂಬ ಬಿರುದಿಗೆ ಪಾತ್ರನಾದ.
ಸಂಗ್ರಹ: *ತ್ವರಾಯಿಫುಲ್ ಅರಬ್* ಎಂಬ ಗ್ರಂಥ.

Comments