Skip to main content

ಎಂಟಾಣೆಯ ಕಾರುಬಾರು

ಎಂಟಾಣೆಯ ಕಾರುಬಾರು

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119

   ▪ *ಒಮ್ಮೆ ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ಕಂದೂರ (ಖಮೀಸ್) ಖರೀದಿಸಲು ಬಜಾರಿಗೆ ಹೋದರು. ಹೋಗುವಾಗ ಪ್ರವಾದಿಯವರ ಜೇಬಿನಲ್ಲಿ ಎಂಟು *ದಿರ್‌ಹಮ್* ಇತ್ತು.
   ▪ *ದಾರಿಮಧ್ಯೆ* ಯಾವುದೋ ಒಂದು ಮನೆಯ ದಾಸಿ ಹುಡುಗಿ (ಕೆಲಸದಾಳು) ಬಹಳ ಬೇಸರದಿಂದ ಅಳುತ್ತಿದ್ದಳು. ಪ್ರವಾದಿಯವರು ಅವಳಲ್ಲಿ ಕೇಳಿದರು. *"ನೀನು ಯಾಕೆ ಅಳುತ್ತಿರುವಿ..? ಏನು ಕಾರಣ..? ಏನಾಗಿದೆ ನಿನಗೆ ಹೇಳು..?"* ಆಗ ಅವಳು ಹೇಳಿದಳು. *"ನಾನು ಒಂದು ಮನೆಯಲ್ಲಿ ಕೆಲಸಕ್ಕಿದ್ದೇನೆ. ಇವತ್ತು ಮನೆಯವರು ಸಾಮಾನು ಖರೀದಿಸಲು ಎರಡು ದಿರ್‌ಹಮ್ ಕೊಟ್ಟು ನನ್ನನ್ನು ಬಜಾರಿಗೆ ಕಳುಹಿಸಿದ್ದರು. ಆದರೆ ದಾರಿಮಧ್ಯೆ ಆ ಹಣ ನನ್ನಿಂದ ಎಲ್ಲೋ ಬಿದ್ದು ಹೋಗಿದೆ. ಎಲ್ಲಿ ಎಂದು ಗೊತ್ತಿಲ್ಲ. ಈಗ ಖಾಲಿ ಕೈಯಲ್ಲಿ ಮನೆಗೆ ಹೋದರೆ ನನ್ನನ್ನು ಹೊಡೆಯುತ್ತಾರೆ."*
   ▪ *ಇದನ್ನು* ಕೇಳಿದಾಕ್ಷಣ ತನ್ನ ಕೈಯಲ್ಲಿದ್ದ ಎಂಟು ದಿರ್‌ಹಮಿನಿಂದ ಎರಡು ದಿರ್‌ಹಮನ್ನು ಅವಳಿಗೆ ಕೊಟ್ಟು ನೇರವಾಗಿ ಬಜಾರಿಗೆ ಹೋಗಿ ಅಲ್ಲಿ ಒಂದು ಅಂಗಡಿಯಿಂದ ನಾಲ್ಕು ದಿರ್‌ಹಮ್ ಕೊಟ್ಟು ಒಂದು ಒಳ್ಳೆಯ ದರ್ಜೆಯ ಕಂದೂರ ಖರೀದಿಸಿದರು.
   ▪ *ಹೊಸ* ಕಂದೂರ ಖರೀದಿಸಿ ಮನೆಗೆ ಮರಳಿ ಬರುವಾಗ ಒಬ್ಬ ಬಡಪಾಯಿಯು ದಾರಿಯಲ್ಲಿ *"ನನಗೆ ಧರಿಸಲು ವಸ್ತ್ರ ಇಲ್ಲ. ಯಾರಾದರು ನನಗೆ ಒಂದು ವಸ್ತ ಕೊಟ್ಟರೆ ನಾಳೆ ಅವನಿಗೆ ಪರಲೋಕದಲ್ಲಿ ಅಲ್ಲಾಹನು ಸ್ವರ್ಗದ ವಸ್ತ್ರ ಉಡಿಸುವನು"* ಎಂದು ಬಹಳ ದನಿಯಲ್ಲಿ ಹೇಳುತ್ತಿದ್ದನು. ಇದನ್ನು ಕೇಳಿದಾಕ್ಷಣ ಪ್ರವಾದಿಯವರಿಗೆ ಕಣ್ಣೀರು ಹರಿದು ಬಂತು. ಆಚೀಚೆ ನೋಡದೆ ಆ ಹೊಸ ಕಂದೂರವನ್ನು ಅವನಿಗೆ ಕೊಟ್ಟು ಪುನಃ ಬಜಾರಿಗೆ ಹೋದರು. ಅಲ್ಲಿ ಎಂಟರಲ್ಲಿ ಬಾಕಿಯಾಗಿದ್ದ ಎರಡು ದಿರ್‌ಹಮ್ ಕೊಟ್ಟು ಒಂದು ಸಾಮಾನ್ಯ ದರ್ಜೆಯ ಕಂದೂರ ಖರೀದಿಸಿ ಮನೆಗೆ ಬಂದರು.
   ▪ *ಮನೆಗೆ* ಬರುವ ದಾರಿಮಧ್ಯೆ ಮೊದಲು ಎರಡು ದಿರ್‌ಹಮ್ ಕೊಟ್ಟ ಆ ಬಾಲಕಿ ಅಲ್ಲೇ ಮೊದಲಿನಂತೆಯೇ ಅಳುತ್ತಿದ್ದಳು. ಪ್ರವಾದಿಯವರು ಅವಳಲ್ಲಿ ಕೇಳಿದರು. *"ನೀನು ಇಲ್ಲೇ ಇದ್ದಿಯಾ..? ಇನ್ನೇನು ಸಮಸ್ಯೆ..? ಯಾಕೆ ಮನೆಗೆ ಹೋಗಲಿಲ್ಲ..? "* ಆಗ ಅವಳು ಹೇಳಿದಳು. *"ನಾನು ಎರಡು ದಿರ್‌ಹಮ್ ಕಳೆದು ಹೋದಾಗ ಅದನ್ನು ಹುಡುಕಾಡಲು ತುಂಬಾ ಸಮಯ ಇಲ್ಲಿ ವ್ಯಯಿಸಿದೆ. ಈಗ ನೀವು ಕೊಟ್ಟ ಎರಡು ದಿರ್‌‌ಹಮಿನಲ್ಲಿ ಸಾಮಾನು ಖರೀದಿಸಿದರೂ ತಡವಾದ ಕಾರಣ ಮನೆಗೆ ಹೋಗುವಂತಿಲ್ಲ. ಹೋದರೆ ನನ್ನ ಚರ್ಮ  ಸುಲಿಯುವರು"*
   ▪ *ಪ್ರವಾದಿಯವರು* ಅವಳಲ್ಲಿ ಹೇಳಿದರು. *"ಗಾಬರಿಪಡಬೇಡ. ನಾನು ನಿನ್ನೊಂದಿಗೆ ನಿಮ್ಮ ಮನೆಗೆ ಬರುತ್ತೇನೆ. ನೀನು ಹೆದರಬೇಡ ನಾನು ಸರಿ ಮಾಡುತ್ತೇನೆ."* ನಂತರ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವಳೊಂದಿಗೆ ಅವಳಿಗೆ ಶಿಫಾರಸು ಮಾಡಲು ಅವಳ ಮನೆಗೆ ಹೋದರು. ಮನೆ ತಲುಪಿದ ಅವರು ಮನೆ ಬಾಗಿಲಿನ ಹೊರಗೆ ನಿಂತು ಸಲಾಮ್ ಹೇಳಿದರು. ಆದರೆ ಮನೆಯೊಳಗೆ ಜನರಿದ್ದರೂ ಯಾವುದೇ ಉತ್ತರ ಬರಲಿಲ್ಲ. ಮತ್ತೊಮ್ಮೆ ಬಹಳ ದನಿಯೆತ್ತಿ ಹೇಳಿದರು. ಆಗಲೂ ಉತ್ತರವಿಲ್ಲ. ಕೊನೆಗೆ ಮೂರನೇ ಬಾರಿ ಸಲಾಮ್ ಹೇಳಿದಾಗ " ವ ಅಲೈಕುಮುಸ್ಸಲಾಮ್ ಯಾ ರಸೂಲಲ್ಲಾಹ್.." ಎಂಬ ಉತ್ತರ ಬಂತು. ಪ್ರವಾದಿಯವರು ಮನೆಯವರಲ್ಲಿ ಕೇಳಿದರು. *"ನಿವ್ಯಾಕೆ ನಾನು ಮೊದಲು ಎರಡು ಬಾರಿ ಸಲಾಮ್ ಹೇಳಿದಾಗ ಜವಾಬ್ ಕೊಡಲಿಲ್ಲ.?"* ಅದಕ್ಕೆ ಅವರು ಹೇಳಿದರು. *"ಯಾ ರಸೂಲಲ್ಲಾಹ್.., ನೀವು ಹೇಳಿದ ಸಲಾಮ್ ನಮಗೆ ಸರಿಯಾಗಿ ಕೇಳಿರುತ್ತದೆ. ಆದರೆ ನಿಮ್ಮ ಆ ಶಬ್ದ ಕೇಳುವುದು ನಮಗೆ ಬಹಳ ಇಷ್ಟ. ಅಲ್ಲದೆ ಮೂರು ಸಲ ಹೇಳಿದಾಗ ಅದರ ಬರಕತ್ ನಮಗೆ ಮತ್ತೂ ಮತ್ತೂ ದೊರಕಲಿ ಎಂಬ ಉದ್ದೇಶದಿಂದ ಮೌನವಾದೆವು."*
   ▪ *ನಂತರ* ಪ್ರವಾದಿಯವರು ಮನೆಗೆ ಬಂದ ವಿಷಯ ಹೇಳಿದಾಗ ಮನೆ ಮಾಲಿಕ ಹೇಳಿದರು. *"ಅವಳಿಗೆ ಮಾಫು ಮಾತ್ರವಲ್ಲ. ನೀವು ಈ ಕಡೆ ನಮ್ಮ ಮನೆಗೆ ಬಂದ ಕಾರಣ ನಾನು ಅವಳನ್ನು ದಾಸಿತನದಿಂದ ಮುಕ್ತಗೊಳಿಸಿ ಸ್ವತಂತ್ರಗೊಳಿಸಿದ್ದೇನೆ."*
   ▪ *ಈ* ಘಟನೆಯಿಂದ ಬಹಳ‌ ಸಂತೊಷಗೊಂಡ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಅನುಯಾಯಿಗಳಾಗ ಸ್ವಹಾಬಿಗಳಲ್ಲಿ‌ ಹೇಳಿದರು. *"ನನ್ನ ಇವತ್ತಿನ ಎಂಟು ದಿರ್‌ಹಮ್ ಬಹಳ ಬರಕತಿನದ್ದಾಗಿತ್ತು. ಅದರಲ್ಲಿ ಎರಡು ಕಂದೂರ ಖರೀದಿಯಾಯಿತು. ಮಾತ್ರವಲ್ಲ ಖರೀದಿಸಿದ ಕಂದೂರದಲ್ಲಿ ಒಂದನ್ನು ಒಬ್ಬ ಬಡವನಿಗೆ ಉಡಿಸಲು ಸಾಧ್ಯವಾಯಿತು. ಅಲ್ಲದೆ ಅದರಿಂದ ಸಾಧು ಹುಡುಗಿಯೊಬ್ಬಳನ್ನು ಸಂಕಷ್ಟದಿಂದ ಪಾರುಮಾಡಲು ಅವಕಾಶ ದೊರಕಿತು. ಸಾಲದ್ದಕ್ಕೆ ಅವಳ ದಾಸಿತನದಿಂದ ಮುಕ್ತಳಾಗಿ ಸ್ವತಂತ್ರಳಾಗುವುದಕ್ಕೂ ಕಾರಣವಾಯಿತು. ಒಟ್ಟಿನಲ್ಲಿ ಇಷ್ಟೆಲ್ಲಾ ಕಾರುಬಾರು ನಡೆದದ್ದು ಬರೇ ಎಂಟು ದಿರ್‌ಹಮಿನಿಂದ ಮಾತ್ರ. ಇಷ್ಟೊಂದು ಬರಕತಿನ ದಿರ್‌ಹಮನ್ನು ನಾನು ಎಂದೂ ಕಾಣಲಿಲ್ಲ."*

ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...