Skip to main content

ಅಶೈಕ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ)

*ಅವರನ್ನು ನೆನೆಯದ ಮುಸ್ಲಿಮರಿಲ್ಲ*

*ಅಶೈಕ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ).*

*ಔಲಿಯಾ ಪ್ರಪಂಚದ ನೇತಾರ,ವಿಶ್ವನ್ನೇ ವಿಸ್ಮಯಗೊಳಿಸಿದ ಕರಾಮತ್‌ಗಳ ಸರದಾರ, ಅಖ್ತಾಬ್‌‌ಗಳ ಪರಮೋನ್ನತ ನಾಯಕ, ಅಶೈಕ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ರ.ಅ).*

*ರಬೀವುಲ್ ಆಖಿರ್ ಶೈಕ್ ಜೀಲಾನಿ (ಖ.ಸಿ) ರವರ ತಿಂಗಳು. ಅವರ ಸ್ಮರಣೆ ಅಧ್ಯಯನ, ಚರಿತ್ರಾ ಕಲಿಕೆ,ಅವರ ಮಹತ್ವಗಳನ್ನು ಸ್ಮರಿಸುವ ಪುಣ್ಯ ತಿಂಗಳು..*

ಅಲ್ಲಾಹುವಿನ ದ್ಸಿಕ್ರ್, ಸ್ಮರಣೆಯ ಮೂಲಕ ಮಹೋನ್ನತ ಸ್ಥಾನ ತಲುಪಿದ ಶೈಕ್ ಜೀಲಾನಿ (ಖ.ಸಿ) ರವರು ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ಪ್ರೇರಕರು.

*ಶೈಕ್ ಜೀಲಾನಿ ( ಖ.ಸಿ ) ರವರಿಗೂ ಮುಸ್ಲಿಮರಿಗೂ ಅಭೇಧ್ಯವಾದ ಸಂಬಂಧವಿದೆ.ಮುಸ್ಲಿಮರೆಡೆಯಲ್ಲಿ ಅವರಷ್ಟು ಸ್ವಾಧೀನವಿರುವ ಬೇರೆ ವಲಿಯ್ಯಗಳು ಇಲ್ಲವೆನ್ನಬಹುದು.ಶೈಕ್ ಜೀಲಾನಿ (ಖ. ಸಿ) ರವರೊಂದಿಗೆ ಈ ಸಮುದಾಯಕ್ಕೆ ಪ್ರೀತಿ, ಸ್ನೇಹ, ಅಧ್ಯಾತ್ಮಿಕ ಸಂಬಂಧ ಬಲವಾಗಿ ಬೇರೂರಿದೆ.*

*ಅವರನ್ನು ಸ್ಮರಿಸದ ಮುಸ್ಲಿಮರಿಲ್ಲ.ಅವರನ್ನು ನೆನಪಿಸದ ಮುಸ್ಲಿಂ ಮನೆಗಳಿಲ್ಲ.ಅವರನ್ನು ಚರ್ಚಿಸದ ವೇದಿಕೆಗಳಿಲ್ಲ.ಅವರ ಮೇಲೆ ಫಾತಿಹಾ ಓದದ ಮುಸ್ಲಿಮರಿರಲಿಕ್ಕಿಲ್ಲ.ಸಂಕಷ್ಟ ಸಂದರ್ಭದಲ್ಲಿ ಅವರನ್ನು ನೆನೆಯದ ಮುಸ್ಲಿಮರಿಲ್ಲ.*
*ಇದಕ್ಕೆಲ್ಲಾ ಕಾರಣ ಅವರ ದೀನಿ ದ‌ಅ್‌ವತ್ ಮತ್ತು ಕರಾಮತ್*.

*ಅವರು ಆಧುನಿಕ ಇಸ್ಲಾಮಿನ ಜೀವಂತಿಕೆಗಾಗಿ ಕಠಿಣ ಪ್ರಯತ್ನ ನಡೆಸಿದ ಮಹಾನುಭಾವರು.*
*ಇದೇ ಕಾರಣವೇನೋ* *ಮುಹ್ಯದ್ದೀನ್ ಮಾಲೆ"*
*ಮುಸ್ಲಿಮರೆಡೆಯಲ್ಲಿ ಜನಪ್ರಿಯವಾಯಿತು*

*ವಿಚಿತ್ರವೆಂದರೆ ಶೈಕ್ ಜೀಲಾನಿ(ಖ.ಸಿ) ಯವರ ವಫಾತಾದ ತಿಂಗಳಿನಂದೇ ಸುನ್ನೀಗಳ ಆತ್ಮೀಯ ನಾಯಕರಾದ ತಾಜುಲ್ ಉಲಮಾ,ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ,ನೂರುಲ್ ಉಲಮ ಮುಂತಾದ ಉಲಮಾಗಳು ವಫಾತಾದರು*

*ಜನನ*

ಶೈಕ್ ಜೀಲಾನಿಯವರು ಹಿ.470   ರಮಳಾನ್ ತಿಂಗಳಲ್ಲಿ ಜನಿಸಿದರು. ಹಿ.471 ಎಂಬ ಅಭಿಪ್ತಾಯವೂ ಇದೆ.
ಅವರು ಜನಿಸಿದ್ದು ಇರಾಕಿನ ರಾಜಧಾನಿಯಾದ ಟೆಹ್ರಾನಿನ ಪಶ್ಚಿಮ ದಿಕ್ಕಿನಲ್ಲಿರುವ ತಬರಿಸ್ಥಾನ್ ಎಂಬ ಗ್ರಾಮದ ಜೀಲಾನ್ ಎಂಬ ಸ್ಥಳದಲ್ಲಿ.
ಶೈಕ್ ಜೀಲಾನಿ (ಖ.ಸಿ) ರವರ ತಂದೆ ಮತ್ತು ತಾಯಿ ಇಬ್ಬರ ಪರಂಪರೆಯ ಮೂಲಕ ಪ್ರವಾದಿ (ಸ) ರವರ ಬಳಿಗೆ ತಲುಪುತ್ತದೆ
.
*ಮಾತಪಿತರಿಗೆ ಸ್ವಪ್ನದ ಮೂಲಕ ಲಭಿಸಿದ ನಿರ್ದೇಶ ಪ್ರಕಾರ ಅವರಿಗೆ ಅಬ್ದುಲ್ ಖಾದಿರ್ ಎಂಬ ಹೆಸರಿಡಲಾಯಿತು.ಚಿಕ್ಕಂದಿನಲ್ಲಿಯೇ ಶೈಕ್ ಜೀಲಾನಿಯವರು ಅದ್ಬುತ ಸಿದ್ದಿಗಳನ್ನು ತೋರಿಸಿದ್ದರು.*

*ಶೈಕ್ ಜೀಲಾನಿಯವರ ಜೀವನಾವಧಿಯನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು*.
ಒಂದನೆಯದು ಜನನದಿಂದ ಬಾಗ್ದಾದಿಗೆ ವಿದ್ಯಾಭ್ಯಾಸಕ್ಕೆ ಹೋಗುವ ವರೆಗಿನ ಕಾಲ.ಶೈಕ್ ರವರು ತನ್ನ 18 ನೇ ವರ್ಷದಲ್ಲಿ ಬಾಗ್ದಾದ್‌ಗೆ ತೆರಳಿದ್ದರು. ಈ ಅವಧಿಯಲ್ಲಿ ಅವರು ತಾಯಿಯವರ ಶಿಕ್ಷಣದಲ್ಲಿ ಬೆಳೆದರು. ಅವರೊಂದಿಗೆ ಹೊಲ ಗದ್ದೆಗಳಲ್ಲಿ ಕ್ರಷಿ ಮಾಡುತ್ತಿದ್ದರು.

*ಎರಡನೇಯದಾಗಿ ಬಾಗ್ದಾದ್‌ನಲ್ಲಿ ಶಿಕ್ಷಣ ದಲ್ಲೂ,ರಿಯಾಳ (ಪರಿಶೀಲನೆ) ದಲ್ಲೂ ಕಳೆದ ಕಾಲ.ತನ್ನ 33 ವರ್ಷ ಅದಕ್ಕಾಗಿ ವ್ಯಯಿಸಿದರು.ಇದು ಶೈಕ್‌ರವರ ಜೀವನದ ಮಹತ್ವಪೂರ್ಣ ಕಾಲವಾಗಿತ್ತು. ಗುರಿ ಸಾಧನೆಗಾಗಿ ಅವರು ಸಹಿಸಿದ ತ್ಯಾಗ,ಅನುಭವಿಸಿದ ಕಷ್ಟ ಊಹಿಸಲು ಅಸಾಧ್ಯ.*

*ಮೂರನೇಯದಾಗಿ ಅಂದರೆ 51  ನೇ ವರ್ಷದಿಂದ ಮರಣ ಹೊಂದುವವರೆಗಿನ ಕಾಲ.ಈ ಅವಧಿಯಲ್ಲಿ ಅವರು ಮಾಡಿದ ಪ್ರಬೋಧನೆ,ದೀನಿ ದ‌ಅವತ್ ಇಸ್ಲಾಮಿನ ಸುವರ್ಣ ಯುಗವಾಗಿತ್ತು. ಲಕ್ಷಾಂತರ ಜನರು ಇಸ್ಲಾಮಿನೆಡೆಗೆ ಆಕರ್ಷಿತರಾದರು*.

ಶೈಕ್ ಜೀಲಾನಿಯವರು (ಖ.ಸಿ) ತನ್ನ 51 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು.ಅವರಿಗೆ ನಾಲ್ಕು ಪತ್ನಿಯರಲ್ಲಿ 27 ಗಂಡು,22 ಹೆಣ್ಣು ಮಕ್ಕಳು ಜನಿಸಿದರು.

*ಜಗತ್ತನ್ನು ವಿದ್ಯೆ ಹಾಗೂ ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದ ಆ ಮಹಾನುಭಾವರು ಹಿ.583 ರಬೀವುಲ್ ಆಖಿರ್ 11 ರಂದು ವಫಾತಾದರು. ಆಗ ಅವರಿಗೆ 91 ವರ್ಷ,ಏಳು ತಿಂಗಳಾಗಿತ್ತು*.

*ಅಲ್ಲಾಹು ಶೈಕ್ ಜೀಲಾನಿ (ಖ. ಸಿ) ರವರ ಬರಕತ್ ನಿಂದ ನಮ್ಮೆಲ್ಲರನ್ನು ವಿಜಯಗೊಳಿಸಲಿ.ಆಮೀನ್.*

             *ಎಂ ಎಂ ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...