ಮೂರ್ಛೆತಪ್ಪಿ ಕುಸಿದು ಬಿದ್ದ ಇಮಾಮ್ ದಾವೂದ್ ಅತ್ವಾಯೀ (ರ)
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 5534991199
▪ *ಪ್ರಖ್ಯಾತ* ಪಂಡಿತ ಮತ್ತು ಸೂಫಿವರ್ಯರಾದ ಶೈಖ್ ದಾವೂದ್ ಅತ್ವಾಯೀ (ರ) ರವರು ಒಮ್ಮೆ ಒಂದು ದಾರಿಯಾಗಿ ಹೋಗುತ್ತಿರುವಾಗ ಥಟ್ಟನೆ ಮೂರ್ಛೆತಪ್ಪಿ ಕುಸಿದು ಬಿದ್ದರು. ನಂತರ ಅವರ ಸಂಗಡಿಗರು ಅವರನ್ನು ಅವರ ಮನೆಗೆ ಎತ್ತಿಕೊಂಡು ಹೋದರು. ಸ್ವಲ್ಪ ಕಳೆದು ಮೂರ್ಛೆ ಮರಳಿ ಬಂದಾಗ ಅಲ್ಲಿ ನೆರೆದಿದ್ದವರಲ್ಲಿ ಒಬ್ಬರು ಮೂರ್ಛೆ ತಪ್ಪಿಹೋದ ಕಾರಣವೇನೆಂದು ಇಮಾಮರಲ್ಲಿ ಕೇಳಿದರು. ಇಮಾಮ್ ದಾವೂದ್ ಅತ್ವಾಯೀ (ರ) ಹೇಳಿದರು. *"ಏನಿಲ್ಲ. ಕೆಲವು ವರ್ಷಗಳ ಮುಂಚೆ ನನ್ನ ಬದುಕಿನಲ್ಲಿ ಒಮ್ಮೆ ಆ ಜಾಗದಲ್ಲಿ ಕುಳಿತು ಒಬ್ಬರನ್ನು "ಗೀಬತ್" (ಹಿಂದಿನಿಂದ ದೂರುವುದು) ಹೇಳಿದ್ದೆನು. ಇವತ್ತು ನಾನು ಆ ಜಾಗ ತಲುಪಿದಾಗ ಅದರ ನೆನಪಾಗಿ ನಾಳೆ ಪರಲೋಕದಲ್ಲಿ ಅಲ್ಲಾಹುವಿನ ಸನ್ನಿಧಿಯಲ್ಲಿ ವಿಚಾರಣೆ ಮಾಡುವಾಗ ಈ ತಪ್ಪಿಗೆ ಹೇಗೆ ಉತ್ತರ ಕೊಡುವುದು ಎಂಬ ಹೆದರಿಕೆ ಬಂದಾಗ ತಾನರಿಯದೆಯೇ ಮೂರ್ಛೆತಪ್ಪಿ ಬಿದ್ದೆನು."*
▪ *ಇಮಾಮ್* ಹಸನುಲ್ ಬಸ್ವರೀ (ರ) ರನ್ನು ಒಬ್ಬರು ಹಿಂದಿನಿಂದ *ಗೀಬತ್* ಹೇಳಿದರು. ಗೀಬತ್ ಹೇಳಿದ ವಿಷಯ ಇಮಾಮರಿಗೆ ತಿಳಿದಾಗ ಗೀಬತ್ ಹೇಳಿದ ವ್ಯಕ್ತಿಗೆ ಬಹಳ ಉತ್ತಮ ದರ್ಜೆಯ ಒಂದು ಪೆಟ್ಟಿಗೆ ಖರ್ಜೂರ ಉಡುಗೊರೆಯಾಗಿ ಕೊಟ್ಟು ಕಳುಹಿಸಿದರು.
▪ *ತಪ್ಪು* ಮಾಡಿದ ವ್ಯಕ್ತಿಗೆ ಹದಿಯ ಕಳುಹಿಸಿದ ವಿಷಯ ಜನರು ತಿಳಿದಾಗ ಅದರ ಕಾರಣವೇನೆಂದು ಇಮಾಮ್ ಹಸನುಲ್ ಬಸ್ವರೀ (ರ) ರಲ್ಲಿ ಕೇಳಿದಾಗ ಇಮಾಮರು ಹೇಳಿದರು. *"ಅವನು ನನ್ನನ್ನು ಗೀಬತ್ ಹೇಳಿದಾಗ ಅವನ ಮಾಡಿದ ಸತ್ಕರ್ಮದಿಂದ ಒಂದು ಪಾಲು ನನ್ನ ಖಾತೆಗೆ ಖಾತ್ರಿ (Credit) ಆಗಿದೆ. ಅದಕ್ಕೋಸ್ಕರ ಅದಕ್ಕೆ ಬದಲಾಗಿ ಅವನಿಗೂ ನನ್ನ ಪರವಾಗಿ ಒಂದು ಕಾಣಿಕೆ ಇರಲಿ ಎಂದು ಆ ಉಡುಗೊರೆಯನ್ನು ಕಳುಹಿಸಿದೆನು"*
▪ *"ಗೀಬತ್* ಹೇಳುವವರು ಮತ್ತು ಚಾಡಿಹೇಳಿ ಪರಸ್ಪರ ಭಿನ್ನತೆ ಮಾಡುವವರು (ನಮೀಮತ್) ನರಕದ ಕೋತಿಗಳಾಗಿರುತ್ತಾರೆ. ಅಂತೆಯೇ ಸುಳ್ಳು ಹೇಳುವವನು ನರಕದ ನಾಯಿಯೂ ಅಸೂಯೆಗಾರನು ನರಕದಲ್ಲಿ ಹಂದಿಯೂ ಆಗಿರುತ್ತಾನೆ." ಎಂದು ಇಮಾಮ್ ಹಾತಿಮ್ ಅಲ್ ಅಸ್ವಮ್ಮ್ (ರ) ಹೇಳಿರುತ್ತಾರೆ.
ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments