Skip to main content

ನಬೀಯೇ ಕರೀಂ ﷺ ರವರಲ್ಲಿ ಒಂದು ಬೆಕ್ಕಿನ ಅಹವಾಲು.


_ಭಾರತದ ಅಮ್ರಿತ್ಸರ್ (ಪಂಜಾಬ್) ನವರಾದ ಹಾಜಿ ಇಸ್ಮಾಯಿಲ್ ಎಂಬವರು ಮದೀನಾ ಶರೀಫಿನಲ್ಲಿ ತನಗೆ ಉಂಟಾದ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ.  ಒಮ್ಮೆ ನಾನು ಉಮ್ರಾಃ  ನಿರ್ವಹಿಸಿ ಬಳಿಕ ಮದೀನಾ ಷರೀಫ್ ತೆರಳಿದೆ ಅಲ್ಲಿ ಒಂದು ಹೋಟೆಲ್ನಲ್ಲಿ ಒಂದು ಕೋಣೆಯನ್ನು ಪಡೆದು ಇರ ತೊಡಗಿದೆ. ಅಲ್ಲಿ ಒಂದು ಆಶ್ಚರ್ಯಕರ ಘಟನೆಯೊಂದು ನಡೆಯಿತು ಅದೇನೆಂದರೆ ನಾನಲ್ಲಿ ಪ್ರತೀ ಬಾರಿ ಊಟಕ್ಕೆ ಕುಳಿತಾಗಳೂ ಮದೀನಾ ಶರೀಫಿನ ಬೆಕ್ಕೊಂದು ಹಾಜರಾಗುತ್ತಿತ್ತು ನಾನು ಅದಕ್ಕೆ ಅಕ್ಕರೆಯಿಂದಲೇ ಊಟವನ್ನು ನೀಡುತ್ತಿದ್ದೆ. ಮದೀನಾ ಶರೀಫಿನ ಬೆಕ್ಕಾದ್ದರಿಂದ ನನಗದರೊಂದಿಗೆ ವಿಶೇಷವಾದ ಒಲವು ಮೂಡಿತ್ತು. ಮೊದಲು ಅದಕ್ಕೆ ಊಟ ಹಾಕಿ ಬಳಿಕ ನಾನು ಆರಂಭಿಸುತ್ತಿದ್ದೆ.  ಹಲವು ದಿನಗಳ ಕಾಲ ಹಾಗೆಯೇ ಮುಂದುವರಿಯುತ್ತಿತ್ತು. ಒಂದು ದಿನ ಊಟಕ್ಕೆ ಕುಳಿತುಕೊಂಡಾಗ ಬೆಕ್ಕೂ ಬಂತು ಆಗ ನಾನು ಅದಕ್ಕೆ ರೊಟ್ಟಿಯನ್ನು ಚೂರು ಚೂರುಗಳಾಗಿ ತುಂಡರಿಸುತ್ತಾ  ಈ ಬೆಕ್ಕು ನನ್ನೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದೆ  ಆದ್ದರಿಂದ ನಾನಿದನ್ನು ಮದೀನಾ ಶರೀಫಿನ ಸವಿನೆನಪಿಗಾಗಿ ಭಾರತಕ್ಕೆ ಕೊಂಡು ಹೋಗುವೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ನಾನಷ್ಟು ಯೋಚಿಸಿದ್ದೇ ತಡಾ ಬೆಕ್ಕು ಏನೂ ಭಕ್ಷಿಸದೇ ಅಲ್ಲಿಂದ ಓಡಿ ಹೋಯಿತು.!  ನನಗೆ ಕಾರಣ ಏನೆಂದು ಅರ್ಥವಾಗಲಿಲ್ಲ ತರುವಾಯ ನಾನು ಊಟ ಮಾಡಿದೆ ಅಷ್ಟರಲ್ಲಿ ಮದೀನಾದ ಮಸೀದಿಯಿಂದ ಅಝಾನ್ ಮೊಳಗಿತು ನಾನು ಮಸೀದಿಯತ್ತ ಹೊರಟೆ. ಪ್ರತೀ ನಮಾಝ್ ಬಳಿಕ ರೌಳಾ ಷರೀಫ್ ಮುಂದೆ ಸ್ವಲಾತ್ ಸಲಾಂ ಹೇಳಿ ಅಲ್ಲಿಂದ ಹಿಂತಿರುಗುವುದು ನನ್ನ ವಾಡಿಕೆ. ಅಂದು ನಮಾಝ್ ಬಳಿಕ ಹುಜ್ರಾ ಷರೀಫ್ ಮುಂದೆ ಸಲಾಂ ಹೇಳುವಾಗ ನಾನು ಆ ಬೆಕ್ಕನ್ನು ಸ್ವರ್ಣ ಜಾಲಿಯ ಬಳಿ ಕುಳಿತಿರುವುದಾಗಿ ಕಂಡೆ.! ಆಗ ನನಗೆ ವಿಷಯ ಏನೆಂದು ಮನವರಿಕೆ ಆಗಲಿಲ್ಲ. ನಾನು ಹಿಂತಿರುಗಿದೆ ನಂತರ ಅಸರ್ ನಮಾಝ್ ಗೆ ಹೋದಾಗಲೂ ಅದೇ ರೀತಿ ಬೆಕ್ಕನ್ನು ಅದೇ ಸ್ಥಳದಲ್ಲಿ ಕುಳಿತಿರುವುದಾಗಿ ಕಂಡೆ ಬಳಿಕ ಹಲವು ಬಾರಿ ನಾನು ನಮಾಝ್ ನಿರ್ವಹಿಸಲು ಹೋದಾಗಳೆಲ್ಲಾ ಆ ಬೆಕ್ಕನ್ನು ಅಲ್ಲಿಯೇ ಕಂಡೆ ಆಗ ನಾನು  ಈ ಬೆಕ್ಕಿನ ಅಸಲಿ ವಾಸಸ್ಥಳ ಇಲ್ಲಿಯೇ ಆಗಿದೆ ಇದು ಹಸಿದಾಗ ಹೋಟೆಲ್ಗಳತ್ತ ಹೋಗುತ್ತೆ ಅಂದುಕೊಂಡೆ._

 _ಅಂದು ಮದೀನಾ ಶರೀಫಿನಲ್ಲಿ ನನ್ನ ಕೊನೆಯ ರಾತ್ರಿ ನಾನು  ಖಚಿತವಾದ ನಿರ್ಧಾರಕ್ಕೆ ಬಂದೆ  ನಾಳೆ ಕೊನೆಯ ಬಾರಿ ಸಲಾಂ ಹೇಳಲು ರೌಳಾ ಶರೀಫಿಗೆ ಬಂದಾಗ ಬೆಕ್ಕನ್ನು ಅಲ್ಲಿಂದಲೇ ಹಿಡಿದು ಅದನ್ನು ಜೊತೆಗೆ ಭಾರತಕ್ಕೆ ಕೊಂಡುಹೋಗುವೆ. ನಾನು ಅದಕ್ಕಾಗಿ ಗೂಡನ್ನೂ ತಯಾರು ಮಾಡಿದ್ದೆ. ಮಸ್ಜಿದುನ್ನಬವಿಯಿಂದ ನಾನು ಹಿಂತಿರುಗಿ ಕೋಣೆಗೆ ಬಂದು ಮಲಗಿ ನಿದ್ರಿಸಿದಾಗ ಕನಸಿನಲ್ಲಿ ನಂಬಿಯೇ ಕರೀಂ ﷺ ರನ್ನು ಕಂಡೆ ನಾನು ಸಂತೋಷದಿಂದ ಯಾ ರಸೂಲಲ್ಲಾಹ್ ﷺ.!  ನನ್ನ ಅದೃಷ್ಟ ತಾವು ನನಗೆ ತನ್ನ ದರ್ಶನ ಭಾಗ್ಯವ ನೀಡಿದಿರಿ ಎಂದು ಉದ್ಗರಿಸಿದೆ. ಆಗ ನಬಿﷺ ಹೇಳಿದರು ಓ ಹಾಜಿ ಇಸ್ಮಾಯೀಲ್.. ನಾನು ಸುಮ್ನೆ ಬಂದದ್ದಲ್ಲ.. ನಿಮಗೆ ಆಜ್ಞೆ ಮಾಡಲು ಬಂದೆ ನಿಮಗೆ ಇಲ್ಲಿಂದ ಹಿಂತಿರುಗಬಹುದು ಆದರೆ ನನ್ನ ಮದೀನಾದ ಬೆಕ್ಕನ್ನು ಮಾತ್ರ ಕೊಂಡು ಹೋಗಬಾರದು.! ಆಗ ನಾನಂದೆ ಯಾ ರಸೂಲಲ್ಲಾಹ್ ﷺ.! ನಾನು ಬೆಕ್ಕನ್ನು ಕೊಂಡು ಹೋಗುವ ವಿಚಾರವನ್ನು ಯಾರಲ್ಲೂ ಕೂಡ ಹೇಳಿರಲಿಲ್ಲ  ತಮಗೆﷺ ಹೇಗೆ ತಿಳಿಯಿತು.? ಆಗ ನಬಿಯೇ ರಹ್ಮತ್ ﷺ ಹೇಳಿದರು.  ಇಂದಿನ ವಿಷಯವಲ್ಲ ಕಳೆದ ಮೂರು ದಿನಗಳಿಂದ ಆ ಬೆಕ್ಕು ನನ್ನ ಹುಜ್'ರಾದ ಬಳಿ ಬಂದು ಊಟ ತಿಂಡಿ ಬಿಟ್ಟು ನಿರಂತರವಾಗಿ ಅಳುತ್ತಾ ಯಾ ರಸೂಲಲ್ಲಾಹ್..ﷺ ಕರುಣೆ ತೋರಿರಿ ನನ್ನನ್ನು ತಮ್ಮﷺ ಮದೀನಾದಿಂದ  ಬೇರ್ಪಡಿಸಲಾಗುತ್ತಿದೆ ಊಟ ತಿಂಡಿ ಬಿಟ್ಟು ನಾನಿರಬಲ್ಲೆ ಆದರೆ ತಮ್ಮﷺ ಮದೀನಾವನ್ನು ನನ್ನಿಂದ ಬಿಟ್ಟಿರಲಾಗದು ದಯವಿಟ್ಟು ನನ್ನನ್ನು ರಕ್ಷಿಸಿರಿ.. ಎಂದು ರೋಧಿಸುತ್ತಿದೆ. ಅದಕ್ಕೆ ನನಗೆ ಇಲ್ಲಿ ಬರಲೇ ಬೇಕಾಯಿತು ಆದ್ದರಿಂದ ಹೇಳುತ್ತಿದ್ದೇನೆ ನಿಮಗೆ ಹೋಗಬಹುದು ಆದರೆ ಆ ಬೆಕ್ಕನ್ನು ಕೊಂಡು ಹೋಗುವಂತಿಲ್ಲ... ಸುಬ್ ಹಾನಲ್ಲಾಹ್.! ನನ್ನ ಹಬೀಬರﷺ ಕರುಣೆಯ ಬಗ್ಗೆ ಹೇಗೆ ವಿಶ್ಲೇಷಣೆ ಮಾಡಳಿ.?_ 

*ಫಿದಾಕ ಅಬೀ ವ ಉಮ್ಮೀ ಯಾ ರಸೂಲಲ್ಲಾಹ್.... ﷺ*


*ಮುಹಮ್ಮದ್ ಹುಸೈನ್ ರಝಾ.*


Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...