Skip to main content

ಪ್ರವಾದಿ ಮೂಸಾ (ಅ) ರವರ ಬೆತ್ತದ ಬಗ್ಗೆ ನಿಮಗೇನು ಗೊತ್ತು.

ಪ್ರವಾದಿ ಮೂಸಾ (ಅ) ರವರ ಬೆತ್ತದ ಬಗ್ಗೆ ನಿಮಗೇನು ಗೊತ್ತು.

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119

   ▪ *ಹಝ್ರತ್* ಮೂಸಾ (ಅ) ರ ಬೆತ್ತದ ಬಗ್ಗೆ ಪವಿತ್ರ ಖುರ್‌ಆನಿನಲ್ಲಿ ಹಲವಾರು ಕಡೆ ಉಲ್ಲೇಖವಿದೆ.
   ▪ *ಆ* ಬೆತ್ತವು ಸ್ವರ್ಗದಲ್ಲಿ ಬೆಳೆದ ಒಂದು ಮರದಿಂದ ಮಾಡಿದ್ದಾಗಿದೆ. ಪ್ರವಾದಿ ಶುಅಯಿಬ್ (ಅ) ರವರಿಗೆ ಮಲಕ್ ಮುಖಾಂತರ ಅಲ್ಲಾಹನಿಂದ ದೊರೆತ ಆ ಬೆತ್ತವನ್ನು ಪ್ರವಾದಿ ಶುಅಯಿಬ್ (ಅ) ರವರು ಅವರ ಮಗಳನ್ನು ಹಝ್ರತ್ ಮೂಸಾ (ಅ) ರವರು ಮದುವೆಯಾದಾದ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು.
   ▪ *ಅದರ* ಉದ್ದ ಹಝ್ರತ್ ಮೂಸಾ (ಅ) ರವರ ಉದ್ದವಾಗಿದ್ದ ಹತ್ತು ಅಡಿಯಾಗಿತ್ತು. (Feet) ಬೇರೊಂದು ಅಭಿಪ್ರಾಯ ಪ್ರಕಾರ ಹನ್ನೆರಡು ಅಡಿಯಾಗಿರುತ್ತದೆ.
▪ *ಅದನ್ನು* ಸಾಧಾರಣ ನಡೆಯುವಾಗ ಊರುಗೋಲಾಗಿ ಉಪಯೋಗಿಸುತ್ತಿದ್ದರು.
   ▪ *ಆಡುಗಳನ್ನು* ಮೇಯಿಸುವಾಗ ಅವುಗಳಿಗೆ ಹೊಡೆಯಲು ಮತ್ತು ಗಧರಿಸಲು ಬಳಸುತ್ತಿದ್ದರು.
   ▪ *ಬೆತ್ತವು* ಪವಾಡವಾಗಿ ಕೆಲವೊಮ್ಮೆ ಮಾತಾಡುತ್ತಿತ್ತು. ಅಂತೆಯೇ ಅವರು ಏಕಾಂಗಿಯಾಗಿರುವಾಗ ಬೋರ್ ಹೊಡೆಯದಿರಲು ಒಬ್ಬ ಮಿತ್ರನಂತೆ ಅವರೊಂದಿಗೆ ಮಾತನಾಡುತ್ತಿತ್ತು. ಹಲವಾರು ವಿಷಯಗಳ ಬಗ್ಗೆ ಅವರಿಗೆ ಸಲಹೆ ನೀಡುತ್ತಿತ್ತು. ಹಾಗೆಯೇ ಕೆಲವೊಮ್ಮೆ ಅಗತ್ಯ ಬರುವಾಗ ಕಾಳಿಂಗ ಸರ್ಪವಾಗಿಯೂ ಮಾರ್ಪಡುತ್ತಿತ್ತು.
   ▪ *ಕತ್ತಲೆಯ* ರಾತ್ರಿಯಲ್ಲಿ ದೀವಣಿಗೆಯಾಗುತ್ತಿತ್ತು. (Torch)
   ▪ *ಸಂಚಾರದಲ್ಲಿ* ಹಸಿವಾದರೆ ಅದನ್ನು ನೆಲದಲ್ಲಿ ಗಿಡ ನೆಡುವಂತೆ ನೆಟ್ಟರೆ ಕೂಡಲೇ ಮರವಾಗಿ ಬೆಳೆದು ಬೇಕಾದ ಹಣ್ಣು ಹಂಪಲುಗಳನ್ನು ಕೊಡುತ್ತಿತ್ತು.
   ▪ *ಅವರೊಂದು* ಕಡೆ ಮಲಗಿದರೆ ಅದು ಅವರಿಗೆ ಕಾವಲುಗಾರನಾಗಿ ನಿಲ್ಲುತ್ತಿತ್ತು. ಆಕ್ರಮಣ ಮಾಡಲು ಬರುವವರನ್ನು ಗಧರಿಸಿ ಓಡಿಸುತ್ತಿತ್ತು.
   ▪ *ಅದಕ್ಕೆ* ಒಂದು ತುದಿಯಲ್ಲಿ ಹಿಡಿಯಲು ಸೌಕರ್ಯವಾಗಲು ಕೈಪಿಡಿಕೆ ಇತ್ತು. ಮತ್ತೊಂದು ತುದಿಯಲ್ಲಿ ಎರಡು ಕೊಂಡಿಗಳಿದ್ದವು. ಸಂಚಾರದಲ್ಲಿ ವಿಶ್ರಾಂತಿ ಪಡೆಯುವ ವೇಳೆ ನೆರಳು ಬೇಕಾದಲ್ಲಿ ಅದನ್ನು ನೆಲದಲ್ಲಿ ನೆಟ್ಟರೆ ಮೇಲೆ ಭಾಗದ ಕೊಂಡಿಗಳು ಉದ್ದವಾಗುತ್ತಿತ್ತು. ನಂತರ ಅವರು ಅದರ ಮೇಲೆ ಬಟ್ಡೆ ಹಾಕಿ ನೆರಳು ಪಡೆಯುತ್ತಿದ್ದರು.
   ▪ *ಬಾವಿಯಿಂದ* ನೀರು ತೆಗೆಯುವ ಅಗತ್ಯ ಬಂದರೆ ಬಾವಿಯ ಆಳಕ್ಕೆ ಸರಿಯಾಗಿ ಬೆತ್ತವು ಉದ್ದವಾಗುತ್ತಿತ್ತು. ಮಾತ್ರವಲ್ಲ ತುದಿಯಲ್ಲಿರುವ ಕೊಂಡಿಯು ಬಕೆಟ್ ಅಥವಾ ತೊಟ್ಟಿಯಾಗಿ ಪರಿವರ್ತನೆಯಾಗುತ್ತಿತ್ತು.
   ▪ *ಮರುಭೂಮಿಯಲ್ಲಿ* ನೀರಿನ ಬಾವಿಯಿಲ್ಲದ ಜಾಗದಲ್ಲಿ ನೀರಿನ ಅಗತ್ಯ ಬಂದರೆ ಅದನ್ನು ಒಂದು ಕಡೆ ನೆಟ್ಟರೆ ಕೂಡಲೇ ಆ ಜಾಗದಲ್ಲಿ ನೀರು ಚಿಮ್ಮಿ ಹೊರ ಬರುತ್ತಿತ್ತು. ಅಲ್ಲಿಂದ ಬೆತ್ತವನ್ನು ತೆಗೆದರೆ ನೀರು ಬರುವುದು ನಿಲ್ಲುತ್ತಿತ್ತು.
  ▪ *ಕೆಲವೊಮ್ಮೆ* ಅಗತ್ಯಕ್ಕೆ ಅವರಿಗೆ ಸಂಚಾರ ವಾಹನವಾಗುತ್ತಿತ್ತು
  ▪ *ಚೇಳು* ಹಾವುಗಳಂತಹಾ ತೊಂದರೆ ಕೊಡುವ ಜೀವಿಗಳನ್ನು ಕಂಡರೆ ಅದು ಕೊಲ್ಲುತ್ತಿತ್ತು.
   ▪ *ಗಮನಾರ್ಹ* ಸಂಗತಿಯೆಂದರೆ, ಈ ಬೆತ್ತವು ಹಝ್ರತ್ ಮೂಸಾ (ಅ) ರವರು ವಫಾತಾದಾಗ ಎಲ್ಲಿ ಹೋಯಿತೆಂಬುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಅದಾಗ್ಯೂ ಅಂತ್ಯ ದಿನ ಸಮೀಪಿಸುವಾಗ ಪ್ರತ್ಯಕ್ಷವಾಗಿವ *ದಾಬ್ಬತುಲ್ ಅರ್ದ್* ಎಂಬ ಮೃಗದ ಕೈಯಲ್ಲಿರುವ ಬೆತ್ತ ಇದು ಎಂದು ಹೇಳಲಾಗುತ್ತದೆ.
   ▪ *ಒಮ್ಮೆ* ಪ್ರವಾದಿ ಮೂಸಾ (ಅ) ರವರ ಕೈಯಲ್ಲಿ ಆ ಬೆತ್ತವನ್ನು ಕಂಡಾಗ *"ಇದೇನು ನಿಮ್ಮ ಕೈಯಲ್ಲಿರುವುದು?"* ಎಂದು ಕೇಳಿದನು. ಆಗ ಅವರು *"ಇದು ನನ್ನ ಬೆತ್ತ. ನಾನಿದನ್ನು ನೆಲಕ್ಕೂರಿ ನಿಲ್ಲುತ್ತೇನೆ.‌ ಆಡುಗಳಿಗೆ ಎಲೆಗಳು ಬೇಕಾದಾಗ ಮರಕ್ಕೆ ಹೊಡೆದು ಎಲೆಗಳನ್ನು ಬೀಳಿಸುತ್ತೇನೆ. ಮಾತ್ರವಲ್ಲ ಇದರಲ್ಲಿ ನನಗೆ ಬೇರೆಯೂ ಹಲವಾರು ಪ್ರಯೋಜನಗಳು ಇವೆ"*  ಎಂದು ಹೇಳಿದರು.
   ▪ *ಇಲ್ಲಿ* ಗಮನಾರ್ಹವೆಂದರೆ, ಬೇರೆಯೂ ಹಲವಾರು ಪ್ರಯೋಜನಗಳಿವೆ ಎಂದು ಹಝ್ರತ್ ಮೂಸಾ (ಅ) ರವರು ಹೇಳಿದ್ದು ಈ ಮೇಲೆ ಉಲಮಾಗಳು ಹೇಳಿದ ಪ್ರಯೋಜನಗಳಾಗಿದೆ.
 
 ▪ *ಮುದುಕನಾದರೂ* ಅಲ್ಲದಿದ್ದರೂ ಕೈಯಲ್ಲಿ ಒಂದು ಬೆತ್ತ ಹಿಡಿದು ನಡೆಯುವುದು ಒಳ್ಳೆಯ ನಡವಳಿಕೆಯಾಗಿದೆ. ಗತಕಾಲದ ಪ್ರವಾದಿಗಳಲ್ಲೂ ನಮ್ಮ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕೈಯಲ್ಲೂ ಬೆತ್ತವಿತ್ತೆಂದು ವರದಿಯಾಗಿದೆ. ಕೈಯಲ್ಲಿ ಒಂದು ಬೆತ್ತವಿದ್ದರೆ ಅದು ಅಕಸ್ಮಾತ್ತಾಗಿ ಬರುವ ಅಕ್ರಮಣವನ್ನು ಎದುರಿಸಲೂ ಇತರ ಅಗತ್ಯಕ್ಕೂ ಬಳಸಬಹುದು. ಮಾತ್ರವಲ್ಲ ಬೆತ್ತ ಕೈಯಲ್ಲಿ ಹಿಡಿಯುವುದು *ಸಜ್ಜನರ ಅಲಂಕಾರ ವಸ್ತು* ಇಮಾಮ್ ಬಸರೀ (ರ) ಹೇಳಿರುತ್ತಾರೆ. ಬೆತ್ತ ಹಿಡಿಯುವವನನ್ನು ಕಂಡರೆ ಶೈತಾನರು ಕೂಡ ಹೆದರಿ ಓಡುತ್ತಾರೆ. ಅಲ್ಲದೆ ಅದು ಸುನ್ನತ್ತಾಗಿದೆ ಎಂದೂ ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.

ಸಂಗ್ರಹ ; ಇಮಾಮ್ ಫಖ್‌ರುದ್ದೀನ್ ರಾಝಿಯವರ *ಅಲ್ ತಫ್ಸಿರ್ ಅಲ್ ಕಬೀರ್,* ಶೈಖ್ ಇಸ್ಮಾಯೀಲ್ ಹಖ್ಖೀಯವರ *ರೂಹುಲ್ ಬಯಾನ್* ಅಂತೆಯೇ ಕೆಲವು ತಫ್‌ಸೀರ್ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...