Skip to main content

ಫರೋವನ ಮನೆಗೆ ಬೇಟಿಕೊಟ್ಟ ಇಬ್‌ಲೀಸ್

ಫರೋವನ ಮನೆಗೆ ಬೇಟಿಕೊಟ್ಟ ಇಬ್‌ಲೀಸ್

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119


   ▪ *ಒಮ್ಮೆ* ಇಬ್‌ಲೀಸನು (ಲ) ಫಿರ್ಔನನ ಈಜಿಪ್ತಿನಲ್ಲಿದ್ದ ದರ್ಬಾರಿಗೆ ಸಂದರ್ಶನ ಕೊಟ್ಟನು. ಫಿರ್ಔನನು ತನ್ನ ಅರಮನೆಯ ಅಂಗಳದಲ್ಲಿ ಬಹಳ ಆರಾಮವಾಗಿ ಕುಳಿತಿದ್ದನು. ಅಲ್ಲಿ ತಲುಪಿದ ಇಬ್‌ಲೀಸನು ಅವನಲ್ಲಿ ಕೇಳಿದನು. *"ನೀನು ಜನರಲ್ಲಿ ದೈವ, ದೇವರು ಅಂತ ವಾದಿಸುತ್ತಿಯಾ..?"* ಆಗ ಫರೋವನು ಹೇಳಿದನು. *"ಹೌದು."* "ನೀನು ದೇವರು ಎಂಬುದಕ್ಕೆ ಏನಾದರು ಆಧಾರವಿದೆಯಾ..?" ಫರೋವನಲ್ಲಿ ಇಬ್‌ಲೀಸನ ಎರಡನೇ ಪ್ರಶ್ನೆಯಾಗಿತ್ತು.
   ▪ *ಕೂಡಲೇ* ಫರೋವನು (ಲ) ತನ್ನ ಎಲ್ಲಾ ಇಂದ್ರಜಾಲ ವಿದ್ಯೆ ಗೊತ್ತಿರುವ ಪರಿಣತರನ್ನು ಹಾಜರುಪಡಿಸಿ ಅವರಿಂದ ಅದ್ಭುತಗಳನ್ನು ಪ್ರದರ್ಶನ ಮಾಡಲು ಹೇಳಿದನು. ಸುಮಾರು ಒಂದು ಸಾವಿರದಷ್ಟು ಇಂದ್ರಜಾಲ ವಿದ್ಯೆ ತಿಳಿದಿದ್ದ ಪರಿಣತರು ತಮ್ಮ ಕೈಯಲ್ಲಿದ್ದ ಹಗ್ಗದ ತುಂಡುಗಳನ್ನು ನೆಲದಲ್ಲಿ ಹಾಕಿದಾಗ ಬಗೆ ಬಗೆಗಿನ ಹಾವುಗಳು ಪ್ರತ್ಯಕ್ಷವಾಯಿತು.
   ▪ *ಇಬ್‌ಲೀಸನು*  ಒಂದು ಶ್ವಾಸ ಬಿಟ್ಟನು. ಶ್ವಾಸ ಬಿಟ್ಟದ್ದೇ ತಡ ಅಲ್ಲಿದ್ದ ಎಲ್ಲಾ ಹಾವುಗಳು ದೂಳೀಪಟವಾಯಿತು. ನಂತರ ಒಂದು ಶ್ವಾಸ ಕೂಡ ಬಿಟ್ಟನು. ಆಗ ಮೊದಲ ಅವರು ತೋರಿಸಿದ ಹಾವಿಗಿಂತಲೂ ದೊಡ್ಡ ಹಾವುಗಳು ಪ್ರತ್ಯಕ್ಷವಾದವು. ಫರೋವನಲ್ಲಿ ಇಬ್‌ಲೀಸನು ಕೇಳಿದನು. *"ಈಗ ಯಾರ ಇಂದ್ರಜಾಲ ಉಷಾರು..? ನಿನ್ನದಾ ಅಥವಾ ನನ್ನದಾ..?"* ಫರೋವನು ಹೇಳಿದನು. *"ನಿಮ್ಮದೇ ಸಾರ್. ಅದರಲ್ಲಿ ಯಾವುದೇ ಸಂಶಯವಿಲ್ಲ. "* 
   ▪ *"ನಂತರ* ಇಬ್‌ಲೀಸನು ಫರೋವನ ಹೆಗಲ ಮೇಲೆ ಕೈಯಿಟ್ಟು *"ಹೇ.. ಮೂರ್ಖ, ಇಷ್ಟೆಲ್ಲಾ ಮಾಡುವ ನನಗೆ ಅಲ್ಲಾಹನ ಒಬ್ಬ ದಾಸನಾಗುವುದು ಅವನಿಗೆ ಇಷ್ಟವಿಲ್ಲ. ಮಾತ್ರವಲ್ಲ ಅವನ ಶಾಪಕ್ಕೆ ಬಲಿಯಾಗಿ ಗತಿಯಿಲ್ಲದೆ ತಿರುಗಾಡುತ್ತಿದ್ದೇನೆ. ಮತ್ತೆ ನೀನು ಅವನಂತೆಯೇ ದೇವರು ಅಥವಾ ಅವನ ಸಹಪಾಠಿ ಎಂದು ಹೇಳಲು ನಿನಗೆ ಏನು ಹಕ್ಕಿದೆ..? ಒಟ್ಟಿನಲ್ಲಿ ನಿನಗಿಂತ ಮೂರ್ಖರು ಈ ಜಗತ್ತಿನಲ್ಲಿ ಬೇರೆ ಯಾರಾದರೂ ಇದ್ದಾರಾ..?"* ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತನು.

ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...