ಹಝ್ರತ್ ಖಲಿರ್ (ಅ) ಒಂದು ತೋಟದಲ್ಲಿ ಕೆಲಸಕ್ಕೆ ನಿಂತಾಗ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಒಮ್ಮೆ* ಹಝ್ರತ್ ಖಲಿರ್ (ಅ) ರವರು ಒಂದು ನದಿಯ ಕಿನಾರೆಯಲ್ಲಿ ಹಾದು ಹೋಗುತ್ತಿರುವಾಗ ಒಬ್ಬ ಬಡಪಾಯಿ ಭಿಕ್ಷುಕ ಬಂದು ಹೇಳಿದ. *"ದನಿಯವರೇ.., ನನಗೆ ಹಸಿವಾಗುತ್ತದೆ. ಊಟ ಮಾಡಲು ಹಣ ಇಲ್ಲ. ನನಗೆ ಏನಾದರು ಕೊಡಿ."* ಆಗ ಹಝ್ರತ್ ಖಲಿರ್ (ಅ) ರವರು *"ನನ್ನಲ್ಲಿ ನಿನಗೆ ಕೊಡಲು ಒಂದು ನಯಾ ಪೈಸೆ ಕೂಡ ಇಲ್ಲ. ಏನು ಮಾಡುವುದು..? ನನ್ನಲ್ಲಿರುವುದು ಈ ಶರೀರ ಮಾತ್ರ. ಬೇಕಾದರೆ ನನ್ನನ್ನು ಮಾರಾಟ ಮಾಡಿ ಅದರಿಂದ ಸಿಗುವ ಹಣ ತೆಗೆದುಕೊಳ್ಳು."* ಎಂದು ಉತ್ತರಿಸಿದರು.
▪ *ಭಿಕ್ಷುಕ* ಅವರನ್ನು ಬಹಳ ಸಂತೋಷದಿಂದ ದಾಸರನ್ನು ಮಾರಾಟ ಮಾಡುವ ಸಂತೆಯಲ್ಲಿ ಕೊಂಡುಹೋಗಿ ಒಬ್ಬ ರೈತನಿಗೆ ಒಳ್ಳೆಯ ಬೆಲೆಗೆ ಮಾರಾಟ ಮಾಡಿ ಹಣ ಜೇಬಿನಲ್ಲಿ ಹಾಕಿ ಅವನ ಮನೆಯತ್ತ ನಡೆದನು.
▪ *ಇತ್ತ* ರೈತನಾದ ಮಾಲಿಕನು ಅವರನ್ನು ತನ್ನ ತೋಟದ ಕೆಲಸಕ್ಕೆ ನೇಮಕ ಮಾಡಿದನು. ನಿಜವಾಗಿ ಅವನಿಗೆ ಇದು ಒಬ್ಬ ಪ್ರವಾದಿಯೆಂದು ತಿಳಿದಿರಲಿಲ್ಲ. ಹಝ್ರತ್ ಖಲಿರ್ (ಅ) ರವರು ತೋಟ ಮತ್ತು ಗದ್ದೆಯಲ್ಲಿ ಬಹಳ ಕಠಿಣವಾದ ಕೆಲಸಗಳನ್ನು ಯಾವುದೇ ಒತ್ತಡವಿಲ್ಲದೆ ಬಹಳ ಚೆನ್ನಾಗಿ ಮಾಡುತ್ತಿದ್ದರು. ಹೀಗಿರುವಾಗ ಒಂದು ದಿನ ಅವರ ಚಲನವಲನಗಳಲ್ಲಿ ಸಂಶಯಗೊಂಡ ಯಜಮಾನ ಅವರಲ್ಲಿ ಕೇಳಿದ. *"ನೀವು ಯಾರು..? ನಿಮ್ಮ ಹೇಸರೇನು..?"* ಆಗ ಹಝ್ರತ್ ಖಲಿರ್ (ಅ) ಹೇಳಿದರು. *"ನನ್ನ ಹೆಸರು ಖಲಿರ್."* ಆಗ ಮಾಲಿಕ ಕೇಳಿದ. *"ಯಾವ ಖಲಿರ್..? ಪ್ರವಾದಿ ಖಲಿರಾ..?"* *"ಹೌದು. ಅದೇ ಖಲಿರ್"* ಎಂದು ಉತ್ತರಿಸಿದರು.
▪ *"ಸುಬ್‌ಹಾನಲ್ಲಾಹ್* ಈ ವಾರ್ತೆ ಕೇಳಿದಾಕ್ಷಣ ಯಜಮಾನನು ಅಲ್ಲಾಹನಿಗೆ ಒಂದು ಸುಜೂದು ಮಾಡಿ ಅವರಲ್ಲಿ ಹೇಳಿದನು. *"ನನಗೆ ನೀವು ಖಲಿರ್ ಎಂದು ಗೊತ್ತಿರಲಿಲ್ಲ. ಈಗಲೇ ನಿಮ್ಮನ್ನು ಸ್ವತಂತ್ರ ಮಾಡಿದ್ದೇನೆ."*
ಸಂಗ್ರಹ ; ಇಮಾಮ್ ಸ್ವಫೂರಿಯ ನುಝ್‌ಹತುಲ್ ಮಜಾಲಿಸ್ ಎಂಬ ಗ್ರಂಥ.

Comments